ಜೂ. ಎನ್‌ಟಿಆರ್ ಕೈತಪ್ಪಿದ ದೊಡ್ಡ ಚಿತ್ರ? ತಮಿಳು ನಟ ಸೂರ್ಯನ ಎಂಟ್ರಿ – Kannada News | Nelson Dilipkumar’s Next: Is Suriya Replacing Jr. NTR After ‘Jailer 2’?
ತಮಿಳಿನ ಖ್ಯಾತ ನಿರ್ದೇಶಕ ನೆಲ್ಸನ್ ದಿಲೀಪ್‌ಕುಮಾರ್ ಸದ್ಯ ‘ಜೈಲರ್ 2’ ಚಿತ್ರದ ಕೆಲಸಗಳಲ್ಲಿ ಬ್ಯುಸಿಯಾಗಿದ್ದಾರೆ. ಇದರ ನಡುವೆಯೇ ಅವರ ಮುಂದಿನ ಬಿಗ್ ಬಜೆಟ್ ಸಿನಿಮಾದ ಕುರಿತು ದಕ್ಷಿಣ ಭಾರತದ ಚಿತ್ರರಂಗದಲ್ಲಿ ಹೊಸದೊಂದು ಬಿಸಿಬಿಸಿ ಚರ್ಚೆ ಆರಂಭವಾಗಿದೆ. ನೆಲ್ಸನ್ ಅವರ ಮುಂದಿನ ಪ್ರಾಜೆಕ್ಟ್‌ಗೆ ಗ್ಲೋಬಲ್ ಸ್ಟಾರ್ ಜೂನಿಯರ್ ಎನ್‌ಟಿಆರ್ ಬದಲಿಗೆ ಕಾಲಿವುಡ್ ನಟ ಸೂರ್ಯ (Suriya) ನಾಯಕರಾಗಿ ನಟಿಸಲಿದ್ದಾರೆ ಎಂಬ ಬಲವಾದ ಸುದ್ದಿಯೊಂದು ಹರಿದಾಡುತ್ತಿದೆ. 2025ರಲ್ಲಿ ನಿರ್ಮಾಪಕ ನಾಗವಂಶಿ ಅವರು ನೆಲ್ಸನ್ ದಿಲೀಪ್‌ಕುಮಾರ್ ನಿರ್ದೇಶನದಲ್ಲಿ ಹೊಸ ಚಿತ್ರವೊಂದನ್ನು ನಿರ್ಮಿಸುವುದಾಗಿ…