Headlines

Garuda Purana: ಗರುಡ ಪುರಾಣದ ಪ್ರಕಾರ ಈ ಮನೆಗಳಲ್ಲಿ ಎಂದಿಗೂ ಊಟ ಮಾಡಬಾರದು! – Kannada News | The Spiritual Impact of Food: Garudapuranas Guide to Where and What to Eat for Blessings

ಗರುಡ ಪುರಾಣವು ಊಟದ ಕುರಿತು ಅತಿ ಮಹತ್ವದ ನಿಯಮಗಳನ್ನು ತಿಳಿಸಿದೆ, ಇದು ನಾವು ಎಲ್ಲಿ ಊಟ ಮಾಡಬೇಕು, ಎಲ್ಲಿ ಮಾಡಬಾರದು ಮತ್ತು ಅದರ ಫಲಗಳು ಏನೆಂಬುದನ್ನು ವಿವರಿಸುತ್ತದೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಸಾಮಾನ್ಯವಾಗಿ, ದೈವಾಧೀನರಾದವರ ಮನೆಯಲ್ಲಿ ಊಟ ಮಾಡಿದಾಗ ಅವರ ಆತ್ಮಕ್ಕೆ ಶಾಂತಿ ಸಿಗುತ್ತದೆ ಎಂಬ ನಂಬಿಕೆ ಇದೆ. ಹಾಗೆಯೇ, ದೇವಾಲಯಗಳಲ್ಲಿ ಮಾಡುವ ಊಟವನ್ನು ದೇವರ ಪ್ರಸಾದ ಎಂದು ಸ್ವೀಕರಿಸಿದಾಗ ಅದು ನಮ್ಮ ದೇಹಕ್ಕೆ ಸೇರಿ ಭಗವಂತನ ಕೃಪೆಯನ್ನು ತರುತ್ತದೆ ಎಂದು ಹೇಳಲಾಗುತ್ತದೆ. ಆದರೆ, ಗರುಡ ಪುರಾಣವು ಊಟದ ಹಿಂದಿರುವ ಆಳವಾದ ಆಧ್ಯಾತ್ಮಿಕ ಪರಿಣಾಮಗಳನ್ನು ವಿಶ್ಲೇಷಿಸುತ್ತದೆ.

ಊಟ ಮಾಡುವಾಗ ನಮ್ಮ ಪಂಚಭೂತಗಳು ಮತ್ತು ಸಪ್ತಚಕ್ರಗಳು ಆ ಆಹಾರವನ್ನು ಸ್ವೀಕರಿಸುತ್ತವೆ. ಆದ್ದರಿಂದ, ಆಹಾರದ ಮೂಲ ಮತ್ತು ಅದನ್ನು ನೀಡುವ ವ್ಯಕ್ತಿಯ ಮನಸ್ಥಿತಿ ಮಹತ್ವದ್ದಾಗುತ್ತದೆ. ನಾವು ಮನಸ್ಸು ಮತ್ತು ಬಾಯಿ ಒಪ್ಪಿದರೂ, ನಮ್ಮ ಆಂತರಿಕ ಶಕ್ತಿಗಳು ಆಹಾರವನ್ನು ಒಪ್ಪುವಂತಿರಬೇಕು. ಹಣ ಕೊಟ್ಟು ಹೋಟೆಲ್‌ನಲ್ಲಿ ಊಟ ಮಾಡುವುದು ಕೇವಲ ಒಂದು ವ್ಯವಹಾರವಾಗಿದ್ದು, ಯಾವುದೇ ವಿಶೇಷ ಫಲವನ್ನು ನೀಡುವುದಿಲ್ಲ ಎಂದು ಪುರಾಣ ಹೇಳುತ್ತದೆ.

ಊಟ ಮಾಡಬಾರದು?

