Bangalore Rain: ಬೆಂಗಳೂರಿನಲ್ಲಿ ಮತ್ತೆ ವರುಣನ ಆಗಮನ: ಮೆಜೆಸ್ಟಿಕ್ ಸೇರಿ ಹಲವೆಡೆ ಮಳೆ ಶುರು! – Kannada News | Bangalore Rains Return: Weather Forecast, Safety Tips for Low Lying Areas and Commuters
ಬೆಂಗಳೂರು, ಮೇ.5: ನಗರದಲ್ಲಿ ಭಾರೀ ಮಳೆ ಆರಂಭವಾಗಿದೆ, ಮಧ್ಯಾಹ್ನದಿಂದ ಭಾರೀ ಮೋಡಕವಿದ ವಾತಾವರಣ ನಿರ್ಮಾಣವಾಗಿತ್ತು. ಇದೀಗ ಬೆಂಗಳೂರಿನ ಹಲವು ಕಡೆ ಮಳೆ ಶುರುವಾಗಿದೆ. ಒಂದು ವಾರದ ಹಿಂದೆ ಮಳೆಯಿಂದ ಬೆಂಗಳೂರಿನಲ್ಲಿ ಭಾರೀ ದೊಡ್ಡಮಟ್ಟದ ಅನಾಹುತಗಳು ಸೃಷ್ಟಿಯಾಗಿತ್ತು. ಈ ರಣ ಮಳೆಗೆ 10 ಜನ ಸಾವನ್ನಪ್ಪಿದ್ದರು. ಇದೀಗ ಹವಾಮಾನ ಇಲಾಖೆ ತಿಳಿಸಿರುವಂತೆ ಬೆಂಗಳೂರಿನ ಹಲವು ಭಾಗದಲ್ಲಿ ಮಳೆ ಬರುತ್ತಿದೆ. ಮಧ್ಯಾಹ್ನದಿಂದಲೇ ದಟ್ಟವಾದ ಮೋಡಗಳು ಆವರಿಸಿದ್ದು, ಸದ್ಯ ಮೆಜೆಸ್ಟಿಕ್, ಶಿವಾಜಿನಗರ, ಕೆ.ಆರ್. ಮಾರುಕಟ್ಟೆ ಸೇರಿದಂತೆ ನಗರದ ಪ್ರಮುಖ ಬಡಾವಣೆಗಳಲ್ಲಿ ಮಳೆ…