Category Archives: Blog

Your blog category

ಖ್ಯಾತ ನಿರ್ಮಾಪಕ ಆರ್.ಬಿ. ಚೌಧರಿ ನಿಧನ; ರಾಜಸ್ಥಾನದಲ್ಲಿ ಭೀಕರ ರಸ್ತೆ ಅಪಘಾತ – Kannada News | Thalapathy Vijay movies famous producer RB Choudary passes away in Udaipur Car Accident

ತಮಿಳು ಚಿತ್ರರಂಗದ ಖ್ಯಾತ ನಿರ್ಮಾಪಕ ಆರ್.ಬಿ. ಚೌಧರಿ (RB Choudary) (68) ಅವರು ರಾಜಸ್ಥಾನದ ಉದಯಪುರ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ (Accident) ನಿಧನರಾಗಿದ್ದಾರೆ. ವೈಯಕ್ತಿಕ ಕೆಲಸದ ನಿಮಿತ್ತ ಉದಯಪುರಕ್ಕೆ ತೆರಳಿದ್ದ ಚೌಧರಿ ಅವರು ಪ್ರಯಾಣಿಸುತ್ತಿದ್ದ ವಾಹನ ಅಪಘಾತಕ್ಕೀಡಾಗಿದೆ. ಅಪಘಾತದ (Car Accident) ವೇಳೆ ಅವರಿಗೆ ತೀವ್ರ ಸ್ವರೂಪದ ಗಾಯಗಳಾಗಿದ್ದು, ತಕ್ಷಣವೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅವರು ಕೊನೆಯುಸಿರೆಳೆದಿದ್ದಾರೆ ಎಂದು ವರದಿಯಾಗಿದೆ.

1. ರಸ್ತೆ ಅಪಘಾತದಲ್ಲಿ ನಿಧನರಾದ ನಿರ್ಮಾಪಕ ಆರ್.ಬಿ. ಚೌಧರಿ.

2. ಹಲವು ಮಂದಿ ಹೊಸಬರಿಗೆ ಅವಕಾಶ ಕೊಟ್ಟಿದ್ದ ನಿರ್ಮಾಪಕ.

3. ‘ಸೂಪರ್ ಗುಡ್ ಫಿಲ್ಮ್ಸ್’ ನಿರ್ಮಾಣ ಸಂಸ್ಥೆಯ ಯಶಸ್ಸಿನ ಸಾರಥಿ.

‘ಸೂಪರ್ ಗುಡ್ ಫಿಲ್ಮ್ಸ್’ ಬ್ಯಾನರ್ ಮೂಲಕ ಚಿತ್ರರಂಗದಲ್ಲಿ ಭದ್ರವಾಗಿ ನೆಲೆಯೂರಿದ್ದ ಆರ್.ಬಿ. ಚೌಧರಿ ಅವರು ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಸೇರಿದಂತೆ ವಿವಿಧ ಭಾಷೆಗಳಲ್ಲಿ 70ಕ್ಕೂ ಹೆಚ್ಚು ಚಿತ್ರಗಳನ್ನು ನಿರ್ಮಿಸಿದ್ದಾರೆ. 1980ರ ದಶಕದ ಕೊನೆಯಲ್ಲಿ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದ ಅವರು, ಮೂರು ಬಾರಿ ಫಿಲ್ಮ್ ಫೇರ್ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ.

ದಳಪತಿ ವಿಜಯ್ ಅವರ ಸಿನಿಮಾ ಬದುಕಿನಲ್ಲಿ ಬಹುದೊಡ್ಡ ತಿರುವು ನೀಡಿದ ‘ಪೂವೆ ಉನಕ್ಕಾಗ’ ಚಿತ್ರವನ್ನು ನಿರ್ಮಿಸಿದ್ದು ಇದೇ ಆರ್.ಬಿ. ಚೌಧರಿ. ಅಷ್ಟೇ ಅಲ್ಲದೆ, ವಿಜಯ್ ಅಭಿನಯದ ‘ಜಿಲ್ಲಾ’, ‘ತಿರುಪ್ಪಾಚಿ’, ‘ಶಾಜಹಾನ್’ ಮುಂತಾದ ಸೂಪರ್ ಹಿಟ್ ಚಿತ್ರಗಳನ್ನು ಅವರು ನಿರ್ಮಾಣ ಮಾಡಿದ್ದರು. ಶರತ್ ಕುಮಾರ್, ಮಮ್ಮುಟ್ಟಿ ಮುಂತಾದ ಸ್ಟಾರ್ ನಟರ ಸಿನಿಮಾಗಳಿಗೂ ಆರ್.ಬಿ. ಚೌಧರಿ ಬಂಡವಾಳ ಹೂಡಿದ್ದರು.

ನಟ ಚಿರಂಜೀವಿ ಸಂತಾಪ:

ಆರ್.ಬಿ. ಚೌಧರಿ ಅವರು ಕೇವಲ ಸ್ಟಾರ್ ನಟರಿಗಷ್ಟೇ ಅಲ್ಲದೆ, ಹತ್ತಾರು ಹೊಸ ನಿರ್ದೇಶಕರಿಗೆ ಚಿತ್ರರಂಗದಲ್ಲಿ ಮೊದಲ ಅವಕಾಶ ನೀಡುವ ಮೂಲಕ ಅವರ ವೃತ್ತಿಜೀವನಕ್ಕೆ ಅಡಿಪಾಯ ಹಾಕಿಕೊಟ್ಟಿದ್ದರು. ಇವರಿಗೆ ಸುರೇಶ್, ಜೀವನ್, ಜಿತನ್ ರಮೇಶ್ ಮತ್ತು ಜೀವಾ ಎಂಬ ನಾಲ್ವರು ಗಂಡು ಮಕ್ಕಳಿದ್ದಾರೆ. ಜೀವಾ ಅವರು ತಮಿಳು ಚಿತ್ರರಂಗದಲ್ಲಿ ಮುಂಚೂಣಿ ನಟರಾಗಿ ಗುರುತಿಸಿಕೊಂಡಿದ್ದಾರೆ.

ಇದನ್ನೂ ಓದಿ: ಅಪಘಾತಕ್ಕೆ ಒಳಗಾದ ಅಕ್ಷಯ್ ಕುಮಾರ್ ಭದ್ರತಾ ಸಿಬ್ಬಂದಿ ಕಾರು; ನಟ ಜಸ್ಟ್ ಪಾರು

ಚೌಧರಿ ಅವರ ಹಠಾತ್ ನಿಧನಕ್ಕೆ ಚಿತ್ರರಂಗದ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಸಂತಾಪ ಸೂಚಿಸಿದ್ದಾರೆ. ಅಪಘಾತದ ಬಗ್ಗೆ ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಿಟ್​ಮ್ಯಾನ್ ಆರ್ಭಟ: ರೋಹಿತ್ ಶರ್ಮಾಗೆ ಸ್ಪೆಷಲ್ ಗಿಫ್ಟ್ ನೀಡಿದ ನೀತಾ ಅಂಬಾನಿ – Kannada News | Rohit Sharma’s Heroic Return Earns Special Gift from Nita Ambani

IPL 2026: ಐಪಿಎಲ್ 2026ರ ಹೈ-ವೋಲ್ಟೇಜ್ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಮುಂಬೈ ಇಂಡಿಯನ್ಸ್ ಐತಿಹಾಸಿಕ ಜಯ ದಾಖಲಿಸಿದೆ. ಈ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿದ ರೋಹಿತ್ ಶರ್ಮಾಗೆ ಮುಂಬೈ ಇಂಡಿಯನ್ಸ್ ತಂಡದ ಮಾಲಕಿ ನೀತಾ ಅಂಬಾನಿ ಸರ್‌ಪ್ರೈಸ್ ಗಿಫ್ಟ್ ನೀಡಿದ್ದಾರೆ.

ಹಿಟ್​ಮ್ಯಾನ್ ಆರ್ಭಟ:

ಹ್ಯಾಮ್‌ಸ್ಟ್ರಿಂಗ್ ಗಾಯದ ಕಾರಣ ಕಳೆದ ಐದು ಪಂದ್ಯಗಳಿಂದ ಹೊರಗುಳಿದಿದ್ದ ರೋಹಿತ್ ಶರ್ಮಾ, ಈ ಪಂದ್ಯದ ಮೂಲಕ ಮೈದಾನಕ್ಕೆ ಮರಳಿದ್ದರು. ವಾಂಖೆಡೆ ಕ್ರೀಡಾಂಗಣದಲ್ಲಿ ಸಿಕ್ಸರ್ ಮತ್ತು ಬೌಂಡರಿಗಳ ಮಳೆ ಸುರಿಸಿದ ರೋಹಿತ್, ಕೇವಲ 44 ಎಸೆತಗಳಲ್ಲಿ 84 ರನ್ ಸಿಡಿಸಿದರು. ಇವರಿಗೆ ಸಾಥ್ ನೀಡಿದ ರಯಾನ್ ರಿಕೆಲ್ಟನ್ (32 ಎಸೆತಗಳಲ್ಲಿ 83 ರನ್) ಅವರೊಂದಿಗೆ ಮೊದಲ ವಿಕೆಟ್‌ಗೆ 143 ರನ್‌ಗಳ ಬೃಹತ್ ಜೊತೆಯಾಟವಾಡುವ ಮೂಲಕ ಮುಂಬೈ ತಂಡ 229 ರನ್‌ಗಳ ಗುರಿಯನ್ನು ಸುಲಭವಾಗಿ ತಲುಪಲು ನೆರವಾದರು.

‘ಬೆಸ್ಟ್ ಪಾರ್ಟ್‌ನರ್‌ಶಿಪ್’ ಗಾಗಲ್ಸ್!

ಮುಂಬೈ ಇಂಡಿಯನ್ಸ್ ತಂಡವು ಪ್ರತಿ ಪಂದ್ಯದ ನಂತರ ಡ್ರೆಸ್ಸಿಂಗ್ ರೂಮ್‌ನಲ್ಲಿ ಉತ್ತಮ ಪ್ರದರ್ಶನ ನೀಡಿದ ಆಟಗಾರರಿಗೆ ಪದಕಗಳನ್ನು ನೀಡುವುದು ವಾಡಿಕೆ. ಆದರೆ, 2026ರ ಈ ಸೀಸನ್‌ನಲ್ಲಿ ನೀತಾ ಅಂಬಾನಿ ಅವರು ಹೊಸ ಸಂಪ್ರದಾಯವನ್ನು ಆರಂಭಿಸಿದ್ದಾರೆ.

ಜಯದ ಸಂಭ್ರಮದಲ್ಲಿದ್ದ ಡ್ರೆಸ್ಸಿಂಗ್ ರೂಮ್‌ಗೆ ಭೇಟಿ ನೀಡಿದ ನೀತಾ ಅಂಬಾನಿ, ಪಂದ್ಯದ ಶ್ರೇಷ್ಠ ಜೊತೆಯಾಟವಾಡಿದ ರೋಹಿತ್ ಶರ್ಮಾ ಮತ್ತು ರಯಾನ್ ರಿಕೆಲ್ಟನ್ ಅವರಿಗೆ ಸ್ಟೈಲಿಶ್ ಆದ “ಬೆಸ್ಟ್ ಪಾರ್ಟ್‌ನರ್‌ಶಿಪ್ ಗಾಗಲ್ಸ್” (ಕನ್ನಡಕ) ಉಡುಗೊರೆಯಾಗಿ ನೀಡಿದರು. ರೋಹಿತ್ ಶರ್ಮಾ ನಗುತ್ತಲೇ ಈ ಕಲರ್ ಫುಲ್ ಕನ್ನಡಕವನ್ನು ಧರಿಸಿದಾಗ ಇಡೀ ಡ್ರೆಸ್ಸಿಂಗ್ ರೂಮ್ ಚಪ್ಪಾಳೆಯಿಂದ ಮೊಳಗಿತು.

ಪಂದ್ಯದ ಮುಖ್ಯಾಂಶಗಳು:

  • ಲಕ್ನೋ ಸೂಪರ್ ಜೈಂಟ್ಸ್ 20 ಓವರ್​ಗಳಲ್ಲಿ 228 ರನ್​
  • ಮುಂಬೈ ಇಂಡಿಯನ್ಸ್​ 18.4 ಓವರ್​​ಗಳಲ್ಲಿ 229 ರನ್​.
  • ಫಲಿತಾಂಶ: ಮುಂಬೈ ಇಂಡಿಯನ್ಸ್ ತಂಡಕ್ಕೆ 6 ವಿಕೆಟ್‌ಗಳ ಭರ್ಜರಿ ಜಯ.

ಇದನ್ನೂ ಓದಿ: DC vs CSK IPL 2026 Live Score: ಕ್ಯಾಪಿಟಲ್ಸ್​​ಗೆ ಸೂಪರ್ ಕಿಂಗ್ಸ್​ ಸವಾಲು

ಈ ಗೆಲುವಿನೊಂದಿಗೆ ಮುಂಬೈ ಇಂಡಿಯನ್ಸ್ ತಂಡವು ತನ್ನ ಪ್ಲೇಆಫ್ ಆಸೆಯನ್ನು ಜೀವಂತವಿರಿಸಿಕೊಂಡಿದೆ. ಸದ್ಯ ಅಂಕ ಪಟ್ಟಿಯಲ್ಲಿ 9ನೇ  ಸ್ಥಾನದಲ್ಲಿರುವ ಮುಂಬೈ ಇಂಡಿಯನ್ಸ್ ತಂಡವು ಮುಂದಿನ 4 ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಿ ದ್ವಿತೀಯ ಸುತ್ತಿಗೆ ಪ್ರವೇಶಿಸಲಿದೆಯಾ ಕಾದು ನೋಡಬೇಕಿದೆ.

Source link

ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು 34ರಿಂದ 38ಕ್ಕೆ ಹೆಚ್ಚಿಸಲು ಮೋದಿ ಸಂಪುಟ ಅನುಮೋದನೆ – Kannada News | Modi Cabinet approves proposal to increase number of Supreme Court judges from 34 to 38

ನವದೆಹಲಿ, ಮೇ 5: ಕೇಂದ್ರ ಸಚಿವ ಸಂಪುಟ ಇಂದು ಸುಪ್ರೀಂ ಕೋರ್ಟ್‌ನ (Supreme Court) ನ್ಯಾಯಾಧೀಶರ ಬಲವನ್ನು ಪ್ರಸ್ತುತ ಇರುವ 34ರಿಂದ 38ಕ್ಕೆ ಹೆಚ್ಚಿಸುವ ಪ್ರಸ್ತಾಪವನ್ನು ಅಂಗೀಕರಿಸಿತು. ಸದ್ಯಕ್ಕೆ, ಸುಪ್ರೀಂ ಕೋರ್ಟ್ ಭಾರತದ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸೇರಿದಂತೆ 34 ನ್ಯಾಯಾಧೀಶರ ಅನುಮೋದಿತ ಬಲವನ್ನು ಹೊಂದಿದೆ. ನ್ಯಾಯಾಧೀಶರ ಸಂಖ್ಯೆಯಲ್ಲಿನ ಹೆಚ್ಚಳವು ಸುಪ್ರೀಂ ಕೋರ್ಟ್ ಹೆಚ್ಚು ಪರಿಣಾಮಕಾರಿಯಾಗಿ ಮತ್ತು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡುತ್ತದೆ, ತ್ವರಿತ ನ್ಯಾಯವನ್ನು ಖಚಿತಪಡಿಸುತ್ತದೆ ಎಂದು ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಹೇಳಿದ್ದಾರೆ.

ಈ ಪ್ರಸ್ತಾವನೆಯನ್ನು ಜಾರಿಗೆ ತರಲು, ಸಂಸತ್ತಿನಲ್ಲಿ ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ತಿದ್ದುಪಡಿ ಮಸೂದೆ, 2026 ಅನ್ನು ಪರಿಚಯಿಸಲು ಸಂಪುಟ ಅನುಮೋದನೆ ನೀಡಿದೆ. ನ್ಯಾಯಾಂಗ ವ್ಯವಸ್ಥೆಯ ಹೆಚ್ಚುತ್ತಿರುವ ಬೇಡಿಕೆಗಳನ್ನು ಪೂರೈಸಲು ನ್ಯಾಯಾಧೀಶರ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಅನುವು ಮಾಡಿಕೊಡುವ ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ಕಾಯ್ದೆ, 1956 ಅನ್ನು ತಿದ್ದುಪಡಿ ಮಾಡಲು ಮಸೂದೆ ಪ್ರಸ್ತಾಪಿಸುತ್ತದೆ.

ಇದನ್ನೂ ಓದಿ: NCERT ಪುಸ್ತಕ ವಿವಾದ; ‘ನ್ಯಾಯಾಂಗದಲ್ಲಿ ಭ್ರಷ್ಟಾಚಾರ’ ಅಧ್ಯಾಯ ಬರೆದ ಲೇಖಕರಿಗೆ ಸುಪ್ರೀಂ ಕೋರ್ಟ್ ನಿಷೇಧ

1956 ರಲ್ಲಿ ಸುಪ್ರೀಂ ಕೋರ್ಟ್ (ನ್ಯಾಯಾಧೀಶರ ಸಂಖ್ಯೆ) ಕಾಯ್ದೆಯನ್ನು ಜಾರಿಗೆ ತಂದಾಗ, ಮುಖ್ಯ ನ್ಯಾಯಾಧೀಶರನ್ನು ಹೊರತುಪಡಿಸಿ ಅನುಮೋದಿತ ಬಲವನ್ನು 10 ನ್ಯಾಯಾಧೀಶರಿಗೆ ನಿಗದಿಪಡಿಸಲಾಯಿತು. ಇದನ್ನು 1960ರಲ್ಲಿ 13ಕ್ಕೆ ಮತ್ತು 1977 ರಲ್ಲಿ 17ಕ್ಕೆ ಹೆಚ್ಚಿಸಲಾಯಿತು. ಅದಾದ ನಂತರ 1986ರಲ್ಲಿ 25ಕ್ಕೆ ಮತ್ತು 2008ರಲ್ಲಿ 30ಕ್ಕೆ ಏರಿಸಲಾಯಿತು. ಕೊನೆಯ ಬಾರಿ 2019 ರಲ್ಲಿ ಪರಿಷ್ಕರಣೆ ಮಾಡಲಾಗಿತ್ತು. ಆ ವೇಳೆ ಸಂಸತ್ತು ಭಾರತದ ಮುಖ್ಯ ನ್ಯಾಯಮೂರ್ತಿಯನ್ನು ಸೇರಿಸಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಸಂಖ್ಯೆಯನ್ನು 31ರಿಂದ 34ಕ್ಕೆ ಹೆಚ್ಚಿಸಲು ಅನುಮೋದನೆ ನೀಡಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

5 ಲಕ್ಷ ರೂ. ಹಣ ಪಡೆದು ಅಬಾರ್ಷನ್ ಮಾಡಿಸಿದ್ದಾಳೆ ಲೇಡಿ ಕಾನ್ಸ್‌ಟೇಬಲ್; ಪಿಎಸ್‌ಐ ವಿರೇಶ್‌ಗೆ ವಂಚಿಸಿ ಬೇರೆ ಯುವಕನ ಜೊತೆ ಹಸೆಮಣೆ ಏರಲು ಸಿದ್ಧ! – Kannada News | Yadgir PSI Alleges Constable Cheated Him of 35 Lakhs, Aborted Kids; Raichur SP Petitioned

ಯಾದಗಿರಿ, ಮೇ.5 : ಕಳೆದ ಎಂಟು ವರ್ಷಗಳಿಂದ ಪರಸ್ಪರ ಪ್ರೀತಿಸಿ, ಲಿವಿಂಗ್ ಟುಗೆದರ್‌ನಲ್ಲಿದ್ದ ಜೋಡಿಯೊಂದು ಈಗ ಬೀದಿಪಾಲಾಗಿದೆ. ಪ್ರಿಯಕರನಿಗೆ ಕೈಕೊಟ್ಟು ಬೇರೆ ಯುವಕನೊಂದಿಗೆ ಮದುವೆಯಾಗಲು ಸಜ್ಜಾಗಿರುವ ಲೇಡಿ ಕಾನ್ಸ್‌ಟೇಬಲ್ ವಿರುದ್ಧ ಪಿಎಸ್ಐ ಒಬ್ಬರು ರಾಯಚೂರು ಎಸ್ಪಿ ಮೊರೆ ಹೋಗಿದ್ದಾರೆ. ಯಾದಗಿರಿಯ ಶಹಾಪುರದಲ್ಲಿ ಗುಪ್ತಚರ ಇಲಾಖೆಯಲ್ಲಿ ಪಿಎಸ್ಐ ಆಗಿರುವ ವಿರೇಶ್ ಮತ್ತು ಕಾನ್ಸ್‌ಟೇಬಲ್ ವಿಜಯಶ್ರೀ 2017 ರಿಂದ ಪ್ರೀತಿಸುತ್ತಿದ್ದರು. ವಿಜಯಪುರದಲ್ಲಿ ವಿದ್ಯಾಭ್ಯಾಸ ಮಾಡುವಾಗ ಇಬ್ಬರ ನಡುವೆ ಸ್ನೇಹ ಬೆಳೆದು ಪ್ರೀತಿಗೆ ತಿರುಗಿತ್ತು.

ವಿರೇಶ್ ಪಿಎಸ್ಐ ಆಗಿ ನೇಮಕಗೊಂಡ ಬಳಿಕ, ವಿಜಯಶ್ರೀ ಕೂಡ ಕಾನ್ಸ್‌ಟೇಬಲ್ ಆಗಿ ಕೆಲಸಕ್ಕೆ ಸೇರಿದ್ದರು. ರಾಯಚೂರು ಗ್ರಾಮೀಣ ಠಾಣೆಯಲ್ಲಿ ಕೆಲಸ ಮಾಡುವಾಗ ಇಬ್ಬರೂ ನಾಲ್ಕು ವರ್ಷಗಳ ಕಾಲ ಒಂದೇ ಮನೆಯಲ್ಲಿ ಒಟ್ಟಿಗೆ ವಾಸವಿದ್ದರು. ಅಷ್ಟೇ ಅಲ್ಲದೆ, ದೇವಸ್ಥಾನವೊಂದರಲ್ಲಿ ಹಾರ ಬದಲಾಯಿಸಿಕೊಂಡು ಮದುವೆಯಾಗಿದ್ದರು ಎಂದು ವಿರೇಶ್ ಹೇಳಿದ್ದಾರೆ.

“ವಿಜಯಶ್ರೀ ನನ್ನಿಂದ ಸುಮಾರು 35 ಲಕ್ಷ ರೂಪಾಯಿ ಹಣ ಪಡೆದಿದ್ದಾಳೆ. ಎರಡು ಬಾರಿ ಗರ್ಭಿಣಿಯಾಗಿದ್ದಾಗ ನನಗೆ ತಿಳಿಯದಂತೆ ಅಬಾರ್ಷನ್ ಮಾಡಿಸಿದ್ದಾಳೆ. ಈಗ ಅಧಿಕೃತವಾಗಿ ರಿಜಿಸ್ಟರ್ ಮ್ಯಾರೇಜ್ ಮಾಡಿಕೊಳ್ಳೋಣ ಅಂದಾಗ ಜಾತಿಯ ನೆಪ ಹೇಳಿ ಬೇರೆ ಯುವಕನ ಜೊತೆ ಮದುವೆಗೆ ಸಜ್ಜಾಗಿದ್ದಾಳೆ” ಎಂದು ವಿರೇಶ್ ಆರೋಪಿಸಿದ್ದಾರೆ.

ಇದನ್ನೂ ಓದಿ: 20ರ ಯುವತಿ-46ರ ಅಂಕಲ್ ಲವ್: ಪ್ರೇಯಸಿ ಬೇಕು ಹೆಂಡ್ತಿನೂ ಬೇಕೆಂದ ಟೇಲರ್

ವಿಜಯಶ್ರೀ ಅವರ ಮದುವೆ ಇದೇ ಮೇ 7 ರಂದು ರಾಯಚೂರಿನಲ್ಲಿ ನಿಶ್ಚಯವಾಗಿದೆ. ತನಗೆ ನ್ಯಾಯ ಸಿಗಬೇಕು ಮತ್ತು ಈ ಮದುವೆ ನಡೆಯಬಾರದು ಎಂದು ವಿರೇಶ್ ಈಗ ಆನ್‌ಲೈನ್ ಮೂಲಕ ದೂರು ನೀಡಿದ್ದು, ಟಿವಿ9 ಮುಂದೆ ಅಳಲು ತೋಡಿಕೊಂಡಿದ್ದಾರೆ. ಇಬ್ಬರೂ ಒಂದೇ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಈ ಪ್ರೀತಿ ಮತ್ತು ವಂಚನೆಯ ಪ್ರಕರಣವು ಈಗ ಹಾದಿಬೀದಿ ಹೈಡ್ರಾಮಾದಂತಾಗಿ ಇಲಾಖೆಗೆ ಮುಜುಗರ ತಂದಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬಂಗಾಳದ ಹೌರಾದಲ್ಲಿ ಟಿಎಂಸಿ ನಾಯಕನಿಗೆ ಹಿಗ್ಗಾಮುಗ್ಗ ಥಳಿತ – Kannada News | Howrah TMC leader Shyamal Mitra beaten by locals in West Bengal

ಹೌರಾ, ಮೇ 5: ಪಶ್ಚಿಮ ಬಂಗಾಳದ ವಿಧಾನಸಭಾ ಚುನಾವಣೆಯ (West Bengal Elections Results) ನಂತರ ಹೌರಾದಲ್ಲಿ ಮಾಜಿ ಟಿಎಂಸಿ ಕೌನ್ಸಿಲರ್ ಮೇಲೆ ದಾಳಿ ನಡೆಸಲಾಗಿದೆ. ಇಂದು ಸಂಜೆ ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯಲ್ಲಿ ಮಾಜಿ ತೃಣಮೂಲ ಕಾಂಗ್ರೆಸ್ ಕೌನ್ಸಿಲರ್ ಮೇಲೆ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಈ ವಿಡಿಯೋ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಶ್ಯಾಮಲ್ ಮಿತ್ರ ವಾರ್ಡ್ ಸಂಖ್ಯೆ 26ರ ಮಾಜಿ ಕೌನ್ಸಿಲರ್ ಆಗಿದ್ದರು ಮತ್ತು ಸ್ಥಳೀಯ ಟಿಎಂಸಿ ನಾಯಕರಾಗಿದ್ದರು. ಬಂಗಾಳದಲ್ಲಿ ಬಿಜೆಪಿ ಗೆಲುವಿನ ಬಳಿಕ ಟಿಎಂಸಿ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ತೀವ್ರ ವಾಗ್ವಾದ ನಡೆದ ನಂತರ ಈ ಹಲ್ಲೆ ನಡೆಸಲಾಗಿದೆ ಎಂದು ವರದಿಯಾಗಿದೆ.

ಬಿಜೆಪಿ 294 ಸದಸ್ಯರ ವಿಧಾನಸಭೆಯಲ್ಲಿ 207 ಸ್ಥಾನಗಳನ್ನು ಗಳಿಸಿದ ಒಂದು ದಿನದ ನಂತರ ಈ ಬೆಳವಣಿಗೆ ಸಂಭವಿಸಿದೆ. ಪಶ್ಚಿಮ ಬಂಗಾಳದಲ್ಲಿ ಟಿಎಂಸಿಯ ನಿರಂತರ 15 ವರ್ಷಗಳ ಆಡಳಿತವನ್ನು ಕೊನೆಗೊಳಿಸಿತು. ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಭರ್ಜರಿ ವಿಜಯವನ್ನು ಆಚರಿಸುತ್ತಿದ್ದಂತೆ ಸೋಮವಾರ ಪಶ್ಚಿಮ ಬಂಗಾಳದಾದ್ಯಂತ ಅನೇಕ ಟಿಎಂಸಿ ಕಚೇರಿಗಳಿಗೆ ಬೆಂಕಿ ಹಚ್ಚಲಾಯಿತು.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಅವನು ಅಹಿಂಸಾ ಚೇತನ್ ಅಲ್ಲ, ಹಿಂಸಾ ಚೇತನ್’: ಗುಡುಗಿದ ಸಾರಾ ಗೋವಿಂದು – Kannada News | Not Ahimsa Chethan He is Himsa Chetan says Sa Ra Govindu

ಡಾ. ರಾಜ್​ಕುಮಾರ್ ಸಮಾಧಿ ಬಗ್ಗೆ ನಟ ಚೇತನ್ ಅಹಿಂಸಾ (Chetan Ahimsa) ಅವರು ನೀಡಿದ ಹೇಳಿಕೆಯಿಂದ ಶುರುವಾದ ವಿವಾದ ಮುಂದುವರಿದಿದೆ. ಚೇತನ್ ವಿರುದ್ಧ ಕನ್ನಡಪರ ಸಂಘಟನೆಗಳು, ರಾಜ್​ಕುಮಾರ್ ಅಭಿಮಾನಿಗಳು ಪ್ರತಿಭಟನೆ ಮಾಡಿದ್ದಾರೆ. ಈ ವೇಳೆ ಸಾರಾ ಗೋವಿಂದು ಅವರು ಮಾತನಾಡಿದರು. ‘ಅವನು ಅಹಿಂಸಾ ಚೇತನ್ ಅಲ್ಲ, ಹಿಂಸಾ ಚೇತನ್. ಅವನು ನನ್ನ ಮೇಲೆ ಕೇಸ್ ಹಾಕಿದ್ದ. ಅದು ಎಫ್​ಐಆರ್ ಆಗಿದೆ. ಅವನ ಎಫ್​ಐಆರ್​ಗೆ ಹೆದರಿ ನಾವು ಯಾರೂ ಇಲ್ಲಿಗೆ ಬಂದಿಲ್ಲ. ಕನ್ನಡಪರ ಹೋರಾಟಗಾರರೆಲ್ಲ ಅವನ ವಿರುದ್ಧ ಮೊಕದ್ದಮೆ ಹೂಡಬೇಕು ಎಂದು ಒತ್ತಾಯ ಮಾಡಿದ್ದಾರೆ. ಇಲ್ಲಿ ಕೇವಲ ರಾಜ್​ಕುಮಾರ್ ಅಭಿಮಾನಿಗಳ ಸಂಘ ಮಾತ್ರ ಸೇರಿಲ್ಲ. ರಕ್ಷಣಾ ವೇದಿಕೆ, ಕನ್ನಡ ಸೇನೆ, ಕನ್ನಡ ಜಾಗೃತಿ ವೇದಿಕೆ ಸೇರಿದಂತೆ ಹಲವು ಸಂಘಟನೆಗಳು ಇಲ್ಲಿಗೆ ಬಂದು ನನಗೆ ಬೆಂಬಲ ನೀಡಿದ್ದಾರೆ. ರಾಜ್​ಕುಮಾರ್ ವಿಚಾರದಲ್ಲಿ ಈವರೆಗೂ ಯಾರೂ ಸೊಲ್ಲು ಎತ್ತಿರಲಿಲ್ಲ. ಆದರೆ ನಿರುದ್ಯೋಗಿ ಚೇತನ್ ಪ್ರಚಾರಕ್ಕಾಗಿ ಈ ಕೆಲಸ ಮಾಡಿದ್ದಾನೆ’ ಎಂದು ಸಾರಾ ಗೋವಿಂದು (Sa Ra Govindu) ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ ಬಿಡುಗಡೆ ಮಾಡಿದ ‘ಮೃತ್ಯುದೇವತೆ’ ಸಿನಿಮಾ ಹಾಡು – Kannada News | Mruthyu Devathe Kannada movie new song released by Om Sai Prakash

ವಿನಯಾ ಪ್ರಸಾದ್, ಸಾರಿಕಾ ರಾವ್, ಡಯಾನಾ, ಹಿಮಶ್ರೀ, ಮಾಹೀನ್, ನವೀನ್ ಮಹದೇವ್, ಸೂರ್ಯ, ಪವನ್ ಶೆಟ್ಟಿ, ವರ್ಷಿತಾ ಮುಂತಾದವರು ‘ಮೃತ್ಯುದೇವತೆ’ ಸಿನಿಮಾದಲ್ಲಿ ನಟಿಸಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಹಾಡನ್ನು ಹಿರಿಯ ನಿರ್ದೇಶಕ ಓಂ ಸಾಯಿ ಪ್ರಕಾಶ್ (Om Sai Prakash) ಅವರಿಂದ ಬಿಡುಗಡೆ ಮಾಡಿಸಲಾಯಿತು. ಸಮಾಜದಲ್ಲಿ ಪ್ರತಿದಿನ ಹೆಣ್ಣು ಮಕ್ಕಳ ಮೇಲೆ ಅನ್ಯಾಯ, ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. ಟ್ರ್ಯಾಪ್​ಗೆ ಒಳಗಾದ 3 ಹೆಣ್ಣು ಮಕ್ಕಳು ಹೇಗೆ ಅದರಿಂದ ಹೊರಗೆ ಬರುತ್ತಾರೆ ಎಂಬ ಮಹಿಳಾಪ್ರಧಾನ ಕಥಾಹಂದರ ಇಟ್ಟುಕೊಂಡು ನವೀನ್ ಮಹದೇವ್ ಅವರು ‘ಮೃತ್ಯದೇವತೆ’ (Mruthyu Devathe) ಸಿನಿಮಾಗೆ ನಿರ್ದೇಶನ ಮಾಡಿದ್ದಾರೆ.

ಹಾಡು ಬಿಡುಗಡೆ ಮಾಡಿದ ಬಳಿಕ ಓಂ ಸಾಯಿ ಪ್ರಕಾಶ್ ಅವರು ಮಾತನಾಡಿದರು. ‘ಈ ಸಿನಿಮಾದ ಶೀರ್ಷಿಕೆ ಕೇಳಿದ ಕೂಡಲೇ ಮಹಿಳಾ ಪ್ರಧಾನ ಕಥೆ ಎನಿಸುತ್ತೆ. ಒಂದು ರಿವೆಂಜ್ ಕಾಣುತ್ತೆ. ಸಾಂಗ್, ಕೊರಿಯೋಗ್ರಫಿ ಚೆನ್ನಾಗಿದೆ. ನಾಗದೇವತೆ, ಗ್ರಾಮದೇವತೆ ಹೀಗೆ ಹಲವಾರು ಅಮ್ಮನ ಭಕ್ತಿಪ್ರಧಾನ ಚಿತ್ರಗಳನ್ನು ಮಾಡಿದ್ದೇನೆ. ಸಿನಿಮಾ ನೋಡಿದ ತಕ್ಷಣ ಇದು ಸಾಯಿ ಪ್ರಕಾಶ್ ಚಿತ್ರ ಎಂದು ಗುರುತಿಸುತ್ತಿದ್ದರು. ದೇವಿ ಗೆಟಪ್​ನಲ್ಲಿ ನಾಯಕಿ ತುಂಬಾ ಚೆನ್ನಾಗಿ ಅಭಿನಯಿಸಿದ್ದಾರೆ. ಒಳ್ಳೆಯದಾಗಲಿ’ ಎಂದು ಓಂ ಸಾಯಿ ಪ್ರಕಾಶ್ ಅವರು ಶುಭ ಕೋರಿದರು.

ನವೀನ್ ಮಹದೇವ್ ಅವರು ಈ ಸಿನಿಮಾಗೆ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ನಟನೆ ಕೂಡ ಮಾಡಿದ್ದಾರೆ. ‘ಇದೊಂದು ಮಹಿಳಾ ಪ್ರಧಾನ ಕಥಾಹಂದರ ಇರುವ ಸಿನಿಮಾ. ಹೆಣ್ಣುಮಕ್ಕಳು ಎಷ್ಟೇ ಬುದ್ಧಿವಂತೆ ಆಗಿದ್ದರೂ ದುರುಳರು ಅವರನ್ನು ಹೇಗೆಲ್ಲಾ ಟ್ರ್ಯಾಪ್ ಮಾಡುತ್ತಾರೆ? ಹೆಣ್ಣಿನ ಸಹನೆಯ ಕಟ್ಟಿ ಒಡೆದಾಗ ಏನಾಗುತ್ತದೆ ಎಂಬುದನ್ನು ಈ ಸಿನಿಮಾದಲ್ಲಿ ತೋರಿಸಿದ್ದೇವೆ. ಸ್ವಲ್ಪ ಹಾರರ್ ಕೂಡ ಇದೆ’ ಎಂದು ಅವರು ಹೇಳಿದ್ದಾರೆ.

‘ಮೃತ್ಯದೇವತೆ’ ಸಿನಿಮಾ ಈಗ ಸೆನ್ಸಾರ್ ಹಂತದಲ್ಲಿದೆ. ಮೇ ತಿಂಗಳ 22ರಂದು ರಿಲೀಸ್ ಮಾಡಬೇಕು ಎಂಬ ಗುರಿ ಇಟ್ಟುಕೊಂಡು ಚಿತ್ರತಂಡ ಕಾರ್ಯನಿರತವಾಗಿದೆ. ನವೀನ್‍ ಮಹದೇವ್‍ ಅವರ ಪತ್ನಿ ಸರಸ್ವತಿ ಅವರು ‘ವರ್ಷಿತಾ ಪ್ರೊಡಕ್ಷನ್ಸ್’ ಮೂಲಕ ಈ ಸಿನಿಮಾವನ್ನು ನಿರ್ಮಿಸಿದ್ದಾರೆ. ಅನಿರುದ್ಧ್ ಅವರ ಛಾಯಾಗ್ರಹಣ, ಶಿವಪ್ರಸಾದ್ ಅವರ ಸಂಗೀತ ನಿರ್ದೇಶನ ಈ ಸಿನಿಮಾಗಿದೆ.

ಇದನ್ನೂ ಓದಿ: ‘ಕೆರೆಬೇಟೆ’ ಬಳಿಕ ‘ಕಾಮನ್ ಮ್ಯಾನ್’: ಓಂ ಸಾಯಿ ಪ್ರಕಾಶ್ ಜೊತೆ ಗೌರಿ ಶಂಕರ್ ಸಿನಿಮಾ

ರಘು ಅವರು ನೃತ್ಯ ನಿರ್ದೇಶನ ಮಾಡಿದ್ದಾರೆ. ಅಲ್ಟಿಮೇಟ್‍ ಶಿವು ಮತ್ತು ಚಿಟ್ಟ ಜಾಧವ್‍ ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಮಂಜು ವಿಕ್ರಂ ಅವರು ಸಂಕಲನದ ಜವಾಬ್ದಾರಿ ನಿಭಾಯಿಸಿದ್ದಾರೆ. ಗಣೇಶ್ ಅವರು ಕಲಾ ನಿರ್ದೇಶನ ಮಾಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ನಟಿ ಹಿಮಶ್ರೀ ಮಾತನಾಡಿ, ‘ನನ್ನದು ಹಳ್ಳಿ ಹುಡುಗಿಯ ಪಾತ್ರ. ಆ ಪಾತ್ರಕ್ಕೆ ಒಂದು ಶಕ್ತಿ ಬಂದು ಸೇರಿದಾಗ ಹೋರಾಟ ಆಗುತ್ತದೆ’ ಎಂದರು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಬೆಂಗಳೂರು: ರಾಜಕಾಲುವೆ ಮೇಲೆ ಯುವಕನ ಹುಚ್ಚಾಟ – Kannada News | Uttarahalli Storm Drain Incident: Bengaluru Youth Rescued After Suicide Attempt

ಬೆಂಗಳೂರು, ಮೇ.5: ನಗರದ ಉತ್ತರಹಳ್ಳಿ ಬಳಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ರಾಜಕಾಲುವೆಯ ಗ್ರಿಲ್ ಹತ್ತಿ ಭಾರಿ ಹುಚ್ಚಾಟ ನಡೆಸಿದ ಘಟನೆ ನಡೆದಿದೆ. ಯುವಕನ ಈ ಹೈಡ್ರಾಮಾದಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಉತ್ತರಹಳ್ಳಿ ಸಮೀಪದ ರಾಜಕಾಲುವೆಗೆ ಅಳವಡಿಸಲಾಗಿದ್ದ ಸುರಕ್ಷತಾ ಗ್ರಿಲ್ ಅನ್ನು ಹತ್ತಿದ ಯುವಕ, ಅಲ್ಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾನೆ. ಯುವಕನ ಅಪಾಯಕಾರಿ ನಡವಳಿಕೆಯನ್ನು ಗಮನಿಸಿದ ಸ್ಥಳೀಯ ಸಾರ್ವಜನಿಕರು ತಕ್ಷಣ ಕಾರ್ಯಪ್ರವೃತ್ತರಾಗಿ ಆತನನ್ನು ಹಿಡಿದು ಕೆಳಗಿಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಳೀಯರು ಯುವಕನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಸದ್ಯ ಆತ ಸುಬ್ರಹ್ಮಣ್ಯಪುರ ಪೊಲೀಸ್ ಠಾಣೆಯ ಪೊಲೀಸರ ವಶದಲ್ಲಿದ್ದಾನೆ. ಯುವಕ ಈ ರೀತಿ ವರ್ತಿಸಲು ಕಾರಣವೇನು ಎಂಬ ಬಗ್ಗೆ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

7 ರಾಜ್ಯಗಳಿಂದ 22 ರಾಜ್ಯಗಳಿಗೆ ಅಧಿಕಾರ ವ್ಯಾಪಿಸಿದ್ಹೇಗೆ? 2014 ರಿಂದ 2026ರ ವರೆಗಿನ ಬಿಜೆಪಿಯ ರಾಜಕೀಯ ರಣತಂತ್ರ – Kannada News | With BJP set to win Bengal, how India’s political map has changed

ನವದೆಹಲಿ, (ಮೇ 05): ಐದು ರಾಜ್ಯಗಳ ವಿಧಾನಸಭಾ ಚುನಾವಣೆಗಳಲ್ಲಿ (Five State Election) ಬಿಜೆಪಿ ಗಮನಾರ್ಹ ಸಾಧನೆ ಮಾಡಿದೆ. ಅಸ್ಸಾಂ (Assam), ಪುದುಚೇರಿಯಲ್ಲಿಯಲ್ಲೂ ಬಿಜೆಪಿ ತನ್ನ ಹಿಡಿತವನ್ನು ಉಳಿಸಿಕೊಂಡಿದೆ. ವಿಶೇಷವಾಗಿ ಪಶ್ಚಿಮ ಬಂಗಾಳ (West Bengal) ಭರ್ಜರಿ ವಿಜಯ ಪತಾಕೆ ಹಾರಿಸಿದ್ದು, 15 ವರ್ಷಗಳ ದೀದಿ ಆಡಳಿತಕ್ಕೆ ಬಿಜೆಪಿ ಬ್ರೇಕ್ ಹಾಕಿದೆ. ಇದರೊಂದಿಗೆ ಬಿಜೆಪಿ ತನ್ನ ಅಧಿಕಾರ ವಿವಿಧ ರಾಜ್ಯಗಳಿಗೆ ವಿಸ್ತರಿಸಿದೆ. 2014 ರಿಂದ 2026ರ ವರೆಗಿನ ಬಿಜೆಪಿಯ ರಾಜಕೀಯ ರಣತಂತ್ರದೊಂದಿಗೆ 7 ರಾಜ್ಯಗಳಿಂದ 22 ರಾಜ್ಯಗಳಿಗೆ ಅಧಿಕಾರ ವ್ಯಾಪಿಸಿಕೊಂಡಿದೆ.

ಮತ್ತಷ್ಟು ವಿಡಿಯೋ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

ಜೆರಿಯಾಟ್ರಿಕ್ ಕಿಟ್ ಎಂದರೇನು? 60 ವರ್ಷ ಮೇಲ್ಪಟ್ಟವರು ಮನೆಯಲ್ಲಿದ್ದರೆ ಈ ಕಿಟ್ ಯಾಕೆ ಮುಖ್ಯ? – Kannada News | What Is a Geriatric Kit? Senior Health & Safety Checklist

