Category Archives: Blog

Your blog category

ಸಿಕ್ಕ ನಿಧಿಯನ್ನು ಸರ್ಕಾರಕ್ಕೊಪ್ಪಿಸಿ ಈಗ ವಾಪಸ್ ಕೇಳುತ್ತಿರುವುದೇಕೆ ಕುಟುಂಬ? – Kannada News | Gold Treasure Found: Is Lakkundi ‘Treasure’ Family Property?

ಸಿಕ್ಕ ನಿಧಿ ಸರ್ಕಾರಕ್ಕೆ ಕೊಟ್ಟು ಕೆಟ್ಟಿತಾ ಕುಟುಂಬ?

ಗದಗ, ಜನವರಿ 11: ಜಿಲ್ಲೆಯ ಲಕ್ಕುಂಡಿ ಗ್ರಾಮದಲ್ಲಿ ಗಂಗವ್ವ ಬಸವರಾಜ ರಿತ್ತಿ ಎಂಬುವವರ ಮನೆ ಜಾಗದಲ್ಲಿ ಅಡಿಪಾಯ ಅಗೆಯುವ ಸಂದರ್ಭದಲ್ಲಿ 1 ಕೆಜಿಗೂ ಹೆಚ್ಚು ತೂಕದ ಚಿನ್ನಾಭರಣಗಳು ತುಂಬಿದ್ದ ತಂಬಿಗೆಯೊಂದು ದೊರೆತಿತ್ತು. ಹೀಗೆ ಸಿಕ್ಕ ನಿಧಿಯನ್ನು ತಾಯಿ-ಮಗ ಸರ್ಕಾರಕ್ಕೊಪ್ಪಿಸಿದ್ದರು. ಈ ಹಿನ್ನೆಲೆ ಕುಟುಂಬಕ್ಕೆ ಜಿಲ್ಲಾಡಳಿತ ಸನ್ಮಾನವನ್ನೂ ಮಾಡಿತ್ತು. ಆದರೆ ಪ್ರಕರಣವೀಗ ಹೊಸ ತಿರುವು ಪಡೆದುಕೊಂಡಿದೆ. ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿರುವ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಅಧಿಕಾರಿ, ಸಿಕ್ಕಿರುವ ಚಿನ್ನ ನಿಧಿಯಲ್ಲವೆಂದು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೆ ಅನುಮತಿಯಿಲ್ಲದೆ ಮನೆ ಕಟ್ಟಲು ಮುಂದಾಗಿದ್ದ ಕುಟುಂಬದ ಜಾಗವೂ ಕೈತಪ್ಪುವ ಹಂತದಲ್ಲಿದೆ.

‘ಇದು ನಿಧಿಯೇ ಅಲ್ಲ’

ಚಿನ್ನ ಸಿಕ್ಕ ಸ್ಥಳಕ್ಕೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ಧಾರವಾಡ ವಲಯದ ಅಧೀಕ್ಷಕರಾದ ರಮೇಶ್ ಮೂಲಿಮನಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಲಕ್ಕುಂಡಿಯಲ್ಲಿ ಸಿಕ್ಕಿದ್ದು ನಿಧಿಯಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ನಿಧಿ, ನಿಧಿ ಎಂದು ಹೇಳಲಾಗುತ್ತಿದೆ, ಆದರೆ ಇದು ನಿಧಿಯ ಲಕ್ಷಣಗಳನ್ನು ಹೊಂದಿಲ್ಲ. ಚಿನ್ನ ಯಾವ ಕಾಲಕ್ಕೆ ಸೇರಿದ್ದು ಎಂಬುದನ್ನು ತಾಂತ್ರಿಕವಾಗಿ ಪರಿಶೀಲಿಸಲಾಗುತ್ತದೆ. ಮೇಲ್ನೋಟಕ್ಕೆ ನೋಡಿದಾಗ ಬಹಳ ಹಳೆಯದಾಗಿ ಕಾಣಿಸುತ್ತಿಲ್ಲ. ಬಂಗಾರ ಮನೆಯಲ್ಲಿ ಸಿಕ್ಕಿದೆ ಅಂದ್ರೆ ಇದು ಕುಟುಂಬಕ್ಕೆ ಸೇರಿದ್ದು. ದೇವಸ್ಥಾನದಲ್ಲಿ ಸಿಕ್ಕಿದರೆ ಅದು ರಾಜಮನೆತನದ್ದು. ಇದು ರಾಜ ಮನೆತನಕ್ಕೆ ಸೇರಿದ್ದಾದರೆ ಲಾಂಛನ ಇರುತ್ತಿತ್ತು ಎಂದು ರಮೇಶ್ ಸ್ಪಷ್ಟನೆ ನೀಡಿದ್ದಾರೆ.

ನಮ್ಮ ಬಂಗಾರ ವಾಪಾಸ್ ನೀಡಿ ಎನ್ನುತ್ತಿರುವ ಕುಟುಂಬ

ಅಧಿಕಾರಿಯ ಈ ಹೇಳಿಕೆಯ ಬೆನ್ನಲ್ಲೇ ಗ್ರಾಮಸ್ಥರು ಹಾಗೂ ಚಿನ್ನ ಸಿಕ್ಕ ಜಾಗದ ಮಾಲೀಕರು ಹೊಸ ಆಗ್ರಹ ಮುಂದಿಟ್ಟಿದ್ದಾರೆ. ನಿಧಿಯೇ ಅಲ್ಲ ಎಂದಾದರೆ, ಅದು ತಮ್ಮ ಪೂರ್ವಜರು ಮನೆಯಲ್ಲಿ ಇಟ್ಟುಕೊಂಡಿದ್ದ ಚಿನ್ನಾಭರಣಗಳಾಗಿದ್ದು, ಅವುಗಳನ್ನು ಕುಟುಂಬಕ್ಕೆ ವಾಪಸ್ ನೀಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಬಂಗಾರ ಮನೆ ಒಳಗೇ ಪತ್ತೆಯಾಗಿರುವುದರಿಂದ ಅದು ಕುಟುಂಬದ ಸ್ವತ್ತು ಎನ್ನುವುದು ಅವರ ವಾದವಾಗಿದೆ.

ಇದನ್ನೂ ಓದಿ ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ನಡೆಯುತ್ತಾ ಉತ್ಖನನ? ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ!

ಚಿನ್ನ ಸಿಕ್ಕ ಜಾಗದಲ್ಲಿ ಉತ್ಖನನದ ಸಾಧ್ಯತೆ

ಈ ನಡುವೆ, ಚಿನ್ನ ಸಿಕ್ಕ ಸ್ಥಳವನ್ನು ನಿಷಿದ್ಧ ಪ್ರದೇಶವೆಂದು ಘೋಷಿಸಲಾಗಿದ್ದು, ಮನೆ ನಿರ್ಮಾಣ ಕಾರ್ಯ ಅರ್ಧಕ್ಕೆ ನಿಂತಿದೆ. ಪ್ರಾಚೀನ ಟಂಕಶಾಲೆ ಹಾಗೂ ರಾಜವಂಶಗಳ ಅವಶೇಷಗಳನ್ನು ಹೊಂದಿರುವ ಈ ಜಾಗದಲ್ಲಿ ರಾಜ್ಯ ಸರ್ಕಾರದಿಂದ ಮತ್ತಷ್ಟು ಉತ್ಖನನ ಕಾರ್ಯಕ್ಕೆ ಸಿದ್ಧತೆ ನಡೆದಿದೆ. ಮನೆಯ ಯಜಮಾನನನ್ನು ಕಳೆದುಕೊಂಡಿರುವ ಆ ಬಡ ಕುಟುಂಬ ಸಿಕ್ಕ ನಿಧಿಯನ್ನೂ ಸರ್ಕಾರಕ್ಕೊಪ್ಪಿಸಿ, ಮನೆಯನ್ನೂ ಕಟ್ಟಿಕೊಳ್ಳಲಾಗದೆ ಸಂಕಷ್ಟ ಎದುರಿಸುತ್ತಿದೆ. ತಾಯಿ ಹಾಗೂ ಚಿಕ್ಕ ಮಗನಿರುವ ಕುಟುಂಬಕ್ಕೆ ಸರ್ಕಾರ ಮನೆ ನಿರ್ಮಿಸಿಕೊಡಬೇಕು ಅಥವಾ ನಿವೇಶನ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Black Color Astrology: ಈ ರಾಶಿಯವರು ಕಪ್ಪು ಬಣ್ಣದ ಬಟ್ಟೆ ಧರಿಸಲೇಬೇಡಿ, ಕಾರಣ ಇಲ್ಲಿದೆ – Kannada News | Black Color Astrology: Zodiac Signs Who Should Avoid It for Good Luck

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ 12 ರಾಶಿಗಳಲ್ಲಿ ಪ್ರತಿಯೊಂದು ರಾಶಿಗೂ ಅದರದೇ ಆದ ಆಳುವ ಗ್ರಹವಿದ್ದು, ಆ ಗ್ರಹಗಳ ಪ್ರಭಾವಕ್ಕೆ ಅನುಗುಣವಾಗಿ ಬಣ್ಣಗಳಿಗೂ ವಿಶೇಷ ಮಹತ್ವವಿದೆ. ಪ್ರತಿಯೊಂದು ಸಂಖ್ಯೆ, ಗ್ರಹ ಮತ್ತು ಚಕ್ರಕ್ಕೂ ಒಂದು ವಿಶಿಷ್ಟ ಬಣ್ಣ ಸಂಬಂಧ ಹೊಂದಿದೆ ಎಂದು ನಂಬಲಾಗುತ್ತದೆ. ಕೆಲವು ಬಣ್ಣಗಳು ಬಹುತೇಕ ಎಲ್ಲಾ ರಾಶಿಗಳಿಗೆ ಅನುಕೂಲಕರವಾಗಿದ್ದರೂ, ಕಪ್ಪು ಬಣ್ಣವು ಎಲ್ಲರಿಗೂ ಸಮಾನವಾಗಿ ಶುಭಕರವಲ್ಲ. ಜ್ಯೋತಿಷಿಗಳ ಪ್ರಕಾರ, ಕಪ್ಪು ಬಟ್ಟೆಗಳನ್ನು ಧರಿಸುವುದು ಕೆಲವು ರಾಶಿಗಳ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ಅಂಥವರು ಈ ಬಣ್ಣವನ್ನು ತಪ್ಪಿಸುವುದು ಉತ್ತಮವೆಂದು ಸಲಹೆ ನೀಡಲಾಗುತ್ತದೆ.

ಮೇಷ ರಾಶಿಯವರಿಗೆ ಕಪ್ಪು ಬಣ್ಣ ಹೆಚ್ಚು ಹೊಂದಿಕೆಯಾಗುವುದಿಲ್ಲ ಎಂದು ಹೇಳಲಾಗುತ್ತದೆ. ಅವರು ಹೆಚ್ಚು ಕಪ್ಪು ಬಟ್ಟೆಗಳನ್ನು ಧರಿಸಿದರೆ ಮಾನಸಿಕ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ ಹಾಗೂ ಕೆಲಸ ಮತ್ತು ವ್ಯಾಪಾರ ಕ್ಷೇತ್ರಗಳಲ್ಲಿ ಅಡಚಣೆಗಳು ಎದುರಾಗಬಹುದು . ಆದ್ದರಿಂದ ಮೇಷ ರಾಶಿಯವರು ಕೆಂಪು, ಕಿತ್ತಳೆ, ಚಿನ್ನದ ಬಣ್ಣಗಳು ಅಥವಾ ಗುಲಾಬಿ ಮತ್ತು ಕೆನೆ ಬಣ್ಣದಂತಹ  ಚೈತನ್ಯ ತುಂಬಿದ ಬಣ್ಣಗಳನ್ನು ಆಯ್ಕೆ ಮಾಡುವುದು ಶುಭಕರವೆಂದು ಜ್ಯೋತಿಷ್ಯ ಶಾಸ್ತ್ರ ಸೂಚಿಸುತ್ತದೆ.

ಕರ್ಕಾಟಕ ರಾಶಿಯವರಿಗೂ ಕಪ್ಪು ಬಣ್ಣವನ್ನು ಅತಿಯಾಗಿ ಬಳಸುವುದು ಅನುಕೂಲಕರವಲ್ಲ ಎಂದು ಹೇಳಲಾಗುತ್ತದೆ. ಕಪ್ಪು ಬಣ್ಣವು ಅವರ ಮನಸ್ಸಿನಲ್ಲಿ ಅಸ್ಥಿರತೆ ಅಥವಾ ಭಾರೀ ಭಾವನೆಗಳನ್ನು ಹೆಚ್ಚಿಸಬಹುದು. ಈ ಕಾರಣದಿಂದ ಕರ್ಕಾಟಕ ರಾಶಿಯವರು ನೀಲಿ ಮತ್ತು ಹಳದಿ ಬಣ್ಣಗಳಂತಹ ಶಾಂತ ಮತ್ತು ಹಿತಕರ ಬಣ್ಣಗಳನ್ನು ಧರಿಸುವುದು ಉತ್ತಮವೆಂದು ನಂಬಲಾಗಿದೆ.

ಇದನ್ನೂ ಓದಿ: ಮೃತ ವ್ಯಕ್ತಿ ನಿಮ್ಮ ಶತ್ರುವೇ ಆಗಿದ್ದರೂ ಅವರ ಬಗ್ಗೆ ಯಾಕೆ ಕೆಟ್ಟದಾಗಿ ಮಾತನಾಡಬಾರದು?

ಕನ್ಯಾರಾಶಿಯವರ ವಿಷಯಕ್ಕೆ ಬಂದರೆ, ಕಪ್ಪು ಬಣ್ಣವು ಒತ್ತಡ, ಖಿನ್ನತೆ ಮತ್ತು ಆತಂಕವನ್ನು ಹೆಚ್ಚಿಸಬಹುದು ಎಂದು ಜ್ಯೋತಿಷಿಗಳು ಎಚ್ಚರಿಸುತ್ತಾರೆ. ಕನ್ಯಾರಾಶಿಯವರು ಸಹಜವಾಗಿಯೇ ಸೂಕ್ಷ್ಮ ಸ್ವಭಾವ ಹೊಂದಿರುವುದರಿಂದ, ಗಾಢ ಬಣ್ಣಗಳು ಅವರ ಮನಸ್ಥಿತಿಯ ಮೇಲೆ ಹೆಚ್ಚಿನ ಪ್ರಭಾವ ಬೀರುವ ಸಾಧ್ಯತೆ ಇದೆ. ಆದ್ದರಿಂದ ಹಸಿರು, ಗುಲಾಬಿ ಹಾಗೂ ಚಿನ್ನದ ಬಣ್ಣದ ಬಟ್ಟೆಗಳು ಅವರಿಗೆ ಹೆಚ್ಚು ಅನುಕೂಲಕರವಾಗಿದ್ದು, ಮನಸ್ಸಿಗೆ ಶಾಂತಿ ಮತ್ತು ಸಮತೋಲನವನ್ನು ನೀಡುತ್ತವೆ ಎಂದು ಹೇಳಲಾಗುತ್ತದೆ.

