ಢಾಕಾ, ಡಿಸೆಂಬರ್ 19: ವಿಪಕ್ಷ ನಾಯಕ ಉಸ್ಮಾನ್ ಹಾದಿ ಹತ್ಯೆ ಹಿನ್ನೆಲೆಯಲ್ಲಿ ಬಾಂಗ್ಲಾದೇಶದಲ್ಲಿ ಮತ್ತೆ ಹಿಂಸಾಚಾರ ಭುಗಿಲೆದ್ದಿದೆ. ಚುನಾವಣಾ ಪ್ರಚಾರ ವೇಳೆ ಅವಾಮಿ ಲೀಗ್ ಪಕ್ಷದ ಉಸ್ಮಾನ್ ಹಾದಿ ಮೇಲೆ ಫೈರಿಂಗ್ ನಡೆದಿತ್ತು. ಸಿಂಗಾಪುರದಲ್ಲಿ ಚಿಕಿತ್ಸೆ ಫಲಿಸದೆ ಉಸ್ಮಾನ್ ಹಾದಿ ಸಾವನ್ನಪ್ಪಿದ್ದಾರೆ.ಉಸ್ಮಾನ್ ಹತ್ಯೆಯಿಂದ ಆಕ್ರೋಶಗೊಂಡು ನಿನ್ನೆ ರಾತ್ರಿ ದಾಳಿ ನಡೆಸಲಾಗಿದೆ. ಪ್ರೋಥೋಮ್ ಅಲೋ ಪತ್ರಿಕೆಯ ಕಟ್ಟಡದ ಮೇಲೆ ದಾಳಿ ನಡೆದಿದೆ. ಬಾಂಗ್ಲಾದ ಹಲವೆಡೆ ಬೆಂಕಿ ಹಚ್ಚಿ ಪ್ರತಿಭಟನಾಕಾರರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೊಹಮ್ಮದ್ ಯೂನುಸ್ ಸರ್ಕಾರದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಕಳೆದ ವರ್ಷವಷ್ಟೇ ಪ್ರಧಾನಿ ಶೇಖ್ ಹಸೀನಾರನ್ನು ಅಧಿಕಾರದಿಂದ ಕೆಳಗಿಳಿಸಲು ಸಾಕಷ್ಟು ಪ್ರತಿಭಟನೆಗಳು ನಡೆದಿದ್ದವು. ಅದಾದ ಬಳಿಕ ಹಸೀನಾ ಅಲ್ಲಿಂದ ಪಲಾಯನ ಮಾಡಿ ಭಾರತಕ್ಕೆ ಬಂದಿದ್ದರು. ಮೊಹಮ್ಮದ್ ಯೂನಸ್ ಮಧ್ಯಂತರ ಸರ್ಕಾರವನ್ನು ರಚಿಸಿದ್ದರು.
ನಟಿ ರುಕ್ಮಿಣಿ ವಸಂತ್ (Rukmini Vasanth) ಅವರನ್ನು ಜನರು ಒಪ್ಪಿಕೊಂಡಿದ್ದಾರೆ. ಅವರು ಹಲವು ಸೂಪರ್ ಹಿಟ್ ಚಿತ್ರಗಳನ್ನು ನೀಡಿದ್ದಾರೆ. ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲಿ ನೆಗೆಟಿವ್ ಪಾತ್ರ ಮಾಡಿದ್ದರು. ಈ ಪಾತ್ರ ಗಮನ ಸೆಳೆದಿದೆ. ಈ ಸಿನಿಮಾ ಬಳಿಕವೂ ಅವರನ್ನು ಯಾರೂ ಹೇಟ್ ಮಾಡಿಲ್ಲ. ಇದಕ್ಕೆ ಅವರು ಸಂತಸ ಹೊರಹಾಕಿದರು. ಬಾಲಿವುಡ್ ಮಾಧ್ಯಮಕ್ಕೆ ನೀಡಿದ ಸಂದರ್ಶನದಲ್ಲಿ ಅವರು ಮಾತನಾಡಿದ್ದಾರೆ. ಆ ಬಗ್ಗೆ ಇಲ್ಲಿದೆ ವಿವರ.
ನಟಿಯರು ಕ್ಯೂಟ್ ಕ್ಯೂಟ್ ಪಾತ್ರಗಳಲ್ಲಿ ಕಾಣಿಸಿಕೊಳ್ಳಬೇಕು ಎಂಬುದು ಫ್ಯಾನ್ಸ್ ಕೋರಿಕೆ. ಆದರೆ, ಹಾಗೆ ಕಾಣಿಸಿಕೊಂಡಿಲ್ಲ ಎಂದಾಗ ಕೆಲವೊಮ್ಮೆ ಫ್ಯಾನ್ಸ್ಗೆ ಬೇಸರ ಆಗೋದನ್ನು ನೀವ ಕಾಣಬಹುದು. ಅದರಲ್ಲೂ ವಿಲನ್ ಪಾತ್ರಗಳಲ್ಲಿ ಕಾಣಿಸಿಕೊಂಡರೆ ಫ್ಯಾನ್ಸ್ ಸಹಿಸುವುದೇ ಇಲ್ಲ. ಆದರೆ, ರುಕ್ಮಿಣಿ ವಿಷಯದಲ್ಲಿ ಆ ರೀತಿ ಆಗಿಲ್ಲ. ಈ ವಿಷಯದಲ್ಲಿ ಅವರಿಗೆ ಖುಷಿ ಇದೆ. ಅವರು ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಇದನ್ನೂ ಓದಿ: ಹಾಲಿವುಡ್ ರಿಪೋರ್ಟರ್ ರೌಂಡ್ಟೇಬಲ್ನಲ್ಲಿ ಕನ್ನಡತಿ ರುಕ್ಮಿಣಿ ವಸಂತ್
‘ಕಾಂತಾರ ಚಾಪ್ಟರ್ 1’ ಚಿತ್ರದಲ್ಲಿ ವಿಲನ್ ಪಾತ್ರ ಮಾಡಿದೆ. ಈ ರೀತಿಯ ಪಾತ್ರ ಪ್ರಯೋಗವನ್ನು ವೃತ್ತಿಜೀವನದ ಆರಂಭದಲ್ಲಿ ಮಾಡುವುದು ಅಪಾಯಕಾರಿ. ಜನರು ನಾನು ನೆಗೆಟಿವ್ ಪಾತ್ರ ಮಾಡಿದರೂ ನನ್ನನ್ನು ಪ್ರೀತಿಸಿದ್ದಾರೆ. ಅವರು ದ್ವೇಷಿಸಲಿಲ್ಲ. ನನ್ನ ಪಾತ್ರ ವಿಲನ್ ಆಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ’ ಎಂದು ರುಕ್ಮಿಣಿ ಖುಷಿಯಿಂದ ಹೇಳಿಕೊಂಡಿದ್ದಾರೆ.
“Playing the Antagonist character in #KantaraChapter1 is dangerous to experiment in early of career🤞. People are saying that they loved me playing an evil role, they didn’t hate🫶. Nobody guessed that i will turn out as Antagonist🫰❤️🔥”
– #RukminiVasanthpic.twitter.com/TlnSskjVdB
ರುಕ್ಮಿಣಿ ವಸಂತ್ ಅವರು ತಮ್ಮ ವೃತ್ತಿ ಜೀವನದ ಉದ್ದಕ್ಕೂ ನಿರ್ವಹಿಸಿ ಪಾತ್ರಗಳಲ್ಲಿ ಒಂದು ಪ್ಯಾಟರ್ನ್ ಇದೆ. ಅವರು ಯಾವುದೇ ಸಿನಿಮಾ ಮಾಡಿದರೂ ಕಥಾ ನಾಯಕ ಅವರಿಗೆ ಸಿಗೋದಿಲ್ಲ. ಈ ಹಿಂದಿನ ಹಲವು ಸಿನಿಮಾಗಳಲ್ಲಿ ಅವರು ನಡೆದಿವೆ. ‘ಕಾಂತಾರ: ಚಾಪ್ಟರ್ 1’ ಚಿತ್ರದಲ್ಲೂ ಹಾಗೆಯೇ ಆಗಿದೆ. ಇದರಲ್ಲಿ ಕಥಾ ನಾಯಕನೇ ರುಕ್ಮಿಣಿಯನ್ನು ಸಾಯಿಸುತ್ತಾನೆ.
ಬೆಂಗಳೂರು, ಡಿಸೆಂಬರ್ 19: ನಿದ್ರೆಯು ಮಾನವ ದೇಹಕ್ಕೆ ಅತ್ಯಗತ್ಯ. ಇದು ಆಯುಷ್ಯ ವೃದ್ಧಿಗೂ ಸಹ ಸಹಕಾರಿ. ಆದರೆ, ರಾತ್ರಿಯ ನಿದ್ರೆ ಮತ್ತು ಮಧ್ಯಾಹ್ನದ ನಿದ್ರೆಯ ನಡುವೆ ವ್ಯತ್ಯಾಸವಿದೆ. ಜ್ಯೋತಿಷ್ಯ ಮತ್ತು ಧರ್ಮಶಾಸ್ತ್ರಗಳ ಪ್ರಕಾರ, ಮಧ್ಯಾಹ್ನದ ಹೊತ್ತು ನಿದ್ರಿಸುವುದು ಕೆಲವೊಮ್ಮೆ ಶುಭವಲ್ಲ. ವೃದ್ಧರು, ರೋಗಿಗಳು, ಮಕ್ಕಳು ಮತ್ತು ಮಕ್ಕಳನ್ನು ಹಡೆದ ತಾಯಂದಿರಿಗೆ ಮಧ್ಯಾಹ್ನದ ನಿದ್ರೆ ಅನ್ವಯಿಸುವುದಿಲ್ಲ. ಇನ್ನುಳಿದಂತೆ, ದೇಹಪುಷ್ಟಿಯಿಂದ ಕರ್ಮನಿರತರಾಗಿರುವ ವ್ಯಕ್ತಿಗಳಿಗೆ, ಮಧ್ಯಾಹ್ನದ ನಿದ್ರೆ ಅಶುಭ ಫಲಿತಾಂಶಗಳನ್ನು ನೀಡುತ್ತದೆ.
ವಿಶೇಷವಾಗಿ ಮಧ್ಯಾಹ್ನ 12 ರಿಂದ 3 ಗಂಟೆಯ ಸಮಯದಲ್ಲಿ ನಿದ್ರಿಸುವುದರಿಂದ ನವಗ್ರಹ ದೋಷಗಳು, ಗ್ರಹಕಾಟ, ನಕಾರಾತ್ಮಕ ಶಕ್ತಿಗಳ ಆವಾಹನೆ, ದೈವಬಲ ಕುಗ್ಗುವಿಕೆ ಮತ್ತು ಮೆದುಳಿನ ಜಾಗರೂಕತೆ ಕಡಿಮೆಯಾಗುವ ಸಾಧ್ಯತೆ ಇದೆ. ಕಚೇರಿಗಳಲ್ಲಿ ಕುರ್ಚಿಯ ಮೇಲೆ ನಿದ್ರಿಸುವುದು ಮಹಾದೋಷವೆಂದು ಪರಿಗಣಿಸಲಾಗುತ್ತದೆ. ನಿದ್ರೆಗೆ ಜಾರುವ ಸಂಭವ ಬಂದಾಗ, ಸ್ವಲ್ಪ ಓಡಾಡಿ, ಮುಖ ತೊಳೆದು ಕರ್ತವ್ಯದಲ್ಲಿ ತೊಡಗಿಸಿಕೊಳ್ಳುವುದು ಉತ್ತಮ. ಮಧ್ಯಾಹ್ನದ ನಿದ್ರೆ ಶುಭವಲ್ಲ ಎಂಬುದು ಶಾಸ್ತ್ರಗಳ ನಂಬಿಕೆಯಾಗಿದೆ ಎಂದು ಗುರೂಜಿ ಹೇಳಿದ್ದಾರೆ.
