Category Archives: Blog

Your blog category

ಇರಾನ್ ಯುದ್ಧದಿಂದೀಚೆ ಹೂಡಿಕೆದಾರರಿಗೆ 41 ಲಕ್ಷ ರೂ ನಷ್ಟ; ಷೇರುಗಳಲ್ಲಿ ಹೂಡಿಕೆ ಮಾಡುವ ಸಮಯವಾ?

ಇರಾನ್ ಯುದ್ಧದಿಂದೀಚೆ ಹೂಡಿಕೆದಾರರಿಗೆ 41 ಲಕ್ಷ ರೂ ನಷ್ಟ; ಷೇರುಗಳಲ್ಲಿ ಹೂಡಿಕೆ ಮಾಡುವ ಸಮಯವಾ?

ನವದೆಹಲಿ, ಏಪ್ರಿಲ್ 2: ಇರಾನ್ ಯುದ್ಧಕ್ಕೆ ಮೊದಲು ಚೇತರಿಕೆಯ ಹಾದಿಯಲ್ಲಿದ್ದ ಭಾರತೀಯ ಷೇರು ಮಾರುಕಟ್ಟೆ (stock market) ಈಗ ಮತ್ತೆ ತತ್ತರಿಸುತ್ತಿದೆ. ಇರಾನ್ ಯುದ್ಧ ಆರಂಭವಾದ ಬಳಿಕ ಗಡಗಡ ನಡುಗುತ್ತಿದೆ. ಮಾರ್ಚ್ ತಿಂಗಳಲ್ಲಿ ಸೆನ್ಸೆಕ್ಸ್ ಮತ್ತು ನಿಫ್ಟಿ ಸೂಚ್ಯಂಕಗಳು ಶೇ 11ರಷ್ಟು ಕುಸಿತ ಕಂಡಿವೆ. ಹೆಚ್ಚಿನ ಸೂಚ್ಯಂಕಗಳು ಶೇ. 10ಕ್ಕಿಂತಲೂ ಹೆಚ್ಚಿನ ಕುಸಿತ ಕಂಡಿವೆ.

ಇಸ್ರೇಲ್ ಮತ್ತು ಅಮೆರಿಕ ದೇಶಗಳು ಇರಾನ್ ಮೇಲೆ ದಾಳಿ ಮಾಡುವ ಮುನ್ನ, ಅಂದರೆ ಫೆಬ್ರುವರಿ 27ರಂದು ಬಿಎಸ್​ಇಯಲ್ಲಿ ಲಿಸ್ಟ್ ಆಗಿರುವ ಕಂಪನಿಗಳ ಒಟ್ಟು ಷೇರು ಸಂಪತ್ತು 463.5 ಲಕ್ಷ ಕೋಟಿ ರೂ ಇತ್ತು. ಇವತ್ತು ಏಪ್ರಿಲ್ 2ರಂದು ಇವುಗಳ ಒಟ್ಟು ಮಾರುಕಟ್ಟೆ ಬಂಡವಾಳ 422.4 ಲಕ್ಷ ಕೋಟಿ ರೂ ಇದೆ. ಅಂದರೆ, ಬರೋಬ್ಬರಿ 41 ಲಕ್ಷ ಕೋಟಿ ರೂ ಷೇರುಸಂಪತ್ತು ಕುಸಿದಿದೆ. ಹೂಡಿಕೆದಾರರಿಗೆ 41 ಲಕ್ಷ ಕೋಟಿ ರೂ ನಷ್ಟ ಆಗಿದೆ.

ಇದನ್ನೂ ಓದಿ: ಬೆಂಗಳೂರಿನ ಶೇ. 80 ಐಟಿ ಕೂಲಿಗಳಿಗೆ ಇನ್ನು 3 ವರ್ಷದಲ್ಲಿ ಕೆಲಸ ಇರೋದಿಲ್ಲ: ಶಾಕ್ ಕೊಟ್ಟಿದೆ ರೆಡ್ಡಿಟ್ ಪೋಸ್ಟ್

ಷೇರು ಮಾರುಕಟ್ಟೆಗೆ ಮುಂದೇನು ಗತಿ?

ಇರಾನ್ ಯುದ್ಧವು ಜಾಗತಿಕ ತೈಲ ಮಾರುಕಟ್ಟೆಯನ್ನು ಅಲುಗಾಡಿಸಿದೆ. ತೈಲ ಪೂರೈಕೆಯಲ್ಲಿ ಭಾರೀ ವ್ಯತ್ಯಯ ಆಗಿದೆ. ಇದು ಒಟ್ಟಾರೆ ಷೇರು ಮಾರುಕಟ್ಟೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರಿದೆ. ವಿದೇಶೀ ಹೂಡಿಕೆದಾರರು ಸಾಲುಸಾಲಾಗಿ ನಿರ್ಗಮಿಸುತ್ತಿದ್ದಾರೆ. ಇರಾನ್ ಯುದ್ಧ ನಿಂತು, ತೈಲ ಪೂರೈಕೆ ಹಾಗೂ ಇತರ ವ್ಯಾಪಾರ ವಹಿವಾಟು ಸಹಜ ಸ್ಥಿತಿಗೆ ಮರಳುವವರೆಗೂ ಷೇರುಪೇಟೆ ತುಮುಲ ಹೀಗೇ ಮುಂದುವರಿಯುತ್ತದೆ.

ಈ ಸಂದಿಗ್ಧತೆ ಸದ್ಯಕ್ಕೆ ಮುಕ್ತಾಯವಾಗುವುದಿಲ್ಲ ಎಂದು ಅನಿಸುವಂತೆ ಡೊನಾಲ್ಡ್ ಟ್ರಂಪ್ ರಣಕಹಳೆ ಮುಂದುವರಿಸಿದ್ದಾರೆ. ಮುಂದಿನ ದಿನಗಳಲ್ಲಿ ಇರಾನ್ ಮೇಲೆ ಇನ್ನೂ ದೊಡ್ಡ ಮಟ್ಟದಲ್ಲಿ ಪ್ರಹಾರ ಮಾಡುತ್ತೇವೆ ಎಂದಿದ್ದಾರೆ. ಅಮೆರಿಕದ ಹುಟ್ಟಡಗಿಸುವವರೆಗೂ ಯುದ್ಧ ನಿಲ್ಲಿಸಲ್ಲ ಎಂದು ಇರಾನ್ ಕೂಡ ಹೇಳುತ್ತಿದೆ. ಹೀಗಾಗಿ, ಹೂಡಿಕೆದಾರರು ಏನು ಮಾಡಬೇಕೆಂದು ದಿಕ್ಕುತೋಚದೆ ಉಳಿಯುವ ಪರಿಸ್ಥಿತಿ ಇದೆ ಎಂದು ಮೇಲ್ನೋಟಕ್ಕೆ ಕಾಣುತ್ತದೆ.

ಇದನ್ನೂ ಓದಿ: ಏರ್​ಟೆಲ್ ಈಗ ವಿಶ್ವದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್; ಅಗ್ರಸ್ಥಾನ ಯಾರದ್ದು, ಟಾಪ್-10 ಕಂಪನಿಗಳು ಯಾವುವು?

ಹೂಡಿಕೆದಾರರಿಗೆ ಸಲಹೆಗಳು…

ಭಾರತದ ಈಕ್ವಿಟಿ ಮಾರುಕಟ್ಟೆ ಕಳೆದ ಒಂದೂವರೆ ವರ್ಷದಲ್ಲಿ ಬಹಳ ಕುಸಿತ ಕಂಡಿದೆ. ಬಹಳಷ್ಟು ಷೇರುಗಳ ಮಾರ್ಕೆಟ್ ಕರೆಕ್ಷನ್ ಆಗಿದೆ. ಅನೇಕ ಉತ್ತಮ ಷೇರುಗಳು ಒಳ್ಳೆಯ ಬೆಲೆಗೆ ಸಿಗುತ್ತಿವೆ. ತಜ್ಞರು ನೀಡಿರುವ ಸಲಹೆ ಪ್ರಕಾರ, ಉತ್ತಮ ಷೇರುಗಳನ್ನು ಖರೀದಿಸಲು ಮಾರುಕಟ್ಟೆ ಅವಕಾಶ ಕೊಟ್ಟಿದೆ. ಹಾಗಂತ, ಷೇರುಗಳಲ್ಲಿ ಸಿಕ್ಕಾಪಟ್ಟೆ ಹೂಡಿಕೆ ಮಾಡಬೇಡಿ ಎನ್ನುವ ಎಚ್ಚರಿಕೆಯೂ ಇದೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

‘ಲವ್ ಮಾಕ್ಟೇಲ್ 3’ ಬಳಿಕ ‘ಪೀಟರ್’ ಬಿಡುಗಡೆ ಮಾಡಲಿರುವ ‘ಕೆವಿಎನ್ ಪ್ರೊಡಕ್ಷನ್ಸ್’

ಇತ್ತೀಚೆಗೆ ‘ಕೆವಿಎನ್ ಪ್ರೊಡಕ್ಷನ್ಸ್’ (KVN Productions) ಸಂಸ್ಥೆಯು ‘ಲವ್ ಮಾಕ್ಟೇಲ್ 3’ ಸಿನಿಮಾವನ್ನು ಬಿಡುಗಡೆ ಮಾಡಿತ್ತು. ಆ ಸಿನಿಮಾ ಸೂಪರ್ ಹಿಟ್ ಆಯಿತು. ಅದರ ಬೆನ್ನಲ್ಲೇ ‘ಪೀಟರ್’ ಸಿನಿಮಾವನ್ನು ವಿತರಣೆ ಮಾಡಲು ‘ಕೆವಿಎನ್ ಪ್ರೊಡಕ್ಷನ್ಸ್’ ಸಜ್ಜಾಗಿದೆ. ಈ ಸಿನಿಮಾದ ಕಂಟೆಂಟ್ ನೋಡಿ ಇಷ್ಟಪಟ್ಟಿದ್ದರಿಂದ ವಿತರಿಸಲು ಮುಂದೆ ಬಂದಿದೆ. ಏಪ್ರಿಲ್ 10ಕ್ಕೆ ರಾಜ್ಯದಾದ್ಯಂತ ಬಿಡುಗಡೆ ಮಾಡಲಿದೆ. ರಾಜೇಶ್ ಧ್ರುವ ಅವರು ‘ಪೀಟರ್’ (Peter) ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ.

ನಾಯಕಿಯಾಗಿ ಜಾನ್ವಿ ನಟಿಸಿದ್ದಾರೆ. ರವೀಕ್ಷಾ ಶೆಟ್ಟಿ , ರಘು ಪಾಂಡೇಶ್ವರ್ , ರಾಮನಾಡಗೌಡ, ವರುಣ್ ಪಟೇಲ್, ಪ್ರತಿಮಾ ನಾಯಕ್, ಭರತ್, ರಾಧಾಕೃಷ್ಣ ಕುಂಬ್ಳೆ, ರಕ್ಷಿತ್ ದೊಡ್ಡೇರಾ, ದೀನಾ ಮುಂತಾದವರು ಈ ಸಿನಿಮಾದ ಪಾತ್ರವರ್ಗದಲ್ಲಿ ಇದ್ದಾರೆ. ಕರ್ನಾಟಕ-ಕೇರಳ ಗಡಿ ಭಾಗದಲ್ಲಿ ನಡೆಯುವ ಕಥೆಯನ್ನು ‘ಪೀಟರ್’ ಸಿನಿಮಾದಲ್ಲಿ ತೋರಿಸಲಾಗುವುದು.

ಗುರುಪ್ರಸಾದ್ ನಾರ್ನಾಡ್ ಅವರು ಛಾಯಾಗ್ರಹಣ ಮಾಡಿದ್ದಾರೆ. ನವೀನ್ ಶೆಟ್ಟಿ ಅವರ ಸಂಕಲನ ಈ ಚಿತ್ರಕ್ಕಿದೆ. ‘ವೃದ್ಧಿ ಸ್ಟುಡಿಯೋಸ್’ ಬ್ಯಾನರ್ ಮೂಲಕ 100ಕ್ಕೂ ಹೆಚ್ಚು ಸಿನಿಮಾಗಳಿಗೆ ಸೌಂಡ್ ಡಿಸೈನರ್ ಆಗಿ ಕೆಲಸ ಮಾಡಿದ ರವಿ ಹೀರೇಮಠ್ ಹಾಗೂ ರಾಕೇಶ್ ಹೆಗಡೆ ಅವರು ಈ ಸಿನಿಮಾವವನ್ನು ನಿರ್ಮಿಸಿದ್ದಾರೆ. ರಿತ್ವಿಕ್ ಮುರಳಿಧರ್ ಅವರು ಚಿತ್ರಕ್ಕೆ ಸಂಗೀತ ನೀಡಿದ್ದಾರೆ.

ಈಗಾಗಲೇ ಈ ಸಿನಿಮಾದ ಹಾಡುಗಳು ಗಮನ ಸೆಳೆದಿವೆ. ಇತ್ತೀಚೆಗೆ ಈ ಸಿನಿಮಾದ ಪ್ರೀ-ರಿಲೀಸ್ ಇವೆಂಟ್ ನಡೆಯಿತು. ನಿರ್ದೇಶಕ ಸುಕೇಶ್ ಶೆಟ್ಟಿ ಮಾತನಾಡಿ ಸಿನಿಮಾ ಬಗ್ಗೆ ಮಾಹಿತಿ ಹಂಚಿಕೊಂಡರು. ‘ಕರ್ನಾಟಕ ಮಾತ್ರವಲ್ಲದೆ ಕೇರಳ, ತಮಿಳುನಾಡು, ಹೈದರಾಬಾದ್​ನಲ್ಲಿಯೂ ಪ್ರಚಾರ ಕೆಲಸ ನಡೆಯುತ್ತಿದೆ. ಏಪ್ರಿಲ್ 10ಕ್ಕೆ ನಮ್ಮ ರಾಜ್ಯದಲ್ಲಿ ಬಿಡುಗಡೆಯಾಗಲಿದೆ. ಎರಡು ವಾರದ ಬಳಿಕ ಬೇರೆ ರಾಜ್ಯಗಳಲ್ಲಿ ಬಿಡುಗಡೆ ಮಾಡಲಿದ್ದೇವೆ’ ಎಂದು ಅವರು ಹೇಳಿದರು.

ಇದನ್ನೂ ಓದಿ: ಶರವೇಗದಲ್ಲಿ ಕೆವಿಎನ್ ಪ್ರೊಡಕ್ಷನ್, ನಿರ್ಮಿಸುತ್ತಿರುವ ಸಿನಿಮಾಗಳೆಷ್ಟು? ಹಾಕಿರುವ ಬಂಡವಾಳ ಎಷ್ಟು?

ರಾಜೇಶ್ ಧ್ರುವ ಅವರಿಗೆ ಇದು ಎರಡನೇ ಸಿನಿಮಾ. ಅಚ್ಚುಕಟ್ಟಾಗಿ ಕೆಲಸ ಮಾಡಿದ ನಿರ್ದೇಶಕರು ಮತ್ತು ಯಾವುದೇ ರಾಜಿ ಇಲ್ಲದೇ ನಿರ್ಮಾಣ ಮಾಡಿದ ನಿರ್ಮಾಪಕರನ್ನು ರಾಜೇಶ್ ಧ್ರುವ ಹೊಗಳಿದರು. ‘ಪೀಟರ್ ರಾಕ್ಷಸನೂ ಹೌದು, ರಕ್ಷಕನೂ ಹೌದು’ ಎಂದು ಹೇಳುವ ಮೂಲಕ ಅವರು ಸಿನಿಮಾದ ಕಥೆಯ ಬಗ್ಗೆ ಕೌತುಕ ಮೂಡಿಸಿದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಭಾರತೀಯ ಸ್ನೇಹಿತರು ಚಿಂತಿಸಬೇಕಾಗಿಲ್ಲ; ಹಾರ್ಮುಜ್ ಜಲಸಂಧಿಯ ಬಗ್ಗೆ ಇರಾನ್ ಭರವಸೆ

ಟೆಹ್ರಾನ್, ಏಪ್ರಿಲ್ 2: ಮಧ್ಯ ಪ್ರಾಚ್ಯದಲ್ಲಿ ಉದ್ವಿಗ್ನತೆ ಹೆಚ್ಚುತ್ತಿರುವ ಮಧ್ಯೆ ಭಾರತಕ್ಕೆ ಇರಾನ್ ಮತ್ತೊಮ್ಮೆ ಹಾರ್ಮುಜ್ ಜಲಸಂಧಿಯಲ್ಲಿ ಭಾರತದ ಹಡಗುಗಳಿಗೆ ಯಾವುದೇ ತೊಂದರೆಯಾಗದು ಎಂದು ಭರವಸೆ ನೀಡಿದೆ. ಇರಾನಿನ ರಾಯಭಾರ ಕಚೇರಿ ಇಂದು ಹಾರ್ಮುಜ್ ಜಲಸಂಧಿಯ (Strait of Hormuz) ಬಗ್ಗೆ ಭಾರತಕ್ಕೆ ಭರವಸೆ ನೀಡಿದ್ದು, ಸಂಘರ್ಷ ಮುಂದುವರಿದಿದ್ದರೂ, ಕದನ ವಿರಾಮವನ್ನು ಸಾಧಿಸುವ ಪ್ರಯತ್ನಗಳು ವಿಫಲವಾಗಿದ್ದರೂ ಭಾರತ ಭಯಭೀತರಾಗುವ ಅಗತ್ಯವಿಲ್ಲ ಎಂದು ಒತ್ತಿಹೇಳಿದೆ.

