Category Archives: Blog

Your blog category

ರಣರೋಚಕ ಪಂದ್ಯದ ಸೋಲಿಗೆ ಕಾರಣ ಬಿಚ್ಚಿಟ್ಟ ನಾಯಕ ರಶೀದ್ ಖಾನ್!

ರಣರೋಚಕ ಪಂದ್ಯದ ಸೋಲಿಗೆ ಕಾರಣ ಬಿಚ್ಚಿಟ್ಟ ನಾಯಕ ರಶೀದ್ ಖಾನ್!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 9ನೇ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ತಂಡ ರೋಚಕ ಜಯ ಸಾಧಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 20 ಓವರ್​ಗಳಲ್ಲಿ 210 ರನ್ ಕಲೆಹಾಕಿದ್ದರು. ಈ ಗುರಿಯನ್ನು ಬೆನ್ನತ್ತಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್​ಗಳಲ್ಲಿ 204 ರನ್​ಗಳಿಸಿ 6 ರನ್​ಗಳಿಂದ ಸೋಲೊಪ್ಪಿಕೊಂಡಿದ್ದರು.

ಈ ಸೋಲಿನ ಬಳಿಕ ಮಾತನಾಡಿದ ಗುಜರಾತ್ ಟೈಟಾನ್ಸ್ ತಂಡದ ಹಂಗಾಮಿ ನಾಯಕ ರಶೀದ್ ಖಾನ್,  ತಂಡದ ಪ್ರದರ್ಶನಕ್ಕೆ ಮೆಚ್ಚುಗೆಗಳನ್ನು ವ್ಯಕ್ತಪಡಿಸಿದ್ದಾರೆ. ಅಷ್ಟೇ ಅಲ್ಲದೆ ಸೋಲಿಗೆ ಕಾರಣವಾದ ಅಂಶಗಳ ಮುಂದಿಟ್ಟಿದ್ದಾರೆ.

ಬೌಲರ್‌ಗಳ ಶ್ರಮಕ್ಕೆ ಮೆಚ್ಚುಗೆ:

ಮೊದಲು ಬ್ಯಾಟಿಂಗ್ ಮಾಡಿದ ಎದುರಾಳಿ ತಂಡವನ್ನು 210 ರನ್‌ಗಳ ಒಳಗೆ ನಿಯಂತ್ರಿಸಿದ್ದು ಬೌಲರ್‌ಗಳ ದೊಡ್ಡ ಸಾಧನೆ. ಈ ಪಿಚ್‌ನಲ್ಲಿ ಆ ಮೊತ್ತವನ್ನು ಬೆನ್ನಟ್ಟುವುದು ಕಷ್ಟವಿರಲಿಲ್ಲ. ಇದಾಗ್ಯೂ ನಾವು ವಿಫಲವಾದೆವು ಎಂದು ರಶೀದ್ ಖಾನ್ ಹೇಳಿದ್ದಾರೆ.

ತಿರುವು ನೀಡಿದ ಆ ಎರಡು ಓವರ್‌ಗಳು:

ಬ್ಯಾಟಿಂಗ್‌ನಲ್ಲಿ ಆರಂಭಿಕರು ಉತ್ತಮ ಅಡಿಪಾಯ ಹಾಕಿಕೊಟ್ಟಿದ್ದರು. ಆದರೆ, ಪಂದ್ಯದ 12 ಮತ್ತು 13ನೇ ಓವರ್‌ಗಳಲ್ಲಿ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿದ್ದು ತಂಡಕ್ಕೆ ದೊಡ್ಡ ಹೊಡೆತ ನೀಡಿತು. “ಆ ಸಮಯದಲ್ಲಿ ನಾವು ಪಂದ್ಯದ ಮೇಲಿನ ಹಿಡಿತವನ್ನು ಕಳೆದುಕೊಂಡೆವು. ವಿಕೆಟ್ ಬೀಳದಿದ್ದರೆ ಪ್ರತಿ ಓವರ್‌ಗೆ 9-10 ರನ್ ಗಳಿಸುವುದು ಈ ಪಿಚ್‌ನಲ್ಲಿ ದೊಡ್ಡ ವಿಷಯವಾಗಿರಲಿಲ್ಲ” ಎಂದು ರಶೀದ್ ಖಾನ್ ಅಭಿಪ್ರಾಯಪಟ್ಟಿದ್ದಾರೆ.

ಕೊನೆಯ ಓವರ್‌ನ ರೋಚಕತೆ:

ಕೊನೆಯ ಓವರ್‌ನಲ್ಲಿ ಕೇವಲ ಒಂದು ಬೌಂಡರಿ ಅಗತ್ಯವಿತ್ತು. ಎದುರಾಳಿ ಬೌಲರ್ ತುಷಾರ್ ದೇಶಪಾಂಡೆ ಅವರ ಅದ್ಭುತ ಯಾರ್ಕರ್ ಎಸೆತಗಳನ್ನು ರಶೀದ್ ಶ್ಲಾಘಿಸಿದರು. ಆದರೂ, ಬೌಲರ್ ಲಯ ತಪ್ಪಿದ ಒಂದು ಎಸೆತವನ್ನು ಸಿಕ್ಸರ್‌ಗೆ ಅಟ್ಟಲು ತಮಗೆ ಸಾಧ್ಯವಾಗಲಿಲ್ಲ. ಅಂತಿಮ ಎರಡು 2 ಓವರ್​ಗಳಲ್ಲಿ ಬೌಂಡರಿಗಳು ಬರದಿರುವುದು ನಮ್ಮ ಸೋಲಿಗೆ ಕಾರಣವಾಯಿತು ಎಂದು ರಶೀದ್ ಖಾನ್ ಹೇಳಿದ್ದಾರೆ.

ಶುಭ್​ಮನ್ ಗಿಲ್ ಬಗ್ಗೆ ಅಪ್‌ಡೇಟ್:

ಇದೇ ವೇಳೆ ಗುಜರಾತ್ ಟೈಟಾನ್ಸ್ ತಂಡದ ನಾಯಕ ಶುಭ್​ಮನ್ ಗಿಲ್ ಅವರ ಫಿಟ್​ನೆಸ್ ಬಗ್ಗೆ ಅಪ್​ಡೇಟ್ ನೀಡಿದ ರಶೀದ್ ಖಾನ್,  “ಗಿಲ್ ಅವರಿಗೆ ಸ್ನಾಯು ಸೆಳೆತ (muscle spasm) ಉಂಟಾಗಿತ್ತು. ಅವರು ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಮುಂದಿನ ಪಂದ್ಯದ ವೇಳೆಗೆ ತಂಡಕ್ಕೆ ಮರಳುವ ವಿಶ್ವಾಸವಿದೆ” ಎಂದರು.

ಇದನ್ನೂ ಓದಿ: ಇಬ್ಬರು ನಾಯಕರುಗಳು ಕಣಕ್ಕಿಳಿಯದಿರಲು ಇದುವೇ ಕಾರಣ..!

ಮುಂದಿನ ಪಂದ್ಯಕ್ಕೆ ಸಿದ್ಧತೆ:

ಈ  ಸೋಲಿನಿಂದ ಗುಜರಾತ್ ಟೈಟಾನ್ಸ್ ಕಂಗೆಟ್ಟಿಲ್ಲ. ಇದೊಂದು ದೀರ್ಘಾವಧಿಯ ಟೂರ್ನಿಯಾಗಿದ್ದು, ಮಾಡಿದ ತಪ್ಪುಗಳಿಂದ ಪಾಠ ಕಲಿಯುತ್ತೇವೆ ಮತ್ತು ಮುಂದಿನ ಪಂದ್ಯದಲ್ಲಿ ಬಲಿಷ್ಠವಾಗಿ ಮರಳುತ್ತೇವೆ ಎಂಬ ಭರವಸೆಯನ್ನು ರಶೀದ್ ಖಾನ್ ಅಭಿಮಾನಿಗಳಿಗೆ ನೀಡಿದ್ದಾರೆ.

 

Source link

ಕರ್ನಾಟಕ ಹವಾಮಾನ ವರದಿ: ಇಂದು ಹಲವೆಡೆ ಮಳೆ; 21 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​!

ಬೆಂಗಳೂರು, ಏಪ್ರಿಲ್ 05: ಹಲವು ದಿನಗಳಲ್ಲಿ ರಾಜ್ಯದ ಹಲವು ಭಾಗಗಳಲ್ಲಿ ಮಳೆಯಾರ್ಭಟ (Weather Forecast)  ಕಾಣಸಿಗುತ್ತಿದೆ. ಅಂತೆಯೇ ಇಂದೂ ಸಹ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದ್ದು, 21 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಿದೆ. ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣವಿದ್ದು, ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

ಯಾವೆಲ್ಲಾ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​? ​

ಬೀದರ್, ಕಲಬುರ್ಗಿ, ವಿಜಯಪುರ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ, ಶಿವಮೊಗ್ಗ, ಉಡುಪಿ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಹಾಸನ, ಕೊಡಗು, ತುಮಕೂರು, ಮಂಡ್ಯ, ರಾಮನಗರ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಆದ್ದರಿಂದ ಈ 21 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್​ ಸೂಚಿಸಲಾಗಿದೆ.

ಇದನ್ನೂ ಓದಿ 1,2,3,4,5,6,7 ಈ ದಿನದಂದು ಮಧ್ಯಾಹ್ನದ ನಂತರ ಬರಲಿದೆ ಗುಡುಗು ಸಹಿತ ಮಳೆ; ಎಲ್ಲೆಲ್ಲಿ ಮಳೆಯಾಗಬಹುದು?

ಎಲ್ಲೆಲ್ಲಿ ಮಳೆ

ಉತ್ತರ ಒಳನಾಡಿನ ಬೀದರ್, ಕಲ್ಬುರ್ಗಿ, ಕೊಪ್ಪಳ, ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಒಳನಾಡಿನಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ಕೋಲಾರ, ಚಿಕ್ಕಮಗಳೂರು, ಶಿವಮೊಗ್ಗ, ಹಾಸನ, ಕೊಡಗು, ತುಮಕೂರು ಮತ್ತು ವಿಜಯನಗರದಲ್ಲಿ 30-40 ಕೀ.ಮಿ/ಗಂ ವೇಗದಲ್ಲಿ ಗಾಳಿ ಮಳೆ ಜೋರಾಗಿರಲಿದೆ. ಉಳಿದೆಡೆ ಒಣ ಹವೆಯ ವಾತಾವರಣವಿರಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಬಾಗಲಕೋಟೆ ಉಪಚುನಾವಣೆ: ಬಿಜೆಪಿ ಅಭ್ಯರ್ಥಿ ವಿರುದ್ಧ NSUI ಅಪಪ್ರಚಾರ ಆರೋಪ

ಬಾಗಲಕೋಟೆ, ಏಪ್ರಿಲ್​​ 05: ಉಪ ಚುನಾವಣಾ ಕಣ ರಂಗೇರಿದ್ದು, ಬಾಗಲಕೋಟೆಯಲ್ಲಿ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾ (NSUI) ಸಂಘಟನೆಯು ಬಿಜೆಪಿ ಅಭ್ಯರ್ಥಿ ವಿರುದ್ಧ ಅಪಪ್ರಚಾರ ನಡೆಸಿದೆ ಎಂಬ ಗಂಭೀರ ಆರೋಪವನ್ನು ಎದುರಿಸುತ್ತಿದೆ. ಕ್ಯಾಂಪಸ್ ಒಂದಕ್ಕೆ ಪ್ರವೇಶಿಸಿದ NSUI ಕಾರ್ಯಕರ್ತರು, ಆಕ್ಷೇಪಾರ್ಹ ಕರಪತ್ರಗಳನ್ನು ವಿತರಿಸುವ ಮೂಲಕ ಅಪಪ್ರಚಾರ ನಡೆಸಿದ್ದಾರೆ. 18 NSUI ಸದಸ್ಯರು ಕೇಸರಿ ಶಾಲುಗಳನ್ನು ಧರಿಸಿ ಕ್ಯಾಂಪಸ್ ಪ್ರವೇಶಿಸಿದ್ದು, ಅವರು ಬಿಜೆಪಿ ಅಭ್ಯರ್ಥಿಯನ್ನು ಗುರಿಯಾಗಿಸಿಕೊಂಡು ಆಪಾದಿತ ಅಪಪ್ರಚಾರದ ಕರಪತ್ರಗಳನ್ನು ಹಂಚಿದ್ದಾರೆ ಎಂದು ದೂರಲಾಗಿದೆ. ಈ ಘಟನೆಗೆ ಸಂಬಂಧಿಸಿದಂತೆ ಸಿಕ್ಕಿಬಿದ್ದ ಒಬ್ಬ ವ್ಯಕ್ತಿ, ತಮ್ಮನ್ನು ಬಾಗಲಕೋಟೆಯ ಕಾಂಗ್ರೆಸ್ ಕಚೇರಿಗೆ ಕರೆದೊಯ್ಯಲಾಗಿತ್ತು ಎಂದು ಹೇಳಿದ್ದಾರೆ. ನಂತರ ಅವರನ್ನು ಕರಪತ್ರ ವಿತರಿಸಲು ಕ್ಯಾಂಪಸ್‌ಗೆ ಕಳುಹಿಸಲಾಯಿತು. ಆ ಕ್ಯಾಂಪಸ್‌ನ ವಿವರ ಅಥವಾ ಅಲ್ಲಿನ ಇತರೆ ವ್ಯಕ್ತಿಗಳ ಬಗ್ಗೆ ತಮಗೆ ಸಂಪೂರ್ಣ ಮಾಹಿತಿ ಇಲ್ಲ ಎಂದು ಆ ವ್ಯಕ್ತಿ ತಿಳಿಸಿದ್ದಾರೆ. ಈ ಘಟನೆಯು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

Bengaluru Air Quality: ರಾಜ್ಯದ ಎಲ್ಲೆಡೆ ವಾಯು ಗುಣಮಟ್ಟದಲ್ಲಿ ಭಾರಿ ಸುಧಾರಣೆ!

ಬೆಂಗಳೂರು, ಏಪ್ರಿಲ್ 05: ಕೆಲ ದಿನಗಳಿಂದ ಬೆಂಗಳೂರು ಸೇರಿದಂತೆ ಬಳ್ಳಾರಿ, ಮಂಗಳೂರಿನ ವಾಯುಗುಣಮಟ್ಟವೂ (Bengaluru Air Quality)  ಹದಗೆಟ್ಟಿತ್ತು. ಆದರೆ ಇಂದು ಸ್ವಲ್ಪ ಮಟ್ಟಿಗೆ ಏರ್ ಕ್ವಾಲಿಟಿ ಸುಧಾರಿಸಿದ್ದು, ನಿಟ್ಟುಸಿರು ಬಿಡುವಂತಾಗಿದೆ. ಆದರೂ ವಾಯು ಗುಣಮಟ್ಟ ಎಲ್​ಲೆಡೆಯೂ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ.

ಉಡುಪಿ, ಮಂಗಳೂರು ಸೇರಿದಂತೆ ಇಂದು ಹಲವೆಡೆ ವಾಯು ಗುಣಮಟ್ಟ ಸುಧಾರಿಸಿದೆ. ಕೆಲ ದಿನಗಳ ಹಿಂದೆಯಷ್ಟೇ ತೀವ್ರ ಕಳಪೆ ಮಟ್ಟಕ್ಕೆ ಇಳಿದಿದ್ದ ಬೆಂಗಳೂರಿನ ಏರ್ ಕ್ವಾಲಿಟಿ ಇಂದು 128ಕ್ಕೆ ತಲುಪಿದೆ. ಬೆಂಗಳೂರಿನ AQI ಇನ್ನೂ ಆರೋಗ್ಯಕ್ಕೆ ಮಾರಕವಾಗಿಯೇ ಇದೆ. ಕಳೆದ ಕೆಲ ದಿನಗಳಿಗೆ ಹೋಲಿಸಿದರೆ ಅಂಕೆಗಳಲ್ಲಿ ಸಣ್ಣ ಏರುಪೇರು ಕಂಡರೂ, WHO ಮಾನದಂಡಗಳ ಪ್ರಕಾರ ಈ ಮಟ್ಟದ ಗಾಳಿಯ ಗುಣಮಟ್ಟ ಆರೋಗ್ಯಕ್ಕೆ ಹಾನಿಕರವಾಗಿಯೇ ಉಳಿದಿದೆ.

ರಾಜ್ಯದ ಇತರ ನಗರದಲ್ಲಿ ಇಂದಿನ ಗಾಳಿಯ ಗುಣಮಟ್ಟ (Air Quality Index)

  • ಬೆಂಗಳೂರು –128
  • ಮಂಗಳೂರು-73
  • ಮೈಸೂರು –124
  • ಬೆಳಗಾವಿ – 74
  • ಕಲಬುರ್ಗಿ-114
  • ಶಿವಮೊಗ್ಗ – 80
  • ಬಳ್ಳಾರಿ – 81
  • ಹುಬ್ಬಳ್ಳಿ- 76
  • ಉಡುಪಿ –80
  • ವಿಜಯಪುರ –82

ಗಾಳಿ ಗುಣಮಟ್ಟ ತಿಳಿಯುವುದು ಹೇಗೆ?

  • ಉತ್ತಮ- 0-50
  • ಮಧ್ಯಮ – 50-100
  • ಕಳಪೆ – 100-150
  • ಅನಾರೋಗ್ಯಕರ – 150-200
  • ಗಂಭೀರ – 200 – 300
  • ಅಪಾಯಕಾರಿ – 300 -500+

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

 

Source link

ಇಬ್ಬರು ನಾಯಕರುಗಳು ಕಣಕ್ಕಿಳಿಯದಿರಲು ಇದುವೇ ಕಾರಣ..!

Source link

ಪ್ರೀತಿ ವಿಚಾರ ಹುಡುಗಿ ಮನೆಗೆ ಗೊತ್ತಾಯ್ತು, ಅವ್ರು ಒಪ್ಪದಿದ್ರೆ ಮಗ ಏನಾದ್ರೂ ಮಾಡಿಕೊಂಡಾನು ಎಂದು ತಂದೆ ಜತೆನೇ ಇದ್ರೂ ಉಳಿಸಲಾಗಲಿಲ್ಲ

ಇಂದೋರ್, ಏಪ್ರಿಲ್ 5: ಮನೆಯವರಿಗೆ ವಿಡಿಯೋ ಕಾಲ್ ಮಾಡಿ ಬಳಿಕ ವಿದ್ಯಾರ್ಥಿಯೊಬ್ಬ ತಲೆಗೆ ಗುಂಡು ಹಾರಿಸಿಕೊಂಡು ಆತ್ಮಹತ್ಯೆ(Suicide) ಮಾಡಿಕೊಂಡಿರುವ ಘಟನೆ ಮಧ್ಯಪ್ರದೇಶದ ಇಂದೋರ್​ನಲ್ಲಿ ನಡೆದಿದೆ. ಶನಿವಾರ ಸಂಜೆ ಎಂಐಜಿ ಪೊಲೀಸ್ ಠಾಣೆ ಪ್ರದೇಶದಲ್ಲಿ ಬಿ.ಫಾರ್ಮಾ ವಿದ್ಯಾರ್ಥಿಯೊಬ್ಬ ತನ್ನ ತಂದೆಯ ಪರವಾನಗಿ ಪಡೆದ ಬಂದೂಕಿನಿಂದ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ .

ಸಂಜೆ 6.30 ರ ಸುಮಾರಿಗೆ ವಿದ್ಯಾರ್ಥಿಯ ತಂದೆ ತರಕಾರಿ ಖರೀದಿಸಲು ಹೊರಗೆ ಹೋಗಿದ್ದರು, ಮನೆಯಲ್ಲಿ ಪಿಸ್ತೂಲ್ ಇತ್ತು. ಮನೆಯವರಿಗೆ ವೀಡಿಯೊ ಕರೆ ಮಾಡಿದ ಸ್ವಲ್ಪ ಸಮಯದ ನಂತರ ಬಾಲಕ ಈ ತಪ್ಪು ನಿರ್ಧಾರ ತೆಗೆದುಕೊಂಡಿದ್ದಾನೆ. ಎಸಿಪಿ ಹಿಮಾನಿ ಮಿಶ್ರಾ ಅವರ ಪ್ರಕಾರ, ಮೃತರನ್ನು ಸೌರಭ್ ಪಟೇಲ್ ಎಂದು ಗುರುತಿಸಲಾಗಿದ್ದು, ಅವರು ಮೈಹಾರ್ ಮೂಲದವರಾಗಿದ್ದು, ನೆಹರು ನಗರದ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಅವರು ಖಾಸಗಿ ಕಾಲೇಜಿನಲ್ಲಿ ಮೂರನೇ ವರ್ಷದ ಬಿ.ಫಾರ್ಮಾ ವಿದ್ಯಾರ್ಥಿಯಾಗಿದ್ದರು. ಸ್ಥಳದಿಂದ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ.

ಘಟನೆ ನಡೆದ ಸಮಯದಲ್ಲಿ, ಸೌರಭ್‌ನ ರೂಮ್‌ಮೇಟ್‌ಗಳು ಮುಂಭಾಗದ ಕೋಣೆಯಲ್ಲಿ ಲ್ಯಾಪ್‌ಟಾಪ್‌ನಲ್ಲಿ ಐಪಿಎಲ್ ಪಂದ್ಯವನ್ನು ವೀಕ್ಷಿಸುತ್ತಿದ್ದರು. ಅವನು ತನ್ನ ಕುಟುಂಬದೊಂದಿಗೆ ವೀಡಿಯೊ ಕರೆ ಮಾಡಲು ಹೋಗಿದ್ದ.

ಮತ್ತಷ್ಟು ಓದಿ: ಪ್ರತ್ಯೇಕ ಪ್ರಕರಣ: ಮದುವೆಗೆ ಹೆಣ್ಣು ಸಿಗದಿದ್ದಕ್ಕೆ ಇಬ್ಬರು ಯುವಕರು ಆತ್ಮಹತ್ಯೆ

ಆತನ ರೂಮ್ ಮೇಟ್ ನಯನ್ ಮಾತನಾಡಿ, ನಮಗೆ ದೊಡ್ಡ ಶಬ್ದ ಕೇಳಿತ್ತು ಮೊದಲು ಮೊಬೈಲ್ ಫೋನ್ ಸ್ಫೋಟಗೊಂಡಿದೆ ಎಂದು ಭಾವಿಸಿದ್ದೆವು. ನಾವು ಅಡುಗೆಮನೆಗೆ ಬಂದಾಗ ಸೌರಭ್ ರಕ್ತದ ಮಡುವಿನಲ್ಲಿ ಬಿದ್ದಿರುವುದನ್ನು ಕಂಡೆವು. ಅವನು ತನ್ನ ತಂದೆಯ ಪರವಾನಗಿ ಪಡೆದ ಬಂದೂಕಿನಿಂದ ಎದೆಗೆ ಗುಂಡು ಹಾರಿಸಿಕೊಂಡಿದ್ದಾನೆ ಎಂದು ಹೇಳಿದರು.

ಮಾಹಿತಿ ತಿಳಿದ ಕೂಡಲೇ ಪೊಲೀಸರು ಸ್ಥಳಕ್ಕೆ ತಲುಪಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ವಿವರವಾದ ತನಿಖೆ ನಡೆಯುತ್ತಿದೆ. ಸೌರಭ್ ತನ್ನ ಊರಿನ ಹುಡುಗಿಯನ್ನು ಪ್ರೀತಿಸುತ್ತಿದ್ದ ಎಂದು ಸ್ನೇಹಿತರು ಹೇಳಿದ್ದಾರೆ, ಅಷ್ಟೇ ಅಲ್ಲದೆ ಇದು ಇತ್ತೀಚೆಗೆ ಆಕೆಯ ಕುಟುಂಬದ ಗಮನಕ್ಕೆ ಇದು ಬಂದಿತ್ತು.

ಇದರ ನಂತರ, ಅವನ ತಂದೆ ಕಳೆದ 15 ದಿನಗಳಿಂದ ಅವನೊಂದಿಗೆ ಇದ್ದರು. ಸೌರಭ್ ಎಂದಿನಂತೆಯೇ ಒದ್ದ, ಈ ರೀತಿಯ ನಿರ್ಧಾರ ತೆಗೆದುಕೊಳ್ಳುವ ಯಾವುದೇ ಲಕ್ಷಣಗಳೂ ಮುಖದಲ್ಲಿ ಗೋಚರಿಸಿರಲಿಲ್ಲ ಎಂದರು.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

‘ರಾಮಾಯಣ’ ಸಿನಿಮಾದಲ್ಲಿ ರಣಬೀರ್ ಕಪೂರ್ ದ್ವಿಪಾತ್ರ: ಶ್ರೀರಾಮನ ಜೊತೆಗೆ ಪರಶುರಾಮನ ದರ್ಶನ

ನಿತೇಶ್ ತಿವಾರಿ ನಿರ್ದೇಶನದ ಬಹುನಿರೀಕ್ಷಿತ ‘ರಾಮಾಯಣ’ (Ramayana) ಚಿತ್ರದ ಬಗ್ಗೆ ದಿನಕ್ಕೊಂದು ಕುತೂಹಲಕಾರಿ ವಿಚಾರಗಳು ಹೊರಬರುತ್ತಿವೆ. ಇತ್ತೀಚೆಗಷ್ಟೇ ಅಮೆರಿಕದಲ್ಲಿ ಈ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಭಾರಿ ಸಂಚಲನ ಮೂಡಿಸಿದೆ. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ನಟ ರಣಬೀರ್ ಕಪೂರ್ (Ranbir Kapoor), ಈ ಸಿನಿಮಾದಲ್ಲಿ ತಾವು ಕೇವಲ ಶ್ರೀರಾಮನ ಪಾತ್ರ ಮಾತ್ರವಲ್ಲದೇ ಪರಶುರಾಮನ ಪಾತ್ರವನ್ನೂ ನಿರ್ವಹಿಸುತ್ತಿರುವುದಾಗಿ ಅಧಿಕೃತವಾಗಿ ಖಚಿತಪಡಿಸಿದ್ದಾರೆ. ಅವರು ಮಾತನಾಡಿರುವ ವಿಡಿಯೋ ವೈರಲ್ ಆಗಿದೆ.

