Headlines

ಲಾಂಗ್ ವೀಕೆಂಡ್ ಎಫೆಕ್ಸ್: ಬೆಂಗಳೂರು-ನೆಲಮಂಗಲ ಹೈವೇಯಲ್ಲಿ ಕಿಲೋಮೀಟರ್‌ಗಟ್ಟಲೆ ಟ್ರಾಫಿಕ್ ಜಾಮ್! – Kannada News | Long Weekend Rush: Massive Traffic Jam on Bengaluru Nelamangala Highway as Residents Head to Hometowns

ನೆಲಮಂಗಲ, ಮೇ 1: ಇಂದಿನಿಂದ (ಮೇ 1) ಸತತ ಮೂರು ದಿನಗಳ ರಜೆ ಇರುವುದರಿಂದ ಬೆಂಗಳೂರಿಗರು ತಮ್ಮ ಊರುಗಳತ್ತ ಮತ್ತು ಪ್ರವಾಸಿ ತಾಣಗಳತ್ತ ತೆರಳುತ್ತಿದ್ದಾರೆ. ಇದರಿಂದಾಗಿ ಬೆಂಗಳೂರಿನಿಂದ ಹೊರಹೋಗುವ ರಾಷ್ಟ್ರೀಯ ಹೆದ್ದಾರಿಗಳಲ್ಲಿ ಶುಕ್ರವಾರ ಬೆಳಗ್ಗೆ ವಾಹನಗಳ ದಟ್ಟಣೆ ವಿಪರೀತವಾಗಿ ಹೆಚ್ಚಾಗಿದ್ದು, ಪ್ರಯಾಣಿಕರು ಗಂಟೆಗಟ್ಟಲೆ ರಸ್ತೆಯಲ್ಲೇ ಕಳೆಯುವಂತಾಗಿದೆ. ಅದರಲ್ಲೂ ಬೆಂಗಳೂರು-ನೆಲಮಂಗಲ ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಹನಗಳ ಸಂಚಾರ ಅಸ್ತವ್ಯಸ್ತಗೊಂಡಿದೆ. ಕಿಲೋಮೀಟರ್‌ಗಟ್ಟಲೆ ದೂರದವರೆಗೆ ವಾಹನಗಳು ಸಾಲುಗಟ್ಟಿ ನಿಂತಿದ್ದು, ಅತ್ಯಂತ ನಿಧಾನಗತಿಯಲ್ಲಿ ಚಲಿಸುತ್ತಿವೆ. ನೆಲಮಂಗಲ ಟೋಲ್ ಬಳಿ ವಾಹನಗಳು ಸಾಲುಗಟ್ಟಿರುವ ಚಾಚಿಕೊಂಡಿದ್ದು, ಸಂಚಾರ…

Read More

‘ವಸುದೇವ ಕುಟುಂಬ’ ಧಾರಾವಾಹಿ ಕಿರಿಕ್, ನಿರ್ಮಾಪಕರ ನಡು ರಸ್ತೆಯಲ್ಲಿ ಅಡ್ಡ ಹಾಕಿದ ಹಂಸ – Kannada News | Producer not giving remuneration actress confronted producer

‘ವಸುದೇವ ಕುಟುಂಬ’ ಧಾರಾವಾಹಿಯ (Serial) ನಟ, ನಟಿಯರು ಮತ್ತು ತಂತ್ರಜ್ಞರು ಧಾರಾವಾಹಿಯ ನಿರ್ಮಾಪಕರ ವಿರುದ್ಧ ದೂರು ದಾಖಲಿಸಲು ಮುಂದಾಗಿದ್ದಾರೆ. ಮಾಜಿ ಬಿಗ್​​ಬಾಸ್ ಸ್ಪರ್ಧಿ ಹಂಸ, ನಟಿ ಚೈತ್ರಾ, ಹಿರಿಯ ನಟ ಅವಿನಾಶ್ ಸೇರಿದಂತೆ ಕೆಲವು ಪ್ರಮುಖ ಕಲಾವಿದರು ನಟಿಸುತ್ತಿರುವ ಧಾರಾವಾಹಿ ಇದಾಗಿದ್ದು, ಸ್ಟಾರ್ ಸುವರ್ಣ ಚಾನೆಲ್​​ನಲ್ಲಿ ಪ್ರಸಾರ ಕಾಣುತ್ತಿದೆ. ಕೆಲವು ತಿಂಗಳುಗಳಿಂದಲೂ ಧಾರಾವಾಹಿಯ ನಿರ್ಮಾಪಕರು ಕಲಾವಿದರಿಗೆ ಸಂಭಾವನೆ ನೀಡಿಲ್ಲ ಮಾತ್ರವಲ್ಲದೆ, ಆಹಾರ, ಇನ್ನಿತರೆಗಳನ್ನು ಸರಿಯಾಗಿ ನೀಡಿಲ್ಲ ಎಂದು ಕಲಾವಿದರು ಆರೋಪಿಸಿದ್ದು, ಇಂದು (ಏಪ್ರಿಲ್ 01) ನಿರ್ಮಾಪಕರನ್ನು ನಡು…

Read More

ಮಳೆ ಮಧ್ಯೆ ಜೆಪಿ ನಗರ ಟು ಕೋರಮಂಗಲ ಜರ್ನಿ: ಆಟೋ ಚಾಲಕನ ಈ ಒಂದು ಮಾತು ಪ್ರಿಯಾಂಕಾ ಕಣ್ಣಾಲಿ ಒದ್ದೆ ಮಾಡಿದ್ದು ಯಾಕೆ ಗೊತ್ತಾ? – Kannada News | Heartwarming: Bengaluru Auto Driver’s Kindness Amidst Rain Wins Hearts

ಬೆಂಗಳೂರು, ಮೇ.1: ರಾಜ್ಯ ರಾಜಧಾನಿಯಲ್ಲಿ ಎರಡು ದಿನಗಳಿಂದ ಸುರಿದ ಮಳೆಗೆ ಭಾರೀ ಅನಾಹುತಗಳು ಆಗಿವೆ. ಇದರ ನಡುವೆ ಕೆಲವೊಂದು ಮಾನವೀಯತೆಯ ಘಟನೆಗಳು ಕೂಡ ನಡೆದಿದೆ. ಅದರಲ್ಲೂ ಆಟೋ ಚಾಲಕರು ಕೆಲವೊಂದು ಕಡೆ ಮಾನವೀಯತೆಯನ್ನು ಮೆರೆದಿದ್ದಾರೆ. ಇದೀಗ ಇಲ್ಲೊಂದು ವೈರಲ್​ ಆಗಿರುವ ವಿಡಿಯೋದಲ್ಲಿ ಮಹಿಳೆಯೊಬ್ಬರಿಗೆ ಆಟೋ ಚಾಲಕ ಮಾಡಿದ ಸಹಾಯದ ಬಗ್ಗೆ ಇಲ್ಲಿ ನೆನಪಿಸಿಕೊಂಡಿದ್ದಾರೆ. ಪ್ರಿಯಾಂಕಾ ಎಂಬ ಮಹಿಳೆ ಜೆಪಿ ನಗರದಿಂದ ಕೋರಮಂಗಲಕ್ಕೆ ದಿನನಿತ್ಯದ ಪ್ರಯಾಣದಲ್ಲಿ ಹೇಗೆ ದಯೆ ಮತ್ತು ಸಹಾನುಭೂತಿಯ ಭಾವನಾತ್ಮಕ ವಿಚಾರಗಳು ಇರುತ್ತದೆ ಎಂಬ ಬಗ್ಗೆ…

Read More

ವಿದ್ಯಾಭ್ಯಾಸ ಮುಗಿದರೂ ಸಿಗದ ಕೆಲಸ, ಸಾಲಬಾಧೆ, ಅಮೆರಿಕದಲ್ಲಿ ಭಾರತೀಯ ಯುವಕ ಆತ್ಮಹತ್ಯೆ – Kannada News | Indian Student Suicide in US: Unemployment and Debt Burden Drive Tragedy

ಕರ್ನೂಲ್, ಮೇ 1: ದೊಡ್ಡ ದೊಡ್ಡ ಕನಸ್ಸುಗಳನ್ನು ಹೊತ್ತು ಅಮೆರಿಕ(America)ಕ್ಕೆ ಓದಲು ಹೋಗಿದ್ದ ಭಾರತೀಯ ಯುವಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ 26 ವರ್ಷದ  ಚಂದು ಮೃತ ಯುವಕ. ವಿದ್ಯಾಭ್ಯಾಸ ಮುಗಿಸಿ ಉದ್ಯೋಗಕ್ಕಾಗಿ  ಅರಸುತ್ತಿದ್ದ ಯುವಕನ ಅಕಾಲಿಕ ಸಾವು ಆತನ ಕುಟುಂಬವನ್ನು ಅಕ್ಷರಶಃ ಬೀದಿಗೆ ತಳ್ಳಿದೆ. ಚಂದು ಚಿಕಾಗೋದ ಡಿಪಾಲ್ ವಿಶ್ವವಿದ್ಯಾಲಯದಿಂದ ಇತ್ತೀಚೆಗಷ್ಟೇ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದ್ದರು. ಕಳೆದ ಹಲವು ವಾರಗಳಿಂದ ಉದ್ಯೋಗ ಹುಡುಕುತ್ತಿದ್ದರೂ ಸಿಕ್ಕಿರಲಿಲ್ಲ. ಕರ್ನೂಲ್‌ನಲ್ಲಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡುತ್ತಿರುವ…

Read More

ರಣಮಳೆಗೆ ಬೆಂಗಳೂರಿನ ಜನ ಹೈರಾಣು: ಒಂದೇ ದಿನ ಮೆಟ್ರೋ ಮೊರೆ ಹೋದ 12 ಲಕ್ಷ ಜನ! – Kannada News | Namma Metro Record: Over 12.85 Lakh Passengers Travel in a Single Day Due to Bengaluru Rains

ಒಂದೇ ದಿನ ಮೆಟ್ರೋ ಮೊರೆ ಹೋದ 12 ಲಕ್ಷ ಜನ! Image Credit source: google Gemini ಬೆಂಗಳೂರು, ಮೇ 01: ಸಿಲಿಕಾನ್ ಸಿಟಿಯಲ್ಲಿ ಕಳೆದ ಬುಧವಾರ ಸುರಿದ ಭಾರೀ ಮಳೆ ಮತ್ತು ರಸ್ತೆಗಳಲ್ಲಾದ ಟ್ರಾಫಿಕ್ ಜಾಮ್‌ನಿಂದಾಗಿ ಹೈರಾಣಾದ ಜನರು ಅಕ್ಷರಶಃ ಮೆಟ್ರೋ (Namma Metro) ಮೊರೆ ಹೋಗಿದ್ದಾರೆ. ರಸ್ತೆಗಳೆಲ್ಲಾ ತುಂಬಿ ಮೊಣಕಾಲು ತನಕ ನೀರು ಬಂದಿತ್ತು. ಏಕಾಏಕಿ ಸುರಿದ ಮಳೆಗೆ ಅದೆಷ್ಟೋ ವಾಹನಗಳು ಕೈ ಕೊಟ್ಟ ಕಾರಣಕ್ಕೆ ಜನ ಓಲಾ, ಊಬರ್ ಕಡೆ ಮುಖ ಮಾಡಿದರೆ,…

Read More

ಲಿವಿನ್ ರಿಲೇಷನ್​ಶಿಪ್​ನಲ್ಲಿದ್ದ ಯುವತಿ ನೇಣಿಗೆ ಶರಣು! ಪ್ರಿಯಕರನ ಮೇಲಿನ ಅನುಮಾನವೇ ಮುಳುವಾಯ್ತಾ? – Kannada News | Bengaluru Crime: Meghalaya Woman in Live in Relationship ends life Over Suspicion

ಲಿವಿನ್ ರಿಲೇಷನ್​ಶಿಪ್​ನಲ್ಲಿದ್ದ ಯುವತಿ ನೇಣಿಗೆ ಶರಣು! ಬೆಂಗಳೂರು, ಮೇ 01: ನಗರದಲ್ಲಿ ಲಿವಿನ್ ರಿಲೇಷನ್‌ಶಿಪ್​ನಲ್ಲಿದ್ದ (Live-in Relationship) ಜೋಡಿಗಳ ಜಗಳ ದುರಂತ ಅಂತ್ಯ ಕಂಡಿದೆ. ಪ್ರಿಯಕರ ಬೇರೆ ಯುವತಿಯ ಜೊತೆ ಮಾತನಾಡುತ್ತಿದ್ದಾನೆ ಎಂದು ಅನುಮಾನದಿಂದ ಮೇಘಾಲಯ ಮೂಲದ ಯುವತಿಯೊಬ್ಬಳು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕೊಡಿಗೇಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂಜೀವಿನಿ ನಗರದಲ್ಲಿ ಸಂಭವಿಸಿದೆ. ಪ್ರೇಮಿಗಳ ನಡುವೆ 8 ವರ್ಷಗಳ ಅಂತರ ಮೃತ ಯುವತಿಯನ್ನು ಮೇಘಾಲಯ ಮೂಲದ ಅಗತ ಬೈತಿಯಂಗುಂ (34) ಎಂದು ಗುರುತಿಸಲಾಗಿದೆ. ಈಕೆ…

