Category Archives: Blog

Your blog category

ಉತ್ತರ ಪ್ರದೇಶದಲ್ಲಿ ಗಾಳಿ ಮಳೆ ಅಬ್ಬರ: ಉನ್ನಾವ್​ನಲ್ಲಿ ವರುಣಾರ್ಭಟದ ರೌದ್ರ ನರ್ತನ ಹೇಗಿತ್ತು ನೋಡಿ! – Kannada News | Uttar Pradesh Rain Fury: many People Dead in Unnao as Severe Storm Lashes the Region

ಲಖನೌ, ಮೇ 14: ಉತ್ತರ ಪ್ರದೇಶದ ಉನ್ನಾವ್ ಜಿಲ್ಲೆಯಲ್ಲಿ ಬುಧವಾರ ಭಾರೀ ಬಿರುಗಾಳಿ ಮತ್ತು ಮಳೆ ಸುರಿದಿದ್ದು, ಪ್ರತ್ಯೇಕ ಘಟನೆಗಳಲ್ಲಿ ಏಳು ಜನರು ಸಾವನ್ನಪ್ಪಿದ್ದಾರೆ. ದಹಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾವಿನ ಮರ ಬಿದ್ದು 70 ವರ್ಷದ ರೈತರೊಬ್ಬರು ಸಾವನ್ನಪ್ಪಿದ್ದಾರೆ. ಅಸಿವಾನ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನೀಲಗಿರಿ ಮರ ಬಿದ್ದು ಒಂಬತ್ತು ವರ್ಷದ ಬಾಲಕ ಮೃತಪಟ್ಟಿದ್ದಾನೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದು, ಲಕ್ನೋ ಟ್ರಾಮಾ ಸೆಂಟರ್‌ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಒಟ್ಟಾರೆಯಾಗಿ ರಾಜ್ಯದಾದ್ಯಂತ ಮಳೆಗೆ 74 ಮಂದಿ ಮೃತಪಟ್ಟಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕ್ರಿಸ್​ ಗೇಲ್ ವಿಶ್ವ ದಾಖಲೆಯನ್ನೇ ಧೂಳೀಪಟ ಮಾಡಿದ ಕಿಂಗ್ ಕೊಹ್ಲಿ – Kannada News | IPL 2026: Virat Kohlii Breaks Chris Gayle’s Huge World Record

ವಿರಾಟ್ ಕೊಹ್ಲಿಯ ಬ್ಯಾಟ್​ನಿಂದ ಮತ್ತೊಂದು ಶತಕ ಮೂಡಿಬಂದಿದೆ. ಈ ಶತಕದೊಂದಿಗೆ ಕೊಹ್ಲಿ (Virat Kohli) ಮತ್ತೊಂದು ವಿಶ್ವ ದಾಖಲೆ ಬರೆದಿದ್ದಾರೆ. ಅದು ಕೂಡ ಕ್ರಿಸ್ ಗೇಲ್ ಟಿ20 ಕ್ರಿಕೆಟ್​ನಲ್ಲಿ ಬರೆದಿದ್ದ ಸಾರ್ವಕಾಲಿಕ ದಾಖಲೆಯನ್ನು ಮುರಿಯುವ ಮೂಲಕ ಎಂಬುದು ವಿಶೇಷ. (PC: IPL)

Source link

ಎದೆ ನೋವಿನ ಬಗ್ಗೆ ದಿಲೀಪ್​ ರಾಜ್​​ಗೆ ಮೊದಲೇ ಸಿಕ್ಕಿತ್ತು ಸೂಚನೆ? – Kannada News | Dileep Raj’s Sudden Demise: Abhinaya Reveals Shocking Health Update and Untimely Death

ನಟ ದಿಲೀಪ್ ರಾಜ್ ಅವರು ಮೇ 13ರಂದು ನಿಧನ ಹೊಂದಿದ್ದಾರೆ. ಅವರಿಗೆ ಹೃದಯಾಘಾತ ಸಂಭವಿಸಿತು. ಮುಂಜಾನೆಯೇ ಅವರು ತೀರಿ ಹೋದರು. ಹೃದಯಾಘಾತದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲು ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಈಗ ದಿಲೀಪ್ ರಾಜ್ ಸಾವಿನ ಬಗ್ಗೆ ಒಂದು ಪ್ರಮುಖ ಅಪ್​​ಡೇಟ್ ಸಿಕ್ಕಿದೆ. ಕಿರುತೆರೆ ನಟಿ ಅಭಿನಯ ಅವರು ಒಂದು ಶಾಕಿಂಗ್ ಹೇಳಿಕೆ ನೀಡಿದ್ದಾರೆ.

ದಿಲೀಪ್ ರಾಜ್ ನಟಿಸಿದ್ದ ‘ಹಿಟ್ಲರ್ ಕಲ್ಯಾಣ’ ಧಾರಾವಾಹಿ ಸಾಕಷ್ಟು ಜನಪ್ರಿಯತೆ ಪಡೆದಿತ್ತು. ದಿಲೀಪ್ ರಾಜ್ ಅವರೇ ಇದನ್ನು ನಿರ್ಮಿಸಿದ್ದರು. 2021ರ ಆಗಸ್ಟ್ 9ರಂದು ಆರಂಭ ಆಗಿ, 2024ರ ಮಾರ್ಚ್ 14ರಂದು ಧಾರಾವಾಹಿ ಕೊನೆಗೊಂಡಿತು. ಈ ಧಾರಾವಾಹಿಯಲ್ಲಿ ಅಭಿನಯ ಅವರು ನಟಿಸಿದ್ದರು. ಅವರು ಕೌಸಲ್ಯ ಹೆಸರಿನ ಪಾತ್ರ ಮಾಡಿದ್ದರು. ದಿಲೀಪ್ ಅಂತಿಮ ದರ್ಶನ ಪಡೆದು ಅಭಿನಯ ಮಾತನಾಡಿದರು.

‘ನನಗೆ ಹಿಟ್ಲರ್ ಕಲ್ಯಾಣದಲ್ಲಿ ಒಳ್ಳೆಯ ಪಾತ್ರ ನೀಡಿದ್ದ. ಆ ಬಳಿಕ ಬ್ರಹ್ಮಗಂಟು ಧಾರಾವಾಹಿಯಲ್ಲಿ ಅವಕಾಶ ಕೊಟ್ಟಿದ್ದ. ಸೆಟ್​​ಗೆ ಬರೋದೆ ಇಲ್ವಲ್ಲ ಎಂದರೆ ನೀವು ಚೆನ್ನಾಗಿ ಮಾಡಿಕೊಂಡು ಹೋಗ್ತೀರಾ ಬಿಡಿ ಎಂದು ಹೇಳುತ್ತಿದ್ದ. ನಟನೆಯನ್ನು ಹೊಗಳುತ್ತಿದ್ದ. ದೇವರು ಇಷ್ಟು ನಿಷ್ಠುರ ಆಗಬಾರದಿತ್ತು’ ಎಂದಿದ್ದಾರೆ ಅಭಿನಯ.

‘ವರ್ಕ್​ ಪ್ರೆಷರೋ ಏನೋ ಗೊತ್ತಿಲ್ಲ, ನೋವು ಎಂದು ಹೇಳುತ್ತಿದ್ದನಂತೆ. ಹೀಗಾಗಿ, ಬೆಳಿಗ್ಗೆ 8 ಗಂಟೆಗೆ ಫುಲ್ ಬಾಡಿ ಚೆಕಪ್ ಮಾಡಿಸಿಕೊಳ್ಳುವ ಆಲೋಚನೆಯೂ ಅವನಿಗೆ ಇತ್ತು. ಇದಕ್ಕಾಗಿ ವೈದ್ಯರ ಅಪಾಯಿಂಟ್​​ಮೆಂಟ್ ತೆಗೆದುಕೊಂಡಿದ್ದ. ಆದರೆ ಅವನೇ ಹೋಗಿಬಿಟ್ಟ’ ಎಂದು ಅಭಿನಯ ಹೇಳಿದ್ದಾರೆ.

