Category Archives: Blog

Your blog category

RCB vs KKR ಪಂದ್ಯವನ್ನೇಕೆ ‘ಎಲ್​ ಪ್ರಿಮೊರೊ’ ಮ್ಯಾಚ್ ಎಂದು ಕರೆಯಲಾಗುತ್ತೆ? – Kannada News | Why is RCB vs KKR Match called ‘El Primero’ of IPL?

ವರ್ಷ 2008, ಏಪ್ರಿಲ್ 18ರ ರಾತ್ರಿ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣವು ಮದುವಣಗಿತ್ತಿಯಂತೆ ಕಂಗೊಳಿಸುತ್ತಿತ್ತು. ಅಂದು ಕೇವಲ ಒಂದು ಕ್ರಿಕೆಟ್ ಪಂದ್ಯ ನಡೆಯುತ್ತಿರಲಿಲ್ಲ, ಬದಲಾಗಿ ವಿಶ್ವ ಕ್ರಿಕೆಟ್‌ನ ದಿಕ್ಕನ್ನೇ ಬದಲಿಸಲಿರುವ ‘ಇಂಡಿಯನ್ ಪ್ರೀಮಿಯರ್ ಲೀಗ್‘ (IPL) ಎಂಬ ಮಹಾಕ್ರಾಂತಿಗೆ ಮುನ್ನುಡಿ ಬರೆಯಲಾಗುತ್ತಿತ್ತು. ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳು.

ಅಂದು ಶುರುವಾದ ಉಭಯ ತಂಡಗಳ ಪೈಪೋಟಿ 19ನೇ ಸೀಸನ್​ನಲ್ಲೂ ಮುಂದುವರೆದಿದೆ. ಆದರೆ ಇದೀಗ ಈ ಪೈಪೋಟಿಯನ್ನು ಎಲ್​ ಪ್ರಿಮೆರೊ ಎಂದು ಕರೆಯಲಾಗುತ್ತಿದೆ. ಅಷ್ಟಕ್ಕೂ ಆರ್​ಸಿಬಿ ಮತ್ತು ಕೆಕೆಆರ್​ ನಡುವಣ ಪಂದ್ಯವನ್ನು ಎಲ್ ಪ್ರಿಮೆರೊ ಎಂದು ಏಕೆ ಕರೆಯಲಾಗುತ್ತೆ ಎಂದು ನೋಡುವುದಾದರೆ…

‘ಎಲ್ ಪ್ರಿಮೆರೊ’ (El Primero) ಸ್ಪ್ಯಾನಿಷ್ ಭಾಷೆಯಲ್ಲಿ “ಮೊದಲನೆಯದು” ಎಂದರ್ಥ. ಐಪಿಎಲ್ ಇತಿಹಾಸದ ಮೊಟ್ಟಮೊದಲ ಪಂದ್ಯ ಇದಾದ ಕಾರಣ ಇದಕ್ಕೆ ಈ ಹೆಸರು ಬಂದಿದೆ. ಈ ಹೆಸರು ಹೆಚ್ಚು ಪ್ರಚಲಿತವಾಗಲು ಕಾರಣ ಉಭಯ ತಂಡಗಳ ನಡುವಣ ಪೈಪೋಟಿ.

ಏಕೆಂದರೆ ಉಭಯ ತಂಡಗಳು ಈವರೆಗೆ 36 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ 20 ಪಂದ್ಯಗಳಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಗೆದ್ದರೆ, 15 ಮ್ಯಾಚ್​ಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಜಯ ಸಾಧಿಸಿದೆ. ಅಂದರೆ ಉಭಯ ತಂಡಗಳ ತಂಡಗಳ ನಡುವೆ ಸಮಬಲದ ಹೋರಾಟ ಕಂಡು ಬಂದಿರುವುದಕ್ಕೆ ಈ ಅಂಕಿ ಅಂಶಗಳು ಸಾಕ್ಷಿ.

ಅದರಲ್ಲೂ ಇಂಟ್ರೆಸ್ಟಿಂಗ್ ಎಂದರೆ ಎರಡೂ ತಂಡಗಳು ಪರಸ್ಫರ 200+ ಸ್ಕೋರ್​ಗಳಿಸಿದೆ. ಹಾಗೆಯೇ ಉಭಯ ತಂಡಗಳು 100 ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿದೆ.

  • ಆರ್​ಸಿಬಿ ಕೆಕೆಆರ್ ವಿರುದ್ಧ ಕೇವಲ 49 ರನ್​ಗಳಿಗೆ ಆಲೌಟ್ ಆಗಿ ಅತ್ಯಂತ ಹೀನಾಯ ದಾಖಲೆ ಬರೆದಿದೆ.
  • ಕೆಕೆಆರ್ ತಂಡವು ಆರ್​ಸಿಬಿ ವಿರುದ್ಧ 84 ರನ್​ಗಳಿಗೆ ಆಲೌಟ್ ಆಗಿ ಭಾರೀ ಮುಖಭಂಗಕ್ಕೆ ಒಳಗಾಗಿತ್ತು.

ಇದನ್ನೂ ಓದಿ: RCB vs KKR ಪಂದ್ಯಕ್ಕೆ 5 ಆಟಗಾರರು ಅಲಭ್ಯ!

ಇದರ ನಡುವೆ ವಿರಾಟ್ ಕೊಹ್ಲಿ ಮತ್ತು ಗೌತಮ್ ಗಂಭೀರ್ ನಡುವಿನ ಜಿದ್ದಾಜಿದ್ದಿಗೂ ಆರ್​ಸಿಬಿ ಮತ್ತು ಕೆಕೆಆರ್ ಪಂದ್ಯಗಳು ಸಾಕ್ಷಿಯಾಗಿದ್ದವು. ಈ ಎಲ್ಲಾ ಕಾರಣಗಳಿಂದಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ನಡುವಣ ಪಂದ್ಯಗಳು ಅಭಿಮಾನಿಗಳ ಹಾಟ್ ಫೇವರೇಟ್ ಆಗಿ ಮಾರ್ಪಟ್ಟಿತ್ತು.

ಇದೀಗ ಉಭಯ ತಂಡಗಳು ಬದಲಾಗಿದೆ. ಈ ಬದಲಾವಣೆಯೊಂದಿಗೆ ಎಲ್​ ಪ್ರಿಮೆರೊ ಪಂದ್ಯಕ್ಕೆ ವೇದಿಕೆ ಸಿದ್ಧವಾಗಿದೆ. ಅದು ಕೂಡ ದೂರದ ರಾಯ್​ಪುರ್​ನಲ್ಲಿ. ಅಂದರೆ ಇದೇ ಮೊದಲ ಬಾರಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಕೊಲ್ಕತ್ತಾ ನೈಟ್ ರೈಡರ್ಸ್ ತಂಡಗಳು ರಾಯ್​ಪುರ್​ನ ಶಾಹೀದ್ ವೀರ್ ನಾರಾಯಣ್ ಸಿಂಗ್ ಸ್ಟೇಡಿಯಂನಲ್ಲಿ ಕಣಕ್ಕಿಳಿಯಲು ಸಜ್ಜಾಗಿದೆ. ಅದರಂತೆ ಈ ಬಾರಿಯ ಮುಖಾಮುಖಿಯಲ್ಲಿ ಗೆಲುವು ಯಾರಿಗೆ ಒಲಿಯಲಿದೆ ಎಂಬುದನ್ನು ಕಾದು ನೋಡಬೇಕಿದೆ.

