Headlines

Video: ಹುಷಾರಿಲ್ಲ ಅಂದ್ರೆ ಪ್ರೂಫ್ ಕೊಡು ಎಂದ ಅಧಿಕಾರಿ, ಐವಿ ಡ್ರಿಪ್​ ಹಾಕಿಸಿಕೊಂಡು ಕೆಲಸಕ್ಕೆ ಹಾಜರಾದ ಅಂಗನವಾಡಿ ಕಾರ್ಯಕರ್ತೆ – Kannada News | Bihar Worker Turns Up With IV Drip After Asked for Illness Proof

ಪಾಟ್ನಾ, ಏಪ್ರಿಲ್ 29: ಹುಷಾರಿಲ್ಲ ರಜೆ ಬೇಕು ಅಂದ್ರೆ ಅಧಿಕಾರಿ ಪ್ರೂಫ್ ಕೊಡು ಎಂದು ಕೇಳಿದ್ದಕ್ಕೆ ಅಂಗನವಾಡಿ ಕಾರ್ಯಕರ್ತೆ ಐವಿ ಡ್ರಿಪ್ ಹಾಕಿಸಿಕೊಂಡು ಆಸ್ಪತ್ರೆಗೆ ಹಾಜರಾಗಿರುವ ಘಟನೆ ಬಿಹಾರದಲ್ಲಿ ನಡೆದಿದೆ. ವೈರಲ್ ಆಗಿರುವ ಈ ವೀಡಿಯೊದಲ್ಲಿ, ಮಹಿಳೆ ಐವಿ ಡ್ರಿಪ್ ಹಾಕಿಸಿಕೊಂಡಿರುವುದು, ನಡುಗುತ್ತಾ ಪತಿಯ ಸಹಾಯದಿಂದ ನಡೆದುಕೊಂಡು ಹೋಗುತ್ತಿರುವುದನ್ನು ಕಾಣಬಹುದು. ಆಕೆ ಕೆಲಸಕ್ಕೆ ಬಾರದಿದ್ದಾಗ ಅಧಿಕಾರಿಯೊಬ್ಬರು ಕರೆ ಮಾಡಿದಾಗ ಆಕೆಗೆ ಅನಾರೋಗ್ಯ, ಕೆಲಸಕ್ಕೆ ಬರಲು ಸಾಧ್ಯವಿಲ್ಲ ಎಂದು ಪತಿ ಹೇಳಿದ್ದಾರೆ. ಆದರೆ ಅಷ್ಟಕ್ಕೆ ಸುಮ್ಮನಿರದ ಅಧಿಕಾರಿ ಪುರಾವೆ…

Read More

ಮನೆ ಬಾಗಿಲು ಹಾಕಲು ಮರೆತು ಹೋದ ಯುವತಿ, ಪಾರ್ಸೆಲ್ ಡೆಲಿವರಿಗೆಂದು ಬಂದ ವ್ಯಕ್ತಿ ಮಾಡಿದ್ದೇನು? – Kannada News | Delivery Worker Steps Up, Guards Home After Spotting Open Door

ದಿವ್ಯಾ ಉನ್ನಿ ಯಾವುದೋ ಗಡಿಬಿಡಿಯಲ್ಲಿ ಮನೆಯ ಬಾಗಿಲು ಹಾಕದೆ ಹೊರಗೆ ಹೋಗಿದ್ದರು. ಅಮ್ಜದ್ ಮನೆಗೆ ಪಾರ್ಸೆಲ್ ಕೊಡಲು ಬಂದ ವ್ಯಕ್ತಿಯೊಬ್ಬರು ಬಾಗಿಲು ತೆರೆದಿದ್ದನ್ನು ನೋಡಿ ಮೊದಲು ಮಾಲೀಕರು ಮನೆಯೊಳಗಿದ್ದಾರೆ ಎಂದುಕೊಂಡರು. ಬಳಿಕ ಯಾರೂ ಇಲ್ಲವೆಂದು ಅರಿವಾಗಿತ್ತು. ಸಾಕಿದ ಬೆಕ್ಕು ಕೂಡ ಅಲ್ಲೇ ಇತ್ತು. ಬಳಿಕ ಪಾರ್ಸೆಲ್ ಅನ್ನು ಸುರಕ್ಷಿತವಾಗಿ ಮನೆಯ ಒಳಗೆ ಟೇಬಲ್ ಮೇಲಿರಿಸಿದ್ದಾರೆ. ಮನೆಯೊಳಗೆ ಯಾರೂ ಇಲ್ಲದಿದ್ದರೂ ಬಾಗಿಲು ತೆರೆದಿದ್ದರೆ ಕಳ್ಳರ ಭಯ ಅಥವಾ ಸಾಕುಪ್ರಾಣಿಗಳು ಓಡಿಹೋಗುವ ಅಪಾಯವಿರುತ್ತದೆ ಎಂದು ಅರಿತ ಅಮ್ಜಾದ್, ಮೊದಲು ಪಾರ್ಸೆಲ್…

Read More

45ನೇ ವಯಸ್ಸಿಗೆ ಚಿತ್ರರಂಗಕ್ಕೆ ಕಾಲಿಡುತ್ತಿದ್ದಾರೆ ಕಪೂರ್ ಕುಟುಂಬದ ಕುಡಿ – Kannada News | Neetu Kapoor’s ‘Daadi Ki Shaadi’: Riddhima Kapoor Sahni’s Bollywood Debut at 45

ನಟಿ ನೀತು ಕಪೂರ್  ನಟಿಸಿರುವ ‘ದಾದಿ ಕಿ ಶಾದಿ’ ಚಿತ್ರ ಶೀಘ್ರದಲ್ಲೇ ಬಿಡುಗಡೆಯಾಗಲಿದೆ. ಇದರಲ್ಲಿ ಹಾಸ್ಯನಟ ಕಪಿಲ್