ಇದನ್ನೂ ಓದಿ: ಮಗಳೊಟ್ಟಿಗೆ ಖುಷಿಯಿಂದ ಡ್ಯಾನ್ಸ್ ಮಾಡಿದ್ದರು ದಿಲೀಪ್ ರಾಜ್: ವಿಡಿಯೋ

ನಟ ದಿಲೀಪ್ ರಾಜ್ ಅವರ ನಿಧನದ ಸುದ್ದಿ ವರ ಅಭಿಮಾನಿಗಳಿಗೆ ಆಘಾತ ತಂದಿದೆ. ಅವರು ಹಿರಿತೆರೆ ಹಾಗೂ ಕಿರುತೆರೆ ಮೂಲಕ ಮನೆಮಾತಾಗಿದ್ದಾರೆ. ನಟನೆಯ ಜೊತೆಗೆ ಯಶಸ್ವಿ ನಿರ್ಮಾಪಕರಾಗಿಯೂ ಅವರು ಗುರುತಿಸಿಕೊಂಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಿಮ್ಮ ನಗರದ ಗಾಳಿ ಎಷ್ಟು ಶುದ್ಧವಾಗಿದೆ? ಬೆಂಗಳೂರಿನಲ್ಲಿ ಸಾಧಾರಣ ಮಾಲಿನ್ಯ; ಮಲೆನಾಡು, ಕರಾವಳಿಯಲ್ಲಿ ಶುದ್ಧ ಗಾಳಿ! – Kannada News | Air Quality Index in Karnataka: City wise Report and Pollution Levels

ಬೆಂಗಳೂರು, ಮೇ.14: ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ಕರ್ನಾಟಕದ ಪ್ರಮುಖ ನಗರಗಳಲ್ಲಿ ಇಂದು ವಾಯು ಗುಣಮಟ್ಟ ಸೂಚ್ಯಂಕವು (AQI) ಮಿಶ್ರ ಪ್ರತಿಕ್ರಿಯೆ ನೀಡಿದೆ. ಕೆಲವು ಕಡೆ ಗಾಳಿಯ ಗುಣಮಟ್ಟ ಉತ್ತಮವಾಗಿದ್ದರೆ, ಕೈಗಾರಿಕಾ ಪ್ರದೇಶಗಳಲ್ಲಿ ಮಾಲಿನ್ಯದ ಪ್ರಮಾಣ ತುಸು ಹೆಚ್ಚಾಗಿದೆ. ನಗರದ ಸರಾಸರಿ AQI 63 ದಾಖಲಾಗಿದ್ದು, ಇದು ‘ಸಾಧಾರಣ’ (Moderate) ವರ್ಗಕ್ಕೆ ಸೇರಿದೆ. ಸಿಲ್ಕ್ ಬೋರ್ಡ್ ಮತ್ತು ಬಿಟಿಎಂ ಲೇಔಟ್‌ನಂತಹ ಪ್ರದೇಶಗಳಲ್ಲಿ ವಾಹನ ದಟ್ಟಣೆಯಿಂದಾಗಿ ಮಾಲಿನ್ಯದ ಮಟ್ಟ 100ರ ಆಸುಪಾಸಿನಲ್ಲಿದೆ.

ಕರಾವಳಿ ತೀರದ ಗಾಳಿಯಿಂದಾಗಿ ಇಲ್ಲಿನ ವಾಯು ಗುಣಮಟ್ಟ ಅತ್ಯಂತ ‘ಉತ್ತಮ’ (Good) ಆಗಿದ್ದು, AQI 35 ರಷ್ಟಿದೆ. ಉತ್ತರ ಕರ್ನಾಟಕದ ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಧೂಳು ಮತ್ತು ನಿರ್ಮಾಣ ಕಾಮಗಾರಿಗಳಿಂದಾಗಿ ಗಾಳಿಯ ಗುಣಮಟ್ಟ ‘ಕಳಪೆ’ (Poor) ಹಂತಕ್ಕೆ ತಲುಪಿದ್ದು, AQI 150 ದಾಟುವ ಸಾಧ್ಯತೆಯಿದೆ. ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಗಾಳಿಯು ಶುದ್ಧವಾಗಿದ್ದು, AQI 42 ದಾಖಲಾಗಿದೆ.

ಬೆಂಗಳೂರಿನಂತಹ ನಗರಗಳಲ್ಲಿ ಉಸಿರಾಟದ ತೊಂದರೆ ಇರುವವರು ಮತ್ತು ಮಕ್ಕಳು ಹೊರಗಡೆ ಸಂಚರಿಸುವಾಗ ಮಾಸ್ಕ್ ಧರಿಸುವುದು ಸೂಕ್ತ.ಇನ್ನು ಕರ್ನಾಟಕದ ಕರಾವಳಿ ಮತ್ತು ಪಶ್ಚಿಮ ಘಟ್ಟದ ತಪ್ಪಲಿನ ಜಿಲ್ಲೆಗಳಲ್ಲಿ ಇಂದು ವಾಯು ಗುಣಮಟ್ಟವು ಅತ್ಯಂತ ಆರೋಗ್ಯಕರ ಮಟ್ಟದಲ್ಲಿದೆ. ಇತ್ತೀಚಿನ ದಿನಗಳಲ್ಲಿ ಈ ಭಾಗದಲ್ಲಿ ಸುರಿಯುತ್ತಿರುವ ಮಳೆಯು ವಾತಾವರಣದಲ್ಲಿನ ಧೂಳಿನ ಕಣಗಳನ್ನು ಕಡಿಮೆ ಮಾಡಿದ್ದು, ಜನರು ನಿರಾಳವಾಗಿ ಉಸಿರಾಡಲು ಪೂರಕವಾದ ವಾತಾವರಣವಿದೆ.

ಮಂಗಳೂರಿನಲ್ಲಿ ನಗರದಲ್ಲಿ ಗಾಳಿಯ ಗುಣಮಟ್ಟ ‘ಉತ್ತಮ’ (Good) ವರ್ಗದಲ್ಲಿದ್ದು, AQI 42 ದಾಖಲಾಗಿದೆ. ಸಮುದ್ರದ ತಂಗಾಳಿಯು ನಗರದ ಮಾಲಿನ್ಯವನ್ನು ತಡೆಗಟ್ಟಲು ಸಹಕಾರಿಯಾಗಿದೆ. ಉಡುಪಿಯಲ್ಲಿ ಇಲ್ಲಿನ ವಾಯು ಗುಣಮಟ್ಟವು ‘ಸಾಧಾರಣದಿಂದ ಉತ್ತಮ’ (Good to Moderate) ಸ್ಥಿತಿಯಲ್ಲಿದ್ದು, AQI 55 ರಷ್ಟಿದೆ. ಇಲ್ಲಿನ ವಾತಾವರಣವು ದೈನಂದಿನ ಚಟುವಟಿಕೆಗಳಿಗೆ ಪೂರಕವಾಗಿದೆ.ಮಲೆನಾಡಿನ ಹೃದಯಭಾಗವಾದ ಮಡಿಕೇರಿಯಲ್ಲಿ ಗಾಳಿಯು ಅತ್ಯಂತ ಶುದ್ಧವಾಗಿದೆ. ಇಲ್ಲಿ AQI 30 ರ ಆಸುಪಾಸಿನಲ್ಲಿದ್ದು, ರಾಜ್ಯದ ಅತ್ಯಂತ ಕಡಿಮೆ ಮಾಲಿನ್ಯವಿರುವ ಪ್ರದೇಶಗಳಲ್ಲಿ ಒಂದಾಗಿದೆ.

ಕಾಫಿ ನಾಡಿನಲ್ಲೂ ವಾಯು ಗುಣಮಟ್ಟ ‘ಉತ್ತಮ’ವಾಗಿದ್ದು (AQI 45), ಪ್ರವಾಸಿಗರಿಗೆ ಮತ್ತು ಸ್ಥಳೀಯರಿಗೆ ಹಿತಕರವಾದ ವಾತಾವರಣವಿದೆ. ಉತ್ತರ ಕರ್ನಾಟಕದ ಜಿಲ್ಲೆಗಳಲ್ಲಿ ಇಂದು ವಾಯು ಗುಣಮಟ್ಟವು ಬಹುತೇಕ ಕಡೆಗಳಲ್ಲಿ ಉತ್ತಮ ಹಾಗೂ ಸಾಧಾರಣ ಮಟ್ಟದಲ್ಲಿದೆ. ಬಿಸಿಲಿನ ತಾಪ ಹೆಚ್ಚಿದ್ದರೂ, ಗಾಳಿಯ ವೇಗವು ಮಾಲಿನ್ಯಕಾರಕಗಳನ್ನು ಚದುರಿಸಲು ಸಹಕಾರಿಯಾಗಿದೆ. ಹುಬ್ಬಳ್ಳಿ-ಧಾರವಾಡದಲ್ಲಿ ಅವಳಿ ನಗರಗಳಲ್ಲಿ ವಾಯು ಗುಣಮಟ್ಟ ಸೂಚ್ಯಂಕವು (AQI) 62 ರಿಂದ 81 ರ ಆಸುಪಾಸಿನಲ್ಲಿದೆ. ಇದು ‘ಸಾಧಾರಣ’ (Moderate) ವರ್ಗಕ್ಕೆ ಸೇರಿದ್ದು, ರಸ್ತೆ ಕಾಮಗಾರಿ ಹಾಗೂ ವಾಹನ ಸಂಚಾರದಿಂದ ಧೂಳಿನ ಪ್ರಮಾಣ ತುಸು ಹೆಚ್ಚಿದೆ.