Source link

Video: ಮುಗ್ಧ ಮನಸ್ಸುಗಳ ಶುದ್ಧ ಸಂಭಾಷಣೆ; ಕರುವಿನ ಜತೆಗೆ ಮಾತಿಗಿಳಿದ ಪುಟಾಣಿ – Kannada News | A little girl who spoke to the calf, video goes viral

ಪುಟಾಣಿಗಳು (little girl) ಏನು ಮಾಡಿದ್ರು ಮುದ್ದಾಗಿ ಕಾಣುತ್ತಾರೆ. ಅಪ್ಪ ಅಮ್ಮನನ್ನು ಮುದ್ದಿಸುವ ರೀತಿ ನೋಡುವುದೇ ಚಂದ. ಕೆಲವೊಮ್ಮೆ ಈ ಪುಟಾಣಿಗಳು ತಮ್ಮ ನಡೆ ನುಡಿ, ಮಾತಿನಿಂದಲೇ ಎಲ್ಲರಿಗೂ ಇಷ್ಟವಾಗಿ ಬಿಡುತ್ತಾರೆ. ಆದರೆ ಇದೀಗ ಈ ಪುಟಾಣಿ ಕರುವಿನ ಜತೆಗೆ ಸಂಭಾಷಣೆಗೆ ಇಳಿದಿದೆ. ನಿನ್ನ ಹೆಸರೇನು ಎನ್ನುತ್ತಾ ಕರುವಿನ ಜತೆಗೆ ಮಾತನಾಡಲು ಶುರು ಮಾಡಿದೆ. ಈ ಮುಗ್ಧತೆ ತುಂಬಿದ ಈ ವಿಡಿಯೋ ನೆಟ್ಟಿಗರ ಹೃದಯ ಗೆದ್ದಿದೆ.

lifewithdevisha ಹೆಸರಿನ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಳ್ಳಲಾದ ವಿಡಿಯೋದಲ್ಲಿ ಮುಗ್ಧ ಮನಸ್ಸುಗಳ ನಡುವಿನ ಶುದ್ಧ ಸಂಭಾಷಣೆಯನ್ನು ಕಾಣಬಹುದು. ಪುಟಾಣಿಯೊಂದು ಕರುವಿನ ಜತೆಗೆ ಮಾತಿಗಿಳಿಗಿದೆ. ಕರುವಿನ ಮುಂದೆ ಕುಳಿತು ನಿನ್ನ ಹೆಸರೇನು ಎಂದು ಕೇಳುತ್ತಿದ್ದಂತೆ ಕರುವು ಮಾತ್ರ ಅತ್ತಿಂದ ಇತ್ತ ನೋಡುತ್ತಾ ಕುಳಿತಿರುವುದನ್ನು ಕಾಣಬಹುದು.

ವೈರಲ್ ವಿಡಿಯೋ ಇಲ್ಲಿದೆ

ಇದನ್ನೂ ಓದಿ: ಮನೆಯಂಗಳಕ್ಕೆ ಬಂದ ನವಿಲಿಗೆ ಕ್ಲಾಸ್ ತೆಗೆದುಕೊಂಡ ಪುಟಾಣಿ, ಮುಂದೇನಾಯ್ತು ನೋಡಿ

ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿದ್ದು, ಒಬ್ಬ ಬಳಕೆದಾರ ನಾನು ಬಾಲ್ಯದಲ್ಲಿ ಹೀಗೆಯೇ ಇದ್ದೆ ಎಂದು ಹೇಳಿದ್ದಾರೆ. ಇನ್ನೊಬ್ಬರು, ನನ್ನ ಹೆಸರು ಕ್ಯೂಟಿ ಎಂದು ಕಾಮೆಂಟ್ ಮಾಡಿದ್ದಾರೆ.. ಮತ್ತೊಬ್ಬರು, ಮುಗ್ಧ ಮನಸ್ಸುಗಳು ಎಂದಿದ್ದಾರೆ.

ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಡಿಜಿಲಾಕರ್ ಬಳಕೆಯಲ್ಲಿ ಕರ್ನಾಟಕ ಟಾಪ್! ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಪ್ರಶಸ್ತಿ ಗೌರವ – Kannada News | Karnataka Wins National Award for Best DigiLocker Integration Initiatives 2026

ಡಿಜಿಲಾಕರ್ ಬಳಕೆಯಲ್ಲಿ ಕರ್ನಾಟಕ ಟಾಪ್!

ಬೆಂಗಳೂರು, ಮೇ 13: ಡಿಜಿಟಲ್ ಇಂಡಿಯಾ ಅಭಿಯಾನದಡಿ ಸಾರ್ವಜನಿಕ ಸೇವೆಗಳನ್ನು ಸರಳಗೊಳಿಸುವಲ್ಲಿ ಕರ್ನಾಟಕ ರಾಜ್ಯವು ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದೆ. ಡಿಜಿಲಾಕರ್ (Digilocker) ಏಕೀಕರಣ ಮತ್ತು ಅನುಷ್ಠಾನದಲ್ಲಿ ಅತ್ಯುತ್ತಮ ಪ್ರಗತಿ ಸಾಧಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ಕರ್ನಾಟಕವನ್ನು ರಾಷ್ಟ್ರೀಯ ಮಟ್ಟದಲ್ಲಿ ಸನ್ಮಾನಿಸಿದೆ.

ಮುಖ್ಯಾಂಶಗಳು

  •  ಡಿಜಿಲಾಕರ್ ಏಕೀಕರಣದಲ್ಲಿ ಕರ್ನಾಟಕಕ್ಕೆ ರಾಷ್ಟ್ರೀಯ ಮಟ್ಟದ ಅತ್ಯುತ್ತಮ ಪ್ರಶಸ್ತಿ ಲಭಿಸಿದೆ.
  •  ರಾಜ್ಯದ 2.7 ಕೋಟಿ ನಾಗರಿಕರು ಸಕ್ರಿಯವಾಗಿ ಡಿಜಿಲಾಕರ್ ಬಳಸುತ್ತಾ ಮುಂಚೂಣಿಯಲ್ಲಿದ್ದಾರೆ.
  •  ಶೇಕಡಾ 73 ರಷ್ಟು ಸರ್ಕಾರಿ ಸೇವೆಗಳು ಈಗ ಡಿಜಿಲಾಕರ್‌ನಲ್ಲಿ ಲಭ್ಯವಿವೆ.

ಮೇ 11 ರಂದು ನವದೆಹಲಿಯಲ್ಲಿ ನಡೆದ ‘ರಾಜ್ಯ ಡೇಟಾಗಾಗಿ ಸೈಬರ್ ಭದ್ರತಾ ಚೌಕಟ್ಟುಗಳನ್ನು ಬಲಪಡಿಸುವ ರಾಷ್ಟ್ರೀಯ ಸಮಾಲೋಚನಾ ಕಾರ್ಯಾಗಾರ’ದಲ್ಲಿ ಈ ಗೌರವವನ್ನು ನೀಡಲಾಯಿತು. ರಾಷ್ಟ್ರೀಯ ಇ-ಆಡಳಿತ ವಿಭಾಗದ (NeGD) ಅಧ್ಯಕ್ಷ ಶ್ರೀ ನಂದ ಕುಮಾರಮ್ ಅವರು ಕರ್ನಾಟಕದ ಅಧಿಕಾರಿಗಳು ಮತ್ತು ಎಸ್‌ಇಎಂಟಿ (SeMT) ತಂಡಕ್ಕೆ ಪ್ರಶಸ್ತಿ ಪ್ರದಾನ ಮಾಡಿದರು.

