Category Archives: Blog

Your blog category

ಮುಂಬೈನ ಕುಟುಂಬದ ನಿಗೂಢ ಸಾವಿಗೆ ಕಲ್ಲಂಗಡಿ ಕಾರಣವೇ? ಇಲ್ಲಿದೆ ಅಸಲಿ ಸಂಗತಿ – Kannada News | Mumbai family deaths Mystery Deepens No adulteration in watermelon says FDA crime news in kannada

ಮುಂಬೈ, ಮೇ 2: ಮುಂಬೈನ ಗಂಡ, ಹೆಂಡತಿ, ಇಬ್ಬರು ಮಕ್ಕಳು ರಾತ್ರಿ ಕಲ್ಲಂಗಡಿ (Watermelon) ತಿಂದ ನಂತರ ಸಾವನ್ನಪ್ಪಿದ ಘಟನೆ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿತ್ತು. ದಿನನಿತ್ಯ ತಿನ್ನುವ ಹಣ್ಣು ಕೂಡ ನಮ್ಮ ಆರೋಗ್ಯಕ್ಕೆ ಸುರಕ್ಷಿತವಲ್ಲವಾ? ಎಂಬ ಚರ್ಚೆಗಳು ನಡೆದಿದ್ದವು. ಅದಾದ ಕೆಲವು ದಿನಗಳ ನಂತರ, ಮಹಾರಾಷ್ಟ್ರದ ಆಹಾರ ಮತ್ತು ಔಷಧ ಆಡಳಿತದ (FDA) ಮೃತರ ಮನೆಯಿಂದ ಸಂಗ್ರಹಿಸಿದ ಕಲ್ಲಂಗಡಿ, ಬಿರಿಯಾನಿ, ನೀರು ಮತ್ತು ಮಸಾಲೆಗಳ ಮಾದರಿಗಳ ಮೇಲೆ ನಡೆಸಿದ ಪ್ರಾಥಮಿಕ ಪರೀಕ್ಷೆಗಳಲ್ಲಿ ಕಲಬೆರಕೆಯ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ.

ಮುಂಬೈನ ಪೆಂಡಿ ಬಜಾರ್ ಪ್ರದೇಶದ ಅಬ್ದುಲ್ಲಾ ಟೊಕಾಡಿಯಾ (44), ಅವರ ಪತ್ನಿ ನಸ್ರೀನ್ (35) ಮತ್ತು ಅವರ ಹೆಣ್ಣುಮಕ್ಕಳಾದ ಆಯೇಷಾ (16) ಮತ್ತು ಜೈನಾಬ್ (12) ರಾತ್ರಿ ಊಟ ಮಾಡಿ, ಕಲ್ಲಂಗಡಿ ಹಣ್ಣು ತಿಂದು ಮಲಗಿದ ನಂತರ ಇದ್ದಕ್ಕಿದ್ದಂತೆ ಅಸ್ವಸ್ಥರಾಗಿದ್ದರು. ಅವರನ್ನು ಆಸ್ಪತ್ರೆಗೆ ಸೇರಿಸಿದರೂ ಬದುಕಿಸಲು ಸಾಧ್ಯವಾಗಲಿಲ್ಲ. ಈ ಘಟನೆಯ ತನಿಖೆ ನಡೆಸುತ್ತಿರುವ ಅಧಿಕಾರಿಗಳಿಗೆ ಹೊಸ ಮಾಹಿತಿ ಸಿಕ್ಕಿದೆ. ಆ ರಾತ್ರಿ 1 ಗಂಟೆ ಸುಮಾರಿಗೆ ಕಲ್ಲಂಗಡಿ ತಿಂದ ನಂತರ ಕುಟುಂಬವು ಅಸ್ವಸ್ಥಗೊಂಡಿರುವಂತೆ ತೋರುತ್ತದೆ. ಇದು ಸಿಹಿ ಅಥವಾ ಬಣ್ಣಕ್ಕಾಗಿ ಹಣ್ಣಿನಲ್ಲಿ ಕೆಲವು ರಾಸಾಯನಿಕಗಳನ್ನು ಬೆರೆಸಿರಬಹುದು ಎಂಬ ಅನುಮಾನಗಳಿಗೆ ಕಾರಣವಾಗಿತ್ತು. ಹೀಗಾಗಿ, ಇದನ್ನು ತನಿಖೆ ಮಾಡಿದ ಆಹಾರ ಮತ್ತು ಔಷಧ ಆಡಳಿತ (FDA) ಅವರ ಮನೆಯಲ್ಲಿ ಇದ್ದ ಕಲ್ಲಂಗಡಿಯಿಂದ ಹಿಡಿದು ಬೇಯಿಸಿದ ಅನ್ನ ಮತ್ತು ಮಸಾಲೆಗಳವರೆಗೆ ಎಲ್ಲವನ್ನೂ ಪರಿಶೀಲಿಸಿತು.

ಇದನ್ನೂ ಓದಿ: ಬಿರಿಯಾನಿ ತಿಂದ ನಂತರ ಕಲ್ಲಂಗಡಿ ಸೇವನೆ ಮಾರಕವೇ? ಮುಂಬೈ ಘಟನೆಯ ಬೆನ್ನಲ್ಲೇ ತಜ್ಞರು ನೀಡಿದ ಎಚ್ಚರಿಕೆ ಇಲ್ಲಿದೆ!

ಆದರೆ, ಆ ಪರೀಕ್ಷೆಯಲ್ಲಿ ಹಣ್ಣಿನ ಬಣ್ಣ, ಸಿಹಿ ಹೆಚ್ಚಿಸಲು ಯಾವುದೇ ಕೃತಕ ಬಣ್ಣ ನೀಡುವ ವಸ್ತುಗಳು ಅಥವಾ ರಾಸಾಯನಿಕವನ್ನು ಸೇರಿಸಿಲ್ಲ ಎಂದು ದೃಢಪಟ್ಟಿದೆ. ಇದು ಈ ಪ್ರಕರಣದ ನಿಗೂಢತೆಯನ್ನು ಇನ್ನಷ್ಟು ಹೆಚ್ಚಿಸಿದೆ. ಇದಲ್ಲದೆ, ಮೃತರ ಶವಪರೀಕ್ಷೆಯ ವರದಿಯಲ್ಲಿ ಆಘಾತಕಾರಿ ಮಾಹಿತಿ ಬಹಿರಂಗವಾಗಿದೆ. ಮೃತರ ಪ್ರಮುಖ ಅಂಗಗಳಾದ ಮೆದುಳು, ಹೃದಯ ಮತ್ತು ಕರುಳು ಹಸಿರು ಬಣ್ಣಕ್ಕೆ ತಿರುಗಿರುವುದು ಕಂಡುಬಂದಿದೆ. ವೈದ್ಯಕೀಯ ತಜ್ಞರ ಪ್ರಕಾರ, ಇದು ಸಾಮಾನ್ಯ ಫುಡ್ ಪಾಯಿಸನಿಂಗ್ ಅಲ್ಲ. ದೇಹದ ಎಲ್ಲಾ ಪ್ರಮುಖ ಅಂಗಗಳು ಒಂದೇ ಸಮಯದಲ್ಲಿ ಬಣ್ಣವನ್ನು ಬದಲಾಯಿಸಲು ಯಾವುದಾದರೂ ವಿಷಕಾರಿ ವಸ್ತುವು ದೇಹದಾದ್ಯಂತ ರಕ್ತದ ಮೂಲಕ ಬಹಳ ಬೇಗನೆ ಹರಿಯಬೇಕು ಎಂದು ವೈದ್ಯರು ತಿಳಿಸಿದ್ದಾರೆ.

