ಅಮೆರಿಕದೊಂದಿಗೆ ಟ್ರೇಡ್ ಡೀಲ್, ಮುಗಿಯದ ತೊಡಕು; ದಕ್ಷಿಣ ಅಮೆರಿಕ ಸೇರಿದಂತೆ ಬೇರೆ ಬೇರೆ ಮಾರುಕಟ್ಟೆಗಳ ಮೇಲೆ ಭಾರತದ ಕಣ್ಣು – Kannada News | After 3 new FTAs in 2025, India looking for more trade deals
ನವದೆಹಲಿ, ಜನವರಿ 11: ಅಮೆರಿಕದೊಂದಿಗೆ ವ್ಯಾಪಾರ ಒಪ್ಪಂದ (India US trade deal) ಮಾಡಿಕೊಳ್ಳಲು ಹಲವು ತಿಂಗಳುಗಳಿಂದ ನಡೆಯುತ್ತಿರುವ ಮಾತುಕತೆ ಫಲಪ್ರದವಾಗುವ ಲಕ್ಷ ಸದ್ಯಕ್ಕಂತೂ ಕಾಣುತ್ತಿಲ್ಲ. ಅಮೆರಿಕವು ಭಾರತಕ್ಕೆ ಅತಿದೊಡ್ಡ ರಫ್ತು ಮಾರುಕಟ್ಟೆಯಾಗಿರುವುದರಿಂದ ಈ ಟ್ರೇಡ್ ಡೀಲ್ ಮಹತ್ವದ್ದು. ಭಾರತಕ್ಕೆ ಹಲವು ಬಿಲಿಯನ್ ಡಾಲರ್ಗಳಷ್ಟು ರಫ್ತಿಗೆ ಸಂಚಕಾರವಾಗಲಿದೆ. ಹೀಗಾಗಿ, ಭಾರತವು ಈ ನಷ್ಟ ಭರಿಸಲು ಪರ್ಯಾಯ ಮಾರುಕಟ್ಟೆಗಳನ್ನು ಹುಡುಕುತ್ತಿದೆ. ಕಳೆದ ವರ್ಷವೇ ಮೂರು ಟ್ರೇಡ್ ಡೀಲ್ ಕುದುರಿಸಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಹೊಸ ಒಪ್ಪಂದಗಳನ್ನು ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ….