Headlines

ಕೊಲೆ ಮಾಡಿದವನು ಒಬ್ಬ, ಪೊಲೀಸ್ ಕೈಗೆ ಸಿಕ್ಕಿ ಹಾಕಿಕೊಂಡವನು ಇನ್ನೊಬ್ಬ! – Kannada News | Voter ID Misused for Murder: Bengaluru Man Gets Shocking Police Notice

ಬೆಂಗಳೂರು, ಮೇ 07: ಪ್ರತಿಯೊಬ್ಬ ಭಾರತೀಯ ಮತದಾರನಿಗೆ ವೋಟರ್ ಐಡಿ​ (Voter ID) ಕಡ್ಡಾಯ ಎಂಬುದು ಎಲ್ಲರಿಗೂ ತಿಳಿದಿದೆ. ಅದರ​ ಮಾಹಿತಿಗಳನ್ನು ಗುರುತು-ಪರಿಚಯವಿಲ್ಲದವರ ಬಳಿ ಹಂಚಿಕೊಳ್ಳಬಾರದು ಎಂಬುದೂ ಎಲ್ಲರಿಗೂ ತಿಳಿದಿರುವ ವಿಷಯ. ಯಾಕೆಂದರೆ ದುಷ್ಕರ್ಮಿಗಳು ನಮ್ಮ ಐಡಿ ಬಳಸಿ ಯಾವುದೆ ಕ್ರಿಮಿನಲ್ ಚಟುವಟಿಕೆ ಎಸಗಿದರೆ ನಮಗೆ ಕಂಟಕ ಎದುರಾಗಬಹುದು. ಇದಕ್ಕೆ ಉದಾಹರಣೆಯೆಂಬಂತೆ ಬೆಂಗಳೂರಿನಲ್ಲೊಂದು ಘಟನೆ ನಡೆದಿದೆ. ವ್ಯಕ್ತಿಯೊಬ್ಬರ ವೋಟರ್ ಐಡಿ ಬಳಸಿ ಅಕ್ರಮವಾಗಿ ಸಿಮ್ ಕಾರ್ಡ್​ ಖರೀದಿಸಿ,ಅದನ್ನು ಕೊಲೆ ಕೃತ್ಯಕ್ಕೆ ಬಳಸಿಕೊಂಡ ಪ್ರಕರಣವೊಂದು ವರದಿಯಾಗಿದೆ. ಮುಖ್ಯಾಂಶಗಳು ಹಳೆಯ…

Read More

ಬೆಂಗಳೂರಿನ ಅಮೃತಹಳ್ಳಿಯಲ್ಲಿ ಪೊಲೀಸರ ಮೇಲೆಯೇ ಕಿಡಿಗೇಡಿಗಳಿಂದ ಹಲ್ಲೆ! ಇಬ್ಬರ ಬಂಧನ – Kannada News | Bengaluru Crime: Software Engineer and Student Arrested for Attacking Police Constables in Amruthahalli

ಬೆಂಗಳೂರು, ಮೇ 7: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ (Bengaluru) ನೈಟ್ ಬೀಟ್ ಮಾಡುವ ಪೊಲೀಸ್ ಸಿಬ್ಬಂದಿಗೇ ರಕ್ಷಣೆ ಇಲ್ಲದಂತಾಗಿದೆ. ತಡರಾತ್ರಿ ನಿರ್ಜನ ಪ್ರದೇಶದಲ್ಲಿ ಮದ್ಯಪಾನ ಮಾಡುತ್ತಿದ್ದದ್ದನ್ನು ಪ್ರಶ್ನಿಸಿದಕ್ಕೆ, ಕರ್ತವ್ಯ ನಿರತ ಇಬ್ಬರು ಪೊಲೀಸ್ ಕಾನ್‌ಸ್ಟೆಬಲ್‌ಗಳ ಮೇಲೆ ಕಿಡಿಗೇಡಿಗಳು ಹಲ್ಲೆ ನಡೆಸಿರುವ ಘಟನೆ ಅಮೃತಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಈ ಸಂಬಂಧ ಇಬ್ಬರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಮುಖ್ಯಾಂಶಗಳು ಅಮೃತಹಳ್ಳಿ ಠಾಣೆಯ ಕಾನ್‌ಸ್ಟೆಬಲ್‌ಗಳಾದ ರುದ್ರಪ್ಪ ಮತ್ತು ಹನುಮಂತು ಅವರ ಮೇಲೆ ಹಲ್ಲೆ. ಪಜೇರೋ ಕಾರಿನಲ್ಲಿ ನೈಟ್ ಔಟ್…

