Headlines

IPL 2026: ಮೊಹಮ್ಮದ್ ಸಿರಾಜ್ ‘ಡಾಟ್ ಬಾಲ್’ ಶತಕ..! – Kannada News | Mohammed Siraj has bowled 109 dot balls in IPL 2026

IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ಸೀಸನ್-19 ರಲ್ಲಿ ಟೀಮ್ ಇಂಡಿಯಾದ ವೇಗಿ ಮೊಹಮ್ಮದ್ ಸಿರಾಜ್ ತಮ್ಮ ಮಾರಕ ಬೌಲಿಂಗ್ ಮೂಲಕ ಹೊಸ ಸಂಚಲನ ಸೃಷ್ಟಿಸುತ್ತಿದ್ದಾರೆ. ಈ ಬಾರಿ ಗುಜರಾತ್ ಟೈಟಾನ್ಸ್ ತಂಡದ ಪರ ಕಣಕ್ಕಿಳಿದಿರುವ ಸಿರಾಜ್, ಎದುರಾಳಿ ಬ್ಯಾಟರ್‌ಗಳಿಗೆ ರನ್ ಬಿಟ್ಟುಕೊಡಲು ಹಿಂದೇಟು ಹಾಕುವ ಮೂಲಕ ‘ಡಾಟ್ ಬಾಲ್’ಗಳ ರಾಜನಾಗಿ ಹೊರಹೊಮ್ಮಿದ್ದಾರೆ. ಡಾಟ್ ಬಾಲ್‌ ಶತಕ: ಪ್ರಸಕ್ತ ಸಾಲಿನ ಐಪಿಎಲ್‌ನಲ್ಲಿ ಸಿರಾಜ್ ಇದುವರೆಗೆ ಒಟ್ಟು 109 ಡಾಟ್ ಬಾಲ್‌ಗಳನ್ನು ಎಸೆಯುವ ಮೂಲಕ ಅತಿ ಹೆಚ್ಚು ಡಾಟ್…

Read More

ಬೆಂಗಳೂರಿನಲ್ಲಿ ತಲೆಯೆತ್ತಲಿದೆ ದೇಶದ ಮೊದಲ ‘ಮೆದುಳು ಮತ್ತು ಮನಸ್ಸಿನ ಮ್ಯೂಸಿಯಂ’! – Kannada News | India’s First Immersive Neuroscience Museum: NIMHANS to Launch Rs 35 Cr ‘Museum of Brain and Mind’ in Bengaluru

ಬೆಂಗಳೂರು, ಮೇ 04: ಸಿಲಿಕಾನ್ ಸಿಟಿಯಲ್ಲಿ ಮತ್ತೊಂದು ಅದ್ಭುತ ಲೋಕ ತೆರೆದುಕೊಳ್ಳಲಿದೆ. ನಗರದ ಪ್ರತಿಷ್ಠಿತ ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (NIMHANS), ಸುಮಾರು 35 ಕೋಟಿ ರೂಪಾಯಿ ವೆಚ್ಚದಲ್ಲಿ ದೇಶದ ಮೊದಲ ನರವಿಜ್ಞಾನ ಆಧಾರಿತ ಇಮ್ಮರ್ಸಿವ್ (Immersive) ಮ್ಯೂಸಿಯಂ ಅನ್ನು ಅಭಿವೃದ್ಧಿಪಡಿಸುತ್ತಿದೆ. ‘ಮ್ಯೂಸಿಯಂ ಆಫ್ ಬ್ರೈನ್ ಅಂಡ್ ಮೈಂಡ್’ (Museum of Brain and Mind) ಎಂಬ ಹೆಸರಿನ ಈ ವಸ್ತುಸಂಗ್ರಹಾಲಯವು “ನೀವು ಹೇಗಿದ್ದೀರೋ, ಹಾಗೆ ಇರಲು ಕಾರಣವೇನು ತಿಳಿಯಿರಿ” ಎಂಬ ಸರಳ ಉದ್ದೇಶದೊಂದಿಗೆ…

Read More

ಶೃಂಗೇರಿ ಮರು ಮತ ಎಣಿಕೆಯಲ್ಲಿ ಗೆದ್ದ ಬೆನ್ನಲ್ಲೇ ಎಫ್​ಐಆರ್! ಬಿಜೆಪಿಯ ಜೀವರಾಜ್​ ಹೇಳಿದ್ದೇನು? – Kannada News | Sringeri MLA DN Jeevaraj Reacts to FIR After Winning Post Recount: Claims Victory for Truth and Constitution