ಒಟ್ಟಾರೆ ಜ್ಯೋತಿಷ್ಯ ಶಾಸ್ತ್ರದ ದೃಷ್ಟಿಯಿಂದ ನೋಡಿದರೆ, ಕಪ್ಪು ಮತ್ತು ಗಾಢ ಬೂದು ಬಣ್ಣಗಳಂತಹ ಗಾಢ ಬಣ್ಣಗಳನ್ನು ದೀರ್ಘಕಾಲ ಧರಿಸುವುದರಿಂದ ಕೆಲ ರಾಶಿಗಳಲ್ಲಿ ನಕಾರಾತ್ಮಕ ಪರಿಣಾಮಗಳು ಉಂಟಾಗಬಹುದು ಎಂದು ಜ್ಯೋತಿಷಿಗಳು ಎಚ್ಚರಿಕೆ ನೀಡುತ್ತಾರೆ. ಆದ್ದರಿಂದ ಪ್ರತಿಯೊಬ್ಬರೂ ತಮ್ಮ ತಮ್ಮ ರಾಶಿಗೆ ಅನುಗುಣವಾಗಿ ಶುಭ ಬಣ್ಣಗಳನ್ನು ಆಯ್ಕೆ ಮಾಡಿಕೊಂಡು ಧರಿಸಿದರೆ, ಜೀವನದಲ್ಲಿ ಅದೃಷ್ಟ, ಸಕಾರಾತ್ಮಕತೆ ಮತ್ತು ಸಂತೋಷ ಹೆಚ್ಚುತ್ತದೆ ಎಂಬ ನಂಬಿಕೆಯಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಕೇರಳದ ಚೆಂಡೆ ಬಾರಿಸಿದ ಪ್ರಧಾನಿ ಮೋದಿ – Kannada News | Modi at Somnath: Shaurya Yatra Honors Sacrifices, Celebrates Temple’s Enduring Spirit

ಅಹಮದಾಬಾದ್, ಜನವರಿ 11: ಪ್ರಧಾನಿ ನರೇಂದ್ರ ಮೋದಿ ಸೋಮನಾಥ ದೇವಾಲಯದ ರಕ್ಷಣೆಗಾಗಿ ಪ್ರಾಣ ತ್ಯಾಗ ಮಾಡಿದವರನ್ನು ಗೌರವಿಸಲು ಶೌರ್ಯ ಯಾತ್ರೆಯನ್ನು ನಡೆಸಿದ್ದಾರೆ. ಈ ವೇಳೆ ಕೇರಳದ ಚೆಂಡೆಯನ್ನು ಬಾರಿಸಿ ಎಲ್ಲರ ಗಮನ ಸೆಳೆದರು. ಇದೀಗ ಈ ವಿಡಿಯೋವನ್ನು ಬಿಜೆಪಿ ಈ ಬಗ್ಗೆ ಎಕ್ಸ್​​​​ ಖಾತೆಯಲ್ಲಿ ಹಂಚಿಕೊಂಡಿದೆ. ಶೌರ್ಯ ಯಾತ್ರೆಯು ಶೌರ್ಯ ಮತ್ತು ತ್ಯಾಗವನ್ನು ಪ್ರತಿಬಿಂಬಿಸುವ 108 ಕುದುರೆಗಳ ಸಾಂಕೇತಿಕ ಮೆರವಣಿಗೆಯನ್ನು ಒಳಗೊಂಡಿತ್ತು. ಪ್ರಧಾನಿ ಮೋದಿ ಮತ್ತೆ ಸೋಮನಾಥ ದೇವಾಲಯದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಘಜ್ನಿಯಿಂದ ಔರಂಗಜೇಬನವರೆಗೆ ಸೋಮನಾಥ ದೇವಾಲಯದ ಮೇಲೆ ದಾಳಿ ಮಾಡಿದವರೆಲ್ಲಾ ಸಮಾಧಿಯಾದರು. ಆದರೆ ಸೋಮನಾಥ ಅದೆಲ್ಲವನ್ನೂ ನೋಡುತ್ತಾ ಅಲ್ಲೇ ನಿಂತಿದ್ದಾನೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Viral Video: 60 ಅಡಿ ಎತ್ತರದ ನೀರಿನ ಟ್ಯಾಂಕ್ ಹತ್ತಿದ ಹೋರಿ – Kannada News | How Did It Get There A Bull’s 60 Foot Climb Stuns Ajmer

ಅಜ್ಮೀರ್, ಜನವರಿ 11: ಅಲ್ಲೆಲ್ಲೋ ಅಡ್ಡಾಡುತ್ತಿರುವ ಜನರು ಯಾಕೋ ಟ್ಯಾಂಕಿನ ಕಡೆಗೆ ಕಣ್ಣುಹಾಯಿಸಿದಾಗ ಅಲ್ಲಿದ್ದ ಹೋರಿಯನ್ನು ಕಂಡು ಬೆಚ್ಚಿಬಿದ್ದಿದ್ದಾರೆ. ಮೆಟ್ಟಿಲುಗಳನ್ನು ಹತ್ತುತ್ತಾ ಅದು 60 ಅಡಿಗಳಷ್ಟು ಎತ್ತರಕ್ಕೆ ಏರಿತ್ತು. ರಾಜಸ್ಥಾನದ ಅಜ್ಮೀರ್​ನಲ್ಲಿ ಘಟನೆ ನಡೆದಿದೆ. ಕ್ರೇನ್ ಬಳಸಿ ಅದ್ಹೇಗೋ ಗಂಟೆಗಳ ಬಳಿಕ ಹೋರಿಯನ್ನು ರಕ್ಷಿಸಲಾಗಿದೆ. ಎತ್ತರದ ಟ್ಯಾಂಕ್ ಮೇಲೆ ನಿಂತಿರುವ ಗೂಳಿಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ನೀರಿನ ಟ್ಯಾಂಕ್‌ನ ಮೆಟ್ಟಿಲುಗಳ ಮೇಲೆ ಕಪ್ಪು ಬಣ್ಣದ ಹೋರಿಯೊಂದು ನಿಂತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನೀರಿನ ಟ್ಯಾಂಕ್ ಮೇಲೆ ಅಷ್ಟು ಎತ್ತರಕ್ಕೆ ತಲುಪಿದ ಬೀದಿ ಹೋರಿಯ ಬಗ್ಗೆ ಜನರು ಆಘಾತ ವ್ಯಕ್ತಪಡಿಸುತ್ತಿರುವುದನ್ನು ವೀಡಿಯೊದಲ್ಲಿ ಕಾಣಬಹುದು. ಸಂಜೆ 5 ಟಂಕವಾಸ್ ಗ್ರಾಮದಲ್ಲಿ ಈ ಘಟನೆ ಸಂಭವಿಸಿದೆ.

ಗ್ರಾಮಸ್ಥರು ಟ್ಯಾಂಕ್ ಮೇಲೆ ಹೋರಿ ಬಿದ್ದಿರುವುದನ್ನು ಕಂಡ ತಕ್ಷಣ ಆಡಳಿತಕ್ಕೆ ಮಾಹಿತಿ ನೀಡಿದರು. ಹೋರಿಯ ಬಗ್ಗೆ ಮಾಹಿತಿ ಪಡೆದ ಪೊಲೀಸರು ಮತ್ತು ನಾಗರಿಕ ರಕ್ಷಣಾ ತಂಡದ ಸದಸ್ಯರು ಸ್ಥಳಕ್ಕೆ ಧಾವಿಸಿದರು. ರಕ್ಷಣಾ ತಂಡವು ಹೋರಿಯ ಬಳಿ ಹೋಗಲು ಪ್ರಯತ್ನಿಸಿದಾಗ, ಅದು ಭಯಪಟ್ಟಿತ್ತು, ಅಷ್ಟು ಎತ್ತರದಿಂದ ಕೆಳಗೆ ಹಾರಲು ಸಹ ಪ್ರಯತ್ನಿಸಿತ್ತು. ಇದರಿಂದಾಗಿ ರಕ್ಷಣಾ ತಂಡವು ಕಾರ್ಯಾಚರಣೆಯನ್ನು ನಿಲ್ಲಿಸಬೇಕಾಯಿತು ಮತ್ತು ಪ್ರಾಣಿಗಳ ಸುರಕ್ಷತೆಗಾಗಿ ಅವರು ಹಿಂದಕ್ಕೆ ಸರಿಯಬೇಕಾಯಿತು.

ಮತ್ತಷ್ಟು ಓದಿ: ತಡರಾತ್ರಿ ಇಲಿ ಪಾಷಾಣ ಆರ್ಡರ್ ಮಾಡಿದ ಮಹಿಳೆಯ ಜೀವ ಉಳಿಸಿದ ಡೆಲಿವರಿ ಬಾಯ್!