Read More

SRH vs PBKS: ಸತತ ಮೂರನೇ ಸೋಲು: ಪಂದ್ಯ ಸೋತಿದ್ದರಿಂದ ಕೋಪಗೊಂಡ ಶ್ರೇಯಸ್ ಅಯ್ಯರ್, ಏನು ಹೇಳಿದ್ರು ನೋಡಿ – Kannada News | Shreyas iyer angry in Post match statement after SRH vs PBKS IPL 2026 Here what he said

ಬೆಂಗಳೂರು (ಮೇ. 07): ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧದ 33 ರನ್‌ಗಳ ಸೋಲು ಮತ್ತು ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನವನ್ನು ಕಳೆದುಕೊಂಡ ನಂತರ ಪಂಜಾಬ್ ಕಿಂಗ್ಸ್ ನಾಯಕ ಶ್ರೇಯಸ್ ಅಯ್ಯರ್ (Shreyas Iyer) ನಿರಾಶೆಗೊಂಡಿರುವುದು ಸ್ಪಷ್ಟವಾಗಿ ಕಂಡುಬಂದಿದೆ. ಪಂದ್ಯದ ನಂತರ, ಅವರು ತಂಡದ ನ್ಯೂನತೆಗಳ ಬಗ್ಗೆ ಬಹಿರಂಗವಾಗಿ ಮಾತನಾಡಿದರು, ಕಳಪೆ ಫೀಲ್ಡಿಂಗ್ ಮತ್ತು ಕೈಬಿಟ್ಟ ಕ್ಯಾಚ್‌ಗಳೇ ಸೋಲಿಗೆ ಕಾರಣ ಎಂದರು. ನಾವು ಉತ್ತಮ ಫೀಲ್ಡಿಂಗ್ ಮಾಡಿದ್ದರೆ, ಪಂದ್ಯದ ಫಲಿತಾಂಶ ವಿಭಿನ್ನವಾಗಿರುತ್ತಿತ್ತು ಎಂದು ಅಯ್ಯರ್ ಹೇಳಿದರು. ಕ್ಯಾಚ್ ಬಿಟ್ಟುಕೊಟ್ಟಿದ್ದು ದೊಡ್ಡ…

Read More

Electric Lamp: ದೇವರ ಕೋಣೆಯಲ್ಲಿ ವಿದ್ಯುತ್ ದೀಪ ಬಳಸುವುದು ಅಶುಭವೇ? ಜ್ಯೋತಿಷ್ಯ ಸಲಹೆ ಇಲ್ಲಿದೆ – Kannada News | The Significance of Continuous Light in the Puja Room: Electric Lamp vs Oil Lamp

ದೇವರ ಕೋಣೆಯಲ್ಲಿ ವಿದ್ಯುತ್ ದೀಪImage Credit source: Pinterest ಸಾಮಾನ್ಯವಾಗಿ, ದೇವರ ಕೋಣೆಯಲ್ಲಿ ಎಣ್ಣೆ ದೀಪಗಳನ್ನು ಹಚ್ಚುತ್ತೇವೆ. ಆದರೆ, ಎಣ್ಣೆ ದೀಪಗಳು ಅಥವಾ ತುಪ್ಪದ ದೀಪಗಳು ನಿರಂತರವಾಗಿ ಉರಿಯುವುದಿಲ್ಲ. ಬೆಳಗ್ಗೆ ಹಚ್ಚಿದ ದೀಪ ಮಧ್ಯಾಹ್ನಕ್ಕೇ ಆರಿಹೋಗಬಹುದು, ಹಾಗೆಯೇ ಸಂಜೆ ಹಚ್ಚಿದ ದೀಪ ಮಧ್ಯರಾತ್ರಿಯ ವೇಳೆಗೆ ಆರಿಹೋಗುತ್ತದೆ. ಈ ಸಮಸ್ಯೆಗೆ ಪರಿಹಾರವಾಗಿ, ಸಾಕಷ್ಟು ಜನರು ವಿದ್ಯುತ್ ದೀಪವನ್ನು ಬಳಕೆ ಮಾಡುತ್ತಾರೆ. ಆದರೆ ದೇವರಿಗೆ ವಿದ್ಯುತ್ ದೀಪ ಬಳಸುವುದು ಶುಭವೇ ಅಥವಾ ಅಶುಭವೇ ಎಂಬುದರ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು…