ಗರುಡ ಪುರಾಣದ ಪ್ರಕಾರ, ಕೆಲವು ಜನರ ಮನೆಯಲ್ಲಿ ಊಟ ಮಾಡುವುದನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ. ದುಷ್ಟ ಜನರು, ಸಮಾಜಕ್ಕೆ ಒಗ್ಗದ ವ್ಯಕ್ತಿಗಳು, ಕೆಟ್ಟ ಮನಸ್ಸಿನವರು, ಕೋಪಿಗಳು, ವಿಪರೀತ ಬಡ್ಡಿ ವಸೂಲಿ ಮಾಡುವವರು, ದುಷ್ಕೃತ್ಯಗಳನ್ನು ಎಸಗುವವರು – ಇಂತಹವರ ಮನೆಯಲ್ಲಿ ಊಟ ಮಾಡಬಾರದು. ಅನ್ಯಾಯ ಮತ್ತು ಅಕ್ರಮ ಸಂಪಾದನೆಯಿಂದ ಶ್ರೀಮಂತರಾದವರ ಮನೆಯಲ್ಲಿ ಊಟ ಮಾಡಿದರೆ ಅದು ನಮ್ಮ ವಂಶಕ್ಕೆ ತೊಂದರೆ ತರಬಹುದು ಎಂದು ಶಾಸ್ತ್ರಗಳು ಎಚ್ಚರಿಸುತ್ತವೆ. ದುರಹಂಕಾರಿಗಳು, ಮುಂಗೋಪಿಗಳು, ಪಶುಪಕ್ಷಿಗಳನ್ನು ಅಥವಾ ವೃದ್ಧರನ್ನು ನಿರ್ಲಕ್ಷಿಸುವವರು, ಹೆಂಡತಿ, ಮಕ್ಕಳನ್ನು ಹಿಂಸಿಸುವವರು, ಮತ್ತು ಭೂಕಬಳಿಕೆದಾರರ ಮನೆಯಲ್ಲಿ ಸಹ ಊಟ ಮಾಡಬಾರದು. ಅಂತಹ ಜನರ ನಡತೆ ಸಮಾಜಕ್ಕೆ ತಿಳಿದಿರುತ್ತದೆ, ಮತ್ತು ಅವರ ಹಣವು ಪಾಪದ ಹಣವಾಗಿರುತ್ತದೆ.

ಇದನ್ನೂ ಓದಿ: ಫ್ಯಾಶನ್​​ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!

ಎಲ್ಲಿ ಊಟ ಮಾಡಬೇಕು?

ಇದಕ್ಕೆ ವ್ಯತಿರಿಕ್ತವಾಗಿ, ಕಷ್ಟಪಟ್ಟು ದುಡಿದು, ಪ್ರಾಮಾಣಿಕವಾಗಿ ಜೀವನ ಸಾಗಿಸುವ ಶ್ರಮಜೀವಿಗಳ ಮನೆಯಲ್ಲಿ ಒಂದು ತುತ್ತು ಅನ್ನ ಸೇವಿಸುವುದು ಅತಿ ಶುಭಕರ. ಅಂತಹವರ ಮನೆಯಲ್ಲಿ ಭಗವಂತನ ಆವಾಸವಿರುತ್ತದೆ, ಮತ್ತು ಅಲ್ಲಿ ಸೇವಿಸಿದ ಆಹಾರವು ನಮಗೆ ಒಳ್ಳೆಯದನ್ನು ತರುತ್ತದೆ ಎಂದು ನಂಬಲಾಗುತ್ತದೆ. ಭಗವಂತನು ಸಕಾಲಕ್ಕೆ ಅವರಿಗೆ ಬೇಕಾದ ಎಲ್ಲವನ್ನೂ ಒದಗಿಸುತ್ತಾನೆ.

ಅತಿ ಬುದ್ಧಿವಂತಿಕೆ, ದುರಹಂಕಾರ ಮತ್ತು ಬಡ್ಡಿ ವಸೂಲಿ ಮಾಡುವವರ ಮನೆಯಲ್ಲಿ ಆಹಾರ ಸೇವಿಸುವುದು ಶುಭವಲ್ಲ ಎಂದು ಶಾಸ್ತ್ರಗಳು ಹೇಳುತ್ತವೆ. ಊಟ ಮಾಡುವಾಗ ಅದನ್ನು ಭಗವಂತನಿಗೆ ಅರ್ಪಣೆ ಮಾಡಿ ಸೇವಿಸುವುದು ಉತ್ತಮ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *