Category Archives: Blog

Your blog category

‘ಆಸೆ’ ಧಾರಾವಾಹಿ ತಂಡದ ಬಗ್ಗೆ ಗಂಭೀರ ಆರೋಪ ಮಾಡಿದ್ರಾ ಅಮೃತಾ ರಾಮಮೂರ್ತಿ? – Kannada News | Amrutha Ramamurthy Reveals Why She Quit Popular TV Serial: Uncomfortable Environment

ನ್ಯೂಸ್ ಆ್ಯಂಕರ್ ಆಗಿ ವೃತ್ತಿ ಆರಂಭಿಸಿದ ಅಮೃತಾ ರಾಮಮೂರ್ತಿ (Amrutha Ramamoorthy) ಅವರು ನಂತರ ಕಿರುತೆರೆಯಲ್ಲಿ ಮಿಂಚಿದರು. ವಿಲನ್ ಪಾತ್ರಗಳ ಮೂಲಕ ಅವರು ಗಮನ ಸೆಳೆದರು. ಈಗ ಅವರು ಒಂದು ಜನಪ್ರಿಯ ಧಾರಾವಾಹಿ ತೊರೆದ ಬಗ್ಗೆ ಕಾರಣ ನೀಡಿದ್ದಾರೆ. ಧಾರಾವಾಹಿ ಸೆಟ್ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ಥವಾಗಿ ಇರುತ್ತಿತ್ತು ಎಂದು ಹೇಳಿದ್ದಾರೆ. ಅವರು ಧಾರಾವಾಹಿ ಹೆಸರನ್ನು ಎಲ್ಲಿಯೂ ಹೇಳಿಲ್ಲ. ಅನೇಕರು ಇದು ‘ಆಸೆ’ ಧಾರಾವಾಹಿ ಇರಬಹುದು ಎಂದು ಊಹಿಸಿದ್ದಾರೆ. ಅವರು ನೀಡಿರುವ ಮಾಹಿತಿ ‘ಆಸೆ’ ಧಾರಾವಾಹಿಯನ್ನು ಹೋಲುತ್ತಿದೆ ಎಂದಿದ್ದಾರೆ.

ನ್ಯೂಸೋ ನ್ಯೂಸು ಚಾನೆಲ್​​ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅಮೃತಾ, ‘ಮಗು ಜನಿಸಿದ ಬಳಿಕ ನೆಗೆಟಿವ್ ಪಾತ್ರವನ್ನೇ ಆಯ್ಕೆ ಮಾಡಿಕೊಳ್ಳುತ್ತಿದ್ದೆ. ಅದು ಜನಪ್ರಿಯತೆ ತಂದುಕೊಟ್ಟಿದೆ ಎಂಬುದು ನಿಜ. ಆದರೆ, ಆ ಪಾತ್ರ ನನ್ನ ವ್ಯಕ್ತಿತ್ವಕ್ಕೆ ಸಂಪೂರ್ಣವಾಗಿ ವಿರುದ್ಧವಾಗಿ ಇರುತ್ತಿತ್ತು. ಒಂದು ಧಾರಾವಾಹಿ ನನ್ನ ಮೇಲೆ ತುಂಬಾನೇ ಪ್ರಭಾವ ಬೀರಿದೆ’ ಎಂದು ಹೇಳಿಕೊಂಡಿದ್ದಾರೆ.

‘ನೀವು ಯಾಕೆ ಅಷ್ಟು ಸುಳ್ಳು ಹೇಳ್ತೀರಾ’ ಎಂದು ಅಮೃತಾ ರಾಮಮೂರ್ತಿ ಅವರಿಗೆ ಯಾರೋ ಬಂದು ಕೇಳಿದ್ದರಂತೆ. ಅದು ಕೂಡ ಮಗುವಿನ ಎದುರಿಗೆ. ಇದು ಅಮೃತಾ ಮೇಲೆ ಸಾಕಷ್ಟು ಪ್ರಭಾವ ಬೀರಿತ್ತು. ಸೋಶಿಯಲ್ ಮೀಡಿಯಾದಲ್ಲಿ ಅವರ ಮಗುವಿನ ಬಗ್ಗೆ ಕೆಟ್ಟದಾಗಿ ಕಮೆಂಟ್ ಮಾಡುತ್ತಿದ್ದರಂತೆ. ‘ಇದು ನಿಜಕ್ಕೂ ಮನೋಜನ (ಆಸೆ ಧಾರಾವಾಹಿಯಲ್ಲಿ ಅಮೃತಾ ಮಾಡಿದ್ದ ರೋಹಿಣಿ ಪಾತ್ರಧಾರಿಯ ಪತಿ ಪಾತ್ರದ ಹೆಸರು ಮನೋಜ್) ಮಗುವಾ’ ಎಂದು ಪ್ರಶ್ನೆ ಮಾಡುತ್ತಿದ್ದಂತೆ. ಧಾರಾವಾಹಿ ಪಾತ್ರ ಎಷ್ಟು ಪ್ರಭಾವ ಬೀರುತ್ತಿದೆ ಎಂಬುದು ಅವರಿಗೆ ಆಗ ಅರಿವಾಗಿತ್ತು. ‘ನನಗೂ ವೈಯಕ್ತಿಕ ಜೀವನ ಇದೆ’ ಎಂದು ಅವರು ಹೇಳಿದ್ದಾರೆ.

‘ಆ ಧಾರಾವಾಹಿಯಲ್ಲಿ ಕಂಫರ್ಟ್ ಇರಲಿಲ್ಲ. ವ್ಯವಸ್ಥೆ ಸರಿ ಇರಲಿಲ್ಲ. ಹೀಗಾಗಿ, ನಾನು ಬಿಡುವ ನಿರ್ಧಾರ ಮಾಡಿದೆ. ಬಿಡಲು ಕಾರಣ ಲಿಸ್ಟ್ ಮಾಡಿದೆ. ಬಿಡಬೇಕು ಎಂಬ ಕಾರಣ ತುಂಬಾನೇ ದೊಡ್ಡದಿತ್ತು. ಕಥೆ ಹೀರೋ ಹಾಗೂ ವಿಲನ್ ಪಾತ್ರದ ಮೇಲೆ ಸಾಗುತ್ತಿತ್ತು. ಆದರೂ ನಾನು ಬಿಡೋಣ ಎಂದು ನಿರ್ಧರಿಸಿದೆ’ ಎಂದಿದ್ದಾರೆ ಅಮೃತಾ.

ಇದನ್ನೂ ಓದಿ: ಅಮೃತಾ ರಾಮಮೂರ್ತಿ ಫಿಟ್ನೆಸ್ ಜರ್ನಿ ಎಷ್ಟು ಟಫಿತ್ತು ನೋಡಿ

‘ಒಂದು ಬಾತ್​​ರೂಂ ಹೆಣ್ಣುಮಕ್ಕಳಿಗೆ ಪ್ರತ್ಯೇಕವಾಗಿ ಕೊಡಿ ಎಂದು ಕೇಳುತ್ತಿದ್ದೆ. ಆದರೆ, ಕೊಡಲಿಲ್ಲ. ಅದು ಪ್ರಮುಖ ಧಾರಾವಾಹಿ ಆಗಿತ್ತು. ಆ ಧಾರಾವಾಹಿ ಆದ ಬಳಿಕ ನಾನು ಕಿರುತೆರೆ ತೊರೆಯುವ ನಿರ್ಧಾರ ಮಾಡಿದ್ದೆ’ ಎಂದು ಹೇಳಿದ್ದಾರೆ. ಸದ್ಯ ಅಮೃತಾ ಅವರು ಉದಯ ಟಿವಿಯಲ್ಲಿ ಧಾರಾವಾಹಿ ಮಾಡುತ್ತಿದ್ದಾರೆ. ಅಲ್ಲಿಯೂ ಅವರದ್ದು ವಿಲನ್ ಪಾತ್ರ ಅನ್ನೋದು ವಿಶೇಷ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

Daily Devotional: ದೇವಸ್ಥಾನದಲ್ಲಿ ನೀಡುವ ಪ್ರಸಾದವನ್ನು ಸ್ವೀಕರಿಸದೇ ಹಾಗೆಯೇ ಬರಬಾರದು ಯಾಕೆ? – Kannada News | Understanding the Significance of Prasad; Its Power and Pitfalls of Neglect

ದೇವಸ್ಥಾನದಲ್ಲಿ ನೀಡುವ ಪ್ರಸಾದImage Credit source: Pinterest

ನಮ್ಮ ಕರ್ಮಗಳನ್ನು ತೊಳೆದುಕೊಳ್ಳಲು ಮತ್ತು ಆಧ್ಯಾತ್ಮಿಕ ಶಾಂತಿಯನ್ನು ಪಡೆಯಲು ದೇವಾಲಯಗಳು ಪ್ರಮುಖ ಪಾತ್ರವಹಿಸುತ್ತವೆ. ಇಂತಹ ದೈವಿಕ ಸ್ಥಳಗಳಲ್ಲಿ ಭಗವಂತನಿಗೆ ಅರ್ಪಿಸಿರುವ ಪ್ರಸಾದವನ್ನು ನಿರ್ಲಕ್ಷಿಸುವುದು ಅಥವಾ ನಿರಾಕರಿಸುವುದು ದೊಡ್ಡ ಆಧ್ಯಾತ್ಮಿಕ ಅಪರಾಧ ಎಂದು ಹೇಳಲಾಗುತ್ತದೆ. ಪ್ರಸಾದ ಕೇವಲ ಭೌತಿಕ ಆಹಾರ ಪದಾರ್ಥವಲ್ಲ. ಇದು ದೇವರಿಗೆ ಅರ್ಪಿಸಿದ ಹೂವು, ಕುಂಕುಮ, ವಿಭೂತಿ ಅಥವಾ ಯಾವುದೇ ಭೋಜನ ಪದಾರ್ಥವಾಗಿರಬಹುದು. ಇದನ್ನು ಭಕ್ತಿಯಿಂದ ಸ್ವೀಕರಿಸಬೇಕು ಎಂದು ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಸಲಹೆ ನೀಡಿದ್ದಾರೆ.

ಗುರೂಜಿಯವರು ಹೇಳುವಂತೆ, ಪ್ರಸಾದವನ್ನು ನಿರ್ಲಕ್ಷಿಸಿದರೆ ಅಥವಾ “ನಾನು ಸ್ಥಿತಿವಂತ, ದೊಡ್ಡ ಸ್ಥಾನದಲ್ಲಿದ್ದೇನೆ, ನನಗೆ ಇವೆಲ್ಲ ಬೇಡ” ಎಂಬ ಅಹಂಕಾರದಿಂದ ತಿರಸ್ಕರಿಸಿದರೆ, ಪ್ರಪ್ರಥಮವಾಗಿ ದೈವಿಕ ಕೃಪೆ ಮತ್ತು ದೈವಬಲವು ಹೊರಟುಹೋಗುತ್ತದೆ. ಪ್ರತಿಯೊಬ್ಬರಿಗೂ ಒಂದು ಪ್ರಭಾವಳಿ ಇರುತ್ತದೆ. ಈ ಪ್ರಭಾವಳಿ ಅಥವಾ ಆಧ್ಯಾತ್ಮಿಕ ಶಕ್ತಿಯೇ ವ್ಯಕ್ತಿಯನ್ನು ಸಮಾಜದಲ್ಲಿ ಗುರುತಿಸುವಂತೆ ಮಾಡುತ್ತದೆ. ಪ್ರಸಾದ ನಿರಾಕರಣೆಯು ಈ ಪ್ರಭಾವಳಿಯನ್ನು ದುರ್ಬಲಗೊಳಿಸಿ, ಉದ್ಯೋಗ ನಷ್ಟ, ರಾಜಕೀಯದಲ್ಲಿ ಕಷ್ಟಗಳು ಅಥವಾ ಇತರೆ ಅಡ್ಡಿ ಆತಂಕಗಳಿಗೆ ಕಾರಣವಾಗಬಹುದು. ದೇವಾಲಯದಲ್ಲಿ ಎಲ್ಲಾ ಭಕ್ತರು, ಶ್ರೀಮಂತರು ಅಥವಾ ಬಡವರು, ಸಮಾನರು ಎಂಬ ಭಾವನೆಯನ್ನು ಅಳವಡಿಸಿಕೊಳ್ಳಬೇಕು.

ಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸುವುದರಿಂದ ಕೀರ್ತಿ, ಪ್ರತಿಷ್ಠೆಗಳು ದೊರೆಯುತ್ತವೆ. ಮಾಟ ಮಂತ್ರ ದೋಷಗಳು, ಗ್ರಹಕಾಟಗಳು ನಿವಾರಣೆಯಾಗಿ ಶುಭ ಫಲಗಳು ಪ್ರಾಪ್ತವಾಗುತ್ತವೆ. ಭಗವಂತನಿಗೆ ಅರ್ಪಿಸಿದ ಪ್ರಸಾದದ ಮೇಲೆ ಆತನ ದೃಷ್ಟಿ ಬಿದ್ದಿರುತ್ತದೆ. ಇದರಿಂದ ಪ್ರಸಾದಕ್ಕೆ ಒಂದು ವಿಶಿಷ್ಟ ಶಕ್ತಿ ದೊರೆಯುತ್ತದೆ. ಚಿಕ್ಕ ಮಕ್ಕಳಿದ್ದಾಗ, ದೇವಸ್ಥಾನದಲ್ಲಿ ನೀಡುವ ಚಿತ್ರಾನ್ನ ಅಥವಾ ಪುಳಿಯೋಗರೆಯನ್ನು ರುಚಿಕರವಾಗಿ ಭಾವಿಸಿ “ಇನ್ನೂ ಸ್ವಲ್ಪ ಕೊಡಿ ಸ್ವಾಮಿ” ಎಂದು ಕೇಳುತ್ತಿದ್ದೆವು. ಆಧುನಿಕ ನಾಗರಿಕತೆಯ ಪ್ರಭಾವದಿಂದ ಕೆಲವರು ತಮ್ಮ ಮಕ್ಕಳ ಶಿಕ್ಷಣ ಅಥವಾ ಸ್ಥಾನಮಾನದ ಕಾರಣದಿಂದ ಪ್ರಸಾದವನ್ನು ನಿರ್ಲಕ್ಷಿಸುತ್ತಾರೆ. ಇದು ಅವರ ಜೀವನದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ

ಪುರಾಣಗಳಲ್ಲಿ ದೇವೇಂದ್ರನ ಉದಾಹರಣೆಯನ್ನು ನೋಡಬಹುದು. ಮದ್ಯಪಾನ ಮಾಡಿ ರಂಭೆಯೊಂದಿಗೆ ಇದ್ದಾಗ, ದೂರ್ವಾಸ ಮಹರ್ಷಿಗಳು ಕೈಲಾಸದಿಂದ ತಂದ ಪ್ರಸಾದವನ್ನು ದೇವೇಂದ್ರ ನಿರ್ಲಕ್ಷಿಸಿ ತಳ್ಳಿಬಿಟ್ಟನು. ಇದರ ಪರಿಣಾಮವಾಗಿ, ದೇವೇಂದ್ರ ತನ್ನ ರಾಜ್ಯಭಾರವನ್ನು ಕಳೆದುಕೊಂಡನು, ದೇವತೆಗಳು ಅವನ ವಿರುದ್ಧ ಯುದ್ಧ ಘೋಷಿಸಿದರು ಮತ್ತು ಅವನ ಮನಸ್ಸು ಚಂಚಲವಾಯಿತು. ತನ್ನ ತಪ್ಪನ್ನು ಅರಿತ ನಂತರ, ದೇವೇಂದ್ರ ಮತ್ತೆ ಪ್ರಸಾದವನ್ನು ತಯಾರಿಸಿ ಹಲವರಿಗೆ ಅರ್ಪಿಸಿದನು. ಈ ಕಥೆಯು ಪ್ರಸಾದದ ಮಹತ್ವವನ್ನು ಎತ್ತಿ ತೋರಿಸುತ್ತದೆ.

ಕುಂಕುಮ ಮತ್ತು ವಿಭೂತಿಯಂತಹ ಪ್ರಸಾದವನ್ನು ದೇವಸ್ಥಾನದ ಬಾಗಿಲಲ್ಲೇ ಬಿಸಾಡುವುದು ಅಥವಾ ಗೋಡೆಗಳಿಗೆ ಹಚ್ಚುವುದು ಸಹ ತಪ್ಪು. ಅದನ್ನು ಮನೆಗೆ ತಂದು ಸ್ನಾನಕ್ಕೆ, ನಿತ್ಯ ಉಪಯೋಗಕ್ಕೆ ಬಳಸಬೇಕು. ಹೆಚ್ಚುವರಿಯಾಗಿದ್ದರೆ, ಅದನ್ನು ನೀರಿನಲ್ಲಿ ಬಿಡಬೇಕು. ಪ್ರಸಾದ ನಿರ್ಲಕ್ಷತೆಯು ಅದೃಷ್ಟವಿದ್ದರೂ ಜೀವನದಲ್ಲಿ ಕಷ್ಟಗಳನ್ನು ತರಬಹುದು ಎಂದು ಗುರೂಜಿ ಎಚ್ಚರಿಸಿದ್ದಾರೆ.

ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)

ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೆಂಗಳೂರಿಗರೇ ಎಚ್ಚರ: ಇಂದು ಮತ್ತೆ ಅಪ್ಪಳಿಸಲಿದೆ ರಣಮಳೆ! ಯಾವೆಲ್ಲ ಭಾಗಗಳಲ್ಲಿ ಮಳೆಯಾಗಲಿದೆ? – Kannada News | Bengaluru Heavy Rain: April 29 Chaos, Today’s Weather Forecast and Essential Safety Alerts

ಬೆಂಗಳೂರು, ಏ.30: ಬುಧವಾರದ (ಏ.29) ಭೀಕರ ಮಳೆಗೆ ಈಗಾಗಲೇ 9 ಜೀವಗಳನ್ನು ಬಲಿ ಪಡೆದಿರುವ ಸಿಲಿಕಾನ್ ಸಿಟಿಯಲ್ಲಿ ಇಂದು ಕೂಡ ಮಳೆಯ ಬರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಹವಾಮಾನ ಇಲಾಖೆಯ ವರದಿಯ ಪ್ರಕಾರ, ನಗರದಲ್ಲಿ ಇಂದು ಮಧ್ಯಾಹ್ನದ ನಂತರ ಮೋಡ ಕವಿದ ವಾತಾವರಣವಿರಲಿದ್ದು, ಸಂಜೆ ಅಥವಾ ರಾತ್ರಿಯ ವೇಳೆಗೆ ಗುಡುಗು, ಮಿಂಚು ಸಹಿತ ಧಾರಾಕಾರ ಮಳೆಯಾಗುವ ಸಾಧ್ಯತೆಯಿದೆ ಎಂದು ಹೇಳಲಾಗಿದೆ.

ಯಾವ ಭಾಗಗಳಲ್ಲಿ ಮಳೆಯಾಗುವ ಸಾಧ್ಯತೆ?

ನಗರದ ದಕ್ಷಿಣ ಮತ್ತು ಪೂರ್ವ ಭಾಗಗಳಲ್ಲಿ ಮಳೆಯ ತೀವ್ರತೆ ಹೆಚ್ಚಿರಲಿದೆ ಎಂದು ಅಂದಾಜಿಸಲಾಗಿದೆ. ಪ್ರಮುಖವಾಗಿ ಈ ಕೆಳಗಿನ ಭಾಗಗಳಲ್ಲಿ ಎಚ್ಚರಿಕೆ ವಹಿಸುವುದು ಅಗತ್ಯ ಎಂದು ಹೇಳಲಾಗಿದೆ.

ದಕ್ಷಿಣ ಬೆಂಗಳೂರು: ಜೆ.ಪಿ. ನಗರ, ಜಯನಗರ, ಬನ್ನೇರುಘಟ್ಟ ರಸ್ತೆ ಮತ್ತು ಬಿಟಿಎಂ ಲೇಔಟ್.

ಪೂರ್ವ ಬೆಂಗಳೂರು: ವೈಟ್‌ಫೀಲ್ಡ್, ಮಾರತಹಳ್ಳಿ, ಎಚ್‌ಎಸ್‌ಆರ್ ಲೇಔಟ್ ಮತ್ತು ಬೆಳ್ಳಂದೂರು.

ಕೇಂದ್ರ ಭಾಗ: ಶಿವಾಜಿನಗರ, ಮೆಜೆಸ್ಟಿಕ್, ಎಂ.ಜಿ. ರಸ್ತೆ ಮತ್ತು ಶಾಂತಿನಗರ.

ಉತ್ತರ ಬೆಂಗಳೂರು: ಯಲಹಂಕ, ಹೆಬ್ಬಾಳ ಮತ್ತು ಆರ್‌.ಟಿ. ನಗರದ ಕೆಲವು ಭಾಗಗಳಲ್ಲಿ ಸಾಧಾರಣ ಮಳೆಯಾಗಬಹುದು.

