Category Archives: Blog

Your blog category

ಪಶ್ಚಿಮ ಬಂಗಾಳ: ಬಿಜೆಪಿಯ ಹಿರಿಯ ಕಾರ್ಯಕರ್ತ ಮಖನಲಾಲ್ ಕಾಲಿಗೆರಗಿ ನಮಸ್ಕರಿಸಿದ ಪ್ರಧಾನಿ ಮೋದಿ – Kannada News | PM Modi Touches Feet of 98 Year Old Veteran BJP Worker Makhanlal Sarkar in West Bengal CM Swearing in; Video Goes Viral

ಕೋಲ್ಕತ್ತಾ, ಮೇ 9: ಪಶ್ಚಿಮ ಬಂಗಾಳದ ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಗ್ರೌಂಡ್‌ನಲ್ಲಿ ನಡೆದ ಬಿಜೆಪಿ ಸರ್ಕಾರದ ಐತಿಹಾಸಿಕ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತೋರಿದ ಗೌರವದ ನಡವಳಿಕೆ ಈಗ ಎಲ್ಲರ ಗಮನ ಸೆಳೆಯುತ್ತಿದೆ. ವೇದಿಕೆಯ ಮೇಲಿದ್ದ 98 ವರ್ಷದ ಹಿರಿಯ ಬಿಜೆಪಿ ಕಾರ್ಯಕರ್ತ ಮಖನ್ ಲಾಲ್ ಸರ್ಕಾರ್ ಅವರ ಕಾಲು ಮುಟ್ಟಿ ನಮಸ್ಕರಿಸಿದ ಪ್ರಧಾನಿ, ಅವರಿಗೆ ಶಾಲು ಹೊದಿಸಿ ಆತ್ಮೀಯವಾಗಿ ಸನ್ಮಾನಿಸಿದರು. ಮಖನ್ ಲಾಲ್ ಸರ್ಕಾರ್ ಅವರು ಪಶ್ಚಿಮ ಬಂಗಾಳದ ಬಿಜೆಪಿಯ ಅತ್ಯಂತ ಹಿರಿಯ ಮತ್ತು ನಿಷ್ಠಾವಂತ ಕಾರ್ಯಕರ್ತರಲ್ಲಿ ಒಬ್ಬರು. ಸ್ವಾತಂತ್ರ್ಯಾನಂತರದ ರಾಷ್ಟ್ರೀಯತಾವಾದಿ ಚಳವಳಿಯಲ್ಲಿ ಸಕ್ರಿಯರಾಗಿದ್ದ ಇವರು, 1952ರಲ್ಲಿ ಕಾಶ್ಮೀರದಲ್ಲಿ ತ್ರಿವರ್ಣ ಧ್ವಜ ಹಾರಿಸುವ ಹೋರಾಟದಲ್ಲಿ ಶ್ಯಾಮ ಪ್ರಸಾದ್ ಮುಖರ್ಜಿ ಅವರೊಂದಿಗೆ ಭಾಗವಹಿಸಿ ಜೈಲು ವಾಸ ಅನುಭವಿಸಿದ್ದರು.

1980ರಲ್ಲಿ ಬಿಜೆಪಿ ಸ್ಥಾಪನೆಯಾದ ನಂತರ ಉತ್ತರ ಬಂಗಾಳದ ವಿವಿಧ ಜಿಲ್ಲೆಗಳಲ್ಲಿ ಪಕ್ಷ ಸಂಘಟನೆಗೆ ಶ್ರಮಿಸಿ, ಕೇವಲ ಒಂದು ವರ್ಷದಲ್ಲಿ 10,000ಕ್ಕೂ ಹೆಚ್ಚು ಸದಸ್ಯರನ್ನು ಪಕ್ಷಕ್ಕೆ ಸೇರಿಸಿದ ಹೆಗ್ಗಳಿಕೆ ಇವರದ್ದಾಗಿದೆ. ಸತತ ಏಳು ವರ್ಷಗಳ ಕಾಲ ಜಿಲ್ಲಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರ ಸಮರ್ಪಣಾ ಮನೋಭಾವಕ್ಕೆ ಪ್ರಧಾನಿ ಮೋದಿ ಗೌರವ ಸಮರ್ಪಿಸಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Kedarnath Shivling: ಕೇದಾರನಾಥದಲ್ಲಿ ಶಿವಲಿಂಗ ತ್ರಿಕೋನ ಆಕಾರದಲ್ಲಿ ಯಾಕಿದೆ ಗೊತ್ತಾ? ಇಲ್ಲಿದೆ ಪೌರಾಣಿಕ ರಹಸ್ಯ! – Kannada News | Kedarnath: The Mystical Triangular Shivling and Its Mythological Secrets Revealed

ಕೇದಾರನಾಥದ ತ್ರಿಕೋನ ಶಿವಲಿಂಗದ ರಹಸ್ಯImage Credit source: Pinterest

ಶಿವನ ಹನ್ನೆರಡು ಜ್ಯೋತಿರ್ಲಿಂಗಗಳಲ್ಲಿ ಕೇದಾರನಾಥವು ಅತ್ಯಂತ ಪವಿತ್ರ ತಾಣ. ಸಮುದ್ರ ಮಟ್ಟದಿಂದ ಸುಮಾರು 11,000 ಅಡಿ ಎತ್ತರದಲ್ಲಿರುವ ಕೇದಾರನಾಥಕ್ಕೆ ಪ್ರತೀ ವರ್ಷ ಲಕ್ಷಾಂತರ ಭಕ್ತರು ಭೇಟಿ ನೀಡುತ್ತಾರೆ. ಮಂದಾಕಿನಿ ನದಿಯ ದಡದಲ್ಲಿ, ಹಿಮಚ್ಛಾದಿತ ಶಿಖರಗಳ ನಡುವೆ ನೆಲೆಸಿರುವ ಈ ದೇವಾಲಯವು ತನ್ನ ವಿಶಿಷ್ಟ ತ್ರಿಕೋನಾಕಾರದ ಶಿವಲಿಂಗದಿಂದ ಜಗತ್ಪ್ರಸಿದ್ಧವಾಗಿದೆ. ಇತರ ಜ್ಯೋತಿರ್ಲಿಂಗಗಳಿಗಿಂತ ಕೇದಾರನಾಥದಲ್ಲಿ ಶಿವನು ತ್ರಿಕೋನ ರೂಪದಲ್ಲಿ ಏಕೆ ನೆಲೆಸಿದ್ದಾನೆ ಎಂಬುದಕ್ಕೆ ಮಹಾಭಾರತದಲ್ಲಿ ಸ್ವಾರಸ್ಯಕರ ಕಥೆಯಿದೆ.

