Category Archives: Blog

Your blog category

ಧಾರವಾಡ ವಿದ್ಯಾರ್ಥಿ ಆತ್ಮಹತ್ಯೆ ಕೇಸ್: ಮೂವರು ಪೇದೆ ಬೆನ್ನಲ್ಲೇ ಇನ್ಸ್​​ಪೆಕ್ಟರ್​​ ತಲೆದಂಡ – Kannada News | Dharwad Aditya Suicide Case: vidyagiri Police Station Inspector Rafiq Suspended

ಆದಿತ್ಯಾ, ರಫೀಕ್ (ಇನ್ಸ್​​ಪೆಕ್ಟರ್)

ಧಾರವಾಡ, (ಏಪ್ರಿಲ್ 30): ವಿದ್ಯಾರ್ಥಿ  ಆದಿತ್ಯ ಮ್ಯಾಗೇರಿ ಆತ್ಮಹತ್ಯೆ ಪ್ರಕರಣ (Dharwad Aditya Suicide Case) ರಾಜಕೀಯ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆಯೇ ಧಾರವಾಡದ ವಿದ್ಯಾಗಿರಿ ಪೊಲೀಸ್ ಠಾಣೆಯ ಇನ್ಸ್​ಪೆಕ್ಟರ್​​ನನ್ಜು ಅಮಾನತು ಮಾಡಲಾಗಿದೆ. ವಿದ್ಯಾಗಿರಿ ಠಾಣೆಯ ಇನ್ಸ್‌ಪೆಕ್ಟರ್ ರಫೀಕ್‌ ನನ್ನು ಅಮಾನತು ಮಾಡಿ ಹುಬ್ಬಳ್ಳಿ ಧಾರವಾಡ ನಗರ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ. ಹೆಡ್ ಕಾನ್ಸ್ಟೇಬಲ್ ಚಂದ್ರು ನಡುವಿನಮನಿ, ಕಿರಣ್ ಡೊಕ್ಕಣ್ಣನವರ್ ಮತ್ತು ಸಯ್ಯದ್ ನನ್ನು ನಿನ್ನೆ (ಏಪ್ರಿಲ್ 29) ಅಮಾನತು ಮಾಡಲಾಗಿತ್ತು. ಆದ್ರೆ, ಪ್ರಕರಣ ಗಂಭೀರ ಪಡೆದುಕೊಳ್ಳುತ್ತಿದ್ದಂತೆಯೇ ಇಂದು (ಏಪ್ರಿಲ್ 30) ಇನ್ಸ್​ಪೆಕ್ಟರ್​​ನನ್ನು ಸಹ ಸಸ್ಪೆಂಡ್​ ಮಾಡಲಾಗಿದೆ.

ಗಾಂಜಾ ಸೇವನೆ ಆರೋಪದಡಿ ವಿದ್ಯಾರ್ಥಿ ಆದಿತ್ಯನನ್ನು ವಶಕ್ಕೆ ಪಡೆಯಲಾಗಿತ್ತು. ಪರೀಕ್ಷೆಯಲ್ಲಿ ಗಾಂಜಾ ಸೇವನೆ ನೆಗೆಟಿವ್ ಬಂದಿದ್ದರೂ, ಪೊಲೀಸರು ಆದಿತ್ಯನಿಂದ 2,000 ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದರು. ತಾಯಿಯಿಂದ ಹಣ ಕೊಡಿಸಲು ಆದಿತ್ಯ ಯತ್ನಿಸಿದ್ದು, ಆದ್ರೆ, ತಾಯಿ ನಿರಾಕರಿಸಿದ ಕಾರಣ ಧಾರವಾಡದ ಕಿಟಲ್ ಕಾಲೇಜಿನಲ್ಲಿ ಬಿಎಸ್‌ಸಿ ಓದುತ್ತಿದ್ದ ಆದಿತ್ಯ ಮಗ್ಯಾಗೇರಿ ಮಂಗಳವಾರ (ಏ.28) ನೇಣಿಗೆ ಶರಣಾಗಿದ್ದ.

ಇದನ್ನೂ ನೋಡಿ: ಧಾರವಾಡದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಪ್ರಕರಣ: ಮೂವರು ಪೊಲೀಸ್​ ಸಿಬ್ಬಂದಿಗೆ ಬಿಗ್​​ ಶಾಕ್​​

ಸೋಮವಾರ ರಾತ್ರಿ ಆದಿತ್ಯ ತನ್ನ ಬಾಡಿಗೆ ಮನೆಯಲ್ಲಿ ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದ. ಪೊಲೀಸರ ಕಿರುಕುಳ ಮತ್ತು ಹಣದ ಬೇಡಿಕೆಯ ಒತ್ತಡವೇ ಈ ಭೀಕರ ಘಟನೆಗೆ ಕಾರಣ ಎಂದು ಅವರ ಕುಟುಂಬ ಆರೋಪಿಸಿದ್ದರು.

ಇನ್ನು, ಆದಿತ್ಯ ಮ್ಯಾಗೇರಿ ಆತ್ಮಹತ್ಯೆ ವಿರೋಧಿಸಿ ಜಿಲ್ಲಾಧಿಕಾರಿ ಕಚೇರಿ ಎದುರು ನೂರಾರು ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಪೊಲೀಸರ ಮೇಲೆ ದೂರು ದಾಖಲಿಸಿಕೊಂಡು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ವಿದ್ಯಾರ್ಥಿಗಳು ಆಗ್ರಹಿಸಿದ್ದರು. ಆ ವೇಳೆ ಕಮಿಷನರ್ ಶಶಿಕುಮಾರ್ ಪ್ರತಿಕ್ರಿಯಿಸಿ, ಪ್ರಕರಣದಲ್ಲಿ ಯಾರೇ ಭಾಗಿಯಾಗಿದ್ದರೂ ಅವರನ್ನು ರಕ್ಷಣೆ ಮಾಡಲ್ಲ ಎಂದಿದ್ದರು. ಇದರ ಬೆನ್ನಲ್ಲೇ ವಿದ್ಯಾಗಿರಿ ಪೊಲೀಸ್ ಠಾಣೆಯ ಮೂವರು ಪೇದೆಗಳನ್ನು ಸಸ್ಪೆಂಡ್​​ ಮಾಡಲಾಗಿತ್ತು. ಆದರೂ ವಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಈ ಪ್ರಕರಣದ ಬಗ್ಗೆ ಧ್ವನಿ ಎತ್ತಿದ್ದು,ಗೃಹ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು, ಇದರ ಬೆನ್ನಲ್ಲೇ ಇದೀಗ ಇನ್ಸ್​​ಪೆಕ್ಟರ್​​ ರಫೀಕ್ ನನ್ನು ಸಹ ಅಮಾನತು ಮಾಡಲಾಗಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 6:38 pm, Thu, 30 April 26

Source link

ಬೆಂಗಳೂರಿನಲ್ಲಿ ಮಳೆಯಿಂದ ಅವಾಂತರ ಬೆನ್ನಲ್ಲೇ ಸರ್ಕಾರ ಅಲರ್ಟ್: ಅಧಿಕಾರಿಗಳಿಗೆ ಸಿಎಂ ಖಡಕ್ ಸೂಚನೆ – Kannada News | Bengaluru Rain Disaster: CM Siddaramaiah Orders Immediate Action, Boosts Monsoon Preparedness

ಹಿರಿಯ ಅಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆImage Credit source: x.com/siddaramaiah

ಬೆಂಗಳೂರು, ಏಪ್ರಿಲ್​​ 30: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ಗೋಡೆ ಕುಸಿದು (Bowring Hospital Wall Collapse) ಏಳು ಜನರ ಸಾವಿಗೆ ಕಾರಣವಾಗಿರುವ ಹಿನ್ನೆಲೆಯಲ್ಲಿ ಸಂಬಂಧಪಟ್ಟ ಕಾರ್ಯಪಾಲಕ ಇಂಜಿನಿಯರ್ ಅಮಾನತುಗೊಳಿಸಿ, ನೋಟಿಸ್ ಜಾರಿ ಮಾಡುವಂತೆ ಸಿಎಂ ಸಿದ್ದರಾಮಯ್ಯ (CM Siddaramaiah) ಅಧಿಕಾರಿಗಳಿಗೆ ಖಡಕ್​ ಸೂಚನೆ ನೀಡಿದ್ದಾರೆ.

ಬುಧವಾರ ಸುರಿದ ಭಾರಿ ಮಳೆಯಿಂದಾಗಿ ಬೌರಿಂಗ್ ಆಸ್ಪತ್ರೆಯ ಗೋಡೆ ಕುಸಿದು, ಏಳು ಮಂದಿ ಸಾವನ್ನಪ್ಪಿದ ಹಿನ್ನೆಲೆ ಇಂದು ವಿಧಾನಸೌಧದ ಸಿಎಂ ಕೊಠಡಿಯಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಆಯುಕ್ತರೊಂದಿಗೆ ಸಿಎಂ ಸಿದ್ದರಾಮಯ್ಯ ಸಭೆ ಮಾಡಿದರು. ಗೋಡೆಗೆ ಹಾನಿ ಆಗಲಿದೆ ಎಂದು ತಿಳಿದಿದ್ದರೂ ಕಾಮಗಾರಿ ನಡೆಯುವಾಗ ಮಣ್ಣು ಸುರಿದದ್ದು ಏಕೆ ಎಂದು ಸಭೆಯಲ್ಲಿ ಬೌರಿಂಗ್‌ ಆಸ್ಪತ್ರೆ ಮುಖ್ಯಸ್ಥರನ್ನು ಸಿಎಂ ತರಾಟೆಗೆ ತೆಗೆದುಕೊಂಡರು. ಕೂಡಲೇ ಸಂಬಂಧಪಟ್ಟ ಇಇ ಅಮಾನತುಗೊಳಿಸುವಂತೆ ತಿಳಿಸಿದರು.

ಸಿಎಂ ಸಿದ್ದರಾಮಯ್ಯ ಟ್ವೀಟ್​​

ಕೇವಲ ಒಂದು ಗಂಟೆಯ ಮಳೆಗೆ ನಗರದಲ್ಲಿ 250ಕ್ಕೂ ಹೆಚ್ಚು ಮರಗಳು ಉರುಳಿಬಿದ್ದಿರುವ ಮತ್ತು ರಸ್ತೆಗಳು ಜಲಾವೃತವಾಗಿರುವ ಬಗ್ಗೆ ಅಧಿಕಾರಿಗಳ ವಿರುದ್ಧ ಗರಂ ಆದ ಸಿಎಂ ಸಿದ್ದರಾಮಯ್ಯ, 90 ಮಿ.ಮೀ. ಮಳೆಯಾದರೂ ಯಾಕೆ ಸೂಕ್ತ ಕ್ರಮಕೈಗೊಂಡಿಲ್ಲ ಎಂದು ಪ್ರಶ್ನಿಸಿದರು.

ಮುಂಗಾರು ಮಳೆ ಆರಂಭಕ್ಕೂ ಮೊದಲೇ ಅಗತ್ಯ ಸಿದ್ಧತೆಗೆ ಸಿಎಂ ಸೂಚನೆ

ನಗರದ ಮೂಲಸೌಕರ್ಯ ನಿರ್ವಹಣೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ ಸಿಎಂ, ಮುಂಗಾರು ಮಳೆ ಪ್ರಾರಂಭವಾಗುವ ಮೊದಲೇ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು. ಬೆಂಗಳೂರಿನ ಐದೂ ವಲಯಗಳ ಆಯುಕ್ತರು ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ರಸ್ತೆ ಗುಂಡಿಗಳನ್ನು ತುರ್ತಾಗಿ ಮುಚ್ಚಬೇಕು, ರಾಜಕಾಲುವೆಗಳಲ್ಲಿನ ಹೂಳನ್ನು ತೆರವುಗೊಳಿಸಬೇಕು ಮತ್ತು ಅಂಡರ್ ಪಾಸ್​ಗಳಲ್ಲಿ ಮಳೆ ನೀರು ನಿಲ್ಲದಂತೆ ನೋಡಿಕೊಳ್ಳಬೇಕು ಎಂದರು. ಒಂದು ವೇಳೆ ಅಂಡರ್ ಪಾಸ್​ಗಳಲ್ಲಿ ನೀರು ತುಂಬಿದರೆ ಪಂಪ್ ಸೆಟ್ ಬಳಸಿ ಕೂಡಲೇ ನೀರು ಹೊರಹಾಕಲು ವ್ಯವಸ್ಥೆ ಮಾಡಬೇಕು ಹಾಗೂ ಅಗತ್ಯಬಿದ್ದರೆ ಅಂಡರ್ ಪಾಸ್ ಮುಚ್ಚುವಂತೆಯೂ ನಿರ್ದೇಶನ ನೀಡಿದ್ದಾರೆ.

ಇದನ್ನೂ ಓದಿ: ಬೆಂಗಳೂರಿನಲ್ಲಿ ಮಳೆಯಿಂದ ಸರಣಿ ಅವಾಂತರ: ಇನ್ಮುಂದೆ ಫುಟ್‌ಪಾತ್​ನಲ್ಲಿ ವ್ಯಾಪಾರಕ್ಕೆ ಬ್ರೇಕ್!

ಇನ್ನು ಮುಂಜಾಗ್ರತಾ ಕ್ರಮವಾಗಿ, ನಗರದಲ್ಲಿ ಶಿಥಿಲಗೊಂಡಿರುವ ಸರ್ಕಾರಿ ಮತ್ತು ಖಾಸಗಿ ಕಟ್ಟಡಗಳ ಬಗ್ಗೆ ಸಮಗ್ರ ವರದಿ ಸಿದ್ಧಪಡಿಸುವಂತೆ ಸೂಚಿಸಿದ ಸಿದ್ದರಾಮಯ್ಯ, ಅಪಾಯಕಾರಿ ಸ್ಥಿತಿಯಲ್ಲಿರುವ ಖಾಸಗಿ ಕಾಂಪೌಂಡ್ ಹಾಗೂ ಕಟ್ಟಡಗಳ ಮಾಲೀಕರಿಗೆ ಕೂಡಲೇ ನೋಟಿಸ್ ಜಾರಿ ಮಾಡಲು ತಿಳಿಸಿದರು. ಅಲ್ಲದೆ, ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ, ಅಪಾಯದ ಸ್ಥಿತಿಯಲ್ಲಿರುವ ವಿದ್ಯುತ್ ಕಂಬಗಳು ಮತ್ತು ಒಣಗಿದ ಮರಗಳ ರೆಂಬೆಗಳನ್ನು ಆಡಿಟ್ ಮಾಡಿ ಕೂಡಲೇ ತೆರವುಗೊಳಿಸುವಂತೆ ಜಿಬಿಎ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.

ವರದಿ: ಈರಣ್ಣ ಬಸವ

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

Published On – 6:29 pm, Thu, 30 April 26

Source link

Video: ಜೀವದ ಜೊತೆ ಚೆಲ್ಲಾಟ; ರೈಲು ನಿಲ್ಲುವ ಮುನ್ನವೇ ಜಿಗಿದ ವ್ಯಕ್ತಿ, ಮುಂದೇನಾಯಿತು ನೋಡಿ – Kannada News | Moving Train Accident: Man Falls While De boarding, Highlighting Urgent Railway Safety Risks

ಚಲಿಸುತ್ತಿದ್ದ ರೈಲಿನಿಂದ ಇಳಿಯಲು ಸಾಹಸ ಮಾಡಿ ವ್ಯಕ್ತಿಯೊಬ್ಬ ರೈಲ್ವೆ ಪ್ಲಾಟ್‌ಫಾರ್ಮ್ ಮೇಲೆ ಬಿದ್ದು ಪೆಟ್ಟು ಮಾಡಿಕೊಂಡಿರುವ ಘಟನೆ ನಡೆದಿದೆ. ಚಲಿಸುತ್ತಿರುವ ರೈಲಿನ ಬಾಗಿಲಿನಲ್ಲಿ ನಿಂತಿದ್ದ ವ್ಯಕ್ತಿಯೊಬ್ಬ ರೈಲು ಪ್ಲಾಟ್‌ಫಾರ್ಮ್ ಅನ್ನು ಪ್ರವೇಶಿಸುತ್ತಿದ್ದಂತೆ ಕೆಳಕ್ಕೆ ಜಿಗಿದಿದ್ದು, ವೇಗವಾಗಿ ರೈಲು ಚಲಿಸುತ್ತಿದ್ದ ಪರಿಣಾಮ ಸಮತೋಲನ ತಪ್ಪಿ ನೆಲಕ್ಕೆ ಅಪ್ಪಳಿಸಿದ್ದಾನೆ. ಈ ಭೀಕರ ದೃಶ್ಯವು ಕ್ಯಾಮೆರಾದಲ್ಲಿ ಸೆರೆಯಾಗಿದ್ದು, ಜೀವಕ್ಕೆ ಅಪಾಯ ತರುವ ಇಂತಹ ಸಾಹಸಗಳು ಎಷ್ಟು ಅಪಾಯಕಾರಿ ಎಂಬುದಕ್ಕೆ ಇದು ಸಾಕ್ಷಿಯಾಗಿದೆ. ರೈಲ್ವೆ ಪ್ಲಾಟ್‌ಫಾರ್ಮ್‌ಗಳಲ್ಲಿ ರೈಲು ಸಂಪೂರ್ಣವಾಗಿ ನಿಲ್ಲುವ ಮುನ್ನ ಇಳಿಯುವುದು ಅಥವಾ ಹತ್ತುವುದು ಕಾನೂನುಬಾಹಿರ ಮತ್ತು ಪ್ರಾಣಾಪಾಯಕ್ಕೆ ಆಹ್ವಾನ ನೀಡಿದಂತೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ. ಇಂತಹ ಬೇಜವಾಬ್ದಾರಿಯುತ ನಡವಳಿಕೆಗಳು ತೀವ್ರ ಗಾಯ ಅಥವಾ ಸಾವಿಗೆ ಕಾರಣವಾಗಬಹುದು, ಆದ್ದರಿಂದ ಪ್ರಯಾಣಿಕರು ಯಾವಾಗಲೂ ರೈಲು ನಿಂತ ನಂತರವೇ ಇಳಿಯಬೇಕು ಎಂದು ತಿಳಿಸಲಾಗಿದೆ.

ವಿಡಿಯೋ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕದಲ್ಲಿ ಹೊರರಾಜ್ಯ ನೋಂದಣಿ ವಾಹನ ಹೊಂದಿರುವವರಿಗೆ ಸರ್ಕಾರದಿಂದ ಬಿಗ್​ ಶಾಕ್ – Kannada News | New Karnataka Vehicle Tax: Out of State Cars and EVs Face Mandatory Payment Rules

ಬೆಂಗಳೂರು, ಏ,30: ರಾಜ್ಯದಲ್ಲಿ ಹೊರರಾಜ್ಯದ ವಾಹನಗಳ ಸಂಚಾರ ಹೆಚ್ಚಾಗಿದೆ. ಇದರಿಂದ ಪರಿಸರ ಮಾಲಿನ್ಯ ಆಗುತ್ತಿದೆ. ದೆಹಲಿ ಸೇರಿದಂತೆ ದೇಶದ ಅನೇಕ ರಾಜ್ಯಗಳಿಂದ ನೋಂದಣಿ ಆಗಿರುವ ವಾಹನಗಳು ಬರುತ್ತಿದೆ. ಹೆಚ್ಚಾಗಿ ದೆಹಲಿಯಿಂದ ವಾಹನಗಳು ಬೆಂಗಳೂರು ಸೇರಿದಂತೆ ರಾಜ್ಯದ ಅನೇಕು ಕಡೆ ಬಂದಿದೆ. ಇದರಿಂದ ರಾಜ್ಯದಲ್ಲಿ ಗಾಳಿಯ ಮಟ್ಟ, ಪರಿಸರ ಮಾಲಿನ್ಯ ಉಂಟಾಗುತ್ತಿದೆ. ಇದನ್ನು ತಡೆಯಲು ರಾಜ್ಯದ ಸರ್ಕಾರ ಹೊಸ ಪ್ಲಾನ್​​ ಒಂದನ್ನು ಮಾಡಿದೆ. ರಾಜ್ಯದಲ್ಲಿ ಸಂಚರಿಸುತ್ತಿರುವ ಹೊರರಾಜ್ಯ ನೋಂದಣಿಯ ವಾಹನಗಳಿಂದ ತೆರಿಗೆ ಸಂಗ್ರಹಿಸಲು ಕರ್ನಾಟಕ ಸರ್ಕಾರವು ಕರ್ನಾಟಕ ಮೋಟಾರು ವಾಹನಗಳ ತೆರಿಗೆ ವಿಧಿಸುವಿಕೆ (ತಿದ್ದುಪಡಿ) ಸುಗ್ರೀವಾಜ್ಞೆಯನ್ನು ಜಾರಿಗೆ ತಂದಿದೆ. ಇದರಿಂದಾಗಿ ಬೇರೆ ರಾಜ್ಯಗಳಲ್ಲಿ ನೋಂದಣಿಯಾಗಿ ಕರ್ನಾಟಕದಲ್ಲಿ ಖಾಯಂ ಆಗಿ ಬಳಸಲ್ಪಡುವ ವಾಹನ ಮಾಲೀಕರು ಇನ್ನು ಮುಂದೆ ರಾಜ್ಯ ಸರ್ಕಾರಕ್ಕೆ ತೆರಿಗೆ ಪಾವತಿಸುವುದು ಕಡ್ಡಾಯವಾಗಲಿದೆ.

ಹೊರರಾಜ್ಯಗಳಲ್ಲಿ ನೋಂದಣಿಯಾಗಿ, ಕರ್ನಾಟಕದಲ್ಲಿ ಸತತವಾಗಿ ಸಂಚರಿಸುವ ಕಾರು, ಜೀಪು, ಮಿನಿ ಬಸ್ ಹಾಗೂ ದ್ವಿಚಕ್ರ ವಾಹನಗಳಿಗೆ ಈ ನಿಯಮ ಅನ್ವಯಿಸುತ್ತದೆ. 10 ಲಕ್ಷ ರೂ.ದಿಂದ 15 ಲಕ್ಷ ರೂ.ದವರೆಗಿನ ವಾಹನಗಳಿಗೆ ಶೇ. 15 ರಷ್ಟು ತೆರಿಗೆ ವಿಧಿಸಲು ನಿರ್ಧರಿಸಲಾಗಿದೆ. 15 ಲಕ್ಷ ರೂ.ಕ್ಕಿಂತ ಅಧಿಕ ಮೌಲ್ಯದ ವಾಹನಗಳಿಗೆ ಶೇ. 18 ರಷ್ಟು ತೆರಿಗೆ ಪಾವತಿಸಬೇಕಾಗುತ್ತದೆ. ಇನ್ನು ಹಳೆಯ ವಾಹನಗಳಿಗೆ ವಾಹನದ ವಯಸ್ಸು ಮತ್ತು ಸವೆತದ ಆಧಾರದ ಮೇಲೆ ತೆರಿಗೆಯ ದರದಲ್ಲಿ ವ್ಯತ್ಯಾಸವಿರುತ್ತದೆ. ಇದರ ಜತೆಗೆ ಇವಿ (EV) ವಾಹನಗಳಿಗೂ ತೆರಿಗೆ ಇದೆ ಎಂದು ಹೇಳಲಾಗಿದೆ. ಈ ಮೊದಲು ಎಲೆಕ್ಟ್ರಿಕ್ ವಾಹನಗಳಿಗೆ ನೀಡಲಾಗಿದ್ದ ತೆರಿಗೆ ವಿನಾಯಿತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಲಾಗಿದ್ದು, 25 ಲಕ್ಷ ರೂ.ಕ್ಕಿಂತ ಅಧಿಕ ಮೌಲ್ಯದ ಎಲೆಕ್ಟ್ರಿಕ್ ವಾಹನಗಳಿಗೆ ಶೇ. 10 ರಷ್ಟು ತೆರಿಗೆ ವಿಧಿಸಲು ಸರ್ಕಾರ ಉದ್ದೇಶಿಸಿದೆ.