ಹಾರ್ಮುಜ್ ಜಲಸಂಧಿಯು ಕಿರಿದಾದ ಹಾಗೂ ಪ್ರಮುಖ ಜಲಮಾರ್ಗವಾಗಿದ್ದು, ಇದು ಪರ್ಷಿಯನ್ ಕೊಲ್ಲಿಯನ್ನು ಓಮನ್ ಕೊಲ್ಲಿಗೆ ಮತ್ತು ಅರೇಬಿಯನ್ ಸಮುದ್ರಕ್ಕೆ ಸಂಪರ್ಕಿಸುತ್ತದೆ. ಇದು ಆಗ್ನೇಯಕ್ಕೆ ಓಮನ್ ಮತ್ತು ಉತ್ತರಕ್ಕೆ ಇರಾನ್ ನಡುವೆ ಇದೆ. ಇದು ಗಲ್ಫ್ ರಾಷ್ಟ್ರಗಳಿಂದ ಪ್ರಪಂಚದಾದ್ಯಂತ ತೈಲ ಮತ್ತು ಅನಿಲವನ್ನು ಸಾಗಿಸುವ ಹಡಗುಗಳು ಸಾಗುವ ಪ್ರಮುಖ ಮಾರ್ಗವಾಗಿದೆ. ಮಧ್ಯಪ್ರಾಚ್ಯದಲ್ಲಿನ ಸಂಘರ್ಷದಿಂದಾಗಿ ಹಾರ್ಮುಜ್ ನಿರಂತರವಾಗಿ ಅಡಚಣೆಗಳನ್ನು ಎದುರಿಸುತ್ತಿದೆ.

ಇದನ್ನೂ ಓದಿ: ಅಮೆರಿಕಕ್ಕೆ ಪೂರ್ತಿ ಅವಮಾನವಾಗುವವರೆಗೂ ಯುದ್ಧ ಮುಂದುವರೆಯುತ್ತದೆ; ಟ್ರಂಪ್​ಗೆ ಇರಾನ್ ಎಚ್ಚರಿಕೆ

ನಮ್ಮ ಭಾರತೀಯ ಸ್ನೇಹಿತರು ಸುರಕ್ಷಿತ ಕೈಯಲ್ಲಿದ್ದಾರೆ. ಚಿಂತಿಸಬೇಡಿ ಎಂದು ರಾಯಭಾರ ಕಚೇರಿ ಎಕ್ಸ್​ನಲ್ಲಿ ಪೋಸ್ಟ್‌ ಮಾಡಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಭಾರತದ ವಿದೇಶಾಂಗ ಸಚಿವಾಲಯವು ಭಾರತೀಯ ಪ್ರಜೆಗಳ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಮತ್ತು ಗಲ್ಫ್ ಸಂಘರ್ಷದ ನಡುವೆ ಭಾರತೀಯ ಹಡಗುಗಳಿಗೆ ಸುರಕ್ಷಿತ ಮಾರ್ಗವನ್ನು ಖಚಿತಪಡಿಸಿಕೊಳ್ಳಲು ಇರಾನಿನ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ 

Source link

ದಾರಿ ನಿರ್ಮಾಣ ವಿಚಾರದಲ್ಲಿ ಕುಟುಂಬಗಳ ಮಧ್ಯೆ ಮಾರಾಮಾರಿ: ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆಗೆ ಯತ್ನ

ಹಾಸನ, ಏಪ್ರಿಲ್​ 02: ಅವರೆಲ್ಲಾ ಒಂದೇ ಕುಟುಂಬಗಳು. ಒಂದೇ ಸಮುದಾಯಕ್ಕೆ ಸೇರಿದವರು. ಆದರೆ ದಶದಕದ ಹಿಂದೆ ನಡೆದ ಅದೊಂದು ಚುನಾವಣೆ ಊರಿನ್ನೇ ಎರಡು ಭಾಗ ಮಾಡಿ ಹಾಕಿದೆ. ಸಣ್ಣಪುಟ್ಟ ವಿಚಾರಕ್ಕೂ ಕಲಹ, ಮಾರಾಮಾರಿ (Clash) ನಡೆಯುತ್ತಿದೆ. ಐದು ಕುಟುಂಬಗಳು ವಾಸಿಸುವ ಮನೆಗಳಿಗೆ ತೆರಳಲು ರಸ್ತೆ ನಿರ್ಮಾಣದ ವಿಚಾರ ಇದೀಗ ಊರಿನಲ್ಲಿ ಮತ್ತೆ ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದೆ. ಜಿಲ್ಲೆಯ ಬೇಲೂರು ತಾಲೂಕಿನ ಹಂಚಿಹಳ್ಳಿಯಲ್ಲಿ ಘಟನೆ ನಡೆದಿದೆ. ಅಧಿಕಾರಿಗಳ ಸೂಚನೆಯಂತೆ ದಾರಿ ಮಾಡಿಕೊಳ್ಳಲು ಮುಂದಾದಾಗ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆ ಯತ್ನ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಹಳೆಬೀಡು ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರು ದಾಖಲಾಗಿದೆ.

ನಡೆದಿದ್ದೇನು?

ಹಾಸನ ಜಿಲ್ಲೆಯ ಬೇಲೂರು ತಾಲ್ಲೂಕಿನ ಹಂಚಿಹಳ್ಳಿ ಗ್ರಾಮದಲ್ಲಿ ನಡೆದಿರುವ ಘಟನೆ ಇದೀಗ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಐದು ಕುಟುಂಬಗಳು ವಾಸಿಸುವ ಪ್ರದೇಶಕ್ಕೆ ರಸ್ತೆ ನಿರ್ಮಾಣ ಮಾಡಿಕೊಳ್ಳುವ ವಿಚಾರದಲ್ಲಿ ನಡೆದ ಗಲಾಟೆಯಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿಸಿ ಹಲ್ಲೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಪೈಶಾಚಿಕ ಘಟನೆಯ ವಿಡಿಯೋ ವೈರಲ್ ಆಗಿದೆ.

ಇದನ್ನೂ ಓದಿ: ಹೋಟೆಲ್ ಬಳಿ ಡ್ರಗ್ಸ್ ಸೇವನೆ: ಪ್ರಶ್ನಿಸಿದ್ದಕ್ಕೆ ಗಲಾಟೆ; ಸಿಕ್ಕಸಿಕ್ಕ ವಸ್ತುಗಳಿಂದ ಹೊಡೆದಾಟ

ಗ್ರಾಮದ ಗಂಗಾಬೋವಿ, ಶೀವಕುಮಾರ್, ಸೋಮ, ಕಿರಣ್, ಆನಂದ್, ಪುನೀತ್, ಪ್ರತಾಪ್, ಪ್ರಸನ್ನ, ನಾಗಾಬೋವಿ, ಮಂಜಾಬೋವಿ ಎಂಬುವವರು ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಿರುವ ನೊಂದ ಕುಟುಂಬ ಸದಸ್ಯರು ಇಂದು ಹಾಸನದ ಡಿಸಿ ಕಚೇರಿಗೆ ಆಗಮಿಸಿ ರಕ್ಷಣೆಗೆ ಮೊರೆಯಿಟ್ಟಿದ್ದಾರೆ. 8 ವರ್ಷಗಳಿಂದಲೂ ತಮ್ಮ ಮೇಲೆ ಒಂದಿಲ್ಲೊಂದು ನೆಪವೊಡ್ಡಿ ಹಲ್ಲೆ, ದೌರ್ಜನ್ಯ ನಡೆಸುತ್ತಿದ್ದಾರೆ ಎಂದಿದ್ದಾರೆ.

ಮಹಿಳೆ ಬಟ್ಟೆ ಎಳೆದು ಹಲ್ಲೆ

ಡಿಸಿ, ತಹಸಿಲ್ದಾರ್ ಸೂಚನೆಯಂತೆ ರಸ್ತೆ ನಿರ್ಮಾಣ ಮಾಡಿಕೊಳ್ಳಲು ಯತ್ನಿಸಿದಾಗ ಹಲವು ಬಾರಿ ಗಲಾಟೆ ಮಾಡಿದ್ದಾರೆ. ಈಗ ಕೊನೆಯದಾಗಿ ಮಾರ್ಚ್ 22ರಂದು ಮುಂಜಾನೆ 7ಗಂಟೆ ಸುಮಾರಿಗೆ ಮನೆಯೊಳಗೆ ನುಗ್ಗಿ ಮಹಿಳೆಯನ್ನ ಎಳೆತಂದು ಹಲ್ಲೆ ಮಾಡಿದ್ದಾರೆ. ಮೈ ಮೇಲಿನ ಬಟ್ಟೆ ಎಳೆದು ಹಲ್ಲೆ ಮಾಡಿ ನೀಚ ಕೃತ್ಯ ಎಸಗಿದ್ದಾರೆ ಎಂದು ಮಹಿಳೆ ಕಣ್ನೀರಿಟ್ಟಿದ್ದಾರೆ. ಅವರೆ ವಿಡಿಯೋ ಮಾಡಿ ನಮ್ಮ ಮರ್ಯಾದೆ ತೆಗೆದಿದ್ದಾರೆ ಎಂದು ಅಳಲು ತೋಡಿಕೊಂಡಿ​ದ್ದು, ನಮ್ಮನ್ನ ಅಮಾನುಷವಾಗಿ ಹಲ್ಲೆ ಮಾಡಿದವರ ಬಂಧನ ಆಗಲೇಬೇಕು ಎಂದು ಆಗ್ರಹಿಸಿದ್ದಾರೆ.

