ದುಬಾರಿ ಇಂಧನದ ಎಫೆಕ್ಟ್; ಕೆಲ ಅಂತಾರಾಷ್ಟ್ರೀಯ ಫ್ಲೈಟ್ಗಳನ್ನು ನಿಲ್ಲಿಸಿದ ಏರ್ ಇಂಡಿಯಾ – Kannada News | High Fuel Costs Force Air India to Suspend Key International Flights
ನವದೆಹಲಿ, ಮೇ 13: ವಿಮಾನಗಳಿಗೆ ಬಳಸಲಾಗುವ ಜೆಟ್ ಫುಯೆಲ್ ಅಥವಾ ಎಟಿಎಫ್ ಇಂಧನದ (ATF- Aviation Turbine Fuel) ಬೆಲೆ ತೀವ್ರವಾಗಿ ಹೆಚ್ಚಳ ಆಗಿರುವ ಹಿನ್ನೆಲೆಯಲ್ಲಿ ಏರ್ ಇಂಡಿಯಾ ಸಂಸ್ಥೆ (Air India) ತನ್ನ ಕೆಲ ಫ್ಲೈಟ್ಗಳನ್ನು ನಿಲ್ಲಿಸಲು ನಿರ್ಧರಿಸಿದೆ. ಜೂನ್ನಿಂದ ಆಗಸ್ಟ್ವರೆಗೆ ಕೆಲ ಆಯ್ದ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ತನ್ನ ಫ್ಲೈಟ್ ಸರ್ವಿಸ್ ಅನ್ನು ಕಡಿಮೆಗೊಳಿಸುವುದಾಗಿ ಸಂಸ್ಥೆ ಹೇಳಿದೆ. ಏರ್ ಇಂಡಿಯಾ ಇಂದು ಬುಧವಾರ ನೀಡಿರುವ ಮಾಹಿತಿ ಪ್ರಕಾರ ಆರೇಳು ಮಾರ್ಗಗಳಲ್ಲಿ ಅದರ ಫ್ಲೈಟ್ ಸಂಚಾರ ಇರುವುದಿಲ್ಲ….