ಮಾದರಿ ದಂಪತಿಯಾಗಿದ್ದ ದಿಲೀಪ್-ಶ್ರೀವಿದ್ಯಾ; ಕಾಂಬಿನೇಷನ್ನಲ್ಲಿ ಬಂದಿತ್ತು ಹಿಟ್ ಸೀರಿಯಲ್ – Kannada News | Dileep Raj and Srividya: A Beautiful Love Story and a Successful Production Journey
ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ದಿಲೀಪ್ ರಾಜ್ ಅವರ ಅಕಾಲಿಕ ನಿಧನವು ಅವರ ಪತ್ನಿ ಶ್ರೀವಿದ್ಯಾ ಮತ್ತು ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಇವರಿಬ್ಬರದು ಕೇವಲ ದಾಂಪತ್ಯವಲ್ಲ, ಅದೊಂದು ಸುಂದರ ಸೃಜನಶೀಲ ಜರ್ನಿ. ಇಬ್ಬರೂ ಪ್ರೀತಿಸಿ ವಿವಾಹವಾಗಿದ್ದರು. ಕಾಲೇಜು ದಿನಗಳಿಂದಲೇ ಪರಿಚಿತರಾಗಿದ್ದ ಇವರು, ಪರಸ್ಪರರ ಕನಸುಗಳಿಗೆ ಬೆನ್ನೆಲುಬಾಗಿ ನಿಂತವರು. ದಿಲೀಪ್ ರಾಜ್ ನಟನೆಯಲ್ಲಿ ತೊಡಗಿಸಿಕೊಂಡರೆ, ಶ್ರೀವಿದ್ಯಾ ಅವರು ಅವರಿಗೆ ಪ್ರತಿಯೊಂದು ಹಂತದಲ್ಲೂ ಶಕ್ತಿಯಾಗಿ ನಿಂತರು. ನಟನೆಯ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಳ್ಳಬೇಕೆಂಬ ಹಂಬಲದಿಂದ ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಜಂಟಿಯಾಗಿ…