Category Archives: Blog

Your blog category

‘ವಾರಣಾಸಿ’ ಚಿತ್ರಕ್ಕಾಗಿ ಅತ್ಯಂತ ವೇಗದಲ್ಲಿ ಕೆಲಸ ಮಾಡುತ್ತಿದ್ದಾರೆ ರಾಜಮೌಳಿ – Kannada News | Rajamouli Mahesh Babu’s ‘Varanasi’: Release Date, Shooting Updates and VFX Insights

ಮಹೇಶ್ ಬಾಬು ಅವರ ‘ವಾರಣಾಸಿ’ (Varanasi) ಚಿತ್ರದ ಶೀರ್ಷಿಕೆಯನ್ನು ಇತ್ತೀಚೆಗೆ ಬಿಡುಗಡೆ ಮಾಡಲಾಯಿತು. ಇದರೊಂದಿಗೆ, ಈ ಚಿತ್ರದ ಬಗ್ಗೆ ಸಾಕಷ್ಟು ಹೈಪ್ ಸೃಷ್ಟಿಯಾಗಿದೆ. ಇದರ ಜೊತೆಗೆ, ಇದು ರಾಜಮೌಳಿ-ಮಹೇಶ್ ಕಾಂಬೊ ಆಗಿರುವುದರಿಂದ, ಸ್ವಾಭಾವಿಕವಾಗಿಯೇ ಈ ಕ್ರೇಜಿ ಪ್ರಾಜೆಕ್ಟ್ ಮೇಲೆ ಭಾರಿ ನಿರೀಕ್ಷೆಗಳಿವೆ. ಆದರೆ, ರಾಜಮೌಳಿ ಚಿತ್ರಕ್ಕೆ ಕನಿಷ್ಠ 2-3 ವರ್ಷಗಳು ಬೇಕಾಗುತ್ತದೆ. ಚಿತ್ರದಲ್ಲಿ ಎಲ್ಲವೂ ಪರಿಪೂರ್ಣವಾಗಿರಬೇಕೆಂದು ರಾಜಮೌಳಿ ಬಯಸುತ್ತಾ ಇದ್ದಾರೆ.

ಅದ್ಭುತ ದೃಶ್ಯಗಳನ್ನು ಕಟ್ಟಿಕೊಡೋ ನಿರ್ದೇಶಕ ರಾಜಮೌಳಿ ಈ ಬಾರಿಯೂ ಅದನ್ನು ಮುಂದುವರಿಸುತ್ತಿದ್ದಾರೆ. ರಾಜಮೌಳಿ ತಮ್ಮ ಹಿಂದಿನ ಚಿತ್ರಗಳಿಗಿಂತ ಭಿನ್ನವಾಗಿ ವಾರಣಾಸಿಯನ್ನು ಪ್ರಚಾರ ಮಾಡುತ್ತಿದ್ದಾರೆ. ಹಲವು ಸಮಯದವರೆಗೆ ಒಂದೇ ಒಂದು ಅಪ್ಡೇಟ್ ನೀಡದ ರಾಜಮೌಳಿ ಈಗ ಎಲ್ಲವನ್ನೂ ಹಿಂಜರಿಕೆಯಿಲ್ಲದೆ ಹೇಳುತ್ತಿದ್ದಾರೆ.

ಮಹೇಶ್ ಮತ್ತು ಪ್ರಿಯಾಂಕಾ ಅವರು ಇನ್ನೊಂದು ದಿನ ಒಂದೇ ಸಂದರ್ಶನದಲ್ಲಿ ಹಲವು ವಿಷಯಗಳನ್ನು ಹೇಳಿದ್ದರು. ಇತ್ತೀಚೆಗೆ, ರಾಜಮೌಳಿ ಕೂಡ ವಾರಣಾಸಿಯ ಬಗ್ಗೆ ಹಾಟ್ ಅಪ್ಡೇಟ್ಗಳನ್ನು ನೀಡಿದರು. ಅವರ ಹಿಂದಿನ ಚಿತ್ರಗಳಿಗೆ ಹೋಲಿಸಿದರೆ, ನಿರ್ದೇಶಕರು ವಾರಣಾಸಿಯ ಚಿತ್ರೀಕರಣವನ್ನು ರಾಕೆಟ್ ವೇಗದಲ್ಲಿ ಪೂರ್ಣಗೊಳಿಸುತ್ತಿದ್ದಾರೆ. ಈಗಾಗಲೇ ಶೇಕಡಾ 50 ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ರಾಜಮೌಳಿ ಎಲ್ಲಾ ಪ್ರಮುಖ ಸನ್ನಿವೇಶಗಳನ್ನು ಪೂರ್ಣಗೊಳಿಸಿದ್ದಾರೆ.

ಇದನ್ನೂ ಓದಿ: ಬ್ಲಾಕ್ ಬಸ್ಟರ್ ಸಿನಿಮಾಗಳ ನಿರ್ದೇಶಕ ರಾಜಮೌಳಿಗೆ ಇಷ್ಟವಾದ ಸಿನಿಮಾ ಯಾವುದು?

ರಾಜಮೌಳಿ ಅವರು ‘ವಾರಣಾಸಿ’ ಮಾಡುತ್ತಿದ್ದಾರೆ. ಇದು ಅವರ ವೃತ್ತಿಜೀವನದ ಅತ್ಯಂತ ಕಷ್ಟಕರವಾದ ದೃಶ್ಯವಾಗಿದೆ ಎಂದು ಹೇಳಿದ್ದಾರೆ. VFX ಗಾಗಿ ನಾವು ಶ್ರಮಿಸುತ್ತಿದ್ದೇವೆ ಎಂದು ಅವರು ಹೇಳಿದ್ದಾರೆ. ಜೂನ್ 2026 ರೊಳಗೆ ‘ವಾರಣಾಸಿ’ಯ ಚಿತ್ರೀಕರಣ ಪೂರ್ಣಗೊಳ್ಳಲಿದೆ ಎಂದು ಜಕ್ಕಣ್ಣ ಸ್ಪಷ್ಟಪಡಿಸಿದರು. ಜುಲೈನಿಂದ ಅವರು ಸಂಪೂರ್ಣವಾಗಿ ಪೋಸ್ಟ್-ಪ್ರೊಡಕ್ಷನ್ ಮೇಲೆ ಗಮನಹರಿಸಲಿದ್ದಾರೆ. ತಂಡವು ಏಪ್ರಿಲ್ 7, 2027 ರಂದು ಬಿಡುಗಡೆ ದಿನಾಂಕವನ್ನು ನೀಡಿದೆ. ನಿರ್ದೇಶಕರು ಅದಕ್ಕೆ ತಕ್ಕಂತೆ ಚಿತ್ರೀಕರಣವನ್ನು ಯೋಜಿಸುತ್ತಿದ್ದಾರೆ. ‘ಮರ್ಯಾದ ರಾಮಣ್ಣ’ ನಂತರ ರಾಜಮೌಳಿ ಪೂರ್ಣಗೊಳಿಸಿದ ಅತ್ಯಂತ ವೇಗದ ಚಿತ್ರ ‘ವಾರಣಾಸಿ’ ಆಗಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Solar Eclipse 2026: ಧನುಸ್ಸು ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ? – Kannada News | Solar Eclipse 2026: Auspicious Predictions for Sagittarius by Dr. Basavaraj Guruji

ಡಾ. ಬಸವರಾಜ ಗುರೂಜಿ ಅವರ ಪ್ರಕಾರ, 2026ರ ರಾಹುಗ್ರಸ್ತ ಸೂರ್ಯಗ್ರಹಣವು ಧನುಸ್ಸು ರಾಶಿಯವರಿಗೆ ಅತ್ಯಂತ ಶುಭಕರವಾಗಿದೆ. ರಾಶ್ಯಾಧಿಪತಿ ಗುರು ವಕ್ರಗತಿಯಲ್ಲಿದ್ದು ಮಿಥುನದಲ್ಲಿದ್ದಾನೆ. ಗ್ರಹಣವು ಧನುಸ್ಸು ರಾಶಿಯವರಿಗೆ ಮೂರನೇ ಮನೆಯಲ್ಲಿ ಸಂಭವಿಸುತ್ತಿದ್ದು, ಇದು ಸಾಮಾನ್ಯವಾಗಿ ಮಂಗಳಕರವಾಗಿದೆ. ಗುರುವಿನ ದೃಷ್ಟಿಯು ಗ್ರಹಣದ ಮೇಲಿರುವುದರಿಂದ ಯಾವುದೇ ದೋಷಗಳು ಅಂಟುವುದಿಲ್ಲ ಎಂದು ಹೇಳಲಾಗಿದೆ.

ಮೂಲಾ, ಪೂರ್ವಾಷಾಢ, ಉತ್ತರಾಷಾಢ ನಕ್ಷತ್ರದವರಿಗೆ ಈ ಗ್ರಹಣವು ಜಾಕ್ ಪಾಟ್ ಅಥವಾ ಡಬಲ್ ಧಮಾಕದಂತಹ ಫಲಿತಾಂಶಗಳನ್ನು ನೀಡುತ್ತದೆ. ಆದಾಯ ವೃದ್ಧಿ, ಸಹೋದರರೊಂದಿಗೆ ಉತ್ತಮ ಸಂಬಂಧಗಳು, ಬಂಧುಮಿತ್ರರೊಂದಿಗೆ ಪ್ರೀತಿ ವಿಶ್ವಾಸ, ಹೊಸ ವ್ಯಾಪಾರಕ್ಕೆ ಪ್ರಯತ್ನ, ಅರ್ಧಂಬರ್ಧ ನಿಂತ ಕೆಲಸಗಳು ಪೂರ್ಣಗೊಳ್ಳುವ ಸಾಧ್ಯತೆಗಳಿವೆ. ಆರೋಗ್ಯದಲ್ಲಿ ಸುಧಾರಣೆ, ಉನ್ನತ ಶಿಕ್ಷಣಕ್ಕೆ ಶುಭ, ಹಾಗೂ ವಿಚ್ಛೇದನ ಹಂತದಲ್ಲಿರುವ ಸಂಬಂಧಗಳಲ್ಲಿ ರಾಜಿ ಏರ್ಪಡುವ ಸೂಚನೆಗಳಿವೆ. ರಾಜಕೀಯವಾಗಿ ಪ್ರಗತಿ, ಉದ್ಯಮಿದಾರರಿಗೆ ಲಾಭ ಹಾಗೂ ಕೆಲಸ ಕಾರ್ಯಗಳಲ್ಲಿ ಶುಭ ಫಲ ಇರಲಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Solar Eclipse 2026: ವೃಶ್ಚಿಕ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ?

2026ರ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣದ ಪ್ರಭಾವವು ವೃಶ್ಚಿಕ ರಾಶಿಯವರ ಮೇಲೆ ಮಧ್ಯಮವಾಗಿದೆ ಎಂದು ಜ್ಯೋತಿಷಿ ಡಾ. ಬಸವರಾಜ ಗುರೂಜಿ ತಿಳಿಸಿದ್ದಾರೆ. ಈ ಅವಧಿಯಲ್ಲಿ ವೃಶ್ಚಿಕ ರಾಶಿಯವರು ಮಿಶ್ರಫಲಗಳನ್ನು ನಿರೀಕ್ಷಿಸಬಹುದು. ಗ್ರಹಣವು ನಾಲ್ಕನೇ ಮನೆಯಲ್ಲಿ ಸಂಭವಿಸುವುದರಿಂದ ಅನಾವಶ್ಯಕ ಆರೋಗ್ಯ ಸಮಸ್ಯೆಗಳು ಮತ್ತು ಕೌಟುಂಬಿಕ ವಿಷಯಗಳಲ್ಲಿ ಒತ್ತಡ ಹೆಚ್ಚಾಗುವ ಸಾಧ್ಯತೆ ಇದೆ. ಆಹಾರದ ವಿಷಯದಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ.

ವಾಹನ ಯೋಗ ಉತ್ತಮವಾಗಿದ್ದು, ಪ್ರಾಥಮಿಕ ಶಿಕ್ಷಣದಲ್ಲಿ ಮಕ್ಕಳಿಗೆ ಶುಭವಾಗಲಿದೆ. ಹೊಸ ವ್ಯಾಪಾರಕ್ಕೆ ಪ್ರಯತ್ನಿಸುವವರಿಗೆ, ಪಾಲುದಾರಿಕೆಯಲ್ಲಿ ಮತ್ತು ನಿರ್ದಿಷ್ಟ ವೃತ್ತಿಯವರಿಗೆ (ಸಾಫ್ಟ್‌ವೇರ್, ಪೊಲೀಸ್, ಕಂಪ್ಯೂಟರ್ ಇಂಜಿನಿಯರ್‌ಗಳು) ಶುಭ ಫಲಗಳು ದೊರೆಯಲಿವೆ. ಮಾನಸಿಕ ದುರಾಲೋಚನೆಗಳನ್ನು ಕಡಿಮೆ ಮಾಡಿಕೊಂಡರೆ ಉತ್ತಮ. ಗ್ರಹಣದ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಶಿವಲಿಂಗಕ್ಕೆ ಅಭಿಷೇಕ, ಬಿಲ್ವಪತ್ರೆ ಅರ್ಪಣೆ ಮತ್ತು “ಓಂ ನಮೋ ಭಗವತೇ ರುದ್ರಾಯ” ಮಂತ್ರ ಜಪಿಸುವುದು ಪರಿಣಾಮಕಾರಿ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

 

Source link

‘ನನ್ನ ಮದುವೆ ಏಪ್ರಿಲ್ 1ಕ್ಕೆ’; ದಿನಾಂಕ ರಿವೀಲ್ ಮಾಡಿದ ಮೃಣಾಲ್ ಠಾಕೂರ್ – Kannada News | Mrunal Thakur on Dhanush Wedding Rumors: Her Hilarious Clarification and AI Photo Truth

ಮೃಣಾಲ್ ಠಾಕೂರ್ (Mrunal Thakur ) ಹಾಗೂ ಧನುಶ್ ಮದುವೆ ಆಗುತ್ತಾರೆ ಎಂಬ ಸುದ್ದಿ ಇತ್ತೀಚೆಗೆ ಜೋರಾಗಿತ್ತು. ಇಂದೇ (ಫೆಬ್ರವರಿ 14) ಇವರ ವಿವಾಹ ನಡೆಯಲಿದೆ ಎಂದು ವರದಿ ಆಗಿತ್ತು. ಆದರೆ, ಇದನ್ನು ಇವರು ಒಪ್ಪಿಕೊಂಡಿರಲಿಲ್ಲ. ಅನೇಕ ಕಡೆಗಳಲ್ಲಿ ಒಟ್ಟಾಗಿ ಕಾಣಿಸಿಕೊಂಡಿದ್ದೇ ಈ ವದಂತಿ ಹಬ್ಬಲು ಮುಖ್ಯ ಕಾರಣ ಆಗಿತ್ತು. ಈ ವಿಷಯವಾಗಿ ಮೃಣಾಲ್ ಕಡೆಯಿಂದ ಈಗ ಸ್ಪಷ್ಟನೆ ಸಿಕ್ಕಿದೆ. ಫನ್ ಆಗಿ ಇದಕ್ಕೆ ಅವರು ಉತ್ತರ ನೀಡಿದ್ದಾರೆ.

