Headlines

ಮೈಸೂರು ಅರಮನೆ ತ್ರಿನೇಶ್ವರನಿಗೆ ಬರೋಬ್ಬರಿ 11 ಕೆಜಿ ತೂಕದ ಚಿನ್ನದ ಮುಖವಾಡ ಹಸ್ತಾಂತರ: ಏನಿದರ ವಿಶೇಷ? ಹೇಗಿದೆ ನೋಡಿ! – Kannada News | 11 Kg Golden Mask Offered to Trineshwara at Mysore Palace Temple for Maha Shivaratri: Significance and History Explained

ಮೈಸೂರು, ಫೆಬ್ರವರಿ 14: ಮಹಾಶಿವರಾತ್ರಿ ಹಬ್ಬದ ಸಡಗರದ ಅಂಗವಾಗಿ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ವಿಶೇಷ ಆಚರಣೆಗೆ ಸಿದ್ಧತೆಗಳು ನಡೆದಿವೆ. ಮೈಸೂರು ಅರಮನೆ ಆವರಣದಲ್ಲಿರುವ ಐತಿಹಾಸಿಕ ತ್ರಿನೇಶ್ವರಸ್ವಾಮಿ ದೇಗುಲದಲ್ಲಿ ಶಿವರಾತ್ರಿ ದಿನದಂದು ಶಿವಲಿಂಗಕ್ಕೆ ಅಪರೂಪದ 11 ಕೆಜಿ ತೂಕದ ಚಿನ್ನದ ಮುಖವಾಡವನ್ನು ಧಾರಣೆ ಮಾಡಲಾಗುತ್ತದೆ. ಈ ಚಿನ್ನದ ಮುಖವಾಡವನ್ನು ಜಯಚಾಮರಾಜೇಂದ್ರ ಒಡೆಯರ್ ಅವರು ತಮ್ಮ ಪುತ್ರ ಶ್ರೀಕಂಠದತ್ತ ನರಸಿಂಹರಾಜ್ ಒಡೆಯರ್ ಅವರ ಜನನದ ಸಂದರ್ಭದಲ್ಲಿ ದೇಗುಲಕ್ಕೆ ಕಾಣಿಕೆಯಾಗಿ ನೀಡಿದ್ದರು. ಅತ್ಯಂತ ಆಕರ್ಷಕವಾಗಿ ಕಲಾವಿದರ ಕೈಚಳಕದಲ್ಲಿ ಮೂಡಿಬಂದಿರುವ ಈ ಮುಖವಾಡವನ್ನು…

Read More

ಮಿಥುನ ರಾಶಿಯವರಿಗೆ ಹೊಸ ವರ್ಷದ ಎರಡನೇ ತಿಂಗಳು ಹೇಗಿದೆ? – Kannada News | Mithuna Rashi February 2026: Planetary Impact and Monthly Forecast for Geminis

ಈ ತಿಂಗಳಲ್ಲಿ ಬುಧನ ಆಧಿಪತ್ಯದ ಮಿಥುನ ರಾಶಿಯವರಿಗೆ ಗ್ರಹಗತಿಗಳ ಬದಲಾವಣೆಯಿಂದಾಗಿ ಶುಭ ಮತ್ತು ಅಶುಭ ಫಲಗಳ ಮಿಶ್ರಣವಿರಲಿದೆ. ಪ್ರಮುಖವಾಗಿ ರಾಶಿಯಲ್ಲಿಯೇ ಇರುವ ಗುರು, ದಶಮದ ಶನಿ ಮತ್ತು ನವಮದ ಬುಧ ಗ್ರಹಗಳ ಸಂಚಾರವು ನಿಮ್ಮ ಜೀವನದ ಮೇಲೆ ಹೆಚ್ಚಿನ ಪ್ರಭಾವ ಬೀರಲಿವೆ. ​ಇದರ ವಿಸ್ತೃತ ಅಂಶಗಳನ್ನು ನೋಡಬಹುದು. ಶುಭ ಫಲ ನೀಡುವ ಗ್ರಹಗಳ ದಶೆ ​ಗುರು : ಗುರುವು ನಿಮ್ಮ ರಾಶಿಯ ಪ್ರಥಮ ಭಾವದಲ್ಲಿ ಸಂಚರಿಸುತ್ತಿರುವುದರಿಂದ ಗುರು ಬಲ’ ಹೆಚ್ಚಿದೆ. ಇದು ನಿಮಗೆ ಆತ್ಮವಿಶ್ವಾಸ, ಉತ್ತಮ ಆರೋಗ್ಯ…