ಈಗಾಗಲೇ ಹಲವು ಸಾವುಗಳು ವಿದ್ಯುತ್ ಸ್ಪರ್ಶದಿಂದ ಸಂಭವಿಸಿರುವುದರಿಂದ, ಮಳೆಯ ವೇಳೆ ವಿದ್ಯುತ್ ಕಂಬಗಳು ಅಥವಾ ಟ್ರಾನ್ಸ್‌ಫಾರ್ಮರ್‌ಗಳ ಹತ್ತಿರ ಹೋಗಬೇಡಿ ಎಂದು ಇಲಾಖೆ ಹೇಳಿದೆ. ನೀರು ನುಗ್ಗುವ ಸಾಧ್ಯತೆ ಇರುವ ಪ್ರದೇಶದ ಜನರು ಬೆಲೆಬಾಳುವ ವಸ್ತುಗಳನ್ನು ಸುರಕ್ಷಿತವಾಗಿರಿಸಿಕೊಳ್ಳಿ. ರಸ್ತೆಗಳಲ್ಲಿ ನೀರು ನಿಂತಿರುವುದರಿಂದ ಚಾಲನೆಯಲ್ಲಿ ಜಾಗರೂಕತೆ ಇರಲಿ. ಮರಗಳ ಕೆಳಗೆ ವಾಹನಗಳನ್ನು ನಿಲ್ಲಿಸಬೇಡಿ ಎಂದು ಹೇಳಲಾಗಿದೆ.

ಬಿಸಿಲಿನಿಂದ ಮುಕ್ತಿ ಸಿಕ್ಕರೂ ನಗರಕ್ಕೆ ತಟ್ಟಿದ ಮಳೆಯ ಬಿಸಿ

ಸಿಲಿಕಾನ್ ಸಿಟಿಯಲ್ಲಿ ಬುಧವಾರ ಸುರಿದ ಧಾರಾಕಾರ ಮಳೆ ಮತ್ತು ಅನಿರೀಕ್ಷಿತ ಆಲಿಕಲ್ಲು ಮಳೆಯು ಕಳೆದ ಹಲವು ದಿನಗಳ ಸುಡುವ ಬಿಸಿಲಿನಿಂದ ಜನರಿಗೆ ತಾತ್ಕಾಲಿಕ ನೆಮ್ಮದಿ ನೀಡಿದೆ. ಆದರೆ, ಕೇವಲ ಎರಡು ಗಂಟೆಗಳ ಈ ಅಬ್ಬರದ ಮಳೆಯು ನಗರದ ದುಸ್ಥಿತಿಯನ್ನು ಬಯಲು ಮಾಡಿದೆ. 37 ಡಿಗ್ರಿ ಸೆಲ್ಸಿಯಸ್‌ವರೆಗೆ ಏರಿದ್ದ ತಾಪಮಾನವು ಮಳೆಯಿಂದಾಗಿ ಕುಸಿದಿದ್ದರೂ, ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಬೌರಿಂಗ್ ಮತ್ತು ಲೇಡಿ ಕರ್ಜನ್ ಆಸ್ಪತ್ರೆಯ ಕಾಂಪೌಂಡ್ ಗೋಡೆ ಕುಸಿದು ಮಗು ಸೇರಿದಂತೆ ಏಳು ಜನರು ಮೃತಪಟ್ಟಿದ್ದಾರೆ.ಮಲ್ಲೇಶ್ವರಂ, ಶಾಂತಿನಗರ ಮತ್ತು ಶೇಷಾದ್ರಿಪುರಂ ಸೇರಿದಂತೆ ನಗರದ ಸುಮಾರು 50ಕ್ಕೂ ಹೆಚ್ಚು ಪ್ರದೇಶಗಳಲ್ಲಿ ಮರಗಳು ಧರೆಗುರುಳಿವೆ. ಕರ್ನಾಟಕದ ಶಕ್ತಿ ಕೇಂದ್ರವಾದ ವಿಧಾನ ಸೌಧದ ಕಾರಿಡಾರ್‌ಗಳು ಮತ್ತು ಕಚೇರಿಗಳಿಗೆ ಮಳೆ ನೀರು ನುಗ್ಗಿದೆ. ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರ ಕಚೇರಿಯೂ ಜಲಾವೃತವಾಗಿತ್ತು.

ಇದನ್ನೂ ಓದಿ: ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿದಂತೆ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಅಬ್ಬರಿಸಲಿದ್ದಾನೆ ವರುಣ

ನಗರದ ಸ್ಥಿತಿಗತಿ ಹೇಗಿದೆ?

ರಿಚ್‌ಮಂಡ್ ಟೌನ್ ಮತ್ತು ಶಾಂತಿನಗರದಂತಹ ತಗ್ಗು ಪ್ರದೇಶಗಳು ಮಳೆ ನೀರಿನಿಂದ ದ್ವೀಪದಂತಾಗಿವೆ. ರಸ್ತೆಗಳಲ್ಲಿ ಸೊಂಟದವರೆಗೆ ನೀರು ನಿಂತಿದ್ದರಿಂದ ವಾಹನ ಸವಾರರು ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕಿಕೊಂಡಿದ್ದರು. ಮೆಟ್ರೋ ಸೇವೆಗಳಲ್ಲೂ ವ್ಯತ್ಯಯ ಉಂಟಾಗಿದ್ದು, ಕಚೇರಿಯಿಂದ ಮನೆಗೆ ತೆರಳುವವರು ತೀವ್ರ ಸಂಕಷ್ಟ ಅನುಭವಿಸಿದ್ದರು.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಪ್ರಧಾನಿ ಮೋದಿ ಕಂಬನಿ: ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಪರಿಹಾರ ಘೋಷಣೆ – Kannada News | PM Modi Expresses Grief and Announces Ex gratia for Bengaluru Bowring Hospital Wall Collapse Victims

ಬೌರಿಂಗ್ ಆಸ್ಪತ್ರೆ ದುರಂತಕ್ಕೆ ಪ್ರಧಾನಿ ಮೋದಿ ಕಂಬನಿImage Credit source: tv9

ಬೆಂಗಳೂರು, ನವದೆಹಲಿ, ಏಪ್ರಿಲ್ 30: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಬೌರಿಂಗ್ ಆಸ್ಪತ್ರೆಯ ಕಾಂಪೌಂಡ್ ಕುಸಿದು ಸಂಭವಿಸಿದ ಭೀಕರ ದುರಂತಕ್ಕೆ ಪ್ರಧಾನಮಂತ್ರಿ ನರೇಂದ್ರ ಮೋದಿ (Narendra Modi) ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಘಟನೆಯಲ್ಲಿ ಮೂವರು ಮಕ್ಕಳು ಸೇರಿದಂತೆ ಒಟ್ಟು ಏಳು ಮಂದಿ ಮೃತಪಟ್ಟಿರುವುದು ಅತ್ಯಂತ ದುರದೃಷ್ಟಕರ ಎಂದು ಅವರು ಹೇಳಿದ್ದಾರೆ. ಪ್ರಧಾನಮಂತ್ರಿಗಳ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಗಳಿಗೆ ತಲಾ 2 ಲಕ್ಷ ರೂಪಾಯಿ ಪರಿಹಾರ ಘೋಷಿಸಲಾಗಿದೆ.

ಪ್ರಧಾನಿ ಮೋದಿ ಎಕ್ಸ್ ಸಂದೇಶದಲ್ಲಿ ಏನಿದೆ?

ಘಟನೆಗೆ ಸಂಬಂಧಿಸಿದಂತೆ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಪೋಸ್ಟ್ ಮಾಡಿರುವ ಪ್ರಧಾನಿ ನರೇಂದ್ರ ಮೋದಿ, ‘ಬೆಂಗಳೂರಿನಲ್ಲಿ ಕಾಂಪೌಂಡ್ ಕುಸಿದು ಸಂಭವಿಸಿದ ದುರಂತ ಅತ್ಯಂತ ದುರದೃಷ್ಟಕರವಾದುದು’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ದುರಂತದಲ್ಲಿ ಪ್ರಾಣ ಕಳೆದುಕೊಂಡವರ ಕುಟುಂಬಗಳಿಗೆ ಸಂತಾಪವನ್ನು ಸೂಚಿಸುತ್ತೇನೆ. ಘಟನೆಯಲ್ಲಿ ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ನಾನು ಪ್ರಾರ್ಥಿಸುತ್ತೇನೆ. ಮೃತರ ವಾರಸುದಾರರಿಗೆ 2 ಲಕ್ಷ ರೂಪಾಯಿ ಹಾಗೂ ಗಾಯಾಳುಗಳಿಗೆ 50,000 ರೂಪಾಯಿ ಆರ್ಥಿಕ ನೆರವು ನೀಡಲಾಗುವುದು ಎಂದು ಪ್ರಧಾನಿ ಉಲ್ಲೇಖಿಸಿದ್ದಾರೆ.

ಪ್ರಧಾನಿ ಮೋದಿ ಎಕ್ಸ್ ಸಂದೇಶ

ಏತನ್ಮಧ್ಯೆ, ಮುಖ್ಯಮಂತ್ರಿ ಸಿದ್ದರಾಮಯ್ಯ ದುರಂತ ಸಂಭವಿಸಿದ ಬೌರಿಂಗ್ ಆಸ್ಪತ್ರೆ ಆವರಣಕ್ಕೆ ಬುಧವಾರ ರಾತ್ರಿಯೇ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಪೊಲೀಸ್ ಕಮಿಷನರ್ ಅವರೊಂದಿಗೆ ಮಾತನಾಡಿ ಸ್ಥಳಕ್ಕೆ ಧಾವಿಸಿ, ತಕ್ಷಣದ ನೆರವು ನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಇದನ್ನೂ ಓದಿ: ಬೌರಿಂಗ್ ಆಸ್ಪತ್ರೆ ಕಾಂಪೌಂಡ್ ದುರಂತದಲ್ಲಿ ಮೃತಪಟ್ಟವರು ಯಾರೆಲ್ಲ? ಅಧಿಕೃತ ಮಾಹಿತಿ ಬಿಡುಗಡೆ, ಕೇರಳ-ಅಸ್ಸಾಂನವರೂ ಸಾವು

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಇದು ಸರ್ಕಾರದ ಆಸ್ಪತ್ರೆಯ ಗೋಡೆಯಾಗಿರುವುದರಿಂದ, ಘಟನೆಗೆ ಆಡಳಿತದ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿದ್ದಾರೆ. ಅಲ್ಲದೆ, ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ. ಕಾಂಗ್ರೆಸ್ ನಾಯಕ ರಿಜ್ವಾನ್ ಅರ್ಷದ್ ಮಾತನಾಡಿ, ಮಳೆ ಮತ್ತು ಮಿಂಚಿನಿಂದ ರಕ್ಷಣೆ ಪಡೆಯಲು ಗೋಡೆಯ ಕೆಳಗೆ ನಿಂತಿದ್ದವರು ಸಾವನ್ನಪ್ಪಿರುವುದು ಹೃದಯವಿದ್ರಾವಕವಾಗಿದೆ ಎಂದಿದ್ದಾರೆ. ರಾಜ್ಯ ಸರ್ಕಾರ ಈಗಾಗಲೇ ಮೃತರ ಕುಟುಂಬಕ್ಕೆ 5 ಲಕ್ಷ ರೂಪಾಯಿ ಪರಿಹಾರ ಘೋಷಿಸಿದ್ದು, ಅದನ್ನು ಮತ್ತಷ್ಟು ಹೆಚ್ಚಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಅಧಿಕಾರಿಗಳು ಈಗಾಗಲೇ ತನಿಖೆ ಆರಂಭಿಸಿದ್ದು, ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಮಧ್ಯಪ್ರದೇಶ: ಪಿಕಪ್ ಟ್ರಕ್ ಪಲ್ಟಿಯಾಗಿ 12 ಕಾರ್ಮಿಕರು ಸಾವು, 13 ಜನರಿಗೆ ಗಾಯ – Kannada News | Pickup Overturns in Madhya Pradesh, Multiple Workers Killed

ಧಾರ್, ಏಪ್ರಿಲ್ 30: ಪಿಕಪ್ ಟ್ರಕ್ ಪಲ್ಟಿಯಾಗಿ 12 ಮಂದಿ ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದಿದೆ, ಘಟನೆಯಲ್ಲಿ 13 ಮಂದಿ ಗಾಯಗೊಂಡಿದ್ದಾರೆ. ಬುಧವಾರ ರಾತ್ರಿ ಮಧ್ಯಪ್ರದೇಶದ ಧಾರ್ ಜಿಲ್ಲೆಯಲ್ಲಿ ನಡೆದ ಭೀಕರ ರಸ್ತೆ ಅಪಘಾತ(Accident)ವು 12 ಜನರ ಬದುಕನ್ನು ಕಸಿದುಕೊಂಡಿದೆ. ಸುಮಾರು 35 ಕಾರ್ಮಿಕರನ್ನು ಹೊತ್ತೊಯ್ಯುತ್ತಿದ್ದ ಪಿಕಪ್ ವಾಹನವು ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ ಈ ದುರಂತ ಸಂಭವಿಸಿದೆ.

ರಾತ್ರಿ 8:30ರ ಸುಮಾರಿಗೆ ಹೆದ್ದಾರಿಯ ಪೆಟ್ರೋಲ್ ಪಂಪ್ ಬಳಿ ಈ ಅಪಘಾತ ನಡೆದಿದೆ. ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರನ್ನು ತುಂಬಿಸಿಕೊಂಡಿದ್ದ ಪಿಕಪ್ ಟ್ರಕ್, ಅತಿ ವೇಗದಿಂದಾಗಿ ನಿಯಂತ್ರಣ ತಪ್ಪಿ ರಸ್ತೆಯಲ್ಲೇ ಹಲವು ಬಾರಿ ಪಲ್ಟಿಯಾಗಿದೆ. ಈ ಭೀಕರ ದೃಶ್ಯ ಕಂಡ ಪ್ರತ್ಯಕ್ಷದರ್ಶಿಗಳು ಬೆಚ್ಚಿಬಿದ್ದಿದ್ದಾರೆ. ಮೃತರಲ್ಲಿ ಹಲವಾರು ಅಮಾಯಕ ಮಕ್ಕಳೂ ಸೇರಿರುವುದು ದುರಂತದ ತೀವ್ರತೆಯನ್ನು ಹೆಚ್ಚಿಸಿದೆ.

ಅಪಘಾತ ಸಂಭವಿಸಿದ ತಕ್ಷಣ ಸ್ಥಳೀಯ ನಿವಾಸಿಗಳು ಮತ್ತು ಪೊಲೀಸರು ರಕ್ಷಣಾ ಕಾರ್ಯಾಚರಣೆಗೆ ಧಾವಿಸಿದ್ದಾರೆ. ಅವಶೇಷಗಳ ಅಡಿಯಲ್ಲಿ ಸಿಲುಕಿದ್ದವರನ್ನು ಹೊರತೆಗೆದು ತಕ್ಷಣ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಯ ವೈದ್ಯರ ಪ್ರಕಾರ, ಸದ್ಯ 13 ಜನರ ಸ್ಥಿತಿ ಅತ್ಯಂತ ಗಂಭೀರವಾಗಿದ್ದು, ಸಾವು-ಬದುಕಿನ ನಡುವೆ ಹೋರಾಡುತ್ತಿದ್ದಾರೆ.

ಮತ್ತಷ್ಟು ಓದಿ: ಕುಲ್ಗಾಮ್​ನಲ್ಲಿ ಭೀಕರ ಅಪಘಾತ; ಕಾರು ಗುದ್ದಿದ ರಭಸಕ್ಕೆ ವಿದ್ಯಾರ್ಥಿನಿ ಸಾವು

ಈ ಘಟನೆಯ ಕುರಿತು ತೀವ್ರ ಶೋಕ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರು, ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಪ್ರಧಾನ ಮಂತ್ರಿ ರಾಷ್ಟ್ರೀಯ ಪರಿಹಾರ ನಿಧಿಯಿಂದ (PMNRF) ಮೃತರ ಕುಟುಂಬಕ್ಕೆ ತಲಾ 2 ಲಕ್ಷ ರೂ. ಮತ್ತು ಗಾಯಗೊಂಡವರಿಗೆ 50,000 ರೂ. ಪರಿಹಾರವನ್ನು ಘೋಷಿಸಿದ್ದಾರೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಅವರು ಈ ಸಂದರ್ಭದಲ್ಲಿ ಪ್ರಾರ್ಥಿಸಿದ್ದಾರೆ.

ಅತಿಯಾದ ವೇಗ ಮತ್ತು ಮಿತಿಮೀರಿದ ಭಾರ ಹೊರುವುದು ಅಮಾಯಕರ ಪ್ರಾಣಕ್ಕೆ ಹೇಗೆ ಸಂಚಕಾರ ತರುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

IPL 2026: ಎಲ್ಲವೂ ಉಲ್ಟಾ.. ಹೀಗಿದೆ ಮುಂಬೈ ಇಂಡಿಯನ್ಸ್ ಪ್ಲೇಆಫ್ ಲೆಕ್ಕಾಚಾರ – Kannada News | Ipl 2026: mumbai indians playoff scenarios

IPL 2026: ಐದು ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿರುವ ಮುಂಬೈ ಇಂಡಿಯನ್ಸ್ (MI) ತಂಡಕ್ಕೆ ಈ ಬಾರಿ ಪ್ಲೇ-ಆಫ್ ಹಾದಿ ಅತ್ಯಂತ ಕಠಿಣವಾಗಿದೆ. ಸತತ ಸೋಲುಗಳಿಂದ ಕಂಗೆಟ್ಟಿರುವ ತಂಡಕ್ಕೆ ಈಗ ‘ಮಾಡು ಇಲ್ಲವೇ ಮಡಿ’ ಎಂಬ ಅನಿವಾರ್ಯತೆ ಎದುರಾಗಿದೆ.

ಟೂರ್ನಿಯ ಮೊದಲಾರ್ಧ ಮುಗಿದರೂ, ಮುಂಬೈ ತಂಡ ಆಡಿರುವ 8 ಪಂದ್ಯಗಳಲ್ಲಿ ಕೇವಲ 2 ರಲ್ಲಿ ಜಯಗಳಿಸಿ 4 ಅಂಕಗಳೊಂದಿಗೆ ಅಂಕಪಟ್ಟಿಯ ಕೆಳಭಾಗದಲ್ಲಿದೆ. ಅಂಕಗಳ ಕೊರತೆಯ ಜೊತೆಗೆ ತಂಡದ ನೆಟ್ ರನ್ ರೇಟ್ (NRR) ಕೂಡ ಮೈನಸ್‌ನಲ್ಲಿದೆ, ಇದು ಮುಂಬೈ ಇಂಡಿಯನ್ಸ್ ಪಾಲಿಗೆ ಮುಂದಿನ ಹಂತದಲ್ಲಿ ದೊಡ್ಡ ತೊಡಕಾಗಬಹುದು.

ಮುಂಬೈ ಇಂಡಿಯನ್ಸ್ ಪ್ಲೇ-ಆಫ್ ಹಾದಿ:

ಪ್ರಸ್ತುತ ಮುಂಬೈ ಇಂಡಿಯನ್ಸ್ ಆಡಿರುವ 8 ಪಂದ್ಯಗಳಲ್ಲಿ ಕೇವಲ 2 ಜಯಗಳಿಸಿ 4 ಅಂಕಗಳನ್ನು ಮಾತ್ರ ಪಡೆದಿದೆ. ಅದರಂತೆ ಪ್ಲೇ-ಆಫ್ ತಲುಪಲು ತಂಡಕ್ಕೆ ಇರುವ ಸಾಧ್ಯತೆಗಳು ಇಲ್ಲಿವೆ:

  • 16 ಅಂಕಗಳ ಗುರಿ: ಮುಂಬೈ ಇಂಡಿಯನ್ಸ್ ತಂಡವು ತನ್ನ ಉಳಿದ 6 ಪಂದ್ಯಗಳಲ್ಲಿ 6 ಪಂದ್ಯಗಳನ್ನು ಗೆದ್ದರೆ ಒಟ್ಟು 16 ಅಂಕಗಳನ್ನು ಪಡೆಯುತ್ತದೆ. ಇದು ಪ್ಲೇ-ಆಫ್ ಸ್ಥಾನವನ್ನು ಬಹುತೇಕ ಖಚಿತಪಡಿಸುತ್ತದೆ.
  • 14 ಅಂಕಗಳ ಗುರಿ: ಒಂದು ವೇಳೆ 5 ಪಂದ್ಯಗಳನ್ನು ಗೆದ್ದು 14 ಅಂಕಗಳನ್ನು ಪಡೆದರೆ, ಇತರ ತಂಡಗಳ ಫಲಿತಾಂಶ ಮತ್ತು ರನ್ ರೇಟ್ (Net Run Rate) ಮೇಲೆ ಅವಲಂಬಿತವಾಗಬೇಕಾಗುತ್ತದೆ.
  • ನೆಟ್ ರನ್ ರೇಟ್ ಸವಾಲು: ಪ್ರಸ್ತುತ ಮುಂಬೈ ತಂಡದ ರನ್ ರೇಟ್ ಮೈನಸ್‌ನಲ್ಲಿದೆ. ಹಾಗಾಗಿ, ಮುಂದಿನ ಪಂದ್ಯಗಳನ್ನು ಕೇವಲ ಗೆಲ್ಲುವುದು ಮಾತ್ರವಲ್ಲದೆ, ದೊಡ್ಡ ಅಂತರದಿಂದ ಗೆದ್ದು ರನ್ ರೇಟ್ ಸುಧಾರಿಸಿಕೊಳ್ಳುವುದು ಬಹಳ ಮುಖ್ಯ.

ಮುಂಬೈ ಇಂಡಿಯನ್ಸ್ ತಂಡದ ನಿರ್ಣಾಯಕ ಪಂದ್ಯಗಳು:

  • ಮೇ 2: MI vs CSK
  • ಮೇ 4: MI vs LSG
  • ಮೇ 10: MI vs RCB
  • ಮೇ 14: MI vs PBKS
  • ಮೇ 20: MI vs KKR
  • ಮೇ 24: MI vs RR

ಮುಂಬೈ ಇಂಡಿಯನ್ಸ್ ತಂಡ ಎದುರಿಸುತ್ತಿರುವ ಸವಾಲುಗಳು:

  • ನಾಯಕತ್ವದ ವೈಫಲ್ಯ: ನಾಯಕತ್ವದ ಬದಲಾವಣೆಯ ನಂತರ ತಂಡದ ಆಟಗಾರರ ನಡುವಿನ ಹೊಂದಾಣಿಕೆ ಅಥವಾ ಮಾನಸಿಕ ಸ್ಥಿತಿ ಮೊದಲಿನಷ್ಟು ಬಲಿಷ್ಠವಾಗಿಲ್ಲ ಎಂಬ ಚರ್ಚೆಗಳು ನಡೆಯುತ್ತಿವೆ. ಮೈದಾನದಲ್ಲಿ ಕೆಲವು ನಿರ್ಣಾಯಕ ನಿರ್ಧಾರಗಳು ಕೈಕೊಡುತ್ತಿವೆ.
  • ಆಲ್ ರೌಂಡರ್‌ಗಳ ಕಳಪೆ ಪ್ರದರ್ಶನ: ಹಾರ್ದಿಕ್ ಪಾಂಡ್ಯ ಸೇರಿದಂತೆ ಪ್ರಮುಖ ಆಲ್ ರೌಂಡರ್‌ಗಳು ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ನಿರೀಕ್ಷಿತ ಮಟ್ಟದ ಪ್ರದರ್ಶನ ನೀಡಲು ವಿಫಲರಾಗುತ್ತಿದ್ದಾರೆ.
  • ಬೌಲಿಂಗ್ ವಿಭಾಗದ ವೈಫಲ್ಯ: ಜಸ್ಪ್ರೀತ್ ಬುಮ್ರಾ ಅವರನ್ನು ಹೊರತುಪಡಿಸಿ ಉಳಿದ ಬೌಲರ್‌ಗಳು ರನ್ ನಿಯಂತ್ರಿಸುವಲ್ಲಿ ವಿಫಲರಾಗುತ್ತಿದ್ದಾರೆ. ಡೆತ್ ಓವರ್‌ಗಳಲ್ಲಿ ಹೆಚ್ಚಿನ ರನ್ ಬಿಟ್ಟುಕೊಡುತ್ತಿರುವುದು ತಂಡಕ್ಕೆ ಮುಳುವಾಗುತ್ತಿದೆ.
  • ಸ್ಥಿರತೆಯ ಕೊರತೆ: ಬ್ಯಾಟಿಂಗ್‌ನಲ್ಲಿ ಅಗ್ರ ಕ್ರಮಾಂಕದ ಆಟಗಾರರು ಸ್ಥಿರ ಪ್ರದರ್ಶನ ನೀಡುತ್ತಿಲ್ಲ. ರೋಹಿತ್ ಶರ್ಮಾ ಮತ್ತು ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಆಟದ ಅಗತ್ಯ ತಂಡಕ್ಕಿದೆ.

ಇದನ್ನೂ ಓದಿ: ಗೆಲುವಿಗಾಗಿ 22 ಆಟಗಾರರನ್ನು ಕಣಕ್ಕಿಳಿಸಿದ ಮುಂಬೈ ಇಂಡಿಯನ್ಸ್

ಇತಿಹಾಸವನ್ನು ಗಮನಿಸಿದರೆ, ಮುಂಬೈ ಇಂಡಿಯನ್ಸ್ ಅಸಾಧ್ಯವಾದ ಪರಿಸ್ಥಿತಿಯಿಂದ ಚೇತರಿಸಿಕೊಂಡು ಚಾಂಪಿಯನ್ ಆದ ಉದಾಹರಣೆಗಳಿವೆ. ಅದರಂತೆ 2026 ರಲ್ಲೂ ಹಾರ್ದಿಕ್ ಪಾಂಡ್ಯ ನೇತೃತ್ವದ ತಂಡ ತನ್ನ ಹಳೆಯ ಲಯಕ್ಕೆ ಮರಳುತ್ತದೆಯೇ ಎಂಬುದನ್ನು ಕಾದು ನೋಡಬೇಕಿದೆ.

Published On – 9:29 am, Thu, 30 April 26

Source link

ರಾಜ್ಯದಲ್ಲಿ ವಿದ್ಯುತ್ ಬಳಕೆ ಭಾರೀ ಪ್ರಮಾಣದಲ್ಲಿ ಏರಿಕೆ: ಕಾರಣ ಇಲ್ಲಿದೆ – Kannada News | Karnataka Power Consumption Soars 20 percent in April: Heatwave and Gas Crisis Drive Surge

ಬೆಂಗಳೂರು, ಏಪ್ರಿಲ್​​ 30: ಪ್ರಸಕ್ತ ತಿಂಗಳಲ್ಲಿ ರಾಜ್ಯದಲ್ಲಿ ವಿದ್ಯುತ್ ಬಳಕೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗಿದ್ದು, ಏಪ್ರಿಲ್ 1ರಿಂದ 26ರವರೆಗೆ 9,101 ಮಿಲಿಯನ್ ಯೂನಿಟ್ (MU) ವಿದ್ಯುತ್ ಬಳಕೆಯಾಗಿದೆ. ಕಳೆದ ಐದು ವರ್ಷಗಳಲ್ಲಿ ಇದುವರೆಗೆ ಕಂಡುಬಂದ ಅತ್ಯಧಿಕ ಬಳಕೆ ಇದಾಗಿದೆ ಎನ್ನಲಾಗಿದ್ದು, 2025ರ ಇದೇ ಅವಧಿಗೆ ಹೋಲಿಸಿದರೆ ಶೇ.20ಕ್ಕಿಂತ ಹೆಚ್ಚಿನ ಏರಿಕೆ ಕಂಡುಬಂದಿದೆ. ಹಿಂದಿನ ಕೆಲವು ವರ್ಷಗಳಲ್ಲಿ ಇದೇ ಅವಧಿಯಲ್ಲಿನ ವಿದ್ಯುತ್​​ ಬಳಕೆ ಬಳಕೆ 7,500ರಿಂದ 8,000 ಮಿಲಿಯನ್ ಯೂನಿಟ್ಗಳ ನಡುವೆಯೇ ಇತ್ತು. ಆದರೆ ಈ ಬಾರಿ ನಾನಾ ಕಾರಣಗಳಿಂದ ವಿದ್ಯುತ್​​ ಬಳಕೆಯಲ್ಲಿ ಏರಿಕೆ ಉಂಟಾಗಿದೆ.

ವಿದ್ಯುತ್​​ ಬಳಕೆ ಹೆಚ್ಚಳಕ್ಕೆ ಕಾರಣ ಏನು?

ಈ ವರ್ಷ ಅತಿಯಾದ ಉಷ್ಣತೆ ಕಂಡುಬಂದಿದೆ. ಇದರಿಂದ ಜನರು ತಂಪಿನ ಮೊರೆ ಹೋಗಿದ್ದು ಏಸಿ, ಕೂಲರ್ ಸೇರಿದಂತೆ ವಿವಿಧ ಸಾಧನಗಳನ್ನು ಹೆಚ್ಚಾಗಿ ಬಳಸಿದ್ದಾರೆ. ಇದಲ್ಲದೆ, ಪಶ್ಚಿಮ ಏಷ್ಯಾದ ಸಂಘರ್ಷದ ಪರಿಣಾಮ ಗ್ಯಾಸ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾದ ಕಾರಣ ಹಲವರು ಇಂಡಕ್ಷನ್ ಸ್ಟೋವ್ ಮೊರೆ ಹೋಗಿದ್ದು ಕೂಡ ಹೆಚ್ಚಿನ ಪ್ರಮಾಣದ ವಿದ್ಯುತ್​​ ಬಳಕೆಗೆ ಕಾರಣವಾಗಿದೆ ಎಂದು ಇಂಧನ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಗೌರವ್ ಗುಪ್ತ ತಿಳಿಸಿದ್ದಾರೆ. ಏಪ್ರಿಲ್ ಮೊದಲ ಎರಡು ವಾರಗಳಲ್ಲಿ ದೊಡ್ಡ ಹೋಟೆಲ್‌ಗಳು ಸಹ ಇಂಡಕ್ಷನ್ ಕುಕ್‌ಟಾಪ್ ಬಳಕೆ ಆರಂಭಿಸಿದ್ದರಿಂದ ಬಳಕೆ ಹೆಚ್ಚಾಗಿದೆ. ಗ್ಯಾಸ್ ಸಿಲಿಂಡರ್ ಕೊರತೆ ಭೀತಿ ಹಿನ್ನೆಲೆಯಲ್ಲಿ ಮನೆಗಳಲ್ಲೂ ಇಂಡಕ್ಷನ್ ಬಳಕೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಅನೇಕ ವಾಣಿಜ್ಯ ಸಂಸ್ಥೆಗಳು ಲೋಡ್ ಸಾಮರ್ಥ್ಯ ಹೆಚ್ಚಿಸಲು ಅರ್ಜಿ ಸಲ್ಲಿಸುತ್ತಿವೆ. ಮುಂದಿನ ದಿನಗಳಲ್ಲಿ ಪ್ರೀ-ಮಾನ್‌ಸೂನ್ ಮಳೆ ಬಂದರೆ ವಿದ್ಯುತ್ ಬೇಡಿಕೆ ಕಡಿಮೆಯಾಗಲಿದೆ. ಆದರೂ ಬೇಡಿಕೆ ಹೆಚ್ಚಾದರೆ ನಿರ್ವಹಿಸಲು ನಾವು ಸಿದ್ಧರಾಗಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ: ಕರ್ನಾಟಕದ ಜನತೆಗೆ ವಿದ್ಯುತ್ ದರ ಏರಿಕೆ ಶಾಕ್; ಎಷ್ಟು? ಎಂದಿನಿಂದ ಜಾರಿ? ಇಲ್ಲಿದೆ ವಿವರ

ನಗರದ ಪೀಕ್ ಡಿಮಾಂಡ್ ಕೂಡ ವರ್ಷದಿಂದ ವರ್ಷಕ್ಕೆ ಏರಿಕೆಯಾಗುತ್ತಿದೆ. 2023-24ರಲ್ಲಿ 16,110 ಮೆಗಾವಾಟ್ ಇದ್ದ ಪೀಕ್ ಡಿಮಾಂಡ್, 2024-25ರಲ್ಲಿ 16,985 ಮೆಗಾವಾಟ್ ಹಾಗೂ 2025-26ರಲ್ಲಿ 17,330 ಮೆಗಾವಾಟ್ ಆಗಿತ್ತು. ಈ ವರ್ಷ ಅದು 18,478 ಮೆಗಾವಾಟ್‌ಗೆ ಏರಿಕೆಯಾಗಿದೆ ಎಂದು ಡೆಕ್ಕನ್​​ ಹೆರಾಲ್ಡ್​​ ವರದಿ ಮಾಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Source link

Digital Arrest: 2-3 ಗಂಟೆಗಳಲ್ಲಿ ಸಿಮ್ ಕಾರ್ಡ್ ಬ್ಲಾಕ್, ಡಿಜಿಟಲ್ ಅರೆಸ್ಟ್ ತಡೆಯಲು ಸಂಪೂರ್ಣ ಸಿದ್ಧತೆ, ವಾಟ್ಸ್ಆ್ಯಪ್​ನಿಂದಲೂ ಕ್ರಮ – Kannada News | SIM card block in 2 3 hours complete preparations to prevent digital arrest, action from WhatsApp too

ಬೆಂಗಳೂರು (ಏ. 30): ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಡಿಜಿಟಲ್ ಬಂಧನ ವಂಚನೆಗಳ ಬೆದರಿಕೆಯನ್ನು ಎದುರಿಸಲು ದೂರಸಂಪರ್ಕ ನಿಯಂತ್ರಕರು, ಸೇವಾ ಪೂರೈಕೆದಾರರು, ಆರ್‌ಬಿಐ, ತಂತ್ರಜ್ಞಾನ ದೈತ್ಯರು ಮತ್ತು ಸಿಬಿಐ ಸಹಯೋಗದೊಂದಿಗೆ ವಿವಿಧ ಹಂತಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ. ಇದಲ್ಲದೆ, ಜನಪ್ರಿಯ ತ್ವರಿತ ಸಂದೇಶ ಅಪ್ಲಿಕೇಶನ್ ವಾಟ್ಸ್​ಆ್ಯಪ್ (WhatsApp) ಸಹ ಅಪರಾಧಗಳಲ್ಲಿ ಭಾಗಿಯಾಗಿರುವ 9,400 ಖಾತೆಗಳನ್ನು ನಿಷೇಧಿಸಿದೆ. ವರದಿಗಳ ಪ್ರಕಾರ, ಈ ಮಾಹಿತಿಯನ್ನು ಗೃಹ ಸಚಿವಾಲಯದ (ಎಂಎಚ್‌ಎ) ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (ಐ 4 ಸಿ) ಒದಗಿಸಿದೆ. ಸುಪ್ರೀಂ ಕೋರ್ಟ್‌ನ ಫೆಬ್ರವರಿ 9, 2026 ರ ತೀರ್ಪಿನ ನಂತರ, ದೇಶದಲ್ಲಿ ಹೆಚ್ಚುತ್ತಿರುವ ಡಿಜಿಟಲ್ ಬಂಧನ ಪ್ರಕರಣಗಳನ್ನು ತಡೆಯಲು ಐ 4 ಸಿ ಸ್ಥಿತಿ ವರದಿಯನ್ನು ಸಲ್ಲಿಸಿದೆ.

ಸರ್ಕಾರದ ಸೂಚನೆಗಳು

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ನೇತೃತ್ವದ ಪೀಠವು ಹಲವಾರು ನಿರ್ದೇಶನಗಳನ್ನು ನೀಡಿದೆ, ಅವುಗಳಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (RBI), ದೂರಸಂಪರ್ಕ ಇಲಾಖೆ (DoT) ಮತ್ತು ಇತರ ಸಂಸ್ಥೆಗಳು ಡಿಜಿಟಲ್ ಬಂಧನ ಪ್ರಕರಣಗಳಲ್ಲಿ ಪರಿಹಾರವನ್ನು ಒದಗಿಸಲು ಸಭೆ ಸೇರಿ ಕಾರ್ಯತಂತ್ರವನ್ನು ಅಭಿವೃದ್ಧಿಪಡಿಸಲು ನಿರ್ದೇಶಿಸುವುದು ಸೇರಿದೆ. ಅಟಾರ್ನಿ ಜನರಲ್ ಆರ್. ವೆಂಕಟರಮಣಿ ಅವರು ಹೊಸ ಸ್ಥಿತಿ ವರದಿಯನ್ನು ಸಲ್ಲಿಸಿದ್ದಾರೆ.

9400 ಖಾತೆಗಳನ್ನು ನಿಷೇಧಿಸಲಾಗಿದೆ

  • I4C, MEITY (ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯ) ಮತ್ತು DoT ಎತ್ತಿದ ಕಳವಳಗಳಿಗೆ ಪ್ರತಿಕ್ರಿಯೆಯಾಗಿ, ವಾಟ್ಸ್​ಆ್ಯಪ್​ ಜನವರಿ 2026 ರಲ್ಲಿ ತನಿಖೆಯನ್ನು ಪ್ರಾರಂಭಿಸಿತು, ಇದು ಹಲವಾರು ವಾರಗಳ ಕಾಲ ನಡೆಯಿತು ಎಂದು ವರದಿ ಹೇಳಿದೆ.
  • ಭಾರತೀಯ ಬಳಕೆದಾರರನ್ನು ಗುರಿಯಾಗಿಸಿಕೊಂಡು ನಡೆಯುವ ‘ಡಿಜಿಟಲ್ ಬಂಧನ’ ವಂಚನೆಗಳನ್ನು ತಡೆಯುವುದು ಇದರ ಪ್ರಮುಖ ಉದ್ದೇಶವಾಗಿತ್ತು.
  • ತನಿಖೆಯು ಹಲವಾರು ವಿಧಾನಗಳನ್ನು ಬಳಸಿಕೊಳ್ಳಲಾಗಿದೆ, ಅವುಗಳಲ್ಲಿ ಆರಂಭಿಕ ಸಂಕೇತಗಳನ್ನು ಗುರುತಿಸುವುದು, ನೆಟ್‌ವರ್ಕ್ ಅನ್ನು ಪತ್ತೆಹಚ್ಚುವುದು, ಸಂಪೂರ್ಣ ನೆಟ್‌ವರ್ಕ್ ವಿರುದ್ಧ ಕ್ರಮ ಕೈಗೊಳ್ಳುವುದು ಮತ್ತು ದೊಡ್ಡ ಪ್ರಮಾಣದ ಸ್ವಯಂಚಾಲಿತ ಭದ್ರತಾ ಕವಚವನ್ನು ನಿಯೋಜಿಸುವುದು ಸೇರಿವೆ.
  • ಡಿಜಿಟಲ್ ಬಂಧನಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ಭಾಗಿಯಾಗಿದ್ದಕ್ಕಾಗಿ 9,400 ಖಾತೆಗಳನ್ನು ನಿಷೇಧಿಸಲಾಗಿದೆ ಎಂದು ವರದಿ ಹೇಳುತ್ತದೆ.

ಸಿಮ್ ಕಾರ್ಡ್‌ಗಳನ್ನು 2-3 ಗಂಟೆಗಳ ಒಳಗೆ ಬ್ಲಾಕ್ ಮಾಡಲಾಗುತ್ತದೆ

  • ವಂಚನೆಯ ಸಿಮ್ ಕಾರ್ಡ್‌ಗಳನ್ನು ತೆಗೆದುಹಾಕಲು DoT ಮತ್ತು ದೂರಸಂಪರ್ಕ ಸೇವಾ ಪೂರೈಕೆದಾರರು (TSPs) ಕಟ್ಟುನಿಟ್ಟಾದ ಗಡುವನ್ನು ನಿಗದಿಪಡಿಸಿದ್ದಾರೆ.
  • ಅನುಮಾನಾಸ್ಪದ ಸಿಮ್ ಕಾರ್ಡ್‌ಗಳನ್ನು ಗುರುತಿಸಿದ 2 ರಿಂದ 3 ಗಂಟೆಗಳಲ್ಲಿ ನಿರ್ಬಂಧಿಸುವ ವ್ಯವಸ್ಥೆಯಲ್ಲಿ ಸಮಿತಿಯೊಂದು ಕಾರ್ಯನಿರ್ವಹಿಸುತ್ತಿದೆ ಎಂದು ವರದಿ ತಿಳಿಸಿದೆ.
  • ಈ ಸಭೆಯ ಪ್ರಮುಖ ಪ್ರಸ್ತಾಪಗಳಲ್ಲಿ ‘ಬಯೋಮೆಟ್ರಿಕ್ ಗುರುತಿನ ಪರಿಶೀಲನಾ ವ್ಯವಸ್ಥೆ’ (BIVS) ಅನ್ನು ಜಾರಿಗೆ ತರುವುದು ಕೂಡ ಒಂದು.
  • ಇದರ ಮೂಲಕ, ವಿವಿಧ ನೆಟ್‌ವರ್ಕ್‌ಗಳಲ್ಲಿ ಸಿಮ್ ಕಾರ್ಡ್‌ಗಳನ್ನು ನೀಡುವ ಪ್ರಕ್ರಿಯೆಯನ್ನು ನೈಜ ಸಮಯದಲ್ಲಿ ಮೇಲ್ವಿಚಾರಣೆ ಮಾಡಬಹುದು.
  • ಡಿಸೆಂಬರ್ 2026 ರೊಳಗೆ ಈ ವ್ಯವಸ್ಥೆಯನ್ನು ಕಾರ್ಯಗತಗೊಳಿಸುವ ಕಾರ್ಯವನ್ನು DoT ಗೆ ನೀಡಲಾಗಿದೆ ಎಂದು ವರದಿ ಹೇಳುತ್ತದೆ.

Reliance Jio: ಜಿಯೋ ಬಳಕೆದಾರರಿಗೆ ಅಚ್ಚರಿ ವೈಶಿಷ್ಟ್ಯ: ತಪ್ಪು ಸಂಖ್ಯೆಗೆ ರೀಚಾರ್ಜ್ ಮಾಡಿದರೆ ಹಣ ವಾಪಸ್

ಪೊಲೀಸ್ ಅಧಿಕಾರಿಯ ಫೋಟೋ ಪೋಸ್ಟ್ ಮಾಡಿದ ಬಗ್ಗೆ ತನಿಖೆ

  • ಬಳಕೆದಾರರ ಸುರಕ್ಷತೆಯನ್ನು ಮತ್ತಷ್ಟು ಹೆಚ್ಚಿಸಲು ವಾಟ್ಸ್​ಆ್ಯಪ್​ ಹಲವಾರು ಕ್ರಮಗಳನ್ನು ಜಾರಿಗೆ ತರುತ್ತಿದೆ.
  • ಇವುಗಳಲ್ಲಿ ವ್ಯಕ್ತಿಗಳನ್ನು ಗುರುತಿಸುವುದು ಸೇರಿದೆ. ಕಂಪನಿಯು ತಮ್ಮ ಡಿಸ್​ಪ್ಲೇ ಫೋಟೋಗಳಲ್ಲಿ ಅಧಿಕೃತ ಪೊಲೀಸ್ ಅಥವಾ ಸರ್ಕಾರಿ ಲಾಂಛನಗಳನ್ನು ಬಳಸುವ ಖಾತೆಗಳನ್ನು ಗುರುತಿಸುತ್ತದೆ ಮತ್ತು ತೆಗೆದುಹಾಕುತ್ತದೆ.
  • ಹೆಚ್ಚುವರಿಯಾಗಿ, “ಹೊಸದಾಗಿ ರಚಿಸಲಾದ” ಅಥವಾ “ನಿಯಮಿತವಲ್ಲದ” ಅಥವಾ ಬಾಟ್ ಖಾತೆಗಳಿಂದ ಕರೆಗಳನ್ನು ಸ್ವೀಕರಿಸಿದಾಗ ಬಳಕೆದಾರರಿಗೆ ಎಚ್ಚರಿಕೆ ನೀಡುವ ಹೊಸ ವೈಶಿಷ್ಟ್ಯವನ್ನು ಹೊರತರುವ ಬಗ್ಗೆ ವಾಟ್ಸ್​ಆ್ಯಪ್​ ಪರಿಗಣಿಸುತ್ತಿದೆ.
  • ಸ್ಕ್ಯಾಮರ್‌ಗಳು ಅಧಿಕೃತ ಮಾಹಿತಿಯನ್ನು ಬಳಸಿಕೊಂಡು ವಂಚನೆ ಮಾಡುವುದನ್ನು ತಡೆಯಲು ಶಂಕಿತ ಅನಾಮಧೇಯ ಕರೆ ಮಾಡುವವರ ಪ್ರೊಫೈಲ್ ಚಿತ್ರವನ್ನು ಸ್ವಯಂಚಾಲಿತವಾಗಿ ಮರೆಮಾಡುವ ಪ್ರಕ್ರಿಯೆಯನ್ನು ಪರಿಚಯಿಸಲಾಗುವುದು ಎಂದು ವರದಿ ಹೇಳುತ್ತದೆ.

ವಾಟ್ಸ್​ಆ್ಯಪ್​ನಿಂದ ದೊಡ್ಡ ಭರವಸೆ

  • ನಾಲ್ಕರಿಂದ ಆರು ವಾರಗಳಲ್ಲಿ ‘ಸಿಮ್-ಬೈಂಡಿಂಗ್’ ವ್ಯವಸ್ಥೆ ಸೇರಿದಂತೆ ಹಲವಾರು ಭದ್ರತಾ ಕ್ರಮಗಳನ್ನು ಜಾರಿಗೆ ತರುವುದಾಗಿ ವಾಟ್ಸ್​ಆ್ಯಪ್​ ಭರವಸೆ ನೀಡಿದೆ.
  • ವರದಿಯ ಪ್ರಕಾರ, ಆರ್‌ಬಿಐ ಪ್ರಮಾಣಿತ ಕಾರ್ಯಾಚರಣಾ ಕಾರ್ಯವಿಧಾನವನ್ನು (ಎಸ್‌ಒಪಿ) ಅಂತಿಮಗೊಳಿಸಿದೆ. ಈ ಎಸ್‌ಒಪಿ ಅಡಿಯಲ್ಲಿ, ಅಕ್ರಮ ಹಣ ವಹಿವಾಟು ಅಂದರೆ ಹಣ ಮ್ಯೂಲ್‌ಗಳಂತಹ ಚಟುವಟಿಕೆಗಳನ್ನು ತಾತ್ಕಾಲಿಕವಾಗಿ ನಿಷೇಧಿಸಲು ಬ್ಯಾಂಕುಗಳಿಗೆ ಸೂಚಿಸಲಾಗಿದೆ.

ತಂತ್ರಜ್ಞಾನ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

MI vs SRH: ವರ್ಕ್ ಆಗುತ್ತಿಲ್ಲ ಜಸ್ಪ್ರೀತ್ ಮ್ಯಾಜಿಕ್: ವಾಂಖೆಡೆಯಲ್ಲಿ ವೃತ್ತಿಜೀವನದ ದುಬಾರಿ ಬೌಲಿಂಗ್ ಮಾಡಿದ ಬುಮ್ರಾ – Kannada News | Jasprit Bumrah magic not working in IPL 2026 He bowls most expensive bowling of his career at Wankhede

ಬೆಂಗಳೂರು (ಏ. 30): ಐಪಿಎಲ್ 2026 ರ 41 ನೇ ಪಂದ್ಯದಲ್ಲಿ, ಮುಂಬೈ ಇಂಡಿಯನ್ಸ್ ತಂಡವು ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಹೀನಾಯ ಸೋಲು ಅನುಭವಿಸಿತು. ಮೊದಲು ಬ್ಯಾಟ್ ಮಾಡಿದ ಮುಂಬೈ ತಂಡವು 243 ರನ್ ಗಳಿಸಿತು. ವಿಶ್ವಶ್ರೇಷ್ಠ ಬೌಲರ್​ಗಳನ್ನು ಹೊಂದಿರುವ ಮುಂಬೈಗೆ ಈ ಪಂದ್ಯದಲ್ಲಿ ಗೆಲುವು ಖಚಿತ ಎಂದೇ ನಂಬಲಾಗಿತ್ತು. ಆದರೆ, ಹೈದರಾಬಾದ್ ತಂಡವು ಎಂಟು ಎಸೆತಗಳು ಬಾಕಿ ಇರುವಾಗಲೇ ಗುರಿಯನ್ನು ಬೆನ್ನಟ್ಟಿತು. ಈ ಪಂದ್ಯದಲ್ಲಿ, ಮುಂಬೈ ಇಂಡಿಯನ್ಸ್‌ನ ಪ್ರಮುಖ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ತೀವ್ರ ಮುಜುಗರಕ್ಕೆ ಒಳಗಾದರು. ಬುಮ್ರಾ ಅವರನ್ನು ವಿಶ್ವದ ಅತ್ಯುತ್ತಮ ವೇಗಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿದೆ, ಆದರೆ ಅವರು ಐಪಿಎಲ್ 2026 ರಲ್ಲಿ ಕಷ್ಟಪಡುತ್ತಿದ್ದಾರೆ.

4 ಓವರ್‌ಗಳಲ್ಲಿ 54 ರನ್‌ಗಳನ್ನು ನೀಡಿದ ಬುಮ್ರಾ

ಜಸ್ಪ್ರೀತ್ ಬುಮ್ರಾ ತಮ್ಮ ನಾಲ್ಕು ಓವರ್ ಸ್ಪೆಲ್ ನಲ್ಲಿ 54 ರನ್ ಬಿಟ್ಟುಕೊಟ್ಟರು. ಅವರು ತಮ್ಮ ಮೊದಲ ಓವರ್ ನಲ್ಲಿ 14 ರನ್ ಬಿಟ್ಟುಕೊಟ್ಟರು, ಅದರಲ್ಲಿ ನಾಲ್ಕು ಲೆಗ್ ಬೈಗಳು, ಆದರೆ ಅವುಗಳು ಅವರ ಖಾತೆಗೆ ಸೇರಲಿಲ್ಲ. ಬುಮ್ರಾ ತಮ್ಮ ಎರಡನೇ ಓವರ್ ನಲ್ಲಿ ಎರಡು ಸಿಕ್ಸರ್ ಮತ್ತು ಒಂದು ಬೌಂಡರಿ ಸೇರಿದಂತೆ 18 ರನ್ ಬಿಟ್ಟುಕೊಟ್ಟರು. ಮೂರನೇ ಓವರ್ ನಲ್ಲಿ 13 ರನ್ ಮತ್ತು ನಾಲ್ಕನೇ ಓವರ್ ನಲ್ಲಿ 13 ರನ್ ಕೊಟ್ಟರು. ಹೀಗಾಗಿ, ಬುಮ್ರಾ ನಾಲ್ಕು ಓವರ್ ಗಳಲ್ಲಿ 54 ರನ್ ಬಿಟ್ಟುಕೊಟ್ಟರು.

ಮುಂಬೈ ಇಂಡಿಯನ್ಸ್‌ನ ತವರು ಮೈದಾನವಾದ ವಾಂಖೆಡೆ ಕ್ರೀಡಾಂಗಣದಲ್ಲಿ ಜಸ್ಪ್ರೀತ್ ಬುಮ್ರಾ ಅವರ ಅತ್ಯಂತ ದುಬಾರಿ ಸ್ಪೆಲ್ ಇದು. ಅವರು ಇದಕ್ಕೂ ಮೊದಲು 11 ವರ್ಷಗಳ ಹಿಂದೆ 2015 ರಲ್ಲಿ ವಾಂಖೆಡೆಯಲ್ಲಿ ಆರ್‌ಸಿಬಿ ವಿರುದ್ಧ 52 ರನ್‌ಗಳನ್ನು ಬಿಟ್ಟುಕೊಟ್ಟಿದ್ದರು. ಒಟ್ಟಾರೆ ಟಿ 20 ಕ್ರಿಕೆಟ್‌ನಲ್ಲಿ ಇದು ಬುಮ್ರಾ ಅವರ ನಾಲ್ಕನೇ ಅತ್ಯಂತ ದುಬಾರಿ ಸ್ಪೆಲ್ ಆಗಿದೆ. ಈ ವರ್ಷ ಟಿ 20 ಅಂತರರಾಷ್ಟ್ರೀಯ ಕ್ರಿಕೆಟ್‌ನಲ್ಲಿ ನ್ಯೂಜಿಲೆಂಡ್ ವಿರುದ್ಧ ಅವರು ತಮ್ಮ ಅತ್ಯಂತ ದುಬಾರಿ ಸ್ಪೆಲ್ ಅನ್ನು ಎಸೆದರು.

