ರೈತರಿಗೆ ಒಳ್ಳೆ ಸುದ್ದಿ; 14 ಖಾರಿಫ್ ಬೆಳೆಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಿಸಲು ಮೋದಿ ಸಂಪುಟ ಒಪ್ಪಿಗೆ – Kannada News | Modi Cabinet approves Minimum Support Prices MSP hike for 14 Kharif crops
ನವದೆಹಲಿ, ಮೇ 13: ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ (Union Cabinet Meeting) ಇಂದು 4 ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ. 2026-27ರ ಮಾರುಕಟ್ಟೆ ಋತುವಿನಲ್ಲಿ 14 ಖಾರಿಫ್ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಗಳ ಗಣನೀಯ ಹೆಚ್ಚಳವನ್ನು ಕೇಂದ್ರ ಸಚಿವ ಸಂಪುಟ ಅನುಮೋದಿಸಿದೆ. ಇದರಿಂದಾಗಿ ಸೂರ್ಯಕಾಂತಿ ಬೀಜವು ಕ್ವಿಂಟಾಲ್‌ಗೆ 622 ರೂ. ಹೆಚ್ಚಳವನ್ನು ಕಂಡಿದ್ದು, ಅದರ ಒಟ್ಟು MSP ಕ್ವಿಂಟಾಲ್‌ಗೆ 8,343 ರೂ. ತಲುಪಿದೆ. ಖಾರಿಫ್ ಋತುವಿನಲ್ಲಿ ರೈತರಿಗೆ ಅಂದಾಜು 2 ಲಕ್ಷ 60 ಸಾವಿರ ಕೋಟಿ ರೂ….