ಶ್ರೀರಾಮ ಮತ್ತು ಪರಶುರಾಮ ಇಬ್ಬರೂ ಭಗವಾನ್ ವಿಷ್ಣುವಿನ ಅವತಾರಗಳು ಎಂಬುದು ನಮಗೆಲ್ಲರಿಗೂ ತಿಳಿದಿದೆ. ಇದೀಗ ರಣಬೀರ್ ಈ ಇಬ್ಬರೂ ದೈವಿಕ ಪುರುಷರ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿರುವುದು ಅಭಿಮಾನಿಗಳಲ್ಲಿ ಕುತೂಹಲ ಹೆಚ್ಚಿಸಿದೆ. ಈ ಕುರಿತು ಮಾತನಾಡಿದ ರಣಬೀರ್, ‘ಭಗವಾನ್ ವಿಷ್ಣುವಿನ ಅವತಾರಗಳಲ್ಲಿ ಶ್ರೀರಾಮನಿಗಿಂತ ಮೊದಲು ಪರಶುರಾಮರು ಭೂಮಿಗೆ ಬಂದಿದ್ದರು. ಒಬ್ಬ ನಟನಾಗಿ ಈ ಇಬ್ಬರೂ ಮಹಾನ್ ವ್ಯಕ್ತಿಗಳ ಪಾತ್ರವನ್ನು ನಿರ್ವಹಿಸಲು ಅವಕಾಶ ಸಿಕ್ಕಿರುವುದು ನನ್ನ ಸೌಭಾಗ್ಯ ಮತ್ತು ಇದು ಸೃಜನಾತ್ಮಕವಾಗಿ ನನಗೆ ತುಂಬಾನೇ ತೃಪ್ತಿ ನೀಡಿದೆ’ ಎಂದು ಹೇಳಿದ್ದಾರೆ.

ಕೇವಲ ದೈಹಿಕ ಬದಲಾವಣೆಯಷ್ಟೇ ಅಲ್ಲದೇ, ಪಾತ್ರದ ಭಾವನಾತ್ಮಕ ಮತ್ತು ಆಧ್ಯಾತ್ಮಿಕ ಆಳವನ್ನು ಅರ್ಥಮಾಡಿಕೊಳ್ಳಲು ರಣಬೀರ್ ಸಾಕಷ್ಟು ಶ್ರಮವಹಿಸಿದ್ದಾರೆ. ‘ಪಾತ್ರದ ಬಾಡಿ ಲಾಂಗ್ವೇಜ್‌ಗಿಂತ ಹೆಚ್ಚಾಗಿ, ಅವರ ಉದ್ದೇಶಗಳು ಮತ್ತು ಆಧ್ಯಾತ್ಮಿಕ ಹಿನ್ನೆಲೆಯನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಈ ಸಿನಿಮಾದ ಚಿತ್ರೀಕರಣ ಆರಂಭವಾಗುವ ಒಂದು ವರ್ಷದ ಮೊದಲೇ ನಾನು ಈ ಬಗ್ಗೆ ಅಧ್ಯಯನ ನಡೆಸಿದ್ದೇನೆ. ಅವರಿಬ್ಬರೂ ಏನನ್ನು ಪ್ರತಿನಿಧಿಸುತ್ತಾರೆ ಮತ್ತು ಅವರ ಜೀವನದ ಉದ್ದೇಶಗಳೇನು ಎಂಬುದನ್ನು ಅರಿಯಲು ಪ್ರಯತ್ನಿಸಿದ್ದೇನೆ’ ಎಂದು ಅವರು ಮಾಹಿತಿ ನೀಡಿದ್ದಾರೆ.

ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ಈ ಚಿತ್ರವನ್ನು ಅತ್ಯಂತ ಅದ್ದೂರಿಯಾಗಿ ಮತ್ತು ಅಂತಾರಾಷ್ಟ್ರೀಯ ಮಟ್ಟದ ತಂತ್ರಜ್ಞಾನ ಬಳಸಿ ನಿರ್ಮಿಸುತ್ತಿದ್ದಾರೆ. ಇದು ಕೇವಲ ಭಾರತಕ್ಕೆ ಸೀಮಿತವಾಗದೇ ಜಾಗತಿಕ ಪ್ರೇಕ್ಷಕರನ್ನು ತಲುಪುವ ಗುರಿ ಹೊಂದಿದೆ. ಪರಶುರಾಮನ ಪಾತ್ರವು ಚಿತ್ರದಲ್ಲಿ ಅತಿಥಿ ಪಾತ್ರದಂತೆ ಕಾಣಿಸಿಕೊಂಡರೂ, ಕಥೆಯ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: ದಾಖಲೆ ಬರೆಯುತ್ತಾ ‘ರಾಮಾಯಣ’? ಬರೋಬ್ಬರಿ 1000 ಕೋಟಿ ರೂಪಾಯಿಗೆ ಒಟಿಟಿ ಬೇಡಿಕೆ

ಒಟ್ಟಿನಲ್ಲಿ, ಶ್ರೀರಾಮನ ಸೌಮ್ಯತೆ ಮತ್ತು ಪರಶುರಾಮನ ಉಗ್ರತೆಯನ್ನು ರಣಬೀರ್ ಕಪೂರ್ ಬೆಳ್ಳಿತೆರೆಯ ಮೇಲೆ ಹೇಗೆ ಪ್ರಸ್ತುತಪಡಿಸಲಿದ್ದಾರೆ ಎಂಬ ಕುತೂಹಲ ಈಗ ಗಗನಕ್ಕೇರಿದೆ. ದೀಪಾವಳಿ ಹಬ್ಬದ ಸಂದರ್ಭದಲ್ಲಿ ‘ರಾಮಾಯಣ: ಪಾರ್ಟ್ 1’ ಸಿನಿಮಾ ಬಿಡುಗಡೆ ಆಗಲಿದೆ. ಯಶ್ ಅವರು ರಾವಣನ ಪಾತ್ರ ಮಾಡಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ದ್ವಾರಕಾದ ಬಾಡಿಗೆ ಮನೆಯಲ್ಲಿ ಇಬ್ಬರು ಸಹೋದರರ ಶವ ಪತ್ತೆ, ಕೊಲೆ ಶಂಕೆ