ತ್ರಿಕೋನಾಕಾರದ ಶಿವಲಿಂಗದ ಪೌರಾಣಿಕ ಹಿನ್ನೆಲೆ:

ಕುರುಕ್ಷೇತ್ರ ಯುದ್ಧದ ನಂತರ, ಪಾಂಡವರು ತಮ್ಮ ಪಾಪಪರಿಹಾರಕ್ಕಾಗಿ ಶಿವನ ದರ್ಶನ ಬಯಸಿದರು. ಆದರೆ ಪಾಂಡವರಿಂದ ತಪ್ಪಿಸಿಕೊಳ್ಳಲು ಶಿವನು ಹಿಮಾಲಯದಲ್ಲಿ ಗೂಳಿಯ (ವೃಷಭ) ರೂಪ ತಾಳಿದನು. ಭೀಮನು ಆ ಗೂಳಿಯನ್ನು ಹಿಡಿಯಲು ಪ್ರಯತ್ನಿಸಿದಾಗ, ಅದು ಭೂಮಿಯಲ್ಲಿ ವಿಲೀನವಾಯಿತು. ಈ ಸಂದರ್ಭದಲ್ಲಿ ಗೂಳಿಯ ಗೂನು (Hump) ಭಾಗ ಕೇದಾರನಾಥದಲ್ಲಿ ಉಳಿಯಿತು. ಭೂಮಿಯ ಮೇಲೆ ಉಳಿದ ಆ ಗೂನಿನ ಭಾಗವೇ ಇಂದು ನಾವು ಪೂಜಿಸುವ ತ್ರಿಕೋನ ಶಿವಲಿಂಗವಾಗಿದೆ ಎಂದು ಹೇಳಲಾಗುತ್ತದೆ.

ಆಧ್ಯಾತ್ಮಿಕ ದೃಷ್ಟಿಕೋನ:

ಆಧ್ಯಾತ್ಮಿಕ ದೃಷ್ಟಿಕೋನದಿಂದ ಈ ತ್ರಿಕೋನಾಕಾರದ ಶಿವಲಿಂಗವು ಕೇವಲ ಒಂದು ವಿಗ್ರಹವಲ್ಲ, ಬದಲಿಗೆ ಸೃಷ್ಟಿ, ಸ್ಥಿತಿ ಮತ್ತು ಲಯದ ತತ್ವಗಳನ್ನು ಪ್ರತಿನಿಧಿಸುವ ದೈವಿಕ ಶಕ್ತಿಯ ಸಂಕೇತವಾಗಿದೆ. ಇದನ್ನು ನಂಬಿಕೆ, ತಪಸ್ಸು ಮತ್ತು ಶಕ್ತಿಯ ಸಾಮರಸ್ಯವೆಂದು ವಿದ್ವಾಂಸರು ವಿವರಿಸುತ್ತಾರೆ. ಪಾಂಡವರ ಅಚಲ ಭಕ್ತಿ ಮತ್ತು ಶಿವನ ಕ್ಷಮಾ ಗುಣಕ್ಕೆ ಈ ರೂಪವು ಸಾಕ್ಷಿಯಾಗಿದೆ ಎಂಬುದು ಭಕ್ತರ ದೃಢ ನಂಬಿಕೆಯಾಗಿದೆ.

ಇದನ್ನೂ ಓದಿ: ನಿಮ್ಮ ಜನ್ಮ ದಿನಾಂಕದಲ್ಲೇ ಅಡಗಿದೆ ಮದುವೆಯ ರಹಸ್ಯ; ನಿಮಗಾಗುವುದು ಪ್ರೇಮ ವಿವಾಹವೋ ಅಥವಾ ಅರೇಂಜ್ ಮ್ಯಾರೇಜ್?

ಕೇದಾರನಾಥ ಮೋಕ್ಷದಾಯಕ ಕ್ಷೇತ್ರ:

ಧಾರ್ಮಿಕವಾಗಿ ಕೇದಾರನಾಥವು ಮೋಕ್ಷದಾಯಕ ಕ್ಷೇತ್ರವೆಂದು ಪ್ರಸಿದ್ಧವಾಗಿದೆ. ಇಲ್ಲಿನ ತ್ರಿಕೋನ ಜ್ಯೋತಿರ್ಲಿಂಗದ ದರ್ಶನದಿಂದ ಮನಸ್ಸಿಗೆ ಅಪಾರ ಶಾಂತಿ, ಧೈರ್ಯ ಮತ್ತು ದೈವಿಕ ಆಶೀರ್ವಾದಗಳು ಲಭಿಸುತ್ತವೆ ಎಂದು ಯಾತ್ರಿಕರು ನಂಬುತ್ತಾರೆ. ಪ್ರತಿ ವರ್ಷ ಲಕ್ಷಾಂತರ ಭಕ್ತರು ಕಠಿಣ ಹಾದಿಯನ್ನು ಕ್ರಮಿಸಿ, ಹಿಮದಿಂದ ಆವೃತವಾದ ಈ ಪುಣ್ಯಕ್ಷೇತ್ರಕ್ಕೆ ಭೇಟಿ ನೀಡಿ ಶಿವನ ಕೃಪೆಗೆ ಪಾತ್ರರಾಗುತ್ತಾರೆ.

2026 ರ ಕೇದಾರನಾಥ ಯಾತ್ರೆ:

2026 ರ ಕೇದಾರನಾಥ ಯಾತ್ರೆಯು ಈಗಾಗಲೇ ಆರಂಭವಾಗಿದ್ದು, ದೇಶಾದ್ಯಂತ ಭಕ್ತ ಸಾಗರವು ಹಿಮಾಲಯದತ್ತ ಹರಿಯುತ್ತಿದೆ. ಪಂಚ ಕೇದಾರ ಕ್ಷೇತ್ರಗಳಲ್ಲಿ ಅತ್ಯಂತ ಪ್ರಮುಖವಾದ ಕೇದಾರನಾಥವು, ತುಂಗನಾಥ, ರುದ್ರನಾಥ, ಮಧ್ಯಮಹೇಶ್ವರ ಮತ್ತು ಕಲ್ಪೇಶ್ವರ ದೇವಾಲಯಗಳೊಂದಿಗೆ ನಿಕಟ ಸಂಬಂಧ ಹೊಂದಿದೆ. ಒಟ್ಟಾರೆಯಾಗಿ, ಕೇದಾರನಾಥದ ಈ ವಿಶಿಷ್ಟ ಶಿವಲಿಂಗವು ಭಕ್ತಿ, ಕ್ಷಮೆ ಮತ್ತು ದೈವಿಕ ಶಕ್ತಿಯ ಶಾಶ್ವತ ಸಂಕೇತವಾಗಿ ಇಂದಿಗೂ ಭಕ್ತರನ್ನು ಕೈಬೀಸಿ ಕರೆಯುತ್ತಿದೆ.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಉಪೇಂದ್ರ ಚುನಾವಣೆಯಲ್ಲಿ ಏಕೆ ಸ್ಪರ್ಧಿಸಲ್ಲ? ಉತ್ತರಿಸಿದ ನಟ – Kannada News | Why Upendra Not Contesting In Election Actor Explain