ಇದನ್ನೂ ಓದಿ: ಜೊತೆ ನೃತ್ಯ ಮಾಡಲು ಪೀಡಿಸಿ, ಮೊಬೈಲ್ ನಂಬರ್‌ಗಾಗಿ ಡಿಮ್ಯಾಂಡ್!: ಬೆಂಗಳೂರು ರೆಸಾರ್ಟ್‌ನಲ್ಲಿ ಮಹಿಳೆಗೆ ಪುರುಷರ ಗುಂಪು ಕಿರುಕುಳ

ಕರ್ನಾಟಕ ಮೋಟಾರು ವಾಹನ ತೆರಿಗೆ (ತಿದ್ದುಪಡಿ) ದರಗಳು

ವಾಹನದ ಪ್ರಕಾರ / ಮೌಲ್ಯ ಉದ್ದೇಶಿತ ತೆರಿಗೆ ದರ
₹10 ಲಕ್ಷದಿಂದ ₹15 ಲಕ್ಷದವರೆಗಿನ ವಾಹನಗಳು ಶೇ. 15
₹15 ಲಕ್ಷಕ್ಕಿಂತ ಅಧಿಕ ಮೌಲ್ಯದ ವಾಹನಗಳು ಶೇ. 18
₹25 ಲಕ್ಷಕ್ಕಿಂತ ಅಧಿಕ ಮೌಲ್ಯದ ಎಲೆಕ್ಟ್ರಿಕ್ (EV) ವಾಹನಗಳು ಶೇ. 10
ಹಳೆಯ ವಾಹನಗಳು ವಾಹನದ ವಯಸ್ಸು ಮತ್ತು ಸವೆತದ ಆಧಾರದ ಮೇಲೆ ವ್ಯತ್ಯಾಸವಾಗುತ್ತದೆ

ಸರ್ಕಾರದ ಈ ಕ್ರಮಕ್ಕೆ ಕಾರಣವೇನು?

ರಾಜ್ಯದಲ್ಲಿ ಸಾವಿರಾರು ಹೊರರಾಜ್ಯ ನೋಂದಣಿಯ ವಾಹನಗಳು ಸಂಚರಿಸುತ್ತಿದ್ದರೂ, ಅವುಗಳಿಂದ ರಾಜ್ಯದ ಬೊಕ್ಕಸಕ್ಕೆ ಯಾವುದೇ ಆದಾಯ ಬರುತ್ತಿರಲಿಲ್ಲ. ಅಲ್ಲದೆ, ತೆರಿಗೆಯನ್ನು ತಪ್ಪಿಸಲು ಅನೇಕರು ನೆರೆಯ ರಾಜ್ಯಗಳಲ್ಲಿ ವಾಹನ ನೋಂದಣಿ ಮಾಡಿಸುತ್ತಿದ್ದರು. ಇದನ್ನು ತಡೆಯಲು ಮತ್ತು ರಾಜ್ಯದ ತೆರಿಗೆ ಆದಾಯವನ್ನು ಹೆಚ್ಚಿಸಲು ಈ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿದೆ. ಇದರ ಜತೆಗೆ ರಾಜ್ಯದಲ್ಲಿ ಇಂತಹ ವಾಹನಗಳಿಂದ ಪರಿಸರ ಮಾಲಿನ್ಯ ಆಗುತ್ತಿದೆ ಎಂದು ಹೇಳಲಾಗಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಈ ರಾಶಿಯವರು ಪ್ರೀತಿಯಲ್ಲಿ ಒಬ್ಬಳನ್ನು ಕಳೆದುಕೊಂಡರೆ, ಮತ್ತೊಬ್ಬಳು ಸುಂದರಿ ಬರುತ್ತಾಳೆ: ಈ ಎರಡು ಗ್ರಹದ ಕಾರಣದಿಂದ

ಈ ತಿಂಗಳಲ್ಲಿ ತುಲಾ ರಾಶಿಯವರಿಗೆ ಗ್ರಹಗತಿಗಳ ಬದಲಾವಣೆ ಮತ್ತು ಅವುಗಳಿಂದ ಉಂಟಾಗುವ ಪ್ರಭಾವದ ಹೇಗಿದೆ ಎಂದು ನೋಡುವುದಾದರೆ, ಶುಕ್ರನ ಆಧಿಪತ್ಯದ ಈ ರಾಶಿಗೆ ಶುಕ್ರನು ಸ್ವಕ್ಷೇತ್ರಲ್ಲಿ, ಅಷ್ಟಮ ಸ್ಥಾನದಲ್ಲಿ ಇರುವನು. ಅಶುಭದ ನಡುವೆ ಸಣ್ಣ ಶುಭಗಳು ನಿಮಗೆ ಗೋಚರಿಸಲಿವೆ. ಗುರುವಿನ ದೃಷ್ಟಿ ನಿಮ್ಮ ರಾಶಿಯ ಮೇಲೆ ಇದ್ದು, ಸಮಸ್ಯೆಗಳು ನಿಮಗೆ ಅರಿವಿಗೆ ಬರದಂತೆ ಮಾಯವಾಗಿಬಿಡುತ್ತವೆ.

​ಶುಭ ಫಲ

ಗುರು :

​ಮೇ ತಿಂಗಳಿನಲ್ಲಿ ಗುರುವು ನಿಮ್ಮ ರಾಶಿಯಿಂದ ಭಾಗ್ಯ ಸ್ಥಾನವಾದ ನವಮದಲ್ಲಿ ಇದ್ದುದು ಇದು ಅತ್ಯಂತ ಶುಭಕರವಾದ ಬದಲಾವಣೆ. ಅದೃಷ್ಟವು ನಿಮ್ಮ ಕೈಹಿಡಿಯಲಿದೆ. ದೀರ್ಘಕಾಲದ ಸಮಸ್ಯೆಗಳು ಬಗೆಹರಿಯುತ್ತವೆ. ಧಾರ್ಮಿಕ ಕಾರ್ಯಗಳಲ್ಲಿ ಆಸಕ್ತಿ ಹೆಚ್ಚುತ್ತದೆ, ದೂರದ ಪ್ರಯಾಣದಿಂದ ಲಾಭವಾಗಲಿದೆ ಮತ್ತು ಉನ್ನತ ಶಿಕ್ಷಣ ಪಡೆಯುವವರಿಗೆ ಉತ್ತಮ ಅವಕಾಶಗಳು ಸಿಗಲಿವೆ.

​ಶುಕ್ರ :

​ನಿಮ್ಮ ರಾಶ್ಯಾಧಿಪತಿ ಶುಕ್ರನು ತನ್ನದೇ ಆದ ವೃಷಭ ರಾಶಿಯಲ್ಲಿ ಸಂಚರಿಸುವುದರಿಂದ ನಿಮಗೆ ಆಂತರಿಕ ಶಕ್ತಿ ನೀಡುತ್ತಾನೆ. ಅನಿರೀಕ್ಷಿತ ಧನಲಾಭ ಅಥವಾ ಪಿತ್ರಾರ್ಜಿತ ಆಸ್ತಿಯಿಂದ ಅನುಕೂಲವಾಗುವ ಸಾಧ್ಯತೆ ಇದೆ. ನಿಮ್ಮ ವ್ಯಕ್ತಿತ್ವದಲ್ಲಿ ಆಕರ್ಷಣೆ ಹೆಚ್ಚುತ್ತದೆ. ಸಂಶೋಧನೆ ಅಥವಾ ಗೂಢ ವಿಷಯಗಳಲ್ಲಿ ಆಸಕ್ತಿ ಇರುವವರಿಗೆ ಇದು ಸುವರ್ಣ ಕಾಲ.