‘ಗಲಾಟಾ ಇಂಡಿಯಾ’ಗೆ ಮೃಣಾಲ್ ಸಂದರ್ಶನ ನೀಡಿದ್ದಾರೆ. ಈ ವೇಳೆ ಹಲವು ವಿಷಯಗಳ ಬಗ್ಗೆ ಓಪನ್ ಆಗಿ ಮಾತನಾಡಿದರು. ‘ಫೆಬ್ರವರಿ 14ರಂದು ನಿಮ್ಮ ಮದುವೆ ಎಂಬ ಸುದ್ದಿ ಹರಿದಾಡಿದೆಯಲ್ಲ’ ಎಂದು ಕೇಳಲಾಯಿತು. ‘ಫೆಬ್ರವರಿ 14 ಅಲ್ಲ, ಏಪ್ರಿಲ್ 14 ಅಲ್ಲ. ನನ್ನ ಮದುವೆ ನಡೆಯೋದು ಏಪ್ರಿಲ್ 1ರಂದು. ಏಕೆಂದರೆ ಅದು ಮೂರ್ಖರ ದಿನ’ ಎಂದು ಅವರು ಉತ್ತರಿಸಿದ್ದಾರೆ.

‘ಹೌದು, ಮದುವೆ ಬಗ್ಗೆ ಮಾತುಕತೆ ನಡೆಯುತ್ತಿದೆ. ಸರಿಯಾದ ದಿನ, ಸರಿಯಾದ ಸಮಯ ಮತ್ತು ಸರಿಯಾದ ವ್ಯಕ್ತಿ ನನ್ನ ಜೀವನದಲ್ಲಿ ಬಂದಾಗ, ನನ್ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಅದನ್ನು ಮೊದಲು ಹೇಳುವವಳು ನಾನೇ’ ಎಂದು ಅವರು ಹೇಳಿದ್ದಾರೆ.

ಫೆಬ್ರವರಿ 20ರಂದು ಮೃಣಾಲ್ ಠಾಕೂರ್ ನಟನೆಯ ‘ದೋ ದೀವಾನೆ ಶೆಹೆರ್ ಮೇ’ ಚಿತ್ರ ರಿಲೀಸ್ ಆಗುತ್ತಿದೆ. ಈ ಸಿನಿಮಾಗೆ ಸಿದ್ಧಾಂತ ಚತುರ್ವೇದಿ ಹೀರೋ. ಸಿನಿಮಾ ರಿಲೀಸ್ ಇಟ್ಟುಕೊಂಡು ಯಾರೂ ವಿವಾಹ ಆಗೋ ಪ್ಲ್ಯಾನ್ ಮಾಡೋದಿಲ್ಲ.

ಇದನ್ನೂ ಓದಿ: ಸಿದ್ಧಾಂತ್ ಚತುರ್ವೇಧಿ-ಮೃಣಾಲ್ ಠಾಕೂರ್ ರೊಮ್ಯಾಂಟಿಕ್ ಮೂಮೆಂಟ್ ವಿಡಿಯೋ

ಮೃಣಾಲ್ ಹಾಗೂ ಧನುಶ್ ವಿವಾಹ ಆಗುತ್ತಿರುವ ರೀತಿಯಲ್ಲಿ ‘ಎಐ’ ಫೋಟೋಗಳನ್ನು ಹರಿಬಿಡಲಾಗಿತ್ತು. ಇದನ್ನು ಅನೇಕರು ನಿಜವಾದ ಫೋಟೋ ಎಂದು ನಂಬಿದ್ದರು. ಇವರ ಮದುವೆ ಸುದ್ದಿ ಹಬ್ಬಲು ಇದು ಮುಖ್ಯ ಕಾರಣ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಚಿನ್ನಸ್ವಾಮಿ ಸ್ಟೇಡಿಯಂ ಸ್ಟ್ಯಾಂಡ್​ಗೆ ಮೂವರ ಹೆಸರು ನಾಮಕರಣ – Kannada News | Anil Kumble And Rahul Dravid To Have Stands Named At M Chinnaswamy Stadium

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದ ಎರಡು ಸ್ಟ್ಯಾಂಡ್‌ಗಳಿಗೆ ಕರ್ನಾಟಕದ ಕ್ರಿಕೆಟ್ ದಿಗ್ಗಜರಾದ ಅನಿಲ್ ಕುಂಬ್ಳೆ ಮತ್ತು ರಾಹುಲ್ ದ್ರಾವಿಡ್ ಅವರ ಹೆಸರನ್ನು ಇಡುವ ಮೂಲಕ ಗೌರವಿಸಲಾಗಿದೆ. ಫೆಬ್ರವರಿ 13, 2024 ರಂದು ನಡೆದ ವಿಶೇಷ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (KSCA) ಈ ನಾಮಕರಣವನ್ನು ಅಧಿಕೃತಗೊಳಿಸಿದೆ.

ಚಿನ್ನಸ್ವಾಮಿ ಕ್ರೀಡಾಂಗಣದ ಸುವರ್ಣ ಮಹೋತ್ಸವದ (50 ವರ್ಷಗಳು) ಸಂಭ್ರಮದ ಭಾಗವಾಗಿದ್ದ ಈ ಕಾರ್ಯಕ್ರಮದ ಮೂಲಕ ಮೂರು ಸ್ಟ್ಯಾಂಡ್​ಗಳಿಗೆ ಮಾಜಿ ಕ್ರಿಕೆಟರುಗಳ ಹೆಸರಿಡುವುದಾಗಿ ಘೋಷಿಸಲಾಯಿತು.

3 ಸ್ಟ್ಯಾಂಡ್ ಮರುನಾಮಕರಣ:

  • ಪೆವಿಲಿಯನ್ ಎಂಡ್ (Pavilion End): ಇನ್ಮುಂದೆ ಪೆವಿಲಿಯನ್ ಎಂಡ್ ಕಡೆಯ ಸ್ಟ್ಯಾಂಡ್ ಅನಿಲ್ ಕುಂಬ್ಳೆ ಎಂಡ್ ಎಂದು ಕರೆಯಲ್ಪಡುತ್ತದೆ.
  • ನಾರ್ತ್ ಎಂಡ್ (North End): ನಾರ್ತ್​ ಎಂಡ್ ಸ್ಟ್ಯಾಂಡ್ ಇನ್ಮುಂದೆ ರಾಹುಲ್ ದ್ರಾವಿಡ್ ಎಂಡ್ ಎಂದು ಕರೆಯಲ್ಪಡುತ್ತದೆ.
  • ಒಂದು ಸ್ಟ್ಯಾಂಡ್: ಚಿನ್ನಸ್ವಾಮಿ ಕ್ರೀಡಾಂಗಣದ ಮತ್ತೊಂದು ಸ್ಟ್ಯಾಂಡ್​ಗೆ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.