Read More

ಮತ್ತೆ ಮುನ್ನೆಲೆಗೆ ಬಂತು ನಟಿ ತ್ರಿಶಾ ಕೃಷ್ಣನ್ ಸ್ನೇಹ ಮತ್ತು ಆಸ್ತಿಯ ವಿವರ; ನಟಿ ಎಷ್ಟು ಶ್ರೀಮಂತರು? – Kannada News | Thalapathy Vijay’s Political Win Reignites Trisha Marriage Rumors: Actress’s Net Worth and Film Career

ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಐತಿಹಾಸಿಕ ಜಯಭೇರಿ ಬಾರಿಸಿದೆ. ಈ ಬೆನ್ನಲ್ಲೇ ವಿಜಯ್ ಆಪ್ತ ಗೆಳತಿ ಎನಿಸಿಕೊಂಡಿರುವ ದಕ್ಷಿಣ ಭಾರತದ ಖ್ಯಾತ ನಟಿ ತ್ರಿಶಾ ಕೃಷ್ಣನ್ ಅವರ (Trisha) ಹೆಸರು ಮತ್ತೆ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ವಿಜಯ್ ಅವರ ರಾಜಕೀಯ ಯಶಸ್ಸಿನ ಬೆನ್ನಲ್ಲೇ ಇಬ್ಬರ ಸ್ನೇಹ ಮತ್ತು ಮದುವೆಯ ಕುರಿತಾದ ವದಂತಿಗಳು ಹೊಸ ರೂಪ ಪಡೆದುಕೊಂಡಿವೆ. ಕಳೆದ ಸೋಮವಾರ ಚುನಾವಣಾ ಫಲಿತಾಂಶ ಪ್ರಕಟವಾದ ನಂತರ, ವಿಜಯ್ ಅವರ ನಿವಾಸಕ್ಕೆ ತ್ರಿಶಾ…

Read More

ಆಪರೇಷನ್ ಸಿಂಧೂರ್​ಗೆ ಒಂದು ವರ್ಷ: ಪಾಕಿಸ್ತಾನಕ್ಕೆ ಬಲವಾದ ಸಂದೇಶ ಕೊಟ್ಟ ರಾಜನಾಥ್ ಸಿಂಗ್ – Kannada News | Operation Sindoor Completes One Year as India Reaffirms Security Resolve

ನವದೆಹಲಿ, ಮೇ 08: ಭಾರತೀಯ ಸಶಸ್ತ್ರ ಪಡೆಗಳ ಶೌರ್ಯ ಮತ್ತು ದೇಶದ ದೃಢ ಸಂಕಲ್ಪದ ಸಂಕೇತವಾದ ‘ಆಪರೇಷನ್ ಸಿಂಧೂರ್’ (Operation Sindoor)ನಡೆದು ಇಂದು ಭರ್ತಿ ಒಂದು ವರ್ಷ. ಏಪ್ರಿಲ್ 22 ರಂದು ಪಹಲ್ಗಾಮ್‌ನಲ್ಲಿ ನಡೆದ ಹೇಯ ಭಯೋತ್ಪಾದಕ ದಾಳಿಗೆ ಪ್ರತಿಯಾಗಿ ಭಾರತ ನಡೆಸಿದ ಈ ನಿಖರವಾದ ದಾಳಿಯು ಆಧುನಿಕ ಮಿಲಿಟರಿ ಇತಿಹಾಸದಲ್ಲಿ ಹೊಸ ಮೈಲಿಗಲ್ಲು ಸ್ಥಾಪಿಸಿದೆ. ರಕ್ಷಣಾ ಸಚಿವರ ನಮನ ಮತ್ತು ಎಚ್ಚರಿಕೆ ಈ ವಿಶೇಷ ಸಂದರ್ಭದಲ್ಲಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಭಾರತೀಯ ಸೇನೆಯ…

