ಜೆಪಿ ನಗರದಲ್ಲಿ ಕಾರಿನ ಮೇಲೆ ಬಿದ್ದ ಬೃಹತ್ ಮರ; 12 ಗಂಟೆ ಕಳೆದರೂ ಸ್ಥಳಕ್ಕೆ ಬಾರದ ಅಧಿಕಾರಿಗಳು – Kannada News | JP Nagar Incident: Heavy Rain Causes Tree to Fall on Car, Public Outcry Over Official Inaction
ಬೆಂಗಳೂರು, ಏ.30: ಸಿಲಿಕಾನ್ ಸಿಟಿಯ ಜೆಪಿ ನಗರ 24ನೇ ಮುಖ್ಯ ರಸ್ತೆಯಲ್ಲಿ ನಿಂತಿದ್ದ ಕಾರಿನ ಮೇಲೆ ಭಾರೀ ಮಳೆಗೆ ಬೃಹತ್ ಮರವೊಂದು ಬಿದ್ದಿದೆ. ಇದರಿಂದ ಕಾರು ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ. ನಿನ್ನೆ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದರೂ, ಸುಮಾರು 12 ಗಂಟೆಗಳಾದರೂ ಜಿಬಿ ಅಧಿಕಾರಿಗಳು ಸ್ಥಳಕ್ಕೆ ಬಂದು ತೆರವು ಕಾರ್ಯಾಚರಣೆ ನಡೆಸಿಲ್ಲ. ಮರ ಬಿದ್ದ ಪರಿಣಾಮವಾಗಿ ರಸ್ತೆಯ ಒಂದು ಬದಿಯ ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದ್ದು, ವಾಹನಗಳು ಒಂದೇ ರಸ್ತೆಯಲ್ಲಿ ಎರಡೂ ಕಡೆ ಚಲಿಸಬೇಕಾದ ಪರಿಸ್ಥಿತಿ…