ಕರ್ನಾಟಕದ ಸಾಧನೆ

ದೇಶದಲ್ಲೇ ಅತಿ ಹೆಚ್ಚು ಡಿಜಿಲಾಕರ್ ಖಾತೆಗಳನ್ನು ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ. ರಾಜ್ಯದ ಸುಮಾರು 2.7 ಕೋಟಿಗೂ ಹೆಚ್ಚು ನಾಗರಿಕರು ಡಿಜಿಲಾಕರ್ ಸೇವೆಗಳನ್ನು ಬಳಸುತ್ತಿದ್ದಾರೆ. ರಾಜ್ಯ ಸರ್ಕಾರದ ಶೇ73 ರಷ್ಟು ಇ-ಸೇವೆಗಳನ್ನು ಈಗಾಗಲೇ ಡಿಜಿಲಾಕರ್‌ನೊಂದಿಗೆ ಯಶಸ್ವಿಯಾಗಿ ಸಂಯೋಜಿಸಲಾಗಿದೆ. ಇದು ‘ಡಿಜಿಟಲ್ ಕರ್ನಾಟಕ’ದತ್ತ ರಾಜ್ಯ ಇಟ್ಟಿರುವ ದೃಢ ಹೆಜ್ಜೆಯಾಗಿದೆ. ವಿಶೇಷವಾಗಿ ಕರ್ನಾಟಕವು ತನ್ನ ವ್ಯಾಪ್ತಿಯ ಎಲ್ಲಾ 5 ವಿದ್ಯುತ್ ಸರಬರಾಜು ಕಂಪನಿಗಳನ್ನು (BESCOM, MESCOM ಇತ್ಯಾದಿ) ಅತ್ಯಂತ ವೇಗವಾಗಿ ಡಿಜಿಲಾಕರ್ ವೇದಿಕೆಗೆ ಅಳವಡಿಸಿದೆ. ಇದರ ಫಲವಾಗಿ ಸುಮಾರು 3 ಕೋಟಿ ವಿದ್ಯುತ್ ಬಿಲ್ ದಾಖಲೆಗಳು ಡಿಜಿಟಲ್ ರೂಪದಲ್ಲಿ ಲಭ್ಯವಾಗುತ್ತಿವೆ.

ಇದನ್ನೂ ಓದಿ ಮುಂದಿನ ವರ್ಷದಿಂದ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ಡಿಜಿಟಲ್ ಅಂಕಪಟ್ಟಿ ಮಾತ್ರ!

ನಾಗರಿಕರಿಗೆ ಏನು ಪ್ರಯೋಜನ?

ಈ ಏಕೀಕರಣದಿಂದಾಗಿ ರಾಜ್ಯದ ನಾಗರಿಕರು ತಮ್ಮ ಪ್ರಮುಖ ದಾಖಲೆಗಳಿಗಾಗಿ ಕಚೇರಿಗಳಿಗೆ ಅಲೆಯುವ ಅಗತ್ಯವಿಲ್ಲ. ಭೌತಿಕ ದಾಖಲೆಗಳ ಪರಿಶೀಲನೆಯ ಬದಲು ಡಿಜಿಲಾಕರ್ ಮೂಲಕವೇ ದಾಖಲೆಗಳನ್ನು ಒದಗಿಸಬಹುದಾಗಿದೆ. ಇದರಿಂದಾಗಿ ಪಾರದರ್ಶಕತೆ ಹೆಚ್ಚುವುದಲ್ಲದೆ, ನಾಗರಿಕರ ಜೀವನ ಗಮನಾರ್ಹವಾಗಿ ಸುಧಾರಿಸಿದೆ.

ಕಾರ್ಯಕ್ರಮದಲ್ಲಿ ಮಾತನಾಡಿದ ಅಧಿಕಾರಿಗಳು, ಕರ್ನಾಟಕದ ಈ ಮಾದರಿಯು ಇತರ ರಾಜ್ಯಗಳಿಗೆ ಸ್ಫೂರ್ತಿಯಾಗಿದ್ದು, ಸುರಕ್ಷಿತ ಮತ್ತು ನಾಗರಿಕ ಸ್ನೇಹಿ ಡಿಜಿಟಲ್ ಆಡಳಿತ ನೀಡುವಲ್ಲಿ ರಾಜ್ಯವು ಮುಂಚೂಣಿಯಲ್ಲಿದೆ ಎಂದು ಶ್ಲಾಘಿಸಿದರು. ಕರ್ನಾಟಕದೊಂದಿಗೆ ಗುಜರಾತ್, ಕೇರಳ, ನಾಗಾಲ್ಯಾಂಡ್ ಮತ್ತು ರಾಜಸ್ಥಾನ ರಾಜ್ಯಗಳನ್ನೂ ಸಹ ವಿವಿಧ ವಿಭಾಗಗಳಲ್ಲಿ ಸನ್ಮಾನಿಸಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿಲೀಪ್ ರಾಜ್ ನಿಧನ: ಅಂತಿಮ ದರ್ಶನ ಪಡೆದು ಕಂಬನಿ ಮಿಡಿದ ಸೆಲೆಬ್ರಿಟಿಗಳು – Kannada News | Dileep Raj Death: Mortal Remains kept at his house for the last respect

ಕನ್ನಡ ಚಿತ್ರರಂಗದ ಖ್ಯಾತ ನಟ ದಿಲೀಪ್ ರಾಜ್ (Dileep Raj) ಅವರು ಅಕಾಲಿಕವಾಗಿ ನಿಧನರಾಗಿರುವುದು ನೋವಿನ ಸಂಗತಿ. ಹೃದಯಾಘಾತದಿಂದ ಅವರು ಕೊನೆಯುಸಿರು ಎಳೆದಿದ್ದಾರೆ. ಸಿನಿಮಾ ಮತ್ತು ಧಾರಾವಾಹಿಗಳಲ್ಲಿ ನಟಿಸಿ ಮನೆಮಾತಾಗಿದ್ದ ದಿಲೀಪ್ ರಾಜ್ ಅವರು ಎಲ್ಲರ ಜೊತೆ ಉತ್ತಮ ಒಡನಾಟ ಹೊಂದಿದ್ದರು. ಅವರ ನಿಧನಕ್ಕೆ ಎಲ್ಲರೂ ಶ್ರದ್ಧಾಂಜಲಿ ಸಲ್ಲಿಸುತ್ತಿದ್ದಾರೆ. ಬೆಂಗಳೂರಿನ ಉತ್ತರಹಳ್ಳಿಯಲ್ಲಿರುವ ನಿವಾಸದಲ್ಲಿ ದಿಲೀಪ್ ರಾಜ್ ಅವರ ಪಾರ್ಥೀವ ಶರೀರವನ್ನು ಇರಿಸಲಾಗಿದೆ. ಕಿರುತೆರೆ ಮತ್ತು ಚಿತ್ರರಂಗದ ಅನೇಕರು ಬಂದು ಅಂತಿಮ ದರ್ಶನ ಪಡೆಯುತ್ತಿದ್ದಾರೆ. 47ನೇ ವಯಸ್ಸಿಗೆ ದಿಲೀಪ್ ರಾಜ್ ಅವರು ಹೃದಯಾಘಾತದಿಂದ (Heart Attack) ನಿಧನರಾಗಿರುವುದನ್ನು ನಂಬಲು ಸಾಧ್ಯವಾಗುತ್ತಿಲ್ಲ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Tamil Nadu Assembly session Floor test Live: ತಮಿಳುನಾಡು ವಿಧಾನಸಭೆ ಅಧಿವೇಶನದಲ್ಲಿ ವಿಜಯ್ ವಿಶ್ವಾಸಮತ ಯಾಚನೆ ನೇರಪ್ರಸಾರ – Kannada News | Tamil Nadu Assembly session Floor test Live: CM Joseph’s TVK Faces Confidence Motion in Assembly

