Headlines

ತಮಿಳುನಾಡಿನಲ್ಲಿ ಅಧಿಕಾರ ಹಸ್ತಾಂತರದ ಪರ್ವ: ಸಚಿವರ ಕೊಠಡಿಗಳು ಖಾಲಿ ಖಾಲಿ, ಬಿರುಸಿನ ಚಟುವಟಿಕೆ – Kannada News | Tamil Nadu Power Transition: Stalin Resigns, Secretariat Buzzes for New Govt

ಚೆನ್ನೈ, ಮೇ 05: ತಮಿಳುನಾಡು(Tamil Nadu) ರಾಜಕೀಯದಲ್ಲಿ ಒಂದು ಯುಗಾಂತ್ಯವಾಗಿದ್ದು, ಡಿಎಂಕೆ ನಾಯಕ ಎಂ.ಕೆ. ಸ್ಟಾಲಿನ್  ಮುಖ್ಯಮಂತ್ರಿ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ. ಈ ಬೆಳವಣಿಗೆಯ ಬೆನ್ನಲ್ಲೇ ಚೆನ್ನೈನ ಐತಿಹಾಸಿಕ ಫೋರ್ಟ್ ಸೇಂಟ್ ಜಾರ್ಜ್ ಸಚಿವಾಲಯದಲ್ಲಿ ಹೊಸ ಬದಲಾವಣೆಯ ಗಾಳಿ ಬೀಸುತ್ತಿದೆ. ಸ್ಟಾಲಿನ್ ಅವರ ರಾಜೀನಾಮೆ ಅಂಗೀಕಾರವಾಗುತ್ತಿದ್ದಂತೆ, ಸಚಿವಾಲಯದ ಸಿಬ್ಬಂದಿಗಳು ಸಚಿವರ ಕೊಠಡಿಗಳನ್ನು ಖಾಲಿ ಮಾಡುವ ಕಾರ್ಯದಲ್ಲಿ ನಿರತರಾಗಿದ್ದಾರೆ. ಕಳೆದ ಐದು ವರ್ಷಗಳಿಂದ ಸಚಿವರ ಕಚೇರಿಗಳನ್ನು ಅಲಂಕರಿಸಿದ್ದ ಸ್ಟಾಲಿನ್ ಹಾಗೂ ಇತರ ನಾಯಕರ ಭಾವಚಿತ್ರಗಳನ್ನು ಅಧಿಕಾರಿಗಳು ಗೌರವಪೂರ್ವಕವಾಗಿ…

Read More

ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರ ಸುರಕ್ಷತೆಗೆ ಹೊಸ ಹಾದಿ; ಮಂಜು ಮುಸುಕಿದರೂ ಇನ್ನು ವಿಮಾನ ಹಾರಾಟ ಫುಲ್ ಸೇಫ್! – Kannada News | KIA Airport Gets Smarter: New AI Safety System Enhances Airside Operations

ವಿಮಾನ ನಿಲ್ದಾಣ ಸುರಕ್ಷತೆ, AI ತಂತ್ರಜ್ಞಾನ ಬೆಂಗಳೂರು, ಮೇ.6: ಇತ್ತೀಚಿನ ದಿನಗಳಲ್ಲಿ ದೇಶ, ವಿದೇಶಗಳಲ್ಲಿ ವಿಮಾನ ಅಪಘಾತಗಳು ಹೆಚ್ಚಾಗುತ್ತಿರುವ ಹೊತ್ತಿನಲ್ಲೇ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಕೆಐಎ) ಪ್ರಯಾಣಿಕರ ಮತ್ತು ವಿಮಾನಗಳ ಸುರಕ್ಷತೆಗಾಗಿ ಹೊಸ ಹೆಜ್ಜೆ ಇಟ್ಟಿದೆ. ವಿಮಾನಗಳು ಓಡಾಡುವ ಜಾಗದಲ್ಲಿ (ಏರ್‌ಸೈಡ್) ಭದ್ರತೆ ಹೆಚ್ಚಿಸಲು ‘ಸ್ಮಾರ್ಟ್ ಏರ್‌ಸೈಡ್ ಸೇಫ್ಟಿ ಸಿಸ್ಟಂʼ ಎಂಬ ಹೊಸ ತಂತ್ರಜ್ಞಾನವನ್ನು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು (ಬಿಐಎಎಲ್‌) ಜಾರಿಗೆ ತಂದಿದೆ. ಅಪಾಯಕಾರಿ ಜಾಗದಲ್ಲಿ ಹೊಸ ಸುರಕ್ಷತಾ ವ್ಯವಸ್ಥೆ ವಿಮಾನ ನಿಲ್ದಾಣದೊಳಗೆ ‘ಕ್ರಾಸ್…

Read More

30 ಎಸೆತಗಳಲ್ಲಿ 95 ರನ್: ರಿಷಭ್ ಪಂತ್‌ ರುದ್ರತಾಂಡವ ಬಿಚ್ಚಿಟ್ಟ ಕೋಚ್! – Kannada News | 95 Off 30 Balls: LSG Coach Defends Pant’s Form

ಇಂಡಿಯನ್ ಪ್ರೀಮಿಯರ್ ಲೀಗ್​ ಸೀಸನ್​-19 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಕಳಪೆ ಪ್ರದರ್ಶನ ಮುಂದುವರೆದಿದೆ. ಈ ಕಳಪೆ ಪ್ರದರ್ಶನದ ಬೆನ್ನಲ್ಲೇ LSG ತಂಡದ ಭವಿಷ್ಯ ಮತ್ತು ನಾಯಕ ರಿಷಭ್ ಪಂತ್ ಅವರ ಫಾರ್ಮ್ ಬಗ್ಗೆ ಸಾಕಷ್ಟು ಚರ್ಚೆಗಳು ನಡೆಯುತ್ತಿವೆ. ಈ ಚರ್ಚೆಯ ನಡುವೆ ತಂಡದ ಮುಖ್ಯ ಕೋಚ್ ಜಸ್ಟಿನ್ ಲ್ಯಾಂಗರ್ ಸುದ್ದಿಗೋಷ್ಠಿಯಲ್ಲಿ ನೀಡಿದ ಒಂದು ಹೇಳಿಕೆ ಈಗ ಎಲ್ಲರ ಹುಬ್ಬೇರಿಸುವಂತೆ ಮಾಡಿದೆ. ಅಭ್ಯಾಸದ ವೇಳೆ ಪಂತ್ ಆರ್ಭಟ! ಮುಂಬೈ ಇಂಡಿಯನ್ಸ್​ ವಿರುದ್ಧದ ಪಂದ್ಯದಲ್ಲಿ ರಿಷಭ್ ಪಂತ್…

Read More

‘ಟಾಕ್ಸಿಕ್’ ಡೇಟ್ ಮೇಲೆ ‘ಜನ ನಾಯಗನ್’ ಕಣ್ಣು? ಅಪರೂಪದ ಘಟನೆಗೆ ಸಾಕ್ಷಿಯಾಗಲಿದೆ ತಮಿಳುನಾಡು – Kannada News | Thalapathy Vijay CM: Jan Nayagan Release Marks New Political Cinema Era

ದಳಪತಿ ವಿಜಯ್ ಅವರ ‘ತಮಿಳಗ ವೆಟ್ರಿ ಕಳಗಮ್’ (TVK) ಪಕ್ಷ ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ 106 ಸ್ಥಾನಗಳನ್ನು ಗೆಲ್ಲುವ ಮೂಲಕ ರಾಜ್ಯ ರಾಜಕೀಯದಲ್ಲಿ ಹೊಸ ಇತಿಹಾಸ ಬರೆದಿದೆ. ಈ ಭರ್ಜರಿ ಯಶಸ್ಸಿನ ಬೆನ್ನಲ್ಲೇ ವಿಜಯ್ ಅವರು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸುವುದು ಬಹುತೇಕ ಖಚಿತವಾಗಿದೆ. ಈ ಸಂಬಂಧ ಮಾತುಕತೆ ನಡೆಯುತ್ತಿದೆ. ಬೆಳವಣಿಗೆಯ ನಡುವೆ, ಅವರ ಅಂತಿಮ ಸಿನಿಮಾ ಎನ್ನಲಾದ ‘ಜನ ನಾಯಗನ್’ ಬಿಡುಗಡೆಯ ಕುರಿತು ಈಗ ಹೊಸ ಚರ್ಚೆಗಳು ಶುರುವಾಗಿವೆ. ಚುನಾವಣಾ ದಿನಾಂಕ ಘೋಷಣೆಗೂ ಮೊದಲು ವಿಜಯ್​​ ಸಿನಿಮಾ…

