ಕೇಕ್ ಕಿರಿಕ್: ಜಿಮ್‌ನಲ್ಲಿ ಮೂವರನ್ನು ಹತ್ಯೆಗೈದಿದ್ದ ವ್ಯಕ್ತಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಸಾವು – Kannada News | Uttar Pradesh: Jeetu Saini, Gym Triple Murder Suspect Over Birthday Cake, Killed in Police Encounter
ಬುಲಂದ್‌ಶಹರ್, ಮೇ 01: ಕೇಕ್ ವಿಚಾರಕ್ಕೆ ಜಗಳವಾಡಿ ಜಿಮ್‌ನಲ್ಲಿ ಮೂವರನ್ನು ಹತ್ಯೆ(Murder)ಗೈದಿದ್ದ ವ್ಯಕ್ತಿ ಪೊಲೀಸ್ ಎನ್‌ಕೌಂಟರ್‌ನಲ್ಲಿ ಮೃತಪಟ್ಟಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ. ಏಪ್ರಿಲ್ 25ರಂದು ಆತ ಮೂರು ಕೊಲೆಗಳನ್ನು ಮಾಡಿ ಬಳಿಕ ಪರಾರಿಯಾಗಿದ್ದ, ಆತನನ್ನು ಹಿಡಿದುಕೊಟ್ಟವರಿಗೆ 50 ಸಾವಿರ ರೂ. ಕೊಡುವುದಾಗಿ ಪೊಲೀಸರು ಘೋಷಿಸಿದ್ದರು. ಜೀತು ಸೈನಿ, ಪೊಲೀಸರೊಂದಿಗಿನ ಗುಂಡಿನ ಚಕಮಕಿಯಲ್ಲಿ ಸಾವನ್ನಪ್ಪಿದ್ದಾನೆ. ಧಾರೌ ಪೊಲೀಸ್ ಹೊರಠಾಣೆ ಬಳಿ ನಡೆದ ಈ ಎನ್‌ಕೌಂಟರ್‌ನಲ್ಲಿ ಇಬ್ಬರು ಪೊಲೀಸ್ ಸಿಬ್ಬಂದಿಯೂ ಗಾಯಗೊಂಡಿದ್ದಾರೆ. ಗುರುವಾರ ಮುಂಜಾನೆ ಸ್ಕೂಟರ್‌ನಲ್ಲಿ ಬಂದ ಇಬ್ಬರು…