Read More

ತೆಲಂಗಾಣದ ಲ್ಯಾಬ್​​​ನಲ್ಲಿ ರೇಡಿಯೇಟರ್ ಸ್ಫೋಟ: 11 ಜನರಿಗೆ ಗಾಯ – Kannada News | Yadadri Bhuvanagiri Lab Blast: Choutuppal Fire Causes Massive Damage, 6 Hospitalized

ತೆಲಂಗಾಣದ ಲ್ಯಾಬ್​​​ನಲ್ಲಿ ರೇಡಿಯೇಟರ್ ಸ್ಫೋಟ ಹೈದರಾಬಾದ್ ಫೆ.14: ತೆಲಂಗಾಣದ ಯದಾದ್ರಿ ಭುವನಗಿರಿ ಜಿಲ್ಲೆಯಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದೆ. ಚೌಟುಪ್ಪಲ್ ಪೊಲೀಸ್ ಠಾಣೆ ವ್ಯಾಪ್ತಿಯ ದೋಟಿಗುಡೆಮ್‌ನಲ್ಲಿರುವ ಖಾಸಗಿ ಪ್ರಯೋಗಾಲಯವೊಂದರಲ್ಲಿ (Laboratory) ರೇಡಿಯೇಟರ್ ಸ್ಫೋಟಗೊಂಡ ಪರಿಣಾಮ ಇಡೀ ಘಟಕಕ್ಕೆ ಬೆಂಕಿ ವ್ಯಾಪಿಸಿದೆ. ಪ್ರಯೋಗಾಲಯದಲ್ಲಿ ಎಂದಿನಂತೆ ಕೆಲಸ ಸಾಗುತ್ತಿದ್ದಾಗ ಹಠಾತ್ತನೆ ರೇಡಿಯೇಟರ್ ಸ್ಫೋಟಗೊಂಡಿದೆ. ಸ್ಫೋಟದ ತೀವ್ರತೆಗೆ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಪ್ರಯೋಗಾಲಯವನ್ನು ಆವರಿಸಿಕೊಂಡಿದೆ. ಸುತ್ತಮುತ್ತಲಿನ ಪ್ರದೇಶದಲ್ಲಿ ದಟ್ಟವಾದ ಹೊಗೆ ಆವರಿಸಿದ್ದು, ಸ್ಥಳೀಯರಲ್ಲಿ ಭೀತಿ ಮೂಡಿಸಿತ್ತು. ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆಯೇ…

Read More

ನಿರ್ಬಂಧದ ಮದ್ಯೆಯೂ ನಂದಿ ಗಿರಿಧಾಮಕ್ಕೆ ಬಂದ ಪ್ರೇಮಿಗಳು, ಸೆಲೆಬ್ರೇಷನ್​ಗೆ ಆಗಮಿಸಿ ನಿರಾಸೆಯಿಂದ ವಾಪಸ್ – Kannada News | Valentine’s Day Entry Ban at Nandi Hills: Lovers Return Disappointed After Chikkaballapur Administration Restricts Access

ಚಿಕ್ಕಬಳ್ಳಾಪುರ, ಫೆಬ್ರವರಿ 14: ಪ್ರೇಮಿಗಳ ದಿನದ ಹಿನ್ನೆಲೆಯಲ್ಲಿ, ಚಿಕ್ಕಬಳ್ಳಾಪುರ ಜಿಲ್ಲೆಯ ವಿಶ್ವವಿಖ್ಯಾತ ನಂದಿಗಿರಿಧಾಮ ಪ್ರವೇಶಕ್ಕೆ ನಿರ್ಬಂಧ ಹೇರಲಾಗಿದೆ. ಅಹಿತಕರ ಘಟನೆಗಳು ಸಂಭವಿಸದಂತೆ ತಡೆಯಲು ಮುಂಜಾಗ್ರತಾ ಕ್ರಮವಾಗಿ ಇಂದು ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಂದಿಬೆಟ್ಟಕ್ಕೆ ಪ್ರವೇಶ ಬಂದ್ ಮಾಡಲಾಗಿದೆ. ಆದಾಗ್ಯೂ ಬೆಳ್ಳಂಬೆಳಗ್ಗೆ ಅನೇಕ ಪ್ರೇಮಿಗಳು ಪ್ರವೇಶ ದ್ವಾರದ ವರೆಗೂ ಬಂದು ನಿರಾಸೆಯಿಂದ ವಾಪಸ್ ಆದರು. ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಪ್ರಭುಜಿ ಅವರು ನಂದಿ ಗಿರಿಧಾಮ ಪ್ರವೇಶಕ್ಕೆ ನಿರ್ಬಂಧ ವಿಧಿಸಿ ಆದೇಶವನ್ನು ಹೊರಡಿಸಿದ್ದಾರೆ. ಪ್ರೇಮಿಗಳ ದಿನದಂದು ಹೆಚ್ಚಿನ…