Read More

Tulasi Male: ತುಳಸಿ ಮಾಲೆಯ ಆಧ್ಯಾತ್ಮಿಕ ಮಹತ್ವ, ಧರಿಸುವ ವಿಧಾನ ಮತ್ತು ಪ್ರಯೋಜನಗಳು – Kannada News | Tulasi Mala: Spiritual Significance, Benefits and How to Wear for Peace

ಹಿಂದೂ ಧರ್ಮದಲ್ಲಿ ಅತ್ಯಂತ ಪವಿತ್ರವೆಂದು ಪರಿಗಣಿಸಲ್ಪಟ್ಟಿರುವ ತುಳಸಿ ಸಸ್ಯವನ್ನು ‘ವಿಷ್ಣು ಪ್ರಿಯ’ ಎಂದು ಭಕ್ತಿಯಿಂದ ಆರಾಧಿಸಲಾಗುತ್ತದೆ. ಈ ಸಸ್ಯದ ಪ್ರತಿಯೊಂದು ಭಾಗವೂ ಆಧ್ಯಾತ್ಮಿಕ ಶಕ್ತಿಯನ್ನು ಹೊಂದಿದ್ದು, ತುಳಸಿ ಕಾಂಡಗಳಿಂದ ತಯಾರಿಸಿದ ಮಾಲೆಯನ್ನು ಧರಿಸುವುದು ಕೇವಲ ಒಂದು ಸಂಪ್ರದಾಯವಲ್ಲ; ಅದು ಮನಸ್ಸಿನ ಶಾಂತಿ ಮತ್ತು ಆಧ್ಯಾತ್ಮಿಕ ಶುದ್ಧೀಕರಣಕ್ಕೆ ನಾಂದಿಯಾಗುತ್ತದೆ ಎಂದು ನಂಬಲಾಗಿದೆ. ತುಳಸಿ ನೆಲೆಸಿರುವ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸುತ್ತದೆ ಎಂಬ ಬಲವಾದ ವಿಶ್ವಾಸವೂ ನಮ್ಮಲ್ಲಿದೆ. ತುಳಸಿ ಮಾಲೆಯನ್ನು ಧರಿಸುವ ಪ್ರಕ್ರಿಯೆಯನ್ನು ಕೇವಲ ಆಭರಣದಂತೆ ನೋಡದೆ, ಒಂದು ಶಿಸ್ತುಬದ್ಧ…

Read More

BESCOM Electricity Price Hike: ಬೆಸ್ಕಾಂ ವಿದ್ಯತ್ ದರ ಇಂದಿನಿಂದ ಏರಿಕೆ, ಲಕ್ಷಾಂತರ ಗ್ರಾಹಕರಿಗೆ ಶಾಕ್ – Kannada News | BESCOM Electricity Price Hike: Power Tariff Increased by 56 Paise per Unit in Bengaluru and 7 Other Districts from Today

ಬೆಂಗಳೂರು, ಮೇ 1: ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಎಂಟು ಜಿಲ್ಲೆಗಳ ಗ್ರಾಹಕರಿಗೆ ಇಂದಿನಿಂದ (ಮೇ 1) ವಿದ್ಯುತ್ ದರ ಏರಿಕೆಯ ಬಿಸಿ ತಟ್ಟಲಿದೆ. ಪ್ರತಿ ಯೂನಿಟ್‌ಗೆ 56 ಪೈಸೆ ಹೆಚ್ಚಳ ಮಾಡಲಾಗಿದ್ದು, ಇದು ಗ್ರಾಹಕರಿಗೆ ಮೇಲೆ ಮತ್ತಷ್ಟು ಆರ್ಥಿಕ ಹೊರೆ ಉಂಟುಮಾಡಲಿದೆ. ಈಗಾಗಲೇ ಗ್ಯಾಸ್ ಬೆಲೆ ಏರಿಕೆಯ ಬಿಸಿ ಅನುಭವಿಸುತ್ತಿರುವ ನಾಗರಿಕರಿಗೆ ಈ ವಿದ್ಯುತ್ ದರ ಏರಿಕೆ ಮತ್ತೊಂದು ಹೊಡೆತವಾಗಿದೆ. ಬೆಸ್ಕಾಂ ಸಂಸ್ಥೆಯು ಸುಮಾರು 2000 ಕೋಟಿ ರೂ. ನಷ್ಟವನ್ನು ಅನುಭವಿಸಿದ್ದು, ಇದನ್ನು ಸರಿದೂಗಿಸುವ ಸಲುವಾಗಿ…

