ಮೊದಲು ಮಾತಾಡ್ಸಿದ್ರು, ಆಮೇಲೆ ನೀರು, ಫೋನ್ ಕೊಟ್ರು ,ಸೇತುವೆಯಿಂದ ಹಾರಲು ಹೊರಟವನ ಪೊಲೀಸ್ ತಡೆದಿದ್ಹೇಗೆ? – Kannada News | Delhi Police Officer’s Calm Approach Helps Avert Tragedy at Mahipalpur Flyover
ನವದೆಹಲಿ, ಜೂನ್ 17: ಸೇತುವೆಯಿಂದ ಕೆಳಗೆ ಹಾರಲು ಹೊರಟ ವ್ಯಕ್ತಿಯನ್ನು ಮೊದಲು ಶಾಂತವಾಗಿ ಮಾತನಾಡಿಸಿದ್ರು, ಆಮೇಲೆ ಕುಡಿಯಲು ನೀರು ಕೊಟ್ರು, ಮಾತನಾಡಲು ಫೋನ್ ಕೂಡ ಕೊಟ್ರು ಆತನ ಗಮನ ಬೇರೆಡೆಗೆ ತಿರುತ್ತಿದ್ದಂತೆ ಆತನನ್ನು ಕೆಳಗೆ ಇಳಿಸುವಲ್ಲಿ ಪೊಲೀಸ್(Police) ಅಧಿಕಾರಿ ಯಶಸ್ವಿಯಾಗಿದ್ದಾರೆ. ದೆಹಲಿಯ ಮಹಿಪಾಲಪುರ ಫ್ಲೈಓವರ್ ಮೇಲೆ ನಡೆದ ಈ ರೋಮಾಂಚಕ ರಕ್ಷಣಾ ಕಾರ್ಯಾಚರಣೆಯ ವಿಡಿಯೋವನ್ನು ದೆಹಲಿ ಪೊಲೀಸರು ತಮ್ಮ ಅಧಿಕೃತ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಯುವಕನೊಬ್ಬ ಮಹಿಪಾಲಪುರ ಫ್ಲೈಓವರ್‌ನ ಅತ್ಯಂತ…