ಶಿವರಾಜ್ ಕುಮಾರ್ (Shiva Rajkumar) ಅವರ ವಯಸ್ಸಿಗೂ ಅವರ ಎನರ್ಜಿಗೂ ಸಂಬಂಧವೇ ಇಲ್ಲ. ಎಲ್ಲೇ ಹೋದರೂ ಶಿವಣ್ಣ ತಮ್ಮ ಎನರ್ಜಿಯಿಂದ ಆ ಸ್ಥಳದ ವಾತಾವರಣವನ್ನೇ ಬದಲಾಯಿಸಿಬಿಡುತ್ತಾರೆ. ಶಿವರಾಜ್ ಕುಮಾರ್ ಅವರು ಕನ್ನಡ ಮಾತ್ರವಲ್ಲದೆ ಕೆಲ ಪರ ಭಾಷೆ ಸಿನಿಮಾಗಳಲ್ಲಿಯೂ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೆ ಅವರು ರಾಮ್ ಚರಣ್ ಜೊತೆ ನಟಿಸಿದ ‘ಪೆದ್ದಿ’ ಸಿನಿಮಾ ರಿಲೀಸ್ ಆಗಿ ಹಿಟ್ ಆಗಿದೆ. ಇದೀಗ ಅವರು ಹೊಸದೊಂದು ತಮಿಳು ಸಿನಿಮಾನಲ್ಲಿ ನಟಿಸುತ್ತಿದ್ದು, ಅಲ್ಲಿಯೂ ಸಹ ಶಿವಣ್ಣ ತಮ್ಮ ಎನರ್ಜಿಯಿಂದ ಇಡೀ ಸೆಟ್ಗೆ ಹೊಸ ಕಳೆ ತಂದಿದ್ದಾರೆ.
ಶಿವರಾಜ್ ಕುಮಾರ್ ಅವರು ಇನ್ನೂ ಹೆಸರಿಡದ ಹೊಸ ತಮಿಳು ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಡ್ರಾಮಾ ಕಂಪೆನಿ ಹೆಸರಿನ ನಿರ್ಮಾಣ ಸಂಸ್ಥೆ ನಿರ್ಮಿಸುತ್ತಿರುವ ಮೊದಲ ಸಿನಿಮಾ ಇದಾಗಿದ್ದು, ಸಿನಿಮಾ ತಂಡ ಇತ್ತೀಚೆಗಷ್ಟೆ ಶಿವಣ್ಣನವರ ವಿಡಿಯೋ ಒಂದನ್ನು ಬಿಡುಗಡೆ ಮಾಡಿದೆ. ವಿಡಿಯೋನಲ್ಲಿ ಶಿವಣ್ಣ ತಮ್ಮ ಎಂದಿನ ಜೋಶ್ನಲ್ಲಿ ಸೆಟ್ನಲ್ಲಿ ನಗುತ್ತಾ, ಎಲ್ಲರನ್ನೂ ನಗಿಸುತ್ತಾ, ಕಾಲೆಳೆಯುತ್ತಾ, ಯುವಕರಿಗೆ ಪಾಠ ಮಾಡುತ್ತಾ ಕಂಡು ಬಂದಿದ್ದಾರೆ. ಶಿವರಾಜ್ ಕುಮಾರ್ ಅವರು ಸೆಟ್ನಲ್ಲಿ ತಮಿಳಿಗರೊಬ್ಬರಿಗೆ ಕನ್ನಡದ ‘ಜೊತೆಯಲಿ, ಜೊತೆಯಲಿ’ ಹಾಡು ಸಹ ಹೇಳಿಕೊಟ್ಟಿದ್ದಾರೆ.
ವಿಡಿಯೋ ನೋಡಿದರೆ ಶಿವರಾಜ್ ಕುಮಾರ್ ಅವರು ಮಧ್ಯಮ ವರ್ಗದ ವ್ಯಕ್ತಿಯೊಬ್ಬನ ಪಾತ್ರದಲ್ಲಿ ನಟಿಸಿದಂತಿದೆ. ಹೀರೋ ತಂದೆಯ ಪಾತ್ರ ಇರಬಹುದೆಂಬ ಅನುಮಾನವೂ ಮೂಡುತ್ತಿದೆ. ಆದರೆ ಶಿವಣ್ಣನ ಪಾತ್ರ ಪವರ್ಫುಲ್ ಆಗಿಯೂ ಇರಬಹುದೆಂಬ ಸುಳಿವು ವಿಡಿಯೋನಲ್ಲಿದೆ. ವಿಡಿಯೋನಲ್ಲಿ ತೋರಿಸಿರುವಂತೆ, ಸೆಟ್ನಲ್ಲಿಯೇ ಶಿವರಾಜ್ ಕುಮಾರ್ ಮತ್ತು ಗೀತಾ ಶಿವರಾಜ್ ಕುಮಾರ್ ಅವರ ವಿವಾಹ ವಾರ್ಷಿಕೋತ್ಸವದ ಸೆಲೆಬ್ರೇಷನ್ ಸಹ ನಡೆದಿದೆ. ಬನಿಯನ್ನು-ಪಂಚೆ ತೊಟ್ಟುಕೊಂಡು ಶಿವಣ್ಣ ಕೇಕ್ ಕತ್ತರಿಸಿದ್ದಾರೆ.
ವಿಡಿಯೋ ಅನ್ನು 65 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಕಮೆಂಟ್ ಸೆಕ್ಷನ್ನಲ್ಲಿ ಶಿವರಾಜ್ ಕುಮಾರ್ ಅವರ ಸರಳತೆಯನ್ನು, ಸೆಟ್ನಲ್ಲಿ ಅವರು ಬೆರೆಯುವ ರೀತಿ, ಅವರ ಎನರ್ಜಿ, ಜೋಶ್ ಅನ್ನು ನೆಟ್ಟಿಗರು ಕೊಂಡಾಡಿದ್ದಾರೆ. ಶಿವರಾಜ್ ಕುಮಾರ್ ಅವರು ಎಲ್ಲಿಯೇ ಹೋದರು ಸೆಟ್ಗೆ ಒಂದು ಎನರ್ಜಿ ತಂದುಕೊಡುತ್ತಾರೆ. ಶಿವರಾಜ್ ಕುಮಾರ್ ಅವರಿಗೆ ಈಗ 63 ವರ್ಷ ವಯಸ್ಸು. ಆದರೆ ಈಗಲೂ ನವ ಯುವಕನಂತೆ ಹಾಡುತ್ತಾ, ಕುಣಿಯುತ್ತಾ ಇರುತ್ತಾರೆ.
ಶಿವರಾಜ್ ಕುಮಾರ್ ಅವರು ಪ್ರಸ್ತುತ ಕನ್ನಡದ ‘666 ಆಪರೇಷನ್ ಡ್ರೀಮ್ ಪ್ರಾಜೆಕ್ಟ್’ ಸಿನಿಮಾನಲ್ಲಿ ನಟಿಸುತ್ತಿದ್ದಾ. ಜೊತೆಗೆ ‘ಎ ಫಾರ್ ಆನಂದ್’ ಹೆಸರಿನ ಹೊಸ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ‘ಬೇಲ್’ ಹೆಸರಿನ ಸಿನಿಮಾನಲ್ಲಿ ನಟಿಸುತ್ತಿದ್ದಾರೆ. ಇದರ ಜೊತೆಗೆ ತಮಿಳಿನ ‘ಜೈಲರ್ 2’ ಸಿನಿಮಾನಲ್ಲಿಯೂ ನಟಿಸಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
