Category Archives: Blog

Your blog category

Horoscope Today: ಇಂದು ಈ ರಾಶಿಯವರಿಗೆ ಹಿತ ಶತ್ರುಗಳ ಕಾಟ!

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಮೇ 12, ಮಂಗಳವಾರದ ದ್ವಾದಶ ರಾಶಿಗಳ ಫಲಾಫಲವನ್ನು ನೀಡಿದ್ದಾರೆ. ಈ ದಿನವು ಪರಾಭವ ನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಕೃಷ್ಣ ಪಕ್ಷ ದಶಮಿ, ಪೂರ್ವಾಭಾದ್ರ ನಕ್ಷತ್ರ, ವೈದೃತಿ ಯೋಗ ಮತ್ತು ಭದ್ರಕರಣವನ್ನು ಒಳಗೊಂಡಿದೆ. ರಾಹುಕಾಲ ಮಧ್ಯಾಹ್ನ 3:25 ರಿಂದ 5:00ರ ವರೆಗೆ ಇರುತ್ತದೆ. ಸರ್ವಸಿದ್ಧಿ, ಸಂಕಲ್ಪ ಮತ್ತು ಶುಭ ಕಾಲಗಳು ಮಧ್ಯಾಹ್ನ 12:16 ರಿಂದ 1:51ರ ವರೆಗೆ ಇರಲಿವೆ ಎಂದು ಗುರೂಜಿ ತಿಳಿಸಿದ್ದಾರೆ.

 

 

Source link

Daily Devotional: ಸಂತಾನವನ್ನು ಮುಂದೂಡಿದರೆ ಯಾವ ದೋಷ ಉಂಟಾಗುತ್ತೆ? – Kannada News | Santana Dosha: The Impact of Postponing Children According to Astrology

ಸಂತಾನವನ್ನು ಮುಂದೂಡಿದರೆ ಯಾವ ದೋಷ ಉಂಟಾಗುತ್ತೆ ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಆಧುನಿಕ ಜೀವನಶೈಲಿಯಲ್ಲಿ, ಅನೇಕ ಜನರು ವೈಯಕ್ತಿಕ ಮಹತ್ವಾಕಾಂಕ್ಷೆಗಳಿಗಾಗಿ ಗರ್ಭ ಧಾರಣೆಯನ್ನು ಮುಂದೂಡುತ್ತಾರೆ. ಆದರೆ, ಜ್ಯೋತಿಷ್ಯ ಮತ್ತು ಧಾರ್ಮಿಕ ನಂಬಿಕೆಗಳ ಪ್ರಕಾರ, ಸಂತಾನವನ್ನು ನಿರ್ಲಕ್ಷಿಸುವುದು ಅಥವಾ ಉದ್ದೇಶಪೂರ್ವಕವಾಗಿ ವಿಳಂಬ ಮಾಡುವುದು ಗಂಭೀರ ಪರಿಣಾಮಗಳನ್ನು ಉಂಟುಮಾಡುತ್ತದೆ. ಮಕ್ಕಳನ್ನು ಸರಿಯಾದ ಸಮಯದಲ್ಲಿ ಪಡೆಯದಿದ್ದರೆ, ವೃದ್ಧಾಪ್ಯದಲ್ಲಿ ಹಲವು ಸಮಸ್ಯೆಗಳು ಎದುರಾಗಬಹುದು.

ಜಾತಕದಲ್ಲಿ ಸಂತಾನ ಸ್ಥಾನವಾದ ಐದನೇ ಮನೆಯನ್ನು ನಿರ್ಲಕ್ಷಿಸಿದಾಗ, ಗುರು ಗ್ರಹದ ಕೋಪಕ್ಕೆ ಗುರಿಯಾಗಬೇಕಾಗುತ್ತದೆ. ಇದು ದಂಪತಿಗಳಿಬ್ಬರ ಮೇಲೂ ಪರಿಣಾಮ ಬೀರಿ ಕಷ್ಟಗಳನ್ನು ತರಬಹುದು. ಸಂತಾನ ವಿಳಂಬದಿಂದಾಗಿ ಸರ್ಪ ಶಾಪ ಮತ್ತು ಸಂತಾನ ದೋಷಗಳು ಕಾಡುತ್ತವೆ. ಶನಿಯು ಐದನೇ ಮನೆಯನ್ನು ದೃಷ್ಟಿಸಿದಾಗ ಶಾಶ್ವತವಾಗಿ ಸಂತಾನವಿಲ್ಲದ ಪರಿಸ್ಥಿತಿ ಉಂಟಾಗಬಹುದು. ಗರ್ಭಪಾತವು ಮಂಗಳ ಗ್ರಹದ ಕೋಪಕ್ಕೆ ಕಾರಣವಾಗಿ ಪಿತೃ ದೋಷಗಳನ್ನು ತರಬಹುದು. ಆದ್ದರಿಂದ, ಸರಿಯಾದ ಸಮಯದಲ್ಲಿ ಸಂತಾನವನ್ನು ಹೊಂದುವುದು ದೈವಾನುಗ್ರಹ ಮತ್ತು ಜೀವನದ ಪರಿಪೂರ್ಣತೆಗೆ ಅತ್ಯಗತ್ಯ ಎಂದು ಜ್ಯೋತಿಷ್ಯ ಶಾಸ್ತ್ರ ತಿಳಿಸುತ್ತದೆ ಎಂದು ಗುರೂಜಿ ವಿವರಿಸಿದ್ದಾರೆ.

 

 

Source link

‘ದೃಶ್ಯಂ 3’ ಚಿತ್ರದಲ್ಲಿ ಭಾರೀ ಬದಲಾವಣೆ; ಕನ್ನಡ ವರ್ಷನ್ ಕಥೆ ಏನು? – Kannada News | Drishyam 3: Major Changes What’s the Story for Kannada, Hindi and Malayalam Versions?

‘ದೃಶ್ಯಂ’ ಚಿತ್ರದ ಸರಣಿಗೆ ಭಾರತ ಚಿತ್ರರಂಗದಲ್ಲಿ ಭಾರೀ ಬೇಡಿಕೆ ಇದೆ. ಈಗ ಎಲ್ಲರ ಕಣ್ಣು ‘ದೃಶ್ಯಂ 3’ ಮೇಲಿದೆ. ಈ ಕುರಿತು ಇತ್ತೀಚಿನ ಸಂದರ್ಶನವೊಂದರಲ್ಲಿ ಪನೋರಮಾ ಸ್ಟುಡಿಯೋಸ್‌ನ ಅಭಿಷೇಕ್ ಪಾಠಕ್ ಮಹತ್ವದ ಅಪ್‌ಡೇಟ್ ನೀಡಿದ್ದಾರೆ. ಅಜಯ್ ದೇವಗನ್ ಅಭಿನಯದ ಹಿಂದಿ ಆವೃತ್ತಿಯು ಮೋಹನ್‌ಲಾಲ್ ಅವರ ಮಲಯಾಳಂ ಆವೃತ್ತಿಗಿಂತ ಭಿನ್ನವಾಗಿರಲಿದೆ ಎಂದು ರಿವೀಲ್ ಮಾಡಿದ್ದಾರೆ. ಈ ಚಿತ್ರವನ್ನು ಅವರು ನಿರ್ಮಿಸುವುದರ ಜೊತೆಗೆ ನಿರ್ದೇಶನವನ್ನೂ ಮಾಡಿದ್ದಾರೆ.

ಹಿಂದಿ ‘ದೃಶ್ಯಂ 3’ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದೆಯಂತೆ. ಸಣ್ಣಪುಟ್ಟ ಪ್ಯಾಚ್‌ವರ್ಕ್ ಕೆಲಸಗಳು ನಡೆಯುತ್ತಿವೆ. ಈ ಚಿತ್ರವನ್ನು ಅಕ್ಟೋಬರ್ 2ರಂದು ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ. ಮಲಯಾಳಂನಲ್ಲಿ ಮೇ 21ಕ್ಕೆ ತೆರೆಗೆ ಬರಲಿದೆ. ವಿಶೇಷವೆಂದರೆ, ಮಲಯಾಳಂ ಆವೃತ್ತಿಯು ಕೌಟುಂಬಿಕ ಡ್ರಾಮಾಕ್ಕೆ ಹೆಚ್ಚು ಒತ್ತು ನೀಡಿದರೆ, ಹಿಂದಿ ಆವೃತ್ತಿಯನ್ನು ಪಕ್ಕಾ ‘ಫ್ಯಾಮಿಲಿ ಥ್ರಿಲ್ಲರ್’ ಆಗಿ ರೂಪಿಸಲಾಗಿದೆ. ಹಿಂದಿ ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಕಥೆಯ ಹಾದಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, ಕ್ಲೈಮ್ಯಾಕ್ಸ್ ಕೂಡ ಪ್ರೇಕ್ಷಕರಿಗೆ ದೊಡ್ಡ ಶಾಕ್ ನೀಡಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ‘ದೃಶ್ಯಂ 3’ ಟೀಸರ್: ಜಾರ್ಜ್ ಕುಟ್ಟಿಗೆ ಮೊದಲ ಬಾರಿ ಭಯವಾಗಿದೆ