ನವದೆಹಲಿ, ಏಪ್ರಿಲ್ 05: ದೆಹಲಿಯ ಉತ್ತಮ್ ನಗರದ ಬಾಡಿಗೆ ಮನೆ(Home)ಯೊಂಂದರಲ್ಲಿ ಇಬ್ಬರು ಸಹೋದರರ ಶವ ಪ್ತತೆಯಾಗಿದೆ. ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದು, ಇದು ಪೊಲೀಸ್ ತನಿಖೆಗೆ ಕಾರಣವಾಗಿದ್ದು, ಸ್ಥಳೀಯ ನಿವಾಸಿಗಳಲ್ಲಿ ಆತಂಕ ಮೂಡಿದೆ. ಸಂಜೆ 6.55 ರ ಸುಮಾರಿಗೆ ಉತ್ತಮ್ ನಗರ ಪೊಲೀಸ್ ಠಾಣೆಗೆ ಪಿಸಿಆರ್ ಕರೆ ಬಂದಿದ್ದು, ದ್ವಾರಕಾ ಜಿಲ್ಲೆಗೆ ಸೇರಿದ ಮೋಹನ್ ಗಾರ್ಡನ್‌ನಲ್ಲಿರುವ ಮೆಟ್ರೋ ಪಿಲ್ಲರ್ ಸಂಖ್ಯೆ 743 ರ ಬಳಿಯ ಮನೆಯೊಳಗೆ ಎರಡು ಶವಗಳು ಕಂಡುಬಂದಿರುವ ಕುರಿತು ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿತ್ತು.

ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸ್ ತಂಡಗಳು ಅಪರಾಧ ಶಾಖೆಯ ಅಧಿಕಾರಿಗಳು ಮತ್ತು ವಿಧಿವಿಜ್ಞಾನ ತಜ್ಞರೊಂದಿಗೆ ಸ್ಥಳಕ್ಕೆ ತಲುಪಿ ತನಿಖೆ ಆರಂಭಿಸಿವೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಮೃತರನ್ನು ಮೋಹನ್ ಗಾರ್ಡನ್ ನಿವಾಸಿ ದೇವೇಂದರ್ (50) ಮತ್ತು ಹಸ್ತಲ್‌ನ ಜೆಜೆ ಕಾಲೋನಿಯ ನಿವಾಸಿ ಅಮಿತ್ ಕುಮಾರ್ (48) ಎಂದು ಗುರುತಿಸಲಾಗಿದೆ.

ಇಬ್ಬರೂ ಸಹೋದರರಾಗಿದ್ದು, ಇತ್ತೀಚೆಗೆ ಬಾಡಿಗೆಗೆ ಫ್ಲಾಟ್‌ಗೆ ಸ್ಥಳಾಂತರಗೊಂಡಿದ್ದರು.ಕೆಲವೇ ದಿನಗಳ ಮೊದಲು ಇಬ್ಬರೂ ಫ್ಲಾಟ್‌ಗೆ ಸ್ಥಳಾಂತರಗೊಂಡಿದ್ದರು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ.ಎರಡೂ ದೇಹಗಳಲ್ಲಿ ಯಾವುದೇ ಬಾಹ್ಯ ಗಾಯದ ಗುರುತುಗಳು ಕಂಡುಬಂದಿಲ್ಲ, ಇದು ಸಾವಿಗೆ ಕಾರಣವನ್ನು ಅಸ್ಪಷ್ಟವಾಗಿಸಿದೆ.

ಮತ್ತಷ್ಟು ಓದಿ: ಬೈಕ್​​ ಟಚ್​ ನೆಪ: ಚಾಕು ಇರಿದು ವ್ಯಕ್ತಿಯ ಬರ್ಬರ ಕೊಲೆ; ಹುಡುಗಿ ವಿಚಾರಕ್ಕೆ ಹರಿಯಿತಾ ನೆತ್ತರು?

ಶವಗಳನ್ನು ವಶಕ್ಕೆ ತೆಗೆದುಕೊಂಡು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ, ಇದರಿಂದ ಸಾವಿನ ನಿಖರವಾದ ಕಾರಣ ತಿಳಿದುಬರಲಿದೆ.ಯಾವುದೇ ಸಂಭಾವ್ಯ ಸುಳಿವುಗಳನ್ನು ಗುರುತಿಸಲು ಮೃತರ ವೈಯಕ್ತಿಕ ಮತ್ತು ಕುಟುಂಬದ ಹಿನ್ನೆಲೆಯನ್ನು ಪರಿಶೀಲಿಸುವ ಪ್ರಯತ್ನಗಳು ನಡೆಯುತ್ತಿವೆ.

ಮರಣೋತ್ತರ ಪರೀಕ್ಷೆಯ ವರದಿ ಮತ್ತು ನಡೆಯುತ್ತಿರುವ ತನಿಖೆಯ ಆಧಾರದ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾವಿನ ನಿಖರವಾದ ಕಾರಣ ಮತ್ತು ಸ್ವರೂಪವನ್ನು ನಿರ್ಧರಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ.

 

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

 

Source link

ಟ್ರೆಕ್ಕಿಂಗ್​ಗೆ ತೆರಳಿದ್ದ ಕೇರಳದ ಯುವತಿ ಮಡಿಕೇರಿಯಲ್ಲಿ ನಾಪತ್ತೆ: ಮೂರು ದಿನಗಳಾದರೂ ಆಗಿಲ್ಲ ಪತ್ತೆ!

