Category Archives: Blog

Your blog category

Video: ಬುರ್ಖಾ ಧರಿಸಿ ಬಂದು ಚಿನ್ನದಂಗಡಿ ಮಾಲೀಕನ ಕಣ್ಣಿಗೆ ಖಾರದಪುಡಿ ಎರಚಿದ ಮಹಿಳೆ; ವಿಡಿಯೋ ವೈರಲ್ – Kannada News | Viral Video: Burqa Woman’s Chili Powder Robbery Bid at Jewelry Store Caught on CCTV

ಬುರ್ಖಾ ಧರಿಸಿ ಗ್ರಾಹಕಿಯಂತೆ ಚಿನ್ನದ ಅಂಗಡಿಗೆ ನುಗ್ಗಿದ ಮಹಿಳೆಯೊಬ್ಬಳು, ಮಾಲೀಕ ಮತ್ತು ಸಿಬ್ಬಂದಿಯ ಕಣ್ಣಿಗೆ ಖಾರಪುಡಿ ಎರಚಿ ದರೋಡೆಗೆ ಯತ್ನಿಸಿದ ಘಟನೆ ನಡೆದಿದೆ. ಆಭರಣಗಳನ್ನು ನೋಡುವ ನೆಪದಲ್ಲಿ ಹೊಂಚು ಹಾಕಿದ್ದ ಈ ಕಿರಾತಕಿ, ತನ್ನ ಬಳಿಯಿದ್ದ ಖಾರದಪುಡಿಯನ್ನು ಅವರ ಕಣ್ಣಿಗೆ ಎಸೆದು ಆಭರಣಗಳನ್ನು ಎಗರಿಸಲು ಯತ್ನಿಸಿದ್ದಾಳೆ. ಈ ಇಡೀ ದರೋಡೆ ಯತ್ನದ ದೃಶ್ಯಾವಳಿಗಳು ಅಂಗಡಿಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗುತ್ತಿದೆ. ಪೊಲೀಸರು ಸಿಸಿಟಿವಿ ಆಧಾರದ ಮೇಲೆ ತನಿಖೆ ಚುರುಕುಗೊಳಿಸಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: ಅರೆಬರೆ ಬಟ್ಟೆ ತೊಟ್ಟು ರೀಲ್ಸ್​ ಮಾಡುತ್ತಿದ್ದ ಹೆಂಡತಿ; ಅವಮಾನ ತಾಳಲಾರದೇ ಆಕೆಗೆ ‘ಪಿಂಡದಾನ’ ಮಾಡಿದ ಗಂಡ!

 

ಇನ್ನಷ್ಟು ವಿಡಿಯೋ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಪುದುಚೆರಿ ಪ್ರಯಾಣದ ವೇಳೆ ಬಸ್​​ನಲ್ಲಿ ಗಿಳಿ ಕಳವು: ಪೊಲೀಸರಿಗೆ ಬೆಂಗಳೂರು ಮಹಿಳೆಯಿಂದ ದೂರು – Kannada News | Bengaluru Woman’s Pet Parakeet Stolen on Puducherry Bus Journey: Complaint Filed

ಬೆಂಗಳೂರು, ಮೇ 14: ಆನೇಕಲ್​​ನಿಂದ ಪುದುಚೆರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ತನ್ನ ಸಾಕು ಗಿಳಿಯನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಿ 48 ವರ್ಷದ ಮಹಿಳೆ ಪೊಲೀಸರ ಮೊರೆ ಹೋಗಿರುವ ಘಟನೆ ನಡೆದಿದೆ. ಚಂದಾಪುರದ VBHC ಅಪಾರ್ಟ್‌ಮೆಂಟ್‌ನಲ್ಲಿ ವಾಸವಾಗಿರುವ ಖಾಸಗಿ ಕಂಪನಿಯ ಉದ್ಯೋಗಿ ಎಂ. ಲಿಜಿ ಅವರು ತಮ್ಮ ಅಸ್ವಸ್ಥ ತಂದೆಯನ್ನು ಭೇಟಿಯಾಗಲುಪುದುಚೆರಿಗೆ ತೆರಳುತ್ತಿದ್ದ ವೇಳೆ ಅವರ ಸಾಕು ಗಿಳಿ ಕಳುವಾಗಿದ್ದು, ಈ ಬಗ್ಗೆ ದೂರು ದಾಖಲಿಸಿದ್ದಾರೆ.

ಮಾಹಿತಿಯ ಪ್ರಕಾರ ಆನೇಕಲ್​​ ರಸ್ತೆಯಲ್ಲಿ ಅವರು ಬಸ್​​ ಹತ್ತಿದ್ದು, ತಮ್ಮ ಸಾಕು ಗಿಳಿಯನ್ನು ಚಾಲಕನ ಕ್ಯಾಬಿನ್​​ ಸಮೀಪ ಪಂಜರದಲ್ಲಿ ಇಟ್ಟಿದ್ದರು. ಆದರೆ ಆನೇಕಲ್​​ ಮತ್ತು ಅತ್ತಿಬೆಲೆ ಟೋಲ್​​ ಪ್ಲಾಜಾಗಳ ನಡುವೆ ಯಾರೋ ಪಂಜರದ ಸಮೇತ ಗಿಳಿಯನ್ನು ಕದ್ದು ಎಸ್ಕೇಪ್​​ ಆಗಿದ್ದಾರೆ ಎನ್ನಲಾಗಿದೆ. ಅತ್ತಿಬೆಲೆ ಟೋಲ್ ಬಳಿ ಬಸ್ ತಲುಪಿದಾಗ ಗಿಳಿಯನ್ನು ನೋಡಲು ಲಿಜಿ ಅವರು ತೆರಳಿದ್ದ ವೇಳೆ ಘಟನೆ ಬೆಳಕಿಗೆ ಬಂದಿದೆ. ಕ್ಷಣ ಚಾಲಕ ಮತ್ತು ಬಸ್ ಸಿಬ್ಬಂದಿಗೆ ಅವರು ಈ ಬಗ್ಗೆ ಮಾಹಿತಿ ನೀಡಿದ್ದು, ಬಸ್​​ ಅನ್ನು ಸಂಪೂರ್ಣವಾಗಿ ಪರಿಶೀಲಿಸಿದರೂ ಗಿಳಿ ಪತ್ತೆಯಾಗಿಲ್ಲ ಎನ್ನಲಾಗಿದೆ.

ಇದನ್ನೂ ಓದಿ: ಪೊಲೀಸ್ ಠಾಣೆ ಎದುರೇ ಬೈಕ್ ಬಾಕ್ಸ್​ನಲ್ಲಿದ್ದ ಲಕ್ಷ ರೂ. ಹಣ ದೋಚಿದ ಕಳ್ಳರು, ಸಿಸಿಟಿವಿಲಿ ಸೆರೆಯಾಯ್ತು ಖದೀಮರ ಕೈಚಳಕ