ಈ ಸಂತಸದ ಕ್ಷಣಗಳ ನಡುವೆ ಮಾತನಾಡಿದ ರಾಹುಲ್​ ದ್ರಾವಿಡ್, ಈ ಮೈದಾನವು ತಮ್ಮ “ಎರಡನೇ ಮನೆ” ಇದ್ದಂತೆ. ಉಲ್ಲೇ ಆಡಿ ಬೆಳೆದ ನನಗೆ ಇದೀಗ ಅದೇ ಮೈದಾನದಲ್ಲಿ ಗೌರವ ಸಿಕ್ಕಿರುವುದು ಹೆಮ್ಮೆಯ ವಿಷಯ. ಇದಕ್ಕೆ ನಾನು ಕೆಎಸ್​ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್ ಹಾಗೂ ಎಲ್ಲಾ ಸದಸ್ಯರುಗಳಿಗೆ ಧನ್ಯವಾದಗಳನ್ನು ತಿಳಿಸುತ್ತೇನೆ ಎಂದರು.

ಇದೇ ವೇಳೆ ಮಾತನಾಡಿದ ಅನಿಲ್ ಕುಂಬ್ಳೆ, 9ನೇ ವಯಸ್ಸಿನಲ್ಲಿ ಪ್ರೇಕ್ಷಕನಾಗಿ ಬಂದಿದ್ದ ಕ್ರೀಡಾಂಗಣದಲ್ಲಿ ಇಂದು ತನ್ನ ಹೆಸರಿನ ಸ್ಟ್ಯಾಂಡ್ ಇರುವುದು ಹೆಮ್ಮೆಯ ವಿಚಾರ ಎಂದು ತಿಳಿಸಿದರು.

ನಮ್ಮ ಹೆಸರುಗಳೊಂದಿಗೆ ಭಾರತ ಮಹಿಳಾ ತಂಡದ ಮಾಜಿ ನಾಯಕಿ ಶಾಂತಾ ರಂಗಸ್ವಾಮಿ ಅವರ ಹೆಸರನ್ನೂ ಸಹ ಒಂದು ಸ್ಟ್ಯಾಂಡ್‌ಗೆ ನಾಮಕರಣ ಮಾಡಿರುವುದು ಅತ್ಯಂತ ಖುಷಿಯ ವಿಚಾರ. ಇದು ಮಹಿಳಾ ಕ್ರಿಕೆಟ್‌ಗೆ ಸಿಕ್ಕ ಗೌರವ ಎಂದು ಅನಿಲ್ ಕುಂಬ್ಳೆ ಬಣ್ಣಿಸಿದರು.

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿನ ಮುಂದಿನ ಪಂದ್ಯಗಳು?

  • ಚಿನ್ನಸ್ವಾಮಿ ಕ್ರೀಡಾಂಗಣವು ನವೀಕರಣದ ನಂತರ 2026ರಲ್ಲಿ ಪ್ರಮುಖ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.
  • ಐಪಿಎಲ್ 2026 ರ ಪಂದ್ಯಗಳ ಆಯೋಜನೆ ಗ್ರೀನ್ ಸಿಗ್ನಲ್ ನೀಡಲಾಗಿದೆ. ಅದರಂತೆ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ತವರು ಪಂದ್ಯಗಳು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿದೆ.

ಇದನ್ನೂ ಓದಿ: ಟೀಮ್ ಇಂಡಿಯಾ ವಿರುದ್ಧ ಅರ್ಧದಲ್ಲೇ ಚೆಂಡೆಸೆದು ಸಿಕ್ಕಿ ಬಿದ್ದ ಎರಾಸ್ಮಸ್..!

ಚಿನ್ನಸ್ವಾಮಿ ಕ್ರೀಡಾಂಗಣದ ವಿಶೇಷತೆಗಳು:

  • ಈ ಮೈದಾನವು ವಿಶ್ವದ ಮೊದಲ ಸೌರಶಕ್ತಿ ಚಾಲಿತ ಕ್ರೀಡಾಂಗಣಗಳಲ್ಲಿ ಒಂದಾಗಿದೆ.
  • ಚಿನ್ನಸ್ವಾಮಿ ಸ್ಟೇಡಿಯಂ ಅತ್ಯಾಧುನಿಕ ಸಬ್ ಏರ್ ಸಿಸ್ಟಮ್ ಹೊಂದಿರುವ ಕ್ರೀಡಾಂಗಣ. ಅಂದರೆ ಮಳೆ ಬಂದು ಮೈದಾನದಲ್ಲಿ ನೀರು ನಿಂತರೆ ಕೇವಲ 15-20 ನಿಮಿಷಗಳಲ್ಲಿ ಸಬ್ ಏರ್ ಸಿಸ್ಟಮ್ ಮೂಲಕ ಗ್ರೌಂಡ್​ನಲ್ಲಿರುವ ನೀರನ್ನು ಸಂಪೂರ್ಣವಾಗಿ ಹೊರಗೆ ಹಾಕಬಹುದು. ಈ ಮೂಲಕ 15 ರಿಂದ 20 ನಿಮಿಷಗಳಲ್ಲಿ ಪಂದ್ಯವನ್ನು ಪುನರಾರಂಭಿಸಬಹುದು.

Source link

ಕರ್ನಾಟಕ ಮೂಲದ ವಿದ್ಯಾರ್ಥಿ ಸಾಕೇತ್ ಶ್ರೀನಿವಾಸಯ್ಯ ಕ್ಯಾಲಿಫೋರ್ನಿಯಾದಲ್ಲಿ ನಾಪತ್ತೆ – Kannada News | Saketh Sreenivasaiah from Karnataka Missing in California, Indian Consulate Launches Search Operation

ಸಾಕೇತ್ ಶ್ರೀನಿವಾಸಯ್ಯImage Credit source: LinkedIn/Saketh Sreenivasaiah

ನವದೆಹಲಿ, ಫೆಬ್ರವರಿ 14: ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ಕರ್ನಾಟಕ (Karnataka)ಮೂಲದ ವಿದ್ಯಾರ್ಥಿ ಕಾಣೆಯಾಗಿರುವ ಬಗ್ಗೆ ವರದಿಯಾಗಿದ್ದು ಆತಂಕಕ್ಕೆ ಕಾರಣವಾಗಿದೆ. 22 ವರ್ಷದ ಸಾಕೇತ್ ಶ್ರೀನಿವಾಸಯ್ಯ ಕಾಣೆಯಾಗಿದ್ದು, ಅವರನ್ನು ಪತ್ತೆಹಚ್ಚಲು ಸ್ಥಳೀಯ ಪೊಲೀಸರು ಮತ್ತು ಭಾರತೀಯ ದೂತಾವಾಸ ಕಚೇರಿ ತುರ್ತು ಕ್ರಮ ಕೈಗೊಂಡಿವೆ. ಮಾಸ್ಟರ್ಸ್ ವಿದ್ಯಾರ್ಥಿಯಾಗಿರುವ ಸಾಕೇತ್ ಶ್ರೀನಿವಾಸಯ್ಯ (Saketh Sreenivasaiah) ಅಮೆರಿಕದ ಯೂನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಬರ್ಕ್ಲೇ (University of California, Berkeley) ಯಲ್ಲಿ ಪಿಜಿ ವ್ಯಾಸಂಗ ಮಾಡುತ್ತಿದ್ದಾರೆ. ಅವರು ಫೆಬ್ರವರಿ 10ರಂದು ಕ್ಯಾಲಿಫೋರ್ನಿಯಾದ ಬರ್ಕ್ಲೇ ನಗರದ ಡ್ವೈಟ್ ವೇ ಪ್ರದೇಶದಲ್ಲಿ ಕೊನೆಯಾಗಿ ಕಾಣಿಸಿಕೊಂಡಿದ್ದರು ಅಲ್ಲಿನ ಪೊಲೀಸರು ತಿಳಿಸಿದ್ದಾರೆ.