ಮಡಿಕೇರಿ, ಏಪ್ರಿಲ್​​ 05: ಜಿಲ್ಲೆಯ ಮಡಿಕೇರಿ ತಾಲೂಕಿನ ಕಕ್ಕಬ್ಬೆ ಗ್ರಾಮದಲ್ಲಿ ಟ್ರೆಕ್ಕಿಂಗ್​ಗೆ ತೆರಳಿದ್ದ ಕೇರಳ ಮೂಲದ ಯುವತಿ ನಾಪತ್ತೆಯಾಗಿ ಮೂರು ದಿನಗಳಾದರೂ ಆಕೆಯ ಸುಳಿವು ಮಾತ್ರ ಈವರೆಗೂ ಸಿಕ್ಕಿಲ್ಲ. ಎರ್ನಾಕುಲಂನಲ್ಲಿ ಐಟಿ ಉದ್ಯೋಗಿಯಾಗಿರುವ ಕೇರಳದ ಕೋಯಿಕ್ಕೋಡ್ ನಿವಾಸಿ 35 ವರ್ಷದ ಶರಣ್ಯಾ ಕಕ್ಕಬ್ಬೆ ಗ್ರಾಮದ ಹೋಂಸ್ಟೇಯೊಂದರಿಂದ ತಡಿಯಂಡಮೋಳ್ ಬೆಟ್ಟಕ್ಕೆ ಚಾರಣಕ್ಕೆಂದು ತೆರಳಿದ್ದಳು. ಬೆಳಗ್ಗೆ 8.30ರ ಸುಮಾರಿಗೆ ಟ್ರೆಕ್ಕಿಂಗ್​ಗೆ ತೆರಳಲು ಅರಣ್ಯ ಇಲಾಖೆಯ ಚೆಕ್​​ಪೋಸ್ಟ್​​ ಬಳಿ ಈಕೆ ಬಂದಿದ್ದಳು. ಆದ್ರೆ ಒಬ್ಬೊಬ್ಬರನ್ನೇ ಟ್ರೆಕ್ಕಿಂಗ್ ಬಿಡದ ಕಾರಣ ಬೇರೊಂದು ಗ್ರೂಪ್ ಬಂದ ಬಳಿಕ ಅವರ ಜೊತೆ ಈಕೆಯನ್ನ ಕಳುಹಿಸಲಾಗಿತ್ತು. ಆದ್ರೆ ಶರಣ್ಯಾ ಬೆಟ್ಟದಿಂದ ವಾಪಸ್​​ ಬಾರದ ಕಾರಣ, ಆಕೆಗಾಗಿ ಕಳೆದ ಮೂರು ದಿನಗಳಿಂದ ಶೋಧ ನಡೆಯುತ್ತಿದೆ.

ಬೆಳಿಗ್ಗೆ ಟ್ರೆಕ್ಕಿಂಗ್​​ಗೆಂದು ತೆರಳಿದ್ದವರು ಮಧ್ಯಾಹ್ನ 1.30ರ ವೇಳೆಗೆ ಅರಣ್ಯ ಇಲಾಖೆಯ ಚೆಕ್​​ ಪೋಸ್ಟ್​​ ಬಳಿ ಹಿಂದಿರುಗಬೇಕಿತ್ತು. ಹೀಗಾಗಿ ಶರಣ್ಯಾಳನ್ನು ಕರೆದೊಯ್ಯಲೆಂದು ಹೋಮ್​​ ಸ್ಟೇ ಮಾಲೀಕ ತಮ್ಮ ಸ್ಕೂಟಿ ಸಮೇತ ಸ್ಥಳಕ್ಕೆ ಬಂದಿದ್ದರು. ಆ ಬಳಿಕ ಶರಣ್ಯಾಗೆ ಅವರು ಕರೆ ಮಾಡಿದಾಗ ಮೊದಲು ನಾಟ್ ರೀಚೇಬಲ್ ಬಂದಿದೆ. ಮತ್ತೆರಡು ಬಾರಿ ಪ್ರಯತ್ನಿಸಿದಾಗ ಕರೆ ಸ್ವೀಕರಿಸಿದ ಆಕೆ, ತಾನು ದಾರಿ ತಪ್ಪಿದ್ದೇನೆ ಎಂದು ಹೇಳಿದ್ದಾಳೆ. ಅಷ್ಟರಲ್ಲಿ ಫೋನ್ ಕಟ್ ಆಗಿದೆಯಂತೆ. ಅದಾದ ಬಳಿಕ ಫೋನ್​​ ಮತ್ತೆ ಕನೆಕ್ಟ್ ಆಗಿಲ್ಲ. ಕೂಡಲೇ ಅವರು ವಿಷಯವನ್ನು ಅರಣ್ಯ ಇಲಾಖೆಗೆ ತಿಳಿಸಿದ್ದು, ಎಲ್ಲರೂ ಸೇರಿ ಸಂಜೆ ಬೆಟ್ಟದ ಮೇಲೆ ಹೋಗಿದ್ದಾರೆ. ಅದ್ರೆ ಅಲ್ಲೆಲ್ಲೂ ಯುವತಿ ಕಂಡಿಲ್ಲ. ಹಾಗಾಗಿ ಮತ್ತಷ್ಟು ಅರಣ್ಯ ಇಲಾಖೆ, ಪೊಲಿಸ್ ಇಲಾಖೆ ಸಿಬ್ಬಂದಿ ಸೇರಿ ಸ್ಥಳೀಯರೆಲ್ಲರೂ ಯುವತಿಗಾಗಿ ಹುಡುಕಿದ್ದಾರೆ. ಆದ್ರೆ ಎಲ್ಲೂ ಕೂಡ ಆಕೆಯ ಸುಳಿವೇ ಸಿಕ್ಕಿಲ್ಲ. ಈ ಕಾರ್ಯಾಚರಣೆ ಮೂರು ದಿನ ಕಳೆದರೂ ಶರಣ್ಯಾ ಪತ್ತೆ ಮಾತ್ರ ಆಗಿಲ್ಲ.

ಇದನ್ನೂ ಓದಿ: ಟ್ರೆಕ್ಕಿಂಗ್​ಗೆ ತೆರಳಿದ್ದ ಕೇರಳದ ಯುವತಿ ಮಡಿಕೇರಿಯಲ್ಲಿ ನಾಪತ್ತೆ; 4 ತಂಡಗಳಿಂದ ಶೋಧ ಕಾರ್ಯ

