Category Archives: Blog

Your blog category

IPL 2026: ಸೋತರೂ ಪಾಯಿಂಟ್ಸ್ ಟೇಬಲ್​ನಲ್ಲಿ ಅಲ್ಲಾಡದ ಆರ್​ಸಿಬಿ: ಉಳಿದ ತಂಡಗಳ ಸ್ಥಿತಿ ಹೇಗಿದೆ? – Kannada News | IPL 2026 Points Table Update After Royal Challengers Bengaluru vs Gujarat Titans Match Number 42

ಬೆಂಗಳೂರು (ಮೇ. 01): ಐಪಿಎಲ್ 2026 ರ 42 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ತಂಡವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಗುಜರಾತ್ ಟೈಟಾನ್ಸ್ ಪ್ಲೇಆಫ್ ಆಸೆಯನ್ನು ಬಲಪಡಿಸಿಕೊಂಡಿದೆ. ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ಈ ರೋಮಾಂಚಕ ಗೆಲುವು ಪಾಯಿಂಟ್ ಪಟ್ಟಿಯಲ್ಲಿ ಕೆಲ ಬದಲಾವಣೆಗೆ ಕಾರಣವಾಯಿತು. ಆದರೆ ಕುತೂಹಲಕಾರಿಯಾಗಿ, ಆರ್​ಸಿಬಿ ತಂಡದ ಶ್ರೇಯಾಂಕದಲ್ಲಿ ಯಾವುದೇ ಪ್ರಮುಖ ಬದಲಾವಣೆಗಳಾಗಿಲ್ಲ.

ಗುಜರಾತ್ 5ನೇ ಸ್ಥಾನದಲ್ಲಿ ಮುಂದುವರೆದಿದೆ

ಹೊಸ ಪಾಯಿಂಟ್ಸ್ ಟೇಬಲ್ ಅನ್ನು ನೋಡುವುದಾದರೆ, ಗುಜರಾತ್ ಟೈಟಾನ್ಸ್ ಈ ಗೆಲುವಿನೊಂದಿಗೆ 10 ಅಂಕಗಳನ್ನು ತಲುಪಿದೆ. ಗುಜರಾತ್ ಇದುವರೆಗೆ ಒಂಬತ್ತು ಪಂದ್ಯಗಳನ್ನು ಆಡಿದ್ದು, ಐದು ಪಂದ್ಯಗಳನ್ನು ಗೆದ್ದು ನಾಲ್ಕರಲ್ಲಿ ಸೋತಿದೆ. ಜಿಟಿ ಐದನೇ ಸ್ಥಾನದಲ್ಲಿದ್ದರೂ, ಅಗ್ರ ನಾಲ್ಕು ತಂಡಗಳೊಂದಿಗೆ ಅವರ ಅಂತರವು ಗಮನಾರ್ಹವಾಗಿ ಕಡಿಮೆಯಾಗಿದೆ. ಗುಜರಾತ್‌ನ ನಿವ್ವಳ ರನ್ ದರ ಪ್ರಸ್ತುತ -0.192 ಆಗಿದ್ದು, ಮುಂಬರುವ ಪಂದ್ಯಗಳಲ್ಲಿ ಗೆಲುವು ಅನಿವಾರ್ಯವಾಗಿದೆ.

ಆರ್‌ಸಿಬಿ ಎರಡನೇ ಸ್ಥಾನದಲ್ಲಿ ಭದ್ರ

ಮತ್ತೊಂದೆಡೆ, ಈ ಸೋಲಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ದೊಡ್ಡ ಹಿನ್ನಡೆಯನ್ನು ಅನುಭವಿಸಿತು, ಆದರೆ ಇನ್ನೂ 12 ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಆರ್‌ಸಿಬಿ ತಮ್ಮ ಒಂಬತ್ತು ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದಿದೆ ಮತ್ತು ಮೂರರಲ್ಲಿ ಸೋತಿದೆ. +1.420 ರ ಬಲಿಷ್ಠ ನಿವ್ವಳ ರನ್ ದರದೊಂದಿಗೆ, ಆರ್‌ಸಿಬಿ ಇನ್ನೂ ಸುರಕ್ಷಿತ ಸ್ಥಾನದಲ್ಲಿದೆ, ಆದರೆ ಪಂಜಾಬ್ ಕಿಂಗ್ಸ್ ತಮ್ಮ ಸತತ ಗೆಲುವುಗಳೊಂದಿಗೆ ಅಗ್ರಸ್ಥಾನದಲ್ಲಿ ತಮ್ಮ ಹಿಡಿತವನ್ನು ಕಾಯ್ದುಕೊಂಡಿದೆ.

GT vs RCB: ಜಿಟಿ ಮಾಸ್ಟರ್ ಪ್ಲ್ಯಾನ್ ರಿವೀಲ್: ಗಿಲ್ ಟಾರ್ಗೆಟ್ ಮಾಡಿದ್ದು ಆರ್​ಸಿಬಿಯ ಈ ಒಬ್ಬ ವ್ಯಕ್ತಿಯನ್ನು

ಪಂಜಾಬ್ ಕಿಂಗ್ಸ್ ಅಗ್ರಸ್ಥಾನ

ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್ ಎಂಟು ಪಂದ್ಯಗಳಿಂದ 13 ಅಂಕಗಳೊಂದಿಗೆ ಮೊದಲ ಸ್ಥಾನದಲ್ಲಿದೆ. ಸನ್‌ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ಕೂಡ ತಲಾ 12 ಅಂಕಗಳನ್ನು ಹೊಂದಿದ್ದು, ಆರ್‌ಸಿಬಿಗೆ ಸಮನಾಗಿದೆ, ಆದರೆ ರನ್ ರೇಟ್ ಆಧಾರದ ಮೇಲೆ ಕ್ರಮವಾಗಿ ಮೂರನೇ ಮತ್ತು ನಾಲ್ಕನೇ ಸ್ಥಾನದಲ್ಲಿವೆ.

ಮುಂಬೈ ಮತ್ತು ಲಕ್ನೋದ ಸ್ಥಿತಿ ಕೆಟ್ಟದಾಗಿದೆ

ಕೊನೆಯ ಸ್ಥಾನದಲ್ಲಿರುವವರ ಪರಿಸ್ಥಿತಿ ಇನ್ನೂ ಚಿಂತಾಜನಕವಾಗಿದೆ. ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಲಾ 6 ಅಂಕಗಳೊಂದಿಗೆ ಆರು ಮತ್ತು ಏಳನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಲಾ 4 ಅಂಕಗಳೊಂದಿಗೆ ಒಂಬತ್ತು ಮತ್ತು ಹತ್ತನೇ ಸ್ಥಾನದಲ್ಲಿ ಹೋರಾಡುತ್ತಿವೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Video: ಬುರ್ಖಾ ಧರಿಸಿದ್ದ ಮಹಿಳೆಯ ಮೈಮುಟ್ಟಿ ಪರಾರಿಯಾಗಿದ್ದ ನೌಶಾದ್​ಗೆ ಪೊಲೀಸರ ಗುಂಡೇಟು – Kannada News | Caught on Camera: Moradabad Man Who Assaulted Woman in Burqa Arrested After Gunfight

ಮೊರಾದಾಬಾದ್, ಮೇ 1: ರಸ್ತೆಯಲ್ಲಿ ಬುರ್ಖಾ ಧರಿಸಿದ್ದ ಮಹಿಳೆಗೆ ಲೈಂಗಿಕ ಕಿರುಕುಳ ಕೊಟ್ಟಿದ್ದ ನೌಶಾದ್​ನ ಕಾಲಿಗೆ ಪೊಲೀಸರು ಗುಂಡು ಹಾರಿಸಿರುವ ಘಟನೆ ಉತ್ತರ ಪ್ರದೇಶದ ಮೊರಾದಾಬಾದ್​ನಲ್ಲಿ ನಡೆದಿದೆ. ಕತ್ಘರ್ ಪೊಲೀಸ್ ಠಾಣೆ ವ್ಯಾಪ್ತಿಯ ನಿವಾಸಿಯಾದ ನೌಶಾದ್, ಓಣಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಬುರ್ಖಾ ಧರಿಸಿದ ಮಹಿಳೆಯನ್ನು ಹಿಂದಿನಿಂದ ತಬ್ಬಿಕೊಂಡು ಅಲ್ಲಿಂದ ಪರಾಋಇಯಾಗಿದ್ದ. ಕುರ್ತಾ-ಪೈಜಾಮ ಮತ್ತು ಟೋಪಿ ಧರಿಸಿದ್ದ ವ್ಯಕ್ತಿಯನ್ನು ಕಾಣಬಹುದು. ಆತನ ಕೃತ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಪೊಲೀಸರು ತನಿಖೆ ಚುರುಕುಗೊಳಿಸಿದರು.
ಆರೋಪಿಗಾಗಿ ತಪಾಸಣೆ ನಡೆಸುತ್ತಿದ್ದಾಗ ನಡೆದ ಪೊಲೀಸ್ ಎನ್‌ಕೌಂಟರ್‌ನಲ್ಲಿ ನೌಶಾದ್‌ನ ಕಾಲಿಗೆ ಗುಂಡು ತಗುಲಿದೆ. ಗಾಯಗೊಂಡಿರುವ ಆತನನ್ನು ಸದ್ಯ ಜಿಲ್ಲಾ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಪೊಲೀಸರು ಕೈಗೊಂಡ ಈ ತ್ವರಿತ ಕ್ರಮಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

International Labour Day 2026: ಕಾರ್ಮಿಕರು ದೇಶದ ಪ್ರಗತಿ, ಏಳಿಗೆಯ ನಿಜವಾದ ಬೆನ್ನೆಲುಬು – Kannada News | International Labour Day 2026: Why is International Labour Day celebrated on May 1st?

ಅಂತಾರಾಷ್ಟ್ರೀಯ ಕಾರ್ಮಿಕರ ದಿನImage Credit source: vecteezy

ಪ್ರತಿಯೊಂದು ದೇಶದ ಆರ್ಥಿಕ ಅಭಿವೃದ್ಧಿಯು ಆ ದೇಶದ ಕಾರ್ಮಿಕರ (Labour) ಮೇಲೆ ಅವಲಂಬಿತವಾಗಿರುತ್ತದೆ. ಹೌದು ರಸ್ತೆ ನಿರ್ಮಾಣಗಳಿಂದ ಹಿಡಿದು ದೊಡ್ಡ ದೊಡ್ಡ ಕಟ್ಟಡಗಳ ನಿರ್ಮಾಣಗಳ ವರೆಗೆ ಪ್ರತಿಯೊಂದು ಕೆಲಸವನ್ನು ಶ್ರಮವಹಿಸಿ ಮಾಡುವ ಮೂಲಕ ದೇಶದ ಪ್ರಗತಿಗೆ ಕಾರ್ಮಿಕರು ಕೊಡುಗೆ ನೀಡುತ್ತಾರೆ. ಕಾರ್ಮಿಕರು ಹಗಲು ರಾತ್ರಿ, ಬಿಸಿಲು-ಮಳೆ ಎನ್ನದೆ ಸಮರ್ಪಣಾ ಭಾವದಿಂದ ಕಠಿಣ ಶ್ರಮ ವಹಿಸಿ ದುಡಿಯುತ್ತಾರೆ. ಇವರು ತಮ್ಮ ಶ್ರಮದ ಮೂಲಕ ಸಮಾಜ ಮತ್ತು ಆರ್ಥಿಕತೆಯ ಅಡಿಪಾಯವನ್ನು ಬಲಪಡಿಸುತ್ತಾರೆ. ಹೀಗೆ ಸಮಾಜ ಮತ್ತು ಆರ್ಥಿಕತೆಯನ್ನು ಮುನ್ನಡೆಸಲು ಶ್ರಮಿಸಿದ ಕಾರ್ಮಿಕರು ಮತ್ತು ಕಾರ್ಮಿಕ ವರ್ಗವನ್ನು ಗೌರವಿಸಲು ಪ್ರತಿ ವರ್ಷ ಮೇ 1 ರಂದು ಪ್ರಪಂಚದಾದ್ಯಂತ ಅಂತರರಾಷ್ಟ್ರೀಯ ಕಾರ್ಮಿಕ ದಿನವನ್ನು ಆಚರಿಸಲಾಗುತ್ತದೆ. ಶ್ರಮಜೀವಿಗಳಿಗೆ ಸಮರ್ಪಿಸಲಾದ ಈ ವಿಶೇಷ ದಿನದ ಇತಿಹಾಸ ಮತ್ತು ಮಹತ್ವವನ್ನು ತಿಳಿಯೋಣ ಬನ್ನಿ.

ಅಂತಾರಾಷ್ಟ್ರೀಯ ಕಾರ್ಮಿಕರ ದಿನದ ಇತಿಹಾಸವೇನು?

ಪ್ರತಿ ವರ್ಷ ಮೇ 1 ರಂದು ಆಚರಿಸಲಾಗುವ ಕಾರ್ಮಿಕರ ದಿನವು 19 ನೇ ಶತಮಾನದ ಉತ್ತರಾರ್ಧದಲ್ಲಿ ಅಮೇರಿಕನ್ ಕಾರ್ಮಿಕ ಚಳುವಳಿಯೊಂದಿಗೆ ಪ್ರಾರಂಭವಾಯಿತು. ಮೇ 1, 1886 ರಂದು,  15 ಗಂಟೆಗಳ ಕಾಲ ಇದ್ದ ಕೆಲಸದ ಸಮಯವನ್ನು 8 ಗಂಟೆಗಳ ಅವಧಿಗೆ ತರಬೇಕು ಎಂಬ ಬೇಡಿಕೆಯೊಂದಿದೆ ಕಾರ್ಮಿಕರು ಅಮೆರಿಕದ ಚಿಕಾಗೋ ನಗರದಲ್ಲಿ ಮುಷ್ಕರವನ್ನು ಪ್ರಾರಂಭಿಸಿದರು. ನಂತರ ಈ ಪ್ರತಿಭಟನೆ ಚಿಕಾಗೋದ ಹೇಮಾರ್ಕೆಟ್ ಪ್ರದೇಶದಲ್ಲಿ ಹಿಂಸಾತ್ಮಕವಾಗಿ ಮಾರ್ಪಟ್ಟಿತು. ಈ ಘಟನೆಯಲ್ಲಿ ಏಳು ಪೊಲೀಸರು ಮತ್ತು ನಾಲ್ವರು ನಾಗರಿಕರು ಪ್ರಾಣ ಕಳೆದುಕೊಂಡರು. ಈ ಘಟನೆಯ ಸ್ಮರಣಾರ್ಥವಾಗಿ, ಮೇ 1 ಅನ್ನು ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಆಚರಿಸಲು ಪ್ರಾರಂಭಿಸಲಾಯಿತು. 1889 ರಲ್ಲಿ, ಯುರೋಪಿನ ಅನೇಕ ಸಮಾಜವಾದಿ ಪಕ್ಷಗಳು ಮೇ 1 ಅನ್ನು ಅಂತಾರಾಷ್ಟ್ರೀಯ ಕಾರ್ಮಿಕರ ದಿನವನ್ನಾಗಿ ಆಚರಿಸಲು ಒಟ್ಟಾಗಿ ಬಂದವು. ಅಂದಿನಿಂದ  ಪ್ರತಿ ವರ್ಷ ಈ ದಿನವನ್ನು  ಆಚರಿಸುತ್ತಾ ಬರಲಾಗುತ್ತಿದೆ.

ಭಾರತದಲ್ಲಿ ಕಾರ್ಮಿಕರ ದಿನ ಆರಂಭವಾದದ್ದು ಯಾವಾಗ?

ಭಾರತದಲ್ಲಿ ಮೊದಲ ಬಾರಿಗೆ ಕಾರ್ಮಿಕರ ದಿನವನ್ನು 1923 ರಲ್ಲಿ ಆಚರಿಸಲಾಯಿತು. ಈ ದಿನವನ್ನು ಕಮ್ಯುನಿಸ್ಟ್ ನಾಯಕ ಸಿಂಗಾರವೇಲು ಚೆಟ್ಟಿಯಾರ್ ಅವರು ಚೆನ್ನೈನಲ್ಲಿ ಪ್ರಾರಂಭಿಸಿದರು. ಕಾರ್ಮಿಕರ ಹಕ್ಕುಗಳು ಮತ್ತು ರಕ್ಷಣೆಯ  ಬಗ್ಗೆ ಒತ್ತಾಯಿಸಿ ಅವರು ಮದ್ರಾಸ್ ಹೈಕೋರ್ಟ್ ಮುಂದೆ ಮೊದಲ ಕಾರ್ಮಿಕ ದಿನಾಚರಣೆಯ ಸಭೆಯನ್ನು ಆಯೋಜಿಸಿದರು. ಈ ಸಭೆಯಲ್ಲಿ, ಭಾರತದಲ್ಲಿ ಮೊದಲ ಬಾರಿಗೆ ಕಾರ್ಮಿಕರ ದಿನವನ್ನು ಆಚರಿಸಲಾಯಿತು.

ಇದನ್ನೂ ಓದಿ: ಮೇ ತಿಂಗಳ ಪ್ರಮುಖ ರಾಷ್ಟ್ರೀಯ-ಅಂತಾರಾಷ್ಟ್ರೀಯ ಕಾರ್ಯಕ್ರಮಗಳ ಪಟ್ಟಿ ಇಲ್ಲಿದೆ

ಅಂತಾರಾಷ್ಟ್ರೀಯ ಕಾರ್ಮಿಕದ ದಿನದ ಮಹತ್ವವೇನು?

  • ಅಂತಾರಾಷ್ಟ್ರೀಯ ಕಾರ್ಮಿಕರ ದಿನದ ಉದ್ದೇಶವು ಕಾರ್ಮಿಕರ ಕಠಿಣ ಪರಿಶ್ರಮವನ್ನು ಗುರುತಿಸುವುದು ಮಾತ್ರವಲ್ಲದೆ, ಶೋಷಣೆಯನ್ನು ತಪ್ಪಿಸಲು ಅವರ ಹಕ್ಕುಗಳ ಬಗ್ಗೆ ಅವರಿಗೆ ಶಿಕ್ಷಣ ನೀಡುವುದಾಗಿದೆ.
  • ಈ ದಿನವು ಕಾರ್ಮಿಕರ ಹಕ್ಕುಗಳನ್ನು ರಕ್ಷಿಸುವ ಅಗತ್ಯತೆ ಮತ್ತು ಕಾರ್ಮಿಕರಿಗೆ ಉತ್ತಮ ಕೆಲಸದ ಪರಿಸ್ಥಿತಿಗಳ ಮೇಲೆ ಕೇಂದ್ರೀಕರಿಸುತ್ತದೆ.
  • ಈ ದಿನವು ನ್ಯಾಯಯುತ ವೇತನ, ಸುರಕ್ಷಿತ ಕೆಲಸದ ವಾತಾವರಣ, ನ್ಯಾಯಯುತ ಕೆಲಸದ ಸಮಯ ಮತ್ತು ಶೋಷಣೆ ನಿರ್ಮೂಲನೆಯ ಅಗತ್ಯವನ್ನು ಎತ್ತಿ ತೋರಿಸುತ್ತದೆ.
  • ಈ ದಿನದ ಸಂದರ್ಭದಲ್ಲಿ, ಕಾರ್ಮಿಕರ ಕೊಡುಗೆಯನ್ನು ಗೌರವಿಸಲು ಮತ್ತು ಅವರ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಲು ಅನೇಕ ಸ್ಥಳಗಳಲ್ಲಿ ರ್ಯಾಲಿಗಳು ಮತ್ತು ವಿಚಾರ ಸಂಕಿರಣಗಳನ್ನು ಆಯೋಜಿಸಲಾಗುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Shani Dosha: ಚಪ್ಪಲಿ ಹಾಕದೇ ನಡೆದರೆ ಶನಿ ದೋಷ ಕಡಿಮೆಯಾಗುತ್ತಾ? ಜ್ಯೋತಿಷ್ಯಶಾಸ್ತ್ರ ಹೇಳುವುದೇನು? – Kannada News | Shani Dosha: How a Half Hour Walk Can Mitigate Saturns Malefic Effects

ಜ್ಯೋತಿಷ್ಯದಲ್ಲಿ ಶನಿ ಗ್ರಹವು ಅತ್ಯಂತ ಪ್ರಭಾವಶಾಲಿ ಗ್ರಹಗಳಲ್ಲಿ ಒಂದಾಗಿದೆ. ಶನಿ ಎಂದರೆ ಬಹುತೇಕರಿಗೆ ಒಂದು ರೀತಿಯ ಭಯ, ಭಕ್ತಿ, ಶ್ರದ್ಧೆ ಮತ್ತು ವಿನಯದ ಭಾವ ಮೂಡುವುದು ಸಹಜ. ಶನಿಯು ಕರ್ಮಫಲದಾತನಾಗಿದ್ದು, ಒಬ್ಬರ ಕರ್ಮಗಳಿಗೆ ತಕ್ಕಂತೆ ಫಲವನ್ನು ನೀಡುತ್ತಾನೆ ಎಂಬ ನಂಬಿಕೆ ಇದೆ. ಸಾಡೆ ಸಾತಿ, ಅರ್ಧಾಷ್ಟಮ ಶನಿ, ಪಂಚಮ ಶನಿ, ಅಷ್ಟಮ ಶನಿ ಮುಂತಾದ ಶನಿ ಪ್ರಭಾವದ ಅವಧಿಗಳಲ್ಲಿ ವ್ಯಕ್ತಿಗಳು ಹಲವು ಕಷ್ಟ-ನಷ್ಟಗಳನ್ನು ಅನುಭವಿಸಬೇಕಾಗುತ್ತದೆ. ದುಸ್ಥಾನಗಳಲ್ಲಿ ಶನಿ ಇದ್ದಾಗ ಅಥವಾ ಶನಿಯ ದೃಷ್ಟಿ ಇದ್ದಾಗ ಸಮಸ್ಯೆಗಳು ಉಲ್ಬಣಿಸಬಹುದು. ಶನಿ ಕಾಟ ದೇವಾನು ದೇವತೆಗಳಿಗೂ ತಪ್ಪಿದ್ದಲ್ಲ ಎಂಬುದನ್ನು ಶಾಸ್ತ್ರಗಳು ಹೇಳುತ್ತವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.

ಗುರೂಜಿಯವರು ಹೇಳುವಂತೆ, ಸೂರ್ಯ ಮತ್ತು ಛಾಯಾದೇವಿ ಪುತ್ರನಾದ ಶನಿ, ಕಪ್ಪು ಮತ್ತು ನೀಲಿ ವರ್ಣದವನಾಗಿದ್ದು, ಕಾಗೆಯನ್ನು ತನ್ನ ವಾಹನವಾಗಿ ಹೊಂದಿದ್ದಾನೆ. ಶನಿವಾರದಂದು ಎಳ್ಳು ದಾನ, ಎಳ್ಳೆಣ್ಣೆ ದೀಪ ಹಚ್ಚುವುದು, ಕಪ್ಪು ಬಟ್ಟೆ ಧರಿಸುವುದು ಮುಂತಾದವು ಶನಿ ಪ್ರಭಾವವನ್ನು ಕಡಿಮೆ ಮಾಡಲು ಸಾಮಾನ್ಯವಾಗಿ ಅನುಸರಿಸುವ ವಿಧಾನಗಳಾಗಿವೆ. ಸತ್ಯ ಹರಿಶ್ಚಂದ್ರ, ನಳ ಮಹಾರಾಜ, ದಶರಥ, ವಿಕ್ರಮಾದಿತ್ಯ, ರಾವಣರಂತಹ ಮಹಾರಾಜರೂ ಶನಿಯ ದೃಷ್ಟಿಗೆ ಬಿದ್ದವರೇ. ಆದರೆ ಈ ಕಲಿಯುಗದಲ್ಲಿ ಶನಿ ಕಾಟದಿಂದ ಹೊರಬರಲು ಯಾವುದೇ ಖರ್ಚಿಲ್ಲದ ಒಂದು ಸೂಕ್ಷ್ಮ ತಂತ್ರವಿದೆ ಎಂದು ಜ್ಯೋತಿಷ್ಯ ತಿಳಿಸುತ್ತದೆ.

ಶನಿ ಭಗವಾನರು ಸಂಚಾರಿ, ಅವರು ಎಲ್ಲೆಡೆಯೂ ಸಂಚರಿಸುತ್ತಾ ಎಲ್ಲರ ಕರ್ಮಗಳನ್ನು ಪರಿಶೀಲಿಸುತ್ತಾರೆ ಎಂಬ ನಂಬಿಕೆ ಇದೆ. ಶನಿಗೆ ಪೂಜೆ, ಜಪ ಅಥವಾ ಎಣ್ಣೆ ದೀಪ ಹಚ್ಚುವ ಸಾಂಪ್ರದಾಯಿಕ ವಿಧಾನಗಳ ಜೊತೆಗೆ, ಒಂದು ಸರಳ ತಂತ್ರವನ್ನು ಅನುಸರಿಸಬಹುದು. ಅದು ವ್ಯಾಪಾರ ವೃದ್ಧಿ, ಉತ್ತಮ ಆರೋಗ್ಯ, ಅಪವಾದಗಳಿಂದ ಮುಕ್ತಿ, ಕಾನೂನು ವಿಷಯಗಳಲ್ಲಿ ಜಯ, ರಾಜಕೀಯ ಪ್ರಗತಿ, ಹಿತ ಶತ್ರುಗಳು ಮಿತ್ರರಾಗುವುದು ಹಾಗೂ ಕುಟುಂಬದಲ್ಲಿ ಪ್ರೀತಿ ಹೆಚ್ಚುವುದಕ್ಕೆ ಸಹಕಾರಿಯಾಗಿದೆ. ಸಾಡೆ ಸಾತಿ ಇರುವವರು ಸಹ ಉನ್ನತ ಸ್ಥಾನಗಳನ್ನು ತಲುಪಿದ ನಿದರ್ಶನಗಳು ಇವೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಈ ವಿಶೇಷ ತಂತ್ರವೆಂದರೆ: ಪ್ರತಿದಿನ ಬೆಳಿಗ್ಗೆ ಅಥವಾ ಸೂರ್ಯಾಸ್ತದ ಸಮಯದಲ್ಲಿ, ಚಪ್ಪಲಿ ಧರಿಸದೆ, ಭೂಮಿಯ ಮೇಲೆ ಪೂರ್ವ ಅಥವಾ ಉತ್ತರ ದಿಕ್ಕಿಗೆ ಮುಖ ಮಾಡಿ ಸುಮಾರು ಅರ್ಧ ಘಂಟೆ ಕಾಲ ನಡೆಯುವುದು. ಈ ಸಮಯದಲ್ಲಿ ಯಾವುದೇ ಯೋಚನೆ ಮಾಡದೆ, ಸಾಧ್ಯವಾದರೆ ಓಂ ಶಂ ಶನೇಶ್ಚರಾಯ ನಮಃ ಎಂದು ಜಪಿಸುತ್ತಾ ನಡೆಯಬಹುದು. ಹೀಗೆ ಬರಿಗಾಲಿನಲ್ಲಿ ನಡೆಯುವುದರಿಂದ ಶನಿಯ ಕಾಟವು ಕ್ರಮೇಣ ಕಡಿಮೆಯಾಗುತ್ತದೆ ಎಂದು ಹೇಳಲಾಗುತ್ತದೆ.

ಇದೇ ಅಭ್ಯಾಸವನ್ನು ಆಧುನಿಕ ಮಹನೀಯರೂ ಅನುಸರಿಸಿದ್ದಾರೆ. ಉದಾಹರಣೆಗೆ, ಸರ್ ಎಂ. ವಿಶ್ವೇಶ್ವರಯ್ಯನವರು ಗಂಟೆಗಟ್ಟಲೆ ಮೈಲುಗಟ್ಟಲೆ ನಡೆಯುತ್ತಿದ್ದರು. ಇತ್ತೀಚಿನ ನಡೆದಾಡುವ ದೇವರು ಡಾ. ಶಿವಕುಮಾರ ಮಹಾಸ್ವಾಮಿಗಳು ಕೂಡ ತಮ್ಮ ಅಂತಿಮ ದಿನಗಳಲ್ಲಿಯೂ ಆಸರೆ ಇಲ್ಲದೆ ನಡೆದಾಡುತ್ತಿದ್ದರು. ವೈಜ್ಞಾನಿಕವಾಗಿ ನಡೆಯುವುದು ದೇಹಕ್ಕೆ ಉತ್ತಮವಾದರೆ, ಆಧ್ಯಾತ್ಮಿಕವಾಗಿ ಇದು ಶನಿಯ ಅಶುಭ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಹಾಗಾಗಿ, ಸ್ವಲ್ಪ ಸಮಯ ಪೂರ್ವ ಅಥವಾ ಉತ್ತರಕ್ಕೆ ಮುಖ ಮಾಡಿ ಬರಿಗಾಲಿನಲ್ಲಿ ನಡೆಯುವ ಅಭ್ಯಾಸ ಮಾಡಿಕೊಳ್ಳುವುದು ಶನಿಯ ಅವಕೃಪೆಯಿಂದ ದೂರವಿರಲು ಸಹಾಯಕವಾಗಿದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 10:10 am, Fri, 1 May 26

Source link

ತಪ್ಪು ಮಾಡಿದ್ರೆ ದಂಡ ಹಾಕಿ, ಕೈ ಮಾಡುವ ಹಕ್ಕಿಲ್ಲ: ಬೆಂಗಳೂರಿನಲ್ಲಿ ಹೆಚ್ಚಾಗುತ್ತಿದೆ ಟ್ರಾಫಿಕ್ ಪೊಲೀಸರ ದೌರ್ಜನ್ಯ – Kannada News | Bangalore Police Misconduct: When Can Traffic Cops Use Force? Legal Limits Explained

ಬೆಂಗಳೂರು, ಮೇ.1: ವಾಹನ ತಪಾಸಣೆಯ ಸಂದರ್ಭದಲ್ಲಿ ಸಂಚಾರಿ ಪೊಲೀಸರು ಸಾರ್ವಜನಿಕರ ಮೇಲೆ ಹಲ್ಲೆ ಮಾಡುವ ಅಥವಾ ಅನುಚಿತವಾಗಿ ವರ್ತಿಸುವ ಘಟನೆಗಳು ಆಗಾಗ್ಗೆ ವರದಿಯಾಗುತ್ತಿರುತ್ತವೆ. ಆದರೆ, ಭಾರತೀಯ ಮೋಟಾರು ವಾಹನ ಕಾಯ್ದೆ 1988 ರ ಅಡಿಯಲ್ಲಿ ಯಾವುದೇ ಪೊಲೀಸ್ ಅಧಿಕಾರಿ ಅಥವಾ ಕಾನ್‌ಸ್ಟೆಬಲ್‌ಗೆ ನಾಗರಿಕರ ಮೇಲೆ ದೈಹಿಕವಾಗಿ ಹಲ್ಲೆ ಮಾಡುವ ಅಧಿಕಾರವಿಲ್ಲ ಎಂಬುದು ಕಾನೂನುಬದ್ಧ ಸತ್ಯ. ಆದರೆ ಬೆಂಗಳೂರಿನಲ್ಲಿ ಪೊಲೀಸರು ಕಾನೂನು ವಿರೋಧವಾಗಿ ನಡೆದುಕೊಂಡಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಆಟೋ ಚಾಲಕನೊಬ್ಬನಿಗೆ ಟ್ರಾಫಿಕ್​​ ಪೊಲೀಸರು ಹಲ್ಲೆ ಮಾಡಿದ್ದಾರೆ. ಈ ಬಗ್ಗೆ ಆಟೋ ಚಾಲಕ ಪ್ರಶ್ನೆ ಮಾಡಿದ್ದಕ್ಕೆ ಎಳೆದಾಡಿದ್ದಾರೆ. ಇನ್ನೊಂದು ಕಡೆ ಲಾರಿ ಡ್ರೈವರ್​​​ಗೆ ಕಪಾಳಮೋಕ್ಷ ಮಾಡಿದ್ದಾರೆ. ಇದೀಗ ಈ ವಿಡಿಯೋವನ್ನು @KarnatakaPortfolio ಎಕ್ಸ್​ ಖಾತೆಯಲ್ಲಿ ಹಂಚಿಕೊಳ್ಳಲಾಗಿದೆ. ಪೊಲೀಸರಿಗೆ ದಾಖಲೆಗಳ ಪರಿಶೀಲನೆಗಾಗಿ ವಾಹನವನ್ನು ನಿಲ್ಲಿಸುವ ಅಧಿಕಾರವಿದೆ. ಚಾಲನಾ ಪರವಾನಗಿ (DL), ಆರ್‌ಸಿ (RC), ವಿಮೆ ಮತ್ತು ಪಿಯುಸಿ (PUC) ದಾಖಲೆಗಳನ್ನು ಕೇಳುವುದು, ನಿಯಮ ಉಲ್ಲಂಘನೆಯಾದಲ್ಲಿ ಚಲನ್ ನೀಡುವುದು ಅಥವಾ ದಂಡ ವಿಧಿಸುವುದು. ಗಂಭೀರ ನಿಯಮ ಉಲ್ಲಂಘನೆ ಕಂಡುಬಂದಲ್ಲಿ ವಾಹನವನ್ನು ವಶಕ್ಕೆ ಪಡೆಯುವ ಅಧಿಕಾರ ಪೊಲೀಸರಿಗೆ ಇದೆ. ಯಾವುದೇ ಸಂದರ್ಭದಲ್ಲಿ ಪೊಲೀಸರು ಬಲಪ್ರಯೋಗ ಮಾಡುವುದು ಕೇವಲ ಆತ್ಮರಕ್ಷಣೆಗಾಗಿ ಅಥವಾ ಗಂಭೀರ ಅಪರಾಧವನ್ನು ತಡೆಯಲು ಮಾತ್ರ ಸೀಮಿತವಾಗಿದೆ. ಅನಗತ್ಯ ಹಲ್ಲೆಯು ಭಾರತೀಯ ದಂಡ ಸಂಹಿತೆ (IPC) ಅಡಿಯಲ್ಲಿ ಅಪರಾಧವಾಗುತ್ತದೆ ಮತ್ತು ಇದು ಪೊಲೀಸ್ ಸೇವಾ ನಿಯಮಗಳ ಉಲ್ಲಂಘನೆಯೂ ಹೌದು.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇರಾನ್ ಸಮರ ಅಂತ್ಯ: ಟ್ರಂಪ್ ಆಡಳಿತದ ದಿಢೀರ್ ಘೋಷಣೆ, ಸಂಸತ್ತಿನ ಹಸ್ತಕ್ಷೇಪಕ್ಕೆ ಬೀಳಲಿದೆಯೇ ಬ್ರೇಕ್? – Kannada News | US Iran Conflict: Trump’s Declaration and Congressional War Powers Battle

ಡೊನಾಲ್ಡ್​ ಟ್ರಂಪ್ Image Credit source: Observer Research Foundation

ವಾಷಿಂಗ್ಟನ್, ಮೇ 1: ಅಮೆರಿಕ ಮತ್ತು ಇರಾನ್(Iran) ನಡುವಿನ ಉದ್ವಿಗ್ನತೆಯ ಮಧ್ಯೆ, ಟ್ರಂಪ್ ಆಡಳಿತವು ಮಧ್ಯಪ್ರಾಚ್ಯದ ಸಂಘರ್ಷದ ಕುರಿತು ಮಹತ್ವದ ರಾಜತಾಂತ್ರಿಕ ಮತ್ತು ಕಾನೂನು ನಿಲುವನ್ನು ಪ್ರಕಟಿಸಿದೆ. ಕಳೆದ ತಿಂಗಳು ಜಾರಿಗೆ ಬಂದ ಕದನ ವಿರಾಮದ ಹಿನ್ನೆಲೆಯಲ್ಲಿ ಇರಾನ್ ವಿರುದ್ಧದ ಯುದ್ಧವು ‘ಮುಕ್ತಾಯಗೊಂಡಿದೆ’ ಎಂದು ಟ್ರಂಪ್ ಆಡಳಿತ ಘೋಷಿಸಿದೆ. ಈ ಘೋಷಣೆಯು ಕೇವಲ ಯುದ್ಧದ ನಿಲ್ಲಿಸುವುದಷ್ಟೇ ಅಲ್ಲದೆ, ಅಮೆರಿಕದ ಸಂಸತ್ತಾದ ಕಾಂಗ್ರೆಸ್‌ನಿಂದ ಪಡೆಯಬೇಕಾದ ಕಡ್ಡಾಯ ಅನುಮೋದನೆಯನ್ನು ತಪ್ಪಿಸುವ ಒಂದು ಕಾರ್ಯತಂತ್ರ ಎಂದು ಹೇಳಲಾಗುತ್ತಿದೆ.

ಅಮೆರಿಕದ ಕಾನೂನಿನ ಪ್ರಕಾರ, ಅಧ್ಯಕ್ಷರು ಯಾವುದೇ ಸೇನಾ ಕಾರ್ಯಾಚರಣೆಯನ್ನು ಪ್ರಾರಂಭಿಸಿದ 60 ದಿನಗಳ ಒಳಗೆ ಕಾಂಗ್ರೆಸ್‌ನ ಅನುಮೋದನೆ ಪಡೆಯುವುದು ಕಡ್ಡಾಯ. ಆದರೆ, ಏಪ್ರಿಲ್ 7 ರಿಂದ ಅಮೆರಿಕ ಮತ್ತು ಇರಾನ್ ಪಡೆಗಳ ನಡುವೆ ಯಾವುದೇ ಗುಂಡಿನ ಚಕಮಕಿ ನಡೆದಿಲ್ಲ ಎಂದು ಯುದ್ಧ ಕಾರ್ಯದರ್ಶಿ ಪೀಟ್ ಹೆಗ್ಸೆತ್ ವಾದಿಸಿದ್ದಾರೆ. ಕದನ ವಿರಾಮ ಜಾರಿಯಲ್ಲಿರುವುದರಿಂದ ಈ 60 ದಿನಗಳ ಕಾಲಮಿತಿಯು ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತದೆ ಅಥವಾ ನಿಲ್ಲುತ್ತದೆ ಎಂಬುದು ಶ್ವೇತಭವನದ ವಾದವಾಗಿದೆ.

ಟ್ರಂಪ್ ಆಡಳಿತದ ಈ ಹೊಸ ವ್ಯಾಖ್ಯಾನವನ್ನು ಡೆಮೋಕ್ರಾಟ್‌ಗಳು ತೀವ್ರವಾಗಿ ತಿರಸ್ಕರಿಸಿದ್ದಾರೆ. ಸೆನೆಟರ್ ಟಿಮ್ ಕೈನೆ ಮಾತನಾಡಿ, ಕಾನೂನಿನ ಚೌಕಟ್ಟಿನಲ್ಲಿ ಈ ವಾದಕ್ಕೆ ಮಾನ್ಯತೆ ಇಲ್ಲ ಮತ್ತು ಇದು ಯುದ್ಧದ ಕುರಿತು ಗಂಭೀರ ಕಾನೂನು ಪ್ರಶ್ನೆಗಳನ್ನು ಹುಟ್ಟುಹಾಕುತ್ತದೆ ಎಂದು ಎಚ್ಚರಿಸಿದ್ದಾರೆ. ಅಮೆರಿಕದ ಜನರ ಮೇಲೆ ಈ ಯುದ್ಧವನ್ನು ಅನಗತ್ಯವಾಗಿ ಹೇರಲಾಗಿದೆ ಎಂದು ವಿರೋಧ ಪಕ್ಷದ ನಾಯಕರು ಕಿಡಿಕಾರಿದ್ದಾರೆ.

ಮತ್ತಷ್ಟು ಓದಿ: ಹೃದಯಾಘಾತವಾಗಬಹುದು, ಟ್ರಂಪ್ ಶಾಂತಿ ಪ್ರಸ್ತಾವನೆ ತಿರಸ್ಕರಿಸಿದ ಬೆನ್ನಲ್ಲೇ ಇರಾನ್‌ನಿಂದ ಹೊಸ ಮಹಾಸ್ತ್ರ ಪ್ರಯೋಗ

ಕಾಂಗ್ರೆಸ್ ತನ್ನ ಅಧಿಕಾರವನ್ನು ಸೀಮಿತಗೊಳಿಸುತ್ತಿರುವುದನ್ನು ಆಗಾಗ ಟೀಕಿಸುವ ಅಧ್ಯಕ್ಷ ಟ್ರಂಪ್, ಮುಂದಿನ ಮಿಲಿಟರಿ ಆಯ್ಕೆಗಳ ಕುರಿತು ಶೀಘ್ರದಲ್ಲೇ ಉನ್ನತ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಲಿದ್ದಾರೆ. ಇರಾನ್ ಜೊತೆ ರಹಸ್ಯವಾಗಿ ಮಾತುಕತೆಗಳು ನಡೆಯುತ್ತಿವೆ ಮತ್ತು ಆ ದೇಶದ ಆರ್ಥಿಕತೆಯು ಅಮೆರಿಕದ ದಿಗ್ಬಂಧನದಿಂದಾಗಿ ಕುಸಿಯುತ್ತಿದೆ ಎಂದು ಟ್ರಂಪ್ ಪುನರುಚ್ಚರಿಸಿದ್ದಾರೆ.

ಶ್ವೇತಭವನ ಮತ್ತು ಕಾಂಗ್ರೆಸ್ ನಡುವಿನ ಈ ಕಾನೂನು ಸಂಘರ್ಷವು ಅಮೆರಿಕದ ವಿದೇಶಾಂಗ ನೀತಿಯಲ್ಲಿ ಹೊಸ ಬಿಕ್ಕಟ್ಟನ್ನು ಸೃಷ್ಟಿಸಿದ್ದು, ಇರಾನ್ ಜೊತೆಗಿನ ಶಾಂತಿ ಒಪ್ಪಂದವು ಯಾವ ದಿಕ್ಕಿನಲ್ಲಿ ಸಾಗಲಿದೆ ಎಂಬುದು ಇಡೀ ಜಗತ್ತಿನ ಕುತೂಹಲಕ್ಕೆ ಕಾರಣವಾಗಿದೆ.

ಅಂತಾರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

GT vs RCB: ಜಿಟಿ ಮಾಸ್ಟರ್ ಪ್ಲ್ಯಾನ್ ರಿವೀಲ್: ಗಿಲ್ ಟಾರ್ಗೆಟ್ ಮಾಡಿದ್ದು ಆರ್​ಸಿಬಿಯ ಈ ಒಬ್ಬ ವ್ಯಕ್ತಿಯನ್ನು – Kannada News | Gujarat Titans Master Plan Revealed Gill Targets josh hazlewood from RCB

ಬೆಂಗಳೂರು (ಮೇ. 01): ಐಪಿಎಲ್ 2026 ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಪರ ಭುವನೇಶ್ವರ್ ಕುಮಾರ್ ಮತ್ತು ಜೋಶ್ ಹ್ಯಾಜಲ್‌ವುಡ್ ಅದ್ಭುತ ಬೌಲಿಂಗ್ ಮಾಡುತ್ತಿದ್ದರು. ಹೊಸ ಚೆಂಡಿನಲ್ಲಿ ಅವರ ವಿರುದ್ಧ ರನ್ ಗಳಿಸುವುದು ಸುಲಭವಲ್ಲ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಹಿಂದಿನ ಪಂದ್ಯದಲ್ಲಿ ಅವರು ಎಂಟು ರನ್‌ಗಳಿಗೆ ಆರು ವಿಕೆಟ್‌ಗಳನ್ನು ಕಬಳಿಸಿದರು. ಆದರೆ, ಗುಜರಾತ್ ಟೈಟಾನ್ಸ್ ವಿರುದ್ಧ ಹಾಗಾಗಲಿಲ್ಲ. ಗುಜರಾತ್ ಆಕ್ರಮಣಕಾರಿ ಮನಸ್ಥಿತಿಯಲ್ಲಿ ಮೈದಾನಕ್ಕೆ ಇಳಿದು ಜೋಶ್ ಹ್ಯಾಜಲ್‌ವುಡ್ ಅನ್ನು ನೇರವಾಗಿ ಗುರಿಯಾಗಿಸಿಕೊಂಡಿತು.

ಹ್ಯಾಜಲ್‌ವುಡ್‌ನ ಅತ್ಯಂತ ದುಬಾರಿ ಐಪಿಎಲ್ ಓವರ್

ಎರಡನೇ ಓವರ್‌ನಲ್ಲಿ, ಶುಭ್‌ಮನ್ ಗಿಲ್ ಜೋಶ್ ಹ್ಯಾಜಲ್‌ವುಡ್ ಮೇಲೆ ಸ್ಫೋಟಕ ದಾಳಿ ನಡೆಸಿದರು. ಮೊದಲ ಎರಡು ಎಸೆತಗಳಲ್ಲಿ ಎರಡು ಬೌಂಡರಿಗಳನ್ನು ಬಾರಿಸಿದ ಗಿಲ್, ನಾಲ್ಕನೇ ಎಸೆತವನ್ನು ಲಾಂಗ್-ಆನ್‌ನಲ್ಲಿ ಸಿಕ್ಸರ್‌ಗೆ ಅಟ್ಟಿದರು. ನಂತರ ಮುಂದಿನ ಎರಡು ಎಸೆತಗಳಲ್ಲಿ ಒಂದು ಬೌಂಡರಿ ಮತ್ತು ಒಂದು ಸಿಕ್ಸರ್ ಬಾರಿಸಿ, ಆ ಓವರ್‌ನಲ್ಲಿ 24 ರನ್ ಗಳಿಸಿದರು. ಇದು ಐಪಿಎಲ್‌ನಲ್ಲಿ ಹ್ಯಾಜಲ್‌ವುಡ್ ಅವರ ಜಂಟಿ ಅತ್ಯಂತ ದುಬಾರಿ ಓವರ್ ಆಗಿದೆ. 2022 ರಲ್ಲಿ ಬ್ರಾಬೋರ್ನ್ ಕ್ರೀಡಾಂಗಣದಲ್ಲಿ ಅವರು 24 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು.

ಇದು ಜೋಶ್ ಹ್ಯಾಜಲ್‌ವುಡ್ ಅವರ ಐಪಿಎಲ್ ವೃತ್ತಿಜೀವನದ ಎರಡನೇ ಅತ್ಯಂತ ದುಬಾರಿ ಸ್ಪೆಲ್ ಆಗಿದೆ. ಅವರು ತಮ್ಮ 4 ಓವರ್‌ಗಳ ಸ್ಪೆಲ್‌ನಲ್ಲಿ 56 ರನ್‌ಗಳನ್ನು ಬಿಟ್ಟುಕೊಟ್ಟರು. ಆರ್‌ಸಿಬಿ ಗುಜರಾತ್‌ಗೆ 156 ರನ್‌ಗಳ ಗುರಿಯನ್ನು ನೀಡಿತ್ತು. ಇದರರ್ಥ ಗುಜರಾತ್ ಜೋಶ್ ಹ್ಯಾಜಲ್‌ವುಡ್ ಎಸೆದ ಕೇವಲ 24 ಎಸೆತಗಳಲ್ಲಿ ತಮ್ಮ ರನ್‌ಗಳಲ್ಲಿ ಸುಮಾರು 36 ಪ್ರತಿಶತವನ್ನು ಗಳಿಸಿತು. ಮೊದಲ ಓವರ್‌ನಲ್ಲಿ 24 ರನ್‌ಗಳನ್ನು ಬಿಟ್ಟುಕೊಟ್ಟ ನಂತರ, ಅವರು ಎರಡನೇ ಓವರ್‌ನಲ್ಲಿ 13 ರನ್‌ಗಳು, ಮೂರನೇ ಓವರ್‌ನಲ್ಲಿ 12 ರನ್‌ಗಳು ಮತ್ತು ನಾಲ್ಕನೇ ಓವರ್‌ನಲ್ಲಿ 7 ರನ್‌ಗಳನ್ನು ಬಿಟ್ಟುಕೊಟ್ಟರು. ಇದಕ್ಕೂ ಮೊದಲು, ಆರ್‌ಸಿಬಿ ಪರ ಆಡುವಾಗ, ಅವರು ಪಂಜಾಬ್ ಕಿಂಗ್ಸ್ ವಿರುದ್ಧ ನಾಲ್ಕು ಓವರ್‌ಗಳಲ್ಲಿ 64 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಈ ಮೂಲಕ ಜಿಟಿ ನೇರವಾಗಿ ಜೋಶ್ ಅವರನ್ನು ಟಾರ್ಗೆಟ್ ಮಾಡಿತು.

GT vs RCB, IPL 2026: ಮುಲಾಜಿಲ್ಲದೆ ಸೋಲಿಗೆ ಯಾರು ಕಾರಣ ಎಂದು ಖಡಕ್ ಆಗಿ ಹೇಳಿದ ರಜತ್ ಪಾಟಿದಾರ್

ಗಿಲ್ ಕೇವಲ 18 ಎಸೆತಗಳಲ್ಲಿ ನಾಲ್ಕು ಬೌಂಡರಿ ಮತ್ತು ಮೂರು ಸಿಕ್ಸರ್‌ಗಳೊಂದಿಗೆ 43 ರನ್ ಗಳಿಸಿದರು. ಜೋಸ್ ಬಟ್ಲರ್ 19 ಎಸೆತಗಳಲ್ಲಿ ನಾಲ್ಕು ಸಿಕ್ಸರ್ ಮತ್ತು ಎರಡು ಬೌಂಡರಿಗಳೊಂದಿಗೆ 39 ರನ್ ಗಳಿಸಿದರು. ಗುಜರಾತ್‌ನ ಗೆಲುವು ಖಚಿತವೆನಿಸಿದರೂ, ಅಲ್ಲಿಂದ ಗುಜರಾತ್‌ನ ವಿಕೆಟ್‌ಗಳು ಪತನವಾಗುತ್ತಲೇ ಇದ್ದವು. ವಾಷಿಂಗ್ಟನ್ ಸುಂದರ್ (12), ಶಾರುಖ್ ಖಾನ್ (8), ಮತ್ತು ಜೇಸನ್ ಹೋಲ್ಡರ್ (12) ನಿರ್ಗಮಿಸಿದರು. ಆದಾಗ್ಯೂ, ರಾಹುಲ್ ತೆವಾಟಿಯಾ ಅಜೇಯ 27 ರನ್‌ಗಳೊಂದಿಗೆ ತಮ್ಮ ತಂಡಕ್ಕೆ ಪಂದ್ಯವನ್ನು ಮುಗಿಸಿದರು. ಆರ್‌ಸಿಬಿ ಪರ ಭುವನೇಶ್ವರ್ ಕುಮಾರ್ (3) ಮತ್ತು ರೊಮಾರಿಯೊ ಶೆಫರ್ಡ್ (2) ಎರಡು ವಿಕೆಟ್‌ಗಳನ್ನು ಪಡೆದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಂಡ್ಯ ಜಿಲ್ಲೆಯಲ್ಲಿ 1,354 ಬಾಲಗರ್ಭಿಣಿಯರು ಪತ್ತೆ: ಲೋಕಾಯುಕ್ತ ತನಿಖೆಯಲ್ಲಿ ಸ್ಫೋಟಕ ಮಾಹಿತಿ ಬಯಲು! – Kannada News | Mandya Child Pregnancy Crisis: 1,354 Cases Reported in 5 Years; Lokayukta Exposes Illegal Scanning Racket

ಮಂಡ್ಯ ಜಿಲ್ಲೆಯಲ್ಲಿ ಬಾಲಗರ್ಭಿಣಿಯರ ಸಂಖ್ಯೆ ದಿನೇ ದಿನೇ ಏರಿಕೆImage Credit source: tv9

ಮಂಡ್ಯ, ಮೇ 1: ಮಂಡ್ಯ (Mandya) ಜಿಲ್ಲೆಯಲ್ಲಿ ಬಾಲಗರ್ಭಿಣಿಯರ ಸಂಖ್ಯೆ ದಿನೇ ದಿನೇ ಏರಿಕೆಯಾಗುತ್ತಿರುವುದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದೆ. ಆರೋಗ್ಯ ಇಲಾಖೆಯ ಆರ್‌ಸಿಎಚ್ (RCH) ಪೋರ್ಟಲ್ ನೀಡಿರುವ ಅಂಕಿಅಂಶಗಳ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಜಿಲ್ಲೆಯಲ್ಲಿ ಬರೋಬ್ಬರಿ 1,354 ಬಾಲಗರ್ಭಿಣಿ ಪ್ರಕರಣಗಳು ವರದಿಯಾಗಿವೆ. ಇದು ಜಿಲ್ಲೆಯ ಸಾಮಾಜಿಕ ಆರೋಗ್ಯದ ಮೇಲೆ ಗಂಭೀರ ಪ್ರಶ್ನೆಗಳನ್ನು ಎತ್ತಿದೆ.

ಅನೇಕ ಪೋಕ್ಸೋ ಪ್ರಕರಣಗಳಲ್ಲಿ ದಾಖಲಾಗಿಲ್ಲ ಕೇಸ್!