Read More

ಹೀಗಾದಲ್ಲಿ ಆಸ್ಟ್ರೇಲಿಯಾ ವಿಶ್ವಕಪ್​ನಿಂದ ಔಟ್..! – Kannada News | Australia’s Super 8 Qualification Scenario

T20 World Cup 2026: ಟಿ20 ವಿಶ್ವಕಪ್​ನ 19ನೇ ಪಂದ್ಯದಲ್ಲಿ ಝಿಂಬಾಬ್ವೆ ತಂಡ ಭರ್ಜರಿ ಜಯ ಸಾಧಿಸಿದೆ. ಅದು ಸಹ ಬಲಿಷ್ಠ ಆಸ್ಟ್ರೇಲಿಯಾ ವಿರುದ್ಧ. ಕೊಲಂಬೊದ ಆರ್​. ಪ್ರೇಮದಾಸ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಝಿಂಬಾಬ್ವೆ ತಂಡವು 20 ಓವರ್​ಗಳಲ್ಲಿ ಕಲೆಹಾಕಿದ್ದು 169 ರನ್​ಗಳು ಮಾತ್ರ. ಈ ಗುರಿಯನ್ನು ಬೆನ್ನತ್ತಿದ ಆಸ್ಟ್ರೇಲಿಯಾ ಪರ ಮ್ಯಾಟ್​ ರೆನ್​ಶಾ 65 ರನ್ ಸಿಡಿಸಿದ್ದರು. ಇದಾಗ್ಯೂ ಉಳಿದ ಬ್ಯಾಟರ್​ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಪರಿಣಾಮ ಆಸೀಸ್ ಪಡೆ…

Read More

ಶಹಾಪುರದಲ್ಲಿ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ! ಸ್ಥಳೀಯಾಡಳಿತ, ಪೊಲೀಸರೂ ಮೌನ – Kannada News | Social Boycott in Yadgir: 12 Families Ostracised for Questioning Community Funds in Shahapur

ಶಹಾಪುರದಲ್ಲಿ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ!Image Credit source: tv9 ಯಾದಗಿರಿ, ಫೆಬ್ರವರಿ 14: ಯಾದಗಿರಿ (Yadgir) ಜಿಲ್ಲೆಯ ಶಹಾಪುರ ನಗರದಲ್ಲಿ ಸಾಮಾಜಿಕ ಬಹಿಷ್ಕಾರದ ಅನಿಷ್ಟ ಪದ್ಧತಿ ಇನ್ನೂ ಜೀವಂತವಾಗಿರುವುದು ಬೆಳಕಿಗೆ ಬಂದಿದೆ. ಸ್ವಕುಳಿಸಾಳಿ ಸಮುದಾಯದ 12 ಕುಟುಂಬಗಳಿಗೆ ತಮ್ಮದೇ ಸಮುದಾಯದಿಂದ ಬಹಿಷ್ಕಾರ ಹಾಕಲಾಗಿದ್ದು, ಕಳೆದ ಎಂಟು ವರ್ಷಗಳಿಂದ ಈ ಕುಟುಂಬಗಳು ಸಂಕಷ್ಟದ ಜೀವನ ನಡೆಸುತ್ತಿವೆ. ಸಮುದಾಯಕ್ಕೆ ಸೇರಿದ ಸಂಘದ ಆಸ್ತಿ ಹಾಗೂ ಆದಾಯದ ಲೆಕ್ಕ ಕೇಳಿದ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಬಹಿಷ್ಕೃತ ಕುಟುಂಬಗಳು…

