‘ಪವನ್ ಕಲ್ಯಾಣ್ ಪುತ್ರನಿಗಾಗಿ ನೂರಾರು ಕೋಟಿ ಸುರಿಯಲು ರೆಡಿ’ – Kannada News | Producer wants to make pan world movie with Pawan Kalyan’s son Akira Nanda
ಪವನ್ ಕಲ್ಯಾಣ್ (Pawan Kalyan) ತೆಲುಗು ಚಿತ್ರರಂಗದ ಸ್ಟಾರ್ ನಟ. ಈಗಾಗಲೇ ಅವರು ಚಿತ್ರರಂಗಕ್ಕೆ ಅಲ್ಪ ವಿರಾಮ ಇಟ್ಟು, ಸಂಪೂರ್ಣವಾಗಿ ರಾಜಕೀಯದಲ್ಲಿ ತೊಡಗಿಸಿಕೊಂಡಿದ್ದಾರೆ. ಆಂಧ್ರ ಪ್ರದೇಶ ಡಿಸಿಎಂ ಆಗಿರುವ ಪವನ್ ಕಲ್ಯಾಣ್, ಕೆಲವು ಪ್ರಮುಖ ಖಾತೆಗಳನ್ನು ಸಹ ನಿಭಾಯಿಸುತ್ತಿದ್ದಾರೆ. ಆದರೆ ಚುನಾವಣೆಗೆ ಮುಂಚೆ ಒಪ್ಪಿಕೊಂಡಿದ್ದ ಕೆಲ ಸಿನಿಮಾಗಳಲ್ಲಿ ನಟಿಸಿದ್ದು, ಇನ್ನೊಂದು ಸಿನಿಮಾ ಮಾತ್ರ ಬಾಕಿ ಉಳಿದಿದೆ. ಆ ಸಿನಿಮಾದ ಬಳಿಕ ಸಂಪೂರ್ಣವಾಗಿ ಸಿನಿಮಾದಿಂದ ದೂರಾಗುವುದಾಗಿ ಪವನ್ ಕಲ್ಯಾಣ್ ಈಗಾಗಲೇ ಹೇಳಿದ್ದಾರೆ. ಇದು ಅಭಿಮಾನಿಗಳಿಗೆ ಬೇಸರ ತಂದಿದೆ. ಹಾಗಾಗಿ…