ನಂತರ, ಅಧಿಕಾರಿಗಳು ರಕ್ಷಣಾ ಕಾರ್ಯಾಚರಣೆಗಾಗಿ ಕ್ರೇನ್ ತರಲು ನಿರ್ಧರಿಸಿದರು. ಆದರೆ, ಕ್ರೇನ್ ಸ್ಥಳಕ್ಕೆ ತಲುಪುವ ಹೊತ್ತಿಗೆ ಕತ್ತಲೆಯಾಗಿತ್ತು. ಕಾರ್ಯಾಚರಣೆಯನ್ನು ಮರುದಿನ ಬೆಳಗ್ಗೆಗೆ ಮುಂದೂಡಲಾಯಿತು.

ಆದರೆ, ರಕ್ಷಣಾ ಕಾರ್ಯಾಚರಣೆ ಆರಂಭವಾಗುವ ಮರುದಿನವೇ ಹೋರಿ ತನ್ನಷ್ಟಕ್ಕೆ ತಾನೇ ಕೆಳಗೆ ಇಳಿಯುವಲ್ಲಿ ಯಶಸ್ವಿಯಾಯಿತು. ಅದು ಶಾಂತವಾಗಿ ಕೆಳಗೆ ಬಂದು ನಡೆದುಕೊಂಡು ಹೋಯಿತು. ರಕ್ಷಣಾ ಕಾರ್ಯಾಚರಣೆ ಕೊನೆಗೊಂಡು ಕ್ರೇನ್ ಕಾರ್ಯಾಚರಣೆಯಲ್ಲಿ ಬಳಸದೆ ಹಿಂತಿರುಗಿತು.

ವೈರಲ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ನಿಧಿ ಸಿಕ್ಕ ಜಾಗದಲ್ಲಿ ಮತ್ತೆ ನಡೆಯುತ್ತಾ ಉತ್ಖನನ? ಅಧಿಕಾರಿಗಳು ಏನಂದ್ರು? – Kannada News | Lakkundi Gold Treasure: Will Further Excavations Unearth More Riches?

ಗದಗ, ಜನವರಿ 11: ಜಿಲ್ಲೆಯ ಐತಿಹಾಸಿಕ ಲಕ್ಕುಂಡಿ ಗ್ರಾಮದಲ್ಲಿ ಚಿನ್ನದ ನಿಧಿ ಪತ್ತೆಯಾಗಿದ್ದು, ಆ ಬೆನ್ನಲ್ಲೇ ಕ್ಷಿಪ್ರ ಬೆಳವಣಿಗೆಗಳು ನಡೆದಿವೆ. ಈ ಪ್ರದೇಶವನ್ನು ಹಿಂದೆ ಚಿನ್ನದ ನಾಣ್ಯಗಳನ್ನು ತಯಾರಿಸುವ ಟಂಕಶಾಲೆ ಎಂದು ಗುರುತಿಸಲಾಗಿದ್ದು,ರಾಜ ಮಹಾರಾಜರ ಅವಶೇಷಗಳು ಮತ್ತು ನೂರಾರು ಬಾವಿಗಳು ಇಲ್ಲಿದ್ದ ಬಗ್ಗೆ ದಾಖಲೆಗಳಿವೆ. ಹೀಗಾಗಿ ನಿಧಿ ಪತ್ತೆಯಾದ ಸ್ಥಳಕ್ಕೆ ಭಾರತೀಯ ಪುರಾತತ್ವ ಇಲಾಖೆಯ ಅಧಿಕಾರಿಗಳು, ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ರಾಜ್ಯ ಸರ್ಕಾರವು ಈ ಪ್ರದೇಶದಲ್ಲಿ ಉತ್ಖನನ ಕಾರ್ಯ ಪ್ರಾರಂಭಿಸಲು ಸಿದ್ಧತೆಗಳನ್ನು ಮಾಡಿಕೊಂಡಿದ್ದು, ಮುಂಬರುವ ದಿನಗಳಲ್ಲಿ ಉತ್ಖನನ ನಡೆಯಲಿದೆ. ಇದರಿಂದ ಗ್ರಾಮದ ಇತಿಹಾಸದ ಕುರಿತು ಇನ್ನಷ್ಟು ಮಹತ್ವದ ಅಂಶಗಳು ಹೊರಬರಲಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಸಿಕ್ಸರ್​ಗಳ ಸುರಿಮಳೆ… ಟಿ20 ಕ್ರಿಕೆಟ್​ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣ – Kannada News | GG and UPW Creates New World Record In WPL 2026

WPL 2026: ವುಮೆನ್ಸ್ ಪ್ರೀಮಿಯರ್ ಲೀಗ್​ನ 2ನೇ ಪಂದ್ಯದಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಅದು ಕೂಡ ಸಿಕ್ಸರ್​​ಗಳ ಸುರಿಮಳೆಯೊಂದಿಗೆ. ಅಂದರೆ ಒಂದೇ ಪಂದ್ಯದಲ್ಲಿ ಅತ್ಯಧಿಕ ಸಿಕ್ಸ್ ಮೂಡಿಬಂದ ಹೊಸ ದಾಖಲೆಯನ್ನು ಗುಜರಾತ್ ಜೈಂಟ್ಸ್ ಹಾಗೂ ಯುಪಿ ವಾರಿಯರ್ಸ್ ತಂಡಗಳು ನಿರ್ಮಿಸಿದೆ.

ಮುಂಬೈನ ಡಿವೈ ಪಾಟೀಲ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತರೂ ಮೊದಲು ಬ್ಯಾಟ್ ಮಾಡಿದ ಗುಜರಾತ್ ಜೈಂಟ್ಸ್ ತಂಡದ ಪರ ಸೋಫಿ ಡಿವೈಲ್ 2 ಸಿಕ್ಸ್ ಬಾರಿಸಿದರೆ, ಆಶ್ಲೀ ಗಾರ್ಡ್ನರ್ ಹಾಗೂ ಜಾರ್ಜಿಯಾ ವೇರ್‌ಹ್ಯಾಮ್ ತಲಾ 3 ಸಿಕ್ಸ್ ಸಿಡಿಸಿದರು. ಇನ್ನು ಅಂತಿಮ ಹಂತದಲ್ಲಿ ಭಾರ್ತಿ ಫುಲ್ಮಾಲಿ 2 ಸಿಕ್ಸ್ ಬಾರಿಸಿದರು. ಈ ಮೂಲಕ ಗುಜರಾತ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 207 ರನ್​ ಕಲೆಹಾಕಿತು. 

208 ರನ್​ಗಳ ಗುರಿ ಬೆನ್ನತ್ತಿದ ಯುಪಿ ವಾರಿಯರ್ಸ್ ಪರ ಆರಂಭಿಕ ಆಟಗಾರ್ತಿ ಫೋಬೆ ಲಿಚ್‌ಫೀಲ್ಡ್ ಬರೋಬ್ಬರಿ 5 ಸಿಕ್ಸ್ ಸಿಡಿಸಿದ್ದರು. ಇನ್ನು ಶ್ವೇತಾ ಸೆಹ್ರಾವತ್ ಬ್ಯಾಟ್​ನಿಂದ 3 ಹಾಗೂ ಆಶಾ ಶೋಭನಾ ಕಡೆಯಿಂದ 2 ಸಿಕ್ಸರ್​ಗಳು ಮೂಡಿಬಂದಿದ್ದವು. ಹಾಯೆಯೇ ಡಿಯಾಂಡ್ರಾ ಡಾಟಿನ್ 1 ಸಿಕ್ಸ್ ಬಾರಿಸಿದ್ದರು. ಈ ಮೂಲಕ ಯುಪಿ ವಾರಿಯರ್ಸ್ ತಂಡವು 20 ಓವರ್​ಗಳಲ್ಲಿ 197 ರನ್​ಗಳಿಸಿ ಕೇವಲ 10 ರನ್​ಗಳಿಂದ ಸೋಲೊಪ್ಪಿಕೊಂಡಿತ್ತು.