ವರದಿಯಾಗಿರುವ 1,354 ಪ್ರಕರಣಗಳ ಪೈಕಿ ಪೋಕ್ಸೋ (POCSO) ಕೇಸ್​ಗಳ ಸಂಖ್ಯೆ ಕೇವಲ ಕೇವಲ 674. ಅಂದರೆ ಅರ್ಧಕ್ಕಿಂತ ಹೆಚ್ಚು ಪ್ರಕರಣಗಳಲ್ಲಿ ಎಫ್‌ಐಆರ್ ದಾಖಲಾಗಿಲ್ಲ ಎಂಬ ಕಹಿ ಸತ್ಯ ಬಯಲಾಗಿದೆ. ಬಾಲ್ಯ ವಿವಾಹ, ಪ್ರೀತಿಯ ಜಾಲ, ಮತ್ತು ಲೈಂಗಿಕ ದೌರ್ಜನ್ಯದಂತಹ ಕಾರಣಗಳಿಂದಾಗಿ 14 ರಿಂದ 18 ವರ್ಷದೊಳಗಿನ ಬಾಲಕಿಯರು ಗರ್ಭಿಣಿಯರಾಗುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ಲೋಕಾಯುಕ್ತ ದಾಳಿ ವೇಳೆ ಬಯಲಾಯ್ತು ಸ್ಕ್ಯಾನಿಂಗ್ ದಂಧೆ

ಇತ್ತೀಚೆಗೆ ಕೆಆರ್ ಪೇಟೆಯ ಎರಡು ಖಾಸಗಿ ಡಯಾಗ್ನೋಸ್ಟಿಕ್ ಸೆಂಟರ್‌ಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದಾಗ ಮತ್ತಷ್ಟು ಆಘಾತಕಾರಿ ವಿಷಯಗಳು ಹೊರಬಂದಿವೆ. ಈ ಕೇಂದ್ರಗಳಲ್ಲಿ ನಿಯಮ ಬಾಹಿರವಾಗಿ 31 ಬಾಲಗರ್ಭಿಣಿಯರಿಗೆ ಸ್ಕ್ಯಾನಿಂಗ್ ನಡೆಸಿರುವುದು ತನಿಖೆ ವೇಳೆ ಪತ್ತೆಯಾಗಿದೆ. ಈ ಮೂಲಕ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಸ್ಕ್ಯಾನಿಂಗ್ ದಂಧೆಯ ಜಾಲ ಎಷ್ಟು ಆಳವಾಗಿ ಹರಡಿದೆ ಎಂಬುದು ಸಾಬೀತಾಗಿದೆ.

ಇದನ್ನೂ ಓದಿ: ಕರ್ನಾಟಕವನ್ನು ಬೆಚ್ಚಿಬೀಳಿಸಿದ್ದ ಕೇಸ್​ ಬೇಧಿಸಿದ ಖಾಕಿ: ಮಂಡ್ಯದಲ್ಲಿ ಹೆಣ್ಣು ಭ್ರೂಣ ಪತ್ತೆ, ಹತ್ಯೆಯ ಕಿಂಗ್‌ಪಿನ್ ಬಂಧನ

ಈ ಹಿಂದೆ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ಪ್ರಕರಣದಲ್ಲಿ ಮಂಡ್ಯ ಜಿಲ್ಲೆ ಕರ್ನಾಟಕವನ್ನೇ ಬೆಚ್ಚಿಬೀಳಿಸಿತ್ತು. ಮಂಡ್ಯದ ಆಲೆಮನೆ, ಹೆಲ್ತ್ ಕ್ವಾರ್ಟರ್ಸ್​, ತೋಟದ ಮನೆಗಳಲ್ಲಿ ಅವ್ಯಾಹತವಾಗಿ ಹೆಣ್ಣು ಭ್ರೂಣ ಪತ್ತೆ ಹಾಗೂ ಹತ್ಯೆ ನಡೆದಿರುವುದು ರಾಜ್ಯಾದ್ಯಂತ ಸಂಚಲಕ್ಕೆ ಕಾರಣವಾಗಿತ್ತು. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಸಿದ ಪೊಲೀಸರಿಗೆ, ಹೆಣ್ಣು ಭ್ರೂಣ ಹತ್ಯೆಯ ಕಬಂಧಬಾಹು ಮೈಸೂರಿನ ವರೆಗೆ ವಿಸ್ತರಿಸುವುರುವುದು ಗೊತ್ತಾಗಿತ್ತು. ಕೊನೆಯಲ್ಲಿ ಘಟನೆಯ ಕಿಂಗ್​ಪಿನ್​ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಇದೀಗ ಮಂಡ್ಯದಲ್ಲಿ ಬಾಲಗರ್ಭಿಣಿಯರ ಸಂಖ್ಯೆ ಹೆಚ್ಚಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಸೈಲೆಂಟ್ ಆಗಿ ಮದುವೆ ಆದ ಸ್ಟಾರ್ ನಟ – Kannada News | Bellamkonda Sai Sreenivas Weds Kavya Reddy: Viral Photos, Love Story and Age Gap Revealed

ಟಾಲಿವುಡ್‌ನ ಯುವ ನಟ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ವಿವಾಹ ಆಗಿದ್ದಾರೆ. ಬ್ಯಾಚುಲರ್ ಜೀವನಕ್ಕೆ ವಿದಾಯ ಹೇಳಿ ಕಾವ್ಯ ರೆಡ್ಡಿ ಎಂಬುವವರಿಗೆ ತಾಳಿ ಕಟ್ಟಿದ್ದಾರೆ. ಬುಧವಾರ (ಏಪ್ರಿಲ್ 29) ತಿರುಮಲದಲ್ಲಿ ವಿವಾಹ ನಡೆಯಿತು. ಕುಟುಂಬ ಸದಸ್ಯರು, ಸಂಬಂಧಿಕರು, ಸ್ನೇಹಿತರು ಮತ್ತು ಆಪ್ತರೊಂದಿಗೆ ವಿವಾಹ ಸಮಾರಂಭದಲ್ಲಿ ಭಾಗವಹಿಸಿದ್ದರು. ಅನೇಕ ಚಲನಚಿತ್ರ ಮತ್ತು ರಾಜಕೀಯ ಗಣ್ಯರು ಸಹ ನವವಿವಾಹಿತರನ್ನು ಆಶೀರ್ವದಿಸಿದರು. ಈ ಸಂದರ್ಭದಲ್ಲಿ, ಬೆಲ್ಲಂಕೊಂಡ ಶ್ರೀನಿವಾಸ್- ಕಾವ್ಯ ರೆಡ್ಡಿ ಅವರ ವಿವಾಹ ಸಮಾರಂಭಕ್ಕೆ ಸಂಬಂಧಿಸಿದ ಫೋಟೋಗಳು ಮತ್ತು ವೀಡಿಯೊಗಳು ಈಗ ಇಂಟರ್ನೆಟ್‌ನಲ್ಲಿ ವೈರಲ್ ಆಗಿವೆ.

ಶ್ರೀನಿವಾಸ್- ಕಾವ್ಯ ರೆಡ್ಡಿ ಅವರನ್ನು ನೋಡಿದ ನೆಟ್ಟಿಗರು ನವ ಜೋಡಿಗೆ ಅಭಿನಂದನೆ ಮತ್ತು ಶುಭಾಶಯ ಕೋರುತ್ತಿದ್ದಾರೆ. ಮೇ 01 ರಂದು ಹೈದರಾಬಾದ್‌ನಲ್ಲಿ ಟಾಲಿವುಡ್ ಸೆಲೆಬ್ರಿಟಿಗಳಿಗಾಗಿ ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಈ ವಿವಾಹ ಸಮಾರಂಭದ ಸಂದರ್ಭದಲ್ಲಿ, ಕಾವ್ಯ ರೆಡ್ಡಿ ಯಾರು? ಅವರು ಬೆಲ್ಲಂಕೊಂಡ ಶ್ರೀನಿವಾಸ್ ಅವರನ್ನು ಹೇಗೆ ಭೇಟಿಯಾದರು? ಇದು ಪ್ರೇಮ ವಿವಾಹವೇ? ಅಥವಾ ಇದು ಅರೇಂಜ್ ಮ್ಯಾರೇಜ್ ಆಗಿತ್ತೇ? ನೆಟ್ಟಿಗರು ಇದನ್ನು ಹುಡುಕುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಾವ್ಯ ಬಗ್ಗೆ ಕೆಲವು ಆಸಕ್ತಿದಾಯಕ ವಿಷಯಗಳು ಬೆಳಕಿಗೆ ಬಂದಿವೆ.

