ಕುವೆಂಪು ವಿವಿಯಲ್ಲಿ ತಾರಕ್ಕೇರಿದ್ದ ವಿದ್ಯಾರ್ಥಿಗಳ ಪ್ರತಿಭಟನೆ: ಕುಲಪತಿ, ಕುಲಸಚಿವರನ್ನ ವಜಾಗೊಳಿಸುವಂತೆ ಪಟ್ಟು – Kannada News | Shivamogga: Kuvempu University Students Protest, Demand Dismissal of Chancellor and Registrar
ಶಿವಮೊಗ್ಗ, ಏಪ್ರಿಲ್ 29: ಶಿವಮೊಗ್ಗದ ಕುವೆಂಪು ವಿಶ್ವವಿದ್ಯಾಲಯದಲ್ಲಿ ಶುಲ್ಕ ಹೆಚ್ಚಳ, ಫಲಿತಾಂಶ ಗೊಂದಲಗಳು ಮತ್ತು ಮೂಲಭೂತ ಸೌಕರ್ಯಗಳ ಕೊರತೆಯನ್ನು ವಿರೋಧಿಸಿ ಎನ್ಎಸ್ ಯುಐ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದಾರೆ. ಕಳೆದ ಎರಡು ವರ್ಷಗಳಿಂದ ಕುಲಪತಿ, ಕುಲಸಚಿವ ಮತ್ತು ಮೌಲ್ಯಮಾಪನ ರಿಜಿಸ್ಟ್ರಾರ್‌ಗಳಿಗೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ತಾಂತ್ರಿಕ ಸಮಸ್ಯೆಗಳ ನೆಪದಲ್ಲಿ ವಿದ್ಯಾರ್ಥಿ ವಿರೋಧಿ ನೀತಿಗಳನ್ನು ಅನುಸರಿಸಲಾಗುತ್ತಿದೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ. ಹಿಂದೆ ಪಾಸ್ ಆಗಿದ್ದ ಫಲಿತಾಂಶಗಳು ಈಗ ಮಾಸ್ ಕಾರ್ಡ್‌ಗಳಲ್ಲಿ ಫೇಲ್ ಎಂದು…