ವಿಶೇಷ ಎಂದರೆ ಈ ಎರಡು ಇನಿಂಗ್ಸ್​ಗಳಲ್ಲಿ ಮೂಡಿಬಂದ ಒಟ್ಟು ಸಿಕ್ಸ್​ಗಳ ಸಂಖ್ಯೆ ಬರೋಬ್ಬರಿ 21 . ಗುಜರಾತ್ ಜೈಂಟ್ಸ್ ತಂಡದ ಬ್ಯಾಟರ್​ಗಳು 10 ಸಿಕ್ಸ್ ಬಾರಿಸಿದರೆ, ಯುಪಿ ವಾರಿಯರ್ಸ್ ಆಟಗಾರ್ತಿಯರು 11 ಸಿಕ್ಸ್ ಸಿಡಿಸಿದ್ದರು. ಈ ಮೂಲಕ ಮಹಿಳಾ ಟಿ20 ಪಂದ್ಯದಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವ ದಾಖಲೆಯನ್ನು ಯುಪಿ ವಾರಿಯರ್ಸ್-ಗುಜರಾತ್ ಜೈಂಟ್ಸ್ ತಂಡ ತಮ್ಮದಾಗಿಸಿಕೊಂಡಿದ್ದಾರೆ.

ಇದಕ್ಕೂ ಮುನ್ನ ಈ ಭರ್ಜರಿ ವಿಶ್ವ ದಾಖಲೆ ಸಿಡ್ನಿ ಸಿಕ್ಸರ್ಸ್ ಮತ್ತು ಮೆಲ್ಬೋರ್ನ್​ ರೆನೆಗೇಡ್ಸ್ ತಂಡಗಳ ಹೆಸರಿನಲ್ಲಿತ್ತು. 2018ರ ವುಮೆನ್ಸ್ ಬಿಗ್ ಬ್ಯಾಷ್ ಲೀಗ್​ನಲ್ಲಿ ಸಿಡ್ನಿ ಸಿಕ್ಸರ್ಸ್ ಮತ್ತು ಮೆಲ್ಬೋರ್ನ್​ ರೆನೆಗೇಡ್ಸ್ ತಂಡಗಳು ಜೊತೆಗೂಡಿ ಒಟ್ಟು 19 ಸಿಕ್ಸ್ ಸಿಡಿಸಿ ಈ ವಿಶ್ವ ದಾಖಲೆ ನಿರ್ಮಿಸಿದ್ದರು.

ಇದೀಗ 21 ಸಿಕ್ಸರ್​ಗಳೊಂದಿಗೆ ಈ ವರ್ಲ್ಡ್​ ರೆಕಾರ್ಡ್ ಅನ್ನು ಮುರಿಯುವಲ್ಲಿ ಯುಪಿ ವಾರಿಯರ್ಸ್-ಗುಜರಾತ್ ಜೈಂಟ್ಸ್ ಬ್ಯಾಟರ್​ಗಳು ಯಶಸ್ವಿಯಾಗಿದ್ದಾರೆ. ಈ ಮೂಲಕ ಮಹಿಳಾ ಟಿ20 ಪಂದ್ಯದಲ್ಲಿ ಅತ್ಯಧಿಕ ಸಿಕ್ಸ್ ಸಿಡಿಸಿದ ವಿಶ್ವ ದಾಖಲೆಯನ್ನು ಯುಪಿ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್ ತಂಡಗಳು ತಮ್ಮದಾಗಿಸಿಕೊಂಡಿದ್ದಾರೆ.

Published On – 8:31 am, Sun, 11 January 26

Source link

ಹೆಮ್ಮೆಯಿಂದ ತಾಳಿ ಧರಿಸಿ ಓಡಾಡುತ್ತಿರುವ ನಟಿ ಸಮಂತಾ ರುತ್ ಪ್ರಭು – Kannada News | Samantha Ruth Prabhu mangalsutra video goes viral as she spotted with Raj Nidimoru

ನಟಿ ಸಮಂತಾ ರುತ್ ಪ್ರಭು (Samantha Ruth Prabhu) ಅವರು ಈಗ ತುಂಬಾ ಖುಷಿಯಾಗಿದ್ದಾರೆ. ಇತ್ತೀಚೆಗೆ ಅವರ ಬಾಳಿನಲ್ಲಿ ಹೊಸ ಅಧ್ಯಾಯ ಆರಂಭ ಆಯಿತು. ನಿರ್ದೇಶಕ ರಾಜ್ ನಿಡಿಮೋರು (Raj Nidimoru) ಜೊತೆ ಸಮಂತಾ ಅವರು ಕಳೆದ ವರ್ಷ ಡಿಸೆಂಬರ್ 1ರಂದು ಎರಡನೇ ಮದುವೆ ಆದರು. ಮದುವೆ ನಂತರ ಅವರ ಮುಖದಲ್ಲಿ ನಗು ಅರಳಿದೆ. ಪತಿ ರಾಜ್ ನಿಡಿಮೋರು ಜೊತೆ ಸಮಂತಾ ರುತ್ ಪ್ರಭು ಅವರು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಆಗ ಅವರ ಕತ್ತಿನಲ್ಲಿ ಕಾಣಿಸಿದ ಮಂಗಳಸೂತ್ರ (Mangalsutra) ನೋಡಿ ಅಭಿಮಾನಿಗಳಿಗೆ ಖುಷಿ ಆಗಿದೆ.

ಅನೇಕರು ಮದುವೆ ಆಗಿದ್ದರೂ ಮಂಗಳಸೂತ್ರ ಧರಿಸುವುದಿಲ್ಲ. ಆದರೆ ಸಮಂತಾ ಅವರು ಬಹಳ ಹೆಮ್ಮೆಯಿಂದ ತಾಳಿ ಧರಿಸಿದ್ದಾರೆ. ಬಹಳ ಸ್ಪಷ್ಟವಾಗಿ ಮಂಗಳಸೂತ್ರ ಕಾಣಿಸುವ ರೀತಿಯಲ್ಲಿ ಡ್ರೆಸ್ ಮಾಡಿಕೊಂಡಿದ್ದಾರೆ. ಇದನ್ನು ಫ್ಯಾನ್ಸ್ ಗಮನಿಸಿದ್ದಾರೆ. ಅಲ್ಲದೇ, ಸಮಂತಾ ಖುಷಿಯಾಗಿ ಕಾಲ ಕಳೆಯುತ್ತಿರುವುದನ್ನು ನೋಡಿ ಫ್ಯಾನ್ಸ್ ಕೂಡ ಖುಷಿಯಾಗಿದ್ದಾರೆ.

ರಾಜ್ ನಿಡಿಮೋರು ಅವರಿಗೆ ಕೂಡ ಇದು ಎರಡನೇ ಮದುವೆ. ಮೊದಲ ಪತ್ನಿಗೆ ವಿಚ್ಛೇದನ ನೀಡಿ ಅವರು ಈಗ ಸಮಂತಾ ಜೊತೆ ವೈವಾಹಿಕ ಜೀವನ ಆರಂಭಿಸಿದ್ದಾರೆ. ಸಮಂತಾ ಅವರು ಈ ಮೊದಲು ನಾಗ ಚೈತನ್ಯ ಜೊತೆ ಮದುವೆ ಆಗಿದ್ದರು. ಪರಸ್ಪರ ಪ್ರೀತಿಸಿ ಮದುವೆ ಆದ ಅವರ ಸಂಸಾರದಲ್ಲಿ ಬಿರುಕು ಮೂಡಿತ್ತು. ವಿಚ್ಛೇದನದಲ್ಲಿ ಆ ವಿವಾಹ ಅಂತ್ಯವಾಯ್ತು.

‘ದಿ ಫ್ಯಾಮಿಲಿ ಮ್ಯಾನ್ 2’ ವೆಬ್ ಸರಣಿಯಲ್ಲಿ ಸಮಂತಾ ರುತ್ ಪ್ರಭು ಮತ್ತು ರಾಜ್ ನಿಡಿಮೋರು ಅವರು ಮೊದಲ ಬಾರಿಗೆ ಜೊತೆಯಾಗಿ ಕೆಲಸ ಮಾಡಿದರು. ಆಗ ಅವರಿಬ್ಬರ ನಡುವೆ ಪ್ರೀತಿ ಚಿಗುರಿತು. ಆರಂಭದ ದಿನಗಳಲ್ಲಿ ಈ ಬಗ್ಗೆ ಅವರು ಗೌಪ್ಯತೆ ಕಾಪಾಡಿಕೊಂಡಿದ್ದರು. ಆದರೆ ನಂತರದ ದಿನಗಳಲ್ಲಿ ಫೋಟೋ ಹಂಚಿಕೊಳ್ಳುವ ಮೂಲಕ ಎಲ್ಲವನ್ನೂ ಜಗಜ್ಜಾಹೀರು ಮಾಡಿದರು.