ಸಾಕೇತ್ ಕಾಣೆಯಾಗಿರುವ ಬಗ್ಗೆ ಸ್ಯಾನ್ ಫ್ರಾನ್ಸಿಸ್ಕೋದಲ್ಲಿನ ಭಾರತೀಯ ದೂತಾವಾಸ ಕಚೇರಿ ಆತಂಕ ವ್ಯಕ್ತಪಡಿಸಿದೆ. ಸಾಕೇತ್​ನ ಕುಟುಂಬದವರೊಂದಿಗೆ ಸಂಪರ್ಕದಲ್ಲಿದ್ದು, ಸ್ಥಳೀಯ ಅಧಿಕಾರಿಗಳ ಸಹಕಾರದಿಂದ ವಿದ್ಯಾರ್ಥಿಯನ್ನು ಪತ್ತೆಹಚ್ಚಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ದೂತಾವಾಸ ಕಚೇರಿ ಹೇಳಿದೆ.

ಪೊಲೀಸರ ಮಾಹಿತಿ ಪ್ರಕಾರ, ಸಾಕೇತ್ ಸುಮಾರು 6 ಅಡಿ 1 ಇಂಚು ಎತ್ತರ ಹೊಂದಿದ್ದು, ಕಪ್ಪು ಕೂದಲು ಮತ್ತು ಕಂದು ಬಣ್ಣದ ಕಣ್ಣುಗಳನ್ನು ಹೊಂದಿದ್ದಾರೆ. ಸಾಕೇತ್ ಅಪಾಯದ ಸ್ಥಿತಿಯಲ್ಲಿ ಇರುವ ಸಾಧ್ಯತೆ ಇದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದು, ಯಾರಿಗಾದರೂ ಮಾಹಿತಿ ದೊರೆತರೆ ತಕ್ಷಣ ತಿಳಿಸಲು ಬರ್ಕ್ಲೇ ನಗರದ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.

ಸಾಕೇತ್ ಕೆಮಿಕಲ್ ಎಂಜಿನಿಯರಿಂಗ್‌ನಲ್ಲಿ ಪದವಿ ಪೂರ್ಣಗೊಳಿಸಿದ್ದು, ಚೆನ್ನೈನ ಮದ್ರಾಸ್ ಐಐಟಿಯಲ್ಲಿ ಬಿ.ಟೆಕ್ ಮಾಡಿದ್ದರು. ಪ್ರಸ್ತುತ ಅವರು ಪ್ರಾಡಕ್ಟ್ ಡೆವಲಪ್‌ಮೆಂಟ್ ಕಾರ್ಯಕ್ರಮದಡಿ ಯುನಿವರ್ಸಿಟಿ ಆಫ್ ಕ್ಯಾಲಿಫೋರ್ನಿಯಾ, ಬರ್ಕ್ಲೇಯಲ್ಲಿ ಮಾಸ್ಟರ್ ಆಫ್ ಸೈನ್ಸ್ ವ್ಯಾಸಂಗ ಮಾಡುತ್ತಿದ್ದರು.

ಇದನ್ನೂ ಓದಿ: ಕೆನಡಾದಲ್ಲಿ ಕನ್ನಡಿಗನ ಕಗ್ಗೊಲೆ! ಹತ್ತಾರು ಬಾರಿ ಗುಂಡು ಹಾರಿಸಿ ಕ್ರೌರ್ಯ

ಸಾಕೇತ್ ಡೀಪ್-ಟೆಕ್, ಸೆಮಿಕಂಡಕ್ಟರ್ ಹಾಗೂ ಅಡ್ವಾನ್ಸ್ಡ್ ಮೆಟೀರಿಯಲ್ಸ್ ಕ್ಷೇತ್ರಗಳ ಬಗ್ಗೆ ಆಸಕ್ತಿ ಹೊಂದಿರುವುದಾಗಿ ಹೇಳಿಕೊಂಡಿದ್ದರು. ಸದ್ಯ, ಸಾಕೇತ್ ಕಾಣೆಯಾಗಿರುವುದು ಭಾರತೀಯ ಸಮುದಾಯದ ಜನರಲ್ಲೂ ಆತಂಕ ಮೂಡಿಸಿದೆ. ವಿದ್ಯಾರ್ಥಿಯನ್ನು ಶೀಘ್ರ ಪತ್ತೆಹಚ್ಚುವಂತೆ ಕುಟುಂಬದವರು ಹಾಗೂ ಭಾರತೀಯ ಸಮುದಾಯದವರು ಮನವಿ ಮಾಡಿದ್ದಾರೆ.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಅಸ್ಸಾಂನಲ್ಲಿ ಇಂದು ಅಭಿವೃದ್ಧಿಯ ಹಬ್ಬ: ಸಾವಿರಾರು ಕೋಟಿ ರೂ.ಗಳ ಯೋಜನೆಗಳಿಗೆ ಚಾಲನೆ ನೀಡಲಿರುವ ಪ್ರಧಾನಿ ಮೋದಿ – Kannada News | Assam Infrastructure Boom: PM Unveils Multi Crore Projects for Northeast Progress

ಗುವಾಹಟಿ, ಫೆ.14: ಈಶಾನ್ಯ ಭಾರತದ ಪ್ರವೇಶ ದ್ವಾರವೆಂದೇ ಕರೆಯಲ್ಪಡುವ ಅಸ್ಸಾಂ ರಾಜ್ಯದಲ್ಲಿ (Assam Infrastructure projects) ಇಂದು ಅಭಿವೃದ್ಧಿಯ ಹಬ್ಬ. ಅಸ್ಸಾಂನ ಸಂಪರ್ಕ ವ್ಯವಸ್ಥೆ, ಇಂಧನ ಮತ್ತು ಕ್ರೀಡಾ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಸಾವಿರಾರು ಕೋಟಿ ರೂಪಾಯಿಗಳ ಯೋಜನೆಗಳಿಗೆ ಇಂದು ಚಾಲನೆ ಸಿಗಲಿದೆ. ಅಸ್ಸಾಂನ ರೈಲ್ವೇ ಮಾರ್ಗಗಳ ವಿದ್ಯುದ್ದೀಕರಣ ಮತ್ತು ರಾಷ್ಟ್ರೀಯ ಹೆದ್ದಾರಿಗಳ ವಿಸ್ತರಣಾ ಯೋಜನೆಗಳಿಗೆ ಪ್ರಧಾನಿ ಮೋದಿ ಅವರು ಚಾಲನೆ ನೀಡಲಿದ್ದಾರೆ. ಇದು ಈಶಾನ್ಯ ರಾಜ್ಯಗಳ ನಡುವಿನ ಪ್ರಯಾಣದ ಸಮಯವನ್ನು ಗಣನೀಯವಾಗಿ ಕಡಿಮೆ ಮಾಡಲಿದೆ. ಉನ್ನತ ಮಟ್ಟದ ಆರೋಗ್ಯ ಸೌಲಭ್ಯಗಳನ್ನು ಒದಗಿಸಲು ಹೊಸ ವೈದ್ಯಕೀಯ ಕಾಲೇಜುಗಳು ಮತ್ತು ಆಸ್ಪತ್ರೆಗಳ ಉದ್ಘಾಟನೆ ನಡೆಯಲಿದೆ. ಯುವಜನತೆಯನ್ನು ಉತ್ತೇಜಿಸಲು ಅಂತರಾಷ್ಟ್ರೀಯ ಗುಣಮಟ್ಟದ ಕ್ರೀಡಾ ಮೂಲಸೌಕರ್ಯಗಳಿಗೆ ಶಂಕುಸ್ಥಾಪನೆ ನೆರವೇರಲಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Solar Eclipse 2026: ತುಲಾ ರಾಶಿಯ ಮೇಲೆ ರಾಹುಗ್ರಸ್ತ ಸೂರ್ಯಗ್ರಹಣದ ಪ್ರಭಾವ ಹೇಗಿರಲಿದೆ? – Kannada News | Solar Eclipse 2026: Astrological Effects on Libra Zodiac Sign by Dr. Basavaraj Guruji