ತುರ್ತು ಪರಿಸ್ಥಿತಿಯಿಂದ ಪ್ರಯಾಣ ಮುಂದುವರಿಸಿದ್ದ ಮಹಿಳೆ, ಬಸ್ ಸಿಬ್ಬಂದಿಯಿಂದ ಠಾಣೆಯ ಸಂಪರ್ಕ ಸಂಖ್ಯೆ ಪಡೆದು ಬಳಿಕ ವಾಟ್ಸಾಪ್ ಮೂಲಕ ಅತ್ತಿಬೆಲೆ ಪೊಲೀಸರಿಗೆ ದೂರು ನೀಡಿದ್ದಾರೆ. ಬಸ್‌ನಲ್ಲಿದ್ದ ಸಹ ಪ್ರಯಾಣಿಕರು ಗಿಳಿಯನ್ನು ಕದ್ದಿರಬಹುದು ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಶಂಕಿತನ ಬಗ್ಗೆ ಕೆಲವು ಮಹತ್ವದ ಸುಳಿವುಗಳು ಲಭ್ಯವಾಗಿವೆ. ಆದರೆ ಆರೋಪಿಯು ಯಾವ ಸ್ಥಳದಲ್ಲಿ ಬಸ್‌ನಿಂದ ಇಳಿದಿದ್ದಾನೆ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ. ಆನೇಕಲ್ ಮತ್ತು ಅತ್ತಿಬೆಲೆ ನಡುವೆ ಹಲವು ಕಡೆ ಬಸ್ ನಿಲ್ಲಿಸಿ ಪ್ರಯಾಣಿಕರನ್ನು ಹತ್ತಿಸಿಕೊಳ್ಳಲಾಗಿದೆ. ಹೀಗಾಗಿ ಬಸ್ ನಿರ್ವಹಣಾ ಸಂಸ್ಥೆ ನೀಡಿದ ಪ್ರಯಾಣಿಕರ ವಿವರಗಳನ್ನು ಪರಿಶೀಲಿಸಲಾಗುತ್ತಿದ್ದು, ಬಸ್‌ನ ಸಿಸಿಟಿವಿ ದೃಶ್ಯಾವಳಿಯನ್ನೂ ವೀಕ್ಷಿಸಲಾಗುತ್ತಿದೆ. ಮನೆಯಲ್ಲಿ ಗಿಳಿಯನ್ನು ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಅದನ್ನು ಜೊತೆಗೆ ಕರೆದುಕೊಂಡು ಹೋಗಿದ್ದಾಗಿ ಲಿಜಿ ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ ಎಂದು ಪೊಲೀಸರು ಹೇಳಿಳೋದಾಗಿ ದಿ ನ್ಯೂ ಇಂಡಿಯನ್​​ ಎಕ್ಸ್​​ಪ್ರೆಸ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ಪ್ಲೇಆಫ್​ಗೇರಿಲ್ಲ… ಹೀಗಾದ್ರೆ RCB ಟೂರ್ನಿಯಿಂದಲೇ ಔಟ್..! – Kannada News | How RCB Can Be Eliminated from IPL 2026

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-19 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಪ್ರಚಂಡ ಪ್ರದರ್ಶನ ನೀಡಿದೆ. ಈ ಪ್ರದರ್ಶನದೊಂದಿಗೆ ಆರ್​ಸಿಬಿ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ. ಈ ಅಗ್ರಸ್ಥಾನದ ಹೊರತಾಗಿಯೂ ಆರ್​ಸಿಬಿ ತಂಡದ ಪ್ಲೇಆಫ್ ಪ್ರವೇಶ ಇನ್ನೂ ಸಹ ಖಾತರಿಯಾಗಿಲ್ಲ!

ಏಕೆಂದರೆ ಪ್ರಸ್ತುತ ಅಂಕ ಪಟ್ಟಿಯಲ್ಲಿರುವ 7 ತಂಡಗಳಿಗೆ 16+ ಅಂಕಗಳನ್ನು ಗಳಿಸಲು ಅವಕಾಶವಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲಿ ಆರ್​ಸಿಬಿ ಎಡವಿದರೆ ಟೂರ್ನಿಯಿಂದಲೇ ಹೊರಬೀಳಬಹುದು. ಹೀಗೆ ಆಘಾತಕಾರಿಯಾಗಿ ಹೊರಬೀಳಲು ಕಾರಣವಾಗುವ ಸಮೀಕರಣಗಳು ಈ ಕೆಳಗಿನಂತಿವೆ…

ಗುಜರಾತ್ ಟೈಟಾನ್ಸ್: ಗುಜರಾತ್ ಟೈಟಾನ್ಸ್ ತಂಡವು ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನದಲ್ಲಿದೆ. ಶುಭ್​ಮನ್ ಗಿಲ್ ಪಡೆಯು ಮುಂದಿನ ಎರಡು ಮ್ಯಾಚ್​ಗಳಲ್ಲಿ ಜಯ ಸಾಧಿಸಿದರೆ ಒಟ್ಟು 20 ಅಂಕಗಳೊಂದಿಗೆ ಪ್ಲೇಆಫ್​ಗೆ ಎಂಟ್ರಿ ಕೊಡಲಿದೆ. ಇಲ್ಲಿ ಗುಜರಾತ್ ಟೈಟಾನ್ಸ್ ತಂಡದ ಮುಂದಿನ ಮ್ಯಾಚ್​ಗಳು ಸಿಎಸ್​ಕೆ ಮತ್ತು ಕೆಕೆಆರ್ ವಿರುದ್ಧ. ಈ ಗೆಲುವುಗಳೊಂದಿಗೆ ಗುಜರಾತ್ ಟೈಟಾನ್ಸ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿ ಮೊದಲ ಕ್ವಾಲಿಫೈಯರ್​ಗೆ ಅರ್ಹತೆ ಪಡೆಯಬಹುದು.

ಸನ್​ರೈಸರ್ಸ್ ಹೈದರಾಬಾದ್: ಪ್ರಸ್ತುತ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿರುವ ಸನ್​ರೈಸರ್ಸ್ ಹೈದರಾಬಾದ್ ಒಟ್ಟು 14 ಅಂಕಗಳನ್ನು ಹೊಂದಿದೆ. ಮುಂದಿನ ಎರಡು ಮ್ಯಾಚ್​ಗಳಲ್ಲಿ ಎಸ್​ಆರ್​ಹೆಚ್ ಗೆದ್ದರೆ ಒಟ್ಟು 18 ಅಂಕಗಳನ್ನು ಪಡೆಯಲಿದೆ. ಇಲ್ಲಿ ಸನ್​ರೈಸರ್ಸ್ ಹೈದರಾಬಾದ್ ತಂಡದ ಎದುರಾಳಿಗಳು ಸಿಎಸ್​ಕೆ ಮತ್ತು ಆರ್​ಸಿಬಿ. ಎಸ್​ಆರ್​ಹೆಚ್ ವಿರುದ್ಧ ಆರ್​ಸಿಬಿ ಸೋತರೆ 16 ಅಂಕಗಳಲ್ಲೇ ಉಳಿಯಲಿದೆ. ಇದರಿಂದ ಸನ್​ರೈಸರ್ಸ್ ಹೈದರಾಬಾದ್ ತಂಡವು ಉತ್ತಮ ನೆಟ್ ರನ್ ಹಾಗೂ 16 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಲಿದೆ.

ಪಂಜಾಬ್ ಕಿಂಗ್ಸ್​: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಮುಂದಿನ ಎದುರಾಳಿ ಪಂಜಾಬ್ ಕಿಂಗ್ಸ್​. ಮುಂಬೈ ಇಂಡಿಯನ್ಸ್ ಹಾಗೂ ಆರ್​ಸಿಬಿ ವಿರುದ್ಧ ಗೆದ್ದರೆ ಶ್ರೇಯಸ್ ಅಯ್ಯರ್ ಪಡೆ ಗೆದ್ದರೆ ಒಟ್ಟು 17 ಅಂಕಗಳನ್ನು ಪಡೆಯಲಿದೆ. ಇದರಿಂದಾಗಿ ಆರ್​ಸಿಬಿ ಅಂಕ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಇನ್ನು ಕೊನೆಯ ಮ್ಯಾಚ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಗೆಲ್ಲುವ ಮೂಲಕ ಪಂಜಾಬ್ ಕಿಂಗ್ಸ್ ತಂಡಕ್ಕೆ ಒಟ್ಟು 19 ಅಂಕಗಳನ್ನು ಪಡೆಯಲು ಅವಕಾಶವಿದೆ.

ರಾಜಸ್ಥಾನ್ ರಾಯಲ್ಸ್: ರಿಯಾನ್ ಪರಾಗ್ ಮುಂದಾಳತ್ವದ ರಾಜಸ್ಥಾನ್ ರಾಯಲ್ಸ್​ ಒಟ್ಟು 12 ಅಂಕಗಳನ್ನು ಹೊಂದಿದೆ. ಅಲ್ಲದೆ ಇನ್ನೂ ಮೂರು ಮ್ಯಾಚ್​ಗಳಿವೆ. ಈ ಮೂರು ಪಂದ್ಯಗಳಲ್ಲಿ ಆರ್​ಆರ್​ ತಂಡವು ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳನ್ನು ಎದುರಿಸಲಿದೆ. ಈ ಪಂದ್ಯಗಳಲ್ಲಿ ಜಯ ಸಾಧಿಸಿದರೆ ಒಟ್ಟು 18 ಅಂಕಗಳೊಂದಿಗೆ ಅಂಕ ಪಟ್ಟಿಯಲ್ಲಿ ನಾಲ್ಕನೇ ಸ್ಥಾನವನ್ನು ಅಲಂಕರಿಸಬಹುದು.