ಇದನ್ನೂ ಓದಿ: ಸಮಂತಾ ಮದುವೆ ಆದ ರಾಜ್ ನಿಡಿಮೋರು ಆಸ್ತಿ ಎಷ್ಟು ಕೋಟಿ?

ಸಿನಿಮಾ ಮತ್ತು ವೆಬ್ ಸೀರಿಸ್ ಕ್ಷೇತ್ರದಲ್ಲಿ ರಾಜ್ ನಿಡಿಮೋರು ಅವರಿಗೆ ಬಹಳ ಡಿಮ್ಯಾಂಡ್ ಇದೆ. ಅದೇ ರೀತಿ, ಸಮಂತಾ ಅವರು ನಟಿಯಾಗಿ ಮಾತ್ರವಲ್ಲದೇ ನಿರ್ಮಾಪಕಿ ಆಗಿಯೂ ಆ್ಯಕ್ಟೀವ್ ಆಗಿದ್ದಾರೆ. ಸಮಂತಾ ನಿರ್ಮಾಣ ಮಾಡಿರುವ ‘ಮಾ ಇಂಟಿ ಬಂಗಾರಂ’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಇತ್ತೀಚೆಗೆ ಈ ಸಿನಿಮಾದ ಟೀಸರ್ ಬಿಡುಗಡೆ ಆಗಿ ಗಮನ ಸೆಳೆದಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರಿಗರ ಬಹುದಿನದ ಕನಸು ನನಸಾಗುವ ಕಾಲ ಬಂತು: ಕೆಂಪೇಗೌಡ ವಿಮಾನ ನಿಲ್ದಾಣ ಮಾರ್ಗಕ್ಕೆ ಶೀಘ್ರದಲ್ಲಿ ಬರಲಿದೆ ಮೆಟ್ರೋ – Kannada News | Namma Metro Blue Line Extension: KIAL Metro Project to Cut Traffic by 50%

ಬೆಂಗಳೂರು, ಜ.11: ಬೆಂಗಳೂರು ಜನರಿಗೆ ಇದೀಗ ಮೆಟ್ರೋ (Bengaluru Airport Metro) ಕಡೆಯಿಂದ ಮತ್ತೊಂದು ಗುಡ್​​​ ನ್ಯೂಸ್​ ಇದೆ. ಬಹುದಿನಗಳಿಂದ ಕಾಯುತ್ತಿದ್ದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ನೇರ ಮೆಟ್ರೋ ಸಂಪರ್ಕಕ್ಕೆ ಅಡ್ಡಿಗಲ್ಲು ಹಾಕಲಾಗಿದೆ. ಬೆಂಗಳೂರು ಮೆಟ್ರೋ ರೈಲು ನಿಗಮ ಲಿಮಿಟೆಡ್ (ಬಿಎಂಆರ್‌ಸಿಎಲ್) ವಿಮಾನ ನಿಲ್ದಾಣದ ಮೆಟ್ರೋ ಕಾರಿಡಾರ್ 2027ರ ಅಂತ್ಯದ ವೇಳೆಗೆ ಪೂರ್ಣಗೊಳಿಸಲಿದೆ ಎಂದು ಹೇಳಲಾಗಿದೆ. ಇದು ವಿಮಾನ ನಿಲ್ದಾಣಕ್ಕೆ ಹೋಗುವ ಪ್ರಯಾಣವನ್ನು ಸುಗಮಗೊಳಿಸುವ ಮತ್ತು ಪ್ರಮುಖ ಕಾರಿಡಾರ್‌ಗಳಲ್ಲಿನ ರಸ್ತೆ ದಟ್ಟಣೆಯನ್ನು ಕಡಿಮೆ ಮಾಡುವ ಉದ್ದೇಶವನ್ನು ಹೊಂದಿದೆ. ಇದೊಂದು ಬೆಂಗಳೂರಿನ ಮೆಟ್ರೋ ಇತಿಹಾ ಯೋಜನೆ ಆಗಲಿದೆ. ಮುಂದಿನ ದಿನಗಳಲ್ಲಿ ಈ ಯೋಜನೆಗೆ ಬೇಕಾದ ಎಲ್ಲ ಕಾರ್ಯಚರಣೆಗಳನ್ನು ಮಾಡಲಾಗುವುದು ಎಂದು ಹೇಳಿದ್ದಾರೆ. ಮುಂಬರುವ ವಿಮಾನ ನಿಲ್ದಾಣ ಮೆಟ್ರೋ ಕಾರಿಡಾರ್ ನಮ್ಮ ಮೆಟ್ರೋದ ವಿಸ್ತರಣೆಯ ಭಾಗವಾಗಿದೆ ಮತ್ತು ಇದನ್ನು ಬ್ಲೂ ಲೈನ್ / ಒಆರ್ಆರ್-ವಿಮಾನ ನಿಲ್ದಾಣ ಮಾರ್ಗಕ್ಕೆ ಜೋಡಿಸಲಾಗುವುದು.

ಸಿದ್ಧವಾದ ನಂತರ, ಇದು ಬೆಂಗಳೂರಿನ ಪ್ರಮುಖ ಸಾರ್ವಜನಿಕ ಸಾರಿಗೆ ಸಂಪರ್ಕಗಳಲ್ಲಿ ಒಂದಾಗಲಿದ್ದು, ಪ್ರಮುಖ ಐಟಿ ವಲಯಗಳು ಮತ್ತು ಹೆಚ್ಚಿನ ಸಾಂದ್ರತೆಯ ವಸತಿ ಪ್ರದೇಶಗಳನ್ನು ವಿಮಾನ ನಿಲ್ದಾಣದೊಂದಿಗೆ ಸಂಪರ್ಕಿಸುತ್ತದೆ. ಕಾರಿಡಾರ್ ಎರಡು ಹಂತಗಳಲ್ಲಿ ಉದ್ಘಾಟನೆಗೊಳ್ಳಲಿದ್ದು, ಮೊದಲ ಹಂತವು ಅದಕ್ಕೂ ಮುನ್ನ ಉದ್ಘಾಟನೆ ಆಗಲಿದೆ ಎಂದು ಹೇಳಲಾಗಿದೆ. ಒಟ್ಟು ಕಾರಿಡಾರ್ ಉದ್ದ 58.19 ಕಿ.ಮೀ. ಇರಲಿದ್ದು, ಸೆಂಟ್ರಲ್ ಸಿಲ್ಕ್ ಬೋರ್ಡ್ ಜಂಕ್ಷನ್ ನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಸಂಚಾರಿಸಲಿದೆ. 2A+2B ಎಂದು ಎರಡು ಹಂತದಲ್ಲಿ ಯೋಜನೆಯ ವಿಭಜನೆ ಮಾಡಲಾಗಿದೆ.

ಇದನ್ನೂ ಓದಿ: ಬೆಂಗಳೂರಿಗರಿಗೆ ಮೆಟ್ರೋ ದಿಂದ ಮತ್ತೊಂದು ಗುಡ್ ನ್ಯೂಸ್! ಪಿಂಕ್ ಲೈನ್​ನಲ್ಲಿ ಮೆಟ್ರೋ ಸಂಚಾರ ಟ್ರಯಲ್ ಆರಂಭ

ವಿಮಾನ ನಿಲ್ದಾಣ ಮಾರ್ಗವನ್ನು ಎರಡು ಭಾಗಗಳಲ್ಲಿ ಅಭಿವೃದ್ಧಿಪಡಿಸಲಾಗುತ್ತಿದೆ:

ಹಂತ 2A : ಹಂತ 2Aಯಲ್ಲಿ 19.75 ಕಿ.ಮೀ. ಉದ್ದದ ಮೆಟ್ರೋ ಮಾರ್ಗವನ್ನು ಅಭಿವೃದ್ಧಿಪಡಿಸಲಾಗುವುದು. ಇದು ಸೆಂಟ್ರಲ್ ಸಿಲ್ಕ್ ಬೋರ್ಡ್ನಿಂದ ಕೆ.ಆರ್. ಪುರಂ ವರೆಗೆ.