‘ದೃಶ್ಯಂ’ ಅಂತಹ ಸಿನಿಮಾಗಳನ್ನು ಬರೆಯುವಾಗ ಮೊದಲು ಕ್ಲೈಮ್ಯಾಕ್ಸ್ ಸಿದ್ಧಪಡಿಸಿಕೊಳ್ಳಬೇಕು ಎಂದು ಅಭಿಷೇಕ್ ಹೇಳಿದ್ದಾರೆ. ಜೀತು ಜೋಸೆಫ್ ಅವರ ಮಲಯಾಳಂ ಡ್ರಾಫ್ಟ್ ಮತ್ತು ತಮ್ಮ ಹಿಂದಿ ಡ್ರಾಫ್ಟ್ ನಡುವೆ ಸಾಕಷ್ಟು ಚರ್ಚೆಗಳು ನಡೆದಿದ್ದು, ಅಂತಿಮವಾಗಿ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸುವಂತಹ ಚಿತ್ರಕಥೆಯನ್ನು ಸಿದ್ಧಪಡಿಸಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಕನ್ನಡದ ‘ದೃಶ್ಯ 3’ ಕಥೆ ಏನು?:

ಹಿಂದಿ ಮತ್ತು ಮಲಯಾಳಂನಲ್ಲಿ ಸಿದ್ಧತೆಗಳು ಭರ್ಜರಿಯಾಗಿ ನಡೆಯುತ್ತಿದ್ದರೆ, ಕನ್ನಡದ ಪ್ರೇಕ್ಷಕರಿಗೂ ಒಂದು ಸಿಹಿ ಸುದ್ದಿಯಿದೆ. ಕನ್ನಡದಲ್ಲೂ ‘ದೃಶ್ಯ 3’ ಬರಲಿದೆ. ಆದರೆ, ಅದು ಸದ್ಯಕ್ಕಂತೂ ಸೆಟ್ಟೇರುವುದಿಲ್ಲ. ಮೂಲಗಳ ಪ್ರಕಾರ, ಕನ್ನಡ ಆವೃತ್ತಿಯಲ್ಲಿ ಯಾವುದೇ ದೊಡ್ಡ ಬದಲಾವಣೆಗಳನ್ನು ಮಾಡದೆ, ಮಲಯಾಳಂನ ಮೂಲ ಕಥೆಯನ್ನೇ ಅನುಸರಿಸುವ ಸಾಧ್ಯತೆ ಹೆಚ್ಚಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಅಭಿಮಾನಿಗಳು ಈ ಚಿತ್ರಕ್ಕಾಗಿ ಸ್ವಲ್ಪ ಸಮಯ ಕಾಯಲೇಬೇಕಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು: ಕಬ್ಬನ್ ಪಾರ್ಕ್‌ನಲ್ಲಿ ಕಳೆಗಟ್ಟಿದ ಮಾವು ಮೇಳ, ಖರೀದಿಗೆ ಮುಗಿಬಿದ್ದ ಮಾವು ಪ್ರಿಯರು

ಬೆಂಗಳೂರು, ಮೇ 12: ಕಬ್ಬನ್ ಪಾರ್ಕ್‌ನಲ್ಲಿ ಆಯೋಜಿಸಲಾದ ಮಾವು ಮತ್ತು ಹಲಸು ಮೇಳ ಜನರನ್ನು ಸೆಳೆಯುತ್ತಿದೆ. ಮೇ 9 ರಂದು ಆರಂಭಗೊಂಡು ಮೇ 18 ರವರೆಗೆ ನಡೆಯುತ್ತಿರುವ ಈ ಮೇಳದಲ್ಲಿ ಮಾವು ಪ್ರಿಯರು ವಿವಿಧ ತಳಿಯ ಮಾವಿನ ಹಣ್ಣುಗಳಾದ ಮಲ್ಗೋವಾ, ನೀಲಂ, ತೂತಾಪುರಿ, ರಸಪುರಿ ಮತ್ತು ಹಲಸಿನ ಹಣ್ಣುಗಳಿಗೆ ಮುಗಿಬೀಳುತ್ತಿದ್ದಾರೆ. ಮಾವಿನಿಂದ ತಯಾರಿಸಿದ ಐಸ್ ಕ್ರೀಂ, ಜ್ಯೂಸ್, ಹಲ್ವಾ ಸೇರಿದಂತೆ ಹಲವು ಖಾದ್ಯಗಳು ಪ್ರವಾಸಿಗರ ಗಮನ ಸೆಳೆಯುತ್ತಿವೆ. ಚಿಕ್ಕಬಳ್ಳಾಪುರ, ರಾಮನಗರ ಸೇರಿದಂತೆ ಹಲವು ಭಾಗಗಳಿಂದ ರೈತರು ತಮ್ಮ ಉತ್ಪನ್ನಗಳನ್ನು ನೇರವಾಗಿ ಮಾರಾಟ ಮಾಡುತ್ತಿದ್ದಾರೆ.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಕೂಡ ಸೋಮವಾರ ಮಾವು ಮೇಳಕ್ಕೆ ಭೇಟಿ ನೀಡಿದ್ದು, ರೈತರ ಬೆಳೆಗಳಿಗೆ ಸೂಕ್ತ ಬೆಲೆ ಹಾಗೂ ಕೋಲ್ಡ್ ಸ್ಟೋರೇಜ್ ಸೌಲಭ್ಯ ಒದಗಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರು ಅಂದುಕೊಂಡಿರುವ ಕೆಲಸ ಸಾಧ್ಯವಾಗದು – Kannada News | Horoscope Today, May 12, 2026: Daily Rashi Bhavishya Predictions for All Zodiac Signs

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಭರಣೀ, ವಾರ : ಮಂಗಳ, ಪಕ್ಷ : ಕೃಷ್ಣ, ತಿಥಿ : ಏಕಾದಶೀ, ನಿತ್ಯನಕ್ಷತ್ರ : ಪೂರ್ವಾಭಾದ್ರ, ಯೋಗ : ವೈಧೃತಿ, ಕರಣ : ಬವ, ಸೂರ್ಯೋದಯ – 05 – 59 am, ಸೂರ್ಯಾಸ್ತ – 06 – 42 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 15:32 – 17:07, ಯಮಗಂಡ ಕಾಲ 09:10 – 10:45, ಗುಳಿಕ ಕಾಲ 12:21 – 13:56.

ಮೇಷ ರಾಶಿ: ನಿಮ್ಮ ಸಂಗಾತಿಯೊಂದಿಗಿನ ನಿಮ್ಮ ಸಂಬಂಧದಲ್ಲಿ ಕೆಲವು ಏರಿಳಿತಗಳು ಇರಬಹುದು. ವೈಯಕ್ತಿಕ‌ ಜೀವನದಿಂದ ಹೊರಬರಲು ಪ್ರಯತ್ನ ನಡೆಯಲಿದೆ. ಹಣದ ವಿಚಾರದಲ್ಲಿ ಜಾಣೆ ಅಗತ್ಯ. ಸಂಗಾತಿಯೊಂದಿಗೆ ಜಗಳ ಉಂಟಾದರೂ ಅವರು ಶಾಂತಿ ಕಾಪಾಡುತ್ತಾರೆ. ನಿರೀಕ್ಷಿತ ಕಾರ್ಯವನ್ನು ಸಾಧಿಸುವ ತನಕ ನಿಮಗೆ ನೆಮ್ಮದಿ ಸಿಗದು. ಅಧಿಕಾರಿಗಳ ಜೊತೆ ಯೋಜನೆಯ ವಿವರಗಳನ್ನು ಹಂಚಿಕೊಳ್ಳುವಿರಿ.

ವೃಷಭ ರಾಶಿ: ಹಣಕಾಸಿನ ವಿಷಯಗಳಲ್ಲಿ ಯಾರಾದರೂ ನಿಮಗೆ ಸಹಾಯ ಮಾಡುತ್ತಾರೆ. ಗಂಭೀರ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡಿ. ವ್ಯವಹಾರದಲ್ಲಿ ಲಾಭಸಾಧ್ಯ. ಮಕ್ಕಳಿಗೆ ಸಹಾಯ ಮಾಡಿ ಒಳ್ಳೆಯ ಸಂಬಂಧ ಬೆಳೆಸಿಕೊಳ್ಳಿ. ವ್ಯಾವಹಾರಿಕ ಸಂದಿಗ್ಧತೆಯನ್ನು ಸರಿಮಾಡಲು ಆಗದು. ಭವಿಷ್ಯದ ನಿಮ್ಮ ಕಲ್ಪನೆಗೆ ಒಂದು ರೂಪವು ಸಿಕ್ಕಂತೆ ತೋರುವುದು. ದಿನ ನಿತ್ಯದ ಚಟುವಟಿಕೆಗಳು ಬೇಸರ ತರಿಸುವುದು. ಏನಾದರೂ ಹೊಸತನ್ನು ಮಾಡಲು ಇಷ್ಟಪಡುವಿರಿ.

ಮಿಥುನ ರಾಶಿ: ನಿಮಗೆ ಬೇಕಾದುದನ್ನು ಮಾತ್ರ ಹೇಳಿಕೊಳ್ಳುವಿರಿ. ನಿಮ್ಮ ಗುರಿಗಳನ್ನು ಸಾಧಿಸಲು ನಿಮ್ಮನ್ನು ಹತ್ತಿರಕ್ಕೆ ತರುತ್ತದೆ. ಸ್ಪಷ್ಟತೆಯು ಉತ್ತಮ ಸಂವಾದಕ್ಕೆ ಕಾರಣವಾಗುತ್ತದೆ. ನಾಯಕತ್ವದ ಗುಣದಿಂದ ಹೊಣೆಗಾರಿಕೆಗಳೂ ಹೆಚ್ಚಾಗುತ್ತವೆ. ಯಾರಾದರೂ ನಿಮ್ಮ ಮಾತನ್ನು ನಂಬುವರು. ದೂರದ ಊರಿಗೆ‌ ಒಬ್ಬರೇ ವಾಹನ ಚಾಲಾಯಿಸುವಿರಿ. ವ್ಯಾಪರದಲ್ಲಿ‌ ಮಧ್ಯವರ್ತಿಗಳಿಂದ ನಿಮ್ಮ ವ್ಯಾಪಾರವು ಕುಂಠಿತ.

ಕರ್ಕಾಟಕ ರಾಶಿ: ನಿಮ್ಮ ಪರವಾಗಿ ಮಾತನಾಡಲು ಯಾರಾದರೂ ಬೇಕಾಗುತ್ತಾರೆ. ಸಾಮಾಜಿಕ ಸೇವೆಗೆ ವಿರಾಮ ಹೇಳುವಿರಿ. ಹಳೆಯ ಸಂಬಂಧಗಳು ಮತ್ತೆ ಬರುವ ಸಾಧ್ಯತೆ ಇರುವ ದಿನ. ಜ್ಞಾನಾರ್ಜನೆಗೆ ಪ್ರಯಾಣ ಮಾಡುವಿರಿ. ಉದ್ಯೋಗದಲ್ಲಿ ವಿವೇಕ ಅವಶ್ಯ. ನಿಮ್ಮ ನಿಷ್ಕಾಳಜಿಯಿಂದ ಅನಾಯಾಸವಾಗಿ ಬರುವ ಆದಾಯವು ಸಿಗದೇ ಹೋಗುವುದು. ಆರ್ಥಿಕಸ್ಥಿತಿಯು ನಿಮಗೆ ಖುಷಿಯನ್ನು ಕೊಟ್ಟರೂ ನೆಮ್ಮದಿ‌ ಇರದು.

ಸಿಂಹ ರಾಶಿ: ಹಣದ ಬದಲು ಸುರಕ್ಷಿತ ಹೂಡಿಕೆ ಅತ್ಯುತ್ತಮ. ಪ್ರೀತಿ ಜೀವನ ಚೈತನ್ಯ ತುಂಬಿದಂತೆ ತೋರುತ್ತದೆ. ಉದ್ಯೋಗದಲ್ಲಿ ಉತ್ತಮ ಸ್ಥಾನ ಹಾಗೂ ಲಾಭ ಸಿಗಲಿದೆ. ಮನೆಯಲ್ಲಿ ಸಮಸ್ಯೆಗಳಿದ್ದರೂ ನೀವು ಸಮಾಧಾನದಿಂದಿರುವುದು ಉತ್ತಮ. ಇಂದು ಸಮಯವನ್ನು ಕಳೆಯುವುದು ಕಷ್ಟವಸದೀತು. ಮಾತಿನ‌ ಮೇಲೆ ಹಿಡಿತ ತಪ್ಪಬಹುದು. ಸರ್ಕಾರದ ಸೌಲಭ್ಯವು ನಿಮಗೆ ಸಿಗದೇ ಹೋಗಬಹುದು.

ಕನ್ಯಾ ರಾಶಿ: ಇಂದಿನ ಕೆಲವು ಸಂದರ್ಭಗಳಿಂದಾಗಿ ನಿಮ್ಮ ಕೆಲಸದ ಪ್ರಯತ್ನಗಳು ವಿಳಂಬವಾಗುವ ಸಾಧ್ಯತೆಯಿದೆ. ಅನಂತರ ತೊಂದರೆ ತಪ್ಪಿಸಲು, ಯಾವುದೇ ಪ್ರಮುಖ ಜವಾಬ್ದಾರಿಯನ್ನು ತೆಗೆದುಕೊಳ್ಳುವ ಮೊದಲು ಯೋಚಿಸಿ. ಮಕ್ಕಳ ಬಗ್ಗೆ ಹೆಚ್ಚಿನ ಕಾಳಜಿ ಅಗತ್ಯ. ಸ್ತ್ರೀಯರು ಉದ್ಯೋಗಕ್ಕೆ ಅಲ್ಪವಿರಾಮ ಹೇಳವ ಸಾಧ್ಯತೆ ಇದೆ. ಯಾವುದೇ ಪ್ರಮುಖ ಕೆಲಸವು ನಿಮ್ಮಿಂದ ತಪ್ಪಿಸಿಕೊಳ್ಳುವುದಿಲ್ಲ. ಪ್ರೇಮ ಸಂಬಂಧಗಳು ಮಿಶ್ರವಾಗಿರುತ್ತದೆ.

ತುಲಾ ರಾಶಿ: ಇಂದು ನೀವು ಅನ್ಯರಿಂದ ಕಾರ್ಯವನ್ನು ಮಾಡಿಸಿಕೊಳ್ಳುವಿರಿ. ಆದ್ದರಿಂದ ಅವರ ಅಭಿಪ್ರಾಯವನ್ನು ಗೌರವಿಸಿ ಮತ್ತು ಅವರಿಗೆ ಸ್ವಲ್ಪ ಜಾಗವನ್ನು ನೀಡಿ. ಆತ್ಮವಿಶ್ವಾಸದ ಮೂಲಕ ನೀವು ಅನಾರೋಗ್ಯವನ್ನು ಎದುರಿಸಬಹುದು. ಹಣಕಾಸು ಯೋಜನೆಗಳಲ್ಲಿ ಜಾಗ್ರತೆ ಅವಶ್ಯಕ. ಸ್ತ್ರೀಯರ ಉಪಸ್ಥಿತಿಯು ನಿಮಗೆ ಬಲವನ್ನು ತಂದುಕೊಡುವುದು. ಅಧಿಕ ಓಡಾಟದಿಂದ ನೀವು ಆಯಾಸಗೊಳ್ಳುವಿರಿ. ನಿಮ್ಮ ವೇತನದ ಬಗ್ಗೆ ಹೇಳಬೇಕಾಗಿಬರಬಹುದು.

ವೃಶ್ಚಿಕ ರಾಶಿ: ನೀವು ಪ್ರೇಮ ಸಂಬಂಧದಲ್ಲಿ ಬೇಸರವನ್ನು ಅನುಭವಿಸಬಹುದು, ಆದ್ದರಿಂದ ಪ್ರೀತಿಯ ಸಂಬಂಧವನ್ನು ಕೇಂದ್ರೀಕರಿಸಿ ಮತ್ತು ನಿಮ್ಮ ಸಂಗಾತಿಯ ಜೊತೆ, ಮಕ್ಕಳ ಜೊತಡ ಸಮಯ ಕಳೆಯಲು ಆಗದು. ಹಣ ಉಳಿಸುವ ಯತ್ನ ಇಂದು ಯಶಸ್ವಿ. ಆದಾಯದಿಂದ ಬಂದ ಹಣವನ್ನು ಸಂಗ್ರಹಿಸಲು ಪ್ರಯತ್ನಿಸಿ. ಇಲ್ಲವಾದರೆ ಸಂಪತ್ತನ್ನು ಉಳಿಸಿಕೊಳ್ಳುವುದು ಕಷ್ಟವಾದೀತು. ಅಸಾಧ್ಯವನ್ನು ಸಾಧಿಸುವ ಹಠವು ಬೇಡವಾದೀತು.

ಧನು ರಾಶಿ: ಅನಗತ್ಯ ಖರ್ಚುಗಳನ್ನು ಕಡಿಮೆ ಮಾಡಲು ಪ್ರಯತ್ನಿಸಿ. ಬೇರೆಕಡೆ ಇಟ್ಟ ಹಣದ ವ್ಯವಹಾರಗಳಲ್ಲಿ ಎಚ್ಚರ ವಹಿಸಿ. ಯಂತ್ರದಿಂದ ಆದಷ್ಟು ದೂರವಿರಿ. ಬಳಕೆಯನ್ನು ಕಡಿಮೆ ಮಾಡಿದರೆ ಇನಗನೂ ಒಳ್ಳೆಯದು. ಮನೆಯವರೊಂದಿಗೆ ಹೆಚ್ಚು ಕಾಲ ಇಲ್ಲದಿದ್ದರೆ ಸಂಬಂಧಗಳ ಮೇಲೆ ಪರಿಣಾಮ ಬೀರುತ್ತದೆ. ನಿಮ್ಮನ್ನು ದುರುಪಯೋಗ ಮಾಡಿಕೊಳ್ಳುವ ಸಂಭವಿದೆ.‌ ಅಧಿಕೃತ ಮಾಡಿಕೊಳ್ಳದೇ ಯಾವುದನ್ನೂ ಹೇಳುವುದು ಬೇಡ.

ಮಕರ ರಾಶಿ: ಇಂದು ನಿಮಗೆ ಪ್ರೇಮವು ಸಂತೋಷವನ್ನು ಕೊಡದೇಹೊಇಗಬಹುದು. ನಿಮ್ಮ ಸಂಗಾತಿಗೆ ಈ ವಾರ ಸ್ಥಳಾವಕಾಶ ಬೇಕಾಗುತ್ತದೆ, ಅವರ ಅಭಿಪ್ರಾಯವನ್ನು ಗೌರವಿಸಿ. ಆತ್ಮವಿಶ್ವಾಸದಿಂದ ನೀವು ದಿನವನ್ನು ಸುಗಮವಾಗಿ ಕಳೆಯುತ್ತೀರಿ. ಹಣಕಾಸಿನಲ್ಲಿ ಎಚ್ಚರಿಕೆ ಅಗತ್ಯ. ಸಂಗಾತಿಯೊಂದಿಗೆ ಜಗಳವಾದರೂ, ತಾಳ್ಮೆ ಬೇಕು. ಪಾಲುದಾರಿಕೆಯಲ್ಲಿ ನಿಮ್ಮ ಪಾಲುದಾರಿಕೆಯೇ ಅಧಿಕವಾಗಿರುವುದು. ಶತ್ರುವಿನ ಮೇಲೆ ಸೇಡು ತೀರಿಸಿಕೊಳ್ಳಲು ಅಧಿಕ ಖರ್ಚನ್ನು ಮಾಡುವಿರಿ.

ಕುಂಭ ರಾಶಿ: ಮನೆಯ ನವೀಕರಣದ ಬಗ್ಗೆ ಯಾರನ್ನಾದರೂ ಸಂಪರ್ಕಿಸಿ ಮುಂದುವರಿಯುವಿರಿ. ಸಂಗಾತಿಯ ವ್ಯವಹಾರಗಳಲ್ಲಿ ಕಡಿಮೆ ಹಸ್ತಕ್ಷೇಪ ಮಾಡುವುದು ಉತ್ತಮ. ಹಣದ ಹೂಡಿಕೆ ಕುರಿತು ಯೋಚಿಸಿ ನಿರ್ಧಾರ ಮಾಡಿ. ಕುಟುಂಬದಲ್ಲಿ ಭಿನ್ನಾಭಿಪ್ರಾಯಗಳು ಇರುವಾಗ ಸಹನೆವಹಿಸಿ. ಓಡಾಟದ ಕೆಲಸಕ್ಕೆ ನಿಮ್ಮನ್ನು ಬಳಸಿಕೊಳ್ಳಬಹುದು. ಉತ್ಸಾಹವೂ ಇರಲಿದೆ. ಯಾರನ್ನೋ ನಿಂದಿಸುವುದು ಅಭ್ಯಾಸ ಮಾಡಿಕೊಳ್ಳುವುದು ಬೇಡ.‌

ಮೀನ ರಾಶಿ: ವೃತ್ತಿಜೀವನಕ್ಕೆ ಬೇಕಾದ ಸಿದ್ಧತೆಯಲ್ಲಿ ಇರುವಿರಿ. ಕೆಲಸದಲ್ಲಿ ಪೂರ್ವಭಾವಿಯಾಗಿ ತಿಳಿದುಕೊಳ್ಳಲು ಹೋದರೆ, ಕೆಲಸಗಳನ್ನು ಅನಾಯಸವಾಗಿ ನಡೆಸಬಹುದು. ಅತಿಯಾದ ಸಮಯವನ್ನು ಬಾಕಿಯಿರುವ ಕೆಲಸಗಳಿಗೆ ಬಳಸಬಹುದು. ಹಣಕಾಸಿನ ಕೆಲಸಗಳಲ್ಲಿ ಯಶಸ್ಸು ಸಿಗಬಹುದು. ನಿಮ್ಮನ್ನು ನೀವು ದುರ್ಬಲ ಮಾಡಿಕೊಳ್ಳುವುದು ಬೇಡ. ನಿಮ್ಮ ಬಗ್ಗೆ ಪ್ರಶಂಸೆಯ ನುಡಿಗಳು ಕೇಳಿಬರಬಹುದು.

ಲೋಹಿತ ಹೆಬ್ಬಾರ್ – 8762924271 (what’s app only)

Source link

PBKS vs DC: ಸತತ 4ನೇ ಪಂದ್ಯ ಸೋತ ಪಂಜಾಬ್; ಡೆಲ್ಲಿ ಪ್ಲೇಆಫ್ ಕನಸು ಜೀವಂತ – Kannada News | IPL 2026: Delhi Capitals Beat PBKS in Thriller, Playoff Hopes Alive After Chasing 211

ಐಪಿಎಲ್ 2026 (IPL 2026) ರ 55ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (PBKS vs DC) ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಸತತ ಸೋಲುಗಳಿಂದ ಕಂಗೆಟ್ಟಿರುವ ಡೆಲ್ಲಿ ತಂಡ, ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿ ರೋಚಕ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಡೆಲ್ಲಿ ತಂಡದ ಪ್ಲೇ ಆಫ್ ಕನಸು ಜೀವಂತವಾಗಿ ಉಳಿದರೆ, ಇತ್ತ ಪಂಜಾಬ್ ತಂಡ ಸತತ 4ನೇ ಸೋಲಿಗೆ ಕೊರಳೊಡ್ಡಿತು.  ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಪಂಜಾಬ್ 211 ರನ್​ಗಳ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ 19 ಓವರ್​ಗಳಲ್ಲಿ ಗುರಿ ಬೆನ್ನಟ್ಟಿ ದಾಖಲೆಯ ಜಯ ದಾಖಲಿಸಿತು

ಪಂಜಾಬ್​ಗೆ ಸ್ಫೋಟಕ ಆರಂಭ

ಮೊದಲು ಬ್ಯಾಟಿಂಗ್ ಮಾಡಿದ ಪಂಜಾಬ್ ತಂಡದ ಆರಂಭಿಕ ಜೋಡಿ ಉತ್ತಮ ಆರಂಭ ನೀಡಿತು. ಪ್ರಭ್ಸಿಮ್ರಾನ್ ಸಿಂಗ್ ಮತ್ತು ಪ್ರಿಯಾಂಶ್ ಆರ್ಯ ಇಬ್ಬರೂ ಅರ್ಧಶತಕದ ಜೊತೆಯಾಟವಾಡಿದರು. ಇಬ್ಬರೂ ಪವರ್‌ಪ್ಲೇನ ಸಂಪೂರ್ಣ ಲಾಭ ಪಡೆದು 78 ರನ್‌ಗಳ ಜೊತೆಯಾಟವಾಡಿದರು. ಆದಾಗ್ಯೂ, ಪ್ರಭ್ಸಿಮ್ರಾನ್ ಸಿಂಗ್ ಔಟಾದಾಗ ಈ ಜೋಡಿ ಬೇರ್ಪಟ್ಟಿತು. ಪ್ರಭ್ಸಿಮ್ರಾನ್ ಸಿಂಗ್ 18 ರನ್‌ಗಳ ಕೊಡುಗೆ ನೀಡಿದರು.