Read More

LSG vs RCB ಪಂದ್ಯಕ್ಕೆ 5 ಆಟಗಾರರು ಅಲಭ್ಯ

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 50ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡಗಳು ಮುಖಾಮುಖಿಯಾಗಲಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆಯಲಿರುವ ಈ ಪಂದ್ಯಕ್ಕೆ ಐವರು ಆಟಗಾರರು ಅಲಭ್ಯರಾಗಿದ್ದಾರೆ. ಅವರೆಂದರೆ… (PC: IPL) ಫಿಲ್ ಸಾಲ್ಟ್​: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆರಂಭಿಕ ದಾಂದಿಗ ಫಿಲ್ ಸಾಲ್ಟ್ ಈ ಪಂದ್ಯಕ್ಕೂ ಅಲಭ್ಯರಾಗಿದ್ದಾರೆ. ಹೆಬ್ಬೆರಳಿನ ಗಾಯಕ್ಕೆ ತುತ್ತಾಗಿರುವ ಸಾಲ್ಟ್ ಚಿಕಿತ್ಸೆಗಾಗಿ ಇಂಗ್ಲೆಂಡ್​ಗೆ ಮರಳಿದ್ದು, ಹೀಗಾಗಿ ಎಲ್​ಎಸ್​​ಜಿ ವಿರುದ್ಧದ ಪಂದ್ಯದಲ್ಲಿ ಕಾಣಿಸಿಕೊಳ್ಳುವುದಿಲ್ಲ….

Read More

ದಳಪತಿ ವಿಜಯ್ 80 ಕೋಟಿ ರೂ. ನಿವಾಸಕ್ಕೆ ಹಾಲಿವುಡ್​ ನಟನ ಈ ಮನೆಯೇ ಸ್ಫೂರ್ತಿ

ತಮಿಳುನಾಡು ಚುನಾವಣೆಯಲ್ಲಿ ದಳಪತಿ ವಿಜಯ್ ನೇತೃತ್ವದ ಟಿವಿಕೆ ಪಕ್ಷವು ಅಭೂತಪೂರ್ವ ಜಯಗಳಿಸಿ ಹೊಸ ಇತಿಹಾಸ ಸೃಷ್ಟಿಸಿದೆ. ಈ ಐತಿಹಾಸಿಕ ವಿಜಯದ ಸಂಭ್ರಮದ ನಡುವೆಯೇ, ವಿಜಯ್ ಅವರ ಐಷಾರಾಮಿ ಜೀವನಶೈಲಿ ಮತ್ತು ಅವರು ವಾಸಿಸುವ ಸುಂದರ ಬಂಗಲೆಯ ಕುರಿತಾದ ಆಸಕ್ತಿದಾಯಕ ಸಂಗತಿಗಳು ಮತ್ತೆ ಮುನ್ನೆಲೆಗೆ ಬಂದಿವೆ. ವಿಜಯ್ ಐಷಾರಾಮಿ ಮನೆಯ ಕುರಿತಾದ ವಿಶೇಷ ಮಾಹಿತಿ ಇಲ್ಲಿದೆ: ಹಾಲಿವುಡ್ ಶೈಲಿಯ ಬಂಗಲೆ: ಎಲ್ಲಾ ಚಿತ್ರರಂಗದ ಸ್ಟಾರ್‌ಗಳಂತೆ ವಿಜಯ್ ಕೂಡ ಐಷಾರಾಮಿ ಮನೆ ಕಟ್ಟುವ ಹಂಬಲ ಹೊಂದಿದ್ದರು. ಅದರಂತೆ ಚೆನ್ನೈನ ಸಮುದ್ರ…