ಚೆನ್ನೈ, ಮೇ 13: ತಮಿಳುನಾಡು ವಿಧಾನಸಭೆಯಲ್ಲಿ ಇಂದು ತೀವ್ರ ಕುತೂಹಲ ಕೆರಳಿಸಿರುವ ನಟ, ರಾಜಕಾರಣಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷದ ಶಕ್ತಿ ಪ್ರದರ್ಶನ ನಡೆಯುತ್ತಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ವಿಜಯ್ ಅವರು ಇಂದು ಸದನದಲ್ಲಿ ವಿಶ್ವಾಸಮತಯಾಚನೆ ಮಾಡುತ್ತಿದ್ದಾರೆ. ವಿಧಾನಸಭೆಯಲ್ಲಿ ಮುಖ್ಯಮಂತ್ರಿ ವಿಜಯ್ ಪ್ರಸ್ತಾಪಿಸಿದ ಸರ್ಕಾರಿ ನಿರ್ಣಯದ ಮೇಲೆ ಶಾಸಕರು ಮತ ಚಲಾಯಿಸಲಿದ್ದಾರೆ. ಮ್ಯಾಜಿಕ್ ನಂಬರ್ ತಲುಪಲು ವಿಜಯ್ ಯಶಸ್ವಿಯಾಗುತ್ತಾರೆಯೇ ಅಥವಾ ರಾಜ್ಯದಲ್ಲಿ ಹೊಸ ರಾಜಕೀಯ ಸಮೀಕರಣ ಸೃಷ್ಟಿಯಾಗಲಿದೆಯೇ ಎಂಬುದು ಇಡೀ ದೇಶದ ಗಮನ ಸೆಳೆದಿದೆ. ವಿಶ್ವಾಸಮತಯಾಚನೆಯ ನೇರಪ್ರಸಾರ ಇಲ್ಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿಜಯ್ ಜೊತೆಗಿನ ನಂಟಿನಿಂದ ಹೆಚ್ಚಿದ ತ್ರಿಶಾ ಕ್ರೇಜ್; ಗಗನಕ್ಕೇರಿದ ಸಂಭಾವನೆ – Kannada News | Trisha Krishnan Remuneration hike after Thalapathy Vijay TVK win

ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ (Trisha Krishnan) ಅವರ ವೃತ್ತಿಜೀವನ ಈಗ ಸುವರ್ಣ ಕಾಲದಲ್ಲಿದೆ. ಎರಡು ದಶಕಗಳಿಗೂ ಹೆಚ್ಚು ಕಾಲದಿಂದ ಚಿತ್ರರಂಗದಲ್ಲಿ ಮಿಂಚುತ್ತಿರುವ ಈ ಸೌತ್ ಸುಂದರಿ ಈಗ ತಮ್ಮ ಸಂಭಾವನೆಯನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ. ತಮಿಳುನಾಡು ಮುಖ್ಯಮಂತ್ರಿ ಆಗಿರುವ ವಿಜಯ್ (Thalapathy Vijay) ಜೊತೆ ತ್ರಿಶಾ ಅವರು ಆಪ್ತವಾಗಿದ್ದಾರೆ. ವಿಜಯ್ ಅವರ ಟಿವಿಕೆ ಪಕ್ಷ ಅಧಿಕಾರಕ್ಕೆ ಬರುತ್ತಿದ್ದಂತೆಯೇ ತ್ರಿಶಾ ಜನಪ್ರಿಯತೆ ಕೂಡ ಡಬಲ್ ಆಗಿದೆ. ಅದಕ್ಕೆ ತಕ್ಕಂತೆ ಅವರಿಗೆ ದೊಡ್ಡ ದೊಡ್ಡ ಅವಕಾಶಗಳು ಸಿಗುತ್ತಿವೆ. ಆದ್ದರಿಂದ ಸಂಭಾವನೆ (Trisha Krishnan Remuneration) ಕೂಡ ಜಾಸ್ತಿ ಆಗುತ್ತಿದೆ.

ಇತ್ತೀಚಿನ ವರ್ಷಗಳಲ್ಲಿ ‘ಪೊನ್ನಿಯಿನ್ ಸೆಲ್ವನ್’ ಮತ್ತು ‘ಲಿಯೋ’ ರೀತಿಯ ದೊಡ್ಡ ಚಿತ್ರಗಳ ನಂತರ ತ್ರಿಶಾ ಅವರ ಮಾರುಕಟ್ಟೆ ಮೌಲ್ಯ ಗಣನೀಯವಾಗಿ ಹೆಚ್ಚಿದೆ. ಸದ್ಯ ಕಾಲಿವುಡ್ ಮತ್ತು ಟಾಲಿವುಡ್‌ನ ದೊಡ್ಡ ಬಜೆಟ್ ಚಿತ್ರಗಳಲ್ಲಿ ಅವರು ಬ್ಯುಸಿಯಾಗಿದ್ದಾರೆ. ಮೂಲಗಳ ಪ್ರಕಾರ, ತ್ರಿಶಾ ಈಗ ಪ್ರತಿ ಚಿತ್ರಕ್ಕೆ ಸುಮಾರು 10ರಿಂದ 12 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಈ ಮೂಲಕ ದಕ್ಷಿಣ ಭಾರತದ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಅವರು ಅಗ್ರಸ್ಥಾನಕ್ಕೇರಿದ್ದಾರೆ.

ತ್ರಿಶಾ ಕೈಯಲ್ಲಿ ಈಗ ಸಾಲು ಸಾಲು ಬಿಗ್ ಬಜೆಟ್ ಸಿನಿಮಾಗಳಿವೆ. ಚಿರಂಜೀವಿ ಅಭಿನಯದ ‘ವಿಶ್ವಂಭರ’ ಸಿನಿಮಾಗೆ ತ್ರಿಶಾ ನಾಯಕಿ ಆಗಿದ್ದಾರೆ. ಸೂರ್ಯ ಅಭಿನಯದ ‘ಕರುಪ್ಪು’ ಸಿನಿಮಾದಲ್ಲಿ ಕೂಡ ತ್ರಿಶಾ ನಟಿಸಿದ್ದಾರೆ. ಕಮಲ್ ಹಾಸನ್ ಹಾಗೂ ರಜನಿಕಾಂತ್ ಕಾಂಬಿನೇಷನ್​ನ ಹೊಸ ಸಿನಿಮಾಗೂ ಅವರೇ ನಾಯಕಿ ಆಗುವ ಸಾಧ್ಯತೆ ಇದೆ. ಹೊಸ ಹೊಸ ಅವಕಾಶಗಳು ಅವರನ್ನು ಹುಡುಕಿಕೊಂಡು ಬರುತ್ತಿವೆ.

ಕೇವಲ ಗ್ಲಾಮರ್ ಪಾತ್ರಗಳಿಗೆ ಸೀಮಿತವಾಗದೆ, ನಟನಾ ಪ್ರಾಧಾನ್ಯತೆಯ ಪಾತ್ರಗಳ ಮೂಲಕವೂ ತ್ರಿಶಾ ಗಮನ ಸೆಳೆಯುತ್ತಿದ್ದಾರೆ. ಚಿತ್ರರಂಗಕ್ಕೆ ಹೊಸ ನಟಿಯರ ಆಗಮನವಾಗುತ್ತಿದ್ದರೂ, ತ್ರಿಶಾ ಅವರ ಬೇಡಿಕೆ ಕುಗ್ಗಿಲ್ಲದಿರುವುದು ವಿಶೇಷ. ಈಗಿನ ಸಂಭಾವನೆ ಏರಿಕೆಯು ಅವರ ಜನಪ್ರಿಯತೆ ಮತ್ತು ನಟನಾ ಸಾಮರ್ಥ್ಯಕ್ಕೆ ಸಾಕ್ಷಿಯಾಗಿದೆ.