Read More

ಮತಗಳ ಮರುಎಣಿಕೆ ಬಗ್ಗೆ ಬಿಜೆಪಿ ಶಾಸಕ ಜೀವರಾಜ್ ಬಿಚ್ಚಿಟ್ಟ ರಹಸ್ಯ ಕೇಳಿ – Kannada News | Sringeri assembly constituency Result Row: BJP MLA Jeevaraj Talks about Vote Recounting

ಬೆಂಗಳೂರು, (ಮೇ 05): ಹೈಕೋರ್ಟ್ ಆದೇಶದಂತೆ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತ ಮರು ಎಣಿಕೆ ಮುಗಿದಿದ್ದು, ಇದರಲ್ಲಿ ಬಿಜೆಪಿಯ ಜೀವರಾಜ್ ಗೆಲುವು ಸಾಧಿಸಿದ್ದಾರೆ. ಇದರಿಂದ ಕೆರಳದ ಡಿಸಿಎ. ಡಿಕೆ ಶಿವಕುಮಾರ್, ಇಡೀ ದೇಶದಲ್ಲಿ ಇಂತಹ ಕ್ರಿಮಿನಲ್ ಎಲ್ಲೂ ನಡೆದಿಲ್ಲ. ತನಿಖೆ ನಡೆಸುತ್ತೇವೆ ಮತ್ತು ಕಾನೂನುಬದ್ಧವಾಗಿ ಹೋರಾಡುವುದಾಗಿ ಹೇಳಿದ್ದಾರೆ. ಇದರ ಬೆನ್ನಲ್ಲೇ ಇದಕ್ಕೆ ಬಿಜೆಪಿಯ ಜೀವರಾಜ್ ಪ್ರತಿಕ್ರಿಯಿಸಿದ್ದು, 2023ರಲ್ಲಿ ಮತ ಎಣಿಕೆ ವೇಳೆ ಏನೇನಾಯ್ತು? ಕೋರ್ಟ್​​ ಗೆ ಮನವಿ ಮಾಡಿದ್ದೇನು ಎನ್ನುವುದನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಕರ್ನಾಟಕದ ಮತ್ತಷ್ಟು…

Read More

‘ಅಂದು ಕರುಣಾನಿಧಿ ಹಿಂದೆ ನಿಂತಿದ್ದ ಹುಡುಗ ಇಂದು ಅವರ ಪಕ್ಷವನ್ನೇ ಮುಗಿಸಿದ’: ಆರ್​ಜಿವಿ – Kannada News | Thalapathy Vijay TVK wins Tamil Nadu election Ram Gopal Varma reaction on DMK MK Stalin defeat

ತಮಿಳುನಾಡಿನ ರಾಜಕೀಯ ಇತಿಹಾಸದಲ್ಲಿ ಹೊಸ ಮನ್ವಂತರ ಆರಂಭವಾಗಿದೆ. ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ದಳಪತಿ ವಿಜಯ್ ನೇತೃತ್ವದ ‘ತಮಿಳಗ ವೆಟ್ರಿ ಕಳಗಂ’ (TVK) ಪಕ್ಷವು ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಜಯ ಸಾಧಿಸುವ ಮೂಲಕ ಅಧಿಕಾರದ ಗದ್ದುಗೆ ಏರಲು ಸಜ್ಜಾಗಿದೆ. ಈ ಮೂಲಕ ಆರು ಬಾರಿ ತಮಿಳುನಾಡನ್ನು ಆಳಿದ್ದ ಎಂ.ಕೆ. ಸ್ಟಾಲಿನ್ ನೇತೃತ್ವದ ಡಿಎಂಕೆ (DMK) ಪಕ್ಷಕ್ಕೆ ಭಾರಿ ಮುಖಭಂಗವಾಗಿದೆ. ಈ ಐತಿಹಾಸಿಕ ಗೆಲುವಿನ ಬೆನ್ನಲ್ಲೇ ವಿಜಯ್ ಅವರ ಬಗ್ಗೆ ರಾಮ್ ಗೋಪಾಲ್ ವರ್ಮಾ (Ram Gopal Varma)…

Read More

Capital Inflow: ಚೀನಾವನ್ನು ಹಿಂದಿಕ್ಕಿದ ಭಾರತ; ಜಾಗತಿಕ ಹೂಡಿಕೆದಾರರ ಮೊದಲ ಆಯ್ಕೆ ‘ಇಂಡಿಯಾ’ – Kannada News | India Becomes Global Investment Magnet, Surpassing China in Attracting Foreign Capital during April