Read More

ಟಿ20 ಕ್ರಿಕೆಟ್​ನಲ್ಲಿ ಹಿಂದೆಂದೂ ಕಂಡರಿಯದ ವಿಶ್ವ ದಾಖಲೆ ಬರೆದ ‘ಮೊಸ್ಕಾ’ ಬ್ರದರ್ಸ್

ಟಿ20 ಕ್ರಿಕೆಟ್‌ನಲ್ಲಿ ಹೊಸ ವಿಶ್ವ ದಾಖಲೆ ನಿರ್ಮಾಣವಾಗಿದೆ. ಈ ವರ್ಲ್ಡ್ ರೆಕಾರ್ಡ್ ನಿರ್ಮಿಸಿರುವುದು ಮೊಸ್ಕಾ ಬ್ರದರ್ಸ್. ಟಿ20 ವಿಶ್ವಕಪ್‌ನ 17ನೇ ಪಂದ್ಯದಲ್ಲಿ ಶತಕದ ಜೊತೆಯಾಟವಾಡುವ ಮೂಲಕ ಆಂಥೋನಿ ಮೊಸ್ಕಾ ಮತ್ತು ಜಸ್ಟಿನ್ ಮೊಸ್ಕಾ ಹೊಸ ಇತಿಹಾಸ ನಿರ್ಮಿಸಿದ್ದಾರೆ. ಮುಂಬೈನ ವಾಂಖೆಡೆ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಇಟಲಿ ತಂಡವು ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ನೇಪಾಳ ತಂಡವು 19.3 ಓವರ್‌ಗಳಲ್ಲಿ 123 ರನ್ ಗಳಿಸಿ ಆಲೌಟ್ ಆಯಿತು. ಈ ಗುರಿ ಬೆನ್ನತ್ತಿದ ಇಟಲಿ…

Read More

‘ಅದೆಲ್ಲ ಗೊತ್ತಿಲ್ಲ, 20 ಕೋಟಿ ರೂ. ಕೊಡಿ’; ಧನುಶ್ ಹಿಂದೆ ಬಿದ್ದ ನಿರ್ಮಾಪಕ – Kannada News | Dhanush Rs 20 Crore Legal Notice: Thendal Films Sues Actor for Delayed Film Project

ತಮಿಳು ನಟ ಧನುಶ್ (Dhanush) ಅವರು ಆಗಾಗ ಸುದ್ದಿ ಆಗುತ್ತಲೇ ಇರುತ್ತಾರೆ. ಇಷ್ಟು ದಿನ ಅವರ ಎರಡನೇ ವಿವಾಹದ ಬಗ್ಗೆ ಚರ್ಚೆ ಆಗಿತ್ತು. ಈಗ ಅವರು ಲೀಗಲ್ ಸಮಸ್ಯೆ ಎದುರಿಸುವ ಪರಿಸ್ಥಿತಿ ಬಂದಿದೆ. ‘ಥೇಂಡಾಲ್’ ಫಿಲ್ಮ್ಸ್’ ಸಂಸ್ಥೆ ನಟನಿಗೆ ಲೀಗಲ್ ನೋಟಿಸ್ ಕಳುಹಿಸಿದೆ. ಅಷ್ಟೇ ಅಲ್ಲ, 20 ಕೋಟಿ ರೂಪಾಯಿ ಕೊಡಬೇಕು ಎಂದು ಬೇಡಿಕೆ ಇಟ್ಟಿದೆ. ಅಷ್ಟಕ್ಕೂ ಏನಿದು ಪ್ರಕರಣ? ಆ ಬಗ್ಗೆ ಇಲ್ಲಿದೆ ವಿವರ. ‘ಥೆಂಡಾಲ್ ಫಿಲ್ಮ್ಸ್’ ಹೆಸರಿನ ಸಂಸ್ಥೆ ಜೊತೆ ಧನುಶ್ ಸಿನಿಮಾ ಒಪ್ಪಿಕೊಂಡಿದ್ದರು….

Read More

ಕನ್ನಡ ಸೆಲೆಬ್ರಿಟಿ ಜೋಡಿಗಳ ಕ್ಯೂಟ್ ಲವ್​ ಸ್ಟೋರಿ – Kannada News | Sandalwood Stars: Reel to Real Love Stories – Kannada Actors Who Fell in Love On Set

ತೆರೆಯ ಮೇಲೆ ನಟನೆ ಮಾಡುತ್ತಾ ನಂತರ ಸಂಬಂಧ ನಿಜವಾದ ಪ್ರೀತಿಗೆ ತಿರುಗಿದ ಅದೆಷ್ಟೋ ಉದಾಹರಣೆಗಳನ್ನು ನೀವು ನೋಡಬಹುದು. ನಟಿಸುತ್ತಲೇ ಪ್ರೀತಿಗೆ ಬಿದ್ದವರು ಅನೇಕರಿದ್ದಾರೆ. ಸೆಟ್​ನಲ್ಲಿ ಉಂಟಾಗುವ ಗೆಳೆತನ ನಂತರ ಮದುವೆವರೆಗೆ ಹೋದ ಉದಾಹರಣೆ ಇದೆ. ಸ್ಯಾಂಡಲ್​ವುಡ್​ನಲ್ಲೂ (Sandalwood) ಅನೇಕರು ಹೀಗೆ ವಿವಾಹವಾಗಿದ್ದಾರೆ. ಪ್ರೇಮದ ಪಾತ್ರ ಮಾಡುತ್ತ ವಿವಾಹ ಆದ ಸ್ಯಾಂಡಲ್​ವುಡ್​ ಜೋಡಿಗಳ ಪಟ್ಟಿ ಇಲ್ಲಿದೆ. ಯಶ್​ ಹಾಗೂ ರಾಧಿಕಾ ಪಂಡಿತ್​ ಸ್ಯಾಂಡಲ್​ವುಡ್​ನ ಸಾಕಷ್ಟು ಜನಪ್ರಿಯ ಜೋಡಿ ಎಂದರೂ ತಪ್ಪಾಗಲಿಕ್ಕಿಲ್ಲ. ‘ನಂದಗೋಕುಲ’ ಧಾರಾವಾಹಿಯಲ್ಲಿ ಇಬ್ಬರೂ ಒಟ್ಟಾಗಿ ಕಾಣಿಸಿಕೊಂಡಿದ್ದರು. ‘ಮೊಗ್ಗಿನ…

Read More

ಕಾರಿನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಐವರು ಆರೋಪಿಗಳ ಬಂಧನ; 2 ಲಕ್ಷ ರೂ.ಗೂ ಅಧಿಕ ಮೌಲ್ಯದ ಡ್ರಗ್ಸ್ ಸೀಜ್ – Kannada News | Hassan MDMA Drug Bust: Police Arrest 5, Seize Rs.2 Lakh Worth Narcotics

ಕಾರಿನಲ್ಲಿ ಡ್ರಗ್ಸ್ ಸಾಗಿಸುತ್ತಿದ್ದ ಐವರು ಆರೋಪಿಗಳ ಬಂಧನ ಹಾಸನ, ಫೆಬ್ರವರಿ 14: ನಗರದಲ್ಲಿ ಎಂಡಿಎಂಎ ಮಾದಕ ವಸ್ತುಗಳ ಮಾರಾಟ ಜಾಲವನ್ನು ಪೊಲೀಸರು ಭೇದಿಸಿದ್ದು, ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚೆಕ್‌ಪೋಸ್ಟ್‌  (Hassan) ಬಳಿ ಕಾರಿನಲ್ಲಿ ಸುಮಾರು 40 ಗ್ರಾಂ ಎಂಡಿಎಂಎ ಪತ್ತೆಯಾಗಿದ್ದು, ಅದರ ಮೌಲ್ಯ ರೂ.2 ಲಕ್ಷಕ್ಕೂ ಅಧಿಕವೆಂದು ಅಂದಾಜಿಸಲಾಗಿದೆ. ಶಿವಮೊಗ್ಗ ಮೂಲದವರು ಅರೆಸ್ಟ್ ಖಚಿತ ಮಾಹಿತಿಯ ಮೇರೆಗೆ ಹಾಸನದ ರಾಜ್‌ಕುಮಾರ್ ನಗರ ಬಳಿಯ ಚೆಕ್‌ಪೋಸ್ಟ್‌ನಲ್ಲಿ ಸಂಚರಿಸುತ್ತಿದ್ದ ಎರ್ಟಿಗಾ ಕಾರನ್ನು ತಪಾಸಣೆ ನಡೆಸಿದ ವೇಳೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ….

Read More