ಡಾ. ಬಸವರಾಜ ಗುರೂಜಿ ಅವರ ಪ್ರಕಾರ, 2026ರಲ್ಲಿ ಸಂಭವಿಸಲಿರುವ ರಾಹುಗ್ರಸ್ತ ಕಂಕಣ ಸೂರ್ಯಗ್ರಹಣವು ತುಲಾ ರಾಶಿಯವರ ಐದನೇ ಮನೆಯಲ್ಲಿ ಸಂಭವಿಸಲಿದ್ದು, ರಾಶ್ಯಾಧಿಪತಿ ಶುಕ್ರನೂ ಸಹ ಈ ಗ್ರಹಣದಲ್ಲಿ ಭಾಗಿಯಾಗಲಿದ್ದಾನೆ. ಚಿತ್ತಾ, ಸ್ವಾತಿ, ವಿಶಾಖಾ ನಕ್ಷತ್ರದವರಿಗೆ ಇದರ ಪ್ರಭಾವ ಇರುತ್ತದೆ.

ಗ್ರಹಣದ ಪ್ರಭಾವದಿಂದ ತುಲಾ ರಾಶಿಯವರಿಗೆ ಆಲಸ್ಯ, ನಿರುತ್ಸಾಹ, ಮಕ್ಕಳ ಬಗ್ಗೆ ಅತಿಯಾದ ಯೋಚನೆಗಳು ಕಾಡಬಹುದು. ಆದಾಗ್ಯೂ, ಗುರುಬಲ ಇರುವುದರಿಂದ ಅದೃಷ್ಟ ಚೆನ್ನಾಗಿರುತ್ತದೆ. ಪ್ರಯತ್ನ ಪಟ್ಟರೆ ಹೆಚ್ಚು ಲಾಭ, ಸಂತಾನದಿಂದ ಒಳಿತು, ವ್ಯಾಪಾರ, ಪಾಲುದಾರಿಕೆಯಲ್ಲಿ ಯಶಸ್ಸು, ಉತ್ತಮ ಆರೋಗ್ಯ, ಸಾರ್ವಜನಿಕ ಸಂಪರ್ಕದಲ್ಲಿ ಪ್ರಗತಿ ಕಾಣುವಿರಿ. ಏಜೆಂಟ್, ಮಧ್ಯವರ್ತಿ, ದಲ್ಲಾಳಿಗಳಿಗೆ ಹಣದ ಯೋಗವಿದೆ. ಆರ್ಥಿಕವಾಗಿ ಉತ್ತಮವಾಗಿರಲಿದೆ ಮತ್ತು ಉದ್ಯೋಗ ಬದಲಾವಣೆಗೂ ಅವಕಾಶವಿದೆ. ಕಟ್ಟಡ ನಿರ್ಮಾಣ ಕಾರ್ಯಗಳಲ್ಲಿ ಸ್ವಲ್ಪ ನಿಧಾನವಾಗಬಹುದು. ಹಿರಿಯರ ಮಾರ್ಗದರ್ಶನದಿಂದ ಪ್ರತಿಭೆಗೆ ತಕ್ಕ ಫಲ ಸಿಗಲಿದೆ. ಹೊಸ ಸಂಸ್ಥೆ ಸ್ಥಾಪನೆ, ಉದ್ಯಮಿಗಳಿಗೆ ಒಳಿತು, ವಿದೇಶ ಪರ್ಯಟನ, ಧರ್ಮ ಕಾರ್ಯಗಳಲ್ಲಿ ಭಾಗವಹಿಸುವಿಕೆ ಹಾಗೂ ವಿವಾಹ ವಿಷಯಗಳಲ್ಲಿ ಶುಭವಾಗಲಿದೆ. ಕುಟುಂಬ ಸದಸ್ಯರಲ್ಲಿ ಅನಾರೋಗ್ಯದ ಚಿಂತೆ ಕಾಡುವ ಸಾಧ್ಯತೆ ಇದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

 

ಇದನ್ನೂ ಓದಿ: ವರ್ಷದ ಮೊದಲ ಸೂರ್ಯಗ್ರಹಣ ಮೇಷ ರಾಶಿಯವರಿಗೆ ಹೇಗಿರಲಿದೆ?

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Horoscope February 14: ಚಂದ್ರನ ಆಧಿಪತ್ಯದ ಈ ರಾಶಿಗೆ ಈ ತಿಂಗಳು ಯಾವ ಗ್ರಹದ ದಶೆ ಶುಭವನ್ನು ನೀಡುತ್ತದೆ? – Kannada News | Planetary Dasha Effects and Astrology Remedies for Cancer

ಭವಿಷ್ಯವನ್ನು ತಿಳಿಯಲು ಅನೇಕ ಮಾರ್ಗಗಳಿದ್ದರೂ ರಾಶಿ ಗ್ರಹಗಳ ಮೂಲಕ ನೋಡುವ ಕ್ರಮ ವಿಶೇಷವೂ ಮಹತ್ತ್ವದ್ದೂ ಆಗಿದೆ. ಕರ್ಕರಾಶಿಯವರಿಗೆ ಫೆಬ್ರವರಿ ತಿಂಗಳು ಹೇಗಿದೆ, ಮತ್ತು ಯಾವ ದಶೆ ಅವರಿಗೆ ಆಗಿಬರುವುದು‌ ಎಂದು ನೋಡಿದಾಗ ಮುಂದಿನ ಕ್ರಮಕ್ಕೆ ಅನುಕೂಲಕರವಾಗಲಿದೆ. ಗ್ರಹಗಳ ಕರ್ಕಾಟಕ ರಾಶಿಯ ಮೇಲೆ ಎಂತಹ ಶುಭಾಶುಭ ಫಲಗಳನ್ನು ನೀಡುತ್ತಾರೆ ಎನ್ನುವುದನ್ನು ಮನಗಾಣಬಹುದು. ಇದೇ ಉದ್ಯೋಗ, ವ್ಯವಹಾರ ವ್ಯಾಪಾರಕ್ಕೆ ವಿಶೇಷವಾದ ಮಾರ್ಗವನ್ನು ತೋರಿಸುತ್ತವೆ.

ಉತ್ತಮ ಫಲ

​ಶುಕ್ರ ದಶೆ :

ಶುಕ್ರನು ಎಂಟನೇ ಮನೆಯಲ್ಲಿದ್ದರೂ ಸೌಂದರ್ಯ ಮತ್ತು ಸುಖವನ್ನು ನೀಡುತ್ತಾನೆ. ಕೌಟುಂಬಿಕವಾಗಿ ಸಣ್ಣಪುಟ್ಟ ಸಂಭ್ರಮಗಳು ನಡೆಯುತ್ತವೆ.

​ಚಂದ್ರ ದಶೆ :

ರಾಶ್ಯಾಧಿಪತಿಯಾಗಿರುವುದರಿಂದ, ಎಷ್ಟೇ ಖರ್ಚು ಅಥವಾ ಒತ್ತಡವಿದ್ದರೂ ಮನಸ್ಸನ್ನು ಸ್ಥಿಮಿತದಲ್ಲಿಡಲು ಚಂದ್ರನು ಸಹಾಯ ಮಾಡುತ್ತಾನೆ.

​ಮಧ್ಯಮ ಫಲ

​ಗುರು ದಶೆ :

ಗುರುವು ಹನ್ನೆರಡನೇ ಮನೆಯಲ್ಲಿದ್ದರೆ ಅದು ಮಧ್ಯಮ ಫಲ. ದಾನ, ಧರ್ಮ, ಮದುವೆ ಅಥವಾ ತೀರ್ಥಯಾತ್ರೆ ಮುಂತಾದ ಶುಭ ಕಾರ್ಯಗಳಿಗಾಗಿ ಹಣ ಖರ್ಚಾಗುತ್ತದೆ. ಖರ್ಚು ಅಧಿಕವಾದರೂ ಅದು ಸಾರ್ಥಕ ಕೆಲಸಗಳಿಗೇ ಆಗುತ್ತದೆ. ಆಧ್ಯಾತ್ಮಿಕವಾಗಿ ನೀವು ಉನ್ನತ ಮಟ್ಟಕ್ಕೆ ಏರುತ್ತೀರಿ.

​ರಾಹು-ಕೇತು ದಶೆ:

ವಿದೇಶಿ ವ್ಯವಹಾರ ಅಥವಾ ದೂರದ ಪ್ರಯಾಣದಿಂದ ಲಾಭ ಸಿಗಬಹುದು. ಆದರೆ ಅನಿರೀಕ್ಷಿತ ಅಡೆತಡೆಗಳು ಎದುರಾಗುತ್ತವೆ.

​ಅಧಮ ಫಲ :

​ಈ ತಿಂಗಳು ನಿಮಗೆ ಈ ಗ್ರಹಗಳ ಪ್ರಭಾವವು ಅತ್ಯಂತ ಕಠಿಣವಾಗಿರಲಿದೆ.

​ಶನಿ ದಶೆ :

ಶನಿಯು 8ನೇ ಮನೆಯಲ್ಲಿದ್ದು, ಗುರುವು ಹನ್ನೆರಡನೇ ಮನೆಯಲ್ಲಿದ್ದರೆ ಆರ್ಥಿಕವಾಗಿ ಹತೋಟಿ ಮೀರುವ ಸಾಧ್ಯತೆ ಇರುತ್ತದೆ. ಕೆಲಸದಲ್ಲಿ ವಿಳಂಬ ಮತ್ತು ಶತ್ರುಗಳ ಕಾಟ ಹೆಚ್ಚಾಗಬಹುದು.

​ಕುಜ ದಶೆ:

ಅಷ್ಟಮ ರಾಶಿಯಲ್ಲಿ ಮಂಗಳನಿರುವುದು ಅಪಘಾತ ಅಥವಾ ಸರ್ಜರಿಯ ಸೂಚನೆ ನೀಡುತ್ತದೆ. ತೀವ್ರವಾದ ಕೋಪ ಮತ್ತು ಆತುರದ ನಿರ್ಧಾರಗಳು ನಷ್ಟಕ್ಕೆ ಕಾರಣವಾಗುತ್ತವೆ.

​ಸೂರ್ಯ ದಶೆ:

ಕಣ್ಣಿನ ಆರೋಗ್ಯ ಅಥವಾ ತಂದೆಯ ಆರೋಗ್ಯದ ಬಗ್ಗೆ ವ್ಯಯವಾಗಬಹುದು. ಅಧಿಕಾರಿಗಳಿಂದ ಕಿರಿಕಿರಿ ಉಂಟಾಗುವ ಸಾಧ್ಯತೆ ಇದೆ.
​ಶುಕ್ರ, ಚಂದ್ರರಿಂದ ಸಮಾಧಾನಕರ ಬದುಕು, ಸಣ್ಣ ಲಾಭ. ಗುರು, ಬುಧ, ರಾಹುವಿನಿಂದ ಅಧಿಕ ಖರ್ಚು, ಆದರೆ ಸತ್ಕಾರ್ಯಕ್ಕೆ ಬಳಕೆ. ಶನಿ, ಮಂಗಳ, ಸೂರ್ಯನಿಂದ ದೈಹಿಕ ತೊಂದರೆ, ಮಾನಸಿಕ ಕ್ಲೇಶ, ಆರ್ಥಿಕ ಮುಗ್ಗಟ್ಟು.

ಗುರು ದ್ವಾದಶದಲ್ಲಿದ್ದಾಗ ಮಾಡಬೇಕಾದ ಪರಿಹಾರಗಳು ಹಳದಿ ಬಣ್ಣದ ಬಟ್ಟೆಯಲ್ಲಿ ಸ್ವಲ್ಪ ಕಡಲೆ ಬೇಳೆಯನ್ನು ಕಟ್ಟಿ ದೇವಸ್ಥಾನಕ್ಕೆ ದಾನ ಮಾಡಿ. ಇದರಿಂದ ಅನಗತ್ಯ ಖರ್ಚುಗಳು ಕಡಿಮೆಯಾಗುತ್ತವೆ. ಪ್ರತಿದಿನ ಓಂ ನಮಃ ಶಿವಾಯ ಮಂತ್ರ ಪಠಿಸಿ. ಇದು ಅಷ್ಟಮ ಶನಿ ಮತ್ತು ದ್ವಾದಶದ ಗುರುವಿನ ದೋಷಕ್ಕೆ ಉತ್ತಮ ಮದ್ದು. ಗುರುವಾರ ದಕ್ಷಿಣಾಮೂರ್ತಿಯನ್ನು ಪ್ರಾರ್ಥಿಸುವುದು ನಿಮ್ಮ ಬುದ್ಧಿಶಕ್ತಿಯನ್ನು ಹೆಚ್ಚಿಸಿ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಹಾಯ ಮಾಡುತ್ತದೆ.

– ಲೋಹಿತ ಹೆಬ್ಬಾರ್

Source link

ಟೀಮ್ ಇಂಡಿಯಾ ವಿರುದ್ಧ ಅರ್ಧದಲ್ಲೇ ಚೆಂಡೆಸೆದು ಸಿಕ್ಕಿ ಬಿದ್ದ ಎರಾಸ್ಮಸ್..! – Kannada News | Why Umpire Called Gerhard Erasmus’ Delivery A ‘Dead Ball’

T20 World Cup 2026: ಟಿ20 ವಿಶ್ವಕಪ್​ನ 18ನೇ ಪಂದ್ಯದಲ್ಲಿ ಟೀಮ್ ಇಂಡಿಯಾ ಭರ್ಜರಿ ಜಯ ಸಾಧಿಸಿದೆ. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ನಮೀಬಿಯ ವಿರುದ್ಧದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಭಾರತ ತಂಡವು ಪವರ್​ಪ್ಲೇನಲ್ಲಿ 86 ರನ್ ಕಲೆಹಾಕಿದ್ದರು. ಈ ವೇಳೆ ದಾಳಿಗಿಳಿದ ನಮೀಬಿಯ ತಂಡದ ನಾಯಕ ಗೆರ್ಹಾರ್ಡ್ ಎರಾಸ್ಮಸ್ ಕುತಂತ್ರವನ್ನು ಪ್ರಯೋಗಿಸಲು ಮುಂದಾಗಿದ್ದರು.