ಗ್ರಾಮ ಪಂಚಾಯ್ತಿ ಚುನಾವಣೆಯಲ್ಲಿ ತಮ್ಮ ಬೆಂಬಲಿಗ ಅಭ್ಯರ್ಥಿ ವಿರುದ್ಧ ಕುಮಾರ್ ಎಂಬುವವರು ಚುನಾವಣೆಗೆ ನಿಂತರು ಎಂಬ ಕಾರಣಕ್ಕೆ 8 ವರ್ಷದಿಂದ ದ್ವೇಷ ಸಾಧಿಸುತ್ತಿದ್ದಾರೆ ಎನ್ನುವುದು ನೊಂದ ಕುಟುಂಬಗಳ ಅಳಲಾಗಿದೆ. ನಾವು ಐದು ಕುಟುಂಬಗಳಿದ್ದು, ಉಳಿದ 20 ಕುಟುಂಬಗಳು ನಮಗೆ ಕಿರುಕುಳ ನೀಡುತ್ತಿದ್ದಾರೆ. ಮಾರ್ಚ್ 22ರಂದು ಹಲ್ಲೆ ಮಾಡಿದ್ದಾರೆ. ನಮಗೆ ಓಡಾಡಲು ಬೇರೆ ದಾರಿಯೇ ಇಲ್ಲ, ಈಗ ಅವರೇ ಹಲ್ಲೆ ಮಾಡಿ ಮತ್ತೆ ಜೀವಬೆದರಿಕೆ ಹಾಕುತ್ತಿದ್ದಾರೆ. ಅಧಿಕಾರಿಗಳೇ ಬಂದು ದಾರಿ ಗುರುತಿಸಿ ಹೋದರೂ ದಾರಿಯನ್ನ ಬಂದ್​ ಮಾಡಿ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.

10 ಜನರ ವಿರುದ್ಧ ಕೇಸ್: ಆರು ಜನರ ಬಂಧನ

ಇನ್ನು ಘಟನೆ ಸಂಬಂಧ ಶಿವಕುಮಾರ್, ಗಂಗಾಬೋವಿ ಸೇರಿ 10 ಜನರ ವಿರುದ್ಧ ಕೇಸ್ ದಾಖಲಾಗಿದ್ದರೆ, ಇತ್ತ ಪ್ರತಾಪ್​ ಎಂಬುವವರು ನೀಡಿದ ದೂರು ಆಧರಿಸಿ ಕುಮಾರ್, ಗೋವಿಂದಪ್ಪ ಹಾಗೂ ಇತರೆ ನಾಲ್ವರ ವಿರುದ್ದ ಕೂಟ ಹಳೆಬೀಡು ಠಾಣೆಯಲ್ಲಿ ಕೇಸ್​ ದಾಖಲಾಗಿದೆ. ಈಗಾಗಲೆ 6 ಜನರ ಬಂಧನವಾಗಿದ್ದು ಪ್ರತಾಪ್, ಮಂಜಾಬೋವಿ, ಕಿರಣ್ ಹಾಗೂ ಸೋಮ ಎಂಬುವವರ ಬಂಧಿಸಿಲ್ಲ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಕಾನೂನು ಪಾಲನೆ ಕೇವಲ ಆಯ್ಕೆಯ ವಿಷಯವೇ?: ಬಸವನಗುಡಿ ಪುತ್ತಿಗೆ ಮಠಕ್ಕೆ ಬಂದಿದ್ದ ಮಹಿಳೆ ಮೇಲೆ ಹಲ್ಲೆ ಮಾಡಿದ ಯುವಕ

ರಸ್ತೆಯೊಂದರ ವಿಚಾರದಲ್ಲಿ ರಾಜಕೀಯ ತಂದು ಪದೇಪದೆ ಬಡಿದಾಡಿಕೊಂಡ ಎರಡು ಗುಂಪುಗಳು ಇದೀಗ ಪರಸ್ಪರ ದೂರು, ಪ್ರತಿದೂರು ನೀಡಿ ಆರೋಪ ಪ್ರತ್ಯಾರೋಪ ಮಾಡುತ್ತಿದ್ದಾರೆ. ಘಟನೆಯ ಸಂಬಂಧ ಹಳೆಬೀಡು ಠಾಣೆಯ ಪಿಎಸ್​​ಐ ಮಂಜುನಾಥ್, ಒಂದು ಗುಂಪಿನ ಪರ ಬೆಂಬಲ ನೀಡುತ್ತಿದ್ದಾರೆಂದು ಬಂಧನಕ್ಕೆ ಒಳಗಾಗಿರುವ ಶಿವಕುಮಾರ್ ಮತ್ತು ಇತರರ ಸಂಬಂಧಿಕರು ಆರೋಪಿಸಿದ್ದಾರೆ. ಆದರೆ ತಹಶೀಲ್ದಾರ್ ಸೂಚನೆಯಂತೆ ಪಿಎಸ್​ಐ ಸ್ಥಳಕ್ಕೆ ಭೇಟಿ ನೀಡಿ ಕಾನೂನು ಪ್ರಕಾರ ನಡೆದುಕೊಂಡಿದ್ದಾರೆ. ಆದರೆ ರಾಜಕೀಯ ಅಧಿಕಾರದ ಪ್ರಭಾವ ಹೊಂದಿರುವ ಶಿವಕುಮಾರ್ ಮತ್ತು ಇತರರು ನಮ್ಮ ಮೇಲೆ ದೌರ್ಜನ್ಯ ನಡೆಸುತ್ತಿದ್ದು, ನಮಗೆ ರಕ್ಷಣೆ ಕೊಡಿ ಎಂದು ಡಿಸಿ ಅವರನ್ನ ಭೇಟಿ ಮಾಡಿದ ನೊಂದ ಕುಟುಂಬದ ಸದಸ್ಯರು, ತಮ್ಮ ಮೇಲೆ ದೌರ್ಜನ್ಯ ನಡೆಸಲಾಗುತ್ತಿದೆ ಎಂದು ಅಳಲುತೋಡಿಕೊಂಡಿದ್ದಾರೆ.

ಬೀದಿಯಲ್ಲಿ ಮಾರಾಮಾರಿ

ಒಟ್ಟಿನಲ್ಲಿ 8 ವರ್ಷದ ಹಿಂದೆ ನಡೆದ ಚುನಾವಣೆಯಲ್ಲಿ ಸೃಷ್ಟಿಯಾಗಿದ್ದ ಎರಡು ಗುಂಪುಗಳ ನಡುವಿನ ಸಂಘರ್ಷ ಇದೀಗ ಬೀದಿಯಲ್ಲಿ ಮಾರಾಮಾರಿಯ ಹಂತಕ್ಕೆ ಬಂದು ನಿಂತ್ತಿದೆ. ಅಷ್ಟೇ ಅಲ್ಲದೆ ಮಹಿಳೆಯ ಬಟ್ಟೆ ಬಿಚ್ಚಿ ಹಲ್ಲೆ ಮಾಡುವ ನೀಚತನದ ಕೃತ್ಯದ ಬಗ್ಗೆಯೂ ಆರೋಪ ಕೇಳಿಬಂದಿದೆ. ಸದ್ಯ ಪೊಲೀಸರು ಎರಡೂ ಕಡೆಯಿಂದ ದೂರು ದಾಖಲಿಸಿದ್ದು, ತನಿಖೆ ಬಳಿಕ ಸತ್ಯ ತಿಳಿಯಬೇಕಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

 

Source link

KKR vs SRH Record Alert: ಅಪರೂಪದ ತ್ರಿಶತಕ ಪೂರೈಸಿದ ಅಭಿ‘ಸಿಕ್ಸರ್’ ಶರ್ಮಾ

Source link

ಬೆಂಗಳೂರಿನ ಶೇ. 80 ಐಟಿ ಕೂಲಿಗಳಿಗೆ ಇನ್ನು 3 ವರ್ಷದಲ್ಲಿ ಕೆಲಸ ಇರೋದಿಲ್ಲ: ಶಾಕ್ ಕೊಟ್ಟಿದೆ ರೆಡ್ಡಿಟ್ ಪೋಸ್ಟ್

ಬೆಂಗಳೂರು, ಏಪ್ರಿಲ್ 2: ನೀವು ದುಡಿದ ಹಣವೆಲ್ಲವನ್ನೂ ಬಳಸಿ ಬೆಂಗಳೂರಿನಲ್ಲಿ ಮನೆ ಖರೀದಿಸಲು ಹೋಗಬೇಡಿ. ನಿಮ್ಮ ಕೆಲಸ ಯಾವಾಗ ಬೇಕಾದರೂ ಹೋಗಬಹುದು. ಬಾಡಿಗೆ ಮನೆಯಲ್ಲಿ ವಾಸವಿರಿ… ಇದು ಬೆಂಗಳೂರಿನ ಐಟಿ ವೃತ್ತಿಪರನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ರೆಡ್ಡಿಟ್ ಸೋಷಿಯಲ್ ಮೀಡಿಯಾದಲ್ಲಿ (Reddit Post) ಹಾಕಿದ ಪೋಸ್ಟ್​ನಲ್ಲಿ ಐಟಿ ಬಿಟಿ ಸಿಟಿಯ ಟೆಕ್ಕಿಗಳಿಗೆ ಕೊಡಲಾಗಿರುವ ಸಲಹೆ. ಇವರ ಪ್ರಕಾರ ಮುಂದಿನ ಮೂರು ವರ್ಷದೊಳಗೆ ಬೆಂಗಳೂರಿನ ಶೇ. 80ರಷ್ಟು ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳುತ್ತಾರಂತೆ.