ಈ ತನಿಖೆಯಲ್ಲಿನ ಮತ್ತೊಂದು ಆಘಾತಕಾರಿ ಅಂಶವೆಂದರೆ, ಮೃತ ಅಬ್ದುಲ್ಲಾ ಅವರ ದೇಹದಲ್ಲಿ ‘ಮಾರ್ಫಿನ್’ ಎಂಬ ಮಾದಕ ವಸ್ತುವಿನ ಅಂಶಗಳು ಕಂಡುಬಂದಿವೆ ಎಂದು ವರದಿಗಳು ತಿಳಿಸಿವೆ. ಇದು ಈ ಪ್ರಕರಣವನ್ನು ಸಂಪೂರ್ಣವಾಗಿ ವಿಭಿನ್ನ ದಿಕ್ಕಿನತ್ತ ಕೊಂಡೊಯ್ದಿದೆ. ಇದು ಆತ್ಮಹತ್ಯೆಯೋ, ಪ್ಲಾನ್ ಮಾಡಿ ಮಾಡಲಾದ ಕೊಲೆಯೋ ಅಥವಾ ಅನಿರೀಕ್ಷಿತವಾಗಿ ನಡೆದ ಘಟನೆಯೋ ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: ರಾತ್ರಿ ಕಲ್ಲಂಗಡಿ ಹಣ್ಣು ತಿಂದವರು ಬೆಳಗ್ಗೆ ಹೆಣವಾದರು; ಮುಂಬೈನಲ್ಲಿ ಇಡೀ ಕುಟುಂಬದ ದುರಂತ ಅಂತ್ಯ

ನೀರಿನ ಮಾದರಿಗಳ ಅಧ್ಯಯನಗಳು ಇನ್ನೂ ಪೂರ್ಣಗೊಂಡಿಲ್ಲ. ಆ ಮನೆಯಲ್ಲಿದ್ದ ಬೇಯಿಸಿದ ಮಾಂಸದ ಮಾದರಿಗಳನ್ನು ಪ್ರೋಟೀನ್ ಪರೀಕ್ಷೆಗೆ ಕಳುಹಿಸಲಾಗಿದ್ದು, ಇತರ ಮಾದರಿಗಳನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸಲಾಗಿದೆ. ಆಹಾರದಲ್ಲಿ ಯಾವುದೇ ಬ್ಯಾಕ್ಟೀರಿಯಾದ ಸೋಂಕುಗಳು ಅಥವಾ ಪತ್ತೆಯಾಗದ ವಿಷಕಾರಿ ಅಂಶಗಳು ಇವೆಯೇ ಎಂದು ನಿರ್ಧರಿಸಲು ಅಧಿಕಾರಿಗಳು ವಿವರವಾದ ವಿಧಿವಿಜ್ಞಾನ ವರದಿಗಾಗಿ ಕಾಯುತ್ತಿದ್ದಾರೆ. ಪೂರ್ಣ ವಿಧಿವಿಜ್ಞಾನ ವರದಿ ಹೊರಬಂದ ನಂತರವೇ ಆ ನಾಲ್ವರು ಜೀವಗಳನ್ನು ಬಲಿ ತೆಗೆದುಕೊಂಡ ಹಸಿರು ವಿಷ ಯಾವುದು ಎಂಬ ನಿಗೂಢ ಪ್ರಶ್ನೆಗೆ ಉತ್ತರ ಸಿಗುವ ಸಾಧ್ಯತೆಯಿದೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ವಿನಯ್ ಕುಲಕರ್ಣಿ ಶಾಸಕ ಸ್ಥಾನ ಅನರ್ಹ: ವಿಧಾನಸಭೆ ಕಾರ್ಯದರ್ಶಿ ಮಹತ್ವದ ಆದೇಶ – Kannada News | Vinay Kulkarni Disqualified as MLA: Official Order Issued Following Life Imprisonment in Yogesh Gowda Murder Case

ವಿನಯ್ ಕುಲಕರ್ಣಿ ಹಾಗೂ ವಿಧಾನಸೌಧImage Credit source: tv9

ಬೆಂಗಳೂರು, ಮೇ 2: ದೀರ್ಘಕಾಲದ ಕಾನೂನು ಹೋರಾಟ ಮತ್ತು ರಾಜಕೀಯ ಜಿದ್ದಾಜಿದ್ದಿನ ನಂತರ, ಧಾರವಾಡ ಗ್ರಾಮೀಣ ಕ್ಷೇತ್ರದ ಶಾಸಕ ವಿನಯ್ ಕುಲಕರ್ಣಿ ಅವರ ಶಾಸಕತ್ವವನ್ನು ಅನರ್ಹಗೊಳಿಸಿ ಶನಿವಾರ ವಿಧಾನಸಭೆ ಕಾರ್ಯದರ್ಶಿ ಮಹತ್ವದ ಆದೇಶ ಆದೇಶ ಹೊರಡಿಸಿದ್ದಾರೆ. ಜಿಲ್ಲಾ ಪಂಚಾಯತ್ ಸದಸ್ಯ ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ವಿನಯ್ ಕುಲಕರ್ಣಿ ಅವರಿಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದ ನಂತರದ ಕೆಲವೇ ದಿನಗಳಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.

ಭಾರತೀಯ ಸಂವಿಧಾನದ ವಿಧಿ 191(1)(e) ಮತ್ತು ಜನಪ್ರತಿನಿಧಿ ಕಾಯ್ದೆ 1951ರ ಸೆಕ್ಷನ್ 8ರ ಅಡಿಯಲ್ಲಿ ಈ ಅನರ್ಹತೆ ಆದೇಶವನ್ನು ಹೊರಡಿಸಲಾಗಿದೆ. ನಿಯಮಗಳ ಪ್ರಕಾರ, ಯಾವುದೇ ಜನಪ್ರತಿನಿಧಿಗೆ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಅವಧಿಯ ಜೈಲು ಶಿಕ್ಷೆಯಾದಲ್ಲಿ ಅವರು ತಕ್ಷಣವೇ ಶಾಸಕ ಸ್ಥಾನಕ್ಕೆ ಅನರ್ಹರಾಗುತ್ತಾರೆ.

ಬಿಜೆಪಿ ಆರೋಪ ಮತ್ತು ಆದೇಶ

ನ್ಯಾಯಾಲಯ ಶಿಕ್ಷೆ ಪ್ರಕಟಿಸಿದ ನಂತರವೂ ವಿಧಾನಸಭೆ ಸಚಿವಾಲಯ ಅನರ್ಹತೆ ಆದೇಶ ಹೊರಡಿಸಲು ವಿಳಂಬ ಮಾಡುತ್ತಿದೆ ಎಂದು ವಿರೋಧ ಪಕ್ಷ ಬಿಜೆಪಿ ಗಂಭೀರವಾಗಿ ಆರೋಪಿಸಿತ್ತು. ವಿನಯ್ ಕುಲಕರ್ಣಿ ಅವರು ಮೇಲ್ಮನವಿ ಸಲ್ಲಿಸಿ ತಡೆಯಾಜ್ಞೆ ತರಲು ಸರ್ಕಾರ ಸಮಯಾವಕಾಶ ಮಾಡಿಕೊಡುತ್ತಿದೆ ಎಂದು ಬಿಜೆಪಿ ನಾಯಕರು ಟೀಕಿಸಿದ್ದರು. ಆದರೆ, ಇದೀಗ ಎಲ್ಲಾ ಆಸರೆಗಳಿಗೆ ತೆರೆ ಬಿದ್ದಿದ್ದು, ಅಧಿಕೃತವಾಗಿ ವಿನಯ್ ಕುಲಕರ್ಣಿ ಮಾಜಿ ಶಾಸಕರಾಗಿದ್ದಾರೆ.

(ಮಾಹಿತಿ ಅಪ್​ಡೇಟ್ ಆಗುತ್ತಿದೆ)

Published On – 5:46 pm, Sat, 2 May 26

Source link

‘ಸತ್ಯಕ್ಕೆ ಜಯವಾಗಿದೆ’: ಮರು ಮತ ಎಣಿಕೆಯಲ್ಲಿ ಗೆಲುವು ಬೆನ್ನಲ್ಲೇ ಶಾಸಕ ಟಿಡಿ ರಾಜೇಗೌಡ ಹೇಳಿದ್ದಿಷ್ಟು – Kannada News | Sringeri Postal Ballot Recount: MLA TD Rajegowda Wins, Watch What He Said After Victory

ಚಿಕ್ಕಮಗಳೂರು, ಮೇ 02: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತ‌ಎಣಿಕೆಯಲ್ಲಿ ಕಾಂಗ್ರೆಸ್​ ಶಾಸಕ ಟಿಡಿ ರಾಜೇಗೌಡಗೆ ಗೆಲುವು ಸಾಧಿಸಿದ್ದಾರೆ. ಚುನಾವಣಾ ಅಧಿಕಾರಿಗಳಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಚಿಕ್ಕಮಗಳೂರಿನ ಐಡಿಎಸ್​ಜಿ ಕಾಲೇಜು ಮುಂಭಾಗ ಕಾರ್ಯಕರ್ತರಿಂದ ಸಂಭ್ರಮಾಚರಣೆ ಜೋರಾಗಿದೆ. ಗೆಲುವಿನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಟಿಡಿ ರಾಜೇಗೌಡ, ಹೈಕೋರ್ಟ್ ಮರು ಮತ‌ಎಣಿಕೆಗೆ ಆದೇಶ ನೀಡಿತ್ತು. ನಾನು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಬಹುದಿತ್ತು. ಆದರೆ ಸತ್ಯ ಹೊರಬರಲಿ ಎಂದು ನಾನು ಮೇಲ್ಮನವಿ ಸಲ್ಲಿಸಲಿಲ್ಲ. ಇಂದು ಮತ್ತೆ ನನಗೆ ಗೆಲುವಾಗಿದೆ, ನನ್ನ ಕಾರ್ಯಕರ್ತರು ಸಂಭ್ರಮ ಪಡುವಂತಾಗಿದೆ. ನನ್ನ ವಿರುದ್ಧ ನಿರಂತರವಾಗಿ ಆರೋಪ ಮಾಡುತ್ತಿದ್ದರು. ಆದರೆ ಸತ್ಯಕ್ಕೆ ಜಯವಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Vasthu Tips: ಮನೆಯ ಮುಂದೆ ಮಾವಿನ ಮರವಿದ್ದರೆ ಏನಾಗುತ್ತೆ? ವಾಸ್ತು ಶಾಸ್ತ್ರದ ಈ ಸತ್ಯ ನಿಮಗೆ ಗೊತ್ತಿರಲಿ! – Kannada News | Vastu for Mango Tree: Plant Right or Face Home Troubles

ಮನೆಯ ಮುಂದೆ ಮಾವಿನ ಮರವಿದ್ದರೆ ಏನಾಗುತ್ತೆ?

ವಾಸ್ತು ಶಾಸ್ತ್ರವು ಮನೆಯ ಪ್ರತಿಯೊಂದು ದಿಕ್ಕು ಮತ್ತು ವಸ್ತುವಿನ ಬಗ್ಗೆ ವಿಶೇಷ ನಿಯಮಗಳನ್ನು ಹೊಂದಿದೆ. ವಿಶೇಷವಾಗಿ ಮನೆಯ ಸುತ್ತಮುತ್ತ ಬೆಳೆಸುವ ಮರಗಿಡಗಳು ಕುಟುಂಬದ ಸದಸ್ಯರ ಮೇಲೆ ನೇರ ಪರಿಣಾಮ ಬೀರುತ್ತವೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಅನೇಕ ಜನರು ತಾಜಾ ಗಾಳಿ ಮತ್ತು ರುಚಿಕರವಾದ ಹಣ್ಣುಗಳಿಗಾಗಿ ಮನೆಯ ಮುಂದೆಯೇ ಮಾವಿನ ಮರಗಳನ್ನು ನೆಡುತ್ತಾರೆ. ಮಾವಿನ ಎಲೆಗಳು ಮತ್ತು ಹಣ್ಣುಗಳು ಹಿಂದೂ ಸಂಪ್ರದಾಯದಲ್ಲಿ ಅತ್ಯಂತ ಶುಭವೆಂದು ಪರಿಗಣಿತವಾಗಿರುವುದರಿಂದ, ಇದನ್ನು ಮನೆಯ ಮುಂದೆ ಬೆಳೆಸುವುದು ಒಳ್ಳೆಯದು ಎಂಬ ನಂಬಿಕೆ ಸಾಮಾನ್ಯವಾಗಿದೆ. ಆದರೆ ವಾಸ್ತು ಶಾಸ್ತ್ರದ ದೃಷ್ಟಿಕೋನದಲ್ಲಿ ಇದು ಯಾವಾಗಲೂ ಶುಭಕರವಲ್ಲ.

ಮನೆಯ ಮುಂದೆ ಮಾವಿನ ಮರ ಅಶುಭ ಏಕೆ?

ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಮುಂಭಾಗದಲ್ಲಿ ಮಾವಿನ ಮರ ಇರುವುದು ಅಷ್ಟೊಂದು ಶ್ರೇಯಸ್ಕರವಲ್ಲ. ಮರದ ನೆರಳು ಮನೆಯ ಮೇಲೆ ಬೀಳುವುದು ವಾಸ್ತು ದೋಷಕ್ಕೆ ಕಾರಣವಾಗುತ್ತದೆ ಎಂದು ವಿದ್ವಾಂಸರು ಎಚ್ಚರಿಸುತ್ತಾರೆ. ಮಾವಿನ ಮರದ ನೆರಳು ಮನೆಯ ಮೇಲೆ ಬಿದ್ದರೆ ಅದು ಕುಟುಂಬದ ನೆಮ್ಮದಿಯನ್ನು ಕಸಿದುಕೊಳ್ಳಬಹುದು ಮತ್ತು ನಕಾರಾತ್ಮಕ ಶಕ್ತಿಗಳ ಪ್ರಭಾವವನ್ನು ಹೆಚ್ಚಿಸಬಹುದು. ಅಲ್ಲದೆ, ಮನೆಯ ಮುಖ್ಯ ದ್ವಾರದ ಎದುರೇ ದೊಡ್ಡ ಮರವಿದ್ದರೆ ಅದು ಮನೆಗೆ ಬರಬೇಕಾದ ಸಕಾರಾತ್ಮಕ ಶಕ್ತಿ ಮತ್ತು ಸೂರ್ಯನ ಬೆಳಕನ್ನು ತಡೆಯುತ್ತದೆ, ಇದರಿಂದ ಮನೆಯಲ್ಲಿ ಸಮಸ್ಯೆಗಳು ಉದ್ಭವಿಸಬಹುದು.

ಕುಟುಂಬದ ಮೇಲೆ ಉಂಟಾಗುವ ಪರಿಣಾಮಗಳು:

ಮನೆಯ ಮುಂದೆ ಮಾವಿನ ಮರವಿದ್ದರೆ ಅದು ಆರ್ಥಿಕ ಸಂಕಷ್ಟಗಳಿಗೆ ದಾರಿಯಾಗಬಹುದು ಎಂದು ವಾಸ್ತು ತಜ್ಞರು ಅಭಿಪ್ರಾಯಪಡುತ್ತಾರೆ. ಇದು ಕೇವಲ ಹಣಕಾಸಿನ ಸಮಸ್ಯೆ ಮಾತ್ರವಲ್ಲದೆ, ಕುಟುಂಬ ಸದಸ್ಯರ ನಡುವೆ ಭಿನ್ನಾಭಿಪ್ರಾಯಗಳು ಮೂಡಲು ಮತ್ತು ಮಾನಸಿಕ ನೆಮ್ಮದಿ ಕಡಿಮೆಯಾಗಲು ಕಾರಣವಾಗಬಹುದು ಎಂಬ ನಂಬಿಕೆಯಿದೆ. ಕೆಲವು ವಿದ್ವಾಂಸರ ಪ್ರಕಾರ, ಮಾವಿನ ಮರವು ಹೆಚ್ಚಿನ ಸಂಖ್ಯೆಯ ಕೀಟಗಳನ್ನು ಆಕರ್ಷಿಸುವುದರಿಂದ ಮತ್ತು ಅದರ ನೆರಳು ನಿರಂತರವಾಗಿ ಮನೆಯ ಮೇಲಿರುವುದರಿಂದ ದುಷ್ಟ ಶಕ್ತಿಗಳ ಸಂಚಾರಕ್ಕೆ ಅನುಕೂಲವಾಗುತ್ತದೆ ಎಂದು ಹೇಳಲಾಗುತ್ತದೆ. ಆದ್ದರಿಂದ, ಮನೆಯ ನೇರ ಮುಂಭಾಗದಲ್ಲಿ ಈ ಮರವನ್ನು ಬೆಳೆಸುವುದನ್ನು ತಪ್ಪಿಸಬೇಕು.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಸೂಕ್ತ ದಿಕ್ಕು ಮತ್ತು ಪರಿಹಾರಗಳು:

ಮಾವಿನ ಮರವು ಧಾರ್ಮಿಕವಾಗಿ ಅತ್ಯಂತ ಮಹತ್ವದ್ದಾಗಿರುವುದರಿಂದ, ಅದನ್ನು ನೆಡಲು ಬಯಸುವವರು ಸರಿಯಾದ ದಿಕ್ಕನ್ನು ಆಯ್ಕೆ ಮಾಡಿಕೊಳ್ಳಬೇಕು. ವಾಸ್ತು ಶಾಸ್ತ್ರದ ಪ್ರಕಾರ, ಮನೆಯ ಅಂಗಳದಲ್ಲಿ ಮಾವಿನ ಮರವನ್ನು ನೆಡಬೇಕೆಂದರೆ ಅದನ್ನು ‘ನೈಋತ್ಯ’ (South-West) ದಿಕ್ಕಿನಲ್ಲಿ ನೆಡುವುದು ಅತ್ಯಂತ ಶುಭ ಎಂದು ಪರಿಗಣಿಸಲಾಗುತ್ತದೆ. ಮರವನ್ನು ನೆಡುವಾಗ ಅದು ಮನೆಯ ಗೋಡೆಯಿಂದ ಸ್ವಲ್ಪ ದೂರವಿರಲಿ ಮತ್ತು ಅದರ ನೆರಳು ಮನೆಯ ಮೇಲೆ ಬೀಳದಂತೆ ಜಾಗ್ರತೆ ವಹಿಸಬೇಕು. ಈ ರೀತಿ ಸರಿಯಾದ ದಿಕ್ಕಿನಲ್ಲಿ ಮರವನ್ನು ಬೆಳೆಸುವುದರಿಂದ ಮಾವಿನ ಮರದ ಪವಿತ್ರತೆ ಮತ್ತು ವಾಸ್ತು ಎರಡನ್ನೂ ಸಮತೋಲನಗೊಳಿಸಬಹುದು.

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

‘ಸತ್ಯಕ್ಕೆ ಜಯವಾಗಿದೆ’: ಮರು ಮತ ಎಣಿಕೆಯಲ್ಲಿ ಗೆಲುವು ಬೆನ್ನಲ್ಲೇ ಶಾಸಕ ಟಿಡಿ ರಾಜೇಗೌಡ ಹೇಳಿದ್ದಿಷ್ಟು – Kannada News | Sringeri Postal Ballot Recount: MLA TD Rajegowda Wins, Watch What He Said After Victory