ಹಂತ 2B : ಇದು 38.44 ಕಿ.ಮೀ. ಉದ್ದದ ಮೆಟ್ರೋ ಮಾರ್ಗವನ್ನು ಅಭಿವೃದ್ಧಿಪಡಿಸಲಾಗುವುದು.ಇದು ಕೆ.ಆರ್. ಪುರಂನಿಂದ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣವರೆಗೆ ಇರಲಿದೆ.

ಸಿಲ್ಕ್ ಬೋರ್ಡ್–ಕೆಆರ್ ಪುರಂ ಮಾರ್ಗವನ್ನು ಈ ವರ್ಷದ ಒಳಗೆ ಅಂದರೆ 2026 ಮುಗಿಯುವುದರೊಳಗೆ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು. ಆದರೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಮೆಟ್ರೋ ಮಾರ್ಗವನ್ನು 2027ಕ್ಕೆ ಪೂರ್ಣಗೊಳಿಸಲಾಗುವುದು ಎಂದು ಹೇಳಲಾಗಿದೆ. ಇನ್ನು ಯೋಜನೆ ತುಂಬಾ ಒಳ್ಳೆಯ ಯೋಜನೆಯಾಗಿದೆ. ಇದರಿಂದ 50%ದಷ್ಟು ಟ್ರಾಫಿಕ್​ನಿಂದ ಮುಕ್ತಿ ಸಿಗುತ್ತದೆ. ಇನ್ನು ಕ್ಯಾಬ್​​​​ಗಳಿಗೆ ಹೆಚ್ಚಿನ ಹಣ ನೀಡುವುದನ್ನು ತಪ್ಪಿಸುತ್ತದೆ.

ಬೆಂಗಳೂರು ಮೆಟ್ರೋ ಪ್ರಯಾಣ ದರ: ಟಿಕೆಟ್ ಬೆಲೆಗಳು ಹೇಗಿರುತ್ತವೆ?

ವಿಮಾನ ನಿಲ್ದಾಣ ಮಾರ್ಗದ ದರ ಸ್ಲ್ಯಾಬ್‌ಗಳನ್ನು ಬಿಎಂಆರ್‌ಸಿಎಲ್ ಅಧಿಕೃತವಾಗಿ ಘೋಷಿಸಿಲ್ಲ.

ಇದು ನಮ್ಮ ಮೆಟ್ರೋದ ದೂರ ಆಧಾರಿತ ಶುಲ್ಕ ರಚನೆಯನ್ನು ಅನುಸರಿಸುವ ನಿರೀಕ್ಷೆಯಿದೆ.

ಸ್ಮಾರ್ಟ್ ಕಾರ್ಡ್, QR ಟಿಕೆಟಿಂಗ್, ಪ್ರಮಾಣಿತ ಮೆಟ್ರೋ ದರ ಸ್ಲ್ಯಾಬ್‌ಗಳಂತಹ ಪಾವತಿ ವ್ಯವಸ್ಥೆಯು ಇವುಗಳನ್ನು ಒಳಗೊಂಡಿರಬಹುದು.

ಬೆಂಗಳೂರು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:39 am, Sun, 11 January 26

Source link

ಯಶ್ ತಾಯಿ ಪುಷ್ಪಾ ಬೆಂಬಲಿಗರಿಂದ ಜೀವ ಬೆದರಿಕೆ ಆರೋಪ: ದೂರು ನೀಡಿದ ದೇವರಾಜ್ – Kannada News | Threatening case against Yash mother Pushpa Arunkumar supporters in Hassan

ಹಾಸನದ ದೇವರಾಜ್ ಹಾಗೂ ಯಶ್ ತಾಯಿ (Yash Mother) ಪುಷ್ಪ ಅರುಣ್​​ಕುಮಾರ್ ನಡುವೆ ಆಸ್ತಿ ವಿಚಾರವಾಗಿ ವಿವಾದ ಏರ್ಪಟ್ಟಿದೆ. ಪರಸ್ಪರ ಆರೋಪ ಮಾಡಿಕೊಂಡಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಹೊಸ ದೂರು ದಾಖಲಾಗಿದೆ. ಆ ಬಗ್ಗೆ ದೇವರಾಜ್ ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ. ‘ಪುಷ್ಪಾ (Pushpa Arunkumar) ಮೇಡಂ ಹಾಗೂ ಅವರ ಪಕ್ಕದಲ್ಲಿ ಇರುವ ಒಬ್ಬ ವೆಯ್ಟ್ ಮೆಜರ್​​ಮೆಂಟ್ ಇನ್ಸ್​​ಪೆಕ್ಟರ್ ನಟರಾಜು ಹಾಗೂ ದುರ್ಗಾ ಪ್ರಸಾದ್ ಎಂಬುವವರು ನನ್ನ ಮೇಲೆ ಹಾಗೂ ನನ್ನ ಬೆಂಬಲಿಗರ ಮೇಲೆ ದೂರು ಕೊಟ್ಟಿದ್ದರು. ನಾವು ಅವರ ಮೇಲೆ ಬೆದರಿಕೆ ಹಾಕಿದ್ದೇವೆ ಅಂತ ದೂರು ಕೊಟ್ಟಿದ್ದಾರೆ. ನಾನು ಯಾವುದೇ ರೀತಿಯಲ್ಲೂ ಅವರಿಗೆ ಅಡ್ಡಿ ಮಾಡಿಲ್ಲ. ಅವರೇ ನನಗೆ ತೊಂದರೆ ಕೊಡುತ್ತಿದ್ದಾರೆ. ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಆ ಜಾಗಕ್ಕೆ ಹೋಗಿದ್ದಾರೆ. ಅದನ್ನು ನಾವು ಕೇಳಲು ಹೋದಾಗ ನಟರಾಜು ಹಾಗೂ ದುರ್ಗಾ ಪ್ರಸಾದ್ ನಮಗೆ ಜೀವ ಬೆದರಿಕೆ ಹಾಕಿದ್ದಾರೆ. ಅವರ ಮೇಲೆ ನಾನು ದೂರು ನೀಡುತ್ತೇನೆ’ ಎಂದು ದೇವರಾಜ್ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Weekly Horoscope 2026: ನಿಮ್ಮ ರಾಶಿಗನುಗುಣವಾಗಿ ಜನವರಿ ತಿಂಗಳ ಎರಡನೇ ವಾರದ ಭವಿಷ್ಯ ತಿಳಿಯಿರಿ – Kannada News | January 2nd Week Horoscope 2026: Zodiac Predictions and Financial Fortunes

ಜನವರಿ ತಿಂಗಳ ಎರಡನೇ ವಾರ ವಿಶೇಷವಾಗಿ ಅಲೌಕಿಕ ಸಂಪತ್ತು ಪಡೆಯಬೇಕೆನ್ನುವ, ಆಸೆ ಕುತೂಹಲ. ಪರರ ಸಂಪತ್ತಿಗೂ ಬಯಕೆ ಅಧಿಕವಾಗಲಿದೆ. ದಾನ, ಧರ್ಮದಿಂದ ಎಲ್ಲವನ್ನೂ ಸರಿಮಾಡಿಕೊಳ್ಳುವ ಮಾರ್ಗ ಸಿಗಲಿದೆ. ಶುಭವಾಗಲಿ ಎಲ್ಲರಿಗೂ

ಮೇಷ ರಾಶಿ:

ಈ ವಾರ ಸಮಯ ಅಚಾನಕ್ ತಿರುವು ತರುತ್ತದೆ. ಆತುರ ತಪ್ಪಿಸಿ ನಿರೀಕ್ಷೆ ಇಡಿ. ತಡವಾಗಿ ತೆಗೆದುಕೊಳ್ಳುವ ನಿರ್ಧಾರಗಳು ಲಾಭ ಕೊಡುತ್ತವೆ. ಧೈರ್ಯಕ್ಕಿಂತ ಸಂಯಮ ಮುಖ್ಯ.

ವೃಷಭ ರಾಶಿ:

ಈ ವಾರದಲ್ಲಿ ನಿಧಾನವಾದ ಕಾಲಪ್ರವಾಹ ನಿಮ್ಮ ಪಾಲಿಗೆ ಅನುಕೂಲ. ತಾಳ್ಮೆಯಿಂದ ಮಾಡಿದ ಕೆಲಸ ಶಾಶ್ವತ ಫಲ ನೀಡುತ್ತದೆ. ಹಣಕಾಸಿನಲ್ಲಿ ಸ್ಥಿರತೆ. ಸಮಯವನ್ನು ಒತ್ತಾಯಿಸಬೇಡಿ.

ಮಿಥುನ ರಾಶಿ:

ಎರಡನೇ ವಾರ ಮಾತು, ಮಾಹಿತಿ, ಸಂದೇಶಗಳ ಮೂಲಕ ಅವಕಾಶಗಳು ಬರುತ್ತವೆ. ಸರಿಯಾದ ಕ್ಷಣದಲ್ಲಿ ಮಾತನಾಡಿದರೆ ಲಾಭ. ಅಸಮಯದ ಮಾತು ಗೊಂದಲ ಉಂಟುಮಾಡುತ್ತದೆ.

ಕರ್ಕಾಟಕ ರಾಶಿ:

ಈ ರಾಶಿಗೆ ಎರಡನೇ ವಾರ ಭಾವನಾತ್ಮಕತೆಯಿಂದ ಪ್ರಭಾವ ಜಾಸ್ತಿ. ಮನಸ್ಸು ಒಪ್ಪಿದ ಸಮಯದಲ್ಲೇ ಕಾರ್ಯಸಾಧನೆ. ಒತ್ತಾಯದ ಕೆಲಸ ವಿಫಲ. ಕುಟುಂಬ ವಿಚಾರಗಳು ಮನಸ್ಸನ್ನು ಆವರಿಸುತ್ತವೆ.

ಸಿಂಹ ರಾಶಿ:

ಈ ವಾರ ನಾಯಕತ್ವ ವಿಜೃಂಭಿಸುವ ಸಮಯ. ಮುನ್ನಡೆಸಿದರೆ ಫಲ. ಆತ್ಮವಿಶ್ವಾಸ ಹೆಚ್ಚಾಗುತ್ತದೆ. ಆದರೆ ಅಹಂಕಾರ ಹೆಚ್ಚಾದರೆ ಹಿನ್ನಡೆ. ಗೌರವ, ಅಧಿಕಾರ ಸಂಬಂಧಿತ ವಿಚಾರಗಳು ಮುನ್ನೆಲೆ.

ಕನ್ಯಾ ರಾಶಿ:

ಬುಧನ ಆಧಿಪತ್ಯದ ಈ ರಾಶಿಗೆ ಸೂಕ್ಷ್ಮತೆಯನ್ನು ಪರೀಕ್ಷಿಸುವ ಕಾಲ. ಸಣ್ಣ ತಪ್ಪಿಗೂ ಹೆಚ್ಚು ಪರಿಣಾಮ. ಸಮಯಪಾಲನೆ, ಕ್ರಮಬದ್ಧತೆ ಜಯ ತರುತ್ತದೆ. ಕೆಲಸದ ಒತ್ತಡ ಹೆಚ್ಚಾದರೂ ಫಲ ಸಿಗುತ್ತದೆ.

ತುಲಾ ರಾಶಿ:

ನಿಮಗೆ ಈ ವಾರ ಸಮತೋಲನದ ಅವಶ್ಯಕತೆ ಹೆಚ್ಚು. ಎರಡು ವಿಷಯಗಳ ನಡುವೆ ತೀರ್ಮಾನ ಅಗತ್ಯ. ತೂಕ ಹಾಕಿ ನಿರ್ಧಾರ ತೆಗೆದುಕೊಂಡರೆ ಲಾಭ. ಸಂಬಂಧಗಳಲ್ಲಿ ಸಂಯಮ ಬೇಕು.

ವೃಶ್ಚಿಕ ರಾಶಿ:

ಜನವರಿಯ ಎರಡನೇ ವಾರ ಗುಪ್ತವಾಗಿರುವ ಕಾಲದ ಪ್ರಭಾವವನ್ನು ಎದುರಿಸುವಿರಿ. ಮೌನವಾಗಿ ಮಾಡಿದ ಪ್ರಯತ್ನಗಳಿಗೆ ಬೆಂಬಲ. ರಹಸ್ಯ ಯೋಜನೆಗಳು ಫಲ ಕೊಡುತ್ತವೆ. ಬಹಿರಂಗ ಮಾತುಗಳಿಂದ ದೂರವಿರುವುದು ಒಳಿತು.

ಧನು ರಾಶಿ:

ಈ ವಾರ ವಿಸ್ತಾರವಾಗಿ ಹರಡಿದ ನಿಮ್ಮ ಸಮಯವನ್ನು ಏನು ಮಾಡಬೇಕು ಎಂಬ ಜಿಜ್ಞಾಸೆ. ಮುಂದಿನ ದಿನಗಳ ಯೋಜನೆಗಳು ಮಹತ್ವದವು. ಈಗ ಮಾಡಿದ ಪ್ರಯತ್ನಗಳ ಫಲ ತಡವಾಗಿ ಬರುತ್ತದೆ. ಆತುರಕ್ಕಿಂತ ದೃಷ್ಟಿಕೋನ ಮುಖ್ಯ.

ಮಕರ ರಾಶಿ:

ನೀವು ಈ ವಾರದಲ್ಲಿ ಶ್ರಮ, ಶಿಸ್ತಿನ ಬಗ್ಗೆ ಗಮನ ಹರಿಸುವ ಕಾಲ. ಸಮಯಕ್ಕೆ ಮಾಡಿದ ಕಠಿಣ ಪರಿಶ್ರಮ ಗೌರವ ತರುತ್ತದೆ. ಸುಲಭ ದಾರಿ ಹಾನಿಕರ. ಜವಾಬ್ದಾರಿಗಳು ಹೆಚ್ಚಾದರೂ ಸ್ಥಿರತೆ ಸಿಗುತ್ತದೆ.

ಕುಂಭ ರಾಶಿ:

ಶನಿಯ ಆಧಿಪತ್ಯದ ಈ ರಾಶಿಯವರಿಗೆ ಅನಿರೀಕ್ಷಿತ ಬದಲಾವಣೆಯ ಸಮಯ ಎದುರಾಗುವುದು. ನಿರೀಕ್ಷಿಸದ ಅವಕಾಶಗಳು ಬರುತ್ತವೆ. ರೂಢಿ ಯೋಚನೆ ಬಿಡಿ. ಬದಲಾವಣೆ ಸ್ವೀಕರಿಸಿದರೆ ಲಾಭ ಸಾಧ್ಯ.

ಮೀನ ರಾಶಿ:

ಆಂತರಿಕ ಜ್ಞಾನ ಕಾರ್ಯನಿರ್ವಹಿಸಿಲಿದ್ದು, ಅದನ್ನು ಸರಿಯಾದ ಮಾರ್ಗದಲ್ಲಿ ಕೊಂಡೊಯ್ಯಬೇಕು. ಮನಸ್ಸಿನ ಸೂಚನೆ ಅನುಸರಿಸಿದರೆ ಯಶಸ್ಸು. ಹೊರಗಿನ ಸಲಹೆಗಿಂತ ಸ್ವಂತ ಅನುಭವ ಮುಖ್ಯವಾಗುತ್ತದೆ.

-ಲೋಹಿತ ಹೆಬ್ಬಾರ್ – 8762924271 (what’s app only)

Source link