ಕರ್ನಾಟಕದಲ್ಲಿ ಮದ್ಯದ ಕಿಕ್: 13 ವರ್ಷದ ದಾಖಲೆ ಉಡೀಸ್, ಸರ್ಕಾರಕ್ಕೆ ಬಂದ ಆದಾಯ ಎಷ್ಟು ಗೊತ್ತಾ? – Kannada News | Karnataka Liquor Sales Surge: April Breaks 13 Year Record, Revenue Hits Rs 3,688 Crore
ಬೆಂಗಳೂರು, (ಮೇ 07): ಕರ್ನಾಟಕದಲ್ಲಿ (Karnataka) ಏಪ್ರಿಲ್ ತಿಂಗಳ ಮದ್ಯ ಮಾರಾಟದಲ್ಲಿ (Liquor Sales) ರಾಜ್ಯ ಅಬಕಾರಿ ಇಲಾಖೆ ಹೊಸ ಇತಿಹಾಸ ಬರೆದಿದೆ. ಕಳೆದ ತಿಂಗಳ ವ್ಯಾಪಾರದಿಂದ ಬರೋಬ್ಬರಿ ರಾಜ್ಯ ಸರ್ಕಾರಕ್ಕೆ ಮೂರು ಸಾವಿರ ಕೋಟಿ ಆದಾಯ ಬಂದಿದೆ. ಈ ಮೂಲಕ ಅಬಕಾರಿ ಇಲಾಖೆಯ ಕಳೆದ 13 ವರ್ಷಗಳ ಇತಿಹಾಸದಲ್ಲೇ ತಿಂಗಳೊಂದರಲ್ಲಿ ಇಷ್ಟೊಂದು ಭಾರಿ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿರುವುದು ಇದೇ ಮೊದಲು. ವಿಸ್ಕಿ, ಬ್ರಾಂಡಿ, ರಮ್, ಜಿನ್ ಸೇರಿ ಏಪ್ರಿಲ್ನಲ್ಲಿ ದಾಖಲೆಯ 68.17 ಲಕ್ಷ ಬಾಕ್ಸ್ ಮಾರಾಟವಾಗಿದ್ದು,…