ಅಂದರೆ ಗುಜರಾತ್ ಟೈಟಾನ್ಸ್ ತಂಡವು ಮುಂದಿನ 2 ಪಂದ್ಯಗಳಲ್ಲಿ ಜಯ ಸಾಧಿಸಿದರೆ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಲಿದೆ. ಇನ್ನು ಸನ್​ರೈಸರ್ಸ್ ಹೈದರಾಬಾದ್ ತಂಡವು ಮುಂದಿನ 2 ಪಂದ್ಯಗಳಲ್ಲಿ ಗೆದ್ದರೆ ಒಟ್ಟು 18 ಅಂಕಗಳನ್ನು ಪಡೆಯಲಿದೆ. ಅತ್ತ ಪಂಜಾಬ್ ಕಿಂಗ್ಸ್ ಮುಂದಿನ ಮೂರು ಮ್ಯಾಚ್​ಗಳಲ್ಲೂ ಜಯ ಸಾಧಿಸಿದರೆ 19 ಅಂಕಗಳನ್ನು ತನ್ನದಾಗಿಸಿಕೊಳ್ಳಲಿದೆ. ಇನ್ನು ರಾಜಸ್ಥಾನ್ ರಾಯಲ್ಸ್ ತಂಡವು ಮುಂದಿನ ಮೂರು ಪಂದ್ಯಗಳ ಮೂಲಕ ಒಟ್ಟು 18 ಅಂಕಗಳನ್ನು ಪಡೆಯಲು ಅವಕಾಶವಿದೆ.

ಇಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ತನ್ನ ಕೊನೆಯ ಎರಡು ಪಂದ್ಯಗಳನ್ನಾಡಲಿರುವುದು ಪ್ಲೇಆಫ್ ರೇಸ್​ನಲ್ಲಿರುವ ಸನ್​ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ ಎಂಬುದು ಉಲ್ಲೇಖಾರ್ಹ. ಈ ಎರಡು ಮ್ಯಾಚ್​ಗಳಲ್ಲಿ ಆರ್​ಸಿಬಿ ಸೋತರೆ 16 ಅಂಕಗಳಲ್ಲೇ ಉಳಿಯಲಿದೆ. ಅದೇ ವೇಳೆ ಸನ್​ರೈಸರ್ಸ್ ಹೈದರಾಬಾದ್ ತಂಡಕ್ಕೆ ಮುಂದಿನ 2 ಗೆಲುವುಗಳೊಂದಿಗೆ 18 ಅಂಕಗಳನ್ನು ಪಡೆಯಲು ಅವಕಾಶವಿದೆ. ಇತ್ತ ಪಂಜಾಬ್ ಕಿಂಗ್ಸ್ ತಂಡವು ಆರ್​ಸಿಬಿ ಹಾಗೂ ಮುಂಬೈ ಇಂಡಿಯನ್ಸ್ ಅಥವಾ ಲಕ್ನೋ ಸೂಪರ್ ಜೈಂಟ್ಸ್ ತಂಡವನ್ನು ಸೋಲಿಸಿದರೆ 17 ಅಂಕಗಳನ್ನು ಪಡೆಯಬಹುದು. ಹಾಗೆಯೇ ರಾಜಸ್ಥಾನ್ ರಾಯಲ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಮುಂಬೈ ಇಂಡಿಯನ್ಸ್ ತಂಡಗಳ ವಿರುದ್ಧ ಗೆದ್ದರೆ 18 ಅಂಕಗಳನ್ನು ಪಡೆಯಲಿದೆ.

ಅಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪಾಲಿಗೆ ಮುಂದಿನ ಎರಡು ಮ್ಯಾಚ್​ಗಳು ನಿರ್ಣಾಯಕ. ಏಕೆಂದರೆ ಆರ್​ಸಿಬಿ ತಂಡವು ತನ್ನ ಕೊನೆಯ ಎರಡು ಲೀಗ್ ಪಂದ್ಯಗಳನ್ನು ಆಡಲಿರುವುದು ಪ್ಲೇಆಫ್ ರೇಸ್​ನಲ್ಲಿರುವ ಸನ್​ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ವಿರುದ್ಧ. ಈ ಎರಡು ತಂಡಗಳು ಜಯ ಸಾಧಿಸಿದರೆ ಆರ್​ಸಿಬಿ ತಂಡದ ಪಾಯಿಂಟ್ಸ್ 16 ರಲ್ಲೇ ಉಳಿಯಲಿದೆ. ಅತ್ತ ಪಂಜಾಬ್ ಕಿಂಗ್ಸ್ ಹಾಗೂ ಸನ್​ರೈಸರ್ಸ್ ಹೈದರಾಬಾದ್​ ಮುಂದಿನ ಎಲ್ಲಾ ಮ್ಯಾಚ್​ಗಳನ್ನು ಗೆದ್ದರೆ, ರಾಜಸ್ಥಾನ್ ರಾಯಲ್ಸ್ ಮುಂಬರುವ ಮೂರು ಪಂದ್ಯಗಳಲ್ಲಿ ಜಯ ಸಾಧಿಸಿದರೆ ಆರ್​ಸಿಬಿ ತಂಡ ಮೊದಲ ಸುತ್ತಿನಲ್ಲೇ ಹೊರಬೀಳಲಿದೆ.

Published On – 2:21 pm, Thu, 14 May 26

Source link

ಅಜ್ಜನ ಕ್ಷೇತ್ರದಿಂದ ಗೆದ್ದು ಅವರ ಹೆಸರ ಮೇಲೆ ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದ ಸಮರ್ಥ್​ – Kannada News | Samarth takes Oath as MLA On His grandfather Shamanur shivashankarappa Name

ಬೆಂಗಳೂರು, (ಮೇ 14): ಬಾಗಲಕೋಟೆ (Bagalkot) ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ ಗೆದ್ದಿರುವ ಕಾಂಗ್ರೆಸ್​​ನ (Congress) ಉಮೇಶ್ ಮೇಟಿ ಮತ್ತು ದಾವಣಗೆರೆ (Davanagere) ದಕ್ಷಿಣ ವಿಧಾನಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿರುವ ಸಮರ್ಥ್ ಮಲ್ಲಿಕಾರ್ಜುನ್ ಇಂದು(ಮೇ 14) ಶಾಸಕರಾಗಿ ಪ್ರಮಾಣ ವಚನ ಸ್ವೀಕರಿಸಿದರು. ವಿಧಾನಸೌಧದ ಮೂರನೇ ಮಹಡಿಯಲ್ಲಿರುವ ಸಮ್ಮೇಳನ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಉಮೇಶ್ ಮೇಟಿ ಮತ್ತು ಸಮರ್ಥ ಮಲ್ಲಿಕಾರ್ಜುನ್ ಅವರಿಗೆ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ಅವರು ಪ್ರತಿಜ್ಞಾ ವಿಧಿ ಬೋಧಿಸಿದರು.

ಇನ್ನು ಸಮರ್ಥ್​, ಮೃತ ತಮ್ಮ ಅಜ್ಜ ಶಾಮನೂರು ಶಿವಶಂಕರಪ್ಪ (Shamanur shivashankarappa) ಅವರ ಹೆಸರಿನಲ್ಲಿ ಪ್ರಮಾಣ ಸ್ವೀಕರಿಸಿರುವುದು ವಿಶೇಷ. ಯಾಕಂದ್ರೆ, ದೇವರು, ರೈತರು, ಸಂವಿಧಾನದ ಹೆಸರಿನ ಮೇಲೆ ಪ್ರಮಾಣವಚನ ಸ್ವೀಕರಿಸುವುದು ನೋಡಿದ್ದೇವೆ. ಆದ್ರೆ, ಸಮರ್ಥ್ ತಮ್ಮ ತಾತನ ಹೆಸರಿನ ಮೇಲೆ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದಾರೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Virat Kohli: ವಿರಾಟ್ ಕೊಹ್ಲಿಯ 1 ಶತಕಕ್ಕೆ, 11 ದಾಖಲೆಗಳು ಉಡೀಸ್! – Kannada News | Virat Kohli Century Shatters Cricket Records