ಚಿಕ್ಕಮಗಳೂರು, ಮೇ 02: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತ‌ಎಣಿಕೆಯಲ್ಲಿ ಕಾಂಗ್ರೆಸ್​ ಶಾಸಕ ಟಿಡಿ ರಾಜೇಗೌಡಗೆ ಗೆಲುವು ಸಾಧಿಸಿದ್ದಾರೆ. ಚುನಾವಣಾ ಅಧಿಕಾರಿಗಳಿಂದ ಅಧಿಕೃತ ಘೋಷಣೆಯೊಂದೇ ಬಾಕಿ ಇದೆ. ಚಿಕ್ಕಮಗಳೂರಿನ ಐಡಿಎಸ್​ಜಿ ಕಾಲೇಜು ಮುಂಭಾಗ ಕಾರ್ಯಕರ್ತರಿಂದ ಸಂಭ್ರಮಾಚರಣೆ ಜೋರಾಗಿದೆ. ಗೆಲುವಿನ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಟಿಡಿ ರಾಜೇಗೌಡ, ಹೈಕೋರ್ಟ್ ಮರು ಮತ‌ಎಣಿಕೆಗೆ ಆದೇಶ ನೀಡಿತ್ತು. ನಾನು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಬಹುದಿತ್ತು. ಆದರೆ ಸತ್ಯ ಹೊರಬರಲಿ ಎಂದು ನಾನು ಮೇಲ್ಮನವಿ ಸಲ್ಲಿಸಲಿಲ್ಲ. ಇಂದು ಮತ್ತೆ ನನಗೆ ಗೆಲುವಾಗಿದೆ, ನನ್ನ ಕಾರ್ಯಕರ್ತರು ಸಂಭ್ರಮ ಪಡುವಂತಾಗಿದೆ. ನನ್ನ ವಿರುದ್ಧ ನಿರಂತರವಾಗಿ ಆರೋಪ ಮಾಡುತ್ತಿದ್ದರು. ಆದರೆ ಸತ್ಯಕ್ಕೆ ಜಯವಾಗಿದೆ ಎಂದು ಹೇಳಿದ್ದಾರೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

Video: ತಾಯಿನ ಕಂಡು ರಸ್ತೆಯಲ್ಲಿ ಓಡಿ ಬಂದ ಮಗುವಿನ ಮೇಲೆ ಹರಿದ ಲಾರಿ; ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆ – Kannada News | Vietnam Child Road Accident: Tragic CCTV Shows Toddler Hit by Truck, Mother’s Agony

ವಿಯೆಟ್ನಾಂನಲ್ಲಿ ಮನಕಲಕುವ ಭೀಕರ ರಸ್ತೆ ಅಪಘಾತವೊಂದು ಸಂಭವಿಸಿದ್ದು, ರಸ್ತೆಯ ಆಚೆಗಿದ್ದ ತಾಯಿಯ ಬಳಿಗೆ ಓಡಲು ಹೋದ ಪುಟ್ಟ ಮಗುವೊಂದು ವೇಗವಾಗಿ ಬಂದ ಭಾರಿ ಗಾತ್ರದ ಟ್ರಕ್ ಅಡಿಯಲ್ಲಿ ಸಿಲುಕಿ ಸ್ಥಳದಲ್ಲೇ ದುರ್ಮರಣಕ್ಕೀಡಾಗಿದೆ. ತನ್ನ ಕಣ್ಣೆದುರೇ ಮಗು ಅಪಘಾತಕ್ಕೀಡಾಗುವುದನ್ನು ಕಂಡು ಆಘಾತಕ್ಕೊಳಗಾದ ತಾಯಿ, ಗಾಬರಿಯಲ್ಲಿ ತನ್ನ ಬಳಿಯೇ ಇದ್ದ ಮತ್ತೊಂದು ಮಗುವನ್ನು ರಸ್ತೆಯಲ್ಲೇ ಬಿಟ್ಟು ಮೃತ ಮಗುವಿನತ್ತ ಓಡಿದ್ದಾರೆ. ಈ ವೇಳೆ ಆ ಮಗು ಕೂಡ ರಸ್ತೆಯಲ್ಲಿದ್ದ ವಾಹನಗಳ ನಡುವೆ ಸಿಲುಕಿ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದೆ. ಈ ಇಡೀ ಹೃದಯವಿದ್ರಾವಕ ದೃಶ್ಯವು ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಹಾವಿನ ಜೊತೆ ಸಾಹಸ ಮಾಡಲು ಹೋದ ವ್ಯಕ್ತಿ ಸಾವು; ಬೆಚ್ಚಿಬೀಳಿಸುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ!

 

ಮತ್ತಷ್ಟು ವಿಡಿಯೋ ನೋಡಲು ಇಲ್ಲಿ ಕ್ಲಿಕ್​​ ಮಾಡಿ.

Source link

ಶೃಂಗೇರಿ ವಿಧಾನಸಭಾ ಕ್ಷೇತ್ರ: ಮರು ಮತ ಎಣಿಕೆಯಲ್ಲೂ ಶಾಸಕ ಟಿಡಿ ರಾಜೇಗೌಡಗೆ ಗೆಲುವು – Kannada News | Sringeri Postal Ballot Recount: Congress MLA TD Rajegowda Declared Winner

ಚಿಕ್ಕಮಗಳೂರು, ಮೇ 02: ಸಾಕಷ್ಟು ಕುತೂಹಲಕ್ಕೆ ಕಾರಣವಾಗಿದ್ದ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತ‌ಎಣಿಕೆಯಲ್ಲಿ (Sringeri Postal Ballot Recount) ಕೊನೆಗೂ ಕಾಂಗ್ರೆಸ್​​ ಶಾಸಕ ಟಿ.ಡಿ.ರಾಜೇಗೌಡ (MLA TD Rajegowda) ಗೆಲುವು ಸಾಧಿಸಿದ್ದಾರೆ. ಆ ಮೂಲಕ ಎದುರಾಗಿದ್ದ ದೊಡ್ಡ ಅಗ್ನಿಪರೀಕ್ಷೆಯಲ್ಲೂ ಜಯಗಳಿಸಿದ್ದಾರೆ. ಸದ್ಯ ಚಿಕ್ಕಮಗಳೂರಿನ ಐಡಿಎಸ್​ಜಿ ಕಾಲೇಜು ಮುಂಭಾಗದಲ್ಲಿ ಸಂಭ್ರಮಾಚರಣೆ ಜೋರಾಗಿದ್ದು, ಶಾಸಕ ಟಿ.ಡಿ.ರಾಜೇಗೌಡ ಪರ ಕಾರ್ಯಕರ್ತರು  ಘೋಷಣೆ ಕೂಗಿ, ಹೂವಿನ ಮಳೆ ಸುರಿಸಿದು ಹರ್ಷ ವ್ಯಕ್ತಪಡಿಸಿದರು.

ಹೈಕೋರ್ಟ್ ಆದೇಶದ ಮೇರೆಗೆ ಇಂದು ಚಿಕ್ಕಮಗಳೂರು ನಗರದ IDSG ಕಾಲೇಜಿನಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತ‌ಎಣಿಕೆ ಮಾಡಲಾಗಿದೆ. ಹಾಲಿ ಮತ್ತು ಮಾಜಿ ಶಾಸಕರ ನಡುವೆ ಮರು ಎಣಿಕೆ ಫೈಟ್ ಜೋರಾಗಿತ್ತು. ಸಾಕಷ್ಟು ಕುತೂಹಲದ ಮಧ್ಯೆ ಇದೀಗ ಮರು ಮತ ಎಣಿಕೆಯಲ್ಲೂ ಕಾಂಗ್ರೆಸ್​ ಶಾಸಕ ಟಿ.ಡಿ.ರಾಜೇಗೌಡ ಗೆಲುವು ಸಾಧಿಸಿದ್ದಾರೆ.