Riyan Parag Vaping Row: ರಿಯಾನ್ ಪರಾಗ್ ವಿವಾದದ ಬಗ್ಗೆ ಕೆಂಡಾಮಂಡಲರಾದ ಅಂಪೈರ್ ಅನಿಲ್ ಚೌಧರಿ: ಏನು ಹೇಳಿದ್ರು ನೋಡಿ

ಟಿ20 ಕ್ರಿಕೆಟ್‌ನಲ್ಲಿ ಜಸ್ಪ್ರೀತ್ ಬುಮ್ರಾ ಅವರ ಅತ್ಯಂತ ದುಬಾರಿ ಸ್ಪೆಲ್‌ಗಳು

  • 0/58 vs NZ, ತಿರುವನಂತಪುರಂ, 2026
  • 1/56 vs CSK, ದೆಹಲಿ, 2021
  • 1/55 vs DC, ದೆಹಲಿ, 2015
  • 0/54 vs SRH, ಮುಂಬೈ, 2026
  • 0/52 vs RCB, ಮುಂಬೈ, 2015

ಮುಂಬೈ ವಿರುದ್ಧ ಅತಿ ದೊಡ್ಡ ಚೇಸ್

ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ಇಂಡಿಯನ್ಸ್ 5 ವಿಕೆಟ್‌ಗಳಿಗೆ 243 ರನ್ ಗಳಿಸಿತು. ರಯಾನ್ ರಿಕಲ್ಟನ್ ತಮ್ಮ ಶತಕದ ಇನ್ನಿಂಗ್ಸ್‌ನಲ್ಲಿ ಅಜೇಯ 123 ರನ್ ಗಳಿಸಿದರು. ಅವರು 55 ಎಸೆತಗಳಲ್ಲಿ 10 ಬೌಂಡರಿ ಮತ್ತು 8 ಸಿಕ್ಸರ್‌ಗಳನ್ನು ಬಾರಿಸಿದರು. ಹೈದರಾಬಾದ್ 18.4 ಓವರ್‌ಗಳಲ್ಲಿ 249 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿತು. ಟ್ರಾವಿಸ್ ಹೆಡ್ 30 ಎಸೆತಗಳಲ್ಲಿ 76 ರನ್ ಗಳಿಸಿದರೆ, ಹೆನ್ರಿಕ್ ಕ್ಲಾಸೆನ್ 30 ಎಸೆತಗಳಲ್ಲಿ 65 ರನ್ ಗಳಿಸಿದರು. ಅಭಿಷೇಕ್ ಶರ್ಮಾ 24 ಎಸೆತಗಳಲ್ಲಿ 45 ರನ್ ಗಳಿಸಿದರು. ಸಲೀಲ್ ಅರೋರಾ ಕೇವಲ 10 ಎಸೆತಗಳಲ್ಲಿ 30 ರನ್ ಗಳಿಸಿದರು.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಕರ್ನಾಟಕ ಹವಾಮಾನ ವರದಿ: ಬೆಂಗಳೂರು ಸೇರಿದಂತೆ ರಾಜ್ಯದ ಈ ಜಿಲ್ಲೆಗಳಲ್ಲಿ ಗುಡುಗು ಸಹಿತ ಅಬ್ಬರಿಸಲಿದ್ದಾನೆ ವರುಣ – Kannada News | Karnataka Weather Today: Heatwave Continues, Rain Expected in Bengaluru and South Interior

ಬೆಂಗಳೂರು, ಏಪ್ರಿಲ್​​ 30: ರಾಜ್ಯದಲ್ಲಿ ಇಂದು ಕೂಡ ಬಿಸಿಲಿನ ಅಬ್ಬರ ಮುಂದುವರಿಯಲಿದ್ದು, ಕೆಲ ಭಾಗಗಳಲ್ಲಿ ಮಾತ್ರ ಸಂಜೆ ವೇಳೆಗೆ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಕಲಬುರಗಿ ಮತ್ತು ಬೀದರ್​​ನಲ್ಲಿ ತಾಪಮಾನ ಹೆಚ್ಚಿರಲಿದ್ದು, ಗರಿಷ್ಠ 39ರಿಂದ 40 ಡಿಗ್ರಿ ಸೆಲ್ಸಿಯಸ್​​ ವರೆಗೆ ಉಷ್ಣಾಂಶ ತಲುಪುವ ಸಾಧ್ಯತೆ ಇದೆ. ಕರಾವಳಿ ಜಿಲ್ಲೆಗಳು ಸೇರಿದಂತೆ ಬೆಂಗಳೂರಿನಲ್ಲಿಯೂ ತಾಪಮಾನ ಎಂದಿನಂತೆ ಇರಲಿದ್ದು, ಜನರಿಗೆ ಸೆಕೆಯ ಅನುಭವ ಮುಂದುವರಿಯಲಿದೆ. ಕೆಲ ಜಿಲ್ಲೆಗಳಲ್ಲಿ ಬಿಸಿ ಗಾಳಿ ಮತ್ತು ತೇವಾಂಶ ಎಚ್ಚರಿಕೆಯನ್ನು ನೀಡಲಾಗಿದೆ.

ದಕ್ಷಿಣ ಒಳನಾಡು ಜಿಲ್ಲೆಗಳಾದ ಮೈಸೂರು, ತುಮಕೂರು, ಮಂಡ್ಯ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಕಂಡುಬರಲಿದ್ದು, ಹಗಲಿನ ವೇಳೆ ತಾಪಮಾನ 36-38 ಡಿಗ್ರಿ ಸೆಲ್ಸಿಯಸ್​​ವರೆಗೆ ತಲುಪಲಿದೆ. ಹಾಗೆಯೇ ಉತ್ತರ ಒಳನಾಡು ಭಾಗದ ಜಿಲ್ಲೆಗಳಾದ ಬೆಳಗಾವಿ, ಬಾಗಲಕೋಟೆ, ವಿಜಯಪುರ ಮತ್ತು ಧಾರವಾಡ ಭಾಗದಲ್ಲಿ ಒಳ ಮತ್ತು ಬಿಸಿ ಹವೆಯ ವಾತಾವರಣ ಮುಂದುವರಿಯುವ ಸಾಧ್ಯತೆ ಇದೆ.

ಇದನ್ನೂ ಓದಿ: ಬೆಂಗಳೂರು ಮಳೆಗೆ ಮತ್ತೊಂದು ಸಾವು; ಜೆ.ಪಿ. ನಗರದ ಮಿನಿ ಫಾರೆಸ್ಟ್ ಬಳಿ ಶಾಕ್ ಹೊಡೆದು ರಘು ದುರ್ಮರಣ, ಒಟ್ಟು 9 ಬಲಿ!

ಕರಾವಳಿಗರಿಗೆ ಎಚ್ಚರಿಕೆ

ಕರಾವಳಿ ಜಿಲ್ಲೆಗಳಾದ ಮಂಗಳೂರು, ಕಾರವಾರ ಮತ್ತು ಉಡುಪಿಯಲ್ಲಿ ಬಿಸಿಲು ಮತ್ತು ತೇವಾಂಶ ಹೆಚ್ಚಾಗಿ ಕಂಡುಬರಲಿದ್ದು, ಇದೇ ರೀತಿಯ ಹವಾಮಾನ ಮುಂದಿನ ಎರಡು ದಿನಗಳವರೆಗೆ ಮುಂದುವರಿಯುವ ಸಾಧ್ಯತೆ ಇದೆ. ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಯಲ್ಲಿ ತೀವ್ರ ತಾಪಮಾನ ಕಂಡುಬರುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ಬಿಸಿ ಗಾಳಿ ಮತ್ತು ತೇವಾಂಶ ಎಚ್ಚರಿಕೆಯನ್ನು ನೀಡಿದೆ. ಅದಾಗಿಯೂ ಕರಾವಳಿ ಭಾಗದ ಕೆಲವೆಡೆ ತುಂತುರು ಮಳೆಯ ಸಾಧ್ಯತೆ ಅಂದಾಜಿಸಲಾಗಿದೆ.

ಎಲ್ಲೆಲ್ಲಿ ಮಳೆ?

ದಕ್ಷಿಣ ಒಳನಾಡು ಕರ್ನಾಟಕ ಮತ್ತು ಪಶ್ಚಿಮ ಘಟ್ಟ ಪ್ರದೇಶಗಳಲ್ಲಿ ವಿಶೇಷವಾಗಿ ಸಂಜೆ ವೇಳೆ ಕೆಲವೆಡೆ ಗಾಳಿಯೊಂದಿಗೆ ಲಘು ಅಥವಾ ಮಧ್ಯಮ ಪ್ರಮಾಣದ ಮಳೆ ಸಾಧ್ಯತೆ ಇದೆ. ಗುಡುಗು ಸಹಿತ ಮಳೆಯ ಸಂಭವವೂ ಇದೆ ಎನ್ನಲಾಗಿದೆ. ರಾಜಧಾನಿ ಬೆಂಗಳೂರಿನಲ್ಲಿಯೂ ಹಗಲಿನ ವೇಳೆ ಕನಿಷ್ಠ 24ರಿಂದ ಗರಿಷ್ಠ 36 ಡಿಗ್ರಿ ಸೆಲ್ಸಿಯಸ್​​ ಉಷ್ಣಾಂಶ ಇರಲಿದೆಯಾದರೂ, ಸಂಜೆ ಅಥವಾ ರಾತ್ರಿ ವೇಳೆಗೆ ಸಾಮಾನ್ಯ ಮಳೆಯಾಗಬಹುದು ಎಂದು ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಮತ್ತಷ್ಟು ಸುದ್ದಿ ಓದಲು ಇಲ್ಲಿ ಕ್ಲಿಕ್​​ ಮಾಡಿ.

Published On – 7:25 am, Thu, 30 April 26

Source link