ಚಿಕ್ಕಮಗಳೂರು, ಮೇ 4: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆಯಲ್ಲಿ ಅಂತಿಮವಾಗಿ ಗೆಲುವು ಸಾಧಿಸಿರುವ ಬಿಜೆಪಿ ನಾಯಕ ಡಿ.ಎನ್. ಜೀವರಾಜ್ ಅವರು ಇಂದು (ಮೇ 4) ಅಧಿಕೃತವಾಗಿ ಶಾಸಕ ಸ್ಥಾನದ ಪ್ರಮಾಣಪತ್ರ ಸ್ವೀಕರಿಸಿದ್ದಾರೆ. ಕಳೆದ ಮೂರು ವರ್ಷಗಳ ನಿರಂತರ ಕಾನೂನು ಹೋರಾಟದ ನಂತರ ಲಭಿಸಿದ ಈ ಜಯವನ್ನು ಅವರು ‘ಸತ್ಯಕ್ಕೆ ಸಿಕ್ಕ ಜಯ’ ಎಂದು ಬಣ್ಣಿಸಿದ್ದಾರೆ. ತಮ್ಮ ಗೆಲುವಿನ ಬೆನ್ನಲ್ಲೇ ದಾಖಲಾಗಿರುವ ಎಫ್‌ಐಆರ್ (FIR) ಕುರಿತು ಟಿವಿ9 ಗೆ ಪ್ರತಿಕ್ರಿಯಿಸಿದ ಜೀವರಾಜ್, ‘ಸೋತ ಮೇಲೆ…

Read More

ಬಾಗಲಕೋಟೆ ಉಪಚುನಾವಣೆ: ಗೆಲುವನ್ನು ತಂದೆಗೆ ಅರ್ಪಿಸಿ ಉಮೇಶ್​​ ಮೇಟಿ ಭಾವುಕ – Kannada News | Umesh Meti Secures Resounding Victory in Bagalkot By Election, Dedicates Win to Late Father

ಬಾಗಲಕೋಟೆ, ಮೇ 04: ಬಾಗಲಕೋಟೆ ಉಪಚುನಾವಣೆಯ ಫಲಿತಾಂಶ ಹೊರಬಿದ್ದಿದ್ದು, ಕಾಂಗ್ರೆಸ್ ಅಭ್ಯರ್ಥಿ ಉಮೇಶ್ ಮೇಟಿ ಭರ್ಜರಿ ಜಯ ಸಾಧಿಸಿದ್ದಾರೆ. 21,866 ಮತಗಳ ಅಂತರದಲ್ಲಿ ಬಿಜೆಪಿ ಅಭ್ಯರ್ಥಿ ವೀರಣ್ಣ ಚರಂತಿಮಠ ಅವರನ್ನು ಸೋಲಿಸಿ ಉಮೇಶ್ ಮೇಟಿ ಗೆಲುವಿನ ನಗೆ ಬೀರಿದ್ದಾರೆ. ಉಮೇಶ್ ಮೇಟಿ 97,941 ಮತಗಳನ್ನು ಪಡೆದರೆ, ವೀರಣ್ಣ ಚರಂತಿಮಠ 76,075 ಮತಗಳನ್ನು ಗಳಿಸಿದ್ದಾರೆ. ಗೆಲುವಿನ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಉಮೇಶ್ ಮೇಟಿ, ತಮ್ಮ ವಿಜಯವನ್ನು ತಂದೆ ಹೆಚ್​​.ವೈ. ಮೇಟಿ ಅವರಿಗೆ ಅರ್ಪಿಸಿ ಭಾವುಕರಾದರು. ಅಲ್ಲದೆ, ಇದು ತಮ್ಮ…

Read More

‘ಬೇವಕೂಫ್ ಮತ್ ಬನಾಓ, ಲಂಚದ ರಾಣಿ’! ಬಂಗಾಳದ ರಣಕಣದಲ್ಲಿ ಮೋದಿ, ಶಾ, ದೀದಿ ನಡುವೆ ನಡೆದಿದ್ದ ವಾಕ್ಸಮರದ ಹಿನ್ನೋಟ – Kannada News | West Bengal Election Result 2026: A Look Back at PM Modi and Amit Shah’s Fiery Campaign vs Mamata Banerjee

ಬಂಗಾಳದ ರಣಕಣದಲ್ಲಿ ಮೋದಿ, ಶಾ, ದೀದಿ ನಡುವೆ ನಡೆದಿದ್ದ ವಾಕ್ಸಮರದ ಹಿನ್ನೋಟImage Credit source: tv9 ನವದೆಹಲಿ, ಮೇ 4: ಇಡೀ ದೇಶದ ಗಮನ ಸೆಳೆದಿದ್ದ ಪಶ್ಚಿಮ ಬಂಗಾಳ (West Bengal) ವಿಧಾನಸಭಾ ಚುನಾವಣೆಯ ಮಹಾ ಅಗ್ನಿಪರೀಕ್ಷೆಯ ಫಲಿತಾಂಶದ ಕ್ಷಣಗಳು (Assembly Election Result 2026) ಹತ್ತಿರ ಬಂದಿದ್ದು, ಬಿಜೆಪಿ (BJP) ಅಧಿಕಾರಕ್ಕೇರುವುದು ನಿಚ್ಚಳವಾಗಿದೆ. ಕಳೆದ ಎರಡು ತಿಂಗಳಿಂದ ಗಂಗೆಯ ಮಡಿಲಲ್ಲಿ ನಡೆದಿದ್ದು ಕೇವಲ ಚುನಾವಣೆಯಲ್ಲ, ಅದು ರಕ್ತಸಿಕ್ತ ರಾಜಕೀಯದ ಕುರುಕ್ಷೇತ್ರ. ಮಮತಾ ಬ್ಯಾನರ್ಜಿಯವರ (Mamata Banerjee)…

Read More

ಚಿತ್ರರಂಗಕ್ಕೆ ವಿಜಯ್ ಗುಡ್​​ಬೈ? ‘ಜನ ನಾಯಗನ್’ ಚಿತ್ರಕ್ಕೆ ಹೆಚ್ಚಿತು ಮೈಲೇಜ್ – Kannada News | Thalapathy Vijay’s Political Rise: CM Aspirations and Impact on Tamil Nadu Cinema

ತಮಿಳುನಾಡು ಚಿತ್ರರಂಗದ ಇತಿಹಾಸವನ್ನು ಒಮ್ಮೆ ತೆಗೆದು ನೋಡಿದರೆ ಇಂದಿನ ನಟ ದಳಪತಿ ವಿಜಯ್ ಅವರ ಗೆಲುವು ಹೆಚ್ಚು ಅಚ್ಚರಿ ತರುವುದಿಲ್ಲ. ಈಗಾಗಲೇ ಅನೇಕ ಚಿತ್ರರಂಗದ ಗಣ್ಯರು ಅಲ್ಲಿನ ರಾಜಕೀಯದಲ್ಲಿ ಯಶಸ್ಸು ಕಂಡಿದ್ದಾರೆ. ಆದರೆ, ಇಲ್ಲಿ ಅಚ್ಚರಿ ತರುತ್ತಿರುವುದು ಎಕ್ಸಿಟ್ ಪೋಲ್ ಲೆಕ್ಕಾಚಾರವನ್ನು ವಿಜಯ್ ಸಂಪೂರ್ಣವಾಗಿ ಉಲ್ಟಾ ಮಾಡಿದ್ದು. ದಳಪತಿ ವಿಜಯ್ ಅವರ ಹಾದಿ ಇತರರಿಗಿಂತ ಭಿನ್ನ ಮತ್ತು ಸವಾಲುಗಳಿಂದ ಕೂಡಿತ್ತು. ಇಂದು ಅವರು ಮುಖ್ಯಮಂತ್ರಿ ಗದ್ದುಗೆಯ ಸನಿಹದಲ್ಲಿ ನಿಂತಿದ್ದಾರೆ. ಅವರ ರಾಜಕೀಯ ಯಶಸ್ಸಿನಿಂದ ಚಿತ್ರರಂಗಕ್ಕೆ ಗುಡ್​​ಬೈ ಹೇಳೋದು…