ಇದನ್ನೂ ಓದಿ: ತ್ರಿಶಾಗೆ ಒಲಿದು ಬಂದ ಬಿಗ್ ಆಫರ್; ರಜನಿ-ಕಮಲ್ ಹೊಸ ಸಿನಿಮಾಗೆ ನಾಯಕಿ?

ದಳಪತಿ ವಿಜಯ್ ಮತ್ತು ತ್ರಿಶಾ ಕೃಷ್ಣನ್ ಅವರು ಹಲವು ವರ್ಷಗಳಿಂದ ಆಪ್ತವಾಗಿದ್ದಾರೆ. ಅವರ ಒಡನಾಟದ ಬಗ್ಗೆ ಸಾಕಷ್ಟು ಗಾಸಿಪ್​ಗಳಿವೆ. ಇತ್ತೀಚೆಗೆ ವಿಜಯ್ ಪತ್ನಿ ಸಂಗೀತಾ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಇದೇ ಸಂದರ್ಭದಲ್ಲಿ ತ್ರಿಶಾ ಮತ್ತು ವಿಜಯ್ ಅವರು ಒಟ್ಟಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಅಚ್ಚರಿ ಮೂಡಿಸಿದರು. ಈ ಎಲ್ಲ ಕಾರಣಗಳಿಂದ ಅವರು ಹೆಚ್ಚು ಸುದ್ದಿಯಲ್ಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಾದರಿ ದಂಪತಿಯಾಗಿದ್ದ ದಿಲೀಪ್-ಶ್ರೀವಿದ್ಯಾ; ಕಾಂಬಿನೇಷನ್​​ನಲ್ಲಿ ಬಂದಿತ್ತು ಹಿಟ್ ಸೀರಿಯಲ್ – Kannada News | Dileep Raj and Srividya: A Beautiful Love Story and a Successful Production Journey

ಕನ್ನಡ ಚಿತ್ರರಂಗದ ಬಹುಮುಖ ಪ್ರತಿಭೆ ದಿಲೀಪ್ ರಾಜ್ ಅವರ ಅಕಾಲಿಕ ನಿಧನವು ಅವರ ಪತ್ನಿ ಶ್ರೀವಿದ್ಯಾ ಮತ್ತು ಅಭಿಮಾನಿಗಳನ್ನು ಶೋಕಸಾಗರದಲ್ಲಿ ಮುಳುಗಿಸಿದೆ. ಇವರಿಬ್ಬರದು ಕೇವಲ ದಾಂಪತ್ಯವಲ್ಲ, ಅದೊಂದು ಸುಂದರ ಸೃಜನಶೀಲ ಜರ್ನಿ. ಇಬ್ಬರೂ ಪ್ರೀತಿಸಿ ವಿವಾಹವಾಗಿದ್ದರು. ಕಾಲೇಜು ದಿನಗಳಿಂದಲೇ ಪರಿಚಿತರಾಗಿದ್ದ ಇವರು, ಪರಸ್ಪರರ ಕನಸುಗಳಿಗೆ ಬೆನ್ನೆಲುಬಾಗಿ ನಿಂತವರು. ದಿಲೀಪ್ ರಾಜ್ ನಟನೆಯಲ್ಲಿ ತೊಡಗಿಸಿಕೊಂಡರೆ, ಶ್ರೀವಿದ್ಯಾ ಅವರು ಅವರಿಗೆ ಪ್ರತಿಯೊಂದು ಹಂತದಲ್ಲೂ ಶಕ್ತಿಯಾಗಿ ನಿಂತರು.

ನಟನೆಯ ಜೊತೆಗೆ ನಿರ್ಮಾಣದಲ್ಲೂ ತೊಡಗಿಸಿಕೊಳ್ಳಬೇಕೆಂಬ ಹಂಬಲದಿಂದ ದಿಲೀಪ್ ರಾಜ್ ಮತ್ತು ಶ್ರೀವಿದ್ಯಾ ಜಂಟಿಯಾಗಿ ‘ಡಿ2ಆರ್ ಮೀಡಿಯಾ ಪ್ರೊಡಕ್ಷನ್ಸ್’ ಸಂಸ್ಥೆಯನ್ನು ಆರಂಭಿಸಿದರು. ಶ್ರೀವಿದ್ಯಾ ಅವರು ನಿರ್ಮಾಣದ ಆರ್ಥಿಕ ಮತ್ತು ಆಡಳಿತಾತ್ಮಕ ಜವಾಬ್ದಾರಿಗಳನ್ನು ಸಮರ್ಥವಾಗಿ ನಿಭಾಯಿಸಿದರೆ, ದಿಲೀಪ್ ಕ್ರಿಯೇಟಿವ್ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ಈ ಜೋಡಿಯ ಕಠಿಣ ಪರಿಶ್ರಮದ ಫಲವಾಗಿ ಕನ್ನಡ ಕಿರುತೆರೆಗೆ ಅನೇಕ ಸೂಪರ್ ಹಿಟ್ ಧಾರಾವಾಹಿಗಳು ಲಭಿಸಿದವು.

ಜೀ ಕನ್ನಡ ವಾಹಿನಿಯ ಅತಿದೊಡ್ಡ ಯಶಸ್ಸಾದ ‘ಹಿಟ್ಲರ್ ಕಲ್ಯಾಣ’ ಇವರ ಜಂಟಿ ನಿರ್ಮಾಣದ ಹೆಗ್ಗುರುತು. ಈ ಧಾರಾವಾಹಿಯಲ್ಲಿ ದಿಲೀಪ್ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ಮಾಣದ ಜವಾಬ್ದಾರಿಯನ್ನೂ ಹೊತ್ತಿದ್ದರು.

‘ಪಾರು’ ಹಾಗೂ ಇತ್ತೀಚಿನ ‘ಕೃಷ್ಣ ರುಕ್ಕು’ ಧಾರಾವಾಹಿಗಳ ಹಿಂದೆ ಈ ದಂಪತಿಗಳ ಸೃಜನಶೀಲ ಶ್ರಮವಿತ್ತು. ಸದಾ ನಗುಮುಖದಿಂದ ಕೆಲಸ ಮಾಡುತ್ತಿದ್ದ ಈ ಜೋಡಿ, ನೂರಾರು ತಂತ್ರಜ್ಞರಿಗೆ ಬದುಕು ನೀಡಿದ್ದರು.

ವೃತ್ತಿ ಮತ್ತು ವೈಯಕ್ತಿಕ ಜೀವನದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಹೇಗೆ ಎಂಬುದಕ್ಕೆ ದಿಲೀಪ್ ಮತ್ತು ಶ್ರೀವಿದ್ಯಾ ಉದಾಹರಣೆಯಾಗಿದ್ದರು. ಶ್ರೀವಿದ್ಯಾ ಅವರ ಪ್ರತಿಯೊಂದು ನಿರ್ಧಾರಕ್ಕೂ ದಿಲೀಪ್ ಗೌರವ ನೀಡುತ್ತಿದ್ದರು.

ಇಂದು ದಿಲೀಪ್ ರಾಜ್ ಭೌತಿಕವಾಗಿ ನಮ್ಮೊಂದಿಗಿಲ್ಲದಿದ್ದರೂ, ಅವರು ಪತ್ನಿಯೊಂದಿಗೆ ಸೇರಿ ಕಟ್ಟಿದ ಈ ಕಲಾ ಸಾಮ್ರಾಜ್ಯ ಮತ್ತು ಅವರು ನೀಡಿದ ಅದ್ಭುತ ಧಾರಾವಾಹಿಗಳು ಸದಾ ಕನ್ನಡಿಗರ ನೆನಪಿನಲ್ಲಿರುತ್ತವೆ.