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 57ನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ (Virat Kohli) ಭರ್ಜರಿ ಶತಕ ಸಿಡಿಸಿದ್ದಾರೆ. ಕೆಕೆಆರ್ ವಿರುದ್ಧದ ಈ ಶತಕದೊಂದಿಗೆ ಕಿಂಗ್ ಕೊಹ್ಲಿ ಹಲವು ದಾಖಲೆಗಳನ್ನು ಬರೆದಿದ್ದಾರೆ. ಈ ದಾಖಲೆಗಳ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ…

  1. ಅತಿ ಹೆಚ್ಚು ಐಪಿಎಲ್ ಶತಕಗಳು: ವಿರಾಟ್ ಕೊಹ್ಲಿ ತಮ್ಮ ಐಪಿಎಲ್ ವೃತ್ತಿಜೀವನದ 9ನೇ ಶತಕ ಪೂರೈಸುವ ಮೂಲಕ ಈ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಂಡಿದ್ದಾರೆ. ಜೋಸ್ ಬಟ್ಲರ್ (7) ಮತ್ತು ಕ್ರಿಸ್ ಗೇಲ್ (6) ನಂತರದ ಸ್ಥಾನಗಳಲ್ಲಿದ್ದಾರೆ.
  2. 14,000 ರನ್: ಟಿ20 ಕ್ರಿಕೆಟ್ ಇತಿಹಾಸದಲ್ಲಿ 14,000 ರನ್ ಗಡಿಯನ್ನು ದಾಟಿದ ವಿಶ್ವದ 6ನೇ ಮತ್ತು ಭಾರತದ ಮೊದಲ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
  3. ವಿಶ್ವ ದಾಖಲೆ: ಕೇವಲ 409 ಇನ್ನಿಂಗ್ಸ್‌ಗಳಲ್ಲಿ 14 ಸಾವಿರ ರನ್​ ಪೂರೈಸಿ ವಿರಾಟ್ ಕೊಹ್ಲಿ ಹೊಸ ವಿಶ್ವ ದಾಖಲೆ ಬರೆದಿದ್ದಾರೆ. ಇದಕ್ಕೂ ಮುನ್ನ ಈ ದಾಖಲೆ ಕ್ರಿಸ್ ಗೇಲ್ (423 ಇನ್ನಿಂಗ್ಸ್) ಹೆಸರಿನಲ್ಲಿತ್ತು.
  4. ಐಪಿಎಲ್ ಪಂದ್ಯಗಳ ದಾಖಲೆ: ಇದು ವಿರಾಟ್ ಕೊಹ್ಲಿ ಆಡಿದ 279ನೇ ಐಪಿಎಲ್ ಪಂದ್ಯವಾಗಿದ್ದು, ಎಂ.ಎಸ್. ಧೋನಿ ಮತ್ತು ರೋಹಿತ್ ಶರ್ಮಾ (ತಲಾ 278 ಪಂದ್ಯ) ಅವರ ದಾಖಲೆಯನ್ನು ಮೀರಿ ಅತಿ ಹೆಚ್ಚು ಐಪಿಎಲ್ ಪಂದ್ಯ ಆಡಿದ ಆಟಗಾರ ಎನಿಸಿಕೊಂಡಿದ್ದಾರೆ.
  5. 400+ ರನ್ಸ್​: ಐಪಿಎಲ್ ಇತಿಹಾಸದಲ್ಲಿ ಬರೋಬ್ಬರಿ 12 ಸೀಸನ್‌ಗಳಲ್ಲಿ 400ಕ್ಕೂ ಹೆಚ್ಚು ರನ್ ಗಳಿಸಿದ ಏಕೈಕ ಬ್ಯಾಟರ್ ಎಂಬ ದಾಖಲೆಯನ್ನು ಕೂಡ ಕಿಂಗ್ ಕೊಹ್ಲಿ ಬರೆದಿದ್ದಾರೆ.
  6. ಪಂದ್ಯ ಶ್ರೇಷ್ಠ ದಾಖಲೆ: ಐಪಿಎಲ್‌ನಲ್ಲಿ ತಮ್ಮ 21ನೇ ಪಂದ್ಯ ಶ್ರೇಷ್ಠ (POTM) ಪ್ರಶಸ್ತಿ ಗೆಲ್ಲುವ ಮೂಲಕ ರೋಹಿತ್ ಶರ್ಮಾ ಅವರ ದಾಖಲೆಯನ್ನು ವಿರಾಟ್ ಕೊಹ್ಲಿ ಸರಿಗಟ್ಟಿದ್ದಾರೆ.
  7. ಚೇಸ್ ಮಾಸ್ಟರ್: ಐಪಿಎಲ್​ನ ಸೆಕೆಂಡ್ ಇನಿಂಗ್ಸ್​ನಲ್ಲಿ ವಿರಾಟ್ ಕೊಹ್ಲಿ ಸಿಡಿಸಿದ 3ನೇ ಶತಕ ಇದಾಗಿದ್ದು, ಈ ಮೂಲಕ ಜೋಸ್ ಬಟ್ಲರ್ ಅವರ ದಾಖಲೆಯನ್ನು ಸಮಗಟ್ಟಿದ್ದಾರೆ.
  8. 10 ಟಿ20 ಶತಕ: ಒಟ್ಟಾರೆ ಟಿ20 ಮಾದರಿಯಲ್ಲಿ ಇದು ವಿರಾಟ್ ಕೊಹ್ಲಿಯ 10 ಸೆಂಚುರಿ. ಈ ಮೂಲಕ ಟಿ20 ಕ್ರಿಕೆಟ್ ಇತಿಹಾಸದಲ್ಲಿ ಎರಡಂಕಿ ಸೆಂಚುರಿ ಸಿಡಿಸಿದ ಏಕೈಕ ಭಾರತೀಯ ಬ್ಯಾಟರ್ ಎನಿಸಿಕೊಂಡಿದ್ದಾರೆ.
  9.  ಅತಿ ಹೆಚ್ಚು 50+ ಸ್ಕೋರ್: ಕೊಲ್ಕತ್ತಾ ನೈಟ್ ರೈಡರ್ಸ್​ ತಂಡದ ವಿರುದ್ಧ ಐಪಿಎಲ್‌ನಲ್ಲಿ 9ನೇ ಬಾರಿಗೆ 50ಕ್ಕೂ ಹೆಚ್ಚು ರನ್ ಗಳಿಸಿ ರೋಹಿತ್ ಶರ್ಮಾ ಹಾಗೂ ಡೇವಿಡ್ ವಾರ್ನರ್ ಅವರ ದಾಖಲೆಯನ್ನು ಬ್ರೇಕ್ ಮಾಡಿದ್ದಾರೆ.
  10. ಗರಿಷ್ಠ ವೈಯಕ್ತಿಕ ಸ್ಕೋರ್: ಈ ಪಂದ್ಯದಲ್ಲಿ ಅಜೇಯ 105 ರನ್ ಬಾರಿಸಿ ರಾಯ್‌ಪುರದ ಮೈದಾನದಲ್ಲಿ ಟಿ20 ಪಂದ್ಯವೊಂದರಲ್ಲಿ ಗರಿಷ್ಠ ವೈಯುಕ್ತಿಕ ಸ್ಕೋರ್​ಗಳಿಸಿದ ಬ್ಯಾಟರ್ ಎಂಬ ದಾಖಲೆಯನ್ನು ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ.
  11. ಡಕ್ ಟು ಸೆಂಚುರಿ: ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ (0) ಔಟಾದ ಬೆನ್ನಲ್ಲೇ ಮುಂದಿನ ಪಂದ್ಯದಲ್ಲಿ ಶತಕ ಬಾರಿಸಿದ ಐಪಿಎಲ್‌ನ ಮೊದಲ ಬ್ಯಾಟರ್ ಎಂಬ ದಾಖಲೆಯನ್ನೂ ಕೂಡ ವಿರಾಟ್ ಕೊಹ್ಲಿ ಮುಡಿಗೇರಿಸಿಕೊಂಡಿದ್ದಾರೆ.

ಇದನ್ನೂ ಓದಿ: ಮೈದಾನದಲ್ಲಿ ದೇವದತ್ ಪಡಿಕ್ಕಲ್​ಗೆ ಸಿಕ್ಕಿದ ಚಿನ್ನದ ಸರ ಯಾರದ್ದು ಗೊತ್ತಾ?