Read More

ಕೈಯಲ್ಲಿ ಡಮರು, ತ್ರಿಶೂಲ ಹಿಡಿದ ಮೋದಿ! ಅಸ್ಸಾಂನಲ್ಲಿ ಬಿಜೆಪಿಯ ಭರ್ಜರಿ ಮುನ್ನಡೆಗೆ ಎಐ ವೀಡಿಯೋ ಹಂಚಿಕೊಂಡು ಸಂಭ್ರಮ – Kannada News | Assam Election Results 2026: BJP Led NDA Set for Historic Hat trick; PM Modi’s AI Video Goes Viral

ಬೆಂಗಳೂರು, ಮೇ 04: ಅಸ್ಸಾಂ ವಿಧಾನಸಭಾ ಚುನಾವಣೆಯ ಮತ ಎಣಿಕೆ ಪ್ರಗತಿಯಲ್ಲಿದ್ದು, ಆಡಳಿತಾರೂಢ ಬಿಜೆಪಿ ನೇತೃತ್ವದ ಎನ್‌ಡಿಎ (NDA) ಮೈತ್ರಿಕೂಟ ಸತತ ಮೂರನೇ ಬಾರಿಗೆ ಅಧಿಕಾರಕ್ಕೇರುವತ್ತ ದಾಪುಗಾಲು ಹಾಕಿದೆ. ಒಟ್ಟು 126 ಕ್ಷೇತ್ರಗಳಿರುವ ಅಸ್ಸಾಂನಲ್ಲಿ ಬಹುಮತಕ್ಕೆ 64 ಸ್ಥಾನಗಳ ಅಗತ್ಯವಿದ್ದು, ಮಧ್ಯಾಹ್ನ 11.45ರ ಸುಮಾರಿಗೆ ಬಿಜೆಪಿ ಬರೊಬ್ಬರಿ 101 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದುಕೊಳ್ಳುವ ಮೂಲಕ ವಿರೋಧ ಪಕ್ಷಗಳನ್ನು ಧೂಳೀಪಟ ಮಾಡಿದೆ. ಈ ಅಭೂತಪೂರ್ವ ಹ್ಯಾಟ್ರಿಕ್ ಗೆಲುವಿನ ಮುನ್ಸೂಚನೆಯಿಂದ ಅಸ್ಸಾಂ ಬಿಜೆಪಿ ಘಟಕವು ಸಖತ್ ಖುಷಿಯಲ್ಲಿದೆ. ಈ ಸಂಭ್ರಮವನ್ನು…

Read More

RCB ತಂಡಕ್ಕೆ ಬಿಗ್ ಶಾಕ್: ಇಂಗ್ಲೆಂಡ್​ಗೆ ತೆರಳಿದ ಫಿಲ್ ಸಾಲ್ಟ್!

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡಕ್ಕೆ ಆಘಾತ ಎದುರಾಗಿದೆ. ತಂಡದ ಪ್ರಮುಖ ಆಟಗಾರ ಫಿಲ್ ಸಾಲ್ಟ್ (Phil Salt) ಇಂಗ್ಲೆಂಡ್​ಗೆ ಮರಳಿದ್ದಾರೆ. ಹೀಗೆ ಇಂಗ್ಲೆಂಡ್​ಗೆ ವಾಪಾಸ್ ಆಗಲು ಮುಖ್ಯ ಕಾರಣ ಇಸಿಬಿ ಸೂಚನೆ. ಏಪ್ರಿಲ್ 18ರಂದು ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದ ವೇಳೆ ಫೀಲ್ಡಿಂಗ್ ಮಾಡುವಾಗ ಸಾಲ್ಟ್ ಅವರ ಎಡಗೈ ಬೆರಳಿಗೆ ಗಂಭೀರ ಗಾಯವಾಗಿತ್ತು. ಆರಂಭದಲ್ಲಿ ಇದು ಸಣ್ಣ ಗಾಯ ಎಂದು ಭಾವಿಸಲಾಗಿದ್ದರೂ, ಕಳೆದ ಮೂರು…