ಬೆಲ್ಲಂಕೊಂಡ ಶ್ರೀನಿವಾಸ್ ಅವರನ್ನು ಮದುವೆಯಾಗಲಿರುವ ಕಾವ್ಯ ರೆಡ್ಡಿಗೆ ಚಿತ್ರರಂಗದಲ್ಲಿ ಯಾವುದೇ ಸಂಬಂಧವಿಲ್ಲ. ಅವರು ಒಬ್ಬ ಪ್ರಮುಖ ವಕೀಲರ ಮಗಳು. ಇಬ್ಬರೂ ಕೆಲವು ಸಮಯದಿಂದ ಪ್ರೀತಿಸುತ್ತಿದ್ದರು ಮತ್ತು ಎರಡೂ ಕುಟುಂಬಗಳ ಹಿರಿಯರನ್ನು ಮನವೊಲಿಸಿದ ನಂತರ ಮದುವೆಯಾಗಿದ್ದಾರೆ.

ಇದನ್ನೂ ಓದಿ: ಗರ್ಲ್​​​ಫ್ರೆಂಡ್​​ನ ಅಭಿಮಾನಿಗಳಿಗೆ ಪರಿಚಯಿಸಿದ ಸ್ಟಾರ್ ನಟ

ನೆಟ್ಟಿಗರು ಸಾಯಿ ಶ್ರೀನಿವಾಸ್ ಮತ್ತು ಕಾವ್ಯ ರೆಡ್ಡಿ ನಡುವಿನ ವಯಸ್ಸಿನ ಅಂತರದ ಬಗ್ಗೆ ಚರ್ಚಿಸುತ್ತಿದ್ದಾರೆ. 1993 ರಲ್ಲಿ ಜನಿಸಿದ ಬೆಲ್ಲಂಕೊಂಡ ಸಾಯಿ ಶ್ರೀನಿವಾಸ್ ಅವರಿಗೆ ಪ್ರಸ್ತುತ 33 ವರ್ಷ. ಆದರೆ, ಕಾವ್ಯ ರೆಡ್ಡಿ ನಾಯಕನಿಗಿಂತ ಸುಮಾರು ನಾಲ್ಕರಿಂದ ಐದು ವರ್ಷ ಚಿಕ್ಕವರು ಎಂದು ವರದಿಯಾಗಿದೆ. ಇದರರ್ಥ ಅವರು ಸುಮಾರು 28 ವರ್ಷ ವಯಸ್ಸಿನವರಾಗಿರಬಹುದು.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ಇದೇ ಮಾದರಿಯ ಕ್ಯಾಚ್ ಅಂದು ನಾಟ್​​ ಔಟ್, ಇಂದು ಔಟ್; ಇದೆಂತಹ ನ್ಯಾಯ? – Kannada News | Rajat Patidar’s Controversial Catch Sparks Debate – Starc’s Not Out vs Today’s Out

ಗುಜರಾತ್ ಟೈಟನ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವಿನ ಪಂದ್ಯದಲ್ಲಿ ಆರ್​​​ಸಿಬಿ ಕ್ಯಾಪ್ಟನ್ ರಜತ್ ಪಟಿದಾರ್ ಅವರ ಕ್ಯಾಚ್ ಈಗ ಚರ್ಚೆಯ ಕೇಂದ್ರ ಬಿಂದು ಆಗಿದೆ. ಕೆಲವರು ಇದನ್ನು ನಾಟೌಟ್​ ಎಂದರೆ ಇನ್ನೂ ಕೆಲವರು ಔಟ್ ಎನ್ನುತ್ತಿದ್ದಾರೆ. ಹೀಗಿರುವಾಗಲೇ ಈ ಮೊದಲು ಮಿಚೆಲ್ ಸ್ಟಾರ್ಕ್​ ಅವರು ಅಂತಾರಾಷ್ಟ್ರೀಯ ಪಂದ್ಯದಲ್ಲಿ ಇದೇ ಮಾದರಿಯ ಕ್ಯಾಚ್ ಹಿಡಿದಿದ್ದರು. ಇದನ್ನು ನಾಟೌಟ್ ಎಂದು ಕೊಡಲಾಗಿತ್ತು. ಆದರೆ, ಇದೇ ಮಾದರಿಯ ಕ್ಯಾಚ್​​ ಅನ್ನು ಔಟ್ ಎಂದು ಕೊಡಲಾಗಿದೆ.

ರಜತ್ ಪಟಿದಾರ್ ಅವರು ಸಿಕ್ಸ್ ಹೊಡೆಯುವ ಪ್ರಯತ್ನ ಮಾಡಿದರು. ಆದರೆ, ಬಾಲ್ ಬೌಂಡರಿ ಗಡಿ ದಾಟಲು ವಿಫಲವಾಯಿತು. ಈ ವೇಳೆ ಓಡೋಡಿ ಬಂದ ಹೋಲ್ಡರ್ ಅವರು, ಕ್ಯಾಚ್​​​ಅನ್ನು ಹಿಡಿದೇ ಬಿಟ್ಟರು. ಬಾಲ್ ಅವರ ಕೈಯಲ್ಲಿ ಕುಳಿತಿತ್ತು ನಿಜ, ಆದರೆ, ನಂತರ ಬಾಲ್ ನೆಲಕ್ಕೆ ತಿಕ್ಕಿತ್ತು. ಆದಾಗ್ಯೂ ಥರ್ಡ್​ ಅಂಪೈರ್ ಔಟ್ ಎಂದರು ಕೊಟ್ಟರು.

ಮಿಚೆಲ್ ಸ್ಟಾರ್ಕ್ 2023ರ ಆಶಸ್ ಸರಣಿಯಲ್ಲಿ ಬೆನ್ ಡಕೆಟ್ ಅವರ ಕ್ಯಾಚ್ ಹಿಡಿದಿದ್ದರು. ಅಲ್ಲಿ ಸ್ಟಾರ್ಕ್ ಚೆಂಡನ್ನು ಹಿಡಿದ ನಂತರ ನೆಲಕ್ಕೆ ಉಜ್ಜುತ್ತಾ ಹೋದರು. ಆದರೆ ಅವರು ಚೆಂಡಿನ ಮೇಲೆ ‘ಸಂಪೂರ್ಣ ನಿಯಂತ್ರಣ’ (Complete Control) ಹೊಂದಿಲ್ಲ ಎಂದು ನಿರ್ಧರಿಸಿ ಅಂಪೈರ್ ಅದನ್ನು ‘ನಾಟ್ ಔಟ್’ ನೀಡಿದ್ದರು. ಈಗ ಅದನ್ನು ಔಟ್ ಎಂದು ಕೊಡಲಾಗಿದೆ. ಈ ಬಗ್ಗೆ ಒಬ್ಬರು ಒಂದೊಂದು ಅಭಿಪ್ರಾಯ ಹೊರಹಾಕುತ್ತಿದ್ದಾರೆ.

ಕ್ರಿಕೆಟ್‌ನಲ್ಲಿ ಇದು ಸದಾ ವಿವಾದಕ್ಕೆ ಗುರಿಯಾಗುವ ವಿಷಯ. ಅಂಪೈರ್ ದೃಷ್ಟಿಯಲ್ಲಿ ಫೀಲ್ಡರ್ ಚೆಂಡನ್ನು ಹಿಡಿದು ‘ನಿಯಂತ್ರಣ’ ಸಾಧಿಸಿದ್ದಾರೆಯೇ ಅಥವಾ ಇಲ್ಲವೇ ಎಂಬ ಜಡ್ಜ್‌ಮೆಂಟ್ ಮೇಲೆ ಇದು ನಿರ್ಧಾರವಾಗುತ್ತದೆ. ಸ್ಟಾರ್ಕ್ ಪ್ರಕರಣದಲ್ಲಿ ಅವರು ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಸಾಧಿಸುವ ಮೊದಲೇ ನೆಲಕ್ಕೆ ತಗುಲಿತ್ತು ಎಂಬುದು ಅಂಪೈರ್ ವಾದವಾಗಿತ್ತು.

ನಿಯಮ ಏನು ಹೇಳುತ್ತದೆ?

ಎಂಸಿಸಿ (ಮೆರಿಲಿಬೋನ್ ಕ್ರಿಕೆಟ್ ಕ್ಲಬ್) ನಿಯಮ 33.2.1 ರ ಪ್ರಕಾರ, ಒಬ್ಬ ಫೀಲ್ಡರ್ ಕ್ಯಾಚ್ ಹಿಡಿದಾಗ ಆತ ತನ್ನ ಶರೀರದ ಚಲನೆ ಮತ್ತು ಚೆಂಡಿನ ಮೇಲೆ ಸಂಪೂರ್ಣ ನಿಯಂತ್ರಣ ಹೊಂದಿದ್ದರೆ, ಆನಂತರ ಚೆಂಡು ನೆಲಕ್ಕೆ ತಗುಲಿದರೂ ಅದನ್ನು ‘ಔಟ್’ ಎಂದೇ ಪರಿಗಣಿಸಲಾಗುತ್ತದೆ ಎಂದಿದೆ. ಈ ನಿಯಮದ ಅಡಿ ಔಟ್ ಕೊಟ್ಟಿರಬಹುದು ಎನ್ನಲಾಗಿದೆ.

ಮತ್ತಷ್ಟು ಕ್ರಿಕೆಟ್ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ..

Published On – 7:47 am, Fri, 1 May 26

Source link