ಶಾಸಕ ಟಿ.ಡಿ.ರಾಜೇಗೌಡ ಗೆದ್ದಿದ್ದಾರೆ ಎಂದು ಅಭಿಮಾನಿಗಳ ಸಂಭ್ರಮ

ಇನ್ನು ಅತ್ತ ಶಾಸಕ ಟಿ.ಡಿ.ರಾಜೇಗೌಡ ಗೆಲುವು ಸಾಧಿಸುತ್ತಿದ್ದಂತೆ ಕಾಂಗ್ರೆಸ್​ ಕಾರ್ಯಕರ್ತರು ಮತ್ತು ಅವರ ಅಭಿಮಾನಿಗಳು ಸಂಭ್ರಮಿಸಿದರು. 267 ಮತಗಳು ಬಹುತೇಕ ತಿರಸ್ಕೃತ ಬೆನ್ನಲ್ಲೇ ರಾಜೇಗೌಡ ಗೆದ್ದರು ಎಂದು ಕಾರ್ಯಕರ್ತರು ಘೋಷಣೆ ಕೂಗಿ ಸಂಭ್ರಮಿಸಿದರು.

ಗೆಲುವಿನ ಬಗ್ಗೆ ಕಾಂಗ್ರೆಸ್ ‌ಶಾಸಕ ರಾಜೇಗೌಡ ಹೇಳಿದ್ದಿಷ್ಟು 

ಇನ್ನು ಈ ಬಗ್ಗೆ ಕಾಂಗ್ರೆಸ್ ‌ಶಾಸಕ ರಾಜೇಗೌಡ ಪ್ರತಿಕ್ರಿಯಿಸಿದ್ದು, ಹೈಕೋರ್ಟ್ ಮರು ಮತ‌ಎಣಿಕೆಗೆ ಆದೇಶ ನೀಡಿತ್ತು. ನಾನು ಸುಪ್ರೀಂ ಕೋರ್ಟ್​ಗೆ ಮೇಲ್ಮನವಿ ಸಲ್ಲಿಸಬಹುದಿತ್ತು. ಆದರೆ ಸತ್ಯ ಹೊರಬರಲಿ ಎಂದು ನಾನು ಮೇಲ್ಮನವಿ ಸಲ್ಲಿಸಲಿಲ್ಲ. ಇಂದು ಮತ್ತೆ ನನಗೆ ಗೆಲುವಾಗಿದೆ. ನನ್ನ ಕಾರ್ಯಕರ್ತರು ಸಂಭ್ರಮ ಪಡುವಂತಾಗಿದೆ. ನನ್ನ ವಿರುದ್ಧ ನಿರಂತರವಾಗಿ ಆರೋಪ ಮಾಡುತ್ತಿದ್ದರು. ಆದರೆ ಸತ್ಯಕ್ಕೆ ಜಯವಾಗಿದೆ ಎಂದರು.

ಇದನ್ನೂ ಓದಿ: ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಮರು ಮತ‌ಎಣಿಕೆ: ನಾಪತ್ತೆಯಾಗಿದ್ದ ಮತಪತ್ರಗಳನ್ನ ಹುಡುಕಿ ಹೈರಾಣಾದ ಅಧಿಕಾರಿಗಳು

ಈ ಹಿಂದೆ ಮತ‌ಎಣಿಕೆ ವೇಳೆ ಪ್ರತಿಯೊಂದು ಮತಗಳನ್ನ ಪರಿಶೀಲನೆ ಮಾಡಿದ್ದರೂ ಆರೋಪ ಮಾಡಿದ್ದರು. ಕೆಲವು ಟ್ರಂಕ್ ಗಳು ಓಪನ್ ಆಗಿತ್ತು, ಅದಕ್ಕೆ ನಾನು ಟ್ಯಾಂಪರಿಂಗ್ ಮಾಡಿರಬಹುದು ಎಂದು ಆರೋಪ ಮಾಡಿದ್ದೆ. ಬಿಜೆಪಿ ಅಭ್ಯರ್ಥಿ 40, 42 ಮತಗಳಿಂದ ಗೆಲುವು ನಮ್ಮದೆ ಅಂದ್ರು. ಹಾಗಾಗಿ ನನಗೆ ಅನುಮಾನ ಬಂದಿತ್ತು. 12 ಅಂಚೆ ಮತಗಳು ನಾಪತ್ತೆ ಬಗ್ಗೆ ಯಾವುದೇ ಮಾಹಿತಿ ಇಲ್ಲ ಎಂದು ಹೇಳಿದ್ದಾರೆ.

ಹಿನ್ನೆಲೆ 

2023ರ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರವು ತೀವ್ರ ಕುತೂಹಲ ಮೂಡಿಸಿತ್ತು. ಅಂದು ನಡೆದ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು, ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರ ವಿರುದ್ಧ ಕೇವಲ 201 ಮತಗಳ ಅಂತರದಲ್ಲಿ ಸೋಲನುಭವಿಸಿದ್ದರು. ಈ ಚುನಾವಣೆಯಲ್ಲಿ ಚಲಾವಣೆಯಾದ ಒಟ್ಟು 1822 ಅಂಚೆ ಮತಗಳ ಪೈಕಿ 279 ಮತಗಳನ್ನು ತಿರಸ್ಕೃತಗೊಳಿಸಲಾಗಿತ್ತು. ಈ ಫಲಿತಾಂಶದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಜೀವರಾಜ್ ಅವರು ಮರು ಎಣಿಕೆಗೆ ಮನವಿ ಮಾಡಿದ್ದರು, ಆದರೆ ಅಂದಿನ ಜಿಲ್ಲಾ ಚುನಾವಣಾಧಿಕಾರಿಗಳು ಆ ಮನವಿಯನ್ನು ಪರಿಗಣಿಸದೆ ರಾಜೇಗೌಡರನ್ನು ವಿಜೇತರೆಂದು ಘೋಷಿಸಿದ್ದರು. ಈ ಕ್ರಮವನ್ನು ಪ್ರಶ್ನಿಸಿ ಜೀವರಾಜ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯವು ಇಂದು (ಮೇ 2, 2026) ಅಂಚೆ ಮತಗಳ ಮರು ಎಣಿಕೆಗೆ ಆದೇಶ ಹೊರಡಿಸಿತ್ತು. ಅದರಂತೆ ಪ್ರಕ್ರಿಯೆ ಪೂರ್ಣಗೊಂಡಿದ್ದು, ಮರು ಎಣಿಕೆಯಲ್ಲೂ ಟಿ.ಡಿ. ರಾಜೇಗೌಡ ಅವರೇ ಜಯಭೇರಿ ಬಾರಿಸುವ ಮೂಲಕ ತಮ್ಮ ಗೆಲುವನ್ನು ಮರುಸ್ಥಾಪಿಸಿಕೊಂಡಿದ್ದಾರೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Source link

ಕಮರ್ಷಿಯಲ್ ಗ್ಯಾಸ್ ದರ ಇಳಿಸುವಂತೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್​ನಿಂದ ಪ್ರಧಾನಿ ಮೋದಿಗೆ ಪತ್ರ – Kannada News | Bengaluru Hotel Association Writes to PM Modi: Urges to Reduce Commercial LPG Cylinder Prices After Recent Hike