ತನ್ನ ಗುಂಡಿ ತಾನೇ ತೋಡಿದ ಟೆಕ್ಕಿ

ರೆಡ್ಡಿಟ್​ನಲ್ಲಿ ಎಲ್ಲಾ ಸಂಕಟ ಮತ್ತು ವಸ್ತುಸ್ಥಿತಿ ತೋಡಿಕೊಂಡಿರುವ ಈ ವ್ಯಕ್ತಿ, ಬೆಂಗಳೂರಿನ ರಿಯಲ್ ಎಸ್ಟೇಟ್, ಐಟಿ ಭವಿಷ್ಯಕ್ಕೆ ಕನ್ನಡಿ ಹಿಡಿದಿದ್ದಾರೆ. ದೊಡ್ಡ ಟೆಕ್ ಕಂಪನಿಯೊಂದರಲ್ಲಿ ಎಐ ಮೈಗ್ರೇಶನ್ ಪ್ರಾಜೆಕ್ಟ್​ನಲ್ಲಿ ಕೆಲಸ ಮಾಡುತ್ತಿದ್ದ ಈತ ಈಗ ಕೆಲಸ ಕಳೆದುಕೊಂಡಿದ್ದಾನೆ. ತಾನು ಅದೇ ಕಂಪನಿಯಲ್ಲಿ ಹಿಂದೆ ಮಾಡುತ್ತಿದ್ದ ಕೆಲಸಕ್ಕೆ ಎಐ ಜಾರಿಗೊಳಿಸುವ ಪ್ರಾಜೆಕ್ಟ್​ನಲ್ಲಿ ತೊಡಗಿದ್ದ. ಅದಾದ ಬಳಿಕ ಆ ಎಐಗೆ ಬಲಿಪಶುವಾದವರಲ್ಲಿ ಆತನೂ ಒಬ್ಬ. ಅದೇ ಅನುಭವದಲ್ಲಿ ಆತ ಬೆಂಗಳೂರಿನ ಐಟಿ ಉದ್ಯೋಗಿಗಳಿಗೆ ಭವಿಷ್ಯ ಇಲ್ಲ ಎಂದಿದ್ದಾನೆ.

ಇದನ್ನೂ ಓದಿ: ಏರ್​ಟೆಲ್ ಈಗ ವಿಶ್ವದ ಎರಡನೇ ಅತಿದೊಡ್ಡ ಟೆಲಿಕಾಂ ಆಪರೇಟರ್; ಅಗ್ರಸ್ಥಾನ ಯಾರದ್ದು, ಟಾಪ್-10 ಕಂಪನಿಗಳು ಯಾವುವು?

‘ಐಟಿ ಗುಲಾಮರ ಪೈಕಿ ಶೇ. 70-80ರಷ್ಟು ಮಂದಿ ಸರ್ವಿಸ್ ಆಧಾರಿತ ಕಂಪನಿಗಳಲ್ಲಿ ಕೆಲಸ ಮಾಡುತ್ತಾರೆ. ಅವರ ಹೆಚ್ಚಿನ ಕೆಲಸಗಳನ್ನು ಎಐ ಟೂಲ್​ಗಳಿಂದ ನಿಭಾಯಿಸಬಹುದು. ಕ್ಲೈಂಟ್​ಗಳು ಮನಸ್ಸು ಮಾಡಿದರೆ ಇದು 1-3 ವರ್ಷದಲ್ಲೇ ಆಗಬಹುದು. ಬ್ಯೂರೋಕ್ರಸಿ ಇತ್ಯಾದಿ ಕಾರಣಕ್ಕೆ ಶೇ. 70 ಮಂದಿಗೆ ಕೆಲಸ ಹೋಗುವುದು 3-5 ವರ್ಷ ವಿಳಂಬವಾಗಬಹುದು. ಉಳಿದ ಶೇ. 30 ಮಂದಿಗೆ ಕೆಲಸ ಉಳಿಯುತ್ತದೆ’ ಎಂದು ಈತ ಭವಿಷ್ಯ ನುಡಿದಿದ್ದಾನೆ.

ಕೆಲಸ ಉಳಿಯೋದು ಯಾಕೆಂದರೆ, ಏನಾದರೂ ಹೆಚ್ಚೂಕಡಿಮೆ ಆದರೆ ದೂಷಿಸಲು ಮನುಷ್ಯರು ಇರಬೇಕಲ್ಲ. ಹಾಗೆಯೇ, ಎಐ ಏಜೆಂಟ್​ಗಳಿಂದ ಯಡವಟ್ಟಾದರೆ ಅದನ್ನು ನಿರ್ವಹಿಸಲಾದರೂ ಮನುಷ್ಯರು ಇರಬೇಕಲ್ಲ. ಅದಕ್ಕೆ ಕೆಲವರಿಗೆ ಕಾಯಕ ಉಳಿದಿರುತ್ತದೆ’ ಎಂಬುದು ಈ ಟೆಕ್ಕಿಯ ಅನಿಸಿಕೆ. ಎಐ ಭೂತ ನಿಜ, ಐಟಿ ಉದ್ಯೋಗಿಗಳು ಕೆಲಸ ಕಳೆದುಕೊಳ್ಳೋದು ನಿಜ ಎಂದು ಈತ ಬರೆದಿದ್ದಾನೆ.

ಇದನ್ನೂ ಓದಿ: ಕಮರ್ಷಿಯಲ್ ಬ್ಯಾಂಕ್​ಗಳ ಎಫ್​ಡಿಗಿಂತಲೂ ಹೆಚ್ಚು ರಿಟರ್ನ್ಸ್ ಕೊಡುತ್ತೆ ಈ ಪೋಸ್ಟ್ ಆಫೀಸ್ ಡೆಪಾಸಿಟ್

ಬೆಂಗಳೂರಿನಲ್ಲಿ ಮನೆಯ ಕೊಳ್ಳಬೇಡಿರಣ್ಣೋ…

ಬೆಂಗಳೂರಿನ ರಿಯಲ್ ಎಸ್ಟೇಟ್ ಮಾರುಕಟ್ಟೆ ವಿಪರೀತ ಉಬ್ಬಲು ಐಟಿ ಕೂಲಿಗಳೇ ಕಾರಣ ಎಂಬುದು ಈ ಟೆಕ್ಕಿಯ ಅಭಿಪ್ರಾಯ. ಕಳೆದ ವರ್ಷ ತಾನು 2 ಕೋಟಿ ರೂ ಮೌಲ್ಯದ ಮನೆ ಖರೀದಿಸಬಹುದಿತ್ತು. ಅದನ್ನು ಖರೀದಿಸುವಷ್ಟು ಹಣಕಾಸು ಬಲ ತನ್ನಲ್ಲಿತ್ತು. ಆದರೂ ಖರೀದಿಸಲಿಲ್ಲ. ಕಚೇರಿ ಸಮೀಪದ ಬಾಡಿಗೆ ಮನೆಯಲ್ಲಿದ್ದೆ. ಎಐ ಪ್ರಾಜೆಕ್ಟ್​ನಲ್ಲಿ ಕೆಲಸ ಮಾಡುತ್ತಿದ್ದರಿಂದ ಉದ್ಯೋಗದ ಕಥೆ ಏನಾಗಬಹುದು ಎನ್ನುವ ಅಂದಾಜು ಇತ್ತು. ಮನೆ ಖರೀದಿ ಮಾಡದಿರುವ ನಿರ್ಧಾರ ಈಗ ಸರಿ ಎನಿಸಿದೆ ಎಂದು ಈ ಟೆಕ್ಕಿ ವಿವರಿಸಿದ್ದಾನೆ.

ಹಾಗೆಯೇ, ಮನೆ ಖರೀದಬೇಕೆನ್ನುವವರಿಗೆ ಈತನ ಒಂದು ಟಿಪ್ಸ್ ಉತ್ತಮ ಎನಿಸಬಹುದು. ಒಬ್ಬ ವ್ಯಕ್ತಿಯ ನಿವ್ವಳ ಆಸ್ತಿಮೌಲ್ಯಕ್ಕಿಂತ ಶೇ 150ರಷ್ಟು ಹೆಚ್ಚಿನ ಬೆಲೆಯ ಮನೆಯನ್ನು ಖರೀದಿಸಬಾರದು ಎಂಬುದು ಇವನ ಸಲಹೆ.