Read More

ಓರ್ವಳ ನಂಬಿಸಿ ದೈಹಿಕ ಸಂಪರ್ಕ, ಈಗ ಮತ್ತೊಬ್ಬಳ ಜೊತೆ ನಿಶ್ಚಿರ್ತಾರ್ಥ: ಯುವತಿ ಬಾಳಲ್ಲಿ ಕಾಂಗ್ರೆಸ್​​ ನಾಯಕನ ಚೆಲ್ಲಾಟ? – Kannada News | Former T. Narasipura Municipal President Accused of Love, Physical Relationship and Dhoka

ಮೈಸೂರು, ಮೇ 1: ಟಿ. ನರಸೀಪುರ ಪುರಸಭೆಯ ಮಾಜಿ ಅಧ್ಯಕ್ಷ, ಕಾಂಗ್ರೆಸ್​​ ನಾಯಕ ಮದನ್ ರಾಜ್ ವಿರುದ್ಧ ಲವ್ ಸೆಕ್ಸ್ ದೋಖಾ ಆರೋಪದಡಿ ಪ್ರಕರಣ ದಾಖಲಾಗಿದೆ. ಯುವತಿಯೊಬ್ಬಳು ಹಲವು ವರ್ಷಗಳಿಂದ ತನ್ನನ್ನು ಪ್ರೀತಿಸುತ್ತಿದ್ದ ಮದನ್ ರಾಜ್ ದೈಹಿಕ ಸಂಬಂಧ ಬೆಳೆಸಿ, ಮದುವೆಯಾಗುವುದಾಗಿ ನಂಬಿಸಿ ವಂಚಿಸಿರೋದಾಗಿ ಟಿ. ನರಸೀಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ದೂರಿನ ಪ್ರಕಾರ, ಮದನ್​​ ರಾಜ್​​ ಈಗ ಮತ್ತೋರ್ವ ಯುವತಿಯ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮನೆಯಲ್ಲಿ ಒಪ್ಪುತ್ತಿಲ್ಲ ಎಂದು ನೆಪ ಹೇಳಿ, ಇಬ್ಬರು ಜೊತೆಯಾಗಿ…

Read More

ಬಂಗಾಳ ಸಮೀಕ್ಷೆಯಿಂದ ಆಕ್ಸಿಸ್ ಮೈ ಇಂಡಿಯಾ ದಿಢೀರ್ ಔಟ್, ಪ್ರದೀಪ್ ಗುಪ್ತಾ ನಿರ್ಧಾರದ ಹಿಂದೆ ಅಡಗಿದೆಯೇ ಸ್ಫೋಟಕ ಸತ್ಯ? – Kannada News | Mystery Behind Bengal Exit Poll Delay: Violence and Survey Challenges Revealed

ಮಮತಾ ಪ್ರಧಾನಿ ಮೋದಿImage Credit source: Awaz The Voice ಕೋಲ್ಕತ್ತಾ, ಮೇ 1: ಅಚ್ಚರಿಯ ಬೆಳವಣಿಗೆಯಲ್ಲಿ ಪಶ್ಚಿಮ ಬಂಗಾಳ(West Bengal)ದ ಚುನಾವಣೋತ್ತರ ಸಮೀಕ್ಷೆಯಿಂದ ಆಕ್ಸಿಸ್ ಮೈ ಇಂಡಿಯಾ ಸಂಸ್ಥೆಯು ಹಿಂದೆ ಸರಿದಿದೆ. ತಮಿಳುನಾಡು, ಆಸ್ಸಾಂ, ಪುದುಚೇರಿ ಹಾಗೂ ಕೇರಳ ವಿಧಾನಸಭೆ ಚುನಾವಣೆಗೆ ಸಂಬಂಧಿಸಿ ಇದೇ ಸಂಸ್ಥೆಯು ತನ್ನ ಸಮೀಕ್ಷಾ ವರದಿಯನ್ನು ನೀಡಿದೆ. ಆದರೆ ಪಶ್ಚಿಮ ಬಂಗಾಳಕ್ಕೆ ಸಂಬಂಧಿಸಿ ತೆಗೆದುಕೊಂಡ ತೀರ್ಮಾನವು ಹಲವು ಪ್ರಶ್ನೆಗಳು ಮೂಡುವಂತೆ ಮಾಡಿದೆ. ಆಕ್ಸಿಸ್‌ ಮೈ ಇಂಡಿಯಾ ಸಂಸ್ಥೆಯ ಮುಖ್ಯಸ್ಥ ಪ್ರದೀಪ್‌ ಗುಪ್ತಾ…

Read More