ಅದು ಫುಟ್‌ಬಾಲ್‌ಗೆ ಸಂಬಂಧಿಸಿದ್ದಲ್ಲ: ಕಣ್ಣೀರಿಟ್ಟ ಲಿಯೋನೆಲ್ ಮೆಸ್ಸಿ! – Kannada News | Lionel Messi was caught by broadcast visuals wiping tears
ಫಿಫಾ ವಿಶ್ವಕಪ್ನ 19ನೇ ಪಂದ್ಯದಲ್ಲಿ ಹ್ಯಾಟ್ರಿಕ್ ಗೋಲು ಬಾರಿಸಿ ಇತಿಹಾಸ ನಿರ್ಮಿಸಿದ ಲಿಯೋನೆಲ್ ಮೆಸ್ಸಿ (Lionel Messi) ಮೈದಾನದಲ್ಲೇ ಕಣ್ಣೀರೀಟಿದ್ದಾರೆ. ಅಲ್ಜೀರಿಯಾ ವಿರುದ್ಧದ ಈ ಪಂದ್ಯದಲ್ಲಿ ಅರ್ಜೆಂಟೀನಾ ತಂಡವನ್ನು ಮುನ್ನಡೆಸಿದ ಮೆಸ್ಸಿ 17ನೇ ನಿಮಿಷದಲ್ಲಿ ಮೊದಲ ಗೋಲು ದಾಖಲಿಸಿದ್ದರು. ಈ ಗೋಲಿನ ಬೆನ್ನಲ್ಲೇ ಎಂದಿನ ಶೈಲಿಯಲ್ಲಿ ಸಂಭ್ರಮಾಚರಣೆ ಮುಗಿಸುತ್ತಿದ್ದಂತೆ, ವೈಯಕ್ತಿಕ ಭಾವನೆಗಳನ್ನು ತಡೆಯಲಾರದೆ ಭಾವುಕರಾದರು. ಈ ವೇಳೆ ಅವರು ತಮ್ಮ ಜೆರ್ಸಿಯಿಂದ ಕಣ್ಣೀರು ಒರೆಸಿಕೊಳ್ಳುತ್ತಿರುವ ದೃಶ್ಯಗಳು ಟಿವಿ ಲೈವ್ ಬ್ರಾಡ್‌ಕಾಸ್ಟ್‌ನ ಕ್ಯಾಮೆರಾಗಳಲ್ಲಿ ಸೆರೆಯಾಗಿದ್ದವು. The last time…