ಶ್ರೇಯಸ್ ಅಜೇಯ ಅರ್ಧಶತಕ

ಎಂದಿನಂತೆ ತನ್ನ ಹೊಡಿಬಡಿ ಆಟ ಮುಂದುವರೆಸಿದ ಪ್ರಿಯಾಂಶ್ 33 ಎಸೆತಗಳಲ್ಲಿ 169.70 ಸ್ಟ್ರೈಕ್ ರೇಟ್‌ನಲ್ಲಿ 56 ರನ್ ಗಳಿಸಿದರು. ಈ ಇನ್ನಿಂಗ್ಸ್‌ನಲ್ಲಿ ಪ್ರಿಯಾಂಶ್ 6 ಸಿಕ್ಸರ್‌ಗಳು ಮತ್ತು 2 ಬೌಂಡರಿಗಳನ್ನು ಬಾರಿಸಿದರು. ಕೂಪರ್ 27 ಎಸೆತಗಳಲ್ಲಿ 2 ಸಿಕ್ಸರ್‌ ಮತ್ತು 3 ಬೌಂಡರಿಗಳೊಂದಿಗೆ 38 ರನ್ ಬಾರಿಸಿದರೆ, ನಾಯಕನ ಇನ್ನಿಂಗ್ಸ್ ಆಡಿದ ಶ್ರೇಯಸ್ ಅಯ್ಯರ್ 36 ಎಸೆತಗಳಲ್ಲಿ 59 ರನ್ ಗಳಿಸಿ ಅಜೇಯರಾಗುಳಿದರು. ಈ ಇನ್ನಿಂಗ್ಸ್‌ನಲ್ಲಿ ಶ್ರೇಯಸ್ 3 ಸಿಕ್ಸರ್ ಮತ್ತು 5 ಬೌಂಡರಿಗಳನ್ನು ಬಾರಿಸಿದರು. ದೆಹಲಿ ಪರ ಮಿಚೆಲ್ ಸ್ಟಾರ್ಕ್ ಮತ್ತು ಮಾಧವ್ ತಿವಾರಿ ತಲಾ 2 ವಿಕೆಟ್ ಪಡೆದರು. ಮುಖೇಶ್ ಕುಮಾರ್ 1 ವಿಕೆಟ್ ಪಡೆದರು.

ಡೆಲ್ಲಿಗೆ ಆರಂಭಿಕ ಆಘಾತ

ಈ ಗುರಿ ಬೆನ್ನಟ್ಟಿದ ಡೆಲ್ಲಿ ತಂಡಕ್ಕೆ ಎಂದಿನಂತೆ ಆರಂಭದಲ್ಲೇ ಆಘಾತ ಎದುರಾಯಿತು. ಆರಂಭಿಕರಾದ ಅಭಿಷೇಕ್ ಪೂರೆಲ್ 5 ರನ್ ಬಾರಿಸಿ ಔಟಾದರೆ, ರಾಹುಲ್ ಇನ್ನಿಂಗ್ಸ್ 9 ರನ್​ಗಳಿಗೆ ಅಂತ್ಯವಾಯಿತು. ಸಾಹಿಲ್ 12 ರನ್​ಗೆ ಸುಸ್ತಾದರೆ, ಸ್ಟಬ್ಸ್​ ರನೌಟ್​ಗೆ ಬಲಿಯಾದರು. ಈ ಐಪಿಎಲ್‌ನಲ್ಲಿ ಇದೇ ಮೊದಲ ಬಾರಿಗೆ ಬ್ಯಾಟಿಂಗ್​ನಲ್ಲಿ ಮಿಂಚಿದ ಅಕ್ಷರ್ ಪಟೇಲ್ 56 ರನ್​ಗಳ ಇನ್ನಿಂಗ್ಸ್ ಆಡಿದರು. ಅಕ್ಷರ್ ಅವರ ಈ ಇನ್ನಿಂಗ್ಸ್ ಡೆಲ್ಲಿ ತಂಡದ ಗೆಲುವಿನ ಆಸೆಗೆ ಮತ್ತಷ್ಟು ಬಲ ತುಂಬಿತು.

ಶ್ರೇಯಸ್, ಮಿಲ್ಲರ್ ಅರ್ಧಶತಕ

ಅಕ್ಷರ್ ಜೊತೆಗೆ ಡೇವಿಡ್ ಮಿಲ್ಲರ್ ಕೂಡ 51 ರನ್​ಗಳ ಇನ್ನಿಂಗ್ಸ್ ಆಡುವ ಮೂಲಕ ತಂಡವನ್ನು ಜಯದ ಸನಿಹಕ್ಕೆ ತಂದರು. ಆದಾಗ್ಯೂ ಇವರಿಬ್ಬರು ತಂಡವನ್ನು ಗೆಲುವಿನ ದಡ ಮುಟ್ಟಿಸುವಲ್ಲಿ ವಿಫಲರಾದರು. ಆದರೆ ಕೆಳಕ್ರಮಾಂಕದಲ್ಲಿ ಜೊತೆಯಾದ ಆಶುತೋಷ್ ಶರ್ಮಾ ಹಾಗೂ ಮಾಧವ್ ತಿವಾರಿ ಕ್ರಮವಾಗಿ 28 ಹಾಗೂ 18 ರನ್ ಬಾರಿಸಿ ತಂಡಕ್ಕೆ ರೋಚಕ ಜಯ ತಂದುಕೊಟ್ಟರು. ಇವರಿಬ್ಬರ ಜೊತೆಗೆ ಆಕಿಬ್ ನಬಿ ಕೂಡ ಅಜೇಯ 10 ರನ್ ಬಾರಿಸಿ ಈ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:35 pm, Mon, 11 May 26

Source link

ಹಿಂದೂಗಳಿಗೆ ಅವಮಾನ, ಯುವತಿಯರಿಗೆ ಲೈಂಗಿಕ ಕಿರುಕುಳ; ಟಿಸಿಎಸ್ ನಾಸಿಕ್ ಪ್ರಕರಣದ ಬಗ್ಗೆ ಮಹಿಳಾ ಆಯೋಗದಿಂದ 50 ಪುಟದ ವರದಿ – Kannada News | Hindu religion insulted, posh failure in Toxic Workplace NCW submits 50 page report

ನವದೆಹಲಿ, ಮೇ 11: ಟಾಟಾ ಕನ್ಸಲ್ಟೆನ್ಸಿ ಸರ್ವೀಸಸ್ (TCS) ನಾಸಿಕ್ ಪ್ರಕರಣದಲ್ಲಿ ರಾಷ್ಟ್ರೀಯ ಮಹಿಳಾ ಆಯೋಗ (NCW) ಇಂದು 50 ಪುಟಗಳ ತನ್ನ ವರದಿ ಬಿಡುಗಡೆ ಮಾಡಿತು. ಬಿಪಿಒ ಘಟಕದಲ್ಲಿ ಕೆಲಸ ಮಾಡಲು ಅಹಿತಕರವಾದ ವಾತಾವರಣ, ಲೈಂಗಿಕ ಕಿರುಕುಳವನ್ನು ಮಹಿಳಾ ಆಯೋಗದ ಸಮಿತಿ ಗುರುತಿಸಿದೆ. ಟಿಸಿಎಸ್‌ನಿಂದ ಉದ್ಭವಿಸುವ ದೂರುಗಳ ವಿಷಯವನ್ನು ಎನ್‌ಸಿಡಬ್ಲ್ಯೂ ಸಮಿತಿಯು ಸ್ವಯಂಪ್ರೇರಿತವಾಗಿ ಪರಿಗಣಿಸಿ, ಆರೋಪಗಳ ತನಿಖೆಗಾಗಿ ಸಮಿತಿಯನ್ನು ರಚಿಸಿತ್ತು.

ಈ ವರದಿಯನ್ನು ಮೇ 8ರಂದು ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರಿಗೆ ಸಲ್ಲಿಸಲಾಯಿತು. ಈ ಸಮಿತಿಯು 50 ಪುಟಗಳ ವಿವರವಾದ ವರದಿಯನ್ನು ಸಿದ್ಧಪಡಿಸಿತು. ಇದರಲ್ಲಿ ಅವಲೋಕನಗಳು ಮತ್ತು 25ಕ್ಕೂ ಹೆಚ್ಚು ಶಿಫಾರಸುಗಳಿವೆ. NCW ಸಮಿತಿಯು ಏಪ್ರಿಲ್ 18 ಮತ್ತು 19ರಂದು ನಾಸಿಕ್‌ನ ಟಿಸಿಎಸ್​ ಕಚೇರಿಗೆ ಭೇಟಿ ನೀಡಿತ್ತು. ಅಲ್ಲಿ ಅವರು ಸಂತ್ರಸ್ತರು, TCSನ POSH ಆಂತರಿಕ ಸಮಿತಿ (IC) ಸದಸ್ಯರು, ಪೊಲೀಸ್ ಅಧಿಕಾರಿಗಳು ಮತ್ತು ಇತರ ಪ್ರಮುಖ ಸಾಕ್ಷಿಗಳೊಂದಿಗೆ ಸಂವಾದ ನಡೆಸಿದರು.

