ಕುಟುಂಬ, ಸ್ನೇಹಿತರ ಆಕ್ರಂದನದ ನಡುವೆ ಮಣ್ಣು ಸೇರಿದ ದಿಲೀಪ್ ರಾಜ್ – Kannada News | Dileep Raj’s Final rituals done at Ramanagar
ಕನ್ನಡ ಚಿತ್ರರಂಗ (Sandalwood) ಮತ್ತು ಟಿವಿ ಲೋಕದ ಪ್ರತಿಭಾವಂತ ನಟ ದಿಲೀಪ್ ರಾಜ್ ಇಂದು (ಮೇ 13) ನಿಧನ ಹೊಂದಿದ್ದು, ಅವರ ಅಂತ್ಯಕ್ರಿಯೆಗಳು ಸಂಜೆ ವೇಳೆಗೆ ರಾಮನಗರದ ಬಳಿ ಇರುವ ಅವರ ಫಾರಂ ಹೌಸ್ನಲ್ಲಿ ನೆರವೇರಿದರು. ಅವರ ಕುಟುಂಬಸ್ಥರು, ಸ್ನೇಹಿತರು, ಅಭಿಮಾನಿಗಳ ಸಮ್ಮುಖದಲ್ಲಿ ಲಿಂಗಾಯತ ಸಂಪ್ರದಾಯದ ಪ್ರಕಾರ ಕ್ರಿಯೆಗಳನ್ನು ನೆರವೇರಿಸಿ, ಅವರನ್ನು ಅವರ ನೆಚ್ಚಿನ ಸ್ಥಳದಲ್ಲಿ ಸಮಾಧಿ ಮಾಡಲಾಯ್ತು. ದಿಲೀಪ್ ಅವರನ್ನು ಮಣ್ಣಿಗೆ ಕಳಿಸುವ ವೇಳೆ ಅವರ ಪತ್ನಿ ಶ್ರೀವಿದ್ಯಾ ಆಕ್ರಂದನ ಮುಗಿಲು ಮುಟ್ಟಿತ್ತು. ಹಲವು ಸಿನಿಮಾಗಳು,…