Category Archives: Blog

Your blog category

ಅಲ್ಲು ಅರ್ಜುನ್ ಕುಟುಂಬದಲ್ಲಿ ಹಳದಿ ಶಾಸ್ತ್ರ; ಫೋಟೋ ವೈರಲ್ – Kannada News | Allu Sirish Wedding: Haldi Ceremony and Pre Wedding Festivities Go Viral! Date Confirmed

ಅಲ್ಲು (Allu Sirish) ಕುಟುಂಬದಲ್ಲಿ ವಿವಾಹದ ಸಂಭ್ರಮ ಶುರುವಾಗಿದೆ. ಅಲ್ಲು ಅರವಿಂದ್ ಅವರ ಕಿರಿಯ ಪುತ್ರ ಅಲ್ಲು ಸಿರೀಶ್ ಅವರ ವಿವಾಹಪೂರ್ವ ಸಂಭ್ರಮಗಳು ಅದ್ದೂರಿಯಾಗಿ ಆರಂಭವಾಗಿವೆ. ಅಲ್ಲು ಸಿರೀಶ್ ಮತ್ತು ನಯನಿಕಾ ಈಗಾಗಲೇ ತಮ್ಮ ಸ್ನೇಹಿತರಿಗಾಗಿ ದುಬೈನಲ್ಲಿ ಅದ್ದೂರಿಯಾಗಿ ಪೂರ್ವ ವಿವಾಹಪೂರ್ವ ಪಾರ್ಟಿ ನೀಡಿದ್ದರು. ಇದಕ್ಕೆ ಸಂಬಂಧಿಸಿದ ಫೋಟೋಗಳು ಅಂತರ್ಜಾಲದಲ್ಲಿ ವೈರಲ್ ಆಗಿದ್ದವು. ಅಲ್ಲು ಸಿರೀಶ್ ಮನೆಯಲ್ಲಿ ಅದ್ಧೂರಿಯಾಗಿ ಅರಿಶಿನ ಶಾಸ್ತ್ರ ನಡೆದಿದೆ.ಈ ವಿಡಿಯೋ ವೈರಲ್ ಆಗಿದೆ.

ಅಲ್ಲು ಹಾಗೂ ಮೆಗಾ ಕುಟುಂಬ ಸದಸ್ಯರು ಒಂದೇ ಕಡೆ ಅರಿಶಿನ ಶಾಸ್ತ್ರವನ್ನು ಮಾಡಿದರು. ಮೆಗಾಸ್ಟಾರ್ ಚಿರಂಜೀವಿ ಅವರ ಪತ್ನಿ ಸುರೇಖಾ, ಅವರ ಮಗಳು ಸುಷ್ಮಿತಾ, ಸೊಸೆ ಉಪಾಸನಾ, ಪವನ್ ಕಲ್ಯಾಣ್ ಅವರ ಪತ್ನಿ ಅನ್ನಾ ಲೆಜಿನೋವಾ ಮತ್ತು ಇತರ ಕುಟುಂಬ ಸದಸ್ಯರು, ಸ್ನೇಹಿತರು ಮತ್ತು ಆಪ್ತರು ಸಮಾರಂಭದಲ್ಲಿ ಭಾಗವಹಿಸಿದ್ದರು.

ಇದಕ್ಕೆ ಸಂಬಂಧಿಸಿದ ವೀಡಿಯೊವನ್ನು ಅಲ್ಲು ಸಿರೀಶ್ ಸ್ವತಃ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ಇದರೊಂದಿಗೆ, ಈ ವೀಡಿಯೋ ಇಂಟರ್ನೆಟ್‌ನಲ್ಲಿ ವೈರಲ್ ಆಗಿದೆ. ಅನೇಕ ಚಲನಚಿತ್ರ ಸೆಲೆಬ್ರಿಟಿಗಳು, ಅಭಿಮಾನಿಗಳು ಮತ್ತು ನೆಟ್ಟಿಗರು ಅಲ್ಲು ಸಿರೀಶ್ ಅವರನ್ನು ಮೊದಲೇ ಅಭಿನಂದಿಸುತ್ತಿದ್ದಾರೆ ಮತ್ತು ಹಾರೈಸುತ್ತಿದ್ದಾರೆ.

ಅಲ್ಲು ಸಿರೀಶ್ ಅವರ ಹಲ್ದಿ ಸಮಾರಂಭದಲ್ಲಿ ಉಪಾಸನಾ ವಿಶೇಷ ಆಕರ್ಷಣೆಯಾಗಿದ್ದರು. ಜನವರಿ 31 ರಂದು ಅವರು ಅವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ . ಗುರುವಾರ (ಫೆಬ್ರವರಿ 12) ಅವರು ತಮ್ಮ ಅವಳಿ ಮಕ್ಕಳಿಗೆ ನಾಮಕರಣವನ್ನೂ ಮಾಡಿದರು. ಮಗಳಿಗೆ ಅನ್ವೀರಾ ದೇವಿ ಕೊನಿಡೇಲಾ ಮತ್ತು ಮಗನಿಗೆ ಶಿವರಾಮ್ ಕೊನಿಡೇಲಾ ಎಂದು ಹೆಸರಿಸಲಾಯಿತು. ಹೆರಿಗೆಯ ನಂತರ ಉಪಾಸನಾ ಮೊದಲ ಬಾರಿಗೆ ಸಮಾರಂಭದಲ್ಲಿ ಕಾಣಿಸಿಕೊಂಡರು.

ಇದನ್ನೂ ಓದಿ: ಕೊರಿಯಾಕ್ಕೆ ಹೋಗಿ ಶಾಕ್ ಆದ ಅಲ್ಲು ಅರ್ಜುನ್ ಸಹೋದರ ಅಲ್ಲು ಸಿರೀಶ್

ಅಲ್ಲು ಸಿರೀಶ್ ಅವರ ಮದುವೆ ಮಾರ್ಚ್ 6 ರಂದು ನಡೆಯಲಿದೆ ಎಂದು ಹೇಳಲಾಗುತ್ತದೆ. ಸ್ಥಳದ ವಿವರಗಳು ಇನ್ನೂ ತಿಳಿದುಬಂದಿಲ್ಲ. ಈ ಅದ್ದೂರಿ ವಿವಾಹದಲ್ಲಿ ಚಿತ್ರರಂಗದ ಅನೇಕ ಸೆಲೆಬ್ರಿಟಿಗಳು ಮತ್ತು ರಾಜಕೀಯ ವ್ಯಕ್ತಿಗಳು ಭಾಗವಹಿಸಲಿದ್ದಾರೆ ಎಂದು ವರದಿಯಾಗಿದೆ. ಅಲ್ಲು ಸಿರೀಶ್ ಅವರ ವಿವಾಹ ಸಮಾರಂಭದ ಬಗ್ಗೆ ಶೀಘ್ರದಲ್ಲೇ ಅಧಿಕೃತ ಘೋಷಣೆ ಹೊರಬೀಳಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Bengaluru Air Quality: ಇನ್ನಷ್ಟು ಕಳಪೆ ಮಟ್ಟಕ್ಕಿಳೀತು ಬೆಂಗಳೂರು, ಮಂಗಳೂರಿನ ಏರ್ ಕ್ವಾಲಿಟಿ! – Kannada News | Bangalore Air Pollution Crisis: Bengaluru, Manglore, Ballari and Shivamogga Air quality

ಇನ್ನಷ್ಟು ಕಳಪೆ ಮಟ್ಟಕ್ಕಿಳೀತು ಬೆಂಗಳೂರು, ಮಂಗಳೂರಿನ ಏರ್ ಕ್ವಾಲಿಟಿ!

ಬೆಂಗಳೂರು, ಫೆಬ್ರವರಿ 14: ಕೆಲ ದಿನಗಳಿಂದ ಏರಿಕೆಯಾಗುತ್ತಿದ್ದ ಬೆಂಗಳೂರಿನ AQI (Bengaluru Air Quality) ಇಂದು ಕಳಪೆ ಮಟ್ಟ ತಲುಪಿದೆ. ನಿನ್ನೆ ತಕ್ಕ ಮಟ್ಟಿಗೆ ಸುಧಾರಿಸಿತೆಂದು ಎಂದುಕೊಂಡ ಮಂಗಳೂರಿನ ವಾಯು ಗುಣಮಟ್ಟವೀಗ ಮತ್ತೊಮ್ಮೆ ಕುಸಿತ ಕಂಡಿದೆ. ಅದರೊಂದಿಗೆ ಮೈಸೂರು ಮತ್ತು ಬೆಳಗಾವಿಯಲ್ಲೂ ಸಹ ಗಾಳಿಯ ಗುಣಮಟ್ಟ 150ಕ್ಕಿಂತ ಜಾಸ್ತಿಯಾಗಿದೆ. ದಿನದಿಂದ ದಿನಕ್ಕೆ ಈ ನಗರಗಳ AQI ಕುಸಿಯುತ್ತಿದ್ದು, ಮುನ್ನೆಚ್ಚರಿಕೆ ವಹಿಸುವಂತೆ ತಜ್ಞರು ಸಲಹೆ ನೀಡಿದ್ದಾರೆ.

ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 140ಕ್ಕೆ ತಲುಪಿದೆ. ಅದಕ್ಕಿಂತ ಹೆಚ್ಚಾಗಿ ಮಂಗಳೂರಿನ ಏರ್ ಕ್ವಾಲಿಟಿ 185 ಆಗಿದೆ. ಜೊತೆಗೆ ಬಳ್ಳಾರಿಯ ವಾಯು ಗುಣಮಟ್ಟವೂ ಸಹ 149 ಆಗಿದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –140
  • ಮಂಗಳೂರು-185
  • ಮೈಸೂರು –126
  • ಬೆಳಗಾವಿ – 165
  • ಕಲಬುರ್ಗಿ-149
  • ಶಿವಮೊಗ್ಗ – 135
  • ಬಳ್ಳಾರಿ – 132
  • ಹುಬ್ಬಳ್ಳಿ- 154
  • ಉಡುಪಿ –170
  • ವಿಜಯಪುರ –160

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕರ್ನಾಟಕ ಹವಾಮಾನ ವರದಿ: ಕರಾವಳಿ, ದಕ್ಷಿಣ ಒಳನಾಡು ಸೇರಿದಂತೆ ಹಲವೆಡೆ ಶುಷ್ಕ ವಾತಾವರಣ – Kannada News | Bengaluru temperature: Dry weather all over the state, clear sky at Bengaluru today

ಕರಾವಳಿ, ದಕ್ಷಿಣ ಒಳನಾಡು ಸೇರಿದಂತೆ ಹಲವೆಡೆ ಶುಷ್ಕ ವಾತಾವರಣ

ಬೆಂಗಳೂರು, ಫೆಬ್ರವರಿ 14: ಕರಾವಳಿ ಮತ್ತು ಉತ್ತರ ಒಳನಾಡು ತೀವ್ರ ಚಳಿಯ ಜೊತೆಗೆ ಒಣಹವೆ (Weather Forecast) ಇಂದೂ ಮುಂದುವರೆಯಲಿದ್ದು, ದಕ್ಷಿಣ ಒಳನಾಡಿನಲ್ಲಿಯೂ ಶುಷ್ಕ ವಾತಾವರಣ ಇರಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಹತ್ತಾರು ದಿನಗಳಿಂದ ರಾಜ್ಯದಲ್ಲಿ ಒಣ ಹವೆ ಆವರಿಸಿದೆ. ಬೆಂಗಳೂರಿನಲ್ಲಿ ಚಳಿಯ ಹವಾಮಾನ ತಕ್ಕಮಟ್ಟಿಗೆ ಇಂದು ಸುಧಾರಿಸಿದೆ.

ಎಲ್ಲೆಲ್ಲಿ ಒಣಹವೆ?

ಕರಾವಳಿಯ ಜಿಲ್ಲೆಗಳಾದ ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಒಣ ಹವೆಯಿರಲಿದೆ ಎಂದು ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ ಮೈಸೂರು , ಶಿವಮೊಗ್ಗ, ಚಿಕ್ಕಮಗಳೂರು, ಹಾಸನ, ಕೊಡಗು, ಚಾಮರಾಜನಗರ , ಕೋಲಾರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಬಳ್ಳಾರಿ, ತುಮಕೂರು, ಚಿಕ್ಕಬಳ್ಳಾಪುರ, ರಾಮನಗರ, ಮಂಡ್ಯ ಮತ್ತು, ಚಿತ್ರದುರ್ಗ, ದಾವಣಗೆರೆ ಮತ್ತು ವಿಜಯನಗರ ಜಿಲ್ಲೆಗಳಲ್ಲಿಯೂ ಒಣ ಹವೆಯ ವಾತಾವರಣ ಇರಲಿದೆ. ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬೀದರ್, ವಿಜಯಪುರ, ಬಾಗಲಕೋಟೆ, ಹಾವೇರಿ, ಗದಗ, ಧಾರವಾಡ, ಕಲಬುರಗಿ, ಕೊಪ್ಪಳ, ಬಳ್ಳಾರಿ, ರಾಯಚೂರು, ಯಾದಗಿರಿ ಮತ್ತು ವಿಜಯನಗರದಲ್ಲಿ ಕಳೆದ ಹಲವು ದಿನಗಳಿಂದ ಒಣಹವೆಯ ವಾತಾವರಣವಿದ್ದು, ಇಂದೂ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬೆಂಗಳೂರಿನಲ್ಲಿ ಶುಷ್ಕ ವಾತಾವರಣ

ಇಂದು ಬೆಂಗಳೂರಿನ ತಾಪಮಾನ ಕನಿಷ್ಠ 16°C ಇದ್ದು, ಗರಿಷ್ಠ 30°C ಇರಲಿದೆ ಎಂದು ಇಲಾಖೆ ತಿಳಿಸಿದೆ. ಈ ರೀತಿಯ ತೀವ್ರ ಚಳಿಯಿಂದ ಜನರ ಆರೋಗ್ಯದಲ್ಲಿ ಏರುಪೇರಾಗುತ್ತಿದ್ದು, ಬೆಚ್ಚಗಿನ ಹೊದಿಕೆ ಹೊತ್ತುಕೊಳ್ಳಬೇಕು ಹಾಗೂ ಬಿಸಿ ಆಹಾರ ಸೇವನೆ ಮಾಡಬೇಕೆಂದು ವೈದ್ಯರು ಸೂಚಿಸಿದ್ದಾರೆ. ಇಂದು ನಗರದಲ್ಲಿ ಎಂದಿನಂತೆ ಚಳಿಯ ವಾತಾವರಣವಿರುವುದರಿಂದ ಮಕ್ಕಳಿಂದ ಹಿಡಿದು ವೃದ್ಧರವರೆಗೂ ಎಚ್ಚರಿಕೆಯಿಂದಿರುವಂತೆ ಸಲಹೆ ನೀಡಿರುವ ಹವಾಮಾನ ಇಲಾಖೆ, ಬೆಚ್ಚನೆಯ ಉಡುಪು ಧರಿಸುವುದರ ಜೊತೆಗೆ ಸಮತೋಲನ ಆಹಾರ ಸೇವನೆಗೆ ಒತ್ತು ನೀಡುವಂತೆ ಸಲಹೆ ನೀಡಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

Valentine’s Day Wishes: ಪ್ರೇಮಿಗಳ ದಿನಕ್ಕೆ ಶುಭಕೋರಲು ಇಲ್ಲಿವೆ ಸಿಹಿ ಸಂದೇಶ – Kannada News | Valentine’s Day 2026: Valentine’s Day messages, Wishes, WhatsApp status, quotes share with your loved ones

ಪ್ರೇಮಿಗಳ ದಿನದ ಶುಭ ಸಂದೇಶಗಳುImage Credit source: vecteezy

ಪ್ರೀತಿ ಕೇವಲ ಭಾವನೆಯಲ್ಲ, ಅದು ಹೃದಯಗಳನ್ನು ಒಂದುಗೂಡಿಸುವ ಅತ್ಯಂತ ಸುಂದರವಾದ ಬಂಧವಾಗಿದೆ. ಈ ಪ್ರೀತಿಯನ್ನು ಸಂಭ್ರಮಿಸುವ ಸಲುವಾಗಿ ಪ್ರತಿವರ್ಷ ಫೆಬ್ರವರಿ 14 ರಂದು ಪ್ರೇಮಿಗಳ ದಿನವನ್ನು (Valentine’s Day) ಆಚರಿಸಲಾಗುತ್ತದೆ. ಇದು ಬರೀ ಪ್ರಣಯ ಸಂಬಂಧದ ಆಚರಣೆಯಲ್ಲ ಪ್ರೀತಿಯೆಂಬ ಪವಿತ್ರ ಸಂಬಂಧದ ಮಹತ್ವವನ್ನು ಸಾರುವ ವಿಶೇಷ ದಿನವೂ ಹೌದು. ಹಾಗಾಗಿ ಈ ದಿನ ಪ್ರತಿಯೊಬ್ಬ ಪ್ರೇಮಿಗೂ, ದಂಪತಿಗಳಿಗೂ ತುಂಬಾನೇ ಸ್ಪೆಷಲ್.‌ ಪ್ರೇಮಿಗಳ ದಿನದ ಈ ಶುಭ ಸಂದರ್ಭದಲ್ಲಿ ನಿಮ್ಮ ಸಂಗಾತಿಗೆ ತುಂಬಾನೇ ಸ್ಪೆಷಲ್‌ ಆಗಿ ಶುಭಾಶಯಗಳನ್ನು ತಿಳಿಸಲು ಬಯಸಿದರೆ, ಈ ರೀತಿ ಅರ್ಥಪೂರ್ಣ ಸಂದೇಶಗಳನ್ನು ಕಳುಹಿಸಿ. ಪ್ರೇಮಿಗಳ ದಿನವನ್ನು ವಿಶೇಷವಾಗಿ ಆಚರಿಸಿ.

ನಿಮ್ಮ ಸಂಗಾತಿಗೆ ಈ ರೀತಿ ಪ್ರೇಮಿಗಳ ದಿನದ ಶುಭಾಶಯಗಳನ್ನು ತಿಳಿಸಿ:

  • ನನ್ನ ಜೀವನಕ್ಕೆ ಬೆಳಕಾಗಿ ಬಂದ ನನ್ನ ಪ್ರೀತಿಯ ದೇವತೆಗೆ ಪ್ರೇಮಿಗಳ ದಿನದ ಶುಭಾಶಯಗಳು.
  • ಖುಷಿಯಲ್ಲಿ ಮಾತ್ರವಲ್ಲ, ನೋವಲ್ಲೂ ಕೂಡ ನಿನ್ನ ಜೊತೆಯಾಗಿ ನಾನು ಕೊನೆಯುಸಿರು ಇರುವವರೆಗೂ ನಿಲ್ಲುವೆ, ನನ್ನ ಪ್ರೀತಿಗೆ ಪ್ರೇಮಿಗಳ ದಿನದ ಶುಭಾಶಯಗಳು.
  • ನಿನ್ನ ಜೀವನವೆಲ್ಲಾ ಸದಾ ಖುಷಿಯಿಂದ ತುಂಬಿರಲಿ, ಆ ಖುಷಿಗೆ ಕಾರಣ ನಾನಾಗಿರಲಿ… ಹ್ಯಾಪಿ ವ್ಯಾಲೆಂಟೈನ್ಸ್‌ ಡೇ ಮೈ ಲವ್.‌
  • ನನ್ನ ಬದುಕಿಗೆ ಒಂದೊಳ್ಳೆ ಅರ್ಥಕೊಟ್ಟ ಈ ಜೀವಕ್ಕೆ ಪ್ರೇಮಿಗಳ ದಿನದ ಶುಭಾಶಯಗಳು…
  • ನೀ ನನ್ನ ಜೊತೆಗಿರು ಕಣ್ಣಲ್ಲಿ ಕಣ್ಣಾಗಿ ಕಾಯುವೆ, ನೀ ಪ್ರೀತಿಯ ತೋರು ಹೆಜ್ಜೆ ಹೆಜ್ಜೆಗೂ ಹೂ ಹಾಸುವೆ… ಪ್ರೇಮಿಗಳ ದಿನದ ಶುಭಾಶಯಗಳು.
  • ನೀ ಸಿಕ್ಕ ಮೇಲೆ ನನ್ನ ನೋವಿನ ಬದುಕಲಿ ನಲಿವು ಹೆಚ್ಚಾಗಿದ್ದು, ನಗು ಮರೆಯಾದ ಈ ಮೊಗದಲಿ ಮಗುವಿನಂತಹ ನಗು ಹುಟ್ಟಿದ್ದು, ನೀವು ಬಂದ ಮೇಲೆಯೇ ಲೈಫ್‌ ಈಸ್‌ ಬ್ಯೂಟಿಫುಲ್‌ ಅನಿಸಿದ್ದು, ನನ್ನ ಮನದರಸಿಗೆ ಪ್ರೇಮಿಗಳ ದಿನದ ಶುಭಾಶಯಗಳು.
  • ನಿನ್ನ ಪ್ರೀತಿಯ ಹೃದಯದಲ್ಲಿ ನಾನು ಮಾತ್ರ ಇರಬೇಕು, ನಿನ್ನ ಜೊತೆ ಕಳೆಯೋ ಅವಕಾಶ ನನಗೆ ಮಾತ್ರ ಸಿಗಬೇಕು, ಇದು ಸ್ವಾರ್ಥವಲ್ಲ ನಿನ್ನ ಮೇಲೆ ನನಗಿರುವ ಬೆಟ್ಟದಷ್ಟು ಪ್ರೀತಿ… ಹ್ಯಾಪಿ ವ್ಯಾಲೆಂಟೈನ್ಸ್‌ ಡೇ.
  • ಬರೀ ನೋವೇ ತುಂಬಿದ್ದ ಈ ಜೀವನದಲ್ಲಿ ಖುಷಿ, ಪ್ರೀತಿಯೆಂಬ ಹೂವಿನ ಮಳೆ ಸುರಿಸಿದ ನನ್ನ ಮನದರಸಿಗೆ ಪ್ರೇಮಿಗಳ ದಿನದ ಶುಭಾಶಯಗಳು.
  • ಏಳೇಳು ಜನ್ಮಕ್ಕೂ ನಮ್ಮ ಈ ಸುಂದರ ಸಂಬಂಧ ಹೀಗೆ ಸಂತೋಷದಿಂದ ಕೂಡಿರಲಿ, ಹ್ಯಾಪಿ ವ್ಯಾಲೆಂಟೈನ್ಸ್‌ ಡೇ.
  • ಬದುಕಿನುದ್ದಕ್ಕೂ ನೆರಳಂತೆ ನಿನ್ನ ಜೊತೆಯಿರುವೆ, ನನ್ನಾಯುಷ್ಯವೆಲ್ಲಾ ನಿನಗೆ ಧಾರೆಯೆರೆವೆ, ಇರಲಿ ಸಾವಿರ ನೋವು ನನಗೆ… ಜಗದ ಖುಷಿಯೆಲ್ಲಾ ಇರಲಿ ನಿನಗೆ… ನನ್ನ ಬಾಳ ಸಂಗಾತಿಗೆ ಪ್ರೇಮಿಗಳ ದಿನದ ಶುಭಾಶಯಗಳು.
  • ಜೊತೆಯಾಗಿ ನಡೆವೆ ನಾ ಮಳೆಯಲೂ ಬಿಡದಂತೆ ಹಿಡಿವೇ ಈ ಕೈಯನೂ… ನನ್ನ ಜೀವನದ ಸ್ಪೆಷಲ್‌ ವ್ಯಕ್ತಿಗೆ  ಹ್ಯಾಪಿ ವ್ಯಾಲೆಂಟೈನ್ಸ್‌ ಡೇ
  • ನಿನ್ನ ಜೊತೆಗಿನ ಪ್ರತಿ ಕ್ಷಣವೂ ವಿಶೇಷವೆನಿಸುತ್ತದೆ, ನೀನಿಲ್ಲದೆ ಪ್ರತಿಯೊಂದು ಸಂತೋಷವೂ ಅಪೂರ್ಣವೆನಿಸುತ್ತದೆ… ನನ್ನ ಜೀವನದ ವಿಶೇಷ ವ್ಯಕ್ತಿಗೆ ಪ್ರೇಮಿಗಳ ದಿನದ ಶುಭಾಶಯಗಳು.
  • ನನ್ನ ಜೀವ ನೀನು… ನನ್ನ ಬಾಳ ಜ್ಯೋತಿ ನೀನು… ನನ್ನ ಪ್ರೀತಿಯ ದೇವತೆಗೆ ಪ್ರೇಮಿಗಳ ದಿನದ ಪ್ರೀತಿಪೂರ್ವಕ ಶುಭಾಶಯಗಳು.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗೌರಿ ಖಾನ್ ವಿಲ್ಲಾದಲ್ಲಿ ನೀವು ವಾಸಿಸಬಹುದು; ಒಂದು ರಾತ್ರಿಗೆ ಎಷ್ಟು ಲಕ್ಷ ರೂಪಾಯಿ? – Kannada News | Gauri Khan Transforms Ancestral Dalhousie Villa into Luxury Rental: Price and Features

ಗೌರಿ ಖಾನ್ ಅವರು ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ (Shah Rukh Khan) ಪತ್ನಿಯಾಗಿ ಗುರುತಿಸಿಕೊಂಡಿರುವುದು ಮಾತ್ರವಲ್ಲ, ತಮ್ಮದೇ ಉದ್ಯಮಗಳ ಮೂಲಕ ಗಮನ ಸೆಳೆದಿದ್ದಾರೆ. ಅವರು ಇಂಟೀರಿಯರ್ ಡಿಸೈನ್ ಉದ್ಯಮದಲ್ಲಿ ಉನ್ನತ ಮಟ್ಟಕ್ಕೆ ಏರಿದ್ದಾರೆ. ಅವರು ಈಗ ‘1993ರ ಡಾಲ್​ಹೌಸೀ ವಿಲ್ಲಾ’ ಅನ್ನು ಟೂರಿಸ್ಟ್​​​ಗಳು ಉಳಿದುಕೊಳ್ಳುವ ಜಾಗವನ್ನಾಗಿ ಬದಲಾಯಿಸಿದ್ದಾರೆ. ಇದರ ಬಾಡಿಗೆ ಬರೋಬ್ಬರಿ 1.2 ಲಕ್ಷ ರೂಪಾಯಿ.

ಹಿಮಾಚಲ ಪ್ರದೇಶದ ಚಂಬಾ ಬಳಿ ಡಾಲ್​ಹೌಸ್ ಇದೆ. 1993ರಲ್ಲಿ ಈ ಭಾಗದಲ್ಲಿ ಈ ಜಾಗವನ್ನು ಗೌರಿ ಅವರ ಮುತ್ತಾತ ಸೂರಜ್ ಭಾನ್ ತಿವಾರಿ ಖರೀದಿ ಮಾಡಿದರಂತೆ. ಈ ಜಾಗ 8000 ಸ್ಕ್ವೇರ್ ಫೀಟ್ ಇದೆ. ಇಲ್ಲಿ ಚಿಕ್ಕ ವಯಸ್ಸಿನಲ್ಲಿದ್ದಾಗ ಗೌರಿ ಸಮಯ ಕಳೆಯುತ್ತಿದ್ದರು. ಅವರು ಅನೇಕ ಬೇಸಿಗೆ ರಜೆಗಳನ್ನು ಇಲ್ಲಿ ಕಳೆದಿದ್ದಾರೆ.

ಈಗ ಗೌರಿ ಖಾನ್ ಅವರು ಇದನ್ನು ಅಭಿವೃದ್ಧಿ ಮಾಡಿದ್ದಾರೆ. ಹಲವು ಬದಲಾವಣೆಗಳನ್ನು ಮಾಡಿದ್ದು, ಐಷಾರಾಮಿ ಸವಲತ್ತುಗಳನ್ನು ನೀಡೋ ವಿಲ್ಲಾ ಆಗಿ ಇದನ್ನು ಬದಲಾಯಿಸಲಾಗಿದೆ. ಗೌರಿ ಸಹೋದರ ಕೂಡ ಇದರ ಭಾಗವಾಗಿದ್ದಾರೆ.

ಇಲ್ಲಿ ಆರು ರೂಂಗಳು ಇವೆ. ಒಂದು ರೂಂಗೆ 15-25 ಸಾವಿರ ರೂಪಾಯಿ (ಒಂದು ರಾತ್ರಿಗೆ) ಇದೆ. ನಿಮಗೆ ತುಂಬಾನೇ ಪ್ರೈವಸಿ ಬೇಕು ಎನಿಸಿದರೆ ಇಡೀ ವಿಲ್ಲಾನ ಬುಕ್ ಮಾಡಬಹುದು. ಅದಕ್ಕೆ ನೀವು ಪೇ ಮಾಡಬೇಕರಿವುದು ಬರೋಬ್ಬರಿ ಒಂದು ಲಕ್ಷದ ಇಪ್ಪತ್ತು ಸಾವಿರ ರೂಪಾಯಿ.

ಇದು ಹಿಲ್​ ಸ್ಟೇಷನ್​​ನಲ್ಲಿ ಇರುವುದರಿಂದ ಬೇಸಿಗೆಯಲ್ಲೂ ತಂಪನ್ನು ನಿರೀಕ್ಷಿಸಬಹುದು. ಇಷ್ಟೇ ಅಲ್ಲ, ಈ ಭಾಗದಲ್ಲಿ ಹಿಮ ಕೂಡ ಬೀಳುತ್ತದೆ. ಈ ವಿಲ್ಲಾದ ಐಷಾರಾಮಿ ವ್ಯವಸ್ಥೆ ನಿರೀಕ್ಷಿಸಬಹುದಾಗಿದೆ.

ಇದನ್ನೂ ಓದಿ: ತಮ್ಮದೇ ಹಳೆ ಸೂಪರ್ ಹಿಟ್ ಸಿನಿಮಾದ ಸೀಕ್ವೆಲ್​​ನಲ್ಲಿ ನಟಿಸಲಿದ್ದಾರೆ ಶಾರುಖ್ ಖಾನ್

ಗೌರಿ ಹಾಗೂ ಶಾರುಖ್ ಖಾನ್ ಉಳಿದುಕೊಂಡಿರೋ ಮನ್ನತ್​ ಅಲ್ಲೂ ರಿಸ್ಟೋರೇಷನ್ ಕೆಲಸಗಳು ನಡೆಯುತ್ತಿವೆ. ಇಲ್ಲಿಯೂ ಸಾಕಷ್ಟು ಬದಲಾವಣೆಗಳನ್ನು ಮಾಡಲು ಗೌರಿ ಪ್ಲ್ಯಾನ್ ರೂಪಿಸಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ಬಿಲ್ವಪತ್ರೆಯ ಮಹತ್ವ, ಶಿವ ಬಿಲ್ವಪ್ರಿಯ ಯಾಕೆ? – Kannada News | Daily Devotional: The Spiritual Significance of Bilva Patra, Why it is Dear to Lord Shiva

ಬೆಂಗಳೂರು, ಫೆಬ್ರವರಿ​ 14: ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಬಿಲ್ವಪತ್ರೆಯ ಮಹತ್ವ, ಶಿವ ಬಿಲ್ವಪ್ರಿಯ ಯಾಕೆ ಎಂದು ಡಾ.ಬಸವರಾಜ ಗುರೂಜಿ ವಿವರಿಸಿದ್ದಾರೆ. ಶಿವರಾತ್ರಿಯ ಪರ್ವಕಾಲದಲ್ಲಿ ಶಿವನ ಆರಾಧನೆಗೆ ಬಿಲ್ವಪತ್ರೆಯು ಅತ್ಯಂತ ಪ್ರಮುಖವಾಗಿದೆ. ಶಿವನಿಗೆ ಅತಿ ಪ್ರಿಯವಾದ ಪತ್ರೆಯಾಗಿರುವ ಬಿಲ್ವಪತ್ರೆಯನ್ನು ಹಿಂದೂ ಧರ್ಮದಲ್ಲಿ ಶ್ರೀವೃಕ್ಷ ಎಂದೂ ಕರೆಯಲಾಗುತ್ತದೆ. ಇದು ಮಹಾಲಕ್ಷ್ಮಿಗೂ ಪ್ರಿಯವಾಗಿದೆ. ಬಿಲ್ವಪತ್ರೆಯ ಮೂರು ದಳಗಳು ಸತ್ವ, ರಜೋ, ತಮೋಗುಣಗಳ ಪ್ರತೀಕ ಹಾಗೂ ಶಿವನ ತ್ರಿನೇತ್ರಗಳ ಸಂಕೇತವಾಗಿವೆ.

“ಏಕಬಿಲ್ವಂ ಶಿವಾರ್ಪಣಂ” ಎಂಬಂತೆ, ಭಕ್ತಿಯಿಂದ ಶಿವನಿಗೆ ಬಿಲ್ವಪತ್ರೆ ಅರ್ಪಿಸಿದರೆ ಕೋಟಿ ಕನ್ಯಾದಾನ ಮಾಡಿದ ಫಲ ಸಿಗುತ್ತದೆ ಎಂದು ನಂಬಲಾಗಿದೆ. ಶುದ್ಧವಾದ, ಹರಿದಿರದ ಮೂರು ಎಲೆಗಳ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಮೂರು ಜನ್ಮಗಳ ಪಾಪಗಳು ನಾಶವಾಗುತ್ತವೆ ಎಂಬ ನಂಬಿಕೆಯಿದೆ. ಇದು ಕೇವಲ ನಂಬಿಕೆಯ ಆಧಾರವಾಗಿದ್ದು, ಶ್ರದ್ಧೆಯಿಂದ ಪೂಜಿಸುವುದು ಮುಖ್ಯ ಎಂದು ಬಸವರಾಜ ಗುರೂಜಿ ಹೇಳಿದ್ದಾರೆ.

 

 

 

Source link

Horoscope Today 14 February​: ಇಂದು ಈ ರಾಶಿಯವರಿಗೆ ಹಣಕಾಸು ವಿಚಾರದಲ್ಲಿ ಶುಭ

ಟಿವಿ9 ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಫೆಬ್ರವರಿ 14, ಶನಿವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಈ ದಿನ ವಿಶ್ವಾವಸುನಾಮ ಸಂವತ್ಸರ, ಉತ್ತರಾಯಣ, ಮಾಗಮಾಸ, ಶಿಶಿರ ಋತು, ಕೃಷ್ಣ ಪಕ್ಷ, ದ್ವಾದಶಿ, ಪೂರ್ವಾಷಾಢ ನಕ್ಷತ್ರ, ಸಿದ್ಧಿಯೋಗ, ತೈತಿಲಕರಣಗಳ ಈ ದಿನದ ರಾಹುಕಾಲ ಬೆಳಿಗ್ಗೆ 9:37 ರಿಂದ 11:05 ರವರೆಗೆ ಇರುತ್ತದೆ. ಮಧ್ಯಾಹ್ನ 2:01 ರಿಂದ 3:29 ರವರೆಗೆ ಸಂಕಲ್ಪ ಕಾಲವಿರುತ್ತದೆ.

ಇದು ಮಹಾ ಪ್ರದೋಷದ ದಿನವಾಗಿದ್ದು, ಹೆಬ್ಬರಿ ರಥೋತ್ಸವ, ತಲಕಾಡು ಬಾಲಕೃಷ್ಣಾನಂದರ ಆರಾಧನೆ, ಕುರುವತ್ತಿ ಬಸವೇಶ್ವರ ರಥೋತ್ಸವ ಮತ್ತು ಬ್ಯಾಂಕ್ ರಜೆಯೂ ಇರುತ್ತದೆ. ರವಿ ಕುಂಭ ರಾಶಿಯಲ್ಲಿ ಮತ್ತು ಚಂದ್ರ ಧನುಸ್ಸು ರಾಶಿಯ ಪೂರ್ವಾಷಾಢ ನಕ್ಷತ್ರದಲ್ಲಿ ಸಂಚರಿಸುತ್ತಾನೆ. ಪ್ರತಿ ರಾಶಿಯವರಿಗೆ ಆರ್ಥಿಕ ಸ್ಥಿತಿ, ಉದ್ಯೋಗ, ಆರೋಗ್ಯ, ಕುಟುಂಬ ಸಂಬಂಧಗಳು, ಅದೃಷ್ಟ ಸಂಖ್ಯೆ, ಬಣ್ಣ ಮತ್ತು ಜಪಿಸಬೇಕಾದ ಮಂತ್ರಗಳ ಕುರಿತು ಗುರೂಜಿ ವಿವರವಾದ ಮಾರ್ಗದರ್ಶನ ನೀಡಿದ್ದಾರೆ.

 

 

 

Source link

ದುಬಾರಿ ಆಯ್ತು ಕೋರ್ಟ್​ ಕೇಸ್; ‘ಜನ ನಾಯಗನ್​’ ಟೀಂಗೆ ಆದ ನಷ್ಟ ಎಷ್ಟು? – Kannada News | Jana Nayagan Crisis: 150 Cr RS Loss Looms Over Film Due to Legal Battle and Release Woes

ತಮಿಳಿನ ‘ಜನ ನಾಯಗನ್’ ಸಿನಿಮಾ (Jana Nayagan) ಈಗ ಸಂಕಷ್ಟದಲ್ಲಿ ಇದೆ. ಈ ಚಿತ್ರ ಯಾವಾಗ ರಿಲೀಸ್ ಆಗುತ್ತದೆ ಎಂಬ ಸ್ಪಷ್ಟನೆ ಅಭಿಮಾನಿಗಳಿಗೆ ಹಾಗಿರಲಿ, ಟೀಂನವರಿಗೂ ಇಲ್ಲ. ಮುಂದೇನು ಎಂಬ ಪ್ರಶ್ನೆ ತಂಡಕ್ಕೆ ಕಾಡುತ್ತಿದೆ. ಸದ್ಯ ಸೆನ್ಸಾರ್ ಪುನರ್ ವಿಮರ್ಶೆ ಮಾಡೋ ಸಂಸ್ಥೆಗೆ ಸಿನಿಮಾನ ಸಲ್ಲಿಕೆ ಮಾಡಲಾಗಿದೆ. ಎರಡು ವಾರದ ಒಳಗೆ ಸಿನಿಮಾದ ಸೆನ್ಸಾರ್ ಸರ್ಟಿಫಿಕೇಟ್ ತಂಡದ ಕೈ ಸೇರೋ ಸಾಧ್ಯತೆ ಇದೆ. ಈ ಮಧ್ಯೆ ತಂಡಕ್ಕೆ ಕೋರ್ಟ್ ಕೇಸ್ ದುಬಾರಿ ಆಗಿದೆ ಎನ್ನಲಾಗಿದೆ.

‘ಜನ ನಾಯಗನ್’ ಸಿನಿಮಾ ಜನವರಿ 9ರಂದು ರಿಲೀಸ್ ಆಗಬೇಕಿತ್ತು. ಅಂದರೆ ಸುಮಾರು ಐದು ವಾರಗಳ ಹಿಂದೆಯೇ ಚಿತ್ರ ಜನರ ಎದುರು ಬರಬೇಕಿತ್ತು. ಆದರೆ, ಈವರೆಗೆ ತಂಡಕ್ಕೆ ಸೆನ್ಸಾರ್ ಪ್ರಮಾಣ ಪತ್ರ ಸಿಕ್ಕಿಲ್ಲ. ಇದು ಚಿತ್ರಕ್ಕೆ ದುಬಾರಿ ಆಗಿದೆ. ಇಷ್ಟು ದಿನಗಳ ಕಾಲ ಕೋರ್ಟ್​​ನಲ್ಲಿ ಹೋರಾಡುತ್ತಾ ಇದ್ದ ತಂಡ, ಈಗ ಕೇಸ್​​ನ ಹಿಂಪಡೆದು ಪುನರ್ ವಿಮರ್ಶೆ ಮಾಡುವ ಸಂಸ್ಥೆಗೆ ಸಿನಿಮಾನ ಸಲ್ಲಿಕೆ ಮಾಡಲಾಗಿದೆ.

ಈಗಾಗಲೇ ಅಮೇಜಾನ್​ ಪ್ರೈಮ್ ವಿಡಿಯೋ ಸಂಸ್ಥೆ 120 ಕೋಟಿ ರೂಪಾಯಿ ನೀಡಿ ‘ಜನ ನಾಯಗನ್’ ಚಿತ್ರ ಖರೀದಿ ಮಾಡಿದೆ. ಈಗ ಸಿನಿಮಾ ವಿಳಂಬ ಆಗುತ್ತಿರುವುದರಿಂದ ಒಟಿಟಿ ಸಂಸ್ಥೆಯವರು 60 ಕೋಟಿ ರೂಪಾಯಿ ನೀಡಲು ಮಾತ್ರ ಸಿದ್ಧರಿದ್ದಾರೆ ಎಂದು ವರದಿ ಆಗಿದೆ. ಉಳಿದ ಲೆಕ್ಕಾಚಾರ ಸೇರಿದರೆ 150 ಕೋಟಿ ರೂಪಾಯಿ ಹೆಚ್ಚುವರಿಯಾಗಿ ವೆಚ್ಛ ಭರಿಸೋ ಸ್ಥಿತಿಯಲ್ಲಿ ‘ಜನ ನಾಯಗನ್’ ತಂಡ ಇದೆ.

ಎರಡು ವಾರಗಳಲ್ಲಿ ಸಿನಿಮಾದ ಸೆನ್ಸಾರ್ ಪ್ರಮಾಣ ಪತ್ರ ಕೈ ಸೇರಿದರೂ ಸಿನಿಮಾನ ಏಕಾಏಕಿ ರಿಲೀಸ್ ಮಾಡೋದು ಸಾಧ್ಯವಾಗದೆ ಇರಬಹುದು. ಇದು ವಿಶ್ವ ಮಟ್ಟದಲ್ಲಿ ತೆರೆಗೆ ಬರಬೇಕಿದೆ. ಹೀಗಾಗಿ, ತಮಿಳುನಾಡು ಸೇರಿದಂತೆ ಭಾರತಾದ್ಯಂತ ಥಿಯೇಟರ್ ಸೆಟಪ್ ಮಾಡಿಕೊಳ್ಳಬೇಕಿದೆ. ಆ ಬಳಿಕ ವಿಶ್ವ ಮಟ್ಟದಲ್ಲಿಯೂ ಸಿನಿಮಾ ರಿಲೀಸ್ ಮಾಡಲು ಪ್ಲ್ಯಾನ್ ಮಾಡಿಕೊಳ್ಳಬೇಕಿದೆ.

ಇದನ್ನೂ ಓದಿ: ಜನ ನಾಯಗನ್ ಬಳಿಕ ಮತ್ತೊಂದು ಚಿತ್ರದ ರಿಲೀಸ್​​​ಗೆ ತಡೆ; ದೊಡ್ಡ ಪ್ಲ್ಯಾನ್ ಮಾಡಿದ ತಂಡ 

‘ಜನ ನಾಯಗನ್’ ಸಿನಿಮಾನ ಫೆಬ್ರವರಿ ಕೊನೆಯಲ್ಲಿ ರಿಲೀಸ್ ಮಾಡಲು ಸಾಧ್ಯವಿಲ್ಲ. ಏಕೆಂದರೆ ‘ಟಾಕ್ಸಿಕ್’ ಸಿನಿಮಾ ರಿಲೀಸ್ ದಿನಾಂಕ ಈಗಾಗಲೇ ಫಿಕ್ಸ್ ಆಗಿದೆ. ಮಾರ್ಚ್ 19ರಂದು ಈ ಚಿತ್ರ ತೆರೆಗೆ ಬರುತ್ತಿದೆ. ಕೇವಲ ಎರಡು ವಾರ ಗ್ಯಾಪ್​​ನಲ್ಲಿ ಒಂದೇ ಸಂಸ್ಥೆಯ ಎರಡು ಸಿನಿಮಾಗಳನ್ನು ರಿಲೀಸ್ ಮಾಡೋದು ಅಸಾಧ್ಯ. ಹೀಗಾಗಿ, ‘ಜನ ನಾಯಗನ್ ಮತ್ತಷ್ಟು’ ಮುಂದಕ್ಕೆ ಹೋಗಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಮಂಗಳೂರು: ಮೂವರು ಡ್ರಗ್ಸ್ ಪೆಡ್ಲರ್​​ಗಳ ಖೆಡ್ಡಾಕ್ಕೆ ಕೆಡವಿದ ಪೊಲೀಸರು, 11.90 ಲಕ್ಷ ರೂ. ಮೌಲ್ಯದ MDMA ವಶ – Kannada News | MDMA Seized in Mangaluru: Police Arrest Three Drug Peddlers, Rs 11.90 Lakh Worth Narcotics Recovered

ಬಂಧಿತ ಡ್ರಗ್ ಪೆಡ್ಲರ್​ಗಳುImage Credit source: tv9

ಮಂಗಳೂರು, ಫೆಬ್ರವರಿ 14: ಮಂಗಳೂರು (Mangalore ನಗರದಲ್ಲಿ ಮಾದಕ ವಸ್ತುಗಳ ಜಾಲದ (Drugs Mafia) ವಿರುದ್ಧ ಕಠಿಣ ಕ್ರಮ ಮುಂದುವರೆದಿದ್ದು, ಮಂಗಳೂರು ಸಿಸಿಬಿ ಪೊಲೀಸರು ಮತ್ತೊಮ್ಮೆ ದೊಡ್ಡ ಕಾರ್ಯಾಚರಣೆ ನಡೆಸಿದ್ದಾರೆ. ಖಚಿತ ಮಾಹಿತಿ ಮೇರೆಗೆ ಮಂಗಳೂರು ತಾಲೂಕಿನ ತಲಪಾಡಿ ಭಾಗದಲ್ಲಿ ದಾಳಿ ನಡೆಸಿ MDMA ಮಾದಕ ವಸ್ತು ಮಾರಾಟಕ್ಕೆ ಯತ್ನಿಸುತ್ತಿದ್ದ ಮೂವರು ಪೆಡ್ಲರ್‌ಗಳನ್ನು ಬಂಧಿಸಿದ್ದಾರೆ. ಬಂಧಿತರನ್ನು ಉಳ್ಳಾಲದ ಮುಸ್ತಫಾ ಸೀದಿಯಬ್ಬ (34), ಮೈಯದ್ದಿ (28) ಮತ್ತು ಮೊಹಮ್ಮದ್ ಶಿಫಾನ್ (28) ಎಂದು ಗುರುತಿಸಲಾಗಿದೆ.

ಇವರು ಬೆಂಗಳೂರಿನಿಂದ ಎಂಡಿಎಂಎ ತಂದು ಮಂಗಳೂರಿನ ತಲಪಾಡಿ ಪ್ರದೇಶದಲ್ಲಿ ಮಾರಾಟ ಮಾಡಲು ಯತ್ನಿಸುತ್ತಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಬಂಧಿತರಿಂದ ಸುಮಾರು 11.90 ಲಕ್ಷ ರೂ. ಮೌಲ್ಯದ 118.13 ಗ್ರಾಂ MDMA ವಶಪಡಿಸಿಕೊಳ್ಳಲಾಗಿದೆ.

ಸಿಸಿಬಿ ಎಸಿಪಿ ಮನೋಜ್ ಕುಮಾರ್ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಸಲಾಗಿದ್ದು, ಈ ಡ್ರಗ್ಸ್ ಜಾಲದಲ್ಲಿ ಇನ್ನೂ ಹಲವರು ಭಾಗಿಯಾಗಿರುವ ಶಂಕೆ ವ್ಯಕ್ತವಾಗಿದೆ. ತಲೆಮರೆಸಿಕೊಂಡಿರುವ ಆರೋಪಿಗಳ ಪತ್ತೆಗೆ ಪೊಲೀಸರು ವಿಶೇಷ ತಂಡ ರಚಿಸಿ ಶೋಧ ಮುಂದುವರೆಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಡ್ರಗ್ಸ್ ಜಾಲ ಹೆಚ್ಚುತ್ತಿರುವುದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ. ಡಿಸೆಂಬರ್‌ನಲ್ಲಿ ಮಂಗಳೂರಿನ ಮುಲ್ಕಿ ಬಳಿ 50 ಲಕ್ಷ ರೂಪಾಯಿ ಮೌಲ್ಯದ ಎಂಡಿಎಂಎ ವಶಪಡಿಸಿಕೊಂಡು ನಾಲ್ವರನ್ನು ಸೆರೆಹಿಡಿಯಲಾಗಿತ್ತು. ಹೊಸ ವರ್ಷದ ಸಂಭ್ರಮಾಚರಣೆ ವೇಳೆ ಮಾರಾಟಕ್ಕೆಂದು ಒಡಿಶಾದಿಂದ ತಂದಿದ್ದ 21 ಕೆಜಿ ಗಾಂಜಾವನ್ನು ಸುರತ್ಕಲ್ ಪೊಲೀಸರು ವಶಪಡಿಸಿಕೊಂಡು ಇಬ್ಬರನ್ನು ಬಂಧಿಸುವ ಮೂಲಕ ದೊಡ್ಡ ಜಾಲವನ್ನು ಭೇದಿಸಿದ್ದರು.