ನಟ ಉಪೇಂದ್ರ ಅವರು ಪ್ರಜಾಕೀಯ ಸ್ಥಾಪಿಸಿದ್ದಾರೆ. ಆದರೆ, ಅವರು ಚುನಾವಣೆಗೆ ನಿಲ್ಲಲ್ಲ. ಈ ಬಗ್ಗೆ ಮಾತನಾಡಿದ್ದಾರೆ. ‘ನಾನು ಫಾಲೋವರ್​ ಅಲ್ಲ. ಯಾರೋ ಆ್ಯಕ್ಷನ್ ಸಿನಿಮಾ ಮಾಡಿ ಹಿಟ್ ಆದರೆ, ನಾನು ಆ್ಯಕ್ಷನ್ ಸಿನಿಮಾ ಮಾಡಲ್ಲ. ನಾನು ಮೊದಲಿನಿಂದ ಅದನ್ನೇ ಫಾಲೋ ಮಾಡುತ್ತಾ ಬರುತ್ತಿದ್ದೇನೆ. ನಾನು ಆರ್ಟಿಸ್ಟ್ ಎಂದು ಮತ ಹಾಕಬೇಡಿ, ಸ್ಪರ್ಧಿ ಎಂದು ಪರಿಗಣಿಸಿ ವೋಟ್ ಹಾಕಿ. ನಾನು ಚುನಾವಣೆಗೆ ನಿಲ್ಲಲ್ಲ ಎಂದಿದ್ದು ಇದೇ ಕಾರಣಕ್ಕೆ.ನಾನು ನಿಲ್ಲಲ್ಲ, ಬೇರೆಯವರು ನಿಲ್ಲುತ್ತಾರೆ ಎಂದಾಗ ವಿಚಾರಧಾರೆ ನೋಡಿ ವೋಟ್ ಮಾಡಿ’ ಎಂದಿದ್ದಾರೆ ಅವರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

West Bengal CM oath ceremony: ಬಂಗಾಳದಲ್ಲಿ ಬಿಜೆಪಿ ಯುಗ ಆರಂಭ; ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕಾರ – Kannada News | Suvendu Adhikari takes oath as the first BJP Chief Minister of West Bengal with PM Modi Presence

ಕೊಲ್ಕತ್ತಾ, ಮೇ 9: ಪಶ್ಚಿಮ ಬಂಗಾಳದ (West Bengal) ಕೊಲ್ಕತ್ತಾ ಇಂದು ಕೇಸರಿಮಯವಾಗಿದೆ. ರಾಜ್ಯದಲ್ಲಿ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗಿದೆ. ಹೀಗಾಗಿ, ಪ್ರಧಾನಿ ನರೇಂದ್ರ ಮೋದಿಯಿಂದ (PM Modi in Kolkata) ಹಿಡಿದು ವಿವಿಧ ರಾಜ್ಯಗಳ ಬಿಜೆಪಿ ಮುಖ್ಯಮಂತ್ರಿಗಳವರೆಗೆ ಅನೇಕ ನಾಯಕರು ಕೊಲ್ಕತ್ತಾಕ್ಕೆ ಆಗಮಿಸಿದ್ದಾರೆ. ಇದೀಗ ಬಿಜೆಪಿ ಹಿರಿಯ ನಾಯಕರ ಹಾಗೂ ಬೆಂಬಲಿಗರ ಸಮ್ಮುಖದಲ್ಲಿ ಸುವೇಂದು ಅಧಿಕಾರಿ (Suvendu Adhikari) ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದಾರೆ.

ಈ ಅದ್ದೂರಿ ಸಮಾರಂಭವು ಕೋಲ್ಕತ್ತಾದ ಬ್ರಿಗೇಡ್ ಪರೇಡ್ ಮೈದಾನದಲ್ಲಿ ನಡೆಯುತ್ತಿದೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು NDAಯ ಹಲವಾರು ಹಿರಿಯ ನಾಯಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಾರೆ. ನೊಬೆಲ್ ಪ್ರಶಸ್ತಿ ವಿಜೇತ ರವೀಂದ್ರನಾಥ ಟ್ಯಾಗೋರ್ ಅವರ ಜನ್ಮ ದಿನಾಚರಣೆಯಾದ ಇಂದೇ ನೂತನ ಮುಖ್ಯಮಂತ್ರಿಯ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆದಿದೆ.

ಇದನ್ನೂ ಓದಿ: Live: ಬಂಗಾಳದಲ್ಲಿ ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೆ; ಪ್ರಮಾಣವಚನ ಸ್ವೀಕಾರ ನೇರ ಪ್ರಸಾರ

ಕೇಂದ್ರ ಗೃಹ ಸಚಿವ ಅಮಿತ್ ಶಾ ಶುಕ್ರವಾರ ಸುವೇಂದು ಅಧಿಕಾರಿ ಅವರ ಹೆಸರನ್ನು ಪಕ್ಷದ ಕಾರ್ಯಕರ್ತರು ಮತ್ತು ಶಾಸಕರ ಮುಂದೆ ಘೋಷಿಸಿದರು. ಬಂಗಾಳದಲ್ಲಿ ಹೊಸ ಸರ್ಕಾರವನ್ನು ಮುನ್ನಡೆಸಲು ಬಿಜೆಪಿ ಶಾಸಕಾಂಗ ಪಕ್ಷವು ಸುವೇಂದು ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಿದೆ ಎಂದು ಹೇಳಿದರು.