ಇದನ್ನೂ ಓದಿ: ಇಂದಿನ ಹವಾಮಾನ ವರದಿ: ವರುಣನ ಆಗಮನಕ್ಕೆ ಸಜ್ಜಾದ ಬೆಂಗಳೂರು; ನಿಮ್ಮ ಜಿಲ್ಲೆಯ ಸ್ಥಿತಿ ಹೇಗಿದೆ ನೋಡಿ!

ಕುಂದಾನಗರಿ ಬೆಳಗಾವಿಯಲ್ಲಿ ಗಾಳಿಯು ಅತ್ಯಂತ ಶುದ್ಧವಾಗಿದ್ದು, AQI 26 ದಾಖಲಾಗಿದೆ. ಇದು ‘ಉತ್ತಮ’ (Good) ವರ್ಗವಾಗಿದ್ದು, ಹೊರಗಿನ ಚಟುವಟಿಕೆಗಳಿಗೆ ಪೂರಕವಾಗಿದೆ. ಕಲಬುರಗಿಯಲ್ಲಿ ವಾಯು ಗುಣಮಟ್ಟವು ‘ಉತ್ತಮ’ ಸ್ಥಿತಿಯಲ್ಲಿದ್ದು, AQI 50 ರಷ್ಟಿದೆ. ಬಿಸಿಲಿದ್ದರೂ ಮಾಲಿನ್ಯದ ಪ್ರಮಾಣ ಕಡಿಮೆ ಇದೆ. ಐತಿಹಾಸಿಕ ನಗರಿ ವಿಜಯಪುರದಲ್ಲಿ ಗಾಳಿಯು ಶುದ್ಧವಾಗಿದ್ದು, AQI 39 ರಿಂದ 67 (ತೃಪ್ತಿಕರ) ಮಟ್ಟದಲ್ಲಿದೆ.

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

ಉತ್ತಮ- 0-50

ಮಧ್ಯಮ – 50-100

ಕಳಪೆ – 100-150

ಅನಾರೋಗ್ಯಕರ – 150-200

ಗಂಭೀರ – 200 – 300

ಅಪಾಯಕಾರಿ – 300 -500+

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ನಿಮ್ಮ ಉಗುರಿನ ಆಕಾರದಲ್ಲಿದೆ ನಿಮ್ಮ ಭವಿಷ್ಯ! ಉಗುರುಗಳ ಮೂಲಕ ನಿಮ್ಮ ವ್ಯಕ್ತಿತ್ವ ಅರಿಯುವುದು ಹೇಗೆ? – Kannada News | The Ancient Art of Nail Reading: Decoding Personality and Future

ಬೆಂಗಳೂರು, ಮೇ.14: ನಮ್ಮ ವ್ಯಕ್ತಿತ್ವ ಮತ್ತು ಭವಿಷ್ಯವನ್ನು ತಿಳಿಯಲು ಹಲವು ಪ್ರಾಚೀನ ವಿಧಾನಗಳಿವೆ. ಜನ್ಮ ದಿನಾಂಕ, ಹಸ್ತ ಸಾಮುದ್ರಿಕ ಶಾಸ್ತ್ರದ ಜೊತೆಗೆ, ಉಗುರುಗಳನ್ನು ಗಮನಿಸುವುದರಿಂದಲೂ ಒಬ್ಬರ ಗುಣಸ್ವಭಾವಗಳನ್ನು ಅರಿಯಬಹುದು. ಉಗುರಿನ ಆಕಾರವು ನಮ್ಮ ದೇಹದ ವಾತ, ಪಿತ್ತ, ಕಫ ಗುಣಗಳೊಂದಿಗೆ ಸಂಬಂಧವನ್ನು ಹೊಂದಿದೆ ಎಂದು ಹೇಳಲಾಗುತ್ತದೆ. ಉಗುರುಗಳ ಆಕಾರವನ್ನು ಆಧರಿಸಿ ವ್ಯಕ್ತಿತ್ವವನ್ನು ವಿಶ್ಲೇಷಿಸುವ ಈ ಪದ್ಧತಿಯು ನಮ್ಮ ಗುಣಗಳನ್ನು ಅರ್ಥಮಾಡಿಕೊಳ್ಳಲು ಮತ್ತು ಅಗತ್ಯವಿದ್ದಲ್ಲಿ ಸರಿಪಡಿಸಿಕೊಳ್ಳಲು ಸಹಾಯ ಮಾಡುತ್ತದೆ. ಮುಖ್ಯವಾಗಿ, ಉಗುರುಗಳಲ್ಲಿ ನಾಲ್ಕು ವಿಧಗಳಿವೆ: ಅಗಲವಾದ ಉಗುರು, ವೃತ್ತಾಕಾರದ ಉಗುರು, ಲಂಬವಾಗಿರುವ (ಉದ್ದವಾದ) ಉಗುರು ಮತ್ತು ಚೌಕಾಕಾರದ ಉಗುರು. ಪ್ರತಿಯೊಂದು ಆಕಾರವೂ ನಿರ್ದಿಷ್ಟ ಗುಣಲಕ್ಷಣಗಳನ್ನು ಮತ್ತು ರಾಶಿಚಕ್ರ ಚಿಹ್ನೆಗಳೊಂದಿಗೆ ಸಂಬಂಧವನ್ನು ಹೊಂದಿದೆ. ಉದಾಹರಣೆಗೆ, ಅಗಲವಾದ ಉಗುರುಗಳು ಸಾಮಾನ್ಯವಾಗಿ ದಿಟ್ಟತನ ಮತ್ತು ರಾಜಕೀಯ ಯೋಗವನ್ನು ಸೂಚಿಸಿದರೆ, ವೃತ್ತಾಕಾರದ ಉಗುರುಗಳು ತಾಳ್ಮೆ ಮತ್ತು ಧಾರ್ಮಿಕ ಚಿಂತನೆಯನ್ನು ಬಿಂಬಿಸುತ್ತವೆ. ಉದ್ದವಾದ ಉಗುರುಗಳು ಆಕರ್ಷಕ ವ್ಯಕ್ತಿತ್ವ ಮತ್ತು ಸಮಾಜದಲ್ಲಿ ಮನ್ನಣೆಯನ್ನು ಬಯಸುವವರಲ್ಲಿ ಕಂಡುಬಂದರೆ, ಚೌಕಾಕಾರದ ಉಗುರುಗಳು ರಹಸ್ಯಮಯ ಸ್ವಭಾವ ಮತ್ತು ಸ್ವತಂತ್ರ ಮನೋಭಾವವನ್ನು ಹೊಂದಿರುತ್ತವೆ. ಈ ಮೂಲಕ, ನಮ್ಮ ಉಗುರುಗಳ ಮೂಲಕ ನಮ್ಮನ್ನು ನಾವು ಉತ್ತಮವಾಗಿ ಅರಿಯಬಹುದು.

ಅಧ್ಯಾತ್ಮಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪ್ರಧಾನಿ ಮೋದಿ ಸಲಹೆ ಬೆನ್ನಲ್ಲೇ ಬೆಂಗಳೂರಿನ ಕೆಲ ಕಂಪನಿಗಳು ವರ್ಕ್ ಫ್ರಂ ಹೋಂ ನೀಡಲು ಪ್ಲ್ಯಾನ್! – Kannada News | PM Modi’s WFH Suggestion: Bengaluru IT Companies Plan Remote Work; Travels Association Opposes Move

ವರ್ಕ್ ಫ್ರಂ ಹೋಂ (ಸಾಂದರ್ಭಿಕ ಎಐ ಚಿತ್ರ)Image Credit source: MediaForge AI

ಬೆಂಗಳೂರು, ಮೇ 14: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇತ್ತೀಚೆಗೆ ನೀಡಿದ ಆರ್ಥಿಕ ಮಿತವ್ಯಯ ಮತ್ತು ಇಂಧನ ಉಳಿತಾಯದ ಸಲಹೆಗಳಿಗೆ ಐಟಿ ನಗರಿ ಬೆಂಗಳೂರಿನಲ್ಲಿ (Bengaluru) ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೋದಿಯವರ ವರ್ಕ್ ಫ್ರಂ ಹೋಂ ಮತ್ತು ವರ್ಚುವಲ್ ಮೀಟಿಂಗ್​​ಗಳ ಕರೆಗೆ ಪೂರಕವಾಗಿ ಬೆಂಗಳೂರಿನ ಕೆಲವು ಐಟಿ-ಬಿಟಿ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಲು ಗಂಭೀರ ಚಿಂತನೆ ನಡೆಸಿವೆ.

