ಪುದುಚೆರಿ ಪ್ರಯಾಣದ ವೇಳೆ ಬಸ್‌ನಲ್ಲಿ ಗಿಳಿ ಕಳವು: ಪೊಲೀಸರಿಗೆ ಬೆಂಗಳೂರು ಮಹಿಳೆಯಿಂದ ದೂರು – Kannada News | Bengaluru Woman’s Pet Parakeet Stolen on Puducherry Bus Journey: Complaint Filed
ಬೆಂಗಳೂರು, ಮೇ 14: ಆನೇಕಲ್ನಿಂದ ಪುದುಚೆರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತನ್ನ ಸಾಕು ಗಿಳಿಯನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿ 48 ವರ್ಷದ ಮಹಿಳೆ ಪೊಲೀಸರ ಮೊರೆ ಹೋಗಿರುವ ಘಟನೆ ನಡೆದಿದೆ. ಚಂದಾಪುರದ VBHC ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಖಾಸಗಿ ಕಂಪನಿಯ ಉದ್ಯೋಗಿ ಎಂ. ಲಿಜಿ ಅವರು ತಮ್ಮ ಅಸ್ವಸ್ಥ ತಂದೆಯನ್ನು ಭೇಟಿಯಾಗಲುಪುದುಚೆರಿಗೆ ತೆರಳುತ್ತಿದ್ದ ವೇಳೆ ಅವರ ಸಾಕು ಗಿಳಿ ಕಳುವಾಗಿದ್ದು, ಈ ಬಗ್ಗೆ ದೂರು ದಾಖಲಿಸಿದ್ದಾರೆ. ಮಾಹಿತಿಯ ಪ್ರಕಾರ ಆನೇಕಲ್ ರಸ್ತೆಯಲ್ಲಿ ಅವರು ಬಸ್ ಹತ್ತಿದ್ದು, ತಮ್ಮ…