ನವದೆಹಲಿ, ಮೇ 5: ಜಾಗತಿಕ ಆರ್ಥಿಕ ಮಾರುಕಟ್ಟೆಯಲ್ಲಿ (Stock Market) ಭಾರತದ ಹವಾ ಜೋರಾಗಿದೆ. ಜಾಗತಿಕ ಹೂಡಿಕೆಯನ್ನು ಆಕರ್ಷಿಸುವ ರೇಸ್‌ನಲ್ಲಿ ಭಾರತವು ತನ್ನ ನೆರೆಯ ಬಲಿಷ್ಠ ದೇಶವಾದ ಚೀನಾವನ್ನು ಹಿಂದಿಕ್ಕಿ ಭಾರಿ ಪ್ರಮಾಣದ ವಿದೇಶಿ ಬಂಡವಾಳವನ್ನು ತನ್ನತ್ತ ಸೆಳೆಯುತ್ತಿದೆ ಎಂದು ಇತ್ತೀಚಿನ ಆರ್ಥಿಕ ವರದಿಗಳು ತಿಳಿಸಿವೆ. ಮಾರ್ಚ್ ತಿಂಗಳಿನ ಕುಸಿತದ ನಂತರ ಏಪ್ರಿಲ್‌ನಲ್ಲಿ ಜಾಗತಿಕ ಮಾರುಕಟ್ಟೆಗಳು ಚೇತರಿಸಿಕೊಂಡಿದ್ದು, ಹೂಡಿಕೆದಾರರು ಚೀನಾಕ್ಕಿಂತ ಭಾರತದ ಮಾರುಕಟ್ಟೆಯ ಮೇಲೆಯೇ ಹೆಚ್ಚು ವಿಶ್ವಾಸ ವ್ಯಕ್ತಪಡಿಸುತ್ತಿದ್ದಾರೆ. ಹೀಗೆಂದು ಕ್ವಾಂಟ್ ಮ್ಯೂಚುವಲ್ ಫಂಡ್​ನ ವಿಶ್ಲೇಷಣಾ ವರದಿಯಲ್ಲಿ…

Read More

ಐಷಾರಾಮಿ ಕಾರಿನಲ್ಲಿ ಬಂದ್ರು, ಬೀದಿಯಲ್ಲಿದ್ದ ಹಸುವನ್ನೇ ಕದ್ದುಕೊಂಡು ಹೋದ್ರು!

ಹುಬ್ಬಳ್ಳಿ, ಮೇ 05: ನಗರದಲ್ಲಿ ಐಷಾರಾಮಿ ಕಾರುಗಳಲ್ಲಿ ಬಂದು ರಸ್ತೆ ಬದಿಯ ಜಾನುವಾರುಗಳನ್ನು ಕಳ್ಳತನ ಮಾಡುತ್ತಿದ್ದ ಶಿವಮೊಗ್ಗ ಮೂಲದ ಮುಬಾರಕ್ ಮತ್ತು ಆತನ ಇಬ್ಬರು ಸ್ನೇಹಿತರನ್ನು ಬೆಂಡಿಗೇರಿ ಠಾಣೆ ಪೊಲೀಸರು ಬಂಧಿಸಿದ್ದಾರೆ. ಈ ಗ್ಯಾಂಗ್ ಬೇರೆ ಬೇರೆ ಜಿಲ್ಲೆಗಳಿಂದ ಐಷಾರಾಮಿ ಕಾರುಗಳನ್ನು ತಂದು, ಅವುಗಳಿಗೆ ಕಪ್ಪು ಬಣ್ಣದ ಸ್ಟಿಕ್ಕರ್ ಅಂಟಿಸಿ ಗುರುತು ಸಿಗದಂತೆ ಸಂಚರಿಸುತ್ತಿದ್ದರು. ಹುಬ್ಬಳ್ಳಿಯ ಸೆಟಲ್‌ಮೆಂಟ್ ಹಾಗೂ ಹಳೇ ಹುಬ್ಬಳ್ಳಿ ಭಾಗದಲ್ಲಿ ರಸ್ತೆ ಬದಿಯಲ್ಲಿ ಮಲಗಿದ್ದ ಜಾನುವಾರುಗಳನ್ನು ಕಾರಿನಲ್ಲಿ ತುಂಬಿಕೊಂಡು ಪರಾರಿಯಾಗುತ್ತಿದ್ದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು,…