ಮುಖ್ಯಾಂಶಗಳು

  • ಪ್ರಧಾನಿ ಮೋದಿ ನೀಡಿದ ಮಿತವ್ಯಯದ ಸಲಹೆ ಬೆನ್ನಲ್ಲೇ ಬೆಂಗಳೂರಿನ ಐಟಿ ಕಂಪನಿಗಳಿಂದ ವರ್ಕ್ ಫ್ರಂ ಹೋಂ ನೀಡಲು ಚಿಂತನೆ.
  • ಮನೆಯಿಂದಲೇ ಕೆಲಸದ ಪ್ರಸ್ತಾವನೆಗೆ ರಾಜ್ಯ ಟ್ರಾವೆಲ್ಸ್ ಮಾಲೀಕರ ಅಸೋಸಿಯೇಷನ್ ತೀವ್ರ ಅಸಮಾಧಾನ ಮತ್ತು ವಿರೋಧ.
  • ಟ್ರಾವೆಲ್ಸ್ ಉದ್ಯಮದ ಸಂಕಷ್ಟದ ಬಗ್ಗೆ ಪ್ರಧಾನಿ ಮೋದಿಯವರಿಗೆ ಪತ್ರ ಬರೆದ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ.

ಐಟಿ ಕಂಪನಿಗಳ ಪ್ಲ್ಯಾನ್

ಜಾಗತಿಕ ಬಿಕ್ಕಟ್ಟು ಮತ್ತು ಇಂಧನ ಉಳಿತಾಯದ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರು ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಹತ್ವದ ಸಲಹೆ ನೀಡಿದ್ದರು. ಪೆಟ್ರೋಲ್-ಡೀಸೆಲ್ ಮಿತವಾಗಿ ಬಳಸಿ, ಮನೆಯಿಂದಲೇ ಕೆಲಸ ಮಾಡಿ ಮತ್ತು ಆನ್‌ಲೈನ್ ಮೂಲಕ ಸಭೆಗಳನ್ನು ನಡೆಸಿ ಎಂದು ಅವರು ಕರೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಕೆಲವು ಪ್ರಮುಖ ಐಟಿ-ಬಿಟಿ ಕಂಪನಿಗಳು ಈಗಾಗಲೇ ಒಂದು ಸುತ್ತಿನ ಮಾತುಕತೆ ನಡೆಸಿದ್ದು, ಈ ತಿಂಗಳು ಅಥವಾ ಮುಂದಿನ ತಿಂಗಳಿನಿಂದ ಉದ್ಯೋಗಿಗಳಿಗೆ ವರ್ಕ್ ಫ್ರಂ ಹೋಂ ಸೌಲಭ್ಯ ನೀಡಲು ನಿರ್ಧರಿಸಿವೆ ಎನ್ನಲಾಗಿದೆ.

ಟ್ರಾವೆಲ್ಸ್ ಮಾಲೀಕರ ಆಕ್ರೋಶ

ಆದರೆ, ಪ್ರಧಾನಿಯವರ ಈ ನಡೆಯನ್ನು ಕರ್ನಾಟಕ ರಾಜ್ಯ ಟ್ರಾವೆಲ್ಸ್ ಮಾಲೀಕರ ಸಂಘ ಬಲವಾಗಿ ಖಂಡಿಸಿದೆ. ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳ ಈ ಕುರಿತು ಪ್ರಧಾನಿಯವರಿಗೆ ಪತ್ರ ಬರೆದಿದ್ದು, ಅಂತರಾಷ್ಟ್ರೀಯ ಪ್ರಯಾಣ ಕಡಿತದ ನಿರ್ಧಾರವನ್ನು ಸ್ವಾಗತಿಸಿದರೂ, ವರ್ಕ್ ಫ್ರಂ ಹೋಂ ಮತ್ತು ವರ್ಚುವಲ್ ಸಭೆಗಳಿಂದ ಟ್ರಾವೆಲ್ಸ್ ಉದ್ಯಮ ನಶಿಸಿ ಹೋಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈಗಾಗಲೇ ಏರ್ ಲೈನ್ಸ್ ಉದ್ಯಮಕ್ಕೆ 5500 ಕೋಟಿ ರೂ. ನೆರವು ನೀಡಲಾಗಿದ್ದು, ಟ್ರಾವೆಲ್ಸ್ ಉದ್ಯಮಕ್ಕೆ ಯಾವುದೇ ನೆರವು ನೀಡಿಲ್ಲ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ಚಾಲಕರ ಅಳಲು

ದೇಶದಲ್ಲಿ ಸುಮಾರು 50 ಲಕ್ಷ ವಾಹನಗಳು ಉದ್ಯೋಗಿಗಳ ಸಾಗಾಟದಲ್ಲಿ ತೊಡಗಿಕೊಂಡಿವೆ. ಲಕ್ಷಾಂತರ ರೂಪಾಯಿ ಸಾಲ ಮಾಡಿ ವಾಹನಗಳನ್ನು ಖರೀದಿಸಿರುವ ಮಾಲೀಕರು ಮತ್ತು ಚಾಲಕರು ಈಗ ಆರ್ಥಿಕ ಸಂಕಷ್ಟ ಎದುರಿಸುವ ಭೀತಿಯಲ್ಲಿದ್ದಾರೆ. ಈ ಬಗ್ಗೆ ಮಾತನಾಡಿದ ಕ್ಯಾಬ್ ಚಾಲಕ ರಾಜು, ಐಟಿ ಕಂಪನಿಗಳನ್ನು ನಂಬಿ ಜೀವನ ಸಾಗಿಸುತ್ತಿರುವ ನಮ್ಮಂತಹವರಿಗೆ ವರ್ಕ್ ಫ್ರಂ ಹೋಂ ನಿರ್ಧಾರದಿಂದ ಬಹಳ ತೊಂದರೆಯಾಗುತ್ತದೆ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಒಟ್ಟಾರೆಯಾಗಿ, ಒಂದು ಕಡೆ ಇಂಧನ ಉಳಿತಾಯದ ಗುರಿ ಇದ್ದರೆ, ಇನ್ನೊಂದೆಡೆ ಸಾರಿಗೆ ಉದ್ಯಮದ ಭವಿಷ್ಯ ಆತಂಕದಲ್ಲಿದೆ.

ಇದನ್ನೂ ಓದಿ: ವರ್ಕ್ ಫ್ರಂ ಹೋಂ, ಆನ್​ಲೈನ್ ಕ್ಲಾಸ್, ಚಿನ್ನ ಬೇಡ, ಇಂಧನದ ಮಿತ ಬಳಕೆ; ಮತ್ತೊಮ್ಮೆ ಪ್ರಧಾನಿ ಮೋದಿ ಮನವಿ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಆಲಿಯಾ ಭಟ್​​​ಗೆ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಅವಮಾನ? ವೈರಲ್ ಆಯ್ತು ವಿಡಿಯೋ – Kannada News | Alia Bhatt’s Cannes Red Carpet: Unrecognized on International Stage

ಫ್ರಾನ್ಸ್​​ನ ರಿವೇರಿಯಾದಲ್ಲಿ ಕಾನ್ ಸಿನಿಮೋತ್ಸವ ಅದ್ದೂರಿಯಾಗಿ ನಡೆಯುತ್ತಿದೆ. ಈ ಫ್ಯಾಷನ್ ಹಬ್ಬಕ್ಕೆ ದೇಶ-ವಿದೇಶದ ಸೆಲೆಬ್ರಿಟಿಗಳು ಆಗಮಿಸುತ್ತಿದ್ದಾರೆ. ಈ ಉತ್ಸವದ ಎರಡನೇ ದಿನದಂದು ಆಲಿಯಾ ಭಟ್ ಅವರು ಗೌನ್ ಧರಿಸಿ ಮಿಂಚಿದರು. ಆದರೆ, ಅವರು ರೆಡ್ ಕಾರ್ಪೆಟ್ ಮೇಲೆ ನಡೆದು ಬರುವಾಗ ಸಂಭವಿಸಿದ ಒಂದು ಘಟನೆ ಚರ್ಚೆಗೆ ಕಾರಣ ಆಗಿದೆ. ಆಲಿಯಾ ಭಟ್ ಅವರನ್ನು ಯಾರೂ ಗುರುತಿಸಲೂ ಇಲ್ಲ ಎಂದು ಅನೇಕರು ಹೇಳುತ್ತಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ವಿಡಿಯೋದಲ್ಲಿ ಆಲಿಯಾ ಭಟ್ ಅವರು ಕ್ಯಾಮೆರಾಗಳಿಗೆ ಕೈ ಬೀಸುತ್ತಾ, ಫ್ಲೈಯಿಂಗ್ ಕಿಸ್ ನೀಡುತ್ತಾ ಫೋಸ್ ನೀಡುತ್ತಿದ್ದಾರೆ. ಆದರೆ ವಿಡಿಯೋದ ಮತ್ತೊಂದು ಬದಿಯಲ್ಲಿರುವ ಛಾಯಾಗ್ರಾಹಕರು ಆಲಿಯಾ ಅವರ ಪಕ್ಕದಲ್ಲಿ ಬರುತ್ತಿರುವ ಇತರ ಅಂತಾರಾಷ್ಟ್ರೀಯ ತಾರೆಯರ ಫೋಟೋ ತೆಗೆಯುವುದರಲ್ಲಿ ಬ್ಯುಸಿ ಆಗಿರೋದು ವಿಡಿಯೋದಲ್ಲಿ ಕಂಡುಬಂದಿದೆ. ಇದನ್ನು ಕಂಡು ನೆಟ್ಟಿಗರು ‘ಆಲಿಯಾ ಯಾರಿಗೆ ಕೈ ಬೀಸುತ್ತಿದ್ದಾರೆ? ಅಲ್ಲಿ ಯಾರೂ ಅವರನ್ನು ಗುರುತಿಸುತ್ತಿಲ್ಲ’ ಎಂದು ಕಾಮೆಂಟ್ ಮಾಡುತ್ತಿದ್ದಾರೆ.

‘ಕಾನ್ ಜಾಗತಿಕ ವೇದಿಕೆಯಾಗಿದ್ದು, ಇದು ಆಲಿಯಾ ಅವರ ಎರಡನೇ ಭೇಟಿ. ಆದರೂ ಅಲ್ಲಿನ ಛಾಯಾಗ್ರಾಹಕರಿಗೆ ಇವರು ಯಾರೆಂದೇ ತಿಳಿದಿಲ್ಲ. ಇದು ಭಾರತೀಯ ಸಿನಿಮಾ ರಂಗಕ್ಕೆ ಒಂದು ರೀತಿಯ ಮುಜುಗರ ತರುವ ವಿಷಯ’ ಎಂದು ಕೆಲವರು ಸೋಶಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಇದನ್ನೂ ಓದಿ: ಕಾನ್ ಫಿಲಂ ಫೆಸ್ಟ್​​ನಲ್ಲಿ ಮಿಂಚು ಹರಿಸಿದ ಆಲಿಯಾ ಭಟ್

ಮತ್ತೊಂದೆಡೆ ಆಲಿಯಾ ಅಭಿಮಾನಿಗಳು ಇದನ್ನು ವಿರೋಧಿಸಿದ್ದಾರೆ. ‘ರೆಡ್ ಕಾರ್ಪೆಟ್ ಎಂಬುದು ತುಂಬಾ ಗಜಿಬಿಜಿಯಿಂದ ಕೂಡಿರುತ್ತದೆ. ಒಂದು ಕಡೆಯ ಛಾಯಾಗ್ರಾಹಕರು ಬೇರೆ ಸೆಲೆಬ್ರಿಟಿಯನ್ನು ಕ್ಲಿಕ್ಕಿಸುತ್ತಿದ್ದರೆ, ಮತ್ತೊಂದು ಕಡೆಯವರು ಆಲಿಯಾ ಅವರ ಫೋಟೋವನ್ನು ಕ್ಲಿಕ್ಕಿಸುತ್ತಿದ್ದರು. ಇದನ್ನು ಯಾರೂ ಹೇಳುತ್ತಿಲ್ಲ’ ಎಂದು ಕೆಲವರು ಸಮರ್ಥಿಸಿಕೊಂಡಿದ್ದಾರೆ.

ಕಾನ್ ಸಿನಿಮೋತ್ಸವ ವಿಶ್ವದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಚಲನಚಿತ್ರೋತ್ಸವಗಳಲ್ಲಿ ಒಂದು. 1946 ರಿಂದ ಪ್ರತಿವರ್ಷ ಫ್ರಾನ್ಸ್‌ನ ಕೇನ್ಸ್‌ನಲ್ಲಿ ಇದನ್ನು ಆಯೋಜಿಸಲಾಗುತ್ತದೆ. ಇಲ್ಲಿ ಕೇವಲ ಗ್ಲಾಮರ್ ಪ್ರದರ್ಶನ ಮಾತ್ರವಲ್ಲದೆ, ವಿಶ್ವದ ಅತ್ಯುತ್ತಮ ಸಿನಿಮಾಗಳ ಪ್ರದರ್ಶನ ನಡೆಯುತ್ತದೆ. ಪ್ರಿಯಾಂಕಾ ಉಪೇಂದ್ರ ನಟನೆಯ ‘ಸೆಪ್ಟೆಂಬರ್ 21’ ಸೇರಿದಂತೆ ಹಲವು ಭಾರತೀಯ ಸಿನಿಮಾಗಳು ಇಲ್ಲಿ ಪ್ರದರ್ಶನಗೊಳ್ಳುತ್ತಿವೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 6:59 am, Thu, 14 May 26

Source link

ಗುರುವಾರ ಗುರುಗಳ ಆರಾಧನೆಗೆ ಪ್ರಶಸ್ತ ಕಾಲ; ಈ ರಾಶಿಗೆ ಶುಕ್ರನ ಪ್ರವೇಶ, ನಿಮ್ಮ ರಾಶಿಗಿದೆಯೇ ಶುಭಫಲ? – Kannada News | May 14, 2026: Detailed Zodiac Forecasts, Planetary Transits, and Auspicious Timings

ಬೆಂಗಳೂರು, ಮೇ . 14: ಈ ದಿನವು ಪರಾಭವ ನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ಕೃಷ್ಣಪಕ್ಷ ದ್ವಾದಶಿ, ರೇವತಿ ನಕ್ಷತ್ರ, ಪ್ರೀತಿ ಯೋಗ ಮತ್ತು ತೈತಿಲ ಕರಣಗಳನ್ನು ಒಳಗೊಂಡಿದೆ. ರಾಹುಕಾಲ 1:51 ರಿಂದ 3:25 ರವರೆಗೆ ಇರುತ್ತದೆ, ಆದರೆ 12:16 ರಿಂದ 1:50 ರವರೆಗೆ ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭ ಕಾಲಗಳು ಇರುತ್ತವೆ. ಗುರುವಾರದ ಮಹತ್ವವನ್ನು ಎತ್ತಿಹಿಡಿಯಲಾಗಿದ್ದು, ರಾಘವೇಂದ್ರ ಸ್ವಾಮಿಗಳು, ದಕ್ಷಿಣಾಮೂರ್ತಿ, ಹಯಗ್ರೀವ, ದತ್ತಾತ್ರೇಯ, ಶ್ರೀಧರ ಸ್ವಾಮಿಗಳು ಮತ್ತು ಸಾಯಿಬಾಬಾ ಸೇರಿದಂತೆ ಗುರುಗಳ ಆರಾಧನೆಗೆ ಈ ದಿನ ವಿಶೇಷವಾಗಿದೆ. ಇದು ಮುಕ್ತಿಗೆ ದಾರಿಯಾಗುತ್ತದೆ ಎಂದು ತಿಳಿಸಲಾಗಿದೆ. ಅಲ್ಲದೆ, ಇದು ಪ್ರದೋಷದ ದಿನವಾಗಿದ್ದು, ಸಂಧ್ಯಾಕಾಲದಲ್ಲಿ ಶಿವನ ವಿಶೇಷ ಪೂಜೆಗೆ ಪ್ರಾಮುಖ್ಯತೆ ನೀಡಲಾಗಿದೆ. ಶುಕ್ರ ಗ್ರಹವು ವೃಷಭ ರಾಶಿಯಿಂದ ಮಿಥುನ ರಾಶಿಗೆ ಪ್ರವೇಶಿಸುವುದು ಈ ದಿನದ ಪ್ರಮುಖ ಗ್ರಹಗಳ ಸಂಚಾರವಾಗಿದೆ. ಚಂದ್ರನು ಮೀನ ರಾಶಿಯ ರೇವತಿ ನಕ್ಷತ್ರದಲ್ಲಿ ಸಂಚರಿಸುತ್ತಾನೆ. ಈ ದಿನ ಜನ್ಮದಿನ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸುವವರಿಗೆ ಶುಭ ಹಾರೈಕೆಗಳನ್ನು ಸಲ್ಲಿಸಲಾಗಿದೆ. ಪ್ರತಿಯೊಂದು ರಾಶಿಯವರಿಗೂ ಆರ್ಥಿಕ ಸ್ಥಿತಿ, ವೃತ್ತಿ, ಆರೋಗ್ಯ ಮತ್ತು ಸಂಬಂಧಗಳ ಕುರಿತು ವಿವರವಾದ ಭವಿಷ್ಯವಾಣಿಗಳನ್ನು ನೀಡಲಾಗಿದ್ದು, ದಿನದ ಶುಭ-ಅಶುಭ ಫಲಗಳನ್ನು ವಿಶ್ಲೇಷಿಸಲಾಗಿದೆ ಎಂದು ಖ್ಯಾತ ಜ್ಯೋತಿಷಿ ಬಸರಾಜ್​​ ಗುರೂಜಿ ತಿಳಿಸಿದ್ದಾರೆ.