ಇದನ್ನೂ ಓದಿ: ಟಿಸಿಎಸ್ ಮತಾಂತರ ಪ್ರಕರಣ: ಪ್ರಮುಖ ಆರೋಪಿ ನಿದಾ ಖಾನ್ ಕೊನೆಗೂ ಅರೆಸ್ಟ್

NCW ಅಧ್ಯಕ್ಷೆ ವಿಜಯಾ ರಹತ್ಕರ್ ಅವರ ನಿರ್ದೇಶನದ ಮೇರೆಗೆ, ನ್ಯಾಯಮೂರ್ತಿ ಸಾಧನಾ ಜಾಧವ್ (ನಿವೃತ್ತ ನ್ಯಾಯಾಧೀಶರು, ಬಾಂಬೆ ಹೈಕೋರ್ಟ್), ಸಿನ್ಹಾ (ಮಾಜಿ ಡಿಜಿಪಿ, ಹರಿಯಾಣ), ವಕೀಲೆ ಮೋನಿಕಾ ಅರೋರಾ (ಭಾರತದ ಸುಪ್ರೀಂ ಕೋರ್ಟ್‌) ಅವರನ್ನು ಒಳಗೊಂಡ ಸತ್ಯಶೋಧನಾ ಸಮಿತಿಯನ್ನು ರಚಿಸಲಾಯಿತು.

ವರದಿಯ ಪ್ರಕಾರ, ಆಂತರಿಕ ಸಮಿತಿ (IC) ಪುಣೆ ಮತ್ತು ನಾಸಿಕ್‌ಗೆ ಸಾಮಾನ್ಯ ಸಮಿತಿಯಾಗಿತ್ತು. POSH ಕಾಯ್ದೆ ಅನುಸರಣೆಗಾಗಿ ಒಬ್ಬ ಆಂತರಿಕ ಸಮಿತಿ ಸದಸ್ಯರೂ ನಾಸಿಕ್ ಘಟಕಕ್ಕೆ ಭೇಟಿ ನೀಡಿಲ್ಲ ಅಥವಾ ಪರಿಶೀಲಿಸಿಲ್ಲ. POSH ನಿಯಮಗಳ ಬಗ್ಗೆ ಉದ್ಯೋಗಿಗಳಿಗೆ ತಿಳಿಸುವ ಯಾವುದೇ ಫಲಕಗಳು ಆ ಕಚೇರಿಯಲ್ಲಿ ಕಂಡುಬಂದಿಲ್ಲ.

ಇದನ್ನೂ ಓದಿ: ಸೀರೆ ಎಳೆದ್ರು, ಮೈ-ಕೈ ಮುಟ್ಟಿದ್ರು, ಟಿಸಿಎಸ್ ಐಟಿ ಸಂಸ್ಥೆಯಲ್ಲಿ ನವವಿವಾಹಿತೆಯ ನರಕಯಾತನೆ

“ಆರೋಪಿಗಳ ವಿರುದ್ಧ ಯಾವುದೇ ಉದ್ಯೋಗಿಗೆ ಧ್ವನಿ ಎತ್ತುವ ಧೈರ್ಯವಿರಲಿಲ್ಲ. ಒಂದು ವೇಳೆ ಪ್ರಶ್ನೆ ಮಾಡಿದರೂ ವರ್ಗಾವಣೆ ಮತ್ತು ಸಸ್ಪೆಂಡ್ ಮಾಡುವ ಮೂಲಕ ಅವರಲ್ಲಿ ಭಯ ಸೃಷ್ಟಿಸುತ್ತಿದ್ದರು” ಎಂದು ವರದಿ ತಿಳಿಸಿದೆ. ಆ ವರದಿಯ ಪ್ರಕಾರ, ಆರೋಪಿಗಳು ಹಿಂದೂ ಪುರಾಣ, ನಂಬಿಕೆಗಳು, ಸಂಪ್ರದಾಯಗಳು ಮತ್ತು ಆಚರಣೆಗಳನ್ನು ಅವಹೇಳನ ಮಾಡುವ ಮೂಲಕ ಮಹಿಳಾ ಉದ್ಯೋಗಿಗಳನ್ನು ಬೆದರಿಸುತ್ತಿದ್ದರು. ಇಸ್ಲಾಂ ಧರ್ಮ ಹಿಂದೂ ಧರ್ಮಕ್ಕಿಂತ ಹೆಚ್ಚು ಶ್ರೇಷ್ಠ ಧರ್ಮ ಎಂದು ಅವರು ಯುವತಿಯರನ್ನು ನಂಬಿಸಲು ಪ್ರಯತ್ನಿಸಿದ್ದರು. ಈ ಎಲ್ಲ ವಿಷಯಗಳನ್ನೂ ವರದಿಯಲ್ಲಿ ವಿವರವಾಗಿ ತಿಳಿಸಲಾಗಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:48 pm, Mon, 11 May 26

Source link

ಕಾನ್ ಸಿನಿಮೋತ್ಸವ 2026: ಈ ಬಾರಿ ಭಾರತದ ಯಾವೆಲ್ಲ ಸೆಲೆಬ್ರಿಟಿಗಳಿಗೆ ಸಿಕ್ಕಿದೆ ಆಹ್ವಾನ? – Kannada News | Cannes Film Festival 2026 Indian Celebrities list Aishwarya Rai Alia Bhatt Kalyani Priyadarshan

ಜಗತ್ತಿನ ಪ್ರತಿಷ್ಠಿತ ಸಿನಿಮೋತ್ಸವಗಳಲ್ಲಿ ಒಂದಾದ ‘ಕಾನ್ ಚಲನಚಿತ್ರೋತ್ಸವ 2026’ (Cannes Film Festival) ಮಂಗಳವಾರದಿಂದ (ಮೇ 12) ಆರಂಭವಾಗಲಿದ್ದು, ಈ ಬಾರಿ ಭಾರತೀಯ ಚಿತ್ರರಂಗದ ಪ್ರಾತಿನಿಧ್ಯ ಮತ್ತಷ್ಟು ಮೆರುಗು ಪಡೆಯಲಿದೆ. ಕೇವಲ ಬಾಲಿವುಡ್ ಮಾತ್ರವಲ್ಲದೇ ಮಲಯಾಳಂ, ಪಂಜಾಬಿ, ಮರಾಠಿ ಮತ್ತು ಗುಜರಾತಿ ಚಿತ್ರೋದ್ಯಮದ ಕಲಾವಿದರು ಜಾಗತಿಕ ವೇದಿಕೆಯಲ್ಲಿ ಮಿಂಚಲಿದ್ದಾರೆ. ಈ ಬಾರಿಯ ಕಾನ್ ಉತ್ಸವದಲ್ಲಿ (Cannes 2026) ಪಾಲ್ಗೊಳ್ಳಲಿರುವ ಪ್ರಮುಖ ಭಾರತೀಯ ಸೆಲೆಬ್ರಿಟಿಗಳ ಬಗ್ಗೆ ಮಾಹಿತಿ ಇಲ್ಲಿದೆ..

ಕಲ್ಯಾಣಿ ಪ್ರಿಯದರ್ಶನ್: ‘ಲೋಕಃ’ ಚಿತ್ರದ ಮೂಲಕ ಭಾರತದಾದ್ಯಂತ ಖ್ಯಾತಿ ಗಳಿಸಿರುವ ನಟಿ ಕಲ್ಯಾಣಿ ಪ್ರಿಯದರ್ಶನ್ ಈ ಬಾರಿ ಕಾನ್ ಅಂಗಳಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಮೇ 14ರಂದು ಅವರು ರೆಡ್ ಕಾರ್ಪೆಟ್ ಮೇಲೆ ಕಾಣಿಸಿಕೊಳ್ಳಲಿದ್ದಾರೆ.

ಐಶ್ವರ್ಯಾ ರೈ ಬಚ್ಚನ್: 2002ರಿಂದ ಕಾನ್ ಚಿತ್ರೋತ್ಸವದ ಖಾಯಂ ಸದಸ್ಯೆಯಾಗಿರುವ ಐಶ್ವರ್ಯಾ ರೈ ಈ ವರ್ಷವೂ ತಮ್ಮ ಸೌಂದರ್ಯದ ಮೂಲಕ ವಿಶ್ವದ ಗಮನ ಸೆಳೆಯಲಿದ್ದಾರೆ.

ಆಲಿಯಾ ಭಟ್: ಕಳೆದ ವರ್ಷ ಸೀರೆ ಧರಿಸಿ ಮಿಂಚಿದ್ದ ಆಲಿಯಾ ಭಟ್, ಈ ವರ್ಷವೂ ಕಾನ್ ಸಿನಿಮೋತ್ಸವದ ರೆಡ್ ಕಾರ್ಪೆಟ್ ಮೇಲೆ ಭಾರತೀಯ ಫ್ಯಾಷನ್ ಪ್ರತಿಬಿಂಬಿಸಲಿದ್ದಾರೆ.

ತಾರಾ ಸುತಾರಿಯಾ: ಬಾಲಿವುಡ್ ನಟಿ ತಾರಾ ಸುತಾರಿಯಾ ಅವರಿಗೆ ಇದು ಮೊದಲ ಕಾನ್ ಅನುಭವ. ಅವರ ಉಡುಗೆಯ ವಿನ್ಯಾಸ ಹೇಗಿರಲಿದೆ ಎಂಬ ಕುತೂಹಲ ಅಭಿಮಾನಿಗಳಲ್ಲಿ ಮನೆಮಾಡಿದೆ.

ಅದಿತಿ ರಾವ್ ಹೈದರಿ: ಇತ್ತೀಚಿನ ವರ್ಷಗಳಲ್ಲಿ ಕಾನ್ ಚಿತ್ರೋತ್ಸವದಲ್ಲಿ ಜನಪ್ರಿಯ ಸೆಲೆಬ್ರಿಟಿ ಆಗಿರುವ ಅದಿತಿ ರಾವ್ ಹೈದರಿ ಈ ಬಾರಿಯೂ ಭಾಗವಹಿಸುವುದು ಖಚಿತವಾಗಿದೆ.

ಕರಣ್ ಜೋಹರ್: ಕಳೆದ ವರ್ಷ ‘ಹೋಮ್‌ಬೌಂಡ್’ ಚಿತ್ರದ ಪ್ರದರ್ಶನದ ಮೂಲಕ ಕಾನ್ ಸಿನಿಮೋತ್ಸವಕ್ಕೆ ಪದಾರ್ಪಣೆ ಮಾಡಿದ್ದ ಕರಣ್ ಜೋಹರ್, ಈ ಬಾರಿಯೂ ಉತ್ಸವದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಇದನ್ನೂ ಓದಿ: ಕಾನ್ ಚಿತ್ರೋತ್ಸವದಲ್ಲಿ ಭಾಷಣ ಮಾಡಲಿರುವ ಕನ್ನಡದ ಯುವ ನಿರ್ದೇಶಕಿ ಕರೆನ್ ಕ್ಷಿತಿ ಸುವರ್ಣ

ಪಂಜಾಬಿ ಗಾಯಕ ಮತ್ತು ನಟ ಅಮ್ಮಿ ವಿರ್ಕ್ ಅವರು ‘ಚರ್ದಿಕಲಾ’ ಚಿತ್ರದ ಪರವಾಗಿ ಕಾನ್ ಸಿನಿಮೋತ್ಸವಕ್ಕೆ ಪದಾರ್ಪಣೆ ಮಾಡುತ್ತಿದ್ದಾರೆ. ಇನ್ನು ಮರಾಠಿ ಚಿತ್ರರಂಗದ ಹಿರಿಯ ನಟ ಅಶೋಕ್ ಸರಫ್ ಮತ್ತು ಪ್ರಜಕ್ತಾ ಮಾಲಿ ಪಾರಂಪರಿಕ ಮರಾಠಿ ಉಡುಗೆಯಲ್ಲಿ ಮಿಂಚಲಿದ್ದಾರೆ. ಖ್ಯಾತ ನಿರ್ದೇಶಕ ಅಶುತೋಷ್ ಗೋವಾರಿಕರ್ ಭಾರತದ ಅಧಿಕೃತ ನಿಯೋಗದ ಭಾಗವಾಗಿ ಭಾಗವಹಿಸಲಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಕಾನ್ಸ್‌ಟೇಬಲ್‌ ಜೊತೆ ಎಂಗೇಜ್ಮೆಂಟ್‌ ಆಗಿ ಮೂರೇ ತಿಂಗಳಿಗೆ ಯುವತಿ ದುರಂತ ಸಾವು – Kannada News | A young woman Commits Suicide By hanging herself in hostel at belagavi

ಬೆಂಗಳೂರು, (ಮೇ 11): ಕೆಲ ದಿನಗಳ ಹಿಂದಷ್ಟೇ ಕಾನ್ಸ್‌ಟೇಬಲ್‌ ಜೊತೆ ಎಂಗೇಜ್ಮೆಂಟ್‌ ಮಾಡಿಕೊಂಡಿದ್ದ ಯುವತಿಯೊಬ್ಬಳು ಜನ್ಮದಿನದಂದೇ ನೇಣಿಗೆ ಶರಣಾದ ಘಟನೆ ಬೆಳಗಾವಿಯ (Belagavi) ಅಜಂ ನಗರದ ಹಾಸ್ಟೆಲ್‌ನಲ್ಲಿ ನಡೆದಿದೆ.ಆತ್ಮಹತ್ಯೆಗೆ ಶರಣಾದ ಯುವತಿಯನ್ನು ಹುಕ್ಕೇರಿ (Hukkeri) ತಾಲೂಕಿನ ಕಟಾಬಳ್ಳಿ ಗ್ರಾಮದ ಕಾವೇರಿ ಉಮೇಶ್ ನಾಯಕ‌ (21) ಎಂದು ಗುರುತಿಸಲಾಗಿದೆ. ಯುವತಿ ಅಂತಿಮ ವರ್ಷದ ಬಿಎಸ್‌ಸಿ ಪದವಿ ಓದುತ್ತಿದ್ದ ಕಾವೇರಿಗೆ ಕಳೆದ ಮೂರು ತಿಂಗಳ ಹಿಂದಷ್ಟೇ ಪೊಲೀಸ್ ಕಾನ್ಸ್​​ಟೇಬಲ್ ಜೊತೆ ವಿವಾಹ ನಿಶ್ಚಿತಾರ್ಥವಾಗಿತ್ತು. ಆದ್ರೆ, ಇದೀಗ ಏಕಾಏಕಿ ಆತ್ಮಹತ್ಯ ಮಾಡಿಕೊಂಡಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ಕರ್ನಾಟಕದ ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಿಸಿಲ ಝಳಕ್ಕೆ ಭಣಗುಡುತ್ತಿವೆ ಐತಿಹಾಸಿಕ ತಾಣಗಳು: ಬಾದಾಮಿ, ಐಹೊಳೆ, ಪಟ್ಟದಕಲ್ಲಿಗೆ ಪ್ರವಾಸಿಗರ ಬರ – Kannada News | Heatwave Hits Bagalkot Historical Sites: Tourist Footfall Drops at Badami, Pattadakal, Aihole

ಬಾದಾಮಿ, ಕೂಡಲಸಂಗಮ, ಐಹೊಳೆImage Credit source: tv9 kannada

ಬಾಗಲಕೋಟೆ, ಮೇ 11: ಜಿಲ್ಲೆಯಲ್ಲಿ ಚಾಲುಕ್ಯರ ಐತಿಹಾಸಿಕ ಸ್ಥಳಗಳು, ಬಸವಣ್ಣನವರ ಐಕ್ಯ ಸ್ಥಳ ಮತ್ತು ಸಂಗಮನಾಥ ದೇಗುಲ ಸೇರಿದಂತೆ ಅನೇಕ ಪ್ರವಾಸಿ ತಾಣಗಳನ್ನು ಹೊಂದಿರುವ ಪ್ರಮುಖ ಜಿಲ್ಲೆ ಬಾಗಲಕೋಟೆ (bagalkot). ಆದರೆ ಜಿಲ್ಲೆಗೆ ಇದೀಗ ಪ್ರವಾಸಿಗರ ಬರ ಎದುರಾಗಿದೆ. ಇದಕ್ಕೆ ಕಾರಣ ನೆತ್ತಿ ಸುಡುತ್ತಿರುವ ಬಿರುಬಿಸಿಲು (Heatwave). 40 ಡಿಗ್ರಿ ಸೆಲ್ಸಿಯಸ್ ತಲುಪುತ್ತಿರುವ ತಾಪಮಾನಕ್ಕೆ ಪ್ರವಾಸಿಗರು ಪ್ರವಾಸಿ ತಾಣಗಳಿಂದ ದೂರ ಉಳಿಯುತ್ತಿದ್ದಾರೆ. ಹೀಗಾಗಿ ಉಪಹಾರ, ಲಾಡ್ಜ್​​, ಎಳೆನೀರು, ತಂಪು ಪಾನೀಯ ಸೇರಿದಂತೆ ಹಲವು ವ್ಯಾಪಾರಗಳಿಗೂ ಹೊಡೆತ ಬಿದ್ದಿದೆ.