​ರವಿ :

​ತಿಂಗಳ ಆರಂಭದಲ್ಲಿ ರವಿ ತನ್ನ ಉಚ್ಛ ರಾಶಿಯಾದ ಮೇಷದಲ್ಲಿರುತ್ತಾನೆ. ಸಮಾಜದಲ್ಲಿ ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗುತ್ತದೆ. ವ್ಯಾಪಾರದಲ್ಲಿ ಹೊಸ ಪಾಲುದಾರಿಕೆಗಳು ದೊರೆಯಬಹುದು. ಆದರೆ ಸಂಗಾತಿಯೊಂದಿಗೆ ಸಣ್ಣಪುಟ್ಟ ಅಹಂ ಸಂಘರ್ಷಗಳಾಗದಂತೆ ಎಚ್ಚರ ವಹಿಸಿ.

ಅಶುಭ ಫಲ

​ಶನಿ, ಕುಜ ಮತ್ತು ಬುಧ :

​ಈ ಮೂರು ಗ್ರಹಗಳು ನಿಮ್ಮ ರಾಶಿಯಿಂದ ಷಷ್ಠದಲ್ಲಿ ಅಂದರೆ ಶತ್ರು, ರೋಗ, ಋಣ ಸ್ಥಾನವಾಗಿದೆ. ಇದು ಸ್ವಲ್ಪ ಜಾಗರೂಕತೆಯಿಂದ ಇರಬೇಕಾದ ಸಮಯ. ರಕ್ತದೊತ್ತಡ, ಉಷ್ಣ ಸಂಬಂಧಿ ಕಾಯಿಲೆ ಅಥವಾ ಸ್ನಾಯುಗಳ ನೋವು ಕಾಣಿಸಿಕೊಳ್ಳಬಹುದು.
ಕೆಲಸದ ಸ್ಥಳದಲ್ಲಿ ಗುಪ್ತ ಶತ್ರುಗಳ ಕಾಟ ಇರಬಹುದು. ಆದರೆ ಶನಿ 6ನೇ ಮನೆಯಲ್ಲಿ ಇರುವುದರಿಂದ ಅಂತಿಮವಾಗಿ ವಿಜಯ ನಿಮ್ಮದೇ ಆಗುತ್ತದೆ. ಅನಗತ್ಯ ಸಾಲ ಮಾಡುವುದನ್ನು ತಪ್ಪಿಸಿ.

ರಾಹು-ಕೇತು :

​ರಾಹು ಐದನೇ ಮನೆಯಲ್ಲಿ ಮತ್ತು ಕೇತು ಹ‌ನ್ನೊಂದನೇ ಮನೆಯಲ್ಲಿ ಇರುವುದರಿಂದ ಮಾನಸಿಕವಾಗಿ ಸ್ವಲ್ಪ ಗೊಂದಲಗಳು ಉಂಟಾಗಬಹುದು. ನಿದ್ರಾಹೀನತೆಯ ಸಮಸ್ಯೆ ಎದುರಾಗಬಹುದು.

​ಆರನೇ ಮನೆಯಲ್ಲಿ ಗ್ರಹಗಳ ಸಂಯೋಗದಿಂದ ಪ್ರತಿದಿನ ಪ್ರಾಣಾಯಾಮ ಮತ್ತು ದೈಹಿಕ ವ್ಯಾಯಾಮಕ್ಕೆ ಆದ್ಯತೆ ನೀಡಿ. ಶನಿವಾರದಂದು ದೇವಸ್ಥಾನಕ್ಕೆ ಭೇಟಿ ನೀಡಿ ಎಳ್ಳೆಣ್ಣೆ ದೀಪ ಹಚ್ಚುವುದು ಮತ್ತು ಮಂಗಳವಾರ ಹನುಮಾನ್ ಚಾಲೀಸ್ ಪಠಿಸುವುದು ನಿಮ್ಮ ಸಂಕಷ್ಟಗಳನ್ನು ಕಡಿಮೆ ಮಾಡುತ್ತದೆ. ಗುರುವಿನ ಅನುಗ್ರಹವಿರುವುದರಿಂದ ಹೂಡಿಕೆಗೆ ಇದು ಪೂರಕ ಸಮಯ, ಆದರೆ ಯಾರನ್ನೂ ಅತಿಯಾಗಿ ನಂಬಿ ಹಣ ನೀಡಬೇಡಿ.

​ಒಟ್ಟಿನಲ್ಲಿ ಮೇ ತಿಂಗಳು ನಿಮಗೆ ಏಳುಬೀಳುಗಳ ನಡುವೆಯೂ ಭಾಗ್ಯೋದಯವನ್ನು ನಿರೀಕ್ಷಿಸಬಹುದು.

– ಲೋಹಿತ ಹೆಬ್ಬಾರ್

Source link

Horoscope May 2026: ಈ ರಾಶಿಯವರಿಗೆ ಮೇ ತಿಂಗಳಲ್ಲಿ ಆಕಸ್ಮಿಕ ಧನ ಲಾಭ – Kannada News | Scorpio May 2026: Unexpected Financial Gains and Complete Horoscope

ಎಂಟನೇ ರಾಶಿಯಾದ ವೃಶ್ಚಿಕ ರಾಶಿವರಿಗೆ ಮೇ ತಿಂಗಳಲ್ಲಿ ಮಿಶ್ರ ಫಲದ್ದಾಗಲಿದೆ. ವಿಶಾಖಾ, ಅನುರಾಧಾ ಜ್ಯೇಷ್ಠಾ ನಕ್ಷತ್ರದವರಿಗೆ ಗುರು, ಶನಿ ಮತ್ತು ಬುಧರು ಅಧಿಪತಿಗಳಾಗಿದ್ದು ಈ ಮೂರು ಗ್ರಹಗಳ ಪ್ರಭಾವ ಅಧಿಕವಾಗಿರಲಿದೆ ಹಾಗೂ ಗ್ರಹಗಳ ದೃಷ್ಟಿ, ಸ್ಥಾನ, ದಿಗ್ಬಲಗಳ ಆಧಾರದ ಮೇಲೆ ಈ ರಾಶಿಗೆ ಫಲಗಳು ಪ್ರಾಪ್ತಿಯಾಗಾಲಿವೆ.

ಶುಭ ದಶೆ:

  • ರವಿ: ಸೂರ್ಯನು ನಿಮ್ಮ ರಾಶಿಯಿಂದ ಆರನೇ ಮನೆಯಲ್ಲಿ ದಿಗ್ಬಲನಾಗಿರುತ್ತಾನೆ. ಇದು ಶತ್ರುಗಳ ಮೇಲೆ ಜಯ, ಆರೋಗ್ಯ ಸುಧಾರಣೆ ಮತ್ತು ಸರ್ಕಾರಿ ಕೆಲಸಗಳಲ್ಲಿ ಯಶಸ್ಸನ್ನು ನೀಡುತ್ತದೆ.
  • ಶುಕ್ರ :ಶುಕ್ರನು ತನ್ನ ಸ್ವಕ್ಷೇತ್ರವಾದ ಏಳನೇ ಮನೆಯಲ್ಲಿರುವುದು ನಿಮ್ಮ ವೈಯಕ್ತಿಕ ಆಕರ್ಷಣೆಯನ್ನು ಹೆಚ್ಚಿಸುತ್ತದೆ. ಇದು ದಾಂಪತ್ಯ ಜೀವನಕ್ಕೆ ಬಹಳ ಶುಭ.
  • ಗುರು :ಗುರು ಎಂಟನೇ ಮನೆಯಲ್ಲಿದ್ದರೂ, ನಿಮ್ಮ ಧನಸ್ಥಾನ ಮತ್ತು ಸುಖಸ್ಥಾನದ ಮೇಲೆ ದೃಷ್ಟಿ ಬೀರುವುದರಿಂದ ಆಕಸ್ಮಿಕ ಧನ ಲಾಭಕ್ಕೆ ದಾರಿಯಾಗುತ್ತದೆ.