ಒಟ್ಟಾರೆಯಾಗಿ ಹೇಳುವುದಾದರೆ, ಸತತ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿದ್ದರೂ, ಕಂ‌ಬ್ಯಾಕ್ ಮಾಡಿ ಒಂದೇ ಇನ್ನಿಂಗ್ಸ್‌ನಲ್ಲಿ ವಿಶ್ವದ ಘಟಾನುಘಟಿ ದಾಖಲೆಗಳನ್ನು ಧೂಳೀಪಟ ಮಾಡಿರುವುದು ‘ಕಿಂಗ್ ಕೊಹ್ಲಿ’ ಸಾಮರ್ಥ್ಯಕ್ಕೆ ಸಾಕ್ಷಿ. ಈ ಐತಿಹಾಸಿಕ ಶತಕ ಕ್ರಿಕೆಟ್ ಇತಿಹಾಸದಲ್ಲಿ ಸುವರ್ಣಾಕ್ಷರಗಳಲ್ಲಿ ಉಳಿಯುವುದರಲ್ಲಿ ಅನುಮಾನವಿಲ್ಲ.

Published On – 2:04 pm, Thu, 14 May 26

Source link

ವೇಣುಗೋಪಾಲ್​​ ಕೈತಪ್ಪಿದ ಕೇರಳ ಸಿಎಂ ಪಟ್ಟ: ಹೈಕಮಾಂಡ್​​ನಿಂದ ಸಿಕ್ಕಿದ್ಯಾ ಬಿಗ್​ ಆಫರ್​? – Kannada News | KC Venugopal Offered AICC President Post, Steps Back from Kerala CM Race

ತಿರುವನಂತಪುರಂ, ಮೇ 14: ಕೇರಳ ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಯಲ್ಲಿದ್ದ ಕೆ.ಸಿ. ವೇಣುಗೋಪಾಲ್‌ಗೆ ಒಂದು ವರ್ಷದ ಬಳಿಕ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ಅಧ್ಯಕ್ಷರಾಗುವ ಭರವಸೆಯನ್ನು ಹೈಕಮಾಂಡ್ ನೀಡಿದೆ. ಸದ್ಯ ಮಲ್ಲಿಕಾರ್ಜುನ ಖರ್ಗೆ ಅವರ ಅವಧಿ ಮುಗಿದ ನಂತರ ವೇಣುಗೋಪಾಲ್‌ಗೆ ಈ ಪಟ್ಟ ನೀಡಲು ಚಿಂತನೆ ನಡೆಸಲಾಗುತ್ತಿದೆ. ಈ ಭರವಸೆಯ ಹಿನ್ನೆಲೆಯಲ್ಲಿ ವೇಣುಗೋಪಾಲ್ ಕೇರಳ ಸಿಎಂ ಆಗುವುದರಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ. ಹೀಗಾಗಿ ವಿ.ಡಿ. ಸತೀಶನ್ ಅವರನ್ನು ಕೇರಳದ ಮುಖ್ಯಮಂತ್ರಿಯಾಗಿ ನೇಮಿಸಲು ಕಾಂಗ್ರೆಸ್ ಹೈಕಮಾಂಡ್ ನಿರ್ಧರಿಸಿದೆ. ಸತೀಶನ್ ಪರವಾಗಿ ವ್ಯಕ್ತವಾದ ಸಾರ್ವಜನಿಕ ಬೆಂಬಲ, ಸಾಮಾಜಿಕ ಜಾಲತಾಣಗಳಲ್ಲಿನ ಅಭಿಪ್ರಾಯಗಳು, ಕಾಂಗ್ರೆಸ್ ಮುಖಂಡರ ಸಲಹೆಗಳು ಹಾಗೂ ಮುಸ್ಲಿಂ ಲೀಗ್‌ನಿಂದಲೂ ಬಂದ ಬೆಂಬಲ ಈ ನಿರ್ಧಾರಕ್ಕೆ ಕಾರಣ ಎಂಬ ಮಾಹಿತಿ ಇದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಹೇಗೆ ಮಾತನಾಡಬೇಕು? ಅಣ್ಣಾವ್ರು ಹೇಳಿಕೊಟ್ಟ ಪಾಠ ನೆನಪಿಸಿಕೊಂಡ ನಟಿ ಅಂಬಿಕಾ – Kannada News | Actress Ambika talks about Dr Rajkumar’s advice about language to her

ಹಿರಿಯ ನಟಿ ಅಂಬಿಕಾ (Ambika) ಮೂಲತಃ ಕೇರಳದವರು ಆದರೆ ಕನ್ನಡದಲ್ಲಿ ಹಲವಾರು ನೆನಪುಳಿಯುವ ಸಿನಿಮಾಗಳಲ್ಲಿ ಅವರು ನಟಿಸಿದ್ದಾರೆ. ವಿಶೇಷವಾಗಿ ಡಾ ರಾಜ್​ಕುಮಾರ್ ಜೊತೆಗೆ ‘ಚಲಿಸುವ ಮೋಡಗಳು’, ‘ಎರಡು ನಕ್ಷತ್ರಗಳು’, ‘ಭಕ್ತ ಪ್ರಹಲ್ಲಾದ’, ‘ಅಪೂರ್ವ ಸಂಗಮ’ ಇನ್ನೂ ಕೆಲವು. ಅಂಬರೀಶ್, ವಿಷ್ಣುವರ್ಧನ್ ಜೊತೆಗೆ ಹಲವು ಸಿನಿಮಾಗಳಲ್ಲಿ ನಟಿಸಿರುವ ಅಂಬಿಕ. ಈಗಲೂ ಸಹ ಆಗೊಮ್ಮೆ ಈಗೊಮ್ಮೆ ಕನ್ನಡ ಸಿನಿಮಾಗಳಲ್ಲಿ ನಟಿಸುವುದುಂಟು. ಅಂಬಿಕ ಅವರು ಇತ್ತೀಚೆಗೆ ತಮಿಳು ಯೂಟ್ಯೂಬ್ ಚಾನೆಲ್ ಒಂದಕ್ಕೆ ನೀಡಿರುವ ಸಂದರ್ಶನದಲ್ಲಿ ಕನ್ನಡದ ಮೇರು ನಟ ಡಾ ರಾಜ್​ಕುಮಾರ್ ಅವರನ್ನು ಕೊಂಡಾಡಿದ್ದಾರೆ. ಅದರಲ್ಲೂ ವಿಶೇಷವಾಗಿ ರಾಜ್​ಕುಮಾರ್ ಅವರಿಗೆ ಭಾಷೆಯ ಮೇಲೆ ಇದ್ದ ಪ್ರೀತಿ, ಕಾಳಜಿ ಮತ್ತು ಹಿಡಿತ ಎಂಥಹದ್ದು ಎಂದು ವಿವರಿಸಿದ್ದಾರೆ.

‘ನಾನು ಆರಂಭದಲ್ಲಿ ತೆಲುಗು ಸಿನಿಮಾ ಮಾಡಿದಾಗ ನನಗೆ ಹಿಟ್ ಸಿಗಲಿಲ್ಲ. ಅದೇ ಸಮಯದಲ್ಲಿ ಕನ್ನಡದಲ್ಲಿ ನಟಿಸಿದ ಎರಡು ಸಿನಿಮಾಗಳು ಭಾರಿ ದೊಡ್ಡ ಹಿಟ್ ಆದವು. ರಾಜ್​ಕುಮಾರ್ ಅವರ ಜೊತೆಗೆ ನಟಿಸಿದ ‘ಚಲಿಸುವ ಮೋಡಗಳು’ ಭಾರಿ ದೊಡ್ಡ ಹಿಟ್. ಅವರೊಟ್ಟಿಗೆ ನಟಿಸುತ್ತಾ ನಾನು ಕನ್ನಡ ಕಲಿತೆ. ನಾನು ಕನ್ನಡ ಕಲಿಯುವಲ್ಲಿ 80% ಸಹಾಯ ಮಾಡಿದ್ದು ಡಾ ರಾಜ್​ಕುಮಾರ್ ಅವರೇ. ಅವರು ಸದಾ ಹೇಳುತ್ತಿದ್ದರು, ‘ಭಾಷೆಯನ್ನು ಯಾರು ಬೇಕಾದರೂ ಮಾತನಾಡಬಹುದು, ಆದರೆ ಆ ಭಾಷೆಯನ್ನು ಸುಂದರವಾಗಿ ಮಾತನಾಡುವುದು ಬಹಳ ಮುಖ್ಯ’ ಎಂದು ಅಣ್ಣಾವ್ರ ತಮಗೆ ಹೇಳಿದ್ದ ಮಾತುಗಳನ್ನು ಹೇಳಿದ್ದಾರೆ.