ಅರಣ್ಯ ಮತ್ತು ಪೊಲೀಸ್ ಇಲಾಖೆ ಹಾಗೂ ನಕ್ಸಲ್ ನಿಗ್ರಹ ಪಡೆಯ 60ಕ್ಕೂ ಅಧಿಕ ಸಿಬ್ಬಂದಿ, ಸ್ಥಳೀಯರು ಕಾರ್ಯಾಚರಣೆ ನಡೆಸುತ್ತಿದ್ದು, ವಿಚಿತ್ರ ಅಂದ್ರೆ ಶರಣ್ಯಾ ಕಳೆದ 15 ವರ್ಷಗಳಿಂದ ಟ್ರೆಕ್ಕಿಂಗ್ ಹೋಗಿ ಅನುಭವ ಹೊಂದಿರುವ ಯುವತಿ. ಹಾಗಾಗಿ ಆಕೆ ದಾರಿ ಮಿಸ್ ಆಗಿ ನಾಪತ್ತೆಯಾಗುವ ಸಾಧ್ಯತೆ ಕಡಿಮೆ. ಆ ಕಾರಣಕ್ಕೆ ಕಾಡು ಪ್ರಾಣಿಗಳ ದಾಳಿಗೆ ಯುವತಿ ತುತ್ತಾಗಿರಬಹುದಾ ಎಂಬ ಶಂಕೆ ಶುರುವಾಗಿದೆ. ಅದೂ ಅಲ್ಲದೆ ಬೆಟ್ಟದ ದಾರಿ ಬಹಳ ಸ್ಪಷ್ಟವಾಗಿದ್ದು, ಎಲ್ಲಿಯೂ ದಾರಿ ತಪ್ಪುವ ಸಾಧ್ಯತೆ ಇಲ್ಲ. ಹೀಗಿರುವಾಗ ಟ್ರೆಕ್ಕಿಂಗ್ ಅನುಭವ ಇರುವ ಈಕೆ ಹೇಗೆ ದಾರಿ ತಪ್ಪುತ್ತಾಳೆ ಎನ್ನುವ ಪ್ರಶ್ನೆಯೂ ಉದ್ಭವಿಸಿದೆ. ಅದೂ ಅಲ್ಲದೆ, ಅರಣ್ಯ ಇಲಾಖೆಯ ಚೆಕ್​ ಪೋಸ್​​ಟ್ ಬಳಿಯ ಸಿಸಿಟಿವಿ ಕೆಲಸ ಮಾಡದೆ ಇರೋದು ಕೂಡ ಹಲವು ಅನುಮಾನಗಳಿಗೆ ಕಾರಣವಾಗಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

ವೇಗ ಅತೀ ವೇಗ… ಅತ್ಯಂತ ವೇಗದಲ್ಲಿ ಚೆಂಡೆಸದ 23 ವರ್ಷದ ಯುವ ವೇಗಿ

ಇಂಡಿಯನ್ ಪ್ರೀಮಿಯರ್ ಲೀಗ್ (IPL) 2026ರ ಆವೃತ್ತಿಯಲ್ಲಿ ಭಾರತೀಯ ಯುವ ವೇಗಿಗಳ ಅಬ್ಬರ ಮುಂದುವರಿದಿದೆ. ಏಪ್ರಿಲ್ 4ರಂದು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ರಾಜಸ್ಥಾನ್ ರಾಯಲ್ಸ್ (RR) ವಿರುದ್ಧದ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್ ತಂಡದ ಉದಯೋನ್ಮುಖ ವೇಗಿ ಅಶೋಕ್ ಶರ್ಮಾ ಈ ಸೀಸನ್​ನ ಅತಿ ವೇಗದ ಎಸೆತವನ್ನು ಎಸೆಯುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಈ ಪಂದ್ಯದ 16ನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ 23 ವರ್ಷದ ಅಶೋಕ್ ಶರ್ಮಾ, ತಮ್ಮ ಓವರ್‌ನ ಅಂತಿಮ ಎಸೆತವನ್ನು ರಾಜಸ್ಥಾನ್ ರಾಯಲ್ಸ್‌ನ ಬ್ಯಾಟರ್ ಧ್ರುವ್ ಜುರೆಲ್ ಅವರಿಗೆ ಎಸೆದರು. ಸ್ಪೀಡೋಮೀಟರ್‌ನಲ್ಲಿ ಈ ಎಸೆತದ ವೇಗ ಗಂಟೆಗೆ 154.2 ಕಿ.ಮೀ (154.2 kmph) ಎಂದು ದಾಖಲಾಯಿತು. ಈ ಮೂಲಕ ಅವರು ಈ ಸೀಸನ್​ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಅನ್ರಿಕ್ ನೋಕಿಯಾ (150.9 kmph) ಹೆಸರಿನಲ್ಲಿದ್ದ ದಾಖಲೆಯನ್ನು ಮುರಿದರು.

2026ರ ಮೆಗಾ ಹರಾಜಿನಲ್ಲಿ ಗುಜರಾತ್ ಟೈಟಾನ್ಸ್ ಫ್ರಾಂಚೈಸಿಯು ಅಶೋಕ್ ಶರ್ಮಾ ಅವರನ್ನು 90 ಲಕ್ಷ ರೂಪಾಯಿಗಳಿಗೆ ಖರೀದಿಸಿತ್ತು. ಆರಂಭದಲ್ಲಿ ಕೇವಲ ಬ್ಯಾಕ್-ಅಪ್ ಬೌಲರ್ ಎನ್ನಲಾಗಿದ್ದ ಅಶೋಕ್, ಈಗ ತಂಡದ ಪ್ರಮುಖ ಅಸ್ತ್ರವಾಗಿ ಹೊರಹೊಮ್ಮುತ್ತಿದ್ದಾರೆ. ಅವರ ನಿಖರವಾದ ಲೈನ್ ಮತ್ತು ಲೆಂಗ್ತ್ ಜೊತೆಗೆ ಗಂಟೆಗೆ 150 ಕಿ.ಮೀ ಗಿಂತ ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯವು ಎದುರಾಳಿ ಬ್ಯಾಟರ್‌ಗಳಿಗೆ ನಡುಕ ಹುಟ್ಟಿಸುತ್ತಿದೆ.

ಭಾರತೀಯ ವೇಗಿಗಳ ಪಟ್ಟಿಯಲ್ಲಿ ಸ್ಥಾನ:

23 ವರ್ಷದ ಈ ಯುವ ವೇಗಿ ಈಗ ಐಪಿಎಲ್ ಇತಿಹಾಸದಲ್ಲಿ ಅತಿ ವೇಗವಾಗಿ ಬೌಲಿಂಗ್ ಮಾಡಿದ ಮೂರನೇ ಭಾರತೀಯ ಆಟಗಾರ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಉಮ್ರಾನ್ ಮಲಿಕ್ (157 kmph) ಮೊದಲ ಸ್ಥಾನದಲ್ಲಿದ್ದರೆ, ಮಯಾಂಕ್ ಯಾದವ್ (156.7 kmph) ಎರಡನೇ ಸ್ಥಾನದಲ್ಲಿದ್ದಾರೆ.

 

Source link