ಇದನ್ನೂ ಓದಿ: ಬಂಗಾಳದಲ್ಲಿ ಹೊಸ ಇತಿಹಾಸ: ಪಶ್ಚಿಮ ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಇಂದು ಪ್ರಮಾಣ ವಚನ

ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಕೂಡಲೇ ಅಧಿಕಾರಿ ಅವರು ಲೋಕ ಭವನದಲ್ಲಿ ರಾಜ್ಯಪಾಲ ಆರ್.ಎನ್ ರವಿ ಅವರನ್ನು ಭೇಟಿ ಮಾಡಿ ಸರ್ಕಾರ ರಚಿಸಲು ಔಪಚಾರಿಕವಾಗಿ ಹಕ್ಕು ಮಂಡಿಸಿದರು. 2026ರ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ, ಬಿಜೆಪಿ 207 ಸ್ಥಾನಗಳನ್ನು ಗಳಿಸುವ ಮೂಲಕ ಸ್ಪಷ್ಟ ಬಹುಮತ ಗಳಿಸಿತು. ತೃಣಮೂಲ ಕಾಂಗ್ರೆಸ್ (ಟಿಎಂಸಿ) 80 ಸ್ಥಾನಗಳನ್ನು ಗೆದ್ದ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಟಿಎಂಸಿಯ 15 ವರ್ಷಗಳ ಆಡಳಿತ ಅಂತ್ಯವಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 11:36 am, Sat, 9 May 26

Source link

ಟೆಸ್ಟ್ ಕ್ರಿಕೆಟ್​ನಲ್ಲಿ ಮುಶ್ಫಿಕುರ್ ರಹೀಮ್ ಚಾರಿತ್ರಿಕ ಸಾಧನೆ! – Kannada News | Mushfiqur Rahim Creates History in Test Cricket

ಟೆಸ್ಟ್ ಕ್ರಿಕೆಟ್ ಅಂದರೆ ಅದು ಕೇವಲ ಆಟವಲ್ಲ, ಅದೊಂದು ತಾಳ್ಮೆಯ ಪರೀಕ್ಷೆ. ಈ ಕಠಿಣ ಮಾದರಿಯಲ್ಲಿ ದಶಕಗಳ ಕಾಲ ತನ್ನ ಫಾರ್ಮ್ ಮತ್ತು ಫಿಟ್ನೆಸ್ ಕಾಯ್ದುಕೊಳ್ಳುವುದು ಯಾವುದೇ ಆಟಗಾರನಿಗಾದರೂ ಸವಾಲಿನ ಕೆಲಸ. ಇಂತಹ ಸವಾಲನ್ನು ಮೆಟ್ಟಿ ನಿಂತು, ಸತತ ಎರಡು ದಶಕಗಳ ಕಾಲ ಕ್ರಿಕೆಟ್ ಮೈದಾನದಲ್ಲಿ ಅಧಿಪತ್ಯ ಸಾಧಿಸಿರುವ ಬಾಂಗ್ಲಾದೇಶದ ಅನುಭವಿ ಬ್ಯಾಟರ್ ಮುಶ್ಫಿಕರ್ ರಹೀಮ್ (Mushfiqur Rahim) ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿಶಿಷ್ಟ ಮೈಲಿಗಲ್ಲೊಂದನ್ನು ಸ್ಥಾಪಿಸಿದ್ದಾರೆ. (PC: Google)

Source link

ಬಿಟ್‌ಕಾಯಿನ್ ಹಗರಣ ಹಿನ್ನೆಲೆ ಶ್ರೀಕಿ ಅರೆಸ್ಟ್! ಮಹಮ್ಮದ್ ನಲಪಾಡ್​ಗೂ ಎದುರಾಗುತ್ತಾ ಸಂಕಷ್ಟ? – Kannada News | Bitcoin Scam: Mastermind Sriki Arrested by ED; Fresh Trouble for Mohammed Nalapad

ಬಿಟ್‌ಕಾಯಿನ್ ಹಗರಣ ಹಿನ್ನೆಲೆ ಶ್ರೀಕಿ ಅರೆಸ್ಟ್! ಮಹಮ್ಮದ್ ನಲಪಾಡ್​ಗೂ ಎದುರಾಗುತ್ತಾ ಸಂಕಷ್ಟ?

ಬೆಂಗಳೂರು, ಮೇ 09: ರಾಜ್ಯದಲ್ಲಿ ಭಾರೀ ಸಂಚಲನ ಮೂಡಿಸಿದ್ದ ಬಿಟ್‌ಕಾಯಿನ್ ಹಗರಣದ ತನಿಖೆ ಈಗ ನಿರ್ಣಾಯಕ ಹಂತಕ್ಕೆ ತಲುಪಿದೆ. ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ಹಗರಣದ ಕಿಂಗ್‌ಪಿನ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (Shreeki) ಸೇರಿದಂತೆ ಮೂವರನ್ನು ಬಂಧಿಸಿದ್ದು, ಇದರ ಬೆನ್ನಲ್ಲೇ ಶಾಂತಿನಗರ ಶಾಸಕ ಎನ್.ಎ. ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್‌ಗೆ ಸಂಕಷ್ಟ ಎದುರಾಗುತ್ತಾ ಎಂಬ ಪ್ರಶ್ನೆಯೆದ್ದಿದೆ.

ಮುಖ್ಯಾಂಶಗಳು

  • ಬಿಟ್‌ಕಾಯಿನ್ ಹಗರಣದ ಕಿಂಗ್‌ಪಿನ್ ಶ್ರೀಕಿ ಸೇರಿ ಮೂವರನ್ನು ಬಂಧಿಸಿದ ಇಡಿ ಅಧಿಕಾರಿಗಳು
  • ಶ್ರೀಕಿ ಬಂಧನದಿಂದ ಮೊಹಮ್ಮದ್ ನಲಪಾಡ್‌ಗೆ ಮತ್ತೆ ಶುರುವಾದ ಬಿಟ್‌ಕಾಯಿನ್ ಸಂಕಷ್ಟದ ಭೀತಿ
  • ಹಳೆ ನಂಟಿನ ಕುರಿತು ದಾಖಲೆ ಕಲೆಹಾಕಿ ನಲಪಾಡ್ ವಿಚಾರಣೆಗೆ ಇಡಿ ಸಿದ್ಧತೆ