ಮುಂಬೈ, ಡಿಸೆಂಬರ್ 19: ಮದುವೆ ಸಮಾರಂಭದ ವೇಳೆ ಬ್ಯಾಂಕ್ವೆಟ್ ಹಾಲ್ನಲ್ಲಿ ಅಗ್ನಿ ಅವಘಡ ಸಂಭವಿಸಿರುವ ಘಟನೆ ಮುಂಬೈನಲ್ಲಿ ನಡೆದಿದೆ. ಥಾಣೆಯ ಘೋಡ್‌ಬಂದರ್ ಪ್ರದೇಶದ ಮದುವೆ ಮಂಟಪದಲ್ಲಿ ಗುರುವಾರ ನಡೆದ ಸಮಾರಂಭದ ವೇಳೆ ಬೆಂಕಿ ಕಾಣಿಸಿಕೊಂಡಿತ್ತು. ತಕ್ಷಣವೇ ಮಾಹಿತಿ ತಿಳಿದು, ಹಲವು ಅಗ್ನಿಶಾಮಕ ವಾಹನಗಳು ಸ್ಥಳದಲ್ಲಿ ದೌಡಾಯಿಸಿದ್ದವು. ಅಗ್ನಿ ಶಾಮಕ ಸಿಬ್ಬಂದಿ, ಬೆಂಕಿಯನ್ನು ನಂದಿಸಲು ತೀವ್ರ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದವು.
ಬೆಂಕಿಯ ತೀವ್ರತೆ ಹೆಚ್ಚಾಗುವ ಮೊದಲೇ ವಧು, ವರ ಮತ್ತು ಅತಿಥಿಗಳು ಸೇರಿದಂತೆ ಎಲ್ಲರನ್ನು ಸುರಕ್ಷಿತವಾಗಿ ಹೊರಗೆ ಕರೆತರಲಾಯಿತು. ಪ್ರಾಥಮಿಕ ವರದಿಗಳು ಯಾವುದೇ ಜೀವಹಾನಿ ಅಥವಾ ಗಾಯಗಳಾಗಿಲ್ಲ ಎಂದು ದೃಢಪಡಿಸಿವೆ. ಇದರಿಂದಾಗಿ ಸಂಭಾವ್ಯ ದುರಂತ ತಪ್ಪಿದೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಮಕಿ ಹೊತ್ತಿಕೊಂಡಿರಬಹುದು ಎನ್ನಲಾಗಿದೆ. ಇತ್ತೀಚೆಗೆ ಗೋವಾದ ನೈಟ್ಕ್ಲಬ್ನಲ್ಲಿ ನಡೆದ ಅಗ್ನಿ ದುರಂತದಲ್ಲಿ 25 ಮಂದಿ ಪ್ರಾಣ ಕಳೆದುಕೊಂಡಿದ್ದರು.
‘ಡೆವಿಲ್’ ಸಿನಿಮಾ ಕಲೆಕ್ಷನ್ (Devil Movie Collection) ದಿನ ಕಳೆದಂತೆ ಕುಸಿತ ಕಾಣುತ್ತಿದೆ. ಅಭಿಮಾನಿಗಳು ತಾವು ಸಿನಿಮಾನ ಗೆಲ್ಲಿಸೋದಾಗಿ ಹೇಳಿದ್ದರು. ಚಿತ್ರ ಒಳ್ಳೆಯ ಗಳಿಕೆ ಕೂಡ ಮಾಡಿದೆ. ಆದರೆ, ಸಿನಿಮಾದ ಬಜೆಟ್ ಹೆಚ್ಚಿರುವುದರಿಂದ ಗಳಿಕೆ ಏನಕ್ಕೂ ಸಾಲುತ್ತಿಲ್ಲ. ಹಿಗೆಯೇ ಮುಂದುವರಿದರೆ ನಿರ್ಮಾಪಕರು ಕಷ್ಟ ಅನುಭವಿಸಬೇಕಾಗಿ ಬರಬಹುದು. ಇನ್ನು, ಗುರುವಾರ (ಡಿಸೆಂಬರ್ 18) ಸಿನಿಮಾದ ಗಳಿಕೆ ತೀವ್ರವಾಗಿ ಕುಸಿತ ಕಂಡಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಅಭಿಮಾನಿಗಳು ಕೈ ಹಿಡಿಯಬೇಕಾದ ಅನಿವಾರ್ಯತೆ ಇದೆ.
‘ಡೆವಿಲ್’ ಸಿನಿಮಾ ರಿಲೀಸ್ ಆಗಿ 8 ದಿನಗಳು ಪೂರ್ಣಗೊಂಡಿವೆ. ಮೊದಲ ದಿನ ಸಿನಿಮಾ ಅದ್ಭುತ ಕಲೆಕ್ಷನ್ ಮಾಡಿತು. ಆದರೆ, ದಿನ ಕಳೆದಂತೆ ಚಿತ್ರದ ಕಲೆಕ್ಷನ್ ಕುಗ್ಗುತ್ತಾ ಇದೆ. sacnilk ವರದಿ ಪ್ರಕಾರ ಈ ಚಿತ್ರ ಕಲೆಕ್ಷನ್ ಮಾಡಿರುವುದು 25 ಕೋಟಿ ರೂಪಾಯಿ. ಗುರುವಾದ ಕಲೆಕ್ಷನ್ ಕೇವಲ 53 ಲಕ್ಷ ರೂಪಾಯಿ. ಶನಿವಾರ ಹಾಗೂ ಭಾನುವಾರ ಸಿನಿಮಾ ಪಾಲಿಗೆ ತುಂಬಾನೇ ಮುಖ್ಯವಾಗಲಿದೆ.
ದರ್ಶನ್ ಅವರು ಜೈಲಿನಲ್ಲಿ ಇರುವಾಗಲೇ ‘ಡೆವಿಲ್’ ಸಿನಿಮಾ ರಿಲೀಸ್ ಆಯಿತು. ಈ ಚಿತ್ರದ ಪ್ರಚಾರದ ಜವಾಬ್ದಾರಿಯನ್ನು ಅಭಿಮಾನಿಗಳು ಹೊತ್ತುಕೊಂಡಿದ್ದರು. ಆದರೆ, ಸಿನಿಮಾಗೆ ಅಂದುಕೊಂಡ ರೀತಿಯ ಪ್ರತಿಕ್ರಿಯೆ ಸಿಕ್ಕಿಲ್ಲ. ವಿಮರ್ಶಕರಿಂದ ಹಾಗೂ ಸಿನಿಮಾ ಪ್ರಿಯರಿಂದ ‘ಡೆವಿಲ್’ಗೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಇದು ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿದೆ. ಈಗ ಅವರೇ ಕೈ ಹಿಡಿದು ಚಿತ್ರವನ್ನು ನಡೆಸಬೇಕಿದೆ.
ಈ ಶನಿವಾರ ಹಾಗೂ ಭಾನುವಾರ ಒಳ್ಳೆಯ ಕಲೆಕ್ಷನ್ ಆದರೆ ಮಾತ್ರ ಸಿನಿಮಾ ಚೇತರಿಸಿಕೊಳ್ಳಲಿದೆ. ಮುಂದಿನವಾರ ‘ಮಾರ್ಕ್’ ಹಾಗೂ ‘45’ ಸಿನಿಮಾಗಳು ಬರಲಿವೆ. ಎರಡೂ ಕನ್ನಡದ ಸಿನಿಮಾಗಳೇ. ಹೀಗಾಗಿ, ಹಲವು ಚಿತ್ರಮಂದಿರಗಳಲ್ಲಿ ಈ ಎರಡು ಸಿನಿಮಾಗಳು ರಾರಾಜಿಸಲಿವೆ. ಇದರಿಂದ ‘ಡೆವಿಲ್’ ಚಿತ್ರಕ್ಕೆ ಸಂಕಷ್ಟ ಎದುರಾಗುವ ಸಾಧ್ಯತೆ ದಟ್ಟವಾಗಿದೆ. ‘ಡೆವಿಲ್’ ಚಿತ್ರಕ್ಕೆ ಪ್ರಕಾಶ್ ವೀರ್ ನಿರ್ದೇಶನ ಇದೆ. ಈ ಸಿನಿಮಾಗೆ ರಚನಾ ರೈ ನಾಯಕಿ. ದರ್ಶನ್ ಅವರದ್ದು ದ್ವಿಪಾತ್ರ. ಅಚ್ಯುತ್ ಕುಮಾರ್ ಪಾತ್ರಕ್ಕೂ ಪ್ರಾಮುಖ್ಯತೆ ಇದೆ.
ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು 2025ರ ಡಿಸೆಂಬರ್ 19, ಶುಕ್ರವಾರದ ಮಹತ್ವವನ್ನು ವಿವರಿಸಿದ್ದಾರೆ. ಈ ದಿನವು ವಿಶ್ವಾ ವಸುನಾಮ ಸಂವತ್ಸರ, ಮಾರ್ಗಶಿರ ಮಾಸ, ಕೃಷ್ಣಪಕ್ಷದ ಅಮಾವಾಸ್ಯಾ ತಿಥಿಯನ್ನು ಒಳಗೊಂಡಿದೆ. ಜೇಷ್ಠ ನಕ್ಷತ್ರದಲ್ಲಿ ಚಂದ್ರನು ಸಂಚರಿಸುತ್ತಾನೆ.
ಡಾ. ಗುರೂಜಿ ತಿಳಿಸಿದಂತೆ, ಇಂದು ಸಂಪೂರ್ಣ ಮಹಾ ಅಮಾವಾಸ್ಯೆಯಾಗಿದ್ದು, ಇದರ ಪ್ರಭಾವವು ಮರುದಿನದವರೆಗೂ ಇರುತ್ತದೆ. ಶುಕ್ರವಾರದಂದು ಅಮಾವಾಸ್ಯೆ ಬಂದಿರುವುದು ಮಹಾಲಕ್ಷ್ಮಿ ಮತ್ತು ಶಕ್ತಿ ದೇವತೆಗಳ ಪೂಜೆಗೆ ಅತ್ಯಂತ ಶುಭಪ್ರದವಾಗಿದೆ. ಲಕ್ಷ್ಮಿ ದರ್ಶನ ಮತ್ತು ಕುಂಕುಮಾರ್ಚನೆಗೆ ಇದು ವಿಶೇಷ ದಿನ. ಇದನ್ನು ಎಳ್ಳಮಾವಾಸ್ಯೆ ಎಂದೂ ಕರೆಯಲಾಗುತ್ತಿದ್ದು, ತುಂಗಾ ಸ್ನಾನಕ್ಕೆ ಪ್ರಾಶಸ್ತ್ಯ ನೀಡಲಾಗಿದೆ. ಸೂರ್ಯ ಧನುಸ್ ರಾಶಿಯಲ್ಲೂ, ಚಂದ್ರ ವೃಶ್ಚಿಕ ರಾಶಿಯಲ್ಲೂ ಸಂಚಾರ ಮಾಡುತ್ತಾನೆ. ಇಂದು ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವ ಆಚರಿಸುವವರಿಗೆ ಶುಭ ಹಾರೈಕೆಗಳನ್ನು ಸಲ್ಲಿಸಲಾಗಿದೆ ಎಂದು ಬಸವರಾಜ್ ಗುರೂಜಿ ಹೇಳಿದ್ದಾರೆ.
ತುಮಕೂರು, ಡಿಸೆಂಬರ್ 19: ಜಾಗದ ವಿಚಾರವಗಿ ರಿಯಲ್ ಎಸ್ಟೇಟ್ ಉದ್ಯಮಿ ಯುವಕನೋರ್ವನನ್ನು ಬರ್ಬರ ಹತ್ಯೆ ಮಾಡಿರುವ ಘಟನೆ ತುಮಕೂರು ಜಿಲ್ಲೆಯ ಶಿರಾ ತಾಲೂಕಿನ ಕಳ್ಳಂಬೆಳ್ಳ ಬಳಿ ನಡೆದಿದೆ. ಮಚ್ಚಿನಿಂದ ಕೊಚ್ಚಿ ಮಧುವನ್(25) ಕೊಲೆ ಮಾಡಲಾಗಿದ್ದು, ಪ್ರಕರಣ ಸಂಬಂಧ ರಿಯಲ್ ಎಸ್ಟೇಟ್ ಉದ್ಯಮಿ ಮಹೇಶ್ ಮತ್ತು ಶಫಿವುಲ್ಲಾರನ್ನು ವಶಕ್ಕೆ ಪಡೆದು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
2015ರಲ್ಲಿ ಮಧುಸೂದನ್ ಅವರ ತಂದೆ ನಾರಾಯಣಸ್ವಾಮಿ ತುಮಕೂರಿನ ಅಮಾನಿಕೆರೆ ಬಳಿಯ 3 ಕೋಟಿ ರೂ. ಮೌಲ್ಯದ 2.2 ಎಕರೆ ಜಮೀನು ಮಾರಾಟಕ್ಕೆ ಚಿಂತನೆ ನಡೆಸಿದ್ದರು. ನಾರಾಯಣಸ್ವಾಮಿ ಅವರಿಗೆ ಆ ಜಮೀನು ತಮ್ಮ ತಾಯಿಯಿಂದ ಬಂದಿದ್ದು, ಇದನ್ನು ಉದ್ಯಮಿ ಮಹೇಶ್ಗೆ ಮಾರಾಟ ಮಾಡಲು ಮುಂದಾಗಿದ್ದರು. ಆದರೆ ಜಮೀನಿನ ದಾಖಲೆಗಳು ಸರಿಯಾಗಿ ಇಲ್ಲದ ಕಾರಣ ಅದನ್ನು ಸರಿಪಡಿಸಲು 3 ವರ್ಷಗಳ ಕಾಲ ಸಮಯ ತೆಗೆದುಕೊಂಡಿದ್ದರು. 2018ರಲ್ಲಿ ಸಮಸ್ಯೆ ಬಗೆಹರಿದ ಬಳಿಕ ಈ ವಿಚಾರಕ್ಕೆ ಮಗ ಮಧುಸೂಧನ್ ಎಂಟ್ರಿಯಾಗಿತ್ತು. ಜಮೀನು ಮಾರಾಟ ಮಾಡಲು ಅವರು ಒಪ್ಪದ ಕಾರಣ ಕಳೆದ 7 ವರ್ಷಗಳಿಂದ ಜಮೀನು ವಿಚಾರವಾಗಿ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.
ಇದೇ ಜಮೀನು ಸಂಬಂಧಿತ ವಿಚಾರ ಸಂಬಂಧ ಮಾತನಾಡಿಸಲು ಮಹೇಶ್ ತೋಟಕ್ಕೆ ಬಂದಿದ್ದರು. ಈ ವೇಳೆ ಮಾತಿಗೆ ಮಾತು ಬೆಳೆದು ನಡೆದ ಜಗಳ ವಿಕೋಪಕ್ಕೆ ಹೋಗಿದೆ. ಅಲ್ಲೇ ಇದ್ದ ಮಚ್ಚಿನಿಂದ ಕೊಚ್ಚಿ ಮಧುಸೂದನ್ ಅವರ ಹತ್ಯೆ ಮಾಡಲಾಗಿದೆ. ಪ್ರಕರಣ ಸಂಬಂಧ ರಿಯಲ್ ಎಸ್ಟೇಟ್ ಉದ್ಯಮಿ ಮಹೇಶ್ ಹಾಗೂ ಶಫಿವುಲ್ಲಾ ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ. ಈ ಬಗ್ಗೆ ಕಳ್ಳಂಬೆಳ್ಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಂದು ಕಂಡ ಕನಸುಗಳು ಗಾಢವಾಗಿ ನಿಮ್ಮ ಮೇಲೆ ಪರಿಣಾಮ ಬೀರುವುದು. ನೀವಾಗಿಯೇ ನಿಮ್ಮ ಸ್ಥಾನವನ್ನು ಹೇಳಿ, ಮುಗ್ಗರಿಸುವಿರಿ. ನೀವು ಕೊಟ್ಟ ಮಾತನ್ನು ಇಂದು ಉಳಿಸಿಕೊಳ್ಳುವುದು ಕಷ್ಟವಾದೀತು. ಸಮಾನ ಚಿಂತನಶೀಲರ ನಡುವೆ ಸಖ್ಯವಾಗುವುದು. ಇನ್ನೊಬ್ಬರಿಂದ ಸಹಕಾರವನ್ನು ಬಯಸುವುದಿಲ್ಲ. ಅತಿಯಾದ ಕೋಪವನ್ನು ನಿಯಂತ್ರಿಸಿದ್ದು ನಿಮ್ಮ ಅನುಭವಕ್ಕೆ ಬರಬಹುದು. ಸಂಧಾನಕ್ಕೆ ಕರೆದರೆ ಮಾತ್ರ ಹೋಗಿ. ಮನಸ್ಸಿನ ಸೋಮಾರಿತನವು ನಿಮ್ಮ ಕಾರ್ಯವನ್ನು ಹಿಂದಿಕ್ಕುವುದು. ಗ್ರಾಹಕರಿಗೆ ನಿಮ್ಮ ಅಸಮಾಧಾನವೂ ಆಗುವುದು. ಇಂದು ಜ್ಞಾನವೃದ್ಧರ ಸೇವೆಗೆ ಅವಕಾಶ ಸಿಗಲಿದೆ. ಅಪಘಾತದಿಂದ ಉಂಟಾದ ನೋವಿನಿಂದ ನಿಧಾನವಾಗಿ ಆಚೆ ಬರಬಹುದು. ಪ್ರಕೃತಿಯ ಜೊತೆ ಸಂಚಾರ, ಪೂಜೆ, ಧ್ಯಾನದಿಂದ ಮನಸ್ಸು ಹಗುರಗೊಳ್ಳುತ್ತದೆ. ಯಾರದ್ದಾದರೂ ಸಣ್ಣ ಸಹಾಯವನ್ನೂ ನೀವು ನಿರೀಕ್ಷಿಸುವಿರಿ. ಸಕಾಲಕ್ಕೆ ಸಿಕ್ಕ ಸೌಕರ್ಯದಿಂದ ನಿಮ್ಮ ಕಾರ್ಯವು ಸುಲಲಿತವಾಗುವುದು. ನಿಮ್ಮ ದೌರ್ಬಲ್ಯವನ್ನು ನೀವು ಸಹಾಕರಾತ್ಮಕವಾಗಿ ಪಡೆದುಕೊಂಡು ಮುನ್ನಡೆಯಬಹುದು.
ವೃಷಭ ರಾಶಿ:
ಸಾಮಾನ್ಯ ವಿಚಾರದಲ್ಲೇ ಅಸಾಮಾನ್ಯ ಅರ್ಥ ಕಂಡು ಖುಷಿಪಡುವಿರಿ. ಇಷ್ಟದ ವಸ್ತುವಿನ ಪ್ರಾಪ್ತಿಯ ಸಂತೋಷವಿದ್ದರೂ ಖರ್ಚಿನ ನೋವು ನಿಮ್ಮನ್ನು ಕಾಡಬಹುದು. ಮಾತಿಗೆ ಮಾತು ಬೆಳೆಯಬಹುದು. ಅದನ್ನು ನಿಭಾಯಿಸುವ ಕಲೆ ಗೊತ್ತಿರಲಿ. ನಿಮ್ಮ ಭೂಮಿಯ ಮಾರಾಟಕ್ಕೆ ಯಾರಾದರೂ ಬರಬಹುದು. ಅಂದುಕೊಂಡಿದ್ದಕ್ಕಿಂತ ಖರ್ಚು ಅಧಿಕವಾಗಿದ್ದು ಗಳಿಕೆಯ ಬಗ್ಗೆ ಆಲೋಚಿಸುವಿರಿ. ಇಂದು ನಿಮಗೆ ಸಣ್ಣ ವಿಚಾರಗಳೂ ಬಹಳ ಮುಖ್ಯವಾಗುತ್ತವೆ. ಧಾರ್ಮಿಕ ಕಾರ್ಯದಲ್ಲಿ ತೊಡಗಿರುವವರಿಗೆ ಆದಾಯವು ಹೆಚ್ಚು ಇರಲಿದೆ. ಕುಟುಂಬದ ಪೋಷಣೆಯಲ್ಲಿ ಇಂದು ಸಹಭಾಗಿತ್ವ ಇರುವುದು. ವೃತ್ತಿಯ ಸ್ಥಳದಲ್ಲಿ ತೇಜೋವಧೆಯಾಗುವ ಸಂದರ್ಭವು ಬರಬಹುದು. ಬೇಕೆಂದೇ ನಿಮ್ಮ ಮೇಲೆ ಒತ್ತಡ ತರಬಹುದು. ಸ್ನೇಹಿತರು ನಿಮ್ಮನ್ನು ದೂರವಿಟ್ಟಾರು. ನಿಮ್ಮ ವಿಭಿನ್ನ ಚಿಂತನೆ ಇತರರಿಗೆ ದಾರಿ ತೋರಿಸುತ್ತದೆ. ವೈಫಲ್ಯವನ್ನು ಸಕಾರಾತ್ಮಕ ದೃಷ್ಟಿಯಿಂದ ನೋಡಿ. ಮಕ್ಕಳಿಗೆ ಕಡಿವಾಣ ಹಾಕಲು ಹೋಗುವುದು ಬೇಡ. ಅವರ ಮೇಲೆ ನಿಮ್ಮ ನಿಗಾ ಇರಲಿ. ನೀವು ಯಾರಿಗೂ ಭಾರವಾಗದಂತೆ ಇರಬೇಕೆನಿಸುವುದು.
ಮಿಥುನ ರಾಶಿ:
ಕರ್ತವ್ಯ ಮತ್ತು ಕುಟುಂಬ ಎರಡರ ಮಧ್ಯೆ ಸಮತೋಲನ ಸಾಧಿಸಬೇಕಾದ ದಿನ. ಇಂದು ಸಹೋದರನ ನಡತೆ ನಿಮಗೆ ಸಂಶಯ ತರಿಸಬಹುದು. ನಿರುಪಯೋಗಿ ವಸ್ತುಗಳನ್ನು ನೀವು ದೂರ ಮಾಡುವಿರಿ. ನಿರುದ್ಯೋಗವೇ ನಿಮಗೆ ಅಭ್ಯಾಸವಾಗುವ ಸಾಧ್ಯತೆ ಇದೆ. ಸ್ತ್ರೀಯರಿಗೆ ಪ್ರಯಾಣದಲ್ಲಿ ತೊಂದರೆ ಬರಬಹುದು. ತಪ್ಪನ್ನು ಸರಿಮಾಡಿಕೊಳ್ಳುವ ಮಾರ್ಗದಲ್ಲಿ ಯೋಚನೆ ಇರಲಿ. ನಿಮಗೆ ಕಾರ್ಯದಲ್ಲಿ ನಿಷ್ಠೆ ಇಲ್ಲ ಎಂದು ಸಾಬೀತಾಗಬಹುದು. ವ್ಯವಹಾರದಲ್ಲಿ ಮುಗ್ಗರಿಸುವ ಸಂದರ್ಭವು ಬರಬಹುದು. ಸಾಲವನ್ನು ಕೊಡುವ ಸಂದರ್ಭವು ಬರಬಹುದು. ಏನಾದರೂ ಹೇಳಿ ತಪ್ಪಿಸಿಕೊಳ್ಳುವುದು ಸೂಕ್ತ. ನಿಮ್ಮ ನೌಕರರ ತಪ್ಪಿಗೆ ನೀವು ಉತ್ತರಿಸಬೇಕಾದೀತು. ನಿಮ್ಮ ಮೌಲ್ಯ ಕೆಲಸದಿಂದಲೇ ಹೊರಹೊಮ್ಮುತ್ತದೆ. ತಾಳ್ಮೆಯ ನಡೆ ನಿಮ್ಮ ಗೌರವವನ್ನು ಹೆಚ್ಚಿಸುತ್ತದೆ. ತಂದೆಯ ವ್ಯವಹಾರದಲ್ಲಿ ಮಧ್ಯ ಪ್ರವೇಶ ಮಾಡುವುದು ಬೇಡ. ದ್ವಿಚಕ್ರ ವಾಹನದ ಮೇಲೆ ಜಿಗುಪ್ಸೆ ಬಂದೀತು. ಇಂದಿನ ಒತ್ತಡವನ್ನು ಸಹಿಸಿಕೊಂಡು ಇರುವುದು ಕಷ್ಟವಾದೀತು. ಇರುವುದನ್ನು ಇದ್ದಂತೆ ಹೇಳುವುದು ಇನ್ನೊಬರಿಗೆ ಆಗಿಬಾರದು.
ಕರ್ಕಾಟಕ ರಾಶಿ:
ನಿಮ್ಮ ದೃಷ್ಟಿ ಭವಿಷ್ಯದತ್ತ ನೆಟ್ಟಿರುವಿರಿ. ಇಂದು ಸಣ್ಣ ಆರಂಭ ಮುಂದಿನ ದಿನಗಳಲ್ಲಿ ದೊಡ್ಡ ದಾರಿ ತೆರೆದುಕೊಳ್ಳುತ್ತದೆ, ಧೈರ್ಯವಿರಲಿ. ಯಾರದೋ ಯೋಜನೆಯನ್ನು ನೀವು ಬಳಸಿಕೊಳ್ಳಬಹುದು. ನಿಮ್ಮ ಪ್ರಭಾವದಿಂದಾಗಿ ಇನ್ನೊಬ್ಬರಿಗೆ ಸಹಾಯ ಸಿಗಲಿದೆ. ನಿಮ್ಮ ಶ್ರಮವು ದುರುಪಯೋಗವಾಗುವುದು. ಅಪರಿಚಿತ ವ್ಯಕ್ತಿಗಳ ಜೊತೆ ವ್ಯಾಪರ ಸಂಬಂಧವು ಬರುವುದು. ದೂರಪ್ರಯಾಣದಿಂದ ನಿಮಗೆ ಖರ್ಚಾಗುವುದು ಗೊತ್ತಾಗದೇ ಹೋಗಬಹುದು. ನ್ಯಾಯಸಮ್ಮತ ಮಾರ್ಗದಲ್ಲಿ ನೀವು ಇರುವುದು ಸೂಕ್ತ. ಹಿರಿಯರ ಜೊತೆ ಔಚಿತ್ಯ ರೀತಿಯಿಂದ ವ್ಯವಸ್ಥೆ ವ್ಯವಹರಿಸಿ. ಸ್ತ್ರೀಯರಿಂದ ಅಪಮಾನವಾಗುವ ಸಾಧ್ಯತೆ ಇದೆ. ಆಕಸ್ಮಿಕ ಧನಲಾಭವು ನಿಮಗೆ ಆಶ್ಚರ್ಯ ಉಂಟಾಗಬಹುದು. ಸಂಗಾತಿಯ ಜೊತೆ ಆರಾಮಾಗಿ ಮಾತನಾಡುವಿರಿ. ಕುಟುಂಬದ ಜೊತೆ ಕಳೆಯುವ ಕಾಲವು ನಿಮಗೆ ನೆನಪಿನಲ್ಲಿ ಉಳಿಯುವಂತೆ ಆಗುವುದು. ಕಾರ್ಯದಲ್ಲಿ ಶ್ರದ್ಧೆಯನ್ನು ಇಟ್ಟುಕೊಳ್ಳುವುದು ಮುಖ್ಯವಾಗುವುದು.
ಸಿಂಹ ರಾಶಿ:
ಮೌನವನ್ನು ನಿಮ್ಮ ಶಕ್ತಿಯಾಗಿಸಿಕೊಳ್ಳಿ. ಎಲ್ಲವನ್ನೂ ಹೇಳಬೇಕಿಲ್ಲ. ಅನಪೇಕ್ಷಿತ ಮಾತನ್ನು ಬಿಡುವುದು ಒಳ್ಳೆಯದು. ಅಧಿಕಾರದ ಹಿಡಿತ ತಪ್ಪುವ ಸಾಧ್ಯತೆ ಇದೆ. ನಿಮ್ಮ ಇಷ್ಟದ ಕಾರ್ಯವನ್ನು ಮಾಡಿ ಸಂತೋಷಗೊಳ್ಳುವಿರಿ. ಕೃಷಿಯಲ್ಲಿ ಲಾಭವನ್ನು ಪಡೆಯಲು ಹೆಚ್ಚಿನ ಓಡಾಟ ಮಾಡಬೇಕಾಗುವುದು. ಚಿಂತಿತ ಕಾರ್ಯವನ್ನು ಪೂರೈಸಲು ನಿಮಗೆ ಬುದ್ಧಿಯು ಸೂಚಿಸದು. ಆಸ್ತಿಯನ್ನು ಪಡೆದುಕೊಳ್ಳಲು ನ್ಯಾಯಾಲಯಕ್ಕೆ ಹೋಗಬೇಕಾದೀತು. ಸಂಗಾತಿಯು ನಿಮ್ಮ ನಡೆಯನ್ನು ಅನುಮಾನಸಿಬಹುದು. ಯಾರದೋ ಬಲವಂತಕ್ಕೆ ಸಿಕ್ಕಿಕೊಳ್ಳುವಿರಿ. ಉದ್ಯೋಗವನ್ನು ಬದಲಾಯಿಸಲು ಇರುವ ಉದ್ಯೋಗವನ್ನು ಬಿಟ್ಟುಬಿಡುವಿರಿ. ಸ್ಪರ್ಧಾತ್ಮಕ ಪರೀಕ್ಷೆಗೆ ನಿಮ್ಮ ಪ್ರಯತ್ನ ಸಾಲದು. ಒಳಗಿಟ್ಟ ಯೋಜನೆ ನಿಧಾನವಾಗಿ ರೂಪ ಪಡೆಯುತ್ತದೆ. ಹುಡುಗಾಟದ ಮನೋಭಾವವು ಇರಲಿದೆ. ಸ್ನೇಹಿತರ ಕೆಲವು ಸಂಗತಿಗಳು ನಿಮಗೆ ಇಷ್ಟವಾಗದು. ನಿಮ್ಮನ್ನು ಪ್ರಶಂಸಿಸಿದಂತೆ ಕಂಡರೂ ಅದು ತೆಗಳಿಕೆಯಾಗಿರಲಿದೆ. ಯಾರ ಜೊತೆಯೂ ಅಸಂಬದ್ಧ ಚರ್ಚೆಗೆ ಹೋಗುವುದು ಬೇಡ.
ಕನ್ಯಾ ರಾಶಿ:
ಇಂದು ಮುಖ್ಯ ವಿಚಾರದ ನಿರ್ಧಾರ ತೆಗೆದುಕೊಳ್ಳುವುದು ಕಷ್ಟವಾಗಬಹುದು. ನಿಮಗೆ ಇಂದು ಏನಾದರೂ ಹೊಸತನ್ನು ಮಾಡಬೇಕು ಎಂದು ಅನ್ನಿಸುವುದು. ಇಂದು ಯಾರನ್ನೂ ನಂಬುವ ಸ್ಥಿತಿಯಲ್ಲಿ ನೀವು ಇರಲಾರಿರಿ. ಸಾಮಾಜಿಕ ಕಾರ್ಯದಲ್ಲಿ ಅವಮಾನದ ಕಾರಣದಿಂದ ಅದನ್ನು ಮಾಡಲು ಹಿಂದೇಟು ಹಾಕುವಿರಿ. ಅವಿಶ್ರಾಂತ ಕಾರ್ಯದಿಂದ ಮನಸ್ಸಿಗೆ ತೊಂದರೆ ಸಾಧ್ಯ. ಅಪರಿಚಿತ ಕರೆಗಳು ನಿಮಗೆ ಹಿಂಸೆಯನ್ನು ಕೊಡಬಹುದು. ಪಾಲುದಾರಿಕೆಯಲ್ಲಿ ನಿಮಗೆ ಪೂರ್ಣ ಸಮಾಧಾನ ಇರದು. ವಿವಾಹವಾದರೂ ಭವಿಷ್ಯದ ಬಗ್ಗೆ ನಕಾರಾತ್ಮಕ ಆಲೋಚನೆಯು ಇರಲಿದೆ. ನಿಮಗೆ ಅಭದ್ರತೆಯು ಕಾಡಬಹುದು. ಮಕ್ಕಳ ಸಂತೋಷದಲ್ಲಿ ನೆಮ್ಮದಿ ಇರಲಿದೆ. ನಿಮ್ಮ ಗೌಪ್ಯ ಸಂಗತಿಗಳನ್ನು ಯಾರ ಜೊತೆಗಾದರೂ ಗೊತ್ತಿಲ್ಲದೇ ಹಂಚಿಕೊಳ್ಳುವಿರಿ. ಹೃದಯದ ಧ್ವನಿ ಕೇಳಿದರೆ ತಪ್ಪಾಗದು. ಕಲೆ, ಸಂಗೀತ ಮನಸ್ಸಿಗೆ ಔಷಧಿ. ನಿಮ್ಮ ಬಗ್ಗೆ ಬಂಧುಗಳು ಮಾತಾನಾಡಿಕೊಳ್ಳುವುದು ಗೊತ್ತಾದೀತು. ಒಳ್ಳೆಯ ಮಾತುಗಳು ಸಕಾರಾತ್ಮಕ ಪರಿಣಾಮವನ್ನು ಉಂಟುಮಾಡುವುದು.
ತುಲಾ ರಾಶಿ:
ಹೊರಗಿನ ವಸ್ತುಗಳನ್ನು ಸರಿಪಡಿಸುವುದು, ಶುಚಿಗೊಳಿಸುವುದು, ವ್ಯವಸ್ಥೆ ಮಾಡುವುದರಲ್ಲಿ ಮನಸ್ಸು ಹೂಡಿದರೆ ಒಳಗಿನ ಗೊಂದಲವೂ ನಿವಾರಣೆಯಾಗುತ್ತದೆ. ಇಂದು ನಿಮ್ಮ ಎಂತಹ ಎಚ್ಚರಿಕೆಯೂ ಹಾದಿ ತಪ್ಪಿಸೀತು. ಬೇಗನೆ ಯಶಸ್ಸು ಸಿಗುವುದೆಂದು ದಾರಿ ಬದಲಿಸಬಾರದು. ಸಂಕುಚಿತ ಸ್ವಭಾವವನ್ನು ದೂರ ಮಾಡಿಕೊಳ್ಳುವುದು ಉತ್ತಮ. ನಿಮ್ಮದಾದ ಕಾರ್ಯದಲ್ಲಿ ನೀವು ತೊಡಗಿಗೊಳ್ಳಿ. ಖಾಲಿ ಇರುವುದು ಬೇಡ. ವಾಹನ ಸಂಚಾರದಲ್ಲಿ ಅಡಚಣೆ ಆಗಲಿದೆ. ಶತ್ರುಗಳಿಂದ ನಿಮಗೆ ಆಗಬೇಕಾದ ಕಾರ್ಯವಾಗಬಹುದು. ಇಷ್ಟವಿಲ್ಲದ ವೃತ್ತಿಯನ್ನು ಅವಲಂಬಿಸಿ ಕಷ್ಟಪಡುವಿರಿ. ಸಹೋದ್ಯೋಗಿಗಳ ಅಸಹಕಾರವು ಅವರ ಮೇಲೆ ದ್ವೇಷವನ್ನು ಮೂಡಿಸಬಹುದು. ಆಕಸ್ಮಿಕವಾಗಿ ನಿಮಗೆ ಧನನಷ್ಟವಾಗಲಿದ್ದು ಚಿಂತೆ ಕಾಡುವುದು. ನಿಮ್ಮ ಸಣ್ಣ ತಪ್ಪೂ ಅಪಹಾಸ್ಯಕ್ಕೀಡಾಗುವುದು. ಗುರಿಯ ಬಗ್ಗೆ ಸರಿಯಾದ ಮಾರ್ಗದರ್ಶನ ಪಡೆದುಕೊಳ್ಳಿ. ನಿಮ್ಮ ಸಂಕಲ್ಪವು ಫಲಿಸಲಿದ್ದು ಖುಷಿಯಾಗುವುದು. ಪ್ರಯಾಣದಲ್ಲಿ ಜಾಗರೂಕತೆ ಅವಶ್ಯಕ.
ವೃಶ್ಚಿಕ ರಾಶಿ:
ಗೌರವ ಮತ್ತು ಅಪಮಾನಗಳ ಬಗ್ಗೆ ಅತಿಯಾಗಿ ಯೋಚಿಸಬೇಡಿ. ಇಂದು ವೃತ್ತಿಯಲ್ಲಿ ಸಮಯ ಬದಲಾವಣೆ ಆಗುವ ಸಾಧ್ಯತೆ ಇದೆ. ಇನ್ನೊಬ್ಬರಿಗೆ ಸಹಾಯ ಮಾಡಲು ಕೂಡಿಟ್ಟ ಹಣವನ್ನು ತೆಗೆಯಬೇಕಾದೀತು. ನಿಗದಿತ ಸಮಯಕ್ಕೆ ಕೆಲಸವಾಗದೇ ಇರುವ ಕಾರಣ ಕೆಲಸವನ್ನು ಕೊಟ್ಟವರು ನಿಮ್ಮ ಮೇಲೆ ಮುನಿಸಿಕೊಂಡಾರು. ಪ್ರೇಮವನ್ನು ಒಪ್ಪಿಕೊಳ್ಳಲಾರರು. ಆದರೆ ಪೀಡಿಸುವುದು ಬೇಡ. ಕಳೆದ ಸಮಯವನ್ನು ಮೆಲುಕು ಹಾಕುವಿರಿ. ಯಾರ ಜೊತೆಯೂ ಅಸಂಬದ್ಧ ಚರ್ಚೆಗೆ ಹೋಗುವುದು ಬೇಡ. ಜಾಡ್ಯದಿಂದ ಇಂದು ಕಛೇರಿಗೆ ವಿಳಂಬವಾಗಿ ಹೋಗುವಿರಿ. ಬೆಲೆಬಾಳುವ ವಸ್ತುಗಳನ್ನು ಖರೀದಿಸಲಿದ್ದು ಅದರ ರಕ್ಷಣೆಯನ್ನು ಮಾಡಬೇಕಾಗುವುದು. ಹೊಸ ವಿಚಾರಗಳ ಕಲಿಕೆಗೆ ಅವಕಾಶಗಳು ಸಿಗುವುದು. ವ್ಯಾಪಾರವನ್ನು ಹೆಚ್ಚಿನ ಆದಾಯ ಬರುವಂತೆ ಮಾಡಿಕೊಳ್ಳುವಿರಿ. ಹಳೆಯ ವಾಹನದಿಂದ ನಿಮಗೆ ಲಾಭವೇ ಆಗುವುದು. ಬಹಳ ದಿನಗಳಿಂದ ಕಾಣಿಸಿಕೊಳ್ಳದ ನೋವು ಕಾಣಿಸಿಕೊಳ್ಳಬಹುದು. ಸಹೋದ್ಯೋಗಿಗಳ ಜೊತೆ ಆಪ್ತವಾಗಿ ಮಾತನಾಡುವಿರಿ.
ಧನು ರಾಶಿ:
ಇಂದು ನಿಮ್ಮ ಸಂವೇದನೆಗಳು ಇತರರ ಮನಸ್ಸನ್ನು ತಿಳಿಯುವುದು. ನ್ಯಾಯಾಲಯದಲ್ಲಿ ಜಯ ಸಿಕ್ಕರೂ ಅದನ್ನು ಪಡೆಯುವ ಬಗೆ ನಿಮಗೆ ಅರಿಯದಾಗದು. ಎರಡು ದೋಣಿಯಲ್ಲಿ ಕಾಲು ಹಾಕಿ ಸಾಗಲಾಗದು. ಖರ್ಚನ್ನು ನಿಭಾಯಿಸುವ ಕೌಶಲವನ್ನು ಅನುಭವಿಗಳಿಂದ ಪಡೆಯಬೇಕು. ಸಭ್ಯತೆಯ ಮಾತಿನಿಂದ ನೀವು ಕೆಲಸಗಳನ್ನು ಮಾಡಿಸಿಕೊಳ್ಳುವಿರಿ. ಉದ್ಯೋಗದಲ್ಲಿ ಗೊಂದಲ ಬರಬಹುದು. ಕಾರ್ಯಕ್ಷೇತ್ರದಲ್ಲಿ ಹೆಚ್ಚು ಸಮಯ ಕೆಲಸವನ್ನು ಮಾಡಬೇಕಾಗುವುದು. ಹೇಗಾದರೂ ಬರುವ ಹಣದಲ್ಲಿ ಉಳಿತಾಯ ಮಾಡಿಕೊಳ್ಳಿ. ನೂತನ ವಸ್ತ್ರಗಳನ್ನು ಖರೀದಿಸುವಿರಿ. ಆರ್ಥಿಕತೆಯ ತೊಂದರೆಯಿಂದ ನಿಮ್ಮ ಕೆಲವು ವಸ್ತುಗಳನ್ನು ಮಾರಾಟ ಮಾಡುವಿರಿ. ನಿಮ್ಮ ಅಪ್ರಾಮಣಿಕತೆಯು ಕೆಲವರಿಗೆ ಗೊತ್ತಾಗಬಹುದು. ಯಾರಿಗೋ ನೀಡಿದ ಸಣ್ಣ ಸಹಾಯ ದೊಡ್ಡ ಪುಣ್ಯವಾಗಿ ಮರಳುತ್ತದೆ. ಹಠದ ಸ್ವಭಾವದಿಂದ ಸಹೋದ್ಯೋಗಿಗಳಿಗೆ ಸಹಾಯವನ್ನು ಮಾಡುವುದಿಲ್ಲ. ನಿಮ್ಮದೇ ವಸ್ತುವು ನಿಮಗೆ ಹೊಸದರಂತೆ ತೋರುವುದು. ಸ್ಪರ್ಧಾತ್ಮಕ ಚಟುವಟಿಕೆಗಳಿಗೆ ಪೋಷಕರ ಸಹಕಾರ ಸಿಗಲಿದೆ.
ಮಕರ ರಾಶಿ:
ಮನಸ್ಸು ಹಲವಾರು ವಿಚಾರಗಳ ನಡುವೆ ಓಡಾಡುತ್ತದೆ. ಒಂದೇ ಕೆಲಸಕ್ಕೆ ಒತ್ತು ಕೊಟ್ಟರೆ ಜಯ ಖಚಿತ. ಜಾಣ ಕಿವುಡುತನವನ್ನು ತೋರಿಸುವಿರಿ. ಇಂದು ನಿಮಗೆ ನ್ಯಾಯಾಲಯದ ವಿಚಾರದಲ್ಲಿ ಬೇಸರವೆನಿಸಬಹುದು. ಸಾಲವನ್ನು ಮಾಡಬೇಕಾಗಿಬರಬಹುದು. ಅಪರಿಚಿತರ ಜೊತೆ ವಿವಾದಕ್ಕೆ ಎಡೆಮಾಡಿಕೊಡುವಿರಿ. ಸಹೋದರನಿಂದ ಯಾವ ಸಹಕಾರವನ್ನು ನಿರೀಕ್ಷಿಸದೇ ಕಾರ್ಯಪ್ರವೃತ್ತರಾಗುವಿರಿ. ನಿಮ್ಮ ಸ್ವಭಾವವನ್ನು ಮರೆಮಾಚುವುದು ಕಷ್ಟಸಾಧ್ಯ. ಅಚಾತುರ್ಯದಿಂದ ತಪ್ಪು ನಡೆಯಬಹುದು. ಹಳೆಯ ಹೂಡಿಕೆಯು ಪ್ರಯೋಜನಕ್ಕೆ ಬರಲಿದೆ. ಕಛೇರಿಯ ಒತ್ತಡದಿಂದ ವಿರಾಮವನ್ನು ಪಡೆದು ಕುಟುಂಬಕ್ಕೆ ಸಮಯವನ್ನು ಕೊಡುವಿರಿ. ಬರವಣಿಗೆ, ಮಾತು, ಬೋಧನೆಗೆ ಶುಭ. ನ್ಯಾಯವನ್ನು ಬಿಟ್ಟು ವರ್ತಿಸುವುದು ಬೇಡ. ನಂಬಿಕೆಯನ್ನು ಉಳಿಸಿಕೊಳ್ಳಲು ನೀವು ಕಷ್ಟಪಡಬೇಕಾದೀತು. ಹೊಸ ಮಿತ್ರರ ಜೊತೆ ಸಮಾಲೋಚನೆಯನ್ನು ಮಾಡುವಿರಿ. ಬಹಳ ದಿನಗಳ ಅನಂತರ ಮನೆಯ ಬಗ್ಗೆ ಆಲೋಚನೆ ಬರಲಿದೆ. ನಿರುದ್ಯೋಗವೇ ನಿಮಗೆ ಅಭ್ಯಾಸವಾಗುವ ಸಾಧ್ಯತೆ ಇದೆ.
ಕುಂಭ ರಾಶಿ:
ಕುಟುಂಬದಲ್ಲಿ ಆಹಾರ, ನಿದ್ರೆ, ದಿನಚರಿಯಲ್ಲಿ ಶಿಸ್ತು ತರಬೇಕಾದ ದಿನ. ಸರಳತೆ ನಿಮ್ಮ ರಕ್ಷಾಕವಚ. ಸ್ಥಿರಾಸ್ತಿಯಿಂದ ಕೆಲವು ಲಾಭಗಳೂ ಆಗಲಿವೆ. ನಿಮ್ಮ ಗುರಿಯನ್ನು ಇಂದು ಯಾರಾದರೂ ಬದಲಿಸಬಹುದು. ಯಾರಾದರೂ ನಿಮ್ಮ ಕಿವಿಕಚ್ಚಬಹುದು. ನಿಮ್ಮ ಮನಸ್ಸು ಹೊಸ ಪರಿವರ್ತನೆಯ ಕಡೆ ಹೊರಳುವುದು. ಅಶುಭವಾರ್ತೆಗೆ ನೀವು ಕಿವಿಯಾಗಬೇಕಾದೀತು. ಆಸ್ತಿಯನ್ನು ಪಡೆಯುವ ಬಗ್ಗೆ ಉತ್ಸಾಹವಿರಲಿದೆ. ಸುಲಭವಾಗಿ ದೊರೆಯುವುದನ್ನು ಇಂಸು ಇಷ್ಟಪಡುವುದಿಲ್ಲ. ಒಂಟಿತನವು ನಿಮಗೆ ಅಭ್ಯಾಸವಾಗಲಿದ್ದು ನಿಶ್ಚಿಂತೆಯಿಂದ ಇರುವಿರಿ. ಲೆಕ್ಕ ಶೋಧಕರು ಹೆಚ್ಚಿನ ಒತ್ತಡದಲ್ಲಿ ಇರುವರು. ಅನವಶ್ಯಕ ಖರ್ಚನ್ನು ತಡೆಯುವುದೇ ಸಾಧನೆ. ಅಪರಿಚಿತರ ಜೊತೆ ಸಲುಗೆಯ ವ್ಯವಹಾರವು ಬೇಡ. ಸಂಗಾತಿಯ ಮಾತು ನಿಮಗೆ ಇಷ್ಟವಾಗದಿರುವುದು. ವಾಹನ ಖರೀದಿಗೆ ನಿಮ್ಮ ಸಹಮತವಿರದು. ನಿಜವನ್ನು ಮುಚ್ಚಿಡಬೇಕಾಗುವುದು. ಉದ್ವೇಗದಲ್ಲಿ ಏನಾದರೂ ಹೇಳುವಿರಿ. ಸಹನೆಯು ಕೈತಪ್ಪಿ ಹೋಗುವುದು.
ಮೀನ ರಾಶಿ:
ಇಂದು ನಿಮ್ಮ ಕರ್ತವ್ಯಶಕ್ತಿ ಜಾಗೃತವಾಗುತ್ತದೆ. ತಡವಾಗುತ್ತಿದ್ದ ಕೆಲಸ ಒಂದು ಚಿಕ್ಕ ಪ್ರಯತ್ನದಿಂದ ಚಲನೆ ಪಡೆಯುತ್ತದೆ. ನಕಾರಾತ್ಮಕ ಆಲೋಚನೆಯಿಂದಲೇ ನೀವು ದೂರವಾಗುವುದು ಉತ್ತಮ. ನಿಮಗೆ ಸಿಗುವ ಕೆಲವು ಜವಾಬ್ದಾರಿಗಳಲ್ಲಿ ಹಿನ್ನಡೆಯಾಗಲಿದೆ. ಅತಿಯಾದ ನಿದ್ರೆಯಿಂದ ಮನಸ್ಸು ಕುಗ್ಗುವುದು. ವ್ಯಾಪಾರದಲ್ಲಿ ಶತ್ರುಗಳು ಕಾಣಿಸಿಕೊಳ್ಳುವರು. ಸಂಗಾತಿಗೆ ನಿಮ್ಮ ವಾಸ್ತವದ ಉದ್ಯೋಗದ ವಾಸ್ತವ ಚಿತ್ರಣವನ್ನು ಕೊಡುವಿರಿ. ಆಕಸ್ಮಿಕವಾಗಿ ಸ್ನೇಹಿತರಿಂದ ಉಡುಗೊರೆ ಸಿಗಲಿದೆ. ಧಾರ್ಮಿಕ ಶ್ರದ್ಧೆಯಿಂದ ಅನುಕೂಲತೆ ಇರಲಿದೆ. ಮಿತ್ರರ ಧನಸಹಾಯದಿಂದ ವಾಹನವನ್ನು ಖರೀದಿಸುವಿರಿ. ವಿದೇಶದ ಜೊತೆ ವ್ಯಾಪಾರದ ಸಂಪರ್ಕವನ್ನು ಬೆಳೆಸಿಕೊಳ್ಳುವಿರಿ. ಶರೀರದ ದಣಿವು ಕಂಡರೂ ಮನಸ್ಸು ಹೋರಾಡಲು ಸಿದ್ಧ. ನಿಮ್ಮಕೆಲಸದ ಬಗ್ಗೆ ಹಗುರವಾಗಿ ಮಾತನಾಡಿಯಾರು. ಶುಭಸಮಯವನ್ನು ನಿರೀಕ್ಷೆಯಷ್ಟೇ ಮಾಡಬಹುದು. ಪಾಪಿ ಸಮುದ್ರಕ್ಕಿಳಿದರೂ ಮೊಣಕಾಲು ನೀರು ಎಂಬಂತಾಗುವುದು. ನಿಮ್ಮಷ್ಟಕ್ಕೆ ಕಾರ್ಯದಲ್ಲಿ ಮಗ್ನರಾಗಿರುವಿರಿ. ಶತ್ರುಗಳು ಸಂಧಾನಕ್ಕೆ ಕರೆದರೆ ಮಾತ್ರ ಹೋಗಿ.
19 ಡಿಸೆಂಬರ್ 2025ರ ಶುಕ್ರವಾರದ ಪಂಚಾಂಗ:
ಶಾಲಿವಾಹನ ಶಕೆ ೧೯೪೮ರ ವಿಶ್ವಾವಸು ಸಂವತ್ಸರದ ದಕ್ಷಿಣಾಯನ, ಋತು : ಹೇಮಂತ, ಚಾಂದ್ರ ಮಾಸ : ಮಾರ್ಗಶೀರ್ಷ, ಸೌರ ಮಾಸ : ಧನು, ಮಹಾನಕ್ಷತ್ರ : ಮೂಲಾ, ವಾರ : ಶುಕ್ರ, ಪಕ್ಷ : ಕೃಷ್ಣ, ತಿಥಿ : ಅಮಾವಾಸ್ಯಾ, ನಿತ್ಯನಕ್ಷತ್ರ : ಜ್ಯೇಷ್ಠಾ, ಯೋಗ : ಅತಿಗಂಡ, ಕರಣ : ವಣಿಜ, ಸೂರ್ಯೋದಯ – 06 – 44 am, ಸೂರ್ಯಾಸ್ತ – 05 – 59 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 10:57 – 12:22, ಯಮಗಂಡ ಕಾಲ 15:10- 16:35, ಗುಳಿಕ ಕಾಲ 08:09 – 09:33
ಬಹಳ ಚಟುವಟಿಕೆಯಿಂದ ಈ ದಿನ ಕಳೆದು ಹೋಗುತ್ತದೆ. ಸೋಷಿಯಲ್ ಮೀಡಿಯಾ ಇನ್ ಫ್ಲುಯೆನ್ಸರ್ ಗಳಿಗೆ, ಮಾರಾಟ ವಿಭಾಗದಲ್ಲಿ ಕಾರ್ಯ ನಿರ್ವಹಿಸುವವರಿಗೆ, ವ್ಯಾಪಾರ- ವ್ಯವಹಾರ ಮಾಡುತ್ತಾ ಇರುವವರಿಗೆ ಆದಾಯದಲ್ಲಿ ಹೆಚ್ಚಳ ಆಗುವಂಥ ಯೋಗ ಇದೆ. ನಿಮಗೆ ಹೊಸದಾಗಿ ಪರಿಚಯ ಆಗುವ ವ್ಯಕ್ತಿಗಳ ಮೂಲಕವಾಗಿ ಭವಿಷ್ಯದಲ್ಲಿ ದೊಡ್ಡ ಮಟ್ಟದ ಅನುಕೂಲ ಆಗಲಿದೆ. ಲೇವಾದೇವಿ ವ್ಯವಹಾರ ಮಾಡುವವರಿಗೆ ಕೈ ಸೇರಬೇಕಾದ ದೊಡ್ಡ ಮೊತ್ತ ಬರುವಂಥ ಯೋಗ ಇದೆ. ದೂರದ ಪ್ರದೇಶ ಅಥವಾ ದೂರದ ದೇಶದಲ್ಲಿ ವಾಸ ಮಾಡುತ್ತಾ ಇರುವ ಸಂಬಂಧಿಕರಿಂದ ಸಂತೋಷದ ಸುದ್ದಿ ಬರುವಂಥ ಸಾಧ್ಯತೆ ಇದೆ. ನಿಮ್ಮ ಎದುರಿಗೆ ಇರುವ ವ್ಯಕ್ತಿಗಳು ಸಂಪೂರ್ಣವಾಗಿ ವಿವರ ನೀಡುವ ತನಕ ಅಭಿಪ್ರಾಯವನ್ನು ಹೇಳುವುದಕ್ಕೆ ಹೋಗಬೇಡಿ. ನೀರು ಸೇವನೆ ಸರಿಯಾದ ಪ್ರಮಾಣದಲ್ಲಿ ಮಾಡುವುದಕ್ಕೆ ಆದ್ಯತೆ ನೀಡಿ.
ನವ ವಿವಾಹಿತರಿಗೆ ಸಂತೋಷವಾಗಿ ಕಳೆಯುವಂಥ ಯೋಗ ಇದೆ. ಪ್ರೀತಿ- ಪ್ರೇಮದಲ್ಲಿ ಇರುವವರು ಮನೆಯಲ್ಲಿ ಈ ವಿಚಾರವನ್ನು ಪ್ರಸ್ತಾವ ಮಾಡುವ ಬಗ್ಗೆ ನಿರ್ಧಾರ ಮಾಡಲಿದ್ದೀರಿ. ವಿವಾಹಿತರು ಇದ್ದಲ್ಲಿ ಸಂಗಾತಿ ಮೂಲಕ ಹಣಕಾಸಿನ ನೆರವು ದೊರೆಯಲಿದೆ. ಕಲೆ, ಫ್ಯಾಷನ್, ಸೌಂದರ್ಯ, ವಿನ್ಯಾಸ ಈ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಶುಭ ಫಲ ಸಿಗುತ್ತದೆ. ಇಷ್ಟು ಸಮಯ ಸಾಧಿಸಲು ಸಾಧ್ಯವಾಗಿಲ್ಲ ಎಂದಾಗಿದ್ದಲ್ಲಿ ಹಣಕಾಸಿನಲ್ಲಿ ಸ್ಥಿರತೆ ಕಂಡುಬರುತ್ತದೆ. ಮನೆಗೆ ಸಂಬಂಧಿಸಿದಂತೆ ತಿಂಗಳಾ ತಿಂಗಳು ಆಗುವ ದಿನಸಿ ಖರ್ಚು ಹೆಚ್ಚಾಗುವ ಸಾಧ್ಯತೆ ಇದೆ. ಇನ್ನು ನೀವು ಬಹಳ ಇಷ್ಟ ಪಡುವ ವ್ಯಕ್ತಿಗಳ ಜೊತೆಗೆ ಜಾಸ್ತಿ ಸಮಯ ಕಳೆಯುವ ಅವಕಾಶ ಸಿಗುತ್ತದೆ. ಚರ್ಮ ಅಥವಾ ಕಣ್ಣು ಸಂಬಂಧಿತ ತೊಂದರೆ ಕಾಣಿಸಬಹುದು. ಈ ರೀತಿ ಆದಲ್ಲಿ ಅಲಕ್ಷ್ಯ ಬೇಡ. ಧಾರ್ಮಿಕ ಕಾರ್ಯಗಳು ಅಥವಾ ದಾನ ಮನಸ್ಸಿಗೆ ತೃಪ್ತಿ ನೀಡುತ್ತದೆ. ಒಟ್ಟಾರೆ ಈ ದಿನವು ಉದ್ಯೋಗ- ಜೀವನ ಸಮತೋಲನದಿಂದ ಸಾಗುತ್ತದೆ.
