ಮದುವೆ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಆಘಾತ: ಆಮಂತ್ರಣ ಕೊಡಲು ಹೋದ ವೇಳೆ ಮನೆಗೆ ಕನ್ನ, ವಧುವಿಗೆಂದು ತಂದಿದ್ದ ಆಭರಣ ಕದ್ದ ಕಳ್ಳರು – Kannada News | Nelamangala Wedding Shock: Bridal Jewelry Stolen While Family Away for Invites
ಬಂಗಾರದ ಆಭರಣಗಳ ಕಳವುImage Credit source: Tv9 Kannada ನೆಲಮಂಗಲ, ಮೇ 05: ಮಗಳ ಮದುವೆ ತಯಾರಿಯಲ್ಲಿದ್ದ ಕುಟುಂಬವೊಂದು ಆಮಂತ್ರಣಪತ್ರ ಕೊಡಲು ಪರವೂರಿಗೆ ಹೋಗಿಬರುವುದರ ಒಳಗೆ ವಿವಾಹಕ್ಕೆಂದು ಮಾಡಿಸಿಟ್ಟ ಮನೆಯಲ್ಲಿದ್ದ ಚಿನ್ನಾಭರಣ ಕಳ್ಳತನವಾಗಿರುವ ಘಟನೆ ನೆಲಮಂಗಲ ಬಳಿಯ ದಾಸನಪುರದ ಮುನೇಶ್ವರ ಬಡಾವಣೆಯಲ್ಲಿ ನಡೆದಿದೆ. ಶಿವ ಮತ್ತು ಲೋಕೇಶ್ವರಿ ಎಂಬುವವರ ಮನೆಯ ಡೋರ್ ಒಡೆದು ಒಳ ನುಗ್ಗಿರುವ ಕಳ್ಳರು ಲಕ್ಷಾಂತರ ರೂಪಾಯಿ ಬೆಲೆ ಬಾಳುವ ಚಿನ್ನಾಭರಣ, ನಗದು ದೋಚಿ ಎಸ್ಕೇಪ್ ಆಗಿದ್ದಾರೆ. ಮದುವೆ ಸಂಭ್ರಮದಲ್ಲಿದ್ದ ಕುಟುಂಬಕ್ಕೆ ಬಿಗ್ ಶಾಕ್…