Published On – 9:20 am, Wed, 13 May 26

Source link

ಮಿತವ್ಯಯಕ್ಕೆ ಪ್ರಧಾನಿ ಮೋದಿ ಮೊದಲ ಹೆಜ್ಜೆ: ಬೆಂಗಾವಲು ಪಡೆಗೆ ಕತ್ತರಿ, ಸಚಿವರು, ಎನ್​ಡಿಎ ಸಿಎಂಗಳಿಗೂ ಸೂಚನೆ – Kannada News | PM Modi Leads by Example: Cuts SPG Convoy by 50 Percent and Switches to Electric Vehicles for Fuel Saving

ಪ್ರಧಾನಿ ಮೋದಿ (ಸಂಗ್ರಹ ಚಿತ್ರ)Image Credit source: TV9 Network

ನವದೆಹಲಿ, ಮೇ 13: ಮಧ್ಯಪ್ರಾಚ್ಯ ಯುದ್ಧ ಹಾಗೂ ಅಂತರರಾಷ್ಟ್ರೀಯ ಅನಿಶ್ಚಿತತೆಗಳ ಹಿನ್ನೆಲೆಯಲ್ಲಿ ಒಂದು ವರ್ಷ ಚಿನ್ನ ಖರೀದಿ ಮಾಡದಂತೆ ಹಾಗೂ ಇಂಧನ ಮಿತ ಬಳಕೆಗೆ ದೇಶದ ಜನತೆಗೆ ಕರೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ (Narendra Modi) ಇದೀಗ ತಾವೇ ಆ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದ್ದಾರೆ. ಖುದ್ದು ತಮ್ಮದೇ ಎಸ್‌ಪಿಜಿ ಭದ್ರತಾ ಪಡೆಗೆ ನಿಯೋಜನೆಗೊಳ್ಳುವ ವಾಹನಗಳ ಸಂಖ್ಯೆಯಲ್ಲಿ ಕಡಿತ ಹಾಗೂ ಪೆಟ್ರೋಲ್, ಡೀಸೆಲ್ ಚಾಲಿತ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಪ್ರಧಾನಿ ಕಚೇರಿ ಸೂಚನೆ ನೀಡಿದೆ.

ಮುಖ್ಯಾಂಶಗಳು

  • ಪ್ರಧಾನಿ ಮೋದಿಯವರ ಬೆಂಗಾವಲು ಪಡೆಯ ವಾಹನಗಳ ಸಂಖ್ಯೆ ಶೇ 50 ರಷ್ಟು ಕಡಿತಗೊಳಿಸಲು ಪಿಎಂಒ ಆದೇಶ.
  • ಪೆಟ್ರೋಲ್ ಮತ್ತು ಡೀಸೆಲ್ ವಾಹನಗಳ ಬದಲಿಗೆ ಪರಿಸರ ಸ್ನೇಹಿ ಎಲೆಕ್ಟ್ರಿಕ್ ವಾಹನಗಳನ್ನು (EV) ಬಳಸಲು ನಿರ್ಧಾರ.
  • ಇದೇ ಮಾದರಿಯನ್ನು ಅನುಸರಿಸುವಂತೆ ಕೇಂದ್ರ ಸಚಿವರು ಮತ್ತು ಎನ್‌ಡಿಎ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಪ್ರಧಾನಿ ಸೂಚನೆ.

ಭಾರತವು ಕಚ್ಚಾ ತೈಲ, ಚಿನ್ನ ಮತ್ತು ಅಡುಗೆ ಎಣ್ಣೆಯಂತಹ ಅನೇಕ ಉತ್ಪನ್ನಗಳನ್ನು ವಿದೇಶಗಳಿಂದ ಆಮದು ಮಾಡಿಕೊಳ್ಳುವುದರಿಂದ ದೇಶದ ಆರ್ಥಿಕತೆಯ ಮೇಲೆ ಅವುಗಳ ಖರೀದಿಯು ಬೀರುವ ಪರಿಣಾಮಗಳ ಬಗ್ಗೆ ಮೋದಿ ಇತ್ತೀಚೆಗೆ ನೀಡಿದ ಸಂದೇಶದಲ್ಲಿ ಪ್ರಸ್ತಾಪಿಸಿದ್ದರು. ವಿದೇಶಿ ವಿನಿಮಯವನ್ನು ಉಳಿಸಲು, ಈ ವಸ್ತುಗಳ ಬಳಕೆಯನ್ನು ಕಡಿಮೆ ಮಾಡುವಂತೆ ಅವರು ಕರೆ ನೀಡಿದ್ದರು. ಈಗ ತಮ್ಮದೇ ಭದ್ರತಾ ಪಡೆಯಲ್ಲಿ ಬದಲಾವಣೆಗಳನ್ನು ತರುವ ಮೂಲಕ, ಅವರು ಆ ಮಾತುಗಳನ್ನು ಕಾರ್ಯರೂಪಕ್ಕೆ ತರುತ್ತಿದ್ದಾರೆ.

ಪ್ರಧಾನಿ ಬೆಂಗಾವಲು ಪಡೆಯ ವಾಹನಗಳ ಸಂಖ್ಯೆ ಶೇ 50 ರಷ್ಟು ಕಡಿತ

ಪ್ರಧಾನಿ ಬೆಂಗಾವಲು ಪಡೆಯ ವಾಹನಗಳ ಸಂಖ್ಯೆಯನ್ನು ಶೇ 50ರಷ್ಟು ಕಡಿತಗೊಳಿಸುವಂತೆ ಪಿಎಂಒ ಆದೇಶಿಸಿದೆ ಎಂಬ ಮಾಹಿತಿ ಉನ್ನತ ಮೂಲಗಳಿಂದ ತಿಳಿದುಬಂದಿದೆ. ಇದು ಮಿತವ್ಯಯದ ಕ್ರಮಗಳ ಭಾಗವಾಗಿದ್ದು, ಸರ್ಕಾರದ ವೆಚ್ಚಗಳನ್ನು ನಿಯಂತ್ರಿಸುವ ಗುರಿಯನ್ನು ಹೊಂದಿದೆ. ಇಂಧನ ಉಳಿತಾಯದ ಜೊತೆಗೆ, ಎಲೆಕ್ಟ್ರಿಕ್ ವಾಹನಗಳ ಬಳಕೆಯು ಪರಿಸರ ಮಾಲಿನ್ಯವನ್ನು ತಡೆಗಟ್ಟುವಲ್ಲಿ ಮಹತ್ವದ ಪಾತ್ರ ವಹಿಸಲಿದೆ. ಅಲ್ಲದೆ, ಬೆಂಗಾವಲು ಪಡೆಯ ಗಾತ್ರ ಚಿಕ್ಕದಾಗುವುದರಿಂದ ರಸ್ತೆಗಳಲ್ಲಿ ಸಂಚಾರದ ವೇಳೆ ಉಂಟಾಗುವ ಅಡಚಣೆಗಳನ್ನು ಕಡಿಮೆ ಮಾಡಲು ಸಹಾಯಕವಾಗಲಿದೆ.

ಕಟ್ಟುನಿಟ್ಟಿನ ಕ್ರಮ ಪ್ರಧಾನಿ ಕಚೇರಿಗಷ್ಟೇ ಸಿಮಿತವಲ್ಲ!