ಸರಿ- ತಪ್ಪುಗಳ ಬಗ್ಗೆ ಆತ್ಮವಿಶ್ಲೇಷಣೆ ಮಾಡಿಕೊಳ್ಳುವುದಕ್ಕೆ ಸೂಕ್ತವಾದ ದಿನ ಇದಾಗಿರುತ್ತದೆ. ಗಂಭೀರವಾದ ಸಂಗತಿಗಳ ಬಗ್ಗೆ ಪ್ಲಾನಿಂಗ್- ಬಜೆಟ್ ಸಿದ್ಧ ಮಾಡಿಕೊಳ್ಳುವುದಕ್ಕಾಗಿ ನೀವು ಒಬ್ಬರೇ ದೂರದ ಪ್ರದೇಶಗಳಿಗೆ ಏಕಾಂಗಿಯಾಗಿ ತೆರಳುವುದಕ್ಕೆ ನಿರ್ಧಾರ ಮಾಡಲಿದ್ದೀರಿ. ಉದ್ಯೋಗ ಸ್ಥಳದಲ್ಲಿ ನಿಮ್ಮ ಸಾಮರ್ಥ್ಯವನ್ನು ಹೀಗಳೆದು ಮಾತನಾಡುವುದರಿಂದ ಏಕಾಗ್ರತೆ ಕಳೆದುಕೊಳ್ಳುವಂತೆ ಆಗಲಿದೆ. ತುಂಬ ಮುಖ್ಯವಾದ ಕೆಲಸ ಮಾಡುತ್ತಿದ್ದೀರಿ ಅಂತಾದಲ್ಲಿ ದಿನ ಮಟ್ಟಿಗೆ ಅದನ್ನು ಮುಂದೂಡುವುದು ಕ್ಷೇಮ. ನೀವು ದೊಡ್ಡ ಪ್ರಮಾಣದಲ್ಲಿ ಲಾಭ ಬರಬಹುದು ಎಂದುಕೊಂಡಿದ್ದು ಅಂದುಕೊಂಡ ದೊಡ್ಡ ಮಟ್ಟಕ್ಕೆ ಬಾರದಂತೆ ಆಗಲಿದೆ. ಅಥವಾ ಇಷ್ಟರಲ್ಲಾಗಲೇ ನಿಮ್ಮ ಕೈ ಸೇರಬೇಕಾಗಿದ್ದ ಲಾಭದ ಮೊತ್ತ ಮತ್ತೂ ನಿಧಾನ ಆಗುತ್ತದೆ ಎಂಬ ಮಾಹಿತಿ ದೊರೆಯಲಿದೆ. ಗಂಟಲಿನ ನೋವು ಕಾಡಲಿದೆ. ಜನರ ಮಧ್ಯೆ ಇರುವುದು ಕಿರಿಕಿರಿ ಉಂಟು ಮಾಡಲಿದ್ದು, ಸಾಮಾಜಿಕವಾಗಿ ಹೆಚ್ಚು ಸಕ್ರಿಯವಾಗಲು ಮನಸ್ಸು ಇರುವುದಿಲ್ಲ.
ಎಲ್ಲ ಸನ್ನಿವೇಶದಲ್ಲಿ ಹಾಕಿದ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ ಎಂಬ ಖಾತ್ರಿ ಇರುವುದಿಲ್ಲ. ನಿರೀಕ್ಷೆ ಹೆಚ್ಚಾದಷ್ಟೂ ಬೇಸರ ಸಹ ಪಡುವಂತೆ ಆಗಲಿದೆ. ಉದ್ಯೋಗ ಸ್ಥಳದಲ್ಲಿ ಒತ್ತಡದ ಸನ್ನಿವೇಶಗಳನ್ನು ಎದುರಿಸುವಂತೆ ಆಗಲಿದೆ. ಚಿನ್ನ- ಬೆಳ್ಳಿ ಅಥವಾ ವಜ್ರಾಭರಣ ಖರೀದಿಗಾಗಿ ಹೆಚ್ಚಿನ ಖರ್ಚು ಮಾಡುವ ಯೋಗ ಇದೆ. ಒಂದು ವೇಳೆ ಕ್ರೆಡಿಟ್ ಕಾರ್ಡ್ ಬಳಸುತ್ತೀರಿ ಎಂದಾದಲ್ಲಿ ಖರ್ಚಿನ ಮೇಲೆ ಹಿಡಿತ ಇಟ್ಟುಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಸರ್ಕಾರದಿಂದ ಆಗಬೇಕಾದ ಪೋಡಿ, ಸರ್ವೇ, ಖಾತಾ- ಕಂದಾಯದ ಕೆಲಸಗಳಿಗೆ ಪದೇ ಪದೇ ಅಲೆದಾಡುವಂತೆ ಆಗಲಿದೆ. ಮುಖ್ಯವಾದ ಎಲ್ಲ ದಾಖಲೆಗಳನ್ನು ಒಮ್ಮೆಗೇ ತೆಗೆದುಕೊಂಡು ಹೋಗುವುದು ಒಳ್ಳೆಯದು. ನೀವು ಯಾರಿಗಾದರೂ ಹಣ ನೀಡುವುದಾಗಿ ಮಾತು ನೀಡಿದ್ದಲ್ಲಿ ಅದರ ಕಡೆಗೆ ಗಮನ ನೀಡಬೇಕು. ದೇಹದ ತೂಕ ಹೆಚ್ಚಾಗಿದ್ದೀರಿ ಅಂತಾದಲ್ಲಿ ನಿಯಮಿತವಾದ ವ್ಯಾಯಾಮ ಮಾಡುವುದಕ್ಕೆ ಆರಂಭಿಸಿ.
ನಿಮಗೇನೋ ಅತಿ ಉತ್ಸಾಹ ಇರುತ್ತದೆ. ಆದರೆ ಸುತ್ತಮುತ್ತಲಿನವರ ಪರಿಸ್ಥಿತಿ, ಮನಸ್ಥಿತಿಯನ್ನು ಸಹ ಅರ್ಥ ಮಾಡಿಕೊಂಡು ಮಾತುಕತೆ ಆಡುವುದು ಒಳ್ಳೆಯದು. ಹಣಕಾಸಿನ ವಿಚಾರ ಮಾತನಾಡುತ್ತೀರಿ ಅಂತಾದಲ್ಲಿ ಸಾಧ್ಯಾಸಾಧ್ಯತೆ ಬಗ್ಗೆ ಸ್ಪಷ್ಟ ಚಿತ್ರಣ ಇರಬೇಕು. ಮನೆ ನಿರ್ಮಾಣ, ಆಸ್ತಿ ಖರೀದಿಯ ಮಾತುಕತೆಗೆ ತೆರಳುತ್ತಿದ್ದೀರಿ ಅಂತಾದಲ್ಲಿ ಮನೆ ದೇವರನ್ನು ಮನಸ್ಸಿನಲ್ಲಿ ಸ್ಮರಣೆ ಮಾಡಿಕೊಂಡು ಮುಂದುವರಿಯಿರಿ. ಹಳೇ ಸ್ನೇಹಿತರೊಬ್ಬರು ಮತ್ತೆ ಈ ದಿನ ಭೇಟಿ ಆಗುವ ಮೂಲಕ ಒಂದು ಬಗೆಯ ಸಂತೋಷದ ಮನಸ್ಥಿತಿ ನಿಮ್ಮದಾಗಿರುತ್ತದೆ. ಜಿಮ್, ಯೋಗ ತರಬೇತಿ ತರಗತಿಗಳನ್ನು ನಡೆಸುತ್ತಾ ಇರುವವರು ಆದಾಯಕ್ಕೆ ಹೆಚ್ಚುವರಿ ಮೂಲಗಳನ್ನು ಮಾಡಿಕೊಳ್ಳುವ ಬಗ್ಗೆ ಆಲೋಚನೆಯನ್ನು ಮಾಡಲಿದ್ದೀರಿ. ಕೃಷಿಕರು ಕುಟುಂಬ ಆಸ್ತಿ ವ್ಯಾಜ್ಯಗಳನ್ನು ಬಗೆಹರಿಸುವುದಕ್ಕೆ ಆದ್ಯತೆಯನ್ನು ನೀಡಲಿದ್ದೀರಿ.
ಶ್ರಮ ಹಾಗೂ ಶಿಸ್ತಿನ ಜೀವನಕ್ಕೆ ಪ್ರಾಮುಖ್ಯ ನೀಡುವ ದಿನ ಇದಾಗಿರುತ್ತದೆ. ನೀವು ಕೈಗೆತ್ತಿಕೊಂಡಿರುವ ಕೆಲಸ- ಕಾರ್ಯಗಳು ನಿಧಾನವಾಗಿ ಮುಂದಕ್ಕೆ ಸಾಗಿದರೂ ದೃಢವಾಗಿ ಗುರಿಯತ್ತ ತಲುಪುವ ಸೂಚನೆ ದೊರೆಯುತ್ತದೆ. ಸರ್ಕಾರಿ ಕೆಲಸಗಳು ಹಾಗೂ ಕಾನೂನಿಗೆ ಸಂಬಂಧಿಸಿದ ವಿಷಯಗಳಲ್ಲಿ ಸ್ವಲ್ಪ ಮಟ್ಟಿಗೆ ವಿಳಂಬ ಆಗಬಹುದು. ಆದರೆ ತಾಳ್ಮೆ- ಸಂಯಮದಿಂದ ಮುಂದುವರಿದಲ್ಲಿ ಯಶಸ್ವಿಯಾಗಿ ಕಾರ್ಯಗಳು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಸಂಬಂಧಗಳಲ್ಲಿ ಸಹನೆ ಕಾಯ್ದುಕೊಳ್ಳುವುದು ಮುಖ್ಯ. ಅನಿರೀಕ್ಷಿತ ಖರ್ಚುಗಳಿಂದ ಕಂಗಾಲು ಆಗುವಂತೆ ಆಗಲಿದೆ. ಕುಟುಂಬಕ್ಕೆ ಆಗುವ ಖರ್ಚಿನ ಪ್ರಮಾಣದಲ್ಲಿ ದೊಡ್ಡ ಏರಿಕೆ ಆಗುವುದರಿಂದ ಸ್ವಲ್ಪ ಮಟ್ಟಿಗೆ ಸಾಲ ಮಾಡಬೇಕಾಗುತ್ತದೆ, ಅಥವಾ ಕ್ರೆಡಿಟ್ ಕಾರ್ಡ್ ಬಳಸುವ ಅನಿವಾರ್ಯ ಸೃಷ್ಟಿ ಆಗಲಿದೆ. ದ್ವಿಚಕ್ರ ವಾಹನ ಹೆಚ್ಚು ಬಳಸುತ್ತೀರಿ ಅಂತಾದಲ್ಲಿ ದೇಹಾಯಾಸ, ಬೆನ್ನು ನೋವು ಕಾಡಬಹುದು. ನಿಮ್ಮ ಶ್ರಮಕ್ಕೆ ಮೆಚ್ಚುಗೆ ಮಾತುಗಳು ಕೇಳಿಬರಲಿವೆ.