ಶ್ರೀಕಿ ಬಂಧನ ಮತ್ತು ನಲಪಾಡ್ ಲಿಂಕ್

ಬಂಧಿತ ಶ್ರೀಕಿ ಜೊತೆ ಮೊಹಮ್ಮದ್ ನಲಪಾಡ್ ನಿಕಟ ಸಂಪರ್ಕ ಹೊಂದಿದ್ದರು ಎಂಬ ಗಂಭೀರ ಆರೋಪ ಕೇಳಿಬಂದಿದೆ. ಈ ಹಿಂದೆ ರಾಜ್ಯ ಸರ್ಕಾರದ ಇ-ಪ್ರೊಕ್ಯೂರಮೆಂಟ್ ವೆಬ್‌ಸೈಟ್ ಹ್ಯಾಕ್ ಮಾಡಿ, ಸರ್ಕಾರದ ಹಣವನ್ನು ವಿವಿಧ ಅಕ್ರಮ ಖಾತೆಗಳಿಗೆ ವರ್ಗಾಯಿಸಿದ ಆರೋಪ ಶ್ರೀಕಿ ತಂಡದ ಮೇಲಿದೆ. ಈ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿ ಎಸ್‌ಐಟಿ (SIT) ತನಿಖೆಗೆ ವಹಿಸಿತ್ತು. ಎಸ್‌ಐಟಿ ತನಿಖೆಯ ವೇಳೆ ಹಲವು ಡಿಜಿಟಲ್ ವ್ಯಾಲೆಟ್‌ಗಳ ಕಳ್ಳತನ ಬೆಳಕಿಗೆ ಬಂದಿದ್ದಲ್ಲದೆ, ನಲಪಾಡ್ಗೂ ಈ ಜಾಲದ ಜೊತೆ ಲಿಂಕ್ ಇರುವುದು ಕಂಡುಬಂದಿತ್ತು. ಇದೇ ಕಾರಣಕ್ಕೆ ನಲಪಾಡ್ ಈಗಾಗಲೇ ಎರಡು ಬಾರಿ ಎಸ್‌ಐಟಿ ವಿಚಾರಣೆಗೂ ಹಾಜರಾಗಿದ್ದರು. ಈಗ ಇಡಿ ಅಧಿಕಾರಿಗಳು ಶ್ರೀಕಿಯನ್ನು ಬಂಧಿಸಿರುವುದರಿಂದ, ಅಕ್ರಮ ಹಣ ವರ್ಗಾವಣೆಯಲ್ಲಿ ನಲಪಾಡ್ ಪಾತ್ರದ ಕುರಿತು ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ.

ಹಳೆಯ ಹಗರಣವೇನು?

ಈ ಹಿಂದೆ ಏಪ್ರಿಲ್ 2024ರಲ್ಲಿ ಶಾಸಕ ಹ್ಯಾರಿಸ್ ಮತ್ತು ನಲಪಾಡ್ ನಿವಾಸಗಳ ಮೇಲೆ ಇಡಿ 15 ಗಂಟೆಗಳ ಕಾಲ ಸುದೀರ್ಘ ದಾಳಿ ನಡೆಸಿತ್ತು. ಶ್ರೀಕಿ ಹ್ಯಾಕ್ ಮಾಡಿದ ಬಿಟ್‌ಕಾಯಿನ್‌ಗಳನ್ನು ಕ್ರಿಪ್ಟೋ ಮೂಲಕ ಹಣವಾಗಿ ಪರಿವರ್ತಿಸಿ, ಲೇಯರಿಂಗ್ (Layering) ಪದ್ಧತಿಯಲ್ಲಿ ವರ್ಗಾಯಿಸಿರುವುದು ಅಂದು ಪತ್ತೆಯಾಗಿತ್ತು. ಶ್ರೀಕಿ, ನಲಪಾಡ್ ಸಹೋದರ ಉಮರ್ ನಲಪಾಡ್‌ನ ಸಹಪಾಠಿಯಾಗಿದ್ದರಿಂದ ಈ ಸ್ನೇಹ ಆರಂಭವಾಗಿತ್ತು. ಶ್ರೀಕಿ ಮುಂಬೈ ಮೂಲದ ವ್ಯಕ್ತಿಯೊಬ್ಬನ ಮೂಲಕ ನಲಪಾಡ್ ಖಾತೆಗೆ 10 ಲಕ್ಷ ರೂ. ವರ್ಗಾಯಿಸಿದ ಆರೋಪ ಅಂದೇ ಕೇಳಿಬಂದಿತ್ತು. ಒಟ್ಟಾರೆ 4.5 ಕೋಟಿ ರೂ. ಅಕ್ರಮ ವಹಿವಾಟಿನ ಶಂಕೆ ವ್ಯಕ್ತವಾಗಿತ್ತು.

ಇದನ್ನೂ ಓದಿ ಹ್ಯಾಕರ್ ಶ್ರೀಕಿಯ ಐಷಾರಾಮಿ ಜೀವನ ನಲಪಾಡ್​ಗೆ ಕುತ್ತು ತಂದಿದ್ದು ಹೇಗೆ ಗೊತ್ತಾ? ಇಲ್ಲಿದೆ ನೋಡಿ

ಹಿಂದಿನ ದಾಳಿ ಮತ್ತು ಎಸ್‌ಐಟಿ ನೀಡಿದ್ದ ಮಾಹಿತಿಗಳ ಆಧಾರದ ಮೇಲೆ ಇಡಿ ಈಗ ಶ್ರೀಕಿಯನ್ನು ವಶಕ್ಕೆ ಪಡೆದಿದೆ. ಶ್ರೀಕಿ ನೀಡುವ ಹೇಳಿಕೆಗಳು ನಲಪಾಡ್ ಪಾಲಿಗೆ ಕಂಟಕವಾಗುವ ಸಾಧ್ಯತೆಯಿದೆ. ರಾಜ್ಯ ಸರ್ಕಾರದ ಹಣ ಮತ್ತು ಡಿಜಿಟಲ್ ಆಸ್ತಿಗಳ ಲೂಟಿಯಲ್ಲಿ ಯಾರಿಗೆಲ್ಲಾ ಪಾಲು ಸಂದಿದೆ ಎಂಬುದು ಈಗ ಇಡಿ ತನಿಖೆಯಿಂದ ಹೊರಬರಬೇಕಿದೆ. ಸದ್ಯ ಶ್ರೀಕಿ ಬಂಧನದಿಂದ ರಾಜಕೀಯ ವಲಯದಲ್ಲೂ ನಡುಕ ಶುರುವಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಂಗಾರ ಪ್ರಿಯರಿಗೆ ಶಾಕ್: ಒಂದೇ ವಾರದಲ್ಲಿ ಚಿನ್ನದ ಬೆಲೆ 1500 ರೂ. ಏರಿಕೆ, ಬೆಳ್ಳಿ ದರದಲ್ಲಿ 11 ಸಾವಿರ ರೂ. ಜಂಪ್ – Kannada News | Gold Silver Price Weekly Update: Gold Rises by Rs 1500, Silver Jumps Over Rs 11000 in a Week

ಬೆಂಗಳೂರು, ಮೇ 9: ಈ ವಾರ ಚಿನ್ನ (Gold Price) ಮತ್ತು ಬೆಳ್ಳಿಯ ಬೆಲೆಗಳಲ್ಲಿ (Silver Price) ಭಾರಿ ಏರಿಕೆ ಕಂಡುಬಂದಿದೆ. ಕೇವಲ ಐದು ವರ್ಕಿಂಗ್ ಡೇಸ್​​ನಲ್ಲಿ ಚಿನ್ನದ ಬೆಲೆ ಸುಮಾರು 1,500 ರೂಪಾಯಿಗಳಷ್ಟು ತುಟ್ಟಿಯಾಗಿದ್ದರೆ, ಬೆಳ್ಳಿ ಬೆಲೆಯಲ್ಲಿ 11 ಸಾವಿರ ರೂಪಾಯಿಗೂ ಹೆಚ್ಚು ಏರಿಕೆ ದಾಖಲಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿನ ಸುಧಾರಣೆ, ಡಾಲರ್ ಮೌಲ್ಯದ ಏರಿಳಿತ ಮತ್ತು ಹೂಡಿಕೆದಾರರ ಹೆಚ್ಚುತ್ತಿರುವ ಬೇಡಿಕೆಯಿಂದಾಗಿ ಈ ಅಮೂಲ್ಯ ಲೋಹಗಳ ಬೆಲೆ ಗಗನಕ್ಕೇರುತ್ತಿದೆ.

ಮುಖ್ಯಾಂಶಗಳು

  • ಕೇವಲ ಒಂದು ವಾರದಲ್ಲಿ 10 ಗ್ರಾಂ ಚಿನ್ನದ ಬೆಲೆ 1,540 ರೂಪಾಯಿಗಳಷ್ಟು ಏರಿಕೆ.
  • ಬೆಳ್ಳಿ ಬೆಲೆಯಲ್ಲಿ ಒಂದೇ ವಾರದಲ್ಲಿ ಬರೋಬ್ಬರಿ 11,110 ರೂಪಾಯಿಗಳ ಬೃಹತ್ ಏರಿಕೆ.
  • ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಭದ್ರತೆ ಮತ್ತು ಹೂಡಿಕೆದಾರರ ಆಸಕ್ತಿಯೇ ಬೆಲೆ ಏರಿಕೆಗೆ ಮುಖ್ಯ ಕಾರಣ.

ಬಂಗಾರದ ದರದಲ್ಲಿ ಸತತ ಏರಿಕೆ

ಮೇ 3 ರಂದು 10 ಗ್ರಾಂ (24 ಕ್ಯಾರೆಟ್) ಚಿನ್ನದ ಬೆಲೆ 1,51,580 ರೂಪಾಯಿ ಇತ್ತು. ಆದರೆ ಮೇ 9 ರ ವೇಳೆಗೆ ಇದು 1,53,120 ರೂಪಾಯಿಗೆ ತಲುಪಿದೆ. ಹೂಡಿಕೆದಾರರ ಹೆಚ್ಚುತ್ತಿರುವ ಬೇಡಿಕೆಯು ಚಿನ್ನವನ್ನು ಮತ್ತೆ ಆಕರ್ಷಣೆಯ ಕೇಂದ್ರವನ್ನಾಗಿ ಮಾಡಿದೆ.

ಬೆಳ್ಳಿ ಬೆಲೆಯಲ್ಲೂ ಭಾರೀ ಜಿಗಿತ

ಬಂಗಾರದ ಹಾದಿಯಲ್ಲೇ ಸಾಗಿರುವ ಬೆಳ್ಳಿಯ ದರವು ಈ ವಾರ ಅಚ್ಚರಿಯ ರೀತಿಯಲ್ಲಿ ಏರಿಕೆಯಾಗಿದೆ. ಮೇ 3 ರಂದು ಪ್ರತಿ ಕಿಲೋ ಬೆಳ್ಳಿ ಬೆಲೆ 2,51,220 ರೂಪಾಯಿ ಇತ್ತು. ಮೇ 9 ರ ವೇಳೆಗೆ ಇದು 2,62,330 ರೂಪಾಯಿಗೆ ಏರಿಕೆಯಾಗಿದೆ. ಕೈಗಾರಿಕಾ ವಲಯದಲ್ಲಿನ ಬೇಡಿಕೆ ಮತ್ತು ಹೂಡಿಕೆದಾರರ ಆಸಕ್ತಿಯಿಂದಾಗಿ ಬೆಳ್ಳಿಯ ಬೆಲೆ ಈ ಮಟ್ಟಕ್ಕೆ ಏರಿದೆ.

ನಿಮ್ಮ ನಗರದಲ್ಲಿ ಚಿನ್ನದ ದರ ಎಷ್ಟು? (ಇಂದು 24-22-18 ಕ್ಯಾರೆಟ್ ಚಿನ್ನದ ದರ ಪ್ರತಿ ಗ್ರಾಂಗೆ)

ನಗರ 24 ಕೆ 22ಕೆ 18 ಕೆ
ಚೆನ್ನೈ ₹15,437 ₹14,150 ₹11,810
ಮುಂಬೈ ₹15,267 ₹13,994 ₹11,450
ದೆಹಲಿ ₹15,287 ₹14,009 ₹11,465
ಕೋಲ್ಕತ್ತಾ ₹15,267 ₹13,994 ₹11,450
ಬೆಂಗಳೂರು ₹15,267 ₹13,994 ₹11,450
ಹೈದರಾಬಾದ್ ₹15,267 ₹13,994 ₹11,450
ಕೇರಳ ₹15,267 ₹13,994 ₹11,450
ಪುಣೆ ₹15,267 ₹13,994 ₹11,450
ವಡೋದರಾ ₹15,277 ₹13,999 ₹11,460
ಅಹಮದಾಬಾದ್ ₹15,277 ₹13,999 ₹11,460

ನಿಮ್ಮ ನಗರದಲ್ಲಿ ಬೆಳ್ಳಿ ಬೆಲೆ ಎಷ್ಟಿದೆ? (ಪ್ರತಿ ಕೆಜಿಗೆ ಬೆಳ್ಳಿ ಬೆಲೆ)

ನಗರ 10 ಗ್ರಾಂ 100 ಗ್ರಾಂ 1 ಕೆಜಿ
ಚೆನ್ನೈ ₹2,800 ₹28,000 ₹2,80,000
ಮುಂಬೈ ₹2,751 ₹27,510 ₹2,75,100
ದೆಹಲಿ ₹2,751 ₹27,510 ₹2,75,100
ಕೋಲ್ಕತ್ತಾ ₹2,751 ₹27,510 ₹2,75,100
ಬೆಂಗಳೂರು ₹2,751 ₹27,510 ₹2,75,100
ಹೈದರಾಬಾದ್ ₹2,800 ₹28,000 ₹2,80,000
ಕೇರಳ ₹2,800 ₹28,000 ₹2,80,000
ಪುಣೆ ₹2,751 ₹27,510 ₹2,75,100
ವಡೋದರಾ ₹2,751 ₹27,510 ₹2,75,100
ಅಹಮದಾಬಾದ್ ₹2,751 ₹27,510 ₹2,75,100

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಬಿಜೆಪಿ ಸರ್ಕಾರದ ಪ್ರಮಾಣವಚನಕ್ಕೆ ಕೊಲ್ಕತ್ತಾಕ್ಕೆ ಆಗಮಿಸಿದ ಪ್ರಧಾನಿ ಮೋದಿಗೆ ಅದ್ದೂರಿ ಸ್ವಾಗತ – Kannada News | PM Modi receives grand welcome at Brigade Parade grounds in Kolkata before swearing in ceremony

ಕೋಲ್ಕತ್ತಾ, ಮೇ 9: ಪಶ್ಚಿಮ ಬಂಗಾಳದಲ್ಲಿ (West Bengal) ಬಿಜೆಪಿ ಸರ್ಕಾರದ ಪ್ರಮಾಣವಚನ ಸ್ವೀಕಾರ ಸಮಾರಂಭ ನಡೆಯುತ್ತಿರುವ ಕೊಲ್ಕತ್ತಾದ ಐತಿಹಾಸಿಕ ಬ್ರಿಗೇಡ್ ಪೆರೇಡ್‌ಗೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದಾರೆ. ಇಂದು ಬಿಜೆಪಿ ಸರ್ಕಾರದ ಮುಖ್ಯಮಂತ್ರಿಯಾಗಿ ಸುವೇಂದು ಅಧಿಕಾರಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ಕೂಡ ಪಾಲ್ಗೊಂಡಿದ್ದಾರೆ. ಪಶ್ಚಿಮ ಬಂಗಾಳಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಕೊಲ್ಕತ್ತಾದ ಬ್ರಿಗೇಡ್ ಪೆರೇಡ್ ಮೈದಾನದಲ್ಲಿ ಸಮಾರಂಭ ನಡೆಯುತ್ತಿದ್ದು, ಅಲ್ಲಿಗೆ ಮೋದಿ ಆಗಮಿಸುತ್ತಿದ್ದಂತೆ “ಮೋದಿ, ಮೋದಿ” ಘೋಷಣೆಗಳು ಪ್ರತಿಧ್ವನಿಸಿದವು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Live: ಬಂಗಾಳದಲ್ಲಿ ಬಿಜೆಪಿ ಸರ್ಕಾರದ ಅಸ್ತಿತ್ವಕ್ಕೆ; ಪ್ರಮಾಣವಚನ ಸ್ವೀಕಾರ ನೇರ ಪ್ರಸಾರ – Kannada News | West Bengal CM Swearing in Ceremony LIVE: Suvendu Adhikari Takes Oath as First BJP CM; PM Modi, Amit Shah Attend

ಕೋಲ್ಕತ್ತಾ, ಮೇ 9: ವಿಧಾನಸಭೆ ಚುನಾವಣೆಯಲ್ಲಿ ಭರ್ಜರಿ ಬಹುಮತ ಗಳಿಸುವ ಮೂಲಕ ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸರ್ಕಾರ ರಚನೆಯಾಗುತ್ತಿದೆ. ಸುವೇಂದು ಅಧಿಕಾರಿ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಗಣ್ಯರು ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ಉಪಸ್ಥಿತರಿದ್ದಾರೆ. ಪ್ರಮಾಣವಚನ ಸ್ವೀಕಾರ ಸಮಾರಂಭದಲ್ಲಿ ನೇರ ಪ್ರಸಾರ ಇಲ್ಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಪ್ಲೇ ಆಫ್​ನಷ್ಟೇ ರೋಚಕತೆ ಸೃಷ್ಟಿಸಿದೆ ಆರೆಂಜ್-ಪರ್ಪಲ್ ಕ್ಯಾಪ್ ಸಮರ: ಇಲ್ಲಿದೆ ನೋಡಿ ಪಟ್ಟಿ – Kannada News | IPL 2026 The Orange Purple Cap battle has created as much excitement as the playoffs

ಬೆಂಗಳೂರು (ಮೇ. 09): ಇಂಡಿಯನ್ ಪ್ರೀಮಿಯರ್ ಲೀಗ್ 2026 (IPL 2026) ರೋಚಕ ಘಟ್ಟಕ್ಕೆ ತಲುಪುತ್ತಿದೆ. ಪ್ರತಿಯೊಂದು ತಂಡವು ಪ್ರಸ್ತುತ ಪ್ಲೇಆಫ್‌ನಲ್ಲಿ ಸ್ಥಾನ ಪಡೆಯುವತ್ತ ಗಮನಹರಿಸಿದೆ. ಇದರ ಜೊತೆಗೆ ಪ್ಲೇಆಫ್‌ಗಳನ್ನು ಮೀರಿ, ಹೆಚ್ಚಿನ ರನ್‌ಗಳು (ಆರೆಂಜ್ ಕ್ಯಾಪ್) ಮತ್ತು ಹೆಚ್ಚಿನ ವಿಕೆಟ್‌ಗಳಿಗಾಗಿ (ಪರ್ಪಲ್ ಕ್ಯಾಪ್) ಓಟವು ಅಷ್ಟೇ ರೋಚಕತೆ ಸೃಷ್ಟಿಸಿದೆ. ಈ ಓಟದಲ್ಲಿ, ಅನುಭವಿ ಆಟಗಾರರು ಮತ್ತು ಯುವ ಮುಖಗಳು ಇಬ್ಬರೂ ತಮ್ಮ ಸಾಮರ್ಥ್ಯವನ್ನು ತೋರಿಸಿದ್ದಾರೆ. ಆದಾಗ್ಯೂ, ದೆಹಲಿ ಕ್ಯಾಪಿಟಲ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವಿನ ಪಂದ್ಯದ ನಂತರ ಅಂದುಕೊಂಡಿದ್ದ ಕೆಲ ಲೆಕ್ಕಾಚಾರ ತಲೆಕೆಳಗಾಗಿದೆ.

ನಂಬರ್ 1 ಆಗುವ ಅವಕಾಶವನ್ನು ಕಳೆದುಕೊಂಡ ರಾಹುಲ್

ಆರೆಂಜ್ ಕ್ಯಾಪ್ ಬಗ್ಗೆ ಹೇಳುವುದಾದರೆ, ಸನ್‌ರೈಸರ್ಸ್ ಹೈದರಾಬಾದ್ ಪ್ರಸ್ತುತ ಶ್ರೇಯಾಂಕದಲ್ಲಿ ಪ್ರಾಬಲ್ಯ ಹೊಂದಿದೆ. ಅಗ್ರ ಐದು ಬ್ಯಾಟ್ಸ್‌ಮನ್‌ಗಳಲ್ಲಿ ಮೂವರು ಈ ತಂಡಕ್ಕೆ ಸೇರಿದವರು. ಡೆಲ್ಲಿ ಕ್ಯಾಪಿಟಲ್ಸ್‌ನ ಸ್ಟಾರ್ ಓಪನರ್ ಕೆಎಲ್ ರಾಹುಲ್ ನಂಬರ್ ಒನ್ ಆಗುವ ಪ್ರಮುಖ ಅವಕಾಶವನ್ನು ಕಳೆದುಕೊಂಡರು. ಕೋಲ್ಕತ್ತಾ ವಿರುದ್ಧದ ಪಂದ್ಯದಲ್ಲಿ ಅವರು ಕೇವಲ 23 ರನ್ ಗಳಿಸುವ ಮೂಲಕ ಅಗ್ರ ಸ್ಥಾನವನ್ನು ತಲುಪುವ ಅವಕಾಶವನ್ನು ಕಳೆದುಕೊಂಡರು. ರಾಹುಲ್ 468 ರನ್‌ಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.

ಸನ್‌ರೈಸರ್ಸ್ ಹೈದರಾಬಾದ್‌ನ ಹೆನ್ರಿಚ್ ಕ್ಲಾಸೆನ್ 494 ರನ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅವರ ನಂತರ ಹೈದರಾಬಾದ್‌ನ ಆರಂಭಿಕ ಆಟಗಾರ ಅಭಿಷೇಕ್ ಶರ್ಮಾ (475 ರನ್‌ಗಳು) ಇದ್ದಾರೆ. ಎಸ್‌ಆರ್‌ಎಚ್‌ನ ಇಶಾನ್ ಕಿಶನ್ 409 ರನ್‌ಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ರಾಜಸ್ಥಾನದ ಯುವ ಸೆನ್ಸೇಶನ್ ವೈಭವ್ ಸೂರ್ಯವಂಶಿ (404) ಐದನೇ ಸ್ಥಾನದಲ್ಲಿದ್ದಾರೆ.

Delhi Capitals: ಏಳು ಸೋಲಿನ ಹೊರತಾಗಿಯೂ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇಆಫ್ ತಲುಪಬಹುದೇ?: ಇಲ್ಲಿದೆ ಲೆಕ್ಕಾಚಾರ

ಪರ್ಪಲ್ ಕ್ಯಾಪ್‌ ತೊಟ್ಟ ಆರ್​ಸಿಬಿಯ ಭುವನೇಶ್ವರ್

ಮತ್ತೊಂದೆಡೆ, ಪರ್ಪಲ್ ಕ್ಯಾಪ್ ರೇಸ್ ಕೂಡ ಆಸಕ್ತಿದಾಯಕವಾಗಿದೆ. ಆದಾಗ್ಯೂ, ದೆಹಲಿ-ಕೋಲ್ಕತ್ತಾ ಪಂದ್ಯದಲ್ಲಿ, ಅಗ್ರ ಸ್ಥಾನವನ್ನು ಪಡೆಯಲು ಸಾಧ್ಯವಾಗುವ ಒಬ್ಬ ಬೌಲರ್ ಕೂಡ ಇರಲಿಲ್ಲ. ಕೋಲ್ಕತ್ತಾದ ವೇಗಿ ಕಾರ್ತಿಕ್ ತ್ಯಾಗಿ ಎರಡು ವಿಕೆಟ್‌ಗಳನ್ನು ಪಡೆಯುವ ಮೂಲಕ ತಮ್ಮ ಸ್ಥಾನವನ್ನು ಸುಧಾರಿಸಿಕೊಂಡರು. ಅವರು 13 ವಿಕೆಟ್‌ಗಳೊಂದಿಗೆ ಟಾಪ್ 10 ರಲ್ಲಿ ಪ್ರವೇಶಿಸಿದ್ದಾರೆ ಮತ್ತು ಈಗ 7 ನೇ ಸ್ಥಾನದಲ್ಲಿದ್ದಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ ಅನುಭವಿ ವೇಗಿ ಭುವನೇಶ್ವರ್ ಕುಮಾರ್ 17 ವಿಕೆಟ್‌ಗಳೊಂದಿಗೆ ಅಗ್ರಸ್ಥಾನದಲ್ಲಿದ್ದಾರೆ. ಅವರ ನಂತರ ಎರಡನೇ ಸ್ಥಾನದಲ್ಲಿ ಚೆನ್ನೈ ಸೂಪರ್ ಕಿಂಗ್ಸ್‌ನ ಅನ್ಶುಲ್ ಕಾಂಬೋಜ್ ಕೂಡ 17 ವಿಕೆಟ್‌ಗಳೊಂದಿಗೆ ಇದ್ದಾರೆ. ವ್ಯತ್ಯಾಸವೆಂದರೆ ಭುವನೇಶ್ವರ್ ಉತ್ತಮ ರನ್​ರೇಟ್ ಹೊಂದಿದ್ದಾರೆ, ಅದಕ್ಕಾಗಿ ಅವರು ನಂ. 1 ಸ್ಥಾನದಲ್ಲಿದ್ದಾರೆ. ಲಕ್ನೋ ಸೂಪರ್ ಜೈಂಟ್ಸ್‌ನ ಪ್ರಿನ್ಸ್ ಯಾದವ್ ಮತ್ತು ಗುಜರಾತ್ ಟೈಟಾನ್ಸ್‌ನ ಕಗಿಸೊ ರಬಾಡ ತಲಾ 16 ವಿಕೆಟ್‌ಗಳೊಂದಿಗೆ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿದ್ದಾರೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link