ಪಂದ್ಯದ 8ನೇ ಓವರ್​ನ ಕೊನೆಯ ಎಸೆತವನ್ನು ಅರ್ಧದಲ್ಲೇ ಎಸೆಯುವ ಮೂಲಕ ಗೆರ್ಹಾರ್ಡ್ ಎರಾಸ್ಮಸ್ ಓವರ್ ಮುಗಿಸಲು ಯತ್ನಿಸಿದ್ದರು. ಆದರೆ ಈ ಎಸೆತವನ್ನು ಅಂಪೈರ್ ಡೆಡ್ ಬಾಲ್ ಎಂದು ಕರೆದಿದ್ದಾರೆ. ಇದರಿಂದ ಎರಾಸ್ಮಸ್ ಹಾಗೂ ಅಂಪೈರ್ ನಡುವೆ ಕೆಲ ಕಾಲ ವಾಗ್ವಾದ ನಡೆಯಿತು. ಇದಾಗ್ಯೂ ಫೀಲ್ಡ್ ಅಂಪೈರ ತನ್ನ ನಿರ್ಧಾರ ಬದಲಿಸಿರಲಿಲ್ಲ.

ಡೆಡ್ ಬಾಲ್ ತೀರ್ಪು ನೀಡಿದ್ದೇಕೆ?

ಎರಾಸ್ಮಸ್ ಅವರು ಬೌಲಿಂಗ್ ಕ್ರೀಸ್‌ಗಿಂತ ಬಹಳ ಹಿಂದಿನಿಂದ (ಸುಮಾರು ಅರ್ಧ ರನ್-ಅಪ್‌ನಲ್ಲೇ) ಚೆಂಡನ್ನು ಎಸೆದಿದ್ದರು. ಇದು ಅಂಪೈರ್ ರೋಡ್ ಟಕರ್ ಅವರ ದೃಷ್ಟಿ ವ್ಯಾಪ್ತಿಯಿಂದ ಆಚೆಗಿತ್ತು, ಅಂದರೆ ಅಂಪೈರ್ ಚೆಂಡು ಎಸೆದದ್ದನ್ನು ಸರಿಯಾಗಿ ನೋಡಲು ಸಾಧ್ಯವಾಗಲಿಲ್ಲ. ಇದೇ ಕಾರಣಕ್ಕೆ ಅಂಪೈರ್ ಡೆಡ್ ಬಾಲ್ ಎಂದು ಘೋಷಿಸಿದರು.

ಐಸಿಸಿ ನಿಯಮವೇನು?

ಐಸಿಸಿ ಕ್ರಿಕೆಟ್ ನಿಯಮಗಳ ಪ್ರಕಾರ, ಬೌಲರ್ ಬ್ಯಾಟರ್‌ನ ಗಮನವನ್ನು ಉದ್ದೇಶಪೂರ್ವಕವಾಗಿ ಬೇರೆಡೆ ಸೆಳೆಯಲು ಅಥವಾ ವಿಚಿತ್ರ ರೀತಿಯಲ್ಲಿ ಚೆಂಡನ್ನು ಎಸೆಯಲು ಪ್ರಯತ್ನಿಸಿದರೆ, ಅಂಪೈರ್‌ಗೆ ಅದನ್ನು ‘ಡೆಡ್ ಬಾಲ್’ ಎಂದು ಕರೆಯುವ ಅಧಿಕಾರವಿರುತ್ತದೆ.

ಇಲ್ಲಿ ಗೆರ್ಹಾರ್ಡ್ ಎರಾಸ್ಮಸ್ ಅಂಪೈರ್​ನ ಹಿಂದಿನಿಂದ ಅಂದರೆ, ಕ್ರೀಸ್​ನಿಂದ ಬಹಳ ಹಿಂಬದಿಯಿಂದ ಚೆಂಡೆಸೆದಿದ್ದಾರೆ. ಈ ಎಸೆತವನ್ನು ಅಂಪೈರ್​ಗೆ ನೋಡಲು ಸಾಧ್ಯವಾಗಿರಲಿಲ್ಲ. ಹೀಗಾಗಿಯೇ ಎರಾಸ್ಮಸ್ ಎಸೆತವನ್ನು ಡೆಡ್ ಬಾಲ್ ಎಂದು ಘೋಷಿಸಲಾಯಿತು.

ಸಾಮಾನ್ಯವಾಗಿ ಬ್ಯಾಟ್ಸ್​ಮನ್ ಎಸೆತಕ್ಕೆ ಸಿದ್ಧರಿಲ್ಲದಿದ್ದಾಗ ಅಥವಾ ಬೌಲರ್ ಅನಿರೀಕ್ಷಿತವಾಗಿ ಚೆಂಡನ್ನು ಎಸೆದಾಗ ಡೆಡ್ ಬಾಲ್ ತೀರ್ಪು ನೀಡಲಾಗುತ್ತದೆ. ಆದರೆ ಈ ಬಾರಿ ಅಂಪೈರ್ ರೋಡ್ ಟಕರ್ ರನ್​ ಅಪ್​ನ ಅರ್ಧದಲ್ಲೇ ಚೆಂಡೆಸೆದಿರುವ ಕಾರಣ ಡೆಡ್ ಬಾಲ್ ಘೋಷಿಸಿ ಎಲ್ಲರ ಗಮನ ಸೆಳೆದಿದ್ದಾರೆ.

ಅಂಪೈರ್ ಅವರ  ಈ ತೀರ್ಪು ಮೈದಾನದಲ್ಲಿ ಸಾಕಷ್ಟು ಚರ್ಚೆಗೆ ಕಾರಣವಾಯಿತು. ವಿಶೇಷವೆಂದರೆ, ಆ ಎಸೆತವು ‘ವೈಡ್’ ಆಗಿತ್ತು. ಆದರೆ ಅಂಪೈರ್ ಅದನ್ನು ‘ಡೆಡ್ ಬಾಲ್’ ಎಂದು ಘೋಷಿಸಿದ್ದರಿಂದ ಭಾರತಕ್ಕೆ ಆ ಒಂದು ರನ್ ಸಿಗಲಿಲ್ಲ. ಅಂತಿಮವಾಗಿ ಈ ಪಂದ್ಯದಲ್ಲಿ 4 ಓವರ್​ಗಳನ್ನು ಎಸೆದ ಗೆರ್ಹಾರ್ಡ್ ಎರಾಸ್ಮಸ್ ಕೇವಲ 20 ರನ್ ನೀಡಿ 4 ವಿಕೆಟ್ ಪಡೆದು ಮಿಂಚಿದರು.

ಇದನ್ನೂ ಓದಿ: ಹೀಗಾದಲ್ಲಿ ಟಿ20 ವಿಶ್ವಕಪ್​ನಿಂದ ಆಸ್ಟ್ರೇಲಿಯಾ ಔಟ್..!

ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 20 ಓವರ್​ಗಳಲ್ಲಿ 209 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ನಮೀಬಿಯ ತಂಡವು 18.2 ಓವರ್​ಗಳಲ್ಲಿ 116 ರನ್​ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಭಾರತ ತಂಡವು 93 ರನ್​ಗಳ ಭರ್ಜರಿ ಜಯ ಸಾಧಿಸಿದೆ.

Published On – 10:11 am, Sat, 14 February 26

Source link