ನಿಮ್ಮ ಬುದ್ಧಿಶಕ್ತಿ ಪ್ರಖರವಾಗಿ ಇರುತ್ತದೆ. ಇನ್ನು ನಿಮ್ಮ ಸಂವಹನ ಕೌಶಲವು ಬಹಳ ಚುರುಕಾಗಿ ಇರುತ್ತದೆ. ಮಾಧ್ಯಮ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುವವರಿಗೆ ಆದಾಯದಲ್ಲಿ ಹೆಚ್ಚಳ ಆಗಲಿದೆ. ಶಿಕ್ಷಣ, ತರಬೇತಿ, ಬರವಣಿಗೆ ಸಂಬಂಧಿತ ಕೆಲಸಗಳಲ್ಲಿ ತೊಡಗಿಕೊಂಡವರಿಗೆ ಉತ್ತಮವಾದ ಫಲ ಸಿಗುತ್ತದೆ. ನಿಮ್ಮಲ್ಲಿ ಕೆಲವರಿಗೆ ಬಡ್ತಿ, ವೇತನ ಹೆಚ್ಚಳದ ಬಗ್ಗೆ ಇತರರ ಮೂಲಕ ಸುಳಿವು ದೊರೆಯಲಿದೆ. ಹಣಕಾಸಿನ ವಿಷಯದಲ್ಲಿ ಲಾಭದ ಅವಕಾಶ ಇದ್ದರೂ ಅದಕ್ಕಾಗಿ ಮಾಡುವ ಪ್ರಯತ್ನದಲ್ಲಿ ಖರ್ಚು ಕೂಡ ಹೆಚ್ಚಾಗುವ ಸಾಧ್ಯತೆ ಇದೆ. ಹೂಡಿಕೆ ಮಾಡುವ ಮೊದಲು ಎರಡು ಬಾರಿ ಯೋಚಿಸಿ. ಕುಟುಂಬದಲ್ಲಿ ಸಂತಸದ ವಾತಾವರಣ ಇರುತ್ತದೆ. ಸ್ನೇಹಿತರೊಂದಿಗೆ ಮಾತುಕತೆ ನಿಮಗೆ ಹೊಸ ಆಲೋಚನೆಗಳನ್ನು ನೀಡುತ್ತದೆ. ಆರೋಗ್ಯದ ವಿಷಯದಲ್ಲಿ ಹೊಟ್ಟೆ ಸಂಬಂಧಿತ ಸಮಸ್ಯೆ ಕಾಡಬಹುದು. ಆಹಾರದಲ್ಲಿ ನಿಯಮ ಪಾಲಿಸುವುದು ಅವಶ್ಯ. ದಿನದ ಅಂತ್ಯಕ್ಕೆ ಆತ್ಮತೃಪ್ತಿ ದೊರೆಯುವ ಸಾಧ್ಯತೆ ಇದೆ.
ಭಾವನಾತ್ಮಕ ದೃಷ್ಟಿಯಿಂದ ಏರುಪೇರಿನಿಂದ ಕೂಡಿರುವ ದಿನ ಇದಾಗಿರುತ್ತದೆ. ಸಣ್ಣ- ಪುಟ್ಟ ವಿಚಾರಗಳಿಗೂ ಮನಸ್ಸು ತೀವ್ರವಾಗಿ ಪ್ರತಿಕ್ರಿಯಿಸುವ ಸಾಧ್ಯತೆ ಇದೆ. ಆದ್ದರಿಂದ ನಿರ್ಧಾರಗಳಲ್ಲಿ ಎಚ್ಚರಿಕೆ ಅಗತ್ಯ. ಕುಟುಂಬದಲ್ಲಿನ ಕೆಲವು ಗೊಂದಲಗಳು ಮಾತುಕತೆ ಮೂಲಕ ಬಗೆಹರಿಸಬಹುದು. ನೀವು ಉದ್ಯೋಗಸ್ಥರಾಗಿದ್ದಲ್ಲಿ ಸವಾಲಿನಿಂದ ಕೂಡಿದ ಪ್ರಾಜೆಕ್ಟ್ ಮುನ್ನಡೆಸುತ್ತಾ ಇದ್ದೀರಿ ಅಂತಾದಲ್ಲಿ ಸಹೋದ್ಯೋಗಿಗಳ ಸಹಕಾರ ಸಿಗುತ್ತದೆ. ನಿಮಗೇ ಅನುಭವ ಆಗುವ ರೀತಿಯಲ್ಲಿ ಹಣಕಾಸಿನಲ್ಲಿ ನಿಧಾನವಾದ ಪ್ರಗತಿ ಕಂಡುಬರುತ್ತದೆ. ಈಗಾಗಲೇ ಕೆಲಸ ಮಾಡಿಯಾಗಿದೆ, ಬಹಳ ಸಮಯದಿಂದ ಬರಬೇಕಾದ ಹಣ ಬಂದಿಲ್ಲ ಎಂದಾದಲ್ಲಿ ಹಳೆಯ ಬಾಕಿ ಹಣ ವಸೂಲಿ ಆಗುವ ಸಾಧ್ಯತೆ ಇದೆ. ದಾಂಪತ್ಯ ಜೀವನದಲ್ಲಿ ಪರಸ್ಪರ ಅರ್ಥಮಾಡಿಕೊಳ್ಳುವುದು ಅಗತ್ಯ. ನಿದ್ದೆಯ ಕೊರತೆ ಕಾಡಬಹುದು. ಸಂಗೀತ, ಪ್ರಾರ್ಥನೆ ಅಥವಾ ಧ್ಯಾನದಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ.
ಈ ದಿನ ನಿಮ್ಮಲ್ಲಿನ ನಾಯಕತ್ವ ಗುಣವು ಹೆಚ್ಚು ಪ್ರಚಾರಕ್ಕೆ ಬರುತ್ತವೆ. ಉದ್ಯೋಗ ಸ್ಥಳದಲ್ಲಿ ನೀವು ತೆಗೆದುಕೊಳ್ಳುವ ನಿರ್ಧಾರಗಳು ಇತರರಿಗೆ ಮಾರ್ಗದರ್ಶನ ಆಗಲಿದೆ. ಮೇಲಧಿಕಾರಿಗಳ ಗಮನ ನಿಮ್ಮತ್ತ ಸೆಳೆಯುವ ಸಾಧ್ಯತೆ ಇದೆ. ಹೊಸ ಜವಾಬ್ದಾರಿಗಳು ನಿಮಗೆ ವಹಿಸಬಹುದು. ನೀವು ಯಾವುದೇ ಕ್ಷೇತ್ರದಲ್ಲಿ ಕಾರ್ಯ ನಿರ್ವಹಿಸುತ್ತಾ ಇದ್ದರೂ ಹಣಕಾಸಿನ ವಿಷಯದಲ್ಲಿ ಸ್ಥಿರತೆ ಕಂಡುಬರುತ್ತದೆ. ಆ ಕಾರಣದಿಂದಾಗಿ ಅನಗತ್ಯವಾಗಿ ಖರ್ಚಿನ ಪ್ರಮಾಣವನ್ನು ಹೆಚ್ಚು ಮಾಡಿಕೊಳ್ಳಬೇಡಿ. ಕುಟುಂಬದ ಹಿರಿಯರ ಸಲಹೆ ಕೌಟುಂಬದಲ್ಲಿನ ಹಣಕಾಸಿನ ನಿರ್ಧಾರ ಮಾಡಲು ಉಪಯುಕ್ತ ಆಗುತ್ತದೆ. ಆರೋಗ್ಯದ ವಿಷಯದಲ್ಲಿ ಮಿಶ್ರ ಫಲವನ್ನು ಪಡೆಯಲಿದ್ದೀರಿ. ನಿಮ್ಮಲ್ಲಿ ಕೆಲವರಿಗೆ ತಲೆನೋವು ಅಥವಾ ಒತ್ತಡ ಕಾಡಬಹುದು. ಸ್ವಲ್ಪ ವಿಶ್ರಾಂತಿ ಮತ್ತು ಧ್ಯಾನ ಮಾಡುವುದರಿಂದ ಮಾನಸಿಕ ಶಾಂತಿ ದೊರೆಯುತ್ತದೆ. ಆತುರದ ಮಾತುಗಳಿಂದ ಅವಕಾಶ ಕಳೆದುಕೊಳ್ಳುವಂತೆ ಆಗಲಿದೆ, ಎಚ್ಚರಿಕೆ.
ಬೆಳಗಾವಿ, (ಡಿಸೆಂಬರ್ 18): ಕರ್ನಾಟಕ ಕಾಂಗ್ರೆಸ್ನಲ್ಲಿನ (Karnataka Congress) ಬಣ ರಾಜಕೀಯ ಬ್ರೇಕ್ ಫಾಸ್ಟ್ನಿಂದ ಡಿನ್ನರ್ ವರೆಗೂ (dinner meeting) ಬಂದು ನಿಂತಿದೆ. ಹೌದು.. ಸಿಎಂ ಕುರ್ಚಿಗಾಗಿ ಸಿಎಂ -ಡಿಸಿಎಂ ನಡುವೆ ಮುಸುಕಿನ ಗುದ್ದಾಟ ನಡೆದಿದ್ದು, ಡಿಕೆ ಶಿವಕುಮಾರ್ ಹಾಗೂ ಸಿದ್ದರಾಮಯ್ಯ (Siddaramaiah) ಬಣದ ಡಿನ್ನರ್ ಪಾಲಿಟಿಕ್ಸ್ ಮುಂದುವರೆದಿದೆ. ಬೆಳಗಾವಿ ಅಧಿವೇಶದ ಸಂದರ್ಭದಲ್ಲೂ ಸಹ ಜಿದ್ದಿಗೆ ಬಿದ್ದವರಂತೆ ಉಭಯ ನಾಯಕರ ಬಣದಿಂದ ಒಬ್ಬರಾದ ಮೇಲೆ ಒಬ್ಬರಿಂದ ಡಿನ್ನರ್ ಮೀಟಿಂಗ್ ಆಯೋಜನೆಗೊಳ್ಳುತ್ತಿವೆ. ಇದಕ್ಕೆ ಪೂರಕವೆಂಬಂತೆ ಇಂದು (ಡಿಸೆಂಬರ್ 18) ಸಚಿವ ಸತೀಶ್ ಜಾರಕಿಹೊಳಿ (Satish Jarkiholi) ತಮ್ಮ ಬೆಳಗಾವಿ ನಿವಾಸದಲ್ಲಿ ಸಿಎಂ ಸೇರಿದಂತೆ ಇತರೆ ತಮ್ಮ ಬಣದ ನಾಯಕರಿಗೆ ಔತಣಕೂಟ ಏರ್ಪಡಿಸಲಾಗಿದ್ದು, ಬೆಳಗಾವಿಯ ಕುವೆಂಪು ನಗರದಲ್ಲಿರುವ ಸತೀಶ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಜತೆಗೆ ಸಚಿವರಾದ ಡಾ.ಹೆಚ್.ಸಿ.ಮಹದೇವಪ್ಪ, ಜಮೀರ್ ಅಹ್ಮದ್ ಖಾನ್, ಎಂ.ಸಿ.ಸುಧಾಕರ್ ಆಗಮಿಸಿ ಡಿನ್ನರ್ನಲ್ಲಿ ಭಾಗಿಯಾಗಿದ್ದಾರೆ. ಇನ್ನು ಡಿನ್ನರ್ಗೆ ಬಗೆ ಬಗೆಯ ಖಾದ್ಯಗಳನ್ನು ತಯಾರಿಸಲಾಗಿದೆ. ಅದರಲ್ಲೂ ಉತ್ತರ ಕರ್ನಾಟಕದ ಶೈಲಿ ಊಟ ಸಹ ಒಳಗೊಂಡಿದೆ.
ಅನಾರೋಗ್ಯದ ನಡುವೆ ಸಿಎಂ, ಆಪ್ತನ ಔತಣಕೂಟಕ್ಕೆ ಆಗಮಿಸಿದ್ದಾರೆ. ಆದ್ರೆ, ಸಿದ್ದರಾಮಯ್ಯನವರಿಗೆ ಹೊಟ್ಟೆ ಸರಿ ಇಲ್ಲದಿದ್ದರಿಂದ ಅವರು ನಾನ್ ವೆಜ್ ಊಟ ಮಾಡುತ್ತಾರೋ ಇಲ್ವೋ ಗೊತ್ತಿಲ್ಲ. ಸದ್ಯಕ್ಕಂತೂ ಈ ಡಿನ್ನರ್ ಮೀಟಿಂಗ್ನಲ್ಲಿ ಭಾಗಿಯಾಗಿದ್ದು, ಆಪ್ತ ಸಚಿವರಿಗೆ ಕಂಪನಿ ಕೊಡುತ್ತಿದ್ದಾರೆ.