​ಅಶುಭ ದಶೆ :

​ಶನಿ, ಕುಜ, ಬುಧ :

ಐದನೇ ಮನೆಯಲ್ಲಿ ಈ ಮೂರು ಗ್ರಹಗಳ ಯುತಿ ಇರುವುದು ಸ್ವಲ್ಪ ಕಳವಳಕಾರಿ. ಇದು ಮುಖ್ಯವಾಗಿ ನಿರ್ಧಾರ ಕೈಗೊಳ್ಳುವಲ್ಲಿ ಗೊಂದಲ, ಮಕ್ಕಳ ಆರೋಗ್ಯ ಅಥವಾ ಶಿಕ್ಷಣದ ಬಗ್ಗೆ ಚಿಂತೆ ಉಂಟಾಗಲಿದೆ.

​ಕುಜ :

ನಿಮ್ಮ ರಾಶ್ಯಾಧಿಪತಿಯಾದ ಕುಜನು ಶನಿಯೊಂದಿಗೆ ಇರುವುದರಿಂದ ಅತಿಯಾದ ಕೋಪ ಅಥವಾ ಆತುರದ ನಿರ್ಧಾರಗಳಿಂದ ಕೆಲಸಗಳು ಕೆಡುವ ಸಾಧ್ಯತೆ ಇದೆ.

​ಉದ್ಯೋಗ ಮತ್ತು ಅಧಿಕಾರ :

​ಸೂರ್ಯನು ಆರನೇ ಮನೆಯಲ್ಲಿರುವುದರಿಂದ ಕಚೇರಿಯಲ್ಲಿ ನಿಮ್ಮ ಪ್ರಭಾವ ಹೆಚ್ಚಾಗುತ್ತದೆ. ಬಾಕಿ ಉಳಿದಿದ್ದ ಫೈಲ್‌ಗಳು ವಿಲೇವಾರಿಯಾಗಲಿವೆ. ಉದ್ಯೋಗದಲ್ಲಿ ವರ್ಗಾವಣೆಯ ಸಾಧ್ಯತೆ ಇದೆ. ಹೊಸ ಜವಾಬ್ದಾರಿಗಳು ನಿಮ್ಮನ್ನು ಹುಡುಕಿಕೊಂಡು ಬರಲಿವೆ.

ಐದನೇ ಮನೆಯಲ್ಲಿ ಶನಿ-ಕುಜ ಇರುವುದರಿಂದ ಸಹೋದ್ಯೋಗಿಗಳೊಂದಿಗೆ ಮಾತನಾಡುವಾಗ ಸಂಯಮವಿರಲಿ. ನಿಮ್ಮ ಮಾತೇ ನಿಮಗೆ ಶತ್ರುವಾಗದಂತೆ ನೋಡಿಕೊಳ್ಳಿ.

​ಪ್ರೇಮ ಮತ್ತು ವಿವಾಹ :

ಶುಕ್ರನು ಏಳನೇ ಮನೆಯಲ್ಲಿರುವುದರಿಂದ ವಿವಾಹ ಸಂಬಂಧಿ ಮಾತುಕತೆಗಳು ಯಶಸ್ವಿಯಾಗುತ್ತವೆ. ಕಂಕಣ ಬಲ ಕೂಡಿಬರುವ ಸಾಧ್ಯತೆ ಹೆಚ್ಚಿದೆ. ಪ್ರೇಮಿಗಳ ನಡುವೆ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳು ಬರಬಹುದು. ಐದನೇ ಮನೆಯಲ್ಲಿರುವ ಪಾಪಗ್ರಹಗಳ ಪ್ರಭಾವದಿಂದ ಸಂಗಾತಿಯನ್ನು ಸಂಶಯಿಸಬೇಡಿ. ಪರಸ್ಪರ ಗೌರವ ನೀಡಿದರೆ ಸಂಬಂಧ ಗಟ್ಟಿಯಾಗುತ್ತದೆ.

​ಆರ್ಥಿಕ ಮತ್ತು ಆರೋಗ್ಯ :

ಗುರುವಿನ ದೃಷ್ಟಿಯಿಂದಾಗಿ ಹಳೆಯ ಸಾಲಗಳು ತೀರುವ ಸಾಧ್ಯತೆ ಇದೆ. ಆದರೆ ಅನಗತ್ಯ ಹೂಡಿಕೆಗಳ ಬಗ್ಗೆ ಎಚ್ಚರವಿರಲಿ. ರಕ್ತದೊತ್ತಡ ಅಥವಾ ಉಷ್ಣ ಸಂಬಂಧಿ ಸಮಸ್ಯೆಗಳ ಬಗ್ಗೆ ಜಾಗರೂಕತೆ ಇರಲಿ. ವಾಹನ ಚಾಲನೆ ಮಾಡುವಾಗ ಅಧಿಕ ಗಮನ ಬೇಕು.

​ಕುಜ ಮತ್ತು ಶನಿಯ ಪ್ರಭಾವ ತಗ್ಗಿಸಲು ಮಂಗಳವಾರ ಸುಬ್ರಹ್ಮಣ್ಯ ಅಷ್ಟಕ ಪಠಿಸಿ. ಶನಿವಾರದಂದು ಎಳ್ಳೆಣ್ಣೆ ದೀಪ ಹಚ್ಚುವುದು ಉತ್ತಮ.

– ಲೋಹಿತ ಹೆಬ್ಬಾರ್

Published On – 6:06 pm, Thu, 30 April 26

Source link

ತೆಲಂಗಾಣದ ಈ ಭೀಕರ ಅಪಘಾತ ನೋಡಿದರೆ ಎದೆ ಝಲ್ ಎನ್ನದಿರದು! – Kannada News | One dead 4 people injured in road accident in telangana Miryalaguda bypass

ಹೈದರಾಬಾದ್, ಏಪ್ರಿಲ್ 30: ತೆಲಂಗಾಣದ ನಲ್ಗೊಂಡ ಜಿಲ್ಲೆಯ ಮಿರ್ಯಾಲಗುಡ ಬೈಪಾಸ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಒಬ್ಬ ವ್ಯಕ್ತಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಈ ಅಪಘಾತ (Accident) ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಬೈಕ್ ಇದ್ದಕ್ಕಿದ್ದಂತೆ ಅಡ್ಡ ಬಂದ ಹಿನ್ನೆಲೆಯಲ್ಲಿ ಕಾರು ನಿಯಂತ್ರಣ ಕಳೆದುಕೊಂಡಿದೆ. ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡ ಈ ಘಟನೆಯ ವೀಡಿಯೊದಲ್ಲಿ ಬೈಕ್ ಸವಾರ ತಪ್ಪು ಬದಿಯಿಂದ ರಸ್ತೆ ದಾಟಲು ಪ್ರಯತ್ನಿಸುತ್ತಿರುವಾಗ ವೇಗವಾಗಿ ಬಂದ ಕಾರು ಅವನಿಗೆ ಡಿಕ್ಕಿ ಹೊಡೆದಿದೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಇನ್ನಷ್ಟು ರಾಷ್ಟ್ರೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಇನ್ನು ಒಂದೇ ವರ್ಷದಲ್ಲಿ ‘ಕೆಡಿ 2’ ಬರಲಿದೆ: ಅಪ್ಡೇಟ್ ಕೊಟ್ಟ ಜೋಗಿ ಪ್ರೇಮ್ – Kannada News | Jogi Prem gives update about KD movie sequel KD 2 Ft Kichcha Sudeep Dhruva Sarja