ಇನ್ನಷ್ಟು ವಾಣಿಜ್ಯ ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Source link

ಹಾರ್ಮುಜ್ ಜಲಸಂಧಿಯ ದಿಗ್ಬಂಧನ ತೆರೆಯುವ ಕುರಿತ ಇಂಗ್ಲೆಂಡ್​​ನ ಶೃಂಗಸಭೆಯಲ್ಲಿ ಭಾರತ ಭಾಗಿ

ನವದೆಹಲಿ, ಏಪ್ರಿಲ್ 2: ಹಾರ್ಮುಜ್ ಜಲಸಂಧಿಯನ್ನು ಪುನಃ ತೆರೆಯಲು ಇಂಗ್ಲೆಂಡ್ (UK) ಡಜನ್‌ಗಟ್ಟಲೆ ದೇಶಗಳೊಂದಿಗೆ ಮಾತುಕತೆ ನಡೆಸುತ್ತಿದೆ. ಪಶ್ಚಿಮ ಏಷ್ಯಾದಲ್ಲಿನ ಸಂಘರ್ಷದ ಮಧ್ಯೆ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯಲು ಯುನೈಟೆಡ್ ಕಿಂಗ್‌ಡಮ್ ಆಯೋಜಿಸಿರುವ ಬಹು-ರಾಷ್ಟ್ರಗಳ ವರ್ಚುವಲ್ ಶೃಂಗಸಭೆಯಲ್ಲಿ ಭಾರತ ಭಾಗವಹಿಸಿದೆ ಎಂದು ವಿದೇಶಾಂಗ ಸಚಿವಾಲಯ (MEA) ತಿಳಿಸಿದೆ.

ಸಂಘರ್ಷ ಪೀಡಿತ ಹಾರ್ಮುಜ್ ಜಲಸಂಧಿಯನ್ನು ಮತ್ತೆ ತೆರೆಯುವ ಕುರಿತು ಬಹುಪಕ್ಷೀಯ ಮಾತುಕತೆಗಳಿಗೆ ಯುನೈಟೆಡ್ ಕಿಂಗ್‌ಡಮ್ (UK) ಭಾರತ ಸೇರಿದಂತೆ 35 ದೇಶಗಳನ್ನು ಆಹ್ವಾನಿಸಿದೆ ಎಂದು ವಿದೇಶಾಂಗ ಸಚಿವಾಲಯ ತಿಳಿಸಿದೆ. ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಸಭೆಯಲ್ಲಿ ನವದೆಹಲಿಯನ್ನು ಪ್ರತಿನಿಧಿಸುತ್ತಿದ್ದಾರೆ ಎಂದು MEA ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಇದನ್ನೂ ಓದಿ: ಸುಳ್ಳು ಮತ್ತು ಆಧಾರರಹಿತ; ಕದನ ವಿರಾಮದ ಕುರಿತ ಟ್ರಂಪ್ ಹೇಳಿಕೆಯನ್ನು ನಿರಾಕರಿಸಿದ ಇರಾನ್

“ಯುಕೆ ಹಾರ್ಮುಜ್ ಜಲಸಂಧಿಯ ಕುರಿತು ಮಾತುಕತೆಗಾಗಿ ಭಾರತ ಸೇರಿದಂತೆ ಹಲವಾರು ದೇಶಗಳನ್ನು ಆಹ್ವಾನಿಸಿದೆ. ನಮ್ಮ ಕಡೆಯಿಂದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಈ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ” ಎಂದು ಅವರು ಹೇಳಿದ್ದರು. ಇಂದು ಸಂಜೆ ವಿಕ್ರಮ್ ಮಿಶ್ರಿ ಸಭೆಯಲ್ಲಿ ಭಾಗವಹಿಸಿದ್ದಾರೆ. ವಿಶ್ವದ ಅತ್ಯಂತ ಪ್ರಮುಖ ಇಂಧನ ಕಾರಿಡಾರ್‌ಗಳಲ್ಲಿ ಒಂದಾದ ಇದರಲ್ಲಿ ಸ್ಥಿರತೆಯನ್ನು ಖಚಿತಪಡಿಸಿಕೊಳ್ಳಲು ದೇಶಗಳು ಸಮನ್ವಯವನ್ನು ಹೆಚ್ಚಿಸುತ್ತಿರುವುದರಿಂದ ಈ ಬೆಳವಣಿಗೆ ಸಂಭವಿಸಿದೆ.

ಭಾರತ ಸಹ ಇರಾನ್ ಸೇರಿದಂತೆ ಮಧ್ಯಪ್ರಾಚ್ಯದ ಪ್ರಾದೇಶಿಕ ಪಾಲುದಾರರೊಂದಿಗೆ ತೊಡಗಿಸಿಕೊಂಡಿದ್ದು, ಹಡಗು ಮಾರ್ಗಗಳನ್ನು ಮುಕ್ತವಾಗಿಡಲು ತೊಡಗಿಸಿಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ: ಅಮೆರಿಕಕ್ಕೆ ಪೂರ್ತಿ ಅವಮಾನವಾಗುವವರೆಗೂ ಯುದ್ಧ ಮುಂದುವರೆಯುತ್ತದೆ; ಟ್ರಂಪ್​ಗೆ ಇರಾನ್ ಎಚ್ಚರಿಕೆ

ಯುಕೆ ವರ್ಚುವಲ್ ಆಗಿ ಕರೆದಿರುವ ಈ ಸಭೆಯಲ್ಲಿ ಅಮೆರಿಕ ಭಾಗವಹಿಸುತ್ತಿಲ್ಲ. ಇರಾನ್ ಮೇಲೆ ಅಮೆರಿಕ-ಇಸ್ರೇಲಿ ದಾಳಿಯಿಂದ ಉಂಟಾದ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಮುಚ್ಚಿದ ಜಲಮಾರ್ಗವನ್ನು ಸುರಕ್ಷಿತಗೊಳಿಸುವುದು ಅಮೆರಿಕದ ಕೆಲಸವಲ್ಲ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ಪಷ್ಟಪಡಿಸಿದ್ದರು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಖಾರವಾಗಿರುವ ಆಹಾರ ಸೇವನೆ ಮಾಡೋದಕ್ಕೆ ತುಂಬಾ ಇಷ್ಟಾನಾ? ಹಾಗಿದ್ರೆ ಈ ಸ್ಟೋರಿ ನಿಮಗಾಗಿ

ಸಾಮಾನ್ಯವಾಗಿ ಕೆಲವರಿಗೆ ಸಿಹಿ ಆಹಾರಕ್ಕಿಂತ ಮಸಾಲೆ ಹೆಚ್ಚಿರುವ, ಖಾರ ಖಾರವಾಗಿರುವ ಆಹಾರವೇ ತುಂಬಾ ಇಷ್ಟವಾಗುತ್ತದೆ. ಅದರಲ್ಲಿಯೂ ಫಾಸ್ಟ್ ಫುಡ್‌ನಲ್ಲಿರುವ ಮಸಾಲೆಗಳ ಸೇವನೆ ಮಾಡುತ್ತಾರೆ. ಕೆಲವರಿಗೆ ಮಸಾಲೆ ಇಲ್ಲದೆ ಊಟವೇ ರುಚಿಯಾಗುವುದಿಲ್ಲ. ಆದರೆ ಹೆಚ್ಚು ಮಸಾಲೆ (Spicy Food) ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಅದರಲ್ಲಿಯೂ ಮಸಾಲೆ ಅಧಿಕವಾಗಿರುವ ಆಹಾರವು ನಮ್ಮ ಇಂಟೆಸ್ಟೈನ್ ಆರೋಗ್ಯಕ್ಕೆ ಹಾನಿ ಮಾಡುತ್ತದೆಯೇ, ಇಲ್ಲವೇ ಎಂಬುದನ್ನು ತಿಳಿದಿರಬೇಕಾಗುತ್ತದೆ. ದೇಹದಲ್ಲಿ ಕೆಲವು ಲಕ್ಷಣ ಕಂಡುಬಂದಾಗ ಅದನ್ನು ನಿರ್ಲಕ್ಷ್ಯ ಮಾಡದೆಯೇ ವೈದ್ಯರ ಸಲಹೆ ಪಡೆಯಬೇಕಾಗುತ್ತದೆ. ಜೊತೆಗೆ ಕೆಲವು ಆರೋಗ್ಯಕರ ಸಲಹೆ ಪಾಲನೆ ಮಾಡುವ ಮೂಲಕ ಮಸಾಲೆ ಹೆಚ್ಚಾಗಿರುವ ಆಹಾರ ಸೇವನೆ ಮಾಡುವುದರಿಂದ ಉಂಟಾಗುವ ಹಾನಿಯನ್ನು ತಡೆಯಬಹುದಾಗಿದೆ.