Read More

ನಾಳೆಯಿಂದ ಮಂಗಳೂರಿನ ಜನ ಕೂಲ್​ ಕೂಲ್: ದಕ್ಷಿಣ ಕನ್ನಡ ಮತ್ತು ಉಡುಪಿಯ ಈ ಭಾಗಗಳಲ್ಲಿ ಗುಡುಗು ಸಹಿತ ಮಳೆ ಸಾಧ್ಯತೆ – Kannada News | Mangaluru Weather Update: Rain Forecast Across Karnataka from May 6 7, Stay Safe

ಮಂಗಳೂರು, ಮೇ.5: ಕರಾವಳಿ ಕರ್ನಾಟಕದ ಜನತೆಗೆ ಹವಾಮಾನ ಇಲಾಖೆಯು ಮಳೆಯ ಸಿಹಿ ಸುದ್ದಿ ನೀಡಿದೆ. ಮೇ 6ರ ಬುಧವಾರದಿಂದ ಕರಾವಳಿ ಪ್ರದೇಶದಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಯಿದೆ ಎಂದು ಮುನ್ಸೂಚನೆ ನೀಡಲಾಗಿದೆ.ಮಂಗಳವಾರ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಬುಧವಾರದಿಂದ ವಾರಾಂತ್ಯದವರೆಗೆ ಕರಾವಳಿಯುದ್ದಕ್ಕೂ ಮಳೆಯಾಗಲಿದ್ದು, ದಕ್ಷಿಣ ಒಳನಾಡು ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗುವ ಸಾಧ್ಯತೆಯಿದೆ. ಈ ಮಳೆಯ ಅವಧಿಯಲ್ಲಿ ಬಿರುಗಾಳಿ ಹಾಗೂ ಸಿಡಿಲು ಸಹಿತ ಗುಡುಗು ಸಂಭವಿಸುವ ಸಾಧ್ಯತೆಯಿರುವುದರಿಂದ ಸಾರ್ವಜನಿಕರು…

Read More

ಪಶ್ಚಿಮ ಬಂಗಾಳದಿಂದ ಕೇರಳ ವರೆಗೆ… ಶಾಸಕರಾಗಿ ಆಯ್ಕೆಯಾದ ಮುಸ್ಲಿಮರೆಷ್ಟು ಗೊತ್ತೇ? ಅಚ್ಚರಿಯ ಅಂಕಿಅಂಖ್ಯೆ ಇಲ್ಲಿದೆ ನೋಡಿ – Kannada News | Assembly Election 2026: Statistics of Muslim MLAs Won in West Bengal, Assam, Kerala, and Tamil Nadu

ನವದೆಹಲಿ, ಮೇ 5: ದೇಶದ ರಾಜಕೀಯ ದಿಕ್ಸೂಚಿ ಎಂದೇ ಪರಿಣಮಿಸಿದ್ದ ಪಂಚರಾಜ್ಯಗಳ ವಿಧಾನಸಭಾ ಚುನಾವಣಾ ಫಲಿತಾಂಶ (Assembly Election Result 2026) ಹೊರಬಿದ್ದಿದೆ. ಈ ಬಾರಿಯ ಫಲಿತಾಂಶದಲ್ಲಿ ಮುಸ್ಲಿಂ ಸಮುದಾಯದ ಶಾಸಕರ ಸಂಖ್ಯಾಬಲಕ್ಕೆ ಸಂಬಂಧಿಸಿದಂತೆ ಕುತೂಹಲಕಾರಿ ಅಂಕಿಅಂಖ್ಯೆಗಳು ಲಭ್ಯವಾಗಿವೆ. ಅಸ್ಸಾಂ ಮತ್ತು ಪಶ್ಚಿಮ ಬಂಗಾಳದಲ್ಲಿ ಮುಸ್ಲಿಂ ಶಾಸಕರ ಪ್ರಭಾವ ತಗ್ಗಿದರೆ, ಕೇರಳದಲ್ಲಿ ಅವರ ಸಂಖ್ಯೆಯಲ್ಲಿ ಏರಿಕೆ ಕಂಡುಬಂದಿದೆ. ಬಂಗಾಳ ಮತ್ತು ಅಸ್ಸಾಂನಲ್ಲಿ ಮುಸ್ಲಿಂ ಶಾಸಕರ ಸಂಖ್ಯೆ ಇಳಿಕೆ ಜಮ್ಮು ಮತ್ತು ಕಾಶ್ಮೀರದ ನಂತರ ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ…

Read More