ಜೋಗಿ ಪ್ರೇಮ್ ನಿರ್ದೇಶನ ಮಾಡಿರುವ ‘ಕೆಡಿ’ ಸಿನಿಮಾ (KD Movie) ಅದ್ದೂರಿಯಾಗಿ ಬಿಡುಗಡೆ ಆಗಿದೆ. ಧ್ರುವ ಸರ್ಜಾ ಅಭಿಮಾನಿಗಳು ಈ ಸಿನಿಮಾ ನೋಡಿ ಎಂಜಾಯ್ ಮಾಡುತ್ತಿದ್ದಾರೆ. ಮೊದಲ ದಿನ ಭರ್ಜರಿ ರೆಸ್ಪಾನ್ಸ್ ಸಿಕ್ಕಿದೆ. ಸಿನಿಮಾ ನೋಡಲು ಹೋದವರಿಗೆ ಒಂದು ಸರ್ಪ್ರೈಸ್ ಕೂಡ ಕಾದಿತ್ತು. ಈ ಸಿನಿಮಾಗೆ ಸೀಕ್ವೆಲ್ (KD 2) ಕೂಡ ಬರಲಿದೆ ಎಂಬುದನ್ನು ಕ್ಲೈಮ್​ಯಾಕ್ಸ್​ನಲ್ಲಿ ತಿಳಿಸಲಾಗಿದೆ. ಅದರಿಂದಾಗಿ ಅಭಿಮಾನಿಗಳು ಎಕ್ಸೈಟ್ ಆಗಿದ್ದಾರೆ. ಆ ಬಗ್ಗೆ ಜೋಗಿ ಪ್ರೇಮ್ (Jogi Prem) ಅವರು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.

‘ಕೆಡಿ 2’ ಸಿನಿಮಾದ ಶೂಟಿಂಗ್ ಆಗಿದೆಯಾ ಎಂದು ಕೇಳಿದ ಪ್ರಶ್ನೆಗೆ ಪ್ರೇಮ್ ಅವರು ಉತ್ತರ ನೀಡಿದ್ದಾರೆ. ‘ಮೊದಲು ಬೇರೆ ಭಾಷೆಗಳಲ್ಲಿ ರಿಲೀಸ್ ಆಗಲಿ. ಆಮೇಲೆ ಹೇಳುತ್ತೇನೆ. ಸಾವು ಸುಮ್ಮನೆ ಉತ್ಪ್ರೇಕ್ಷೆಗೆ ಹೇಳಿದರೆ ಪ್ರೇಕ್ಷಕರ ಕುತೂಹಲ ಜಾಸ್ತಿ ಆಗುತ್ತದೆ. 100 ಪರ್ಸೆಂಟ್ ಈ ಸಿನಿಮಾಗೆ ಪಾರ್ಟ್​ 2 ಬರುತ್ತದೆ. ಇದಕ್ಕೆಲ್ಲ ಕೆವಿಎನ್ ಪ್ರೊಡಕ್ಷನ್ಸ್ ಕಾರಣ’ ಎಂದು ಜೋಗಿ ಪ್ರೇಮ್ ಹೇಳಿದ್ದಾರೆ.

‘ನಾವು ಈ ಸಿನಿಮಾಗಾಗಿ ತುಂಬ ಕಷ್ಟಪಟ್ಟಿದ್ದೇವೆ. ಯುಎಫ್​ಓ ಸಮಸ್ಯೆಯಿಂದ ಬೆಳಗ್ಗೆ ಒಂದು ಶೋ ಸಮಸ್ಯೆ ಆಯಿತು. ಈಗ ಎಲ್ಲ ಕಡೆಗಳಲ್ಲಿ ಹೌಸ್​ಫುಲ್ ಆಗುತ್ತಿದೆ. ಎಲ್ಲರೂ ‘ಕೆಡಿ 2’ ಎನ್ನುತ್ತಿದ್ದಾರೆ ಧನ್ಯವಾದಗಳು. ಅದಕ್ಕೆ ಇನ್ನೊಂದು ವರ್ಷ ಸಮಯ ತೆಗೆದುಕೊಳ್ಳುತ್ತೇನೆ. ಸಿನಿಮಾ ಗೆದ್ದಿದ್ದಕ್ಕೆ ಖುಷಿ ಇದೆ. ಗೀತಕ್ಕ ಕೂಡ ಸಿನಿಮಾ ನೋಡಿ ಮೆಚ್ಚಿಕೊಂಡರು’ ಎಂದಿದ್ದಾರೆ ಪ್ರೇಮ್.

ಸೀಕ್ವೆಲ್​​ನಲ್ಲಿ ಕಿಚ್ಚ ಸುದೀಪ್ ಅವರ ಪಾತ್ರ ಪೂರ್ಣ ಪ್ರಮಾಣದಲ್ಲಿ ಇರುತ್ತಾ ಎಂಬ ಪ್ರಶ್ನೆ ಇದೆ. ಅದಕ್ಕೆ ಪ್ರೇಮ್ ಈಗಲೇ ಉತ್ತರ ನೀಡಿಲ್ಲ. ‘ಕಾದು ನೋಡಿ’ ಎಂದು ಅವರು ಹೇಳಿದ್ದಾರೆ. ‘ಜನರು ಪ್ರೇಮ್ ಈಸ್ ಬ್ಯಾಕ್ ಅಂತ ಹೇಳುತ್ತಿದ್ದಾರೆ. ನಾನು ಇಲ್ಲೇ ಇದ್ದೀನಿ. ನನ್ನ ಮಗ ಕೂಡ ಇದರಲ್ಲಿ ಆ್ಯಕ್ಟ್ ಮಾಡಿದ್ದಾನೆ. ಅವನ ಬಗ್ಗೆ ಮಾತಾಡೋದು ಬೇಡ. ಓದುತ್ತಿದ್ದಾನೆ, ಮೊದಲು ಓದಲಿ’ ಎಂದು ಪ್ರೇಮ್ ಹೇಳಿದ್ದಾರೆ.

ಇದನ್ನೂ ಓದಿ: KD Movie Review: ಧ್ರುವ ಸರ್ಜಾ ಅಭಿಮಾನಿಗಳಿಗೆ ಇಷ್ಟ ಆಗುವ ರಕ್ತದೋಕುಳಿಯ ‘ಕೆಡಿ’ ಕಹಾನಿ

ಧ್ರುವ ಸರ್ಜಾ ಅವರು ‘ಕೆಡಿ’ ಸಿನಿಮಾದಲ್ಲಿ ಮಚ್ಚು ಹಿಡಿದು ನಟಿಸಿದ್ದಾರೆ. ಅದು ಅವರ ಅಭಿಮಾನಿಗಳಿಗೆ ಇಷ್ಟ ಆಗಿದೆ. ಹಾಗಾದ್ರೆ ಇನ್ಮುಂದೆ ಇಂಥ ಸಿನಿಮಾಗಳನ್ನೇ ಮಾಡುತ್ತೀರಾ ಎಂದು ಕೇಳಿದ್ದಕ್ಕೆ, ‘ಫುಲ್​ ಟೈಮ್ ಮಚ್ಚು ಹಿಡಿಯಲು ನಾನು ರೆಡಿ. ಆದರೆ ಎಲ್ಲ ನಿರ್ದೇಶಕರೂ ಪ್ರೇಮ್ ಆಗೋಕೆ ಆಗಲ್ಲ’ ಎಂದು ಧ್ರುವ ಸರ್ಜಾ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

UGC NET 2026: ಜೂನ್ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಆರಂಭ; ಅರ್ಹತೆ, ಶುಲ್ಕ ಮತ್ತು ಪ್ರಮುಖ ದಿನಾಂಕಗಳ ಮಾಹಿತಿ ಇಲ್ಲಿದೆ – Kannada News | UGC NET June 2026: Registration Open for JRF and Assistant Professor Exam

ಭಾರತೀಯ ವಿಶ್ವವಿದ್ಯಾಲಯ ಮತ್ತು ಕಾಲೇಜುಗಳಲ್ಲಿ ಸಹಾಯಕ ಪ್ರಾಧ್ಯಾಪಕ ಹುದ್ದೆ ಹಾಗೂ ಜೂನಿಯರ್ ರಿಸರ್ಚ್ ಫೆಲೋಶಿಪ್ (JRF) ಪಡೆಯಲು ಬಯಸುವ ಅಭ್ಯರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು (NTA) ಮಹತ್ವದ ಸುದ್ದಿ ನೀಡಿದೆ. ಜೂನ್ 2026ರ ಸಾಲಿನ ಯುಜಿಸಿ ನೆಟ್ ಪರೀಕ್ಷೆಗೆ ಆನ್‌ಲೈನ್ ನೋಂದಣಿ ಪ್ರಕ್ರಿಯೆಯು ಏಪ್ರಿಲ್ 29 ರಿಂದ ಅಧಿಕೃತವಾಗಿ ಪ್ರಾರಂಭವಾಗಿದೆ.