ಮಸಾಲೆ ಆಹಾರ ಇಂಟೆಸ್ಟೈನ್ ಗಳಿಗೆ ಹಾನಿ ಮಾಡುತ್ತದೆಯೇ?

ತಜ್ಞರ ಪ್ರಕಾರ, ಮಸಾಲೆಯುಕ್ತ ಆಹಾರ ಸೇವನೆ ಮಾಡಿದ ತಕ್ಷಣವೇ ದೊಡ್ಡ ಹಾನಿ ಮಾಡುವುದಿಲ್ಲ. ಆದರೆ ಅದನ್ನು ಹೆಚ್ಚೆಚ್ಚು ಪ್ರಮಾಣದಲ್ಲಿ ಮತ್ತು ನಿಯಮಿತವಾಗಿ ಸೇವಿಸಿದರೆ ಇಂಟೆಸ್ಟೈನ್ ಒಳಪದರ (lining) ಹಾನಿಗೊಳಗಾಗಬಹುದು. ಆರಂಭದಲ್ಲಿ ಕೆಲವು ಸಣ್ಣಪುಟ್ಟ ಲಕ್ಷಣಗಳು ಕಾಣಿಸಬಹುದು. ಹೊಟ್ಟೆ ಉರಿ, ಗ್ಯಾಸು, ಆಸಿಡಿಟಿ ಮುಂತಾದವು. ಆದರೆ ಇವುಗಳನ್ನು ನಿರ್ಲಕ್ಷಿಸಿದರೆ ಮುಂದೆ ಗಂಭೀರ ಸಮಸ್ಯೆಗಳಾಗಬಹುದು. ವಾರದಲ್ಲಿ ಮೂರು ನಾಲ್ಕು ದಿನ ಮಸಾಲೆಯುಕ್ತ ಆಹಾರ ಸೇವಿಸುವವರು ಕೆಲ ವರ್ಷಗಳಲ್ಲಿ ಅಲ್ಸರ್ ಮತ್ತು ಐಬಿಎಸ್ ಅಪಾಯದಿಂದ ಬಳಲಬಹುದು. ಜೊತೆಗೆ ಪ್ರತಿ ವ್ಯಕ್ತಿಯ ದೇಹದ ಸಹನಶಕ್ತಿ ವಿಭಿನ್ನವಾಗಿರುತ್ತದೆ. ಕೆಲವರು ಮಸಾಲೆ ಆಹಾರವನ್ನು ಸುಲಭವಾಗಿ ಜೀರ್ಣಿಸಿಕೊಳ್ಳುತ್ತಾರೆ, ಆದರೆ ಕೆಲವರಿಗೆ ಕಡಿಮೆ ಪ್ರಮಾಣದಲ್ಲಿ ಸೇವನೆ ಮಾಡಿದರೂ ಸಹ ಸಮಸ್ಯೆಗಳು ಕಾಣಿಸಬಹುದು.

ಇದನ್ನೂ ಓದಿ: ಮಕ್ಕಳಿಗೆ ಖಾರ ಪದಾರ್ಥ ನೀಡಲು ಯಾವಾಗ ಆರಂಭ ಮಾಡಬೇಕು?

ಈ ಲಕ್ಷಣಗಳು ಕಂಡರೆ ಎಚ್ಚರ!

  • ಹೊಟ್ಟೆ ನೋವು
  • ಚುಚ್ಚುವಂತ ಅನುಭವ
  • ವಾಂತಿ
  • ಹೊಟ್ಟೆಯಲ್ಲಿ ಉರಿ
  • ಆಸಿಡಿಟಿ
  • ಹೊಟ್ಟೆ ತುಂಬಿದ ಅನುಭವ
  • ಸರಿಯಾಗಿ ಮಲವಿಸರ್ಜನೆ ಆಗದಿರುವುದು
  • ಹಸಿವು ಕಡಿಮೆಯಾಗುವುದು

ಯಾರು ಮಸಾಲೆ ಆಹಾರದಿಂದ ದೂರವಿರಬೇಕು?

ತಜ್ಞರ ಸಲಹೆಯಂತೆ, ಮಸಾಲೆ ಆಹಾರ ಸೇವಿಸಿದ ನಂತರ ಮೇಲಿನ ಲಕ್ಷಣಗಳು ಕಾಣಿಸಿದರೆ ಅಂತವರು ಖಾರ ಹೆಚ್ಚಾಗಿರುವ ಆಹಾರಗಳನ್ನು ಸೇವನೆ ಮಾಡದಿರುವುದು ಒಳ್ಳೆಯದು. ಕೆಲವೊಮ್ಮೆ ಮಾತ್ರ ಕಡಿಮೆ ಪ್ರಮಾಣದಲ್ಲಿ ಸೇವಿಸಬಹುದು. ಆದರೆ ಹೊಟ್ಟೆ ಸಂಬಂಧಿತ ಕಾಯಿಲೆಗಳಿರುವವರು (ಜೀರ್ಣ ಸಮಸ್ಯೆಗಳು, ಅಲ್ಸರ್, IBS) ಮಸಾಲೆ ಆಹಾರವನ್ನು ಸಂಪೂರ್ಣವಾಗಿ ಬಿಡುವುದು ಒಳ್ಳೆಯದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಗುಡ್​ ನ್ಯೂಸ್: ಏ.5ರಂದು ಬೆಂಗಳೂರು ನಮ್ಮ ಮೆಟ್ರೋ ಸಂಚಾರ ಮಧ್ಯರಾತ್ರಿ ವರೆಗೂ ವಿಸ್ತರಣೆ

ಬೆಂಗಳೂರು, ಏಪ್ರಿಲ್ 02): ಇಂಡಿಯನ್ ಪ್ರೀಮಿಯರ್ ಲೀಗ್(IPL 2026) ಮ್ಯಾಚ್ ಹಿನ್ನೆಲೆಯಲ್ಲಿ ಬೆಂಗಳೂರು ನಮ್ಮ ಮೆಟ್ರೋ (Bengaluru Namma Metro) ಸೇವೆ ಮತ್ತೆ ವಿಸ್ತರಣೆ ಮಾಡಲಾಗಿದೆ. ಮಾರ್ಚ್ 28ರಂದು ಬೆಂಗಳೂರಿನಲ್ಲಿ ನಡೆದಿದ್ದ ಐಪಿಎಲ್ ಉದ್ಘಾಟನಾ ಪಂದ್ಯದ ಸಂದರ್ಭದಲ್ಲೂ ಸಹ ಸಾರ್ವಜನಿಕರ ಅನುಕೂಲಕ್ಕಾಗಿ ಮೆಟ್ರೋ ಸಮಯ ವಿಸ್ತರಣೆ ಮಾಡಲಾಗಿತ್ತು. ಇದೀಗ ಏಪ್ರಿಲ್ 5ರಂದು ಆರ್​​ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್  ಪಂದ್ಯ ಇರುವುದರಿಂದ ಅಂದು ಮೆಟ್ರೋ ಸಂಚಾರ ರಾತ್ರಿ 2 ಗಂಟೆವರೆಗೆ ಇರಲಿದೆ. ಪ್ರಯಾಣಿಕರಿಗೆ ಸುಲಭ ಹಾಗೂ ಸುರಕ್ಷಿತ ಪ್ರಯಾಣಕ್ಕೆ ಅನುಕೂಲವಾವಾಗಲಿ ಬಿಎಂಆರ್​​ಸಿಎಲ್ ಮೆಟ್ರೋ ಸಂಚಾರ ಸಮಯವನ್ನು ವಿಸ್ತರಿಸಿದೆ.

ಮೆಟ್ರೋ ಸಂಚಾರ ವೇಳಾಪಟ್ಟಿ ಹೀಗಿದೆ

ಏಪ್ರಿಲ್ 5ರಂದು ಭಾನುವಾರ ಬೆಂಗಳೂರಿನ ಚೆನ್ನಸ್ವಾಮಿ ಸ್ಟೇಡಿಯಂನಲ್ಲಿ ಅರ್​ಸಿಬಿ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಐಪಿಎಲ್ ಪಂದ್ಯ ಇದ್ದು, ಅಂದು ಮೆಟ್ರೋ ಎಲ್ಲಾ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ಮೆಟ್ರೋ ಸೇವೆಯನ್ನು ರಾತ್ರಿ 11:00 ಗಂಟೆಯಿಂದ ಮಧ್ಯರಾತ್ರಿ 2 ಗಂಟೆಯವರೆಗೆ ವಿಸ್ತರಿಸಲಾಗಿದೆ.

ಎಲ್ಲ ಟರ್ಮಿನಲ್ ನಿಲ್ದಾಣಗಳಿಂದ ಕೊನೆಯ ರೈಲುಗಳು, ‘ವೈಟ್‌ಫೀಲ್ಡ್ (ಕಾಡುಗೋಡಿ) ನಿಂದ ರಾತ್ರಿ 12.30ಕ್ಕೆ ಮತ್ತು ಚೆಲ್ಲಘಟ್ಟ ದಿಂದ ರಾತ್ರಿ 12.45 ಗಂಟೆಗೆ ಹೊರಡುತ್ತವೆ. ರೇಷ್ಮೆ ಸಂಸ್ಥೆ ಹಾಗೂ ಮಾದಾವರದಿಂದ ರಾತ್ರಿ 12.45 ಗಂಟೆಗೆ ಇನ್ನೂ ಬೊಮ್ಮಸಂದ್ರ ದಿಂದ ರಾತ್ರಿ 12.30 ಹಾಗೂ ಆರ್.ವಿ. ರಸ್ತೆ ಯಿಂದ ರಾತ್ರಿ 02.00ಕ್ಕೆ ಕೊನೆಯ ರೈಲು ಹೊರಡುತ್ತವೆ. ನಾಡಪ್ರಭು ಕೆಂಪೇಗೌಡ ನಿಲ್ದಾಣ (ಮಜೆಸ್ಟಿಕ್) ನಾಲ್ಕು ದಿಕ್ಕುಗಳಿಗೆ ಮಧ್ಯರಾತ್ರಿ 01:30ಕ್ಕೆ ಕೊನೆಯ ರೈಲು ಹೊರಡತ್ತವೆ ಎಂದು ಬಿಎಂಆರ್​ಸಿಎಲ್ ಮಾಹಿತಿ ನೀಡಿದೆ.

ಇದನ್ನೂ ಓದಿ: ಪ್ರಯಾಣಿಕರ ಗಮನಕ್ಕೆ: ಏ 5ರಂದು ಈ ಮಾರ್ಗದ ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಎರಡು ಮಾರ್ಗಗಳ ಪ್ರಯಾಣಕ್ಕಾಗಿ ನಮ್ಮ ಮೆಟ್ರೋ ಕ್ಯೂಆ‌ರ್ (QR) ಕೋಡ್ ಡಿಜಿಟಲ್ ಐಪಿಎಲ್ ಪಂದ್ಯದ ಟಿಕೆಟ್‌ ಗಳಲ್ಲಿ ಒಳಗೊಂಡಿರುತ್ತದೆ. ಕಬ್ಬನ್ ರಸ್ತೆ ಭಾಗದಿಂದ ಸ್ಟೇಡಿಯಂಗೆ ಪ್ರವೇಶ, ನಿರ್ಗಮನ ಗೇಟ್‌ ಗಳನ್ನು ಬಳಸುವ ಪ್ರೇಕ್ಷಕರು ಕಬ್ಬನ್ ಪಾರ್ಕ್ ಮೆಟ್ರೋ ನಿಲ್ದಾಣ ಬಳಸಬೇಕಿದೆ. ಲಿಂಕ್ ರಸ್ತೆ ಭಾಗದಿಂದ ಪ್ರವೇಶ, ನಿರ್ಗಮನ ಗೇಟ್‌ಗಳನ್ನು ಬಳಸುವ ಪ್ರೇಕ್ಷಕರು ಸಮೀಪದಲ್ಲಿರುವ ಮಹಾತ್ಮ ಗಾಂಧಿ ರಸ್ತೆ ಮೆಟ್ರೋ ನಿಲ್ದಾಣ ಮೂಲಕ ಬರುವಂತೆ ತಿಳಿಸಿದೆ.

ಮೆಟ್ರೋ ಸ್ಟೇಷನ್​​ಗಳಲ್ಲಿ ಪಾರ್ಕಿಂಗ್

ಕ್ರಿಕೆಟ್ ನಡೆಯುವ ದಿನ ನಮ್ಮ ಮೆಟ್ರೋದಲ್ಲಿ ಸುಗಮ ಪ್ರಯಾಣ ಖಚಿತಪಡಿಸಲು, ಬಿಎಂಆರ್‌ಸಿಎಲ್ ಅನೇಕ ಮೆಟ್ರೋ ನಿಲ್ದಾಣಗಳಲ್ಲಿ ಹೆಚ್ಚುವರಿ ಪಾರ್ಕಿಂಗ್ ವ್ಯವಸ್ಥೆ ಕಲ್ಪಿಸಿದೆ. ಪಂದ್ಯದ ದಿನಗಳಲ್ಲಿ ಮೆಟ್ರೋ ನಿಲ್ದಾಣಗಳ ಪಾರ್ಕಿಂಗ್ ಸೌಲಭ್ಯ ನೀಡಿದ್ದು, ಎರಡು ಚಕ್ರ ವಾಹನಗಳಿಗೆ 30 ರೂ., ಕಾರುಗಳಿಗೆ 60 ರೂ. ನಿಗದಿ ಮಾಡಲಾಗಿದೆ. ಈ ದರವು ಆ ದಿನದ ಮೆಟ್ರೋ ಸೇವೆ ಮುಕ್ತಾಯವಾಗುವವರೆಗೆ ಮಾತ್ರವೇ ಮಾನ್ಯವಾಗಿರುತ್ತದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

KKR vs SRH: 4,6,6,4.. ಹೆಡ್ ಹಂಟ್​ಗೆ ವೈಭವ್ ಹರೋಹರ

ಈಡನ್ ಗಾರ್ಡನ್ ಮೈದಾನದಲ್ಲಿ ನಡೆಯುತ್ತಿರುವ ಐಪಿಎಲ್ 2026 ರ 6ನೇ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್​ ಹಾಗೂ ಸನ್‌ರೈಸರ್ಸ್ ಹೈದರಾಬಾದ್ ತಂಡಗಳು ಮುಖಾಮುಖಿಯಾಗಿವೆ. ಈ ಪಂದ್ಯದಲ್ಲಿ ಟಾಸ್ ಸೋತ ಸನ್‌ರೈಸರ್ಸ್ ಮೊದಲು ಬ್ಯಾಟಿಂಗ್‌ ಮಾಡುತ್ತಿದ್ದು, ತಂಡದ ಆರಂಭಿಕರಿಬ್ಬರು ಸ್ಫೋಟಕ ಆರಂಭವನ್ನು ಒದಗಿಸಿಕೊಟ್ಟಿದ್ದಾರೆ. ಅದರಲ್ಲೂ ಆರಂಭದಿಂದಲೂ ಅಬ್ಬರಿಸಿದ ಟ್ರಾವಿಸ್ ಹೆಡ್ ಕೆಕೆಆರ್ ಬೌಲರ್​ಗಳನ್ನು ಕಾಡಿದರು.

ಅಭಿಷೇಕ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸಿದ ಟ್ರಾವಿಸ್ ಹೆಡ್, ವೈಭವ್ ಅರೋರಾ ಬೌಲ್ ಮಾಡಿದ ಇನ್ನಿಂಗ್ಸ್​ನ ಮೂರನೇ ಓವರ್​ನಲ್ಲಿ 2 ಬೌಂಡರಿ ಹಾಗೂ 2 ಸಿಕ್ಸರ್​ಗಳನ್ನು ಬಾರಿಸಿದರು. ಈ ಓವರ್​ನ ಮೊದಲ ಎಸೆತವನ್ನು ಬೌಂಡರಿಗಟ್ಟಿದ ಹೆಡ್, ಮೂರು ಮತ್ತು ನಾಲ್ಕನೇ ಎಸೆತದಲ್ಲಿ ಸಿಕ್ಸರ್ ಬಾರಿಸಿದರು. ಐದನೇ ಎಸೆತದಲ್ಲಿ ಮತ್ತೊಂದು ಬೌಂಡರಿ ಬಂತು. ಒಟ್ಟಾರೆ ಈ ಓವರ್​ನಲ್ಲಿ 21 ರನ್​ಗಳು ಬಂದವು.

ಆದಾಗ್ಯೂ ಈ ಪಂದ್ಯದಲ್ಲಿ ಅರ್ಧಶತಕದಂಚಿನಲ್ಲಿ ಎಡವಿದ ಹೆಡ್ ಕಾರ್ತಿಕ್ ತ್ಯಾಗಿ ಬೌಲ್ ಮಾಡಿದ 6ನೇ ಓವರ್​ನ 4ನೇ ಎಸೆತದಲ್ಲಿ ಕ್ಯಾಚಿತ್ತು ಔಟಾದರು. ತಮ್ಮ ಇನ್ನಿಂಗ್ಸ್​ನಲ್ಲಿ 21 ಎಸೆತಗಳನ್ನು ಎದುರಿಸಿದ ಹೆಡ್ 6 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 46 ರನ್ ಬಾರಿಸಿ ಔಟಾದರು. ಇದರ ಜೊತೆಗೆ ಹೆಡ್, ಅಭಿಷೇಕ್ ಶರ್ಮಾ ಅವರೊಂದಿಗೆ ಮೊದಲ ವಿಕೆಟ್​ಗೆ 5.4 ಓವರ್​ಗಳಲ್ಲಿ 82 ರನ್​ಗಳ ಜೊತೆಯಾಟ ಕಟ್ಟಿ ತಂಡವನ್ನು ಬಲಿಷ್ಠ ಸ್ಥಿತಿಗೆ ಕೊಂಡೊಯ್ದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link