ಜ್ಯೋತಿಷ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇಂದಿನ ಹವಾಮಾನ ವರದಿ: ವರುಣನ ಆಗಮನಕ್ಕೆ ಸಜ್ಜಾದ ಬೆಂಗಳೂರು; ನಿಮ್ಮ ಜಿಲ್ಲೆಯ ಸ್ಥಿತಿ ಹೇಗಿದೆ ನೋಡಿ! – Kannada News | Bengaluru Rain and Karnataka Weather Update: Districts Brace for Rain, Heat and Humidity

ಬೆಂಗಳೂರು, ಮೇ.14 : ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಹವಾಮಾನದಲ್ಲಿ ಭಾರಿ ಏರುಪೇರಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕೆಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದ್ದರೆ, ಇನ್ನು ಕೆಲವು ಭಾಗಗಳಲ್ಲಿ ಬಿಸಿಲ ಧಗೆ ಮುಂದುವರಿಯಲಿದೆ ಎಂದು ಹೇಳಲಾಗಿದೆ. ಬೆಂಗಳೂರು, ಮೈಸೂರು, ಚಾಮರಾಜನಗರ ಮತ್ತು ಕೊಡಗು ಜಿಲ್ಲೆಗಳಲ್ಲಿ ಸಂಜೆ ಅಥವಾ ರಾತ್ರಿ ವೇಳೆಗೆ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ ವರದಿ ಹೇಳುತ್ತಿದೆ.

ಮಂಗಳೂರು ಮತ್ತು ಉಡುಪಿ ಭಾಗದಲ್ಲಿ ಆರ್ದ್ರತೆ (Humidity) ಹೆಚ್ಚಿರಲಿದ್ದು, ಸೆಖೆಯ ವಾತಾವರಣ ಇರಲಿದೆ. ಸಮುದ್ರ ತೀರದ ಭಾಗಗಳಲ್ಲಿ ಗಾಳಿಯ ವೇಗ ಹೆಚ್ಚಿರಬಹುದು. ಕಲಬುರಗಿ, ರಾಯಚೂರು ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ತಾಪಮಾನವು 38°C ನಿಂದ 40°C ವರೆಗೆ ದಾಖಲಾಗುವ ಸಾಧ್ಯತೆಯಿದೆ. ನಗರದಲ್ಲಿ ಮೋಡಕವಿದ ವಾತಾವರಣವಿರಲಿದ್ದು, ಗರಿಷ್ಠ ತಾಪಮಾನ 34°C ಮತ್ತು ಕನಿಷ್ಠ ತಾಪಮಾನ 22°C ಇರಲಿದೆ.

ಇನ್ನು ರಾಜ್ಯದ ಪಶ್ಚಿಮ ಘಟ್ಟದ ತಪ್ಪಲಿನ ಜಿಲ್ಲೆಗಳು ಹಾಗೂ ಕರಾವಳಿ ಭಾಗದಲ್ಲಿ ವರುಣನ ಆರ್ಭಟ ಆರಂಭವಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಬಿಸಿಲಿನ ಬೇಗೆಯಿಂದ ಕಂಗಾಲಾಗಿದ್ದ ಮಲೆನಾಡು ಭಾಗದ ಜನರಿಗೆ ಮಳೆಯ ಸಿಂಚನ ತಂಪೆರೆಯಲಿದೆ.ಕರಾವಳಿ ಜಿಲ್ಲೆಗಳಲ್ಲಿ ಇಂದು ಮೋಡಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆ ಗುಡುಗು ಸಹಿತ ಮಳೆಯಾಗುವ (POP 95%) ಸಾಧ್ಯತೆಯಿದೆ. ಆರ್ದ್ರತೆ ಹೆಚ್ಚಿರಲಿದ್ದು, ಸೆಖೆಯ ಅನುಭವವಾಗಲಿದೆ.

ಎಕ್ಸ್​​ ಪೋಸ್ಟ್​​ ಇಲ್ಲಿದೆ ನೋಡಿ:

ಮಡಿಕೇರಿ ಮತ್ತು ಕೊಡಗು ಪ್ರದೇಶದಲ್ಲಿ ಭಾರಿ ಮಳೆಯ ಮುನ್ಸೂಚನೆ ನೀಡಲಾಗಿದೆ. ಗಾಳಿಯ ವೇಗ ಗಂಟೆಗೆ 40-50 ಕಿ.ಮೀ ಇರಲಿದ್ದು, ಗುಡುಗು ಮಿಂಚಿನ ಸಾಧ್ಯತೆ ಹೆಚ್ಚಿದೆ. ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯಲ್ಲಿ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಕಾಫಿ ನಾಡಿನಲ್ಲಿ ತಂಪು ವಾತಾವರಣ ನೆಲೆಸಲಿದೆ. ಕರಾವಳಿಯಲ್ಲಿ ಗರಿಷ್ಠ 34°C ವರೆಗೆ ದಾಖಲಾದರೆ, ಮಲೆನಾಡು ಭಾಗದಲ್ಲಿ 28°C ರಿಂದ 31°C ವರೆಗೆ ಇರಲಿದೆ.

ಇದನ್ನೂ ಓದಿ: ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಮೂಢನಂಬಿಕೆ ಹೆಚ್ಚು, ಕಾರ್ಯದಲ್ಲಿ ನಿರುತ್ಸಾಹ

ಇನ್ನು ಹುಬ್ಬಳ್ಳಿ-ಧಾರವಾಡದಲ್ಲಿ ಇಡೀ ದಿನ ಬಿಸಿಲಿನ ವಾತಾವರಣವಿರಲಿದ್ದು, ಗರಿಷ್ಠ ತಾಪಮಾನ 36°C ದಾಖಲಾಗುವ ಸಾಧ್ಯತೆಯಿದೆ. ಸಂಜೆಯ ವೇಳೆಗೆ ಚದುರಿದ ಗುಡುಗು ಸಹಿತ ಮಳೆಯಾಗುವ (35% ಸಂಭವನೀಯತೆ) ಮುನ್ಸೂಚನೆ ಇದೆ. ಇಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಗರಿಷ್ಠ ತಾಪಮಾನ 35°C ಇರಲಿದ್ದು, ಹವಾಮಾನವು ಸ್ವಲ್ಪ ತಂಪಾಗಿರಲಿದೆ. ಗದಗ ಜಿಲ್ಲೆಯಲ್ಲೂ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಿದೆ (40%). ಗರಿಷ್ಠ ತಾಪಮಾನ 36°C ವರೆಗೆ ತಲುಪಲಿದ್ದು, ರಾತ್ರಿಯ ವೇಳೆಗೆ ಮಳೆಯ ಸಂಭವನೀಯತೆ 50% ಕ್ಕೆ ಏರಿಕೆಯಾಗಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 6:04 am, Thu, 14 May 26

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಗೆ ಮೂಢನಂಬಿಕೆ ಹೆಚ್ಚು, ಕಾರ್ಯದಲ್ಲಿ ನಿರುತ್ಸಾಹ – Kannada News | Horoscope May 14 Thursaday 2026; Dina Rashi Bhavishya Today, Checkout the details here

ಮೇಷ ರಾಶಿ:

ಯಾರದರು ಪ್ರೀತಿಯಿಂದ ಏನನ್ನೇ ಕೊಟ್ಟರೂ ಅದನ್ನು ಸ್ವೀಕರಿಸಿ.‌ ಅದರ ಬಗ್ಗೆ ಟೀಕೆಗಳನ್ನು ಮಾಡಿ ಭಾವನೆಗೆ ಹೊಡೆತ ಕೊಡುವುದು ಬೇಡ. ಉದ್ಯೋಗದಲ್ಲಿ ಬದಲಾವಣೆ ಯೋಗವಿದೆ. ಶೀತಲ ಸಮರದಿಂದ ವಿರಾಮ ಸಿಗಲಿದೆ. ಹಣಕಾಸಿನಲ್ಲಿ ಲಾಭದ ಸೂಚನೆಗಳಿವೆ. ದಾಂಪತ್ಯದಲ್ಲಿ ಪರಸ್ಪರ ಹೊಂದಾಣಿಕೆಯಾಗಲಿದೆ. ಹಿರಿಯರಿಂದ ಆಶೀರ್ವಾದವನ್ನು ಪಡೆಯಿರಿ. ಶರೀರದಲ್ಲಿ ಅಸಮತೋಲನವು ಇರಲಿದೆ.