ಈ ಕ್ರಮಗಳು ಕೇವಲ ಪ್ರಧಾನಿ ಕಚೇರಿಗೆ ಸೀಮಿತವಾಗಿಲ್ಲ. ಕೇಂದ್ರ ಸಚಿವರು ಮತ್ತು ಎನ್‌ಡಿಎ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳಿಗೂ ಇದೇ ರೀತಿಯ ಸೂಚನೆಯನ್ನು ಪ್ರಧಾನಿ ನೀಡಿದ್ದಾರೆ. ಇಂಧನ ವಾಹನಗಳ ಬದಲಿಗೆ ಎಲೆಕ್ಟ್ರಿಕ್ ವಾಹನಗಳ ಬಳಕೆಗೆ ಒತ್ತು ನೀಡುವಂತೆ ಮತ್ತು ಬೆಂಗಾವಲು ಪಡೆಯನ್ನು ಆದಷ್ಟು ಕಡಿಮೆ ಮಾಡುವಂತೆ ಅವರು ಕರೆ ನೀಡಿದ್ದಾರೆ. ಇದು ಇಂಧನ ಉಳಿತಾಯಕ್ಕೆ ರಾಷ್ಟ್ರವ್ಯಾಪಿ ಚಳುವಳಿಗೆ ನಾಂದಿ ಹಾಡುವ ನಿರೀಕ್ಷೆಯಿದೆ.

ಇದನ್ನೂ ಓದಿ: ವರ್ಕ್ ಫ್ರಂ ಹೋಂ, ಆನ್​ಲೈನ್ ಕ್ಲಾಸ್, ಚಿನ್ನ ಬೇಡ, ಇಂಧನದ ಮಿತ ಬಳಕೆ; ಮತ್ತೊಮ್ಮೆ ಪ್ರಧಾನಿ ಮೋದಿ ಮನವಿ

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎಐ ತಂತ್ರಜ್ಞಾನದ ಕುರಿತ ಕನ್ನಡ ಸಿನಿಮಾ ‘ಗರುಡ’; ಇದರಲ್ಲಿವೆ 4 ಪ್ರತ್ಯೇಕ ಕಥೆ – Kannada News | Garuda Kannada movie based on AI technology will have 4 different stories

ಎಲ್ಲ ಕ್ಷೇತ್ರಕ್ಕೂ ಈಗ ಎಐ (AI) ತಂತ್ರಜ್ಞಾನ ಕಾಲಿಡುತ್ತಿದೆ. ಈಗಾಗಲೇ ಅದು ಹಲವು ಕ್ಷೇತ್ರಗಳಲ್ಲಿ ಹೇರಳವಾಗಿ ಬಳಕೆ ಆಗುತ್ತಿದೆ. ಮುಂಬರುವ ದಿನಗಳಲ್ಲಿ ಜನರ ಮೇಲೆ ಮತ್ತು ಮಕ್ಕಳ ಮೇಲೆ ಎಐ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬ ಕುತೂಹಲ ಸಹಜ. ಎಐ ಎಂಬುದು ಜನರಿಗೆ ಮಾರಕವಾಗುತ್ತಾ ಅಥವಾ ಉಪಯೋಗ ಆಗುತ್ತಾ ಎಂಬ ವಿಷಯವನ್ನು ಇಟ್ಟುಕೊಂಡು ಕನ್ನಡದಲ್ಲಿ ‘ಗರುಡ’ (Garuda) ಸಿನಿಮಾ ತಯಾರಾಗಿದೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಆ ವೇಳೆ ಚಿತ್ರತಂಡದವರು ಮಾತನಾಡಿದರು.

‘ಶೈವಂ ಫಿಲ್ಮ್ಸ್’ ಮೂಲಕ ಕಿರಣ್ ಎಸ್. ಅವರು ‘ಗರುಡ’ ಸಿನಿಮಾವನ್ನು ನಿರ್ಮಿಸಿದ್ದಾರೆ. ಅಷ್ಟೇ ಅಲ್ಲದೇ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಕೂಡ ಮಾಡಿದ್ದಾರೆ. ಛಾಯಾಗ್ರಹಣದ ಜವಾಬ್ದಾರಿಯನ್ನು ಕೂಡ ಅವರೇ ನಿಭಾಯಿಸಿದ್ದಾರೆ. ಈ ಸಿನಿಮಾ ಈಗ ಬಿಡುಗಡೆಗೆ ಸಿದ್ಧವಾಗಿದೆ. ಪ್ರಚಾರದ ಮೊದಲ ಹಂತವಾಗಿ ಟ್ರೇಲರ್ ರಿಲೀಸ್ ಮಾಡಲಾಗಿದೆ.

ಸುದ್ದಿಗೋಷ್ಠಿಯಲ್ಲಿ ನಿರ್ದೇಶಕ ಕಿರಣ್ ಅವರು ಮಾಹಿತಿ ನೀಡಿದರು. ‘ಇದೊಂದು ಆ್ಯಕ್ಷನ್, ಸಸ್ಪೆನ್ಸ್, ಥ್ರಿಲ್ಲರ್ ಸಿನಿಮಾ. 2024ರಲ್ಲಿ ಪೈಲಟ್ ಸಿನಿಮಾ ಮಾಡಲು ಹೊರಟಿದ್ದೆವು. ಅದೇ ಈಗ ಗರುಡ ಆಗಿದೆ. ಇದೊಂದು ಫಿಕ್ಷನಲ್, ನಾನ್ ಲೀನಿಯರ್ ಪ್ರಕಾರದ ಸಿನಿಮಾ. 4 ಕಥೆಗಳು ಬೇರೆ ಬೇರೆಯಾಗಿ ಸಾಗುತ್ತ ಒಂದು ಹಂತದಲ್ಲಿ ಸೇರುತ್ತವೆ. ಶೇಕಡ 30ರಿಂದ 40ರಷ್ಟು ಕಥೆ ಎಐ ಕುರಿತು ಇದೆ’ ಎಂದು ಅವರು ಹೇಳಿದರು.

‘ಗರುಡ’ ಸಿನಿಮಾ ಟ್ರೇಲರ್:

ರಿತ್ವಾನ್ ಶ್ರೀನಿವಾಸ್ ಅವರು ‘ಗರುಡ’ ಸಿನಿಮಾದಲ್ಲಿ ನಾಯಕನಾಗಿ ನಟಿಸಿದ್ದಾರೆ. ಈ ಹಿಂದೆ ಕೆಲವು ಧಾರಾವಾಹಿಗಳಲ್ಲಿ ನಟಿಸಿದ ಅನುಭವ ಅವರಿಗೆ ಇದೆ. ಇನ್ನೋರ್ವ ನಟ ಸೌರವ್ ಪ್ರಶಾಂತ್ ಅವರು ಈ ಚಿತ್ರದಲ್ಲಿ ಎರಡು ಶೇಡ್ ಇರುವ ಪಾತ್ರದಲ್ಲಿ ನಟಿಸಿದ್ದಾರೆ. ನಾಯಕಿಯಾಗಿ ದಿವ್ಯಾ ಚಂದ್ರ ಅವರು ಅಭಿನಯಿಸಿದ್ದಾರೆ. ಈ ಮೊದಲು ಅವರು ‘ನಮೋ ಭೂತಾತ್ಮ’ ಚಿತ್ರದಲ್ಲಿ ನಟಿಸಿದ್ದರು.