ಪರೀಕ್ಷಾ ವಿಧಾನ ಮತ್ತು ವೇಳಾಪಟ್ಟಿ:

ಈ ಬಾರಿ ಜೂನ್ 22 ರಿಂದ ಜೂನ್ 30 ರವರೆಗೆ ದೇಶಾದ್ಯಂತ ಒಟ್ಟು 85 ವಿಷಯಗಳಿಗೆ ಕಂಪ್ಯೂಟರ್ ಆಧಾರಿತ ಪರೀಕ್ಷೆಯನ್ನು (CBT) ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆಸಕ್ತ ಅಭ್ಯರ್ಥಿಗಳು ಪರೀಕ್ಷೆಯ ಅಧಿಕೃತ ವೆಬ್‌ಸೈಟ್ ugcnet.nta.nic.in ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು; ಬೇರೆ ಯಾವುದೇ ಮಾಧ್ಯಮದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು NTA ಸ್ಪಷ್ಟಪಡಿಸಿದೆ.

ಭಾರತೀಯ ವಿಶ್ವವಿದ್ಯಾಲಯಗಳು ಮತ್ತು ಕಾಲೇಜುಗಳಲ್ಲಿ ಜೂನಿಯರ್ ರಿಸರ್ಚ್ ಫೆಲೋಶಿಪ್ (JRF) ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ಅರ್ಹತೆಯನ್ನು ನಿರ್ಧರಿಸಲು ಈ ಪರೀಕ್ಷೆಯನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುತ್ತದೆ. ಅಲ್ಲದೆ, ಪಿಎಚ್‌ಡಿ ಕಾರ್ಯಕ್ರಮಗಳಿಗೆ ಪ್ರವೇಶ ಪಡೆಯಲು ಸಹ ಈ ಪರೀಕ್ಷೆಯ ಅಂಕಗಳು ಅತ್ಯಗತ್ಯವಾಗಿವೆ. ಕಳೆದ ಡಿಸೆಂಬರ್ 2025ರ ಪರೀಕ್ಷೆಯಲ್ಲಿ ಸುಮಾರು 7 ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಹಾಜರಾಗಿದ್ದು, ಅವರಲ್ಲಿ 1.76 ಲಕ್ಷ ಅಭ್ಯರ್ಥಿಗಳು ಜೆಆರ್‌ಎಫ್ ಮತ್ತು ಪಿಎಚ್‌ಡಿ ಪ್ರವೇಶಕ್ಕೆ ಅರ್ಹತೆ ಪಡೆದಿದ್ದರು.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಈ ಪರೀಕ್ಷೆಗೆ ಹಾಜರಾಗಲು ಅಭ್ಯರ್ಥಿಗಳು ಸ್ನಾತಕೋತ್ತರ ಪದವಿಯಲ್ಲಿ ಕನಿಷ್ಠ ಶೇ. 55 ಅಂಕಗಳನ್ನು ಪಡೆದಿರಬೇಕು, ಆದರೆ ಮೀಸಲಾತಿ ವರ್ಗದವರಿಗೆ ಇದು ಶೇ. 50 ಆಗಿರುತ್ತದೆ. ಪ್ರಸ್ತುತ ಸ್ನಾತಕೋತ್ತರ ಪದವಿಯ ಅಂತಿಮ ವರ್ಷದಲ್ಲಿ ಓದುತ್ತಿರುವ ಅಥವಾ ಫಲಿತಾಂಶಕ್ಕಾಗಿ ಕಾಯುತ್ತಿರುವ ವಿದ್ಯಾರ್ಥಿಗಳು ಸಹ ಈ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಅರ್ಹರಾಗಿದ್ದಾರೆ.

ಇತ್ತೀಚಿನ ಬದಲಾವಣೆಯಂತೆ, ನಾಲ್ಕು ವರ್ಷಗಳ ಅಥವಾ ಎಂಟು ಸೆಮಿಸ್ಟರ್‌ಗಳ ಪದವಿ ಶಿಕ್ಷಣವನ್ನು ಕನಿಷ್ಠ ಶೇ. 75 ಅಂಕಗಳೊಂದಿಗೆ ಪೂರೈಸಿದ ಅಭ್ಯರ್ಥಿಗಳು ಅಥವಾ ಅಂತಿಮ ಸೆಮಿಸ್ಟರ್‌ನಲ್ಲಿರುವ ವಿದ್ಯಾರ್ಥಿಗಳು ಸಹ ನೇರವಾಗಿ ಯುಜಿಸಿ ನೆಟ್ ಪರೀಕ್ಷೆಗೆ ಹಾಜರಾಗಲು ಅವಕಾಶ ಕಲ್ಪಿಸಲಾಗಿದೆ. ಇದು ಮಾನವಿಕ, ಸಮಾಜ ವಿಜ್ಞಾನ, ಭಾಷೆಗಳು ಮತ್ತು ಕಂಪ್ಯೂಟರ್ ವಿಜ್ಞಾನ ಸೇರಿದಂತೆ ವಿವಿಧ ವಿಷಯಗಳ ವಿದ್ಯಾರ್ಥಿಗಳಿಗೆ ಉತ್ತಮ ಅವಕಾಶವಾಗಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

IPL 2026: ಕ್ರಿಸ್ ಗೇಲ್ ದಾಖಲೆ ಮುರಿಯುವ ಸನಿಹದಲ್ಲಿ ವಿರಾಟ್ ಕೊಹ್ಲಿ – Kannada News | IPL 2026: Kohli Nears Historic T20 Milestone in RCB vs GT Clash – Century Record Looms!

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ 106 ರನ್ ಗಳಿಸಿದರೆ, ಟಿ20 ಕ್ರಿಕೆಟ್‌ನಲ್ಲಿ 14,000 ರನ್ ಪೂರ್ಣಗೊಳಿಸಲಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ವಿಶ್ವದ ಆರನೇ ಬ್ಯಾಟ್ಸ್‌ಮನ್ ಎನಿಸಿಕೊಳ್ಳಲಿದ್ದಾರೆ. ಕೊಹ್ಲಿ ಇದುವರೆಗೆ 422 ಟಿ20 ಪಂದ್ಯಗಳಲ್ಲಿ 405 ಇನ್ನಿಂಗ್ಸ್‌ಗಳಲ್ಲಿ 13,894 ರನ್ ಗಳಿಸಿದ್ದಾರೆ. ಈ ಪಂದ್ಯದಲ್ಲಿ ಕೊಹ್ಲಿ ಶತಕ ಬಾರಿಸುವಲ್ಲಿ ಯಶಸ್ವಿಯಾದರೆ, 423 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದ ವೆಸ್ಟ್ ಇಂಡೀಸ್ ದಂತಕಥೆ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿಯಲಿದ್ದಾರೆ.

Source link