Read More

ರೈಲ್ವೆ ಪರೀಕ್ಷೆಯಲ್ಲಿ ಮತ್ತೆ ಕನ್ನಡ ಕಡೆಗಣನೆ: ರಾಜ್ಯಾದ್ಯಂತ ರೈಲು ಸಂಚಾರ ಬಂದ್ ಮಾಡುವ ಎಚ್ಚರಿಕೆ ನೀಡಿದ ಕರವೇ – Kannada News | Railway Promotion Exam Row: KRV Warns to Stop Trains Across Karnataka Over Exclusion of Kannada Language

ಕರವೇ ರಾಜ್ಯಾಧ್ಯಕ್ಷ ಟಿಎ ನಾರಾಯಣ ಗೌಡImage Credit source: tv9 ಬೆಂಗಳೂರು, ಮೇ 7: ನೈರುತ್ಯ ರೈಲ್ವೆ (South Western Railway) ಇಲಾಖೆಯು ನಡೆಸುತ್ತಿರುವ ವಿವಿಧ ಹುದ್ದೆಗಳ ಮುಂಬಡ್ತಿ (Promotion) ಪರೀಕ್ಷೆಗಳಲ್ಲಿ ಕನ್ನಡ (Kannada) ಭಾಷೆಯಲ್ಲಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸಲಾಗಿದೆ. ಈ ಹಿಂದೆ ಪ್ರತಿಭಟನೆಗಳ ನಂತರ ಪರೀಕ್ಷೆಯನ್ನು ಮುಂದೂಡಲಾಗಿದ್ದರೂ, ಇದೀಗ ಮತ್ತೆ ಹಿಂದಿ ಮತ್ತು ಇಂಗ್ಲಿಷ್‌ನಲ್ಲಿ ಮಾತ್ರ ಪರೀಕ್ಷೆ ನಡೆಸಲು ರೈಲ್ವೆ ಮಂಡಳಿ ಮುಂದಾಗಿದೆ. ಇಲಾಖೆಯ ಈ ಕ್ರಮದ ವಿರುದ್ಧ ಕರ್ನಾಟಕ ರಕ್ಷಣಾ ವೇದಿಕೆ (ಕರವೇ)…

Read More

Bengaluru Air Quality: ಬೆಂಗಳೂರು, ಮಂಗಳೂರು ಸೇರಿದಂತೆ ಹಲವೆಡೆ ಇಂದು ವಾಯು ಗುಣಮಟ್ಟ ಉತ್ತಮ – Kannada News | Bangalore Air Pollution Crisis: Bengaluru and Mangalore Air Quality gets better

ಬೆಂಗಳೂರು, ಮಂಗಳೂರು ಸೇರಿದಂತೆ ಹಲವೆಡೆ ಇಂದು ವಾಯು ಗುಣಮಟ್ಟ ಉತ್ತಮ ಬೆಂಗಳೂರು, ಮೇ 07: ರಾಜ್ಯದಲ್ಲಿ ಬೆಂಗಳೂರು, ಮಂಗಳೂರು ಏರ್ ಕ್ವಾಲಿಟಿ  (Bengaluru Air Quality) ಭಾರಿ ಸುಧಾರಣೆ ಕಂಡಿದೆ. ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅಪಾಯಕಾರಿ ಮಟ್ಟದಲ್ಲಿಯೇ ಇದೆ ಎಂದು ತಜ್ಞರು ಹೇಳುತ್ತಾರೆ. ಮಂಗಳೂರು ವಾಯು ಗುಣಮಟ್ಟ ಇಂದು ಭಾರೀ ಸುಧಾರಣೆ ಕಂಡಿದ್ದು, ಉಳಿದೆಡೆಗಿಂತ ಎಷ್ಟೋ ಉತ್ತಮವಾಗಿದೆ ಎನ್ನಲಾಗಿದೆ. ಬೆಂಗಳೂರಿನ AQI ಸಧ್ಯಕ್ಕೆ ಒಳ್ಳೆಯ ಮಟ್ಟದಲ್ಲಿದ್ದು, ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು…

Read More