‘ನಾವು ಬಳಸುವ ಪದಗಳಲ್ಲಿ ಮರ್ಯಾದೆ, ಗೌರವದ ಜೊತೆಗೆ ಸುಂದರತೆಯೂ ಇರಬೇಕು ಹಾಗಿದ್ದಲ್ಲಿ ಮಾತ್ರವೇ ನಾವು ಭಾಷೆಗೆ ಗೌರವ ಕೊಟ್ಟಂತಾಗುತ್ತದೆ, ನಾವು ಸಂಭಾಷಿಸುತ್ತಿರುವ ವ್ಯಕ್ತಿಗೆ ಗೌರವ ನೀಡದಂತೆ ಆಗುತ್ತದೆ. ನಾವು ಆಡುವ ಭಾಷೆ ಸುಂದರವಾಗುತ್ತದೆ’ ಎಂದು ರಾಜ್​ಕುಮಾರ್ ತಮಗೆ ಹೇಳಿದ್ದಾಗಿ ಅಂಬಿಕ ಅವರು ಹೇಳಿದ್ದಾರೆ. ಇದನ್ನು ಉದಾಹರಣೆ ಸಹಿತ ವಿವರಿಸಿರುವ ಹಿರಿಯ ನಟಿ, ‘ಏನು?’ ಎಂದು ಕೇಳುವುದರ ಬದಲು ‘ಹೇಗಿದ್ದೀರಿ’ ಎಂದು ಕೇಳುವುದಕ್ಕೂ ಎಷ್ಟು ವ್ಯತ್ಯಾಸ ಇದೆ ಅಲ್ಲವೆ. ಅದನ್ನೇ ರಾಜ್​ಕುಮಾರ್ ಅವರು ನನಗೆ ಹೇಳಿಕೊಟ್ಟಿದ್ದು’ ಎಂದು ಖುಷಿಯಿಂದ ಮಾತನಾಡಿದ್ದಾರೆ ಅಂಬಿಕ.

ಇದನ್ನೂ ಓದಿ:‘ನಾ ನಿನ್ನ ಬಿಡಲಾರೆ’: ದುರ್ಗಾಗೆ ಗೊತ್ತಾಯ್ತು ಅಂಬಿಕಾ ತನ್ನ ಅಕ್ಕ ಅನ್ನೋ ಸತ್ಯ

‘ಆಡುವ ಮಾತುಗಳಲ್ಲಿ ಮರ್ಯಾದೆ ಇರಬೇಕು’ ಎಂದು ಅಂದು ಅಣ್ಣಾವ್ರು ನನಗೆ ಹೇಳಿದ್ದರು. ಅದನ್ನೇ ಈಗಲೂ ನಾನು ಪಾಲಿಸಿಕೊಂಡು ಬಂದಿದ್ದೀನಿ. ‘ಕೆಟ್ಟದಾಗಿ ಮಾತನಾಡುವುದು, ಏಕವಚನದಲ್ಲಿ ಮಾತನಾಡುವುದು, ಕೆಟ್ಟ ಪದಗಳನ್ನು ಮಾತಿನ ನಡುವೆ ಬಳಸುವುದು ಇದ್ಯಾವುದನ್ನೂ ನಾನು ಮಾಡುವುದಿಲ್ಲ. ಅದಕ್ಕೆ ರಾಜ್​ಕುಮಾರ್ ಅವರು ಹೇಳಿದ ಮಾತು ಕಾರಣ’ ಎಂದು ಅಂಬಿಕಾ ಅವರು ಹೇಳಿದ್ದಾರೆ.

ಡಾ ರಾಜ್​ಕುಮಾರ್ ಅವರಷ್ಟು ಅದ್ಭುತವಾಗಿ ಕನ್ನಡ ಮಾತನಾಡಿದ ಮತ್ತೊಬ್ಬ ನಟ ಕನ್ನಡ ಚಿತ್ರರಂಗದಲ್ಲಿ ಇಲ್ಲವೆಂದೇ ಹೇಳಬೇಕು. ಪದಗಳ ನಡುವಿನ ಏರಿಳಿತ, ಹೃಸ್ವಸ್ವರ, ದೀರ್ಘಸ್ವರಗ, ಅಲ್ಪ ಪ್ರಾಣ, ಮಹಾ ಪ್ರಾಣಗಳನ್ನು ಸಹ ರಾಜ್​ಕುಮಾರ್ ಅವರು ತಪ್ಪಿಸುತ್ತಿರಲಿಲ್ಲ. ಇದೆಲ್ಲದರ ಜೊತೆಗೆ ಅದ್ಭುತವಾದ ಸ್ವರದೊಂದಿಗೆ, ಏರಿಳಿತದೊಂದಿಗೆ ಅವರು ಮಾತನಾಡುತ್ತಿದ್ದರು, ಸಂಭಾಷಣೆ ಹೇಳುತ್ತಿದ್ದರು. ಇದುವೇ ಅವರನ್ನು ಕನ್ನಡದ ಕುಲಕಂಠೀರವನನ್ನಾಗಿ ಮಾಡಿದೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 1:40 pm, Thu, 14 May 26

Source link

Tv9 Kannada News Live: ವಿ.ಡಿ.ಸತೀಶನ್ ಕೇರಳಂ ಸಿಎಂ, ಕೆಸಿ ವೇಣುಗೋಪಾಲ್​​ಗೆ ಎಐಸಿಸಿ ಅಧ್ಯಕ್ಷ ಸ್ಥಾನ? ಗ್ರಾಹಕರಿಗೆ ಮತ್ತೊಂದು ಶಾಕ್ – Kannada News | Major News: Kerala CM Finalized, Rice and Oil Prices Soar; Global Diplomacy and UP Disaster

ಬೆಂಗಳೂರು, ಮೇ.14: ದೇಶದ ರಾಜಕಾರಣದಲ್ಲಿ ಭಾರೀ ಚರ್ಚೆಗೆ ಕಾರಣವಾಗಿದ್ದದ್ದು ಕೇರಳಂ ಸಿಎಂ ಆಯ್ಕೆ. ಹೈಕಮಾಂಡ್​​ ಕೂಡ ಇದೊಂದು ತಲೆ ನೋವಾಗಿತ್ತು. ಇದೀಗ ಸಿಎಂ ಆಯ್ಕೆ ಆಗಿದೆ. ಟ್ರಂಪ್​​ ಚೀನಾ ಭೇಟಿ ಬಗ್ಗೆ ಜಾಗತಿಕ ಮಟ್ಟದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಉತ್ತರ ಪ್ರದೇಶದಲ್ಲಿ ಬುಧವಾರ ಬೀಸಿದ ಭೀಕರ ಬಿರುಗಾಳಿ ಮತ್ತು ಮಳೆಗೆ ರಾಜ್ಯಾದ್ಯಂತ ಇದುವರೆಗೆ 74 ಜನರು ಬಲಿಯಾಗಿದ್ದಾರೆ. ಅಡುಗೆ ಎಣ್ಣೆಯ ಬೆಲೆ ಏರಿಕೆಯ ಬೆನ್ನಲ್ಲೇ ಇದೀಗ ಅಕ್ಕಿ ದರವೂ ಏರಿಕೆಯಾಗುತ್ತಿದ್ದು, ಜನಸಾಮಾನ್ಯರಿಗೆ ಎರಡೆರಡು ಶಾಕ್ ಎದುರಾಗಿದೆ. ರಫ್ತು ಹೆಚ್ಚಳ ಹಾಗೂ ಕಚ್ಚಾ ವಸ್ತುಗಳ ಕೊರತೆಯಿಂದಾಗಿ ಬೆಂಗಳೂರಿನಲ್ಲಿ ಅಕ್ಕಿ ಬೆಲೆ ಪ್ರತಿ ಕೆಜಿಗೆ 10 ರೂಪಾಯಿವರೆಗೆ ಏರಿಕೆಯಾಗುವ ಸಾಧ್ಯತೆಯಿದೆ.

ಕೇರಳಂ ಸಿಎಂ ಆಯ್ಕೆ:

ಕೇರಳ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಬಹುಮತ ಗಳಿಸಿದ ಹತ್ತು ದಿನಗಳ ನಂತರ, ಕಾಂಗ್ರೆಸ್ ಹೈಕಮಾಂಡ್ ಕೊನೆಗೂ ಮುಖ್ಯಮಂತ್ರಿ ಅಭ್ಯರ್ಥಿಯ ಗೊಂದಲಕ್ಕೆ ತೆರೆ ಎಳೆದಿದೆ. ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಹಿರಿಯ ನಾಯಕ ವಿ.ಡಿ.ಸತೀಶನ್ (V.D. Satheesan) ಅವರನ್ನು ಎಐಸಿಸಿ ಇಂದು (ಮೇ 14) ಅಧಿಕೃತವಾಗಿ ಪ್ರಕಟಿಸಿದೆ. ಇನ್ನು ಸಿಎಂ ಸ್ಥಾನಕ್ಕೆ ಭಾರೀ ಪೈಪೋಟಿಗಳು ನಡೆದಿತ್ತು. ವೇಣುಗೋಪಾಲ್​​​ ಕೂಡ ಈ ಮುಂಚೂಣಿಯಲ್ಲಿ ಇದ್ದರು. ಇದೀಗ ಅವರಿಗೆ ಎಐಸಿಸಿ ಅಧ್ಯಕ್ಷ ಸ್ಥಾನ ನೀಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.

ಅಡುಗೆ ಎಣ್ಣೆ ಬೆನ್ನಲ್ಲೇ ಈಗ ಅಕ್ಕಿ ದರವೂ ಏರಿಕೆ:

ಜೀವನಾವಶ್ಯಕ ವಸ್ತುಗಳ ಬೆಲೆ ಏರಿಕೆಯು ಸಾರ್ವಜನಿಕರ ಬಜೆಟ್‌ ಅನ್ನು ಅಸ್ತವ್ಯಸ್ತಗೊಳಿಸುತ್ತಿದೆ. ಇತ್ತೀಚೆಗಷ್ಟೇ ಅಡುಗೆ ಎಣ್ಣೆಯ ಬೆಲೆ ಗಗನಕ್ಕೇರಿತ್ತು, ಇದರ ಬೆನ್ನಲ್ಲೇ ಈಗ ದೈನಂದಿನ ಆಹಾರವಾದ ಅಕ್ಕಿಯ ಬೆಲೆಯೂ ಏರಿಕೆಯ ಹಾದಿಯಲ್ಲಿದೆ. ಬೆಂಗಳೂರಿನ ಮಾರುಕಟ್ಟೆಯಲ್ಲಿ ಅಕ್ಕಿ ಬೆಲೆ ಪ್ರತಿ ಕೆಜಿಗೆ 5 ರಿಂದ 10 ರೂಪಾಯಿವರೆಗೆ ಏರಿಕೆಯಾಗುವ ಲಕ್ಷಣಗಳು ಕಾಣುತ್ತಿವೆ.

ಇದನ್ನೂ ಓದಿ: ಕೊನೆಗೂ ಕೇರಳದ ಸಿಎಂ ಹೆಸರು ಘೋಷಿಸಿದ AICC: ವಿ.ಡಿ.ಸತೀಶನ್​ ದೇವರನಾಡಿನ ನೂತನ ಮುಖ್ಯಮಂತ್ರಿ

ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಕರೆ!

ಜಗತ್ತಿನ ಎರಡು ಬಲಿಷ್ಠ ರಾಷ್ಟ್ರಗಳಾದ ಅಮೆರಿಕ ಮತ್ತು ಚೀನಾ ಪರಸ್ಪರ ಪ್ರತಿಸ್ಪರ್ಧಿಗಳಾಗುವ ಬದಲು ಪಾಲುದಾರರಾಗಬೇಕು ಎಂದು ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್ ಪ್ರತಿಪಾದಿಸಿದ್ದಾರೆ. ಬೀಜಿಂಗ್‌ನಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗೆ ನಡೆಸಿದ ದ್ವಿಪಕ್ಷೀಯ ಸಭೆಯಲ್ಲಿ ಅವರು ಈ ಮಹತ್ವದ ಸಂದೇಶ ನೀಡಿದ್ದಾರೆ.

ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಪೆದ್ದಿ’ ಚಿತ್ರವನ್ನು ವಿದೇಶದಲ್ಲಿ ಹಂಚಿಕೆ ಮಾಡಲಿದೆ ಕನ್ನಡದ ನಿರ್ಮಾಣ ಸಂಸ್ಥೆ – Kannada News | Hombale Films Global Expansion: Distributes Ram Charan’s ‘Peddi’ Overseas

ಕನ್ನಡ ಚಿತ್ರರಂಗದ ಕೀರ್ತಿಪತಾಕೆಯನ್ನು ವಿಶ್ವದಾದ್ಯಂತ ಹಾರಿಸಿದ ಖ್ಯಾತಿ ಹೊಂಬಾಳೆ ಫಿಲ್ಮ್ಸ್ ಸಂಸ್ಥೆಗೆ ಇದೆ. ಈ ನಿರ್ಮಾಣ ಸಂಸ್ಥೆ ಇತ್ತೀಚೆಗೆ ಮಹತ್ವದ ಮೈಲಿಗಲ್ಲು ಸ್ಥಾಪಿಸಲು ಸಜ್ಜಾಗಿರೋ ವಿಷಯ ರಿವೀಲ್ ಆಗಿತ್ತು. ವಿದೇಶದಲ್ಲಿ ಸಿನಿಮಾ ಹಂಚಿಕೆ ಮಾಡಲು ಹೊಂಬಾಳೆ ಮುಂದಾಗಿತ್ತು. ಈಗ ರಾಮ್ ಚರಣ್ ನಟನೆಯ’ಪೆದ್ದಿ’ ಚಿತ್ರವನ್ನು ಹೊಂಬಾಳೆ ವಿದೇಶದಲ್ಲಿ ಹಂಚಿಕೆ ಮಾಡುತ್ತಿದೆ. ವಿದೇಶಿ ನೆಲದಲ್ಲಿ ಈ ಸಂಸ್ಥೆಯ ಮೊದಲ ಡಿಸ್ಟ್ರಿಬ್ಯೂಷನ್ ಇದಾಗಿದೆ.

ವಿಜಯ್ ಕಿರಗಂದೂರು ಅವರ ಹೊಂಬಾಳೆ ಫಿಲ್ಮ್ಸ್ ಕನ್ನಡ ಚಿತ್ರರಂಗವನ್ನು ಮತ್ತೊಂದು ಹಂತಕ್ಕೆ ಕರೆದುಕೊಂಡು ಹೋದ ಸಂಸ್ಥೆ.‘ಕೆಜಿಎಫ್’ ಹಾಗೂ ‘ಕಾಂತಾರ’ ಫ್ರಾಂಚೈಸಿ ಮೂಲಕ ಸಿನಿಮಾ ಮಾಡಿ ಸ್ಯಾಂಡಲ್​​ವುಡ್ ತಾಕತ್ತನ್ನು ಜಗತ್ತಿಗೆ ತೋರಿಸಿಕೊಟ್ಟಿತು. ಕರಾವಳಿಯ ಮಣ್ಣಿನ ಸೊಗಡಿನ ಕತೆಯನ್ನು ಜಾಗತಿಕ ಮಟ್ಟದಲ್ಲಿ ಸದ್ದು ಮಾಡುವಂತೆ ಮಾಡಿತು. ಈಗ ‘ಪೆದ್ದಿ’ ಸಿನಿಮಾ ಮೂಲಕ ಮತ್ತೊಂದು ಹೊಸ ಅಧ್ಯಾಯ ಬರೆಯಲು ಅಣಿಯಾಗಿದೆ.