Read More

ಕೇರಳದಲ್ಲಿ ಯುಡಿಎಫ್​​ ಕಮಾಲ್​: ಅಧಿಕಾರದಲ್ಲಿದ್ದ ಒಂದೇ ಒಂದು ರಾಜ್ಯವನ್ನೂ ಕಳೆದುಕೊಂಡ ಕಮ್ಯುನಿಷ್ಟರು – Kannada News | Kerala Election: UDF Dominates, Communist Rule Ends in India as LDF Faces Historic Defeat

ಪಿಣರಾಯಿ ವಿಜಯನ್​​Image Credit source: navbharattimes ತಿರುವನಂತಪುರಂ, ಮೇ 04: 140 ಸದಸ್ಯರ ಬಲವನ್ನು ಹೊಂದಿರುವ ಕೇರಳ ವಿಧಾನಸಭಾ ಚುನಾವಣೆಯ ಫಲಿತಾಂಶದ ಮತ ಎಣಿಕೆ ಪ್ರಕ್ರಿಯೆಯಲ್ಲಿ ಕಾಂಗ್ರೆಸ್ ನೇತೃತ್ವದ ಯುಡಿಎಫ್ (ಯುನೈಟೆಡ್ ಡೆಮಾಕ್ರಟಿಕ್ ಫ್ರಂಟ್) ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದ್ದು, ಇದನ್ನು ಕಳೆದ ಎರಡು ದಶಕಗಳಲ್ಲಿನ ಅತ್ಯುತ್ತಮ ಪ್ರದರ್ಶನ ಎಂದೇ ಪರಿಗಣಿಸಲಾಗಿದೆ. ಆ ಮೂಲಕ ದೇಶದಲ್ಲಿ ಈವರೆಗೆ ಆಡಳಿತದಲ್ಲಿದ್ದ ಏಕೈಕ ಕಮ್ಯುನಿಷ್ಟ್​​ ಸರ್ಕಾರವೂ ಅಧಿಕಾರ ಕಳೆದುಕೊಳ್ಳುವ ಎಲ್ಲ ಲಕ್ಷಣಗಳು ಸ್ಪಷ್ಟವಾಗಿ ಗೋಚರಿಸುತ್ತಿವೆ. 2001ರ ವಿಧಾನಸಭಾ ಚುನಾವಣೆಯ ನಂತರದ…

Read More

Personality Test: ‘R’ ಅಕ್ಷರದಿಂದ ಹೆಸರು ಪ್ರಾರಂಭವಾಗುವವರ ಸ್ವಭಾವ ಹೇಗಿರುತ್ತೆ ಗೊತ್ತಾ? – Kannada News | R Name Numerology: Uncover Personality, Finance and Love Life Traits

‘R’ ಅಕ್ಷರದಿಂದ ಹೆಸರು ಪ್ರಾರಂಭImage Credit source: Pinterest ಸಂಖ್ಯಾಶಾಸ್ತ್ರದ ಪ್ರಕಾರ ನಿಮ್ಮ ಹೆಸರಿನ ಮೊದಲ ಅಕ್ಷರವು ನಿಮ್ಮ ಜೀವನದ ದಿಕ್ಕನ್ನು ನಿರ್ಧರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅದರಲ್ಲೂ ‘R’ ಅಕ್ಷರದಿಂದ ಹೆಸರು ಪ್ರಾರಂಭವಾಗುವ ವ್ಯಕ್ತಿಗಳ ಗುಣಸ್ವಭಾವ, ಆರ್ಥಿಕ ಸ್ಥಿತಿ ಮತ್ತು ವೈವಾಹಿಕ ಜೀವನ ಹೇಗಿರುತ್ತದೆ ಎಂಬುದರ ಕುರಿತು ಆಸಕ್ತಿದಾಯಕ ಮಾಹಿತಿ ಇಲ್ಲಿದೆ. ಬುದ್ಧಿವಂತಿಕೆ ಮತ್ತು ಸಂಯಮದ ವ್ಯಕ್ತಿತ್ವ: ಸಂಖ್ಯಾಶಾಸ್ತ್ರದ ಪ್ರಕಾರ, ‘R’ ಅಕ್ಷರದಿಂದ ಹೆಸರು ಆರಂಭವಾಗುವ ವ್ಯಕ್ತಿಗಳು ಅತೀವ ಬುದ್ಧಿವಂತರು. ಇವರಲ್ಲಿ ಒಂದು ವಿಶಿಷ್ಟವಾದ ದ್ವಂದ್ವ…

Read More