ಮುಖ್ಯಾಂಶಗಳು

  • ಬಾಗಲಕೋಟೆ ಪ್ರವಾಸಿ ತಾಣಗಳು ಪ್ರವಾಸಿಗರಿಲ್ಲದೆ ಭಣಭಣ
  • ಬಾದಾಮಿ, ಐಹೊಳೆ, ಕೂಡಲಸಂಗಮ ತಾಣಗಳಲ್ಲಿ ವಿದೇಶಿ ಪ್ರವಾಸಿಗರ ಸಂಖ್ಯೆ ಕುಸಿತ
  • ಪ್ರವಾಸೋದ್ಯಮ ಮತ್ತು ಸ್ಥಳೀಯ ವ್ಯಾಪಾರಕ್ಕೂ ತಟ್ಟಿದ ಬಿಸಿಲ ಎಫೆಕ್ಟ್​

ನೋಡಿದರೆ ಮತ್ತೆ ಮತ್ತೆ ನೋಡಬೇಕೆನ್ನುವ ಬಾದಾಮಿಯ ಗುಹಾಂತರ ದೇಗುಲಗಳು, ಐಹೊಳೆ-ಪಟ್ಟದಕಲ್ಲಿನ ಶಿಲ್ಪಕಲೆ, ಶರಣರ ನಾಡಿನ ಸಾಕ್ಷಿಯಾದ ಬಸವಣ್ಣನ ಐಕ್ಯ ಮಂಟಪ ಹಾಗೂ ಸಂಗಮನಾಥ ದೇಗುಲ. ಇವೆಲ್ಲವೂ ಈಗ ಪ್ರವಾಸಿಗರಿಲ್ಲದೆ ಭಣಗುಡುತ್ತಿವೆ. ಬಾಗಲಕೋಟೆ ಜಿಲ್ಲೆಯಲ್ಲಿ ತಾಪಮಾನ 39 ರಿಂದ 40 ಡಿಗ್ರಿ ದಾಟುತ್ತಿದ್ದು, ಜನ ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದಾರೆ. ಮನೆಯನ್ನೇ ಬಿಟ್ಟು ಹೊರಬರದ ಜನ, ಈ ರಣಬಿಸಿಲಿನಲ್ಲಿ ಪ್ರವಾಸಿ ತಾಣಗಳಿಗೆ ಬರುವುದಾದರೂ ಹೇಗೆ? ಇದರಿಂದಾಗಿ ಬಾದಾಮಿ, ಐಹೊಳೆ ಹಾಗೂ ಕೂಡಲಸಂಗಮಕ್ಕೆ ಭೇಟಿ ನೀಡುವವರ ಸಂಖ್ಯೆ ಗಣನೀಯವಾಗಿ ಕುಸಿದಿದೆ.

ವರ್ಷದಿಂದ ವರ್ಷಕ್ಕೆ ವಿದೇಶಿ ಪ್ರವಾಸಿಗರ ಸಂಖ್ಯೆ ಇಳಿಕೆ

ಜಿಲ್ಲೆಯ ಐತಿಹಾಸಿಕ ಬಾದಾಮಿ, ಐಹೊಳೆ, ಪಟ್ಟದಕಲ್ಲು, ಕೂಡಲಸಂಗಮಕ್ಕೆ ಪ್ರವಾಸಿಗರು ನಿರೀಕ್ಷಿತ ಮಟ್ಟದಲ್ಲಿ ಬರುತ್ತಿಲ್ಲ. ಬಿಸಿಲ ಬೇಗೆಯ ಕಾರಣ ವರ್ಷದಿಂದ ವರ್ಷಕ್ಕೆ ವಿದೇಶಿ ಪ್ರವಾಸಿಗರ ಸಂಖ್ಯೆ ಕೂಡ ಇಳಿಮುಖವಾಗುತ್ತಿದೆ‌.

  • 2025 ಜನವರಿಯಿಂದ ಏಪ್ರಿಲ್​​ವರೆಗೆ 1971 ವಿದೇಶಿ ಪ್ರವಾಸಿಗರು ಐಹೊಳೆಗೆ ಭೇಟಿ ನೀಡಿದ್ದರು. ಆದರೆ 2026ರಲ್ಲಿ ಜನವರಿಯಿಂದ ಏಪ್ರಿಲ್​​ವರೆಗೆ 1687 ಮಾತ್ರ ವಿದೇಶಿ ಪ್ರವಾಸಿಗರು ಭೇಟಿ ನೀಡಿದ್ದಾರೆ.
  • ಬಾದಾಮಿಗೆ 2025 ಜನವರಿಯಿಂದ ಏಪ್ರಿಲ್​​ವರೆಗೆ 2849 ಜನ, 2026 ಜನವರಿಯಿಂದ ಏಪ್ರಿಲ್​ವರೆಗೆ 3091 ಪ್ರವಾಸಿಗರು ಭೇಟಿ ನೀಡಿದ್ದಾರೆ.
  • ಇನ್ನು 2025ರಲ್ಲಿ ಜನವರಿಯಿಂದ ಏಪ್ರಿಲ್​ವರೆಗೆ 2326 ಮತ್ತು 2026 ಜನವರಿಯಿಂದ ಏಪ್ರಿಲ್​ವರೆಗೆ 2185 ಜನರು ಮಾತ್ರ ಭೇಟಿ ನೀಡಿದ್ದಾರೆ.

ಪ್ರವಾಸಿಗರು ಬಾರದ ಹಿನ್ನೆಲೆ ಒಂದೆಡೆ ಪ್ರವಾಸೋದ್ಯಮಕ್ಕೆ ಸಂಕಷ್ಟ ಎದುರಾಗಿದ್ದು, ಮತ್ತೊಂದೆಡೆ ವ್ಯಾಪಾರ ವಹಿವಾಟಿಗೂ ಬಿಸಿ ತಟ್ಟಿದೆ. ಹೆಚ್ಚು ಪ್ರವಾಸಿಗರು ಭೇಟಿ ವೇಳೆ ಆಗುತ್ತಿದ್ದ ವ್ಯಾಪಾರ ಈ ಬಾರಿ ಇಲ್ಲ. ಉಪಹಾರ, ವಸತಿಗಾಗಿ ಹೋಟೆಲ್, ಎಳೆನೀರು, ತಂಪು ಪಾನೀಯ ಸೇರಿದಂತೆ ಹಲವು ವ್ಯಾಪಾರಗಳಿಗೆ ಹೊಡೆತ ಬಿದ್ದಿದೆ.

ಅಧಿಕಾರಿಗಳು ಹೇಳುವುದೇನು?

ಇನ್ನು ಬಿರುಬಿಸಿಲ ಬೇಸಿಗೆ ಅವಧಿಯಲ್ಲಿ ಪ್ರವಾಸಿಗರಿಗೆ ಕುಡಿಯುವ ನೀರಿನ ಸಮಸ್ಯೆ ಸೇರಿದಂತೆ ಮೂಲಭೂತ ಸೌಲಭ್ಯ ಕಲ್ಪಿಸಲಾಗಿದೆ. ಪ್ರವಾಸಿ ಮಿತ್ರರು ತುರ್ತು ಸಹಾಯಕ್ಕೆ ಸಿದ್ಧರಿದ್ದಾರೆ. ಆದರೆ ಬಿಸಿಲು ಹಿನ್ನೆಲೆ ಪ್ರವಾಸಿಗರ ಸಂಖ್ಯೆ ಕಡಿಮೆಯಾಗಿದ್ದು ನಿಜ ಎಂದು ಪ್ರಭಾರ ಡಿಡಿ ಪ್ರವಾಸೋದ್ಯಮ ಇಲಾಖೆ ಅಧಿಕಾರಿ ಗೋಪಾಲ ಹಿತ್ತಲಮನಿ ಅವರು ಮಾತು.

ಇದನ್ನೂ ಓದಿ: ಬಿಸಿಲ ಬೇಗೆಗೆ ಛತ್ರಿ, ಟೋಪಿ ಮೊರೆ ಹೋದ ಪ್ರವಾಸಿಗರು: ರಜೆಯಲ್ಲೂ ಟೂರಿಸ್ಟ್ ಸಂಖ್ಯೆ ಇಳಿಮುಖ

ಒಟ್ಟಿನಲ್ಲಿ, ಬಿಸಿಲ ಬೇಗೆಗೆ ಚಾಲುಕ್ಯರ ನಾಡಿನ ಪ್ರವಾಸೋದ್ಯಮ ತತ್ತರಿಸಿ ಹೋಗಿದೆ. ಇದು ಪ್ರವಾಸೋದ್ಯಮ ಸೇರಿ ವ್ಯಾಪಾರ ವಹಿವಾಟಿನ ಮೇಲೂ ಪರಿಣಾಮ ಬೀರಿದೆ‌.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 10:15 pm, Mon, 11 May 26

Source link