ರಾಮ್ ಚರಣ್ ನಟನೆಯ, ಬುಚ್ಚಿ ಬಾಬು ಸಾನಾ ನಿರ್ದೇಶನದ ‘ಪೆದ್ದಿ’ ಚಿತ್ರದ ಓವರ್‌ಸೀಸ್ ಹಂಚಿಕೆಯ ಜವಾಬ್ದಾರಿಯನ್ನು ಹೊಂಬಾಳೆ ಹೊತ್ತುಕೊಂಡಿದೆ. ಇದನ್ನು ಈ ಸಂಸ್ಥೆ ಹೇಗೆ ನಿಭಾಯಿಸುತ್ತದೆ ಎಂಬ ಕುತೂಹಲ ಮೂಡಿದೆ. ಆಸ್ಕರ್ ವಿಜೇತ ಎ.ಆರ್. ರೆಹಮಾನ್ ಅವರ ಸಂಗೀತ ಈ ಚಿತ್ರಕ್ಕಿರುವುದು ವಿಶೇಷ.

ಇದನ್ನೂ ಓದಿ: ಜೂ.4ಕ್ಕೆ ‘ಪೆದ್ದಿ’ ರಿಲೀಸ್; ‘ಟಾಕ್ಸಿಕ್’ ಬಿಟ್ಟುಕೊಟ್ಟ ದಿನಾಂಕದಲ್ಲಿ ರಾಮ್ ಚರಣ್ ಸಿನಿಮಾ ತೆರೆಗೆ

ರಾಮ್ ಚರಣ್ ಅವರ ಮಾಸ್ ಲುಕ್ ಮತ್ತು ಬುಚ್ಚಿ ಬಾಬು ಅವರ ರಾ ಆ್ಯಕ್ಷನ್ ಕಥೆಯ ಮೇಲಿರುವ ನಿರೀಕ್ಷೆಗಳು ಹೆಚ್ಚಿಸಿದೆ. ಕನ್ನಡದ ಶಿವರಾಜ್​​ಕುಮಾರ್ ಪಾತ್ರ ಕೂಡ ಗಮನ ಸೆಳೆಯುವ ನಿರೀಕ್ಷೆ ಇದೆ. ‘ಪೆದ್ದಿ’ ಸಿನಿಮಾ ಜೂನ್ 4ರಂದು ವಿಶ್ವದಾದ್ಯಂತ ತೆರೆಕಾಣಲಿದೆ. ಹೊಂಬಾಳೆ ಫಿಲ್ಮ್ಸ್ ವಿದೇಶಗಳಲ್ಲಿ ಈ ಚಿತ್ರವನ್ನು ಅತ್ಯಂತ ದೊಡ್ಡ ಮಟ್ಟದಲ್ಲಿ ರಿಲೀಸ್ ಮಾಡಲು ಪ್ಲಾನ್ ಮಾಡಿದೆ. ಈ ಹಂಚಿಕೆ ಯಶಸ್ಸು ಕಂಡರೆ ನಿರ್ಮಾಣ ಸಂಸ್ಥೆಯನ್ನು ಹುಡುಕಿಕೊಂಡು ಮತ್ತಷ್ಟು ಬಿಗ್ ಬಜೆಟ್ ಸಿನಿಮಾಗಳು ಬರಲಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮೈದಾನದಲ್ಲಿ ದೇವದತ್ ಪಡಿಕ್ಕಲ್​ಗೆ ಸಿಕ್ಕಿದ ಚಿನ್ನದ ಸರ ಯಾರದ್ದು ಗೊತ್ತಾ? – Kannada News | Do You Know Whose Gold Chain Devdutt Padikkal Handed Over

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 57ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ (KKR) ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್​ಗಳಲ್ಲಿ 192 ರನ್ ಕಲೆಹಾಕಿತ್ತು. ಈ ಗುರಿಯನ್ನು ಬೆನ್ನತ್ತಲು ಕ್ರೀಸ್​ಗೆ ಆಗಮಿಸಿದ ದೇವದತ್ ಪಡಿಕ್ಕಲ್​ಗೆ ಮೈದಾನದಲ್ಲಿ ಚಿನ್ನದ ಸರ ಬಿದ್ದು ಸಿಕ್ಕಿತ್ತು.

ಬೌನ್ಸರ್​ಗೆ ತುಂಡಾದ ಚಿನ್ನದ ಸರ!

ಆರ್​ಸಿಬಿ ಇನಿಂಗ್ಸ್​ನ ನಾಲ್ಕನೇ ಓವರ್‌ನಲ್ಲಿ ಕೆಕೆಆರ್ ವೇಗಿ ಕಾರ್ತಿಕ್ ತ್ಯಾಗಿ ಎಸೆದ ತೀಕ್ಷ್ಣವಾದ ಬೌನ್ಸರ್ ಆರ್‌ಸಿಬಿ ಆರಂಭಿಕ ಆಟಗಾರ ಜೇಕಬ್ ಬೆಥೆಲ್ ಅವರ ಹೆಲ್ಮೆಟ್‌ಗೆ ಬಲವಾಗಿ ಬಡಿಯಿತು. ಚೆಂಡು ಗಾಳಿಯಲ್ಲಿ ಚಿಮ್ಮಿ ನೇರವಾಗಿ ಕಾರ್ತಿಕ್ ತ್ಯಾಗಿ ಕೈಸೇರಿತು.

ಈ ತೀವ್ರ ಪೆಟ್ಟಿನ ಭರಾಟೆಗೆ ಬೆಥೆಲ್ ಕುತ್ತಿಗೆಯಲ್ಲಿದ್ದ ದುಬಾರಿ ಚಿನ್ನದ ಸರ ತುಂಡಾಗಿ ಪಿಚ್ ಮೇಲೆಯೇ ಬಿದ್ದಿತ್ತು. ಆದರೆ ಔಟ್ ಆದ ಬೇಸರದಲ್ಲಿದ್ದ ಬೆಥೆಲ್, ತಮ್ಮ ಸರ ಕಳೆದುಹೋಗಿರುವುದನ್ನು ಗಮನಿಸದೇ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದ್ದರು.

ಬೆಥೆಲ್ ವಿಕೆಟ್ ಪತನದ ಬಳಿಕ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ದೇವದತ್ ಪಡಿಕ್ಕಲ್ ಕ್ರೀಸ್‌ಗೆ ಬಂದರು. ಗಾರ್ಡ್ ತಗೆದುಕೊಂಡು ಪಿಚ್ ಪರಿಶೀಲನೆ ನಡೆಸುತ್ತಿದ್ದಾಗ, ಅವರಿಗೆ ಪಿಚ್ ಮಧ್ಯದಲ್ಲಿ ಹೊಳೆಯುತ್ತಿದ್ದ ಚಿನ್ನದ ಸರ ಕಾಣಿಸಿದೆ.

ತಕ್ಷಣವೇ ಅದನ್ನು ಕೈಗೆತ್ತಿಕೊಂಡ ಪಡಿಕ್ಕಲ್, ಮೈದಾನದಲ್ಲಿದ್ದ ಆನ್-ಫೀಲ್ಡ್ ಅಂಪೈರ್‌ಗಳಿಗೆ ಸುರಕ್ಷಿತವಾಗಿ ಹಸ್ತಾಂತರಿಸಿದರು. ಆ ಮೂಲಕ ಆ ಸರವು ಮರಳಿ ಬೆಥೆಲ್ ಕೈಸೇರುವಂತೆ ಮಾಡಿದರು.

ಪಡಿಕ್ಕಲ್ ಅವರ ಈ ಪ್ರಾಮಾಣಿಕ ನಡೆಗೆ ಸಾಮಾಜಿಕ ಜಾಲತಾಣಗಳಲ್ಲಿ ಕ್ರೀಡಾಭಿಮಾನಿಗಳಿಂದ ಭಾರಿ ಶ್ಲಾಘನೆ ವ್ಯಕ್ತವಾಗುತ್ತಿದೆ.

ಗೆದ್ದು ಬೀಗಿದ ಆರ್​ಸಿಬಿ:

ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವು 20 ಓವರ್​ಗಳಲ್ಲಿ 192 ರನ್​ ಕಲೆಹಾಕಿದ್ದರು. ಈ ಕಠಿಣ ಗುರಿ ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ವಿರಾಟ್ ಕೊಹ್ಲಿ (105) ಅಜೇಯ ಶತಕ ಸಿಡಿಸಿದರು.

ಈ ಶತಕದ ನೆರವಿನೊಂದಿಗೆ ಆರ್​ಸಿಬಿ ತಂಡವು 19.1 ಓವರ್​ಗಳಲ್ಲಿ 194 ರನ್​ ಬಾರಿಸಿ 6 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

Source link