ಮಸ್ಕತ್ಗೆ ಪ್ರಧಾನಿ ಮೋದಿ ಭೇಟಿ; ಭಾರತ-ಓಮನ್ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಸಹಿ – Kannada News | PM Modi Oman Visit India and Oman signed free trade agreement
ಮಸ್ಕತ್, ಡಿಸೆಂಬರ್ 18: ಭಾರತ ಮತ್ತು ಓಮನ್ (PM Modi Oman Visit) ಇಂದು ಪ್ರಮುಖ ಮುಕ್ತ ವ್ಯಾಪಾರ ಒಪ್ಪಂದಕ್ಕೆ (FTA) ಸಹಿ ಹಾಕಿವೆ. ಇಂದು (ಡಿ. 18) ಸಹಿ ಹಾಕಲಾದ ಈ ಒಪ್ಪಂದವು ಎರಡೂ ದೇಶಗಳ ನಡುವಿನ ಆರ್ಥಿಕ ಸಂಬಂಧಗಳನ್ನು ಬಲಪಡಿಸುವತ್ತ ಮಹತ್ವದ ಹೆಜ್ಜೆಯನ್ನು ಗುರುತಿಸುತ್ತದೆ. ಈ ಒಪ್ಪಂದದ ಭಾಗವಾಗಿ ಜವಳಿ, ಕೃಷಿ ಸರಕುಗಳು ಮತ್ತು ಚರ್ಮದ ವಸ್ತುಗಳು ಸೇರಿದಂತೆ ಭಾರತದ ರಫ್ತಿನ ಶೇ. 98ಕ್ಕಿಂತ ಹೆಚ್ಚಿನ ಸುಂಕಗಳನ್ನು ಓಮನ್ ತೆಗೆದುಹಾಕಲಿದೆ. ಹಾಗೇ, ಖರ್ಜೂರ, ಅಮೃತಶಿಲೆ…