ವೃಷಭ ರಾಶಿ:

ನಿಮಗೆ ಆತ್ಮವಿಶ್ವಾಸವು ನಿಮ್ಮ ಆಲೋಚನೆಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ. ಬುದ್ದಿಯ ಚಾತುರ್ಯದಿಂದ ಸಮಸ್ಯೆಗಳನ್ನು ಪರಿಹರಿಸಬಹುದು. ವ್ಯವಹಾರಗಳಲ್ಲಿ ಹೊಸ ಅವಕಾಶಗಳು ಸಿಗುತ್ತವೆ. ಹಣಕಾಸಿನಲ್ಲಿ ಸ್ವಲ್ಪ ಎಚ್ಚರತೆ ಅಗತ್ಯವಿದೆ. ಮನಸ್ಸು ಸ್ವಲ್ಪ ಗೊಂದಲದಲ್ಲಿದ್ದರೂ ನಿರ್ಧಾರ ತಾಳ್ಮೆಯಿಂದ ತೆಗೆದುಕೊಳ್ಳಿ. ದಾಂಪತ್ಯದಲ್ಲಿ ಮನಸ್ತಾಪವನ್ನು ಶಾಂತಗೊಳಿಸಿಕೊಳ್ಳುವುದು ಒಳ್ಳೆಯದು. ಸಂಗಾತಿಯ ಕಾರಣದಿಂದ ನಿಮಗೆ ಬೇಸರವಾಗುವುದು.

ಮಿಥುನ ರಾಶಿ:

ಇಂದು ನೀವು ಮತ್ತು ನಿಮ್ಮ ಸಂಗಾತಿ ಉತ್ತಮ ಸಮಯವನ್ನು ಹೊಂದುವಿರಿ. ವೃತ್ತಿಪರ ಜೀವನದಲ್ಲಿ ಪ್ರಗತಿಯ ಮಾರ್ಗ ತೆರೆಯಲಿದೆ. ಹಣಕಾಸಿನ ಲೆಕ್ಕಾಚಾರ ನಿಖರವಾಗಿರಲಿ. ಸಾಲವನ್ನು ಹಂತವಾಗಿ ತೀರಿಸಲು ಒಪ್ಪಿಗೆ ತೆಗೆದುಕೊಳ್ಳುವಿರಿ. ಸಜ್ಜನರೊಂದಿಗೆ ಮಾತುಕತೆ ನಿರ್ಣಯವನ್ನು ಬಲಪಡಿಸಬಹುದು. ನಿಮ್ಮ ಜೀವನ ಸಂಗಾತಿಯನ್ನು ಹುಡುಕಲು ಇಂದು ಅತ್ಯುತ್ತಮ ದಿನವಾಗಲಿದೆ. ಎಲ್ಲವೂ ಗೊತ್ತಿದ್ದರೂ ಏನೂ ಗೊತ್ತಿಲ್ಲದಂತೆ ಇರುವಿರಿ. ಸರ್ಕಾರಿ ಕೆಲಸವನ್ನು ಮಾಡಿಸಿಕೊಳ್ಳುವುದು ನಿಧಾನವಾಗಲಿದೆ.

ಕರ್ಕಾಟಕ ರಾಶಿ:

ನಿಮ್ಮ ಯಾತ್ರೆಯ ಯೋಜನೆಗಳು ಯಶಸ್ವಿಯಾಗಲಿವೆ. ಉದ್ಯೋಗದಲ್ಲಿ ನವೀನ ಅವಕಾಶಗಳು ಲಭ್ಯ. ಕಳೆದ ವಸ್ತುಗಳು ನಿಮ್ಮ ಕೈ ಸೇರಲಿದೆ. ಹಣಕಾಸಿನ ಬಗ್ಗೆ ನಿಯಂತ್ರಣವಹಿಸಿ. ಮನೆಯೊಳಗಿನ ಒತ್ತಡದ ಪರಿಸ್ಥಿತಿಗಳಲ್ಲಿ ಶಾಂತಿ ಕಾಪಾಡುವುದು ಮುಖ್ಯ. ಭೂಮಿಯ ಖರೀದಿಯನ್ನು ಏಕಮುಖವಾಗಿ ಮಾಡುವುದು ಬೇಡ. ಬರಬೇಕಾದ ಧನಾಗಮನದ ನಿರೀಕ್ಷೆಯಲ್ಲಿ ಇಂದು ಇರುವಿರಿ. ಭಾವುಕರಾಗುವ ಸಂದರ್ಭವು ಬರಬಹುದು. ನಿರಂತರ ಕಾರ್ಯದಿಂದ ವಿಶ್ರಾಂತಿಯನ್ನು ಪಡೆಯುವಿರಿ.

ಸಿಂಹ ರಾಶಿ:

ಆಪ್ತವಾದ ಬಾಂಧವ್ಯದಲ್ಲಿ ಮನಸ್ತಾಪ ಕಾಣಿಸಿಕೊಳ್ಳುವುದು. ನಿಮ್ಮ ಸಂಗಾತಿಯು ನಿಮ್ಮ ಕೆಲವು ಅಭ್ಯಾಸಗಳನ್ನು ಬದಲಾಯಿಸಲು ಪ್ರಯತ್ನಿಸುತ್ತಾರೆ. ನಿರ್ಧಾರಗಳಲ್ಲಿ ಸ್ಪಷ್ಟತೆಯಿರುವುದರಿಂದ ಮುನ್ನಡೆ ಸುಲಭವಾಗುತ್ತದೆ. ಕುಟುಂಬದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸುವಿರಿ. ಹಣಕಾಸಿನಲ್ಲಿ ನೆಮ್ಮದಿಯ ಚಲನವಿದೆ. ಅಮೇಧ್ಯವಾದ ಆಹಾರವನ್ನು ಸೇವಿಸುವ ಸಂದರ್ಭವು ಬರಬಹುದು. ರಕ್ಷಣೆಯ ಜವಾಬ್ದಾರಿ ಇದ್ದವರಿಗೆ ಒತ್ತಡವಿರುವುದು.

ಕನ್ಯಾ ರಾಶಿ:

ನಿಮಗೆ ಆರ್ಥಿಕತೆಯಲ್ಲಿ ಸ್ಪಷ್ಟತೆ ಅವಶ್ಯವಾಗಿ ಇರಬೇಕು. ಇಂದೇ ಆಲೋಚನೆ ಸ್ಥಿರವಾಗಿ ಇರದು. ಕಲಾತ್ಮಕ ಕ್ಷೇತ್ರದಲ್ಲಿ ಇರುವವರಿಗೆ ಅವಕಾಶಗಳು ಲಭಿಸಲಿವೆ. ಆರ್ಥಿಕವಾಗಿ ಮಿತವ್ಯಯವೂ ಲಾಭವೂ ಸಮಾಮವಾಗಿರುವುದು. ಸಾಮಾಜಿಕ ಕಾರ್ಯಗಳಲ್ಲಿ ಭಾಗವಹಿಸುವ ಮೂಲಕ ಹೆಸರು ಮಾಡಬಹುದು. ಜವಾಬ್ದಾರಿಗಳಲ್ಲಿ ಕಷ್ಟವಾಗಿದ್ದರೂ ಯಶಸ್ಸು ಖಚಿತ. ಸಹೋದ್ಯೋಗಿಗೆ ಸಹಾಯ ಮಾಡುವ ಸ್ಥಿತಿಯು ನಿಮಗೆ ಬರಬಹುದು.

ತುಲಾ ರಾಶಿ:

ನಿಮಗೆ ಆಶ್ಚರ್ಯಗಳಿಂದ ಕೂಡಿದ ಕೆಲವು ಸಂಗತಿಗಳು ಗೊತ್ತಾಗಬಹುದು. ಅನ್ಯರ ಸಂಧಾನಕ್ಕೆ ನಿಮ್ಮನ್ನು ಭೇಟಿ ಮಾಡಲು ಆಪ್ತರು ಬರಬಹುದು. ಕೆಲಸದ ಕ್ಷೇತ್ರದಲ್ಲಿ ನೀವಂದುಕೊಂಡಂತೆ ಆಗಲಿದೆ. ಪುಣ್ಯಸ್ಥಳದಿಂದ ಮನಸ್ಸು ಶಾಂತವಾಗಿರಲು ಧ್ಯಾನ ಸಹೋದ್ಯೋಗಿಗಳ ಸುಲಭವಾಗಬಹುದು. ಸಹಕಾರದಿಂದ ಕೆಲಸ ದೂರದ ಪ್ರಯಾಣದ ಯೋಗವಿದೆ. ಕೆಲವು ವ್ಯಕ್ತಿಗಳಿಂದ ನೀವು ದೂರವಿರಲು ಇಚ್ಛಿಸುವಿರಿ. ನಿಮ್ಮ ಅಸಹಕಾರದಿಂದ ಮಕ್ಕಳಿಗೆ ಬೇಸರವಾದೀತು. ಅಯಾಚಿತ ಭಾಗ್ಯದಿಂದ ಖುಷಿಯಾಗಲಿದೆ.

ವೃಶ್ಚಿಕ ರಾಶಿ:

ನಿಮಗೆ ಉದ್ಯೋಗಕ್ಕೆ ಬೇಕಾದ ಉಪಯುಕ್ತ ಮಾಹಿತಿಯನ್ನು ಪಡೆಯುವಿರಿ. ಈ ದಿನ ನೀವು ಎಂದಿನಂತೆ ಇರದೇ ಶಾಂತಿಯುತವಾಗಿ ನಡೆದುಕೊಳ್ಳುವಿರಿ. ಹಣಕಾಸಿನ ಲೆಕ್ಕಾಚಾರ ಸರಿಯಾಗಿ ನಿಭಾಯಿಸಬೇಕು. ಶತ್ರುಗಳಿಗೆ ನಿಮ್ಮ ಸಂದೇಶವನ್ನು ನೀಡುವಿರಿ. ಆಸ್ತಿ ಸಂಬಂಧಿತ ವಿಚಾರಗಳಲ್ಲಿ ಮುನ್ನೋಟವಿರಲಿ. ಅನಿರೀಕ್ಷತ ಅನಾರೋಗ್ಯದಿಂದ ಹಣವು ಖರ್ಚಾಗಬಹುದು. ನಿಮ್ಮ ಉದ್ವೇಗದ ಮನಸ್ಸನ್ನು ಇತರರಿಗೆ ತೋರಿಸುವಿರಿ.

ಧನು ರಾಶಿ:

ಭಾವುಕತೆಯಿಂದ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ. ಕುಟುಂಬದ ಬೆಂಬಲದಿಂದ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಬಹುದು. ವೃತ್ತಿಪರ ಜೀವನದಲ್ಲಿ ಗುರುತುಪಡಿಸುವ ಅವಕಾಶ ಸಿಗಲಿದೆ. ಮಾತನಾಡಲು ಯಾರಿಲ್ಲದೇ ನಿಮ್ಮ ಸ್ನೇಹಿತರೊಂದಿಗೆ ಸಮಯ ಕಳೆಯಿರಿ. ನಿಮ್ಮನ್ನು ಸಂತೋಷದಿಂದ ಇಟ್ಟುಕೊಳ್ಳಲು ಬೇಕಾದ ಮಾರ್ಗವನ್ನು ಕಂಡುಕೊಳ್ಳಿ. ನಿಮ್ಮ ಪೋಷಕರ ಸಲಹೆಯನ್ನು ಅನುಸರಿಸಿ, ಸಂಬಂಧವನ್ನು ಉತ್ತಮವಾಗಿಸಿಕೊಳ್ಳಿ.

ಮಕರ ರಾಶಿ:

ನಿಮ್ಮ ಸ್ವಲ್ಪ ಕೆಲಸದಿಂದ ನೀವು ಗಣನೀಯ ಪ್ರಮಾಣದ ಹಣ ಪಡೆಯಬಹುದು. ನೀವು ಯುವಕರ ಜೊತೆ ಸಮಯ ಕಳೆಯುವಿರಿ. ನಿಮ್ಮೊಳಗಿನ ಶತ್ರುಗಳಿಂದ ನಿಮ್ಮ ಕಾರ್ಯ ಕುಂಟುತ್ತ ಹೋಗುವುದು. ಸಂವಹನ ಶಕ್ತಿಯಿಂದ ಕಾರ್ಯಕ್ಷೇತ್ರದಲ್ಲಿ ಉತ್ಸಾಹದಿಂದ ಮುಂದುವರೆಯಲು ಅವಕಾಶ ಸಿಗುವುದು. ಉದ್ಯಮದಲ್ಲಿ ಹೊಸ ಪ್ರಯತ್ನಗಳು ಫಲ ನೀಡುವವು. ದಾಂಪತ್ಯದಲ್ಲಿ ಮನಸ್ತಾಪಗಳು ಎದ್ದು ಶಾಂತವಾಗುವುದು. ಉಚಿತವಾದುದನ್ನು ಮಾತ್ರ ಪಡೆಯಿರಿ. ನಿಮ್ಮ ಆರೋಗ್ಯವು ಇಂದು ಚೆನ್ನಾಗಿರಲಿದೆ.

ಕುಂಭ ರಾಶಿ:

ಇಂದು ಭೂಮಿಗೆ ಸಂಬಂಧಿಸಿದಂತೆ ಲಾಭ ಪಡೆಯುವಿರಿ. ಕುಟುಂಬದ ಸದಸ್ಯರೊಂದಿಗೆ ಅಲ್ಪವಿರಾಮ ತೆಗೆದು ಸಂತೋಷದ ಕ್ಷಣಗಳನ್ನು ಹಂಚಿಕೊಳ್ಳಿ. ಹೊಸ ಯೋಜನೆಗಳನ್ನು ಆರಂಭಿಸಲು ಉತ್ತಮ ದಿನ. ಉದ್ಯೋಗದಲ್ಲಿ ಶ್ಲಾಘನೆಗೆ ಪಾತ್ರರಾಗುವಿರಿ. ಮುಂಜಾಗ್ರತೆಯಿಂದ ಸೂಕ್ತ ನಿರ್ಧಾರಗಳನ್ನು ತೆಗೆದುಕೊಳ್ಳುವುದು ಇಂದಿನ ಅಗತ್ಯ. ಅಪರೂಪದ ಬಂಧುಗಳ ಸಮಾಗಮವಾಗಲಿದ್ದು, ಸಂತೋಷವಾಗಲಿದೆ. ದೇವಾಲಯಕ್ಕೆ ಹೋಗಿ ನೆಮ್ಮದಿಯನ್ನು ಪಡೆದುಕೊಳ್ಳುವಿರಿ.

ಮೀನ ರಾಶಿ:

ಯಾವುದೇ ಮಹತ್ವದ ಹಣಕಾಸಿನ ವಹಿವಾಟುಗಳಿಗೆ ಸಹಿ ಹಾಕುವ ಸಾಧ್ಯತೆ ಇದೆ. ನೀವು ಸಣ್ಣ ವಿಷಯಗಳ ಬಗ್ಗೆಯೂ ಗಾಢವಾಗಿ ಇಂದು ಚಿಂತಿಸುವಿರಿ. ಮನಸ್ಸಿನಲ್ಲಿ ಉತ್ಸಾಹವಿದ್ದು ಹೊಸ ಕಾರ್ಯಗಳಲ್ಲಿ ತೊಡಗಲು ಇಚ್ಛೆ ಮೂಡುತ್ತದೆ. ಉದ್ಯೋಗದಲ್ಲಿ ಪ್ರಗತಿಯ ಸುಳಿವುಗಳು ಸಿಗುತ್ತವೆ. ಹಣಕಾಸಿನ ವಿಷಯದಲ್ಲಿ ಹೆಚ್ಚು ಎಚ್ಚರಿಕೆ ವಹಿಸುವುದು ಒಳಿತು. ಸಂತೋಷಕ್ಕೆ ಅಡ್ಡಿಯಾಗುವ ಕಾರ್ಯವನ್ನು ಮಾಡಿಕೊಂಡು ಪಶ್ಚಾತ್ತಾಪ ಪಡುವಿರಿ. ಅಜಾಗರೂಕತೆಯಿಂದ ನಿಮ್ಮ ವಸ್ತುವು ಇನ್ನೊಬ್ಬರ ಪಾಲಾಗಬಹುದು.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಕೃತ್ತಿಕಾ, ವಾರ : ಗುರು, ಪಕ್ಷ : ಕೃಷ್ಣ, ತಿಥಿ : ತ್ರಯೋದಶೀ, ನಿತ್ಯನಕ್ಷತ್ರ : ರೇವತೀ, ಯೋಗ : ಪ್ರೀತಿ, ಕರಣ : ಗರಜ, ಸೂರ್ಯೋದಯ – 05 – 58 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 13:56 – 15:32, ಯಮಗಂಡ ಕಾಲ 05:59 – 07:34, ಗುಳಿಕ ಕಾಲ 09:10 – 10:45

-ಲೋಹಿತ ಹೆಬ್ಬಾರ್ – 8762924271 (what’s app only)

Source link