ಇಂದಿನ ವೇಗದ ಜೀವನಶೈಲಿಯಲ್ಲಿ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಅಗತ್ಯವಾಗಿದೆ. ವಿಶೇಷವಾಗಿ 60 ವರ್ಷ ಮೇಲ್ಪಟ್ಟವರಲ್ಲಿ ದೈಹಿಕ ಸಾಮರ್ಥ್ಯ ನಿಧಾನವಾಗಿ ಕುಗ್ಗುವುದು ಸಹಜ, ಅದರಲ್ಲಿಯೂ ಕೆಲವೊಮ್ಮೆ ಸಣ್ಣ ಆರೋಗ್ಯ ಸಮಸ್ಯೆಗಳೂ ಗಂಭೀರವಾಗುವ ಸಾಧ್ಯತೆ ಇರುತ್ತದೆ. ಇಂತಹ ಸಂದರ್ಭಗಳಲ್ಲಿ ತಕ್ಷಣದ ಸಹಾಯ ಬಹಳ ಮುಖ್ಯವಾಗುತ್ತದೆ. ಅದಕ್ಕಾಗಿಯೇ ಮನೆಯಲ್ಲಿ ಜೆರಿಯಾಟ್ರಿಕ್ ಕಿಟ್ (Geriatric Kit) ಇದ್ದರೆ ಬಹಳ ಒಳ್ಳೆಯದು. ಇದನ್ನು ನಾವು ಸುಲಭವಾಗಿ ಹಿರಿಯ ನಾಗರಿಕರ ಆರೈಕೆ ಕಿಟ್ ಎನ್ನಬಹುದು. ಹಾಗಾದರೆ ಇದರಲ್ಲಿ ಏನೇನಿರುತ್ತದೆ, ಹಿರಿಯರು ಇರುವ ಮನೆಯಲ್ಲಿ ಇದು ಯಾಕೆ ಮುಖ್ಯವಾಗಿ ಇರಬೇಕು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಜೆರಿಯಾಟ್ರಿಕ್ ಕಿಟ್ ಎಂದರೇನು?

ಹಿರಿಯ ನಾಗರಿಕರ ಆರೈಕೆ ಕಿಟ್ ಎಂಬುದು ಅವರ ಆರೋಗ್ಯ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಲಾದ ಒಂದು ವಿಶೇಷ ಮೆಡಿಕಲ್ ಕಿಟ್. ಇದು ತುರ್ತು ಪರಿಸ್ಥಿತಿಯಲ್ಲಿ ತಕ್ಷಣದ ಪ್ರಾಥಮಿಕ ಚಿಕಿತ್ಸೆ ನೀಡಲು ಸಹಾಯ ಮಾಡುತ್ತದೆ. ಆಸ್ಪತ್ರೆ ತಲುಪುವವರೆಗೆ ಅಗತ್ಯ ಸಹಾಯವನ್ನು ನೀಡಲು ಇದು ಉಪಯುಕ್ತವಾಗುತ್ತದೆ. ತಜ್ಞರ ಪ್ರಕಾರ, ಈ ಕಿಟ್‌ನಲ್ಲಿ ದಿನನಿತ್ಯ ಬಳಕೆಯ ಔಷಧಿಗಳು, ಫಸ್ಟ್ ಏಡ್ ಸಾಮಗ್ರಿಗಳು ಮತ್ತು ಕೆಲವು ಪ್ರಮುಖ ವೈದ್ಯಕೀಯ ಉಪಕರಣಗಳು ಇರಬೇಕು. ಉದಾಹರಣೆಗೆ ರಕ್ತದೊತ್ತಡ ಮಾಪಕ (BP ಯಂತ್ರ), ಥರ್ಮಾಮೀಟರ್, ಸ್ಟೆತಸ್ಕೋಪ್, ತೂಕದ ಯಂತ್ರ, ನಾಡಿ ಮಾಪಕ, ಶ್ರವಣ ಸಾಧನ, ಶುಗರ್ ಲೆವೆಲ್ ಪರೀಕ್ಷಾ ಸಾಧನಗಳು ಇತ್ಯಾದಿ. ಜೊತೆಗೆ ಪೇನ್ ಕಿಲರ್, ಬ್ಯಾಂಡೆಜ್, ಆಂಟಿಸೆಪ್ಟಿಕ್ ಕ್ರೀಮ್ ಮತ್ತು ಇತರ ಮೂಲಭೂತ ಔಷಧಿಗಳನ್ನು ಸೇರಿಸಬಹುದು. ಎಲ್ಲಾ ಔಷಧಿಗಳನ್ನು ವೈದ್ಯರ ಸಲಹೆಯಂತೆ ಇಡುವುದು ಮತ್ತು ಅವುಗಳ ಅವಧಿಯನ್ನು ನಿಯಮಿತವಾಗಿ ಪರಿಶೀಲಿಸುವುದು ಅಗತ್ಯ.

ಇದನ್ನೂ ಓದಿ: ಕಿವಿ ಕೇಳಿಸದಿರುವುದು ಕೇವಲ ವೃದ್ಧಾಪ್ಯದ ಸಮಸ್ಯೆಯಲ್ಲ; ಚಿಕ್ಕ ವಯಸ್ಸಿನಲ್ಲಿ ಹೀಗಾಗುವುದಕ್ಕೆ ಕಾರಣವೇನು?

ಹಿರಿಯರಿಗೆ ಇದು ಏಕೆ ಮುಖ್ಯ?

ಆರೋಗ್ಯ ಸಮಸ್ಯೆಗಳು ಹಿರಿಯರಲ್ಲಿ ಅಚಾನಕ್ ಉಂಟಾಗುವ ಸಾಧ್ಯತೆ ಹೆಚ್ಚು. ಕೆಲವೊಮ್ಮೆ ಸಣ್ಣ ತೊಂದರೆಗಳು ಕೂಡ ತ್ವರಿತವಾಗಿ ಗಂಭೀರವಾಗಬಹುದು. ಇಂತಹ ಸಂದರ್ಭಗಳಲ್ಲಿ ಜೆರಿಯಾಟ್ರಿಕ್ ಕಿಟ್ ಅಥವಾ ಈ ಆರೈಕೆ ಕಿಟ್ ತಕ್ಷಣದ ನೆರವನ್ನು ಒದಗಿಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಇದನ್ನು ಮನೆಯಲ್ಲಿ ಸಿದ್ಧಪಡಿಸಿಕೊಳ್ಳುವಾಗ, ಮೊದಲು ವೈದ್ಯರ ಸಲಹೆ ಪಡೆದು ಹಿರಿಯರ ಆರೋಗ್ಯ ಸ್ಥಿತಿಗೆ ಅನುಗುಣವಾಗಿ ಅಗತ್ಯ ವಸ್ತುಗಳನ್ನು ಸಂಗ್ರಹಿಸಬೇಕು. ಅವನ್ನು ಸ್ವಚ್ಛವಾದ ಡಬ್ಬಿಯಲ್ಲಿ ಸರಿಯಾಗಿ ವ್ಯವಸ್ಥೆ ಮಾಡಿ, ಎಲ್ಲರಿಗೂ ಸುಲಭವಾಗಿ ಸಿಗುವ ಸ್ಥಳದಲ್ಲಿ ಇಡಬೇಕು. ಸಮಯಕ್ಕೆ ತಕ್ಕಂತೆ ಕಿಟ್ ಅನ್ನು ನವೀಕರಿಸುವುದೂ ಕೂಡ ಮುಖ್ಯವಾಗುತ್ತದೆ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link