ಇದನ್ನೂ ಓದಿ: ಮೆಟಾ, ಮೈಕ್ರೋಸಾಫ್ಟ್​ನಲ್ಲಿ ಎಐ ಸಂಚಲನ; 23,000 ಉದ್ಯೋಗಗಳಿಗೆ ಕುತ್ತು

ವಿವೇಕ್, ಅಭಿಮಹೇಶ್, ಅಭಿಷೇಕ್, ಕಿರಣ್, ನಯ್ ಪ್ರಭಾಕರ್, ವಿಲ್ ಫ್ರೆಡ್ ವಿವೇಕ್, ಸೌಭಾಗ್ಯ ಹಂದ್ರಾಳ್, ದಿಲೀಪ್ ಕುಮಾರ್, ಬಾಹುಬಲಿ ಮಂಜು ಕೂಡ ‘ಗರುಡ’ ಸಿನಿಮಾದಲ್ಲಿ ಅಭಿನಯಿಸಿದ್ದಾರೆ. ಜೂನ್ ತಿಂಗಳಲ್ಲಿ ಈ ಸಿನಿಮಾವನ್ನು ತೆರೆಕಾಣಿಸಲು ತಯಾರಿ ಮಾಡಿಕೊಳ್ಳಲಾಗುತ್ತಿದೆ. ಸಂತೋಷ್ ಜೋಶ್ವಾ ಅವರು ಸಂಗೀತ ನಿರ್ದೇಶನ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:54 am, Wed, 13 May 26

Source link

‘ಲವ್ ಮಾಕ್ಟೇಲ್ 3’ ಚಿತ್ರ ಒಟಿಟಿಯಲ್ಲಿ ಗಮನ ಸೆಳೆಯುವಾಗಲೇ ಕೊನೆಯುಸಿರೆಳೆದ ದಿಲೀಪ್ ರಾಜ್ – Kannada News | Dileep Raj Last Movie Is Love Mocktail 3 He acted as Lawyer

ಕನ್ನಡ ಕಿರುತೆರೆ ಮತ್ತು ಬೆಳ್ಳಿತೆರೆಯಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿದ್ದ ನಟ ದಿಲೀಪ್ ರಾಜ್ ಅವರು ನಿಧನ ಹೊಂದಿದ್ದಾರೆ. ಅವರಿಗೆ ಹೃದಯಾಘಾತವಾಯಿತು ಮತ್ತು ಅವರನ್ನು ಆಸ್​ಪತ್ರೆಗೆ ದಾಖಲು ಮಾಡಿದರೂ ಯಾವುದೇ ಪ್ರಯೋಜನ ಆಗಿಲ್ಲ. ಈಗ ಅವರ ಶವವನ್ನು ಮನೆಗೆ ತೆಗೆದುಕೊಂಡು ಹೋಗಲಾಗುತ್ತಿದೆ. ಅಕಾಲಿಕ ನಿಧನವು ಅಭಿಮಾನಿಗಳಿಗೆ ಮತ್ತು ಚಿತ್ರೋದ್ಯಮಕ್ಕೆ ಆಘಾತ ತಂದಿದೆ.

ಸುಮಾರು ಎರಡು ದಶಕಗಳ ಕಾಲ ನಟನೆಯಲ್ಲಿ ತೊಡಗಿದ್ದ ಅವರು, ತಮ್ಮ ವೃತ್ತಿಜೀವನದ ಕೊನೆಯ ಹಂತದವರೆಗೂ ಸಿನಿಮಾ ರಂಗದಲ್ಲಿ ಸಕ್ರಿಯರಾಗಿದ್ದರು ಎಂಬುದನ್ನು ಇಲ್ಲಿ ನೆನೆಯಲೇ ಬೇಕು. ವಿಶೇಷವೆಂದರೆ, ಪವರ್ ಸ್ಟಾರ್ ಪುನೀತ್ ರಾಜ್‌ಕುಮಾರ್ ನಟನೆಯ ಸಾರ್ವಕಾಲಿಕ ಹಿಟ್ ಚಿತ್ರ ‘ಮಿಲನ’ದಲ್ಲಿ ಅಣ್ಣನ ಪಾತ್ರ ಮಾಡುವ ಮೂಲಕ ಮನೆಮಾತಾಗಿದ್ದ ದಿಲೀಪ್, ತಮ್ಮ ಕೊನೆಯ ದಿನಗಳಲ್ಲಿ ‘ಲವ್ ಮಾಕ್ಟೇಲ್ 3′ ಚಿತ್ರದಲ್ಲಿ ಅವರು ವಕೀಲರ ಪಾತ್ರ ಮಾಡಿದ್ದರು.

‘ಲವ್ ಮಾಕ್ಟೇಲ್ 3’ ಸಿನಿಮಾದಲ್ಲಿ ದಿಲೀಪ್ ರಾಜ್ ಅವರು ಬಹಳ ಗಂಭೀರವಾದ ಮತ್ತು ಜವಾಬ್ದಾರಿಯುತವಾದ ವಕೀಲನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಲಾಯರ್ ಪಾತ್ರಕ್ಕೆ ಬೇಕಾದ ಗಾಂಭೀರ್ಯ ಮತ್ತು ಸಂಯಮವನ್ನು ಅವರು ಬಹಳ ಅಚ್ಚುಕಟ್ಟಾಗಿ ತೆರೆಯ ಮೇಲೆ ತಂದಿದ್ದರು. ವೃತ್ತಿಜೀವನದ ಆರಂಭದಲ್ಲಿ ಚಾಕೊಲೇಟ್ ಹೀರೊ ಆಗಿ ಕಾಣಿಸಿಕೊಂಡಿದ್ದ ಅವರು, ನಂತರ ಪೋಷಕ ಪಾತ್ರಗಳಲ್ಲಿ ಹಾಗೂ ಪಕ್ವ ನಟನಾಗಿ ಬೆಳೆದಿದ್ದಕ್ಕೆ ಈ ಚಿತ್ರದ ಪಾತ್ರವೇ ಸಾಕ್ಷಿ.

ಇದನ್ನೂ ಓದಿ: ‘ಜೀ5’ ಮೂಲಕ ಒಟಿಟಿ ಅಂಗಳಕ್ಕೆ ಕಾಲಿಡುತ್ತಿದೆ ‘ಲವ್ ಮಾಕ್ಟೇಲ್ 3’ ಸಿನಿಮಾ; ಪ್ರಸಾರ ಯಾವಾಗ?

ನಟನೆಯಷ್ಟೇ ಅಲ್ಲದೆ, ಡಬ್ಬಿಂಗ್ ಮತ್ತು ನಿರ್ಮಾಣದಲ್ಲೂ ಯಶಸ್ಸು ಕಂಡಿದ್ದ ದಿಲೀಪ್ ರಾಜ್, ‘ಹಿಟ್ಲರ್ ಕಲ್ಯಾಣ’ದಂತಹ ಜನಪ್ರಿಯ ಧಾರಾವಾಹಿಗಳ ಮೂಲಕ ಕರ್ನಾಟಕದ ಮನೆಮಗನಾಗಿದ್ದರು. ಶಿಸ್ತು ಮತ್ತು ನಗುಮುಖದ ವ್ಯಕ್ತಿತ್ವಕ್ಕೆ ಹೆಸರಾಗಿದ್ದರು. ಅವರ ಪಾತ್ರಗಳು ಇಂದು ಅಭಿಮಾನಿಗಳ ಕಣ್ಣ ಮುಂದೆ ಹಸಿರಾಗಿದೆ. ಬೆಳ್ಳಿತೆರೆಯಲ್ಲಿ ವಕೀಲನಾಗಿ ಅವರು ನೀಡಿದ ಆ ಕೊನೆಯ ಅಭಿನಯವು ಕನ್ನಡ ಚಿತ್ರರಂಗದ ಇತಿಹಾಸದಲ್ಲಿ ಅವರ ನೆನಪನ್ನು ಚಿರಸ್ಥಾಯಿಯಾಗಿಸಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Published On – 8:56 am, Wed, 13 May 26

Source link