ಬೆಂಗಳೂರು, ಮೇ 2: ವಾಣಿಜ್ಯ ಬಳಕೆಯ ಎಲ್‌ಪಿಜಿ (LPG) ಸಿಲಿಂಡರ್ ದರ ಏರಿಕೆಯಿಂದ ಕಂಗೆಟ್ಟಿರುವ ಬೆಂಗಳೂರು ಹೋಟೆಲ್ ಅಸೋಸಿಯೇಷನ್, ಬೆಲೆ ಇಳಿಸುವಂತೆ ಒತ್ತಾಯಿಸಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ವಾಣಿಜ್ಯ ಸಿಲಿಂಡರ್ ಬೆಲೆ ಮೇ 1 ರಂದು ಬರೋಬ್ಬರಿ 993 ರೂಪಾಯಿಗಳಷ್ಟು ಏರಿಕೆಯಾಗಿದ್ದು, ಹೋಟೆಲ್ ಉದ್ಯಮವನ್ನು ಸಂಕಷ್ಟಕ್ಕೆ ದೂಡಿದೆ. ದರ ಏರಿಕೆಯಿಂದಾಗಿ ಹೋಟೆಲ್ ನಡೆಸುವುದೇ ಅಸಾಧ್ಯವಾಗುತ್ತಿದೆ ಎಂದು ಮಾಲೀಕರು ಅಳಲು ತೋಡಿಕೊಂಡಿದ್ದಾರೆ. ಸಿಲಿಂಡರ್ ಬೆಲೆ ಹೆಚ್ಚಾದಾಗ ಹೋಟೆಲ್‌ಗಳಲ್ಲಿ ತಿಂಡಿ-ತಿನಿಸುಗಳ ದರವನ್ನು ಹೆಚ್ಚಿಸಿದರೆ ಗ್ರಾಹಕರು ಬರುವುದಿಲ್ಲ, ದರ ಏರಿಸದಿದ್ದರೆ ಮಾಲೀಕರಿಗೆ ಭಾರಿ ನಷ್ಟ ಉಂಟಾಗುತ್ತಿದೆ. ಈ ಇಕ್ಕಟ್ಟಿನ ಪರಿಸ್ಥಿತಿಯಿಂದಾಗಿ ಅನೇಕ ಹೋಟೆಲ್ ಮಾಲೀಕರು ಕಂಗಾಲಾಗಿದ್ದಾರೆ.

ತಮ್ಮ ಸಮಸ್ಯೆಗಳನ್ನು ವೈಯಕ್ತಿಕವಾಗಿ ಹೇಳಿಕೊಳ್ಳಲು ಪ್ರಧಾನಿಯವರು ಒಂದು ಅವಕಾಶ ನೀಡಬೇಕು ಮತ್ತು ತಕ್ಷಣವೇ ವಾಣಿಜ್ಯ ಗ್ಯಾಸ್ ದರವನ್ನು ಇಳಿಸಿ ಹೋಟೆಲ್ ಉದ್ಯಮವನ್ನು ಉಳಿಸಬೇಕು ಎಂದು ಬೆಂಗಳೂರು ಹೋಟೆಲ್ ಒಕ್ಕೂಟ ಪತ್ರದ ಮೂಲಕ ವಿನಂತಿಸಿದೆ.

ವರದಿ: ನಟರಾಜ್, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Women’s T20 World Cup 2026: ಮಹಿಳಾ ಟಿ20 ವಿಶ್ವಕಪ್​ಗೆ ಟೀಂ ಇಂಡಿಯಾ ಪ್ರಕಟ – Kannada News | Harmanpreet Kaur’s India Squad Announced for 2026 Women’s T20 World Cup

ಕಳೆದ ವರ್ಷ ಅಂದರೆ 2025 ರ ನವೆಂಬರ್ ತಿಂಗಳಲ್ಲಿ ನಡೆದಿದ್ದ ಮಹಿಳಾ ಏಕದಿನ ವಿಶ್ವಕಪ್‌ ಫೈನಲ್​ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಮಣಿಸಿ ಮೊಟ್ಟ ಮೊದಲ ಬಾರಿಗೆ ವಿಶ್ವಕಪ್‌ ಗೆದ್ದ ಸಾಧನೆ ಮಾಡಿದ್ದ ಭಾರತ ವನಿತಾ ಪಡೆ ಇದೀಗ ತನ್ನ ಎರಡನೇ ಐಸಿಸಿ ಟ್ರೋಫಿಗಾಗಿ ಎದುರು ನೋಡುತ್ತಿದೆ. ಇದೇ ಜೂನ್ 12 ರಿಂದ ಆರಂಭವಾಗಲಿರುವ ಮಹಿಳಾ ಟಿ20 ವಿಶ್ವಕಪ್​ಗೆ ಭಾರತ ಮಹಿಳಾ ತಂಡವನ್ನು ಇಂದು ಬಿಸಿಸಿಐ ಪ್ರಕಟಿಸಿದೆ. ಎಂದಿನಂತೆ ಹರ್ಮನ್​ಪ್ರೀತ್ ಕೌರ್ ತಂಡದ ನಾಯಕತ್ವವಹಿಸಿದ್ದು, ಸ್ಮೃತಿ ಮಂಧಾನಗೆ ಉಪನಾಯಕತ್ವದ ಜವಾಬ್ದಾರಿ ಸಿಕ್ಕಿದೆ. ಉಳಿದಂತೆ ಈ ತಂಡದಲ್ಲಿ ಈ ಮೊದಲೇ ನಿರೀಕ್ಷಿಸಿದ್ದ ಹೆಸರುಗಳೇ ಸೇರಿವೆ.

12 ತಂಡಗಳ ನಡುವೆ 33 ಪಂದ್ಯಗಳು

2026 ರ ಮಹಿಳಾ ಟಿ20 ವಿಶ್ವಕಪ್​ಗೆ ಇಂಗ್ಲೆಂಡ್ ಆತಿಥ್ಯವಹಿಸುತ್ತಿದ್ದು, ಈ ಪಂದ್ಯಾವಳಿ ಜೂನ್ 12 ರಂದು ಪ್ರಾರಂಭವಾಗಲಿದ್ದು, ಜುಲೈ 5 ರಂದು ನಡೆಯಲಿರುವ ಫೈನಲ್ ಪಂದ್ಯದೊಂದಿಗೆ ಅಂತ್ಯವಾಗಲಿದೆ. ಈ ಮಹಿಳಾ ವಿಶ್ವಕಪ್‌ನಲ್ಲಿ ಒಟ್ಟು 12 ತಂಡಗಳು ಭಾಗವಹಿಸಲಿದ್ದು, ತಲಾ 6 ತಂಡಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ಪಂದ್ಯಾವಳಿಯಲ್ಲಿ ಒಟ್ಟು 33 ಪಂದ್ಯಗಳು ನಡೆಯಲಿವೆ.

ಭಾರತ ಟಿ20 ವಿಶ್ವಕಪ್ ತಂಡ: ಹರ್ಮನ್​ಪ್ರೀತ್ ಕೌರ್, ಸ್ಮೃತಿ ಮಂಧಾನ, ಜೆಮಿಮಾ ರೊಡ್ರಿಗ್ಸ್, ಶಫಾಲಿ ವರ್ಮಾ, ಭಾರತಿ ಪುಲ್ಮಾಲಿ, ದೀಪ್ತಿ ಶರ್ಮಾ, ರಿಚಾ ಘೋಷ್, ಶ್ರೀ ಚರಣಿ, ಯಾಸ್ತಿಕಾ ಭಾಟಿಯಾ, ನಂದಿನಿ ಶರ್ಮಾ, ಅರುಂಧತಿ ರೆಡ್ಡಿ, ರೇಣುಕಾ ಸಿಂಗ್ ಠಾಕೂರ್, ಕ್ರಾಂತಿ ಕೌಡ್, ಶ್ರೇಯಾಂಕ ಪಾಟೀಲ್, ರಾಧಾ ಯಾದವ್.

ಟೀಂ ಇಂಡಿಯಾದ ವೇಳಾಪಟ್ಟಿ

ಈ ಬಾರಿಯ ಟಿ20 ವಿಶ್ವಕಪ್​ನಲ್ಲಿ ಭಾರತ ಎ ಗುಂಪಿನಲ್ಲಿ ಸ್ಥಾನ ಪಡೆದಿದೆ. ಈ ಗುಂಪಿನಲ್ಲಿ ಭಾರತವನ್ನು ಹೊರತುಪಡಿಸಿ ದಕ್ಷಿಣ ಆಫ್ರಿಕಾ, ಪಾಕಿಸ್ತಾನ, ಬಾಂಗ್ಲಾದೇಶ, ನೆದರ್ಲ್ಯಾಂಡ್ಸ್ ಮತ್ತು ಆಸ್ಟ್ರೇಲಿಯಾ ತಂಡಗಳು ಸೇರಿವೆ. ಭಾರತೀಯ ಮಹಿಳಾ ತಂಡ ಜೂನ್ 14 ರಂದು ಪಾಕಿಸ್ತಾನವನ್ನು ಎದುರಿಸುವ ಮೂಲಕ ತನ್ನ ಅಭಿಯಾನವನ್ನು ಪ್ರಾರಂಭಿಸಲಿದೆ. ನಂತರ ಜೂನ್ 17 ರಂದು ನೆದರ್ಲ್ಯಾಂಡ್ಸ್, ಜೂನ್ 21 ರಂದು ದಕ್ಷಿಣ ಆಫ್ರಿಕಾ, ಜೂನ್ 25 ರಂದು ಬಾಂಗ್ಲಾದೇಶ ಹಾಗೂ ಜೂನ್ 28 ರಂದು ಆಸ್ಟ್ರೇಲಿಯಾ ತಂಡವನ್ನು ಎದುರಿಸಲಿದೆ.

Source link

ಆರ್​ಬಿಐ ಉಪ ಗವರ್ನರ್ ಆಗಿ ರೋಹಿತ್ ಜೈನ್ ನೇಮಕ – Kannada News | Government Appointed Rohit Jain as a RBI Deputy Governor who is he

ನವದೆಹಲಿ, ಮೇ 2: ಕೇಂದ್ರ ಸರ್ಕಾರವು ರೋಹಿತ್ ಜೈನ್ ಅವರನ್ನು ಭಾರತೀಯ ರಿಸರ್ವ್ ಬ್ಯಾಂಕಿನ (RBI) ಹೊಸ ಉಪ ಗವರ್ನರ್ ಆಗಿ 3 ವರ್ಷಗಳ ಅವಧಿಗೆ ನೇಮಕ ಮಾಡಿದೆ. ಅವರ ನೇಮಕಾತಿಯನ್ನು ಕ್ಯಾಬಿನೆಟ್‌ನ ನೇಮಕಾತಿ ಸಮಿತಿಯು ಅನುಮೋದಿಸಿದೆ. ಅವರು ಮೇ 3ರಂದು ಅಥವಾ ನಂತರ ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆಯಿದೆ. ಆರ್​ಬಿಐ ಉಪ ಗವರ್ನರ್ ಆಗಿದ್ದ ಟಿ. ರವಿಶಂಕರ್ ಅವರ ಅಧಿಕಾರಾವಧಿ ಮುಗಿದಿದೆ. ಹೀಗಾಗಿ, ಅವರ ಸ್ಥಾನವನ್ನು ರೋಹಿತ್ ಜೈನ್ ವಹಿಸಿಕೊಳ್ಳಲಿದ್ದಾರೆ.

ರೋಹಿತ್ ಜೈನ್ ಸುಮಾರು ಮೂರು ದಶಕಗಳ ಅನುಭವವನ್ನು ಹೊಂದಿದ್ದಾರೆ. ಅವರು ರಿಸರ್ವ್ ಬ್ಯಾಂಕಿನಲ್ಲಿ ಮೇಲ್ವಿಚಾರಣೆ, ಮಾನವ ಸಂಪನ್ಮೂಲ ನಿರ್ವಹಣೆ, ಬ್ಯಾಂಕಿಂಗ್ ಮತ್ತು ಇತರ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ. ಇದಕ್ಕೂ ಮೊದಲು ರೋಹಿತ್ ಜೈನ್ ಅವರನ್ನು ಡಿಸೆಂಬರ್ 2020ರಲ್ಲಿ ಆರ್‌ಬಿಐನ ಕಾರ್ಯನಿರ್ವಾಹಕ ನಿರ್ದೇಶಕರಾಗಿ ನೇಮಿಸಲಾಯಿತು. ರೋಹಿತ್ ಜೈನ್ ವಾಣಿಜ್ಯದಲ್ಲಿ ಸ್ನಾತಕೋತ್ತರ ಪದವಿ ಮತ್ತು ವ್ಯವಹಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಹೊಂದಿದ್ದಾರೆ.

ಇದನ್ನೂ ಓದಿ: ಆರ್​ಬಿಐನಿಂದ ಹೊಸ ಇ-ಮ್ಯಾಂಡೇಟ್ ಫ್ರೇಮ್​ವರ್ಕ್; 15,000 ರೂವರೆಗಿನ ರಿಕರಿಂಗ್ ಪೇಮೆಂಟ್ಸ್​ಗೆ ಒಟಿಪಿ ಬೇಕಿಲ್ಲ

ಆರ್‌ಬಿಐ ಒಬ್ಬ ಗವರ್ನರ್ ಮತ್ತು ನಾಲ್ಕು ಉಪ ಗವರ್ನರ್‌ಗಳನ್ನು ಹೊಂದಿದೆ. ಇಬ್ಬರು ಉಪ ಗವರ್ನರ್‌ಗಳನ್ನು ಬಡ್ತಿ ಮೂಲಕ ನೇಮಿಸಲಾಗುತ್ತದೆ. ಇತರ ಇಬ್ಬರು ಉಪ ಗವರ್ನರ್‌ಗಳು ಹೊರಗಿನವರಾಗಿರುತ್ತಾರೆ. ಅವರ ಹೆಸರು ಪೂನಂ ಗುಪ್ತಾ ಮತ್ತು ಸ್ವಾಮಿನಾಥನ್ ಜೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link