ಇದನ್ನೂ ಓದಿ: ಕ್ಯಾಂಡಿ ಪ್ಯಾಕೆಟ್​ಗಳಲ್ಲಿ ಬ್ಯಾಂಕಾಕ್​ನಿಂದ ಬರುತ್ತಿತ್ತು ಡ್ರಗ್ಸ್! ಬೆಂಗಳೂರು ಏರ್​ಪೋರ್ಟಲ್ಲಿ ಇಬ್ಬರ ಬಂಧನ

ಅತ್ತ ಬೆಂಗಳೂರಿನಲ್ಲಿ ಸಹ ಜನವರಿಯಲ್ಲಿ ಪೊಲೀಸರು ಸುಮಾರು 4 ಕೋಟಿ ರೂಪಾಯಿ ಮೌಲ್ಯದ 4 ಕೆಜಿ ಎಂಡಿಎಂಎ ಪೂರೈಸುತ್ತಿದ್ದ ಉಗಾಂಡ ಮೂಲದ ಮಹಿಳೆಯನ್ನು ಬಂಧಿಸಿದ್ದರು.

ಕರ್ನಾಟಕದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಎತ್ತ ಸಾಗಿದೆ ಪ್ರೀತಿಯೆಂಬ ಮಾಯೆ! – Kannada News | Valentine’s Day: Youth, Love and Navigating Modern Relationships Responsibly

ಪ್ರೀತಿಯಲ್ಲಿ ಹಾಗೂ ಯುದ್ದದಲ್ಲಿ ಎಲ್ಲವೂ ಸರಿ, Everything is fair in Love & War ಅಂತಾ ಅದ್ಯಾವ ಪುಣ್ಯಾತ್ಮ ಈ ಸಾಲುಗಳನ್ನು ಗೀಚಿದನೋ ಗೊತ್ತಿಲ್ಲ. ಇದನ್ನು ಬರೆದವ ಇದನ್ನು ಅದೆಷ್ಟೋ ಗಂಭೀರವಾಗಿ ತೆಗೆದುಕೊಂಡಿದ್ದನ್ನೋ ? ಇಲ್ಲವೋ ? ಗೊತ್ತಿಲ್ಲ ಆದ್ರೆ ನಮ್ಮ ಯುವ ಪೀಳಿಗೆ, ದ ಜೆನ್ಸಿಸ್ ಮಾತ್ರ ಇದನ್ನೇ ವೇದ ವಾಕ್ಯದಂತೆ ಪಾಲಿಸುತ್ತಿದ್ದಾರೆ. ಅದರಲ್ಲೂ ಪ್ರೀತಿ ವಿಚಾರ ಬಂದರೆ ಅವರಿಗೆ ಇದೇ ಭಗವದ್ಗೀತೆ, ಇದೇ ಕುರಾನ್, ಬೈಬಲ್ ಎಲ್ಲವೂ ಆಗಿದೆ. ಪ್ರೀತಿಯ ಮೋಡಿಗೊಳಗಾದವರಿಗೆ ತಾವು ಮಾಡಿದ್ದೇ ಸರಿ. ತಮ್ಮ ಪ್ರೀತಿ ಬಗ್ಗೆ ಕೊಂಚ ಚಕಾರ ಎತ್ತುವ ಅದ್ಯಾರೇ ಆಗಲಿ ಅವರು ತಪ್ಪು. ಅದು ಅಪ್ಪ, ಅಮ್ಮ, ಅಣ್ಣ, ಅಕ್ಕ, ತಮ್ಮ, ತಂಗಿ, ಅತ್ತೆ, ಮಾವ, ಸ್ನೇಹಿತರು ಇತ್ಯಾದಿ ಇತ್ಯಾದಿ ಎಲ್ಲರೂ ತಪ್ಪೇ. ಅಷ್ಟೇ ಅಲ್ಲ ಅವರೆಲ್ಲಾ ಇವರ ಪ್ರೀತಿ ಕಂಡು ಹೊಟ್ಟೆ ಕಿಚ್ಚು ಪಟ್ಟವರು ಅನ್ನೋದು ಅವರ ಭಾವನೆ. ಅವರ ಆ ಹುಚ್ಚು ಪ್ರೀತಿಯ ಹೊಳೆಯ ಮುಂದೆ ಅಂಡು ತೊಳೆದು ಮುದ್ದು ಮಾಡಿ ತುತ್ತು ತಿನ್ನಿಸಿದ ಹೆತ್ತವ್ವ, ತಲೆ ಮೇಲೆ ಹೊತ್ತು ಮರೆಸಿ ಯಾವುದಕ್ಕೂ ಬೇಸರಿಸದೆ ರಕ್ತವನ್ನು ಬಸಿದು ಬೆವರಾಗಿಸಿ ದುಡಿದ ಅಪ್ಪ ಲೆಕ್ಕಕ್ಕೇ ಇರುವುದಿಲ್ಲ. ಇನ್ನು ಜೊತೆಗೆ ಬೆಳೆದವರೆಲ್ಲಾ ನಗಣ್ಯ. ಇಂತಹ ಮನಸ್ಥಿತಿಯ ಇಂದಿನ ಯುವಕ ಯುವತಿಯರಿಗಾಗಿ ಒಂದಷ್ಟು ಕಟು ಸತ್ಯವನ್ನು ಮನದಟ್ಟು ಮಾಡಿಸಲು ಈ ಬರಹವನ್ನು ಬರೆದಿದ್ದೇನೆ.

ಹೆತ್ತವರನ್ನು ಗೌರವಿಸಿ – ಎತ್ತಾಡಿಸಿದವರನ್ನು ಆದರಿಸಿ

ಬಿಸಿ ರಕ್ತದ ಯುವಕ ಯುವತಿಯರಲ್ಲಿ ಕಳಕಳಿಯ ಮನವಿ ಯಾರನ್ನಾದರೂ ಪ್ರೀತಿಸಿ, ಯಾರನ್ನಾದರೂ ಮದುವೆಯಾಗಿ ಸಂಸಾರ ನಡೆಸಿ. ಆದರೆ ನಿಮ್ಮನ್ನು ಹೆತ್ತವರ, ನೆಮ್ಮದಿಯ ಸಮಾಧಿಯ ಮೇಲೆ ಮಾತ್ರ ನಿಮ್ಮ ಪ್ರೀತಿಯ ಮಹಲ್ ಕಟ್ಟಬೇಡಿ. ಆ ಮಹಲ್ ಐಶಾರಾಮಿಯಾಗಿರಬಹುದು ಆದರೆ ಬಂಧಗಳಿಲ್ಲದೆ ಬರಡಾಗಿರುತ್ತದೆ. ಹೆತ್ತವರ ಸುಡುವ ನಿಟ್ಟುಸಿರು ನಿಮ್ಮನ್ನು ಎಂದಿಗೂ ದಹಿಸದೆ ಬಿಡುವುದಿಲ್ಲ. ಇದು ಶಾಪ ಅಲ್ಲ ಕಟು ಸತ್ಯ. ಎಲ್ಲರೂ ಅರಿಯಬೇಕಾದ ಒಂದು ವಿಷಯ ಅಂದ್ರೆ ಎಲ್ಲಾ ತಂದೆ ತಾಯಿಯಂದಿರಿಗೆ (ಕೆಲ ಅಪರೂಪದ ಪ್ರಕರಣಗಳನ್ನು ಹೊರತುಪಡಿಸಿ ) ಎಲ್ಲಕ್ಕಿಂತ ಹೆಚ್ಚಾಗಿ ತಮ್ಮ ಮಕ್ಕಳ ಹಿತ ಮುಖ್ಯವಾಗಿರುತ್ತದೆಯೇ ಹೊರತು ಬೇರೆ ಏನು ಅಲ್ಲ. ಮಕ್ಕಳ ಹಿತಕ್ಕಾಗಿ ತಮ್ಮ ಎಲ್ಲಾ ಸುಖವನ್ನು ಒತ್ತೆಯಿಡುವ ಬಡಪಾಯಿಗಳು ಕೊನೆಗೆ ಹುಚ್ಚು ಮಕ್ಕಳ ನಿರ್ಧಾರದ ಮುಂದೆ ಮಂಡಿಯೂರಲೇಬೇಕಾದ ಅನಿವಾರ್ಯ ಪರಿಸ್ಥಿತಿ ಬರುತ್ತದೆ ಅನ್ನೋದು ಗೊತ್ತಿದ್ದರೂ ತಮ್ಮ ಅಷ್ಟು ದಿನದ ಶ್ರಮ, ಪ್ರೀತಿ, ಕಾಳಜಿ ಗಾಳಿಗೆ ತೂರಿ ಹೋಗಲಿದೆ ಅನ್ನೋ ಅರಿವಿದ್ದರೂ ಅಷ್ಟು ದಿನ‌ ಕಾಪಾಡಿಕೊಂಡು ಬಂದಿದ್ದ ತಮ್ಮ ಸರ್ವಸ್ವವೂ ನಶಿಸಿ‌ ಹೋಗಲಿದೆ ಅನ್ನೋದು ತಿಳಿದಿದ್ದರೂ ಅವೆಲ್ಲವನ್ನೂ ಲೆಕ್ಕಿಸದೆ ನಿಮ್ಮ ನಿರ್ಧಾರದ ವಿರುದ್ದ ಹೋರಾಡುವ ವಿಫಲ ಯತ್ನ ನಡೆಸುವುದು ನಿಮ್ಮ ಭವ್ಯ, ಭವಿಷ್ಯಕ್ಕಾಗಿ ಅನ್ನೋದನ್ನು ಪ್ರೀತಿಗಾಗಿ ಪೋಷಕರ ವಿರುದ್ದ ಸೆಟೆದು ನಿಲ್ಲುವ ಪ್ರತಿಯೊಬ್ಬರು ಅರಿಯಲೇ ಬೇಕು.

ಪ್ರೀತಿಯ ಗೊಂದಲಕ್ಕೆ ಸಿಲುಕಿ ಪ್ರಾಣ ಬಿಟ್ಟ ನಂಜನಗೂಡಿನ 17ರ ಬಾಲೆ

ನಾನು ನನ್ನ 22 ವರ್ಷದ ಮಾಧ್ಯಮದ ಪಯಣ ಹಾಗೂ ಟಿವಿ9ನ ಇಷ್ಟು ವರ್ಷದ ಕೆಲಸದಲ್ಲಿ ಅದೆಷ್ಟೋ ಪ್ರೀತಿ, ಪ್ರೇಮದ ಸ್ಟೋರಿಗಳನ್ನು ಮಾಡಿದ್ದೇನೆ. ಪ್ರೀತಿಯಿಂದ ಮೋಸ ಹೋದ ಕಥೆಗಳನ್ನ ಬಿಚ್ಚಿಟ್ಟಿದ್ದೇನೆ. ಪೋಷಕರನ್ನು ವಿರೋಧಿಸಿ ಮದುವೆಯಾಗಿ ಬದುಕಿದ ಹಾಗೂ ಬೇರೆಯಾದ ಜೋಡಿಗಳನ್ನು ಕಂಡಿದ್ದೇನೆ. ಆದರೆ ನಂಜನಗೂಡಿನ 17ರ ಸುಂದರ ಬಾಲೆ ಪ್ರೀತಿಯೆಂಬ ಮಾಯಾಜಾಲದಲ್ಲಿ ಸಿಲುಕಿ ಅನುಭವಿಸಿದ ನೋವು, ಹಿಂಸೆ, ತೊಳಲಾಟ, ವೇದನೆ ಕಣ್ಣೀರು ಕೊನೆಗೆ ಆಕೆಯ ಸಾವು, ಇದು ನನ್ನನ್ನು ಬಹುವಾಗಿ ಬಾಧಿಸಿತು. ಅದಕ್ಕೂ ಮಿಗಿಲಾಗಿ ಕ್ಯಾಮೆರಾ ಮುಂದೆ ನಿಂತು ತಮ್ಮ ಮಗಳ ಕಥೆ ಹೇಳಿದ ಆ ಬಾಲೆಯ ತಂದೆಯ ಸ್ಥಿತಿ ನನ್ನನ್ನು ಬಹುವಾಗಿ ಕಾಡಿತು. ನಾನು ಒಬ್ಬ ಹೆಣ್ಣು ಮಗಳ ತಂದೆ ಅಂತಾ ಆ ರೀತಿ ಆಯ್ತೋ ಅಥವಾ ಎಲ್ಲರಿಗೂ ಅದೇ ರೀತಿ ಆಗುತ್ತೋ ಗೊತ್ತಿಲ್ಲ. ಆದ್ರೆ ಈಗಲೂ ಆ ತಂದೆಯ ನೋವು, ಅಸಹಾಯಕತೆ, ಅವರ ಕಣ್ಣೀರು ತುಂಬಿದ ಆ ಕಣ್ಣುಗಳು ನನ್ನ‌ ಕಣ್ಮುಂದೆ ಬರುತ್ತದೆ.

ಘಟನೆಯ ವಿವರ

ಅದು ಮಧ್ಯಮ ವರ್ಗದ ಕುಟುಂಬ. ಇಬ್ಬರು ಮುದ್ದಾದ ಹೆಣ್ಣು ಮಕ್ಕಳು. ಯಾವುದಕ್ಕೆ ಕೊರತೆಯಿದ್ದರು ಅಲ್ಲಿ ಪ್ರೀತಿ, ಮಮತೆ, ಕಾಳಜಿಗೆ ಕೊರತೆಯಿರಲಿಲ್ಲ. ಸುಂದರ, ಸರಳ ಕುಟುಂಬ. ದೊಡ್ಡ ಮಗಳಿಗೆ 20 ವರ್ಷ . ಚಿಕ್ಕವಳಿಗೆ 17 ವರ್ಷ. ಎಲ್ಲವೂ ಚೆನ್ನಾಗಿಯೇ ಇತ್ತು. ಆದ್ರೆ ಅದೇನೋ ಅಂತಾರಲ್ಲ ಎಲ್ಲವೂ ಚೆನ್ನಾಗಿದ್ದು, ಎಲ್ಲವೂ ನಾವು ಅಂದುಕೊಂಡಂತೆ ಆದರೆ ಅದು ಜೀವನವೇ ಅಲ್ಲ. ಈ ಸುಂದರ ಕುಟಂಬದಲ್ಲೂ ಆಗಿದ್ದು ಅದೇ. ಆ ಕುಟಂಬದ ಮೇಲೆ ಅದ್ಯಾವ ಪಾಪಿಗಳ ಕಣ್ಣು ಬಿತ್ತೋ ? ಅದ್ಯಾವ ಮಾಟಗಾತಿಯ ದೃಷ್ಟಿಗೆ ಆ ಮುದ್ದಾದ ಹೆಣ್ಣು ಮಕ್ಕಳು ಸಿಲುಕಿದ್ರೋ ಗೊತ್ತಿಲ್ಲ. ನೆಮ್ಮದಿಯ ಕೊಳದಲ್ಲಿ ಪ್ರೀತಿಯೆಂಬ ಬರ ಸಿಡಿಲು ಬಡಿದು ಆತಂಕದ ತರಂಗಗಳು ಎದ್ದಿದ್ದವು. ಕೊಳವನ್ನು ತಿಳಿಗೊಳಿಸಲು ಪಾಪ ಆ ಅಪ್ಪ ಅಮ್ಮ ನಡೆಸಿದ ಪ್ರಯತ್ನಗಳೆಲ್ಲಾ ವಿಫಲವಾಗಿ ಹೋದವು. ಕೊಳದಲ್ಲಿ ಎದ್ದ ಪ್ರೀತಿಯ ತರಂಗ ಸುಳಿಯಾಗಿ ಮ‌ನೆಯ ನಂದಾದೀಪವನ್ನೇ ಆರಿಸಿಬಿಟ್ಟಿತು. ಇಬ್ಬರು ಹೆಣ್ಣು ಮಕ್ಕಳಲ್ಲಿ 17 ವರ್ಷದ ಕಿರಿಯ ಮಗಳು‌ ಪ್ರೀತಿಯೆಂಬ ಮಾಯಾ ಜಾಲಕ್ಕೆ ಸಿಲುಕಿ ಬಿಟ್ಟಳು. ಓದುವ ವಯಸ್ಸಿ‌ನಲ್ಲಿ ಕಾಲು ಜಾರಿ ಪ್ರೀತಿಯ ಸಾಗರಕ್ಕೆ ಬಿದ್ದು ಬಿಟ್ಟಿದ್ದಳು. ಏನು ಅರಿಯದ ಕಂದಮ್ಮಳ ಪರಿಸ್ಥಿತಿ ಕಂಡ ಅಪ್ಪ ಅಮ್ಮ ಸಹಜವಾಗಿ ಆಕೆಗೆ ಅರ್ಥ ಮಾಡಿಸಲು ಮುಂದಾದರೂ, ಆದರೆ ಯಾವುದೇ ಪ್ರಯೋಜನವಾಗಲಿಲ್ಲ. ಬೆದರಿಸಿ, ಹೆದರಿಸಿದರು‌. ಅತ್ತು ಕರೆದು ಅಲವತ್ತುಕೊಂಡರು, ಹೂ‌… ಹೂಂ ಅಪ್ಪ, ಅಮ್ಮನ ಮಾತು ಮಗಳ ಮನಸಿಗೆ ತಲುಪಲೇ ಇಲ್ಲ. ತನ್ನ ಪ್ರೀತಿಯಲ್ಲಿ ಕಿವುಡಾಗಿದ್ದ ಆಕೆಗೆ ಅಪ್ಪನ ಕಾಳಜಿಯ ಕೂಗು ಕೇಳಿಸಲಿಲ್ಲ. ಪ್ರೀತಿಯಲ್ಲಿ ಕುರುಡಾಗಿದ್ದ ಆಕೆಗೆ ತನ್ನ ಬಗ್ಗೆಯೇ ಚಿಂತಿಸಿ ಮುಖದಲ್ಲಿ ಮೂಡಿದ್ದ ಅಮ್ಮನ ಆತಂಕದ ಗೆರೆಗಳು ಕಾಣಿಸಲೇ ಇಲ್ಲ. ಪ್ರೀತಿಯೇ ಸರ್ವಸ್ವ ಅಂದುಕೊಂಡವಳು ಅದಕ್ಕಾಗಿ ತನ್ನ ಪ್ರಾಣವನ್ನೇ ಸಮರ್ಪಿಸಿಬಿಟ್ಟಳು. ತನ್ನ ಮ‌ನೆಯಲ್ಲಿ ನೇಣಿಗೆ ಕೊರಳಡ್ಡಿ ಇಹಲೋಕ ತ್ಯಜಿಸಿದಳು.

17ರ ಬಾಲೆ ಪ್ರೀತಿಯ ಗೊಂದಲ‌, ಅಪ್ಪ ಅಮ್ಮನ ಗೋಳಾಟ – ಪ್ರೀತಿಸಿದವನ ತೊಳಲಾಟ

ಎಸ್ ಆಕೆಯೇನೋ ಪ್ರೀತಿ ಸಿಗದ ಕಾರಣಕ್ಕೆ ಸತ್ತು ಹೋದಳು. ಆದ್ರೆ ಬದುಕಿರುವ ತಂದೆ ತಾಯಿಯನ್ನು ಜೀವಂತ ಶವವಾಗಿಸಿ ಹೊರಟು ಹೋದಳು. ಹೌದು ಪ್ರೀತಿಯ ಪುತ್ರಿಯನ್ನು ಕಳೆದುಕೊಂಡ ಅಪ್ಪ ಅಮ್ಮ ಅಕ್ಷರಶಃ ಜೀವಂತ ಹೆಣವಾಗಿದ್ದಾರೆ. ಆಕೆಯ ಬಗ್ಗೆ ಮಾತನಾಡಿದರೂ ಅವರ ದುಃಖ ಉಮ್ಮಳಿಸಿ ಬರುತ್ತಿದೆ. ಅದರಲ್ಲೂ ಆಕೆಯ ಅಪ್ಪನ ಸ್ಥಿತಿ ಆ ದೇವರಿಗೆ ಪ್ರೀತಿ. ನನ್ನ ಮಗಳು….. ಅಂದವರ ಗಂಟಲು ಉಬ್ಬಿತು, ಕಣ್ಣುಗಳಲ್ಲಿ ಗಳ ಗಳ ನೀರು ಸುರಿಯಿತು. ಅಷ್ಟೇ ನನಗೂ ಮುಂದೆ ಏನು ಕೇಳಬೇಕು ಅನಿಸಲಿಲ್ಲ. ಆದ್ರೆ ಒಂದಂತೂ ಅರ್ಥವಾಗಿತ್ತು. ಆತ್ಮಹತ್ಯೆಗೆ ಶರಣಾದ ಮಗಳಿಗಿಂತ, ಅಪ್ಪ ಅಮ್ಮನ ಪರಿಸ್ಥಿತಿ ನರಕ ಸದೃಶ್ಯವಾಗಿತ್ತು. ಇನ್ನು ನನ್ನನ್ನು ಬಹುವಾಗಿ ಕಾಡಿದ್ದು ಆಕೆ ಆತ್ಮಹತ್ಯೆಗೂ ಮು‌ನ್ನ ತಾನು ಪ್ರೀತಿಸಿದ ಯುವಕನ ಜೊತೆ ಮೊಬೈಲ್‌ನಲ್ಲಿ ಆಡಿದ ಕೊನೆಯ ಮಾತುಗಳು. ಆ ಆಡಿಯೋವನ್ನು ಆ ಹುಡುಗನೇ ಬಿಡುಗಡೆ ಮಾಡಿದ್ದ ಜೊತೆಗೆ ಅವರಿಬ್ಬರ ಒಂದಷ್ಟು ಖಾಸಗಿ ಪೋಟೋಗಳು ಮತ್ತು ವಿಡಿಯೋ ಮೂಲಕ ತನ್ನ ತಪ್ಪಿಲ್ಲ ಅನ್ನೋ ಸ್ಪಷ್ಟನೆ. ಬಾಲೆಯ ಆ ಮಾತುಗಳಲ್ಲಿ ಆತಂಕವಿತ್ತು, ನೋವಿತ್ತು, ಮುಂದೆನೂ ಎಂಬ ಭಯವಿತ್ತು. ಅದು ಸಹಜ. ಆದ್ರೆ ಆಕೆಯ ಮಾತುಗಳಲ್ಲಿ ಸ್ಪಷ್ಟವಾದ ಗೊಂದಲವಿತ್ತು. ತಾನು ಏನು ಮಾಡುತ್ತಿದ್ದೇನೆ ಎಂಬ ಅರಿವು ಆಕೆಗೆ ಇರಲಿಲ್ಲ ಅನ್ನೋದು ಆಕೆಯ ಮಾತುಗಳು ಸಾರಿ ಸಾರಿ ಹೇಳುತ್ತಿದ್ದವು. 17 ವರ್ಷದ ಬಾಲೆಗೆ ಅದು ಸಹಜ ಕೂಡಾ. ಓದುವ ವಯಸ್ಸಲ್ಲಿ ಪ್ರೀತಿ ಪ್ರೇಮ ಅನ್ನೋ ಭ್ರಮೆಗೆ ಸಿಲುಕಿದ ಬಾಲೆ ಪ್ರಾಣವನ್ನೇ ಕಳೆದುಕೊಂಡಿದ್ದಳು.

ಕೊನೆ ಮಾತು

ಇಲ್ಲಿ ತಪ್ಪು ಯಾರದು ಅನ್ನುವುದು ಮುಖ್ಯವಲ್ಲ. ನಮ್ಮ ಯುವ ಪೀಳಿಗೆ ಎತ್ತ ಸಾಗುತ್ತಿದೆ ಅನ್ನೋದು ಮುಖ್ಯ. ಪ್ರೀತಿಸುವುದು ತಪ್ಪಲ್ಲ ಆದ್ರೆ ವಯಸ್ಸಲ್ಲದ ವಯಸ್ಸಲ್ಲಿ ಪ್ರೀತಿಸುವುದು, ಅಮೂಲ್ಯ ಜೀವನ ಬಲಿ ಕೊಟ್ಟು ಪ್ರೀತಿಸುವುದು, ಮಕ್ಕಳೇ ಪ್ರಾಣ ಅಂದುಕೊಂಡು ಎಲ್ಲವನ್ನೂ ತ್ಯಾಗ ಮಾಡಿ ಸಾಕಿದ ಅಪ್ಪ ಅಮ್ಮನ ಮನಸು ನೋಯಿಸಿ ಪ್ರೀತಿಸುವುದು ಖಂಡಿತಾ ತಪ್ಪೇ. ಯಾಕಂದ್ರೆ ಅಷ್ಟೇಲ್ಲಾ ಹೊಡೆದಾಡಿ, ಬಡಿದಾಡಿ, ಹೋರಾಡಿ, ಸಾಧಿಸಿ, ಹಠ ಹಿಡಿದು ಮದುವೆಯಾದವರು ಮುಂದೆ ಹೇಗಾದರೂ ಅನ್ನೋ ಉದಾಹರಣೆ ಎಲ್ಲರ ಕಣ್ಣ ಮುಂದಿದೆ. ಅಷ್ಟಕ್ಕೆ ಇಷ್ಟೆಲ್ಲಾ ಬೇಕಾ ? ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕಿದೆ. ಜೀವನದಲ್ಲಿ ಒಂದಂತೂ ಸತ್ಯ ಎಲ್ಲಕ್ಕಿಂತ ಮುಖ್ಯ ಜೀವನ. ಆ ಕ್ಷಣಕ್ಕಾಗಿ ಅಮೂಲ್ಯ ಜೀವವನ್ನು ಬಲಿ ಕೊಡಬಾರದು. ಇನ್ನು ಈ ಘಟನೆಯಲ್ಲಿ ಮತ್ತೊಂದು ಪ್ರಮುಖವಾಗಿ ನಾನು ಹೇಳಲೆ ಬೇಕಾಗಿರುವುದು. ಬಾಲೆ ತನ್ನ ಬದುಕು ಕೊನೆಗಾಣಿಸಿಕೊಂಡಿದ್ದರಿಂದ ಸಮಸ್ಯೆ ಬಗೆಹರಿಯಲಿಲ್ಲ. ಬದಲಾಗಿ ಅದು ಬದುಕಿದವರ ನೆಮ್ಮದಿ ಹಾಳು ಮಾಡಿತು. ತಾನು ಯಾರ ಜೊತೆ ಬಾಳಿ ಬದುಕಬೇಕೆಂದು ಬಯಸಿದ್ದಳೋ ಯಾರಿಗಾಗಿ ಪ್ರಾಣವನ್ನೇ ಆಹುತಿ ಮಾಡಿಕೊಂಡಳೋ ಆತ ಆಕೆಯ ಸಾವಿಗೆ ಕಾರಣನಾದ ಹೊಣೆ ಹೊತ್ತಿದ್ದಾನೆ. ಮನೆಯ ನಂದಾದೀಪವಾಗಿ ಬೆಳಗಿದ ಅಪ್ಪ ಅಮ್ಮನಿಗೆ ತಾವೇ ತಮ್ಮ ಮನೆಯ ನಂದಾದೀಪ ಆರಲು ಕಾರಣವಾದೆವಾ ? ಅನ್ನೋ ಚಿಂತೆ ಬಿಡದೆ ಕಾಡುತ್ತಿದೆ. ಹೀಗಾಗಿ ಯುವ ಹೃದಯಗಳೇ, ಪ್ರೀತಿಸುವ ಮುನ್ನ ಯೋಚಿಸಿ. ಪ್ರೀತಿಸಿದ ನಂತರ ಪ್ರೀತಿಗಾಗಿ ಪ್ರಯತ್ನಿಸಿ. ಆಗಲಿಲ್ಲವಾ ನಿಮಗಾಗಿ ಜೀವಿಸಿ. ಯಾಕಂದ್ರೆ ಬದುಕು ದೊಡ್ಡದು. ಪ್ರಿಯ ಪೋಷಕರೇ ಮಕ್ಕಳ ಪ್ರೀತಿ ಗೌರವಿಸಿ, ಸರಿಯಿಲ್ಲವಾ ? ಅವರಿಗೆ ತಿಳಿಸಿ, ಮನದಟ್ಟು ಮಾಡಲು ಪ್ರಯತ್ನಿಸಿ. ಆಗಲಿಲ್ಲವಾ ? ಪ್ರೀತಿಸಿದವನ ಜೊತೆ ಕಳುಹಿಸಿ. ಈ ಮೂಲಕ ಅಮೂಲ್ಯ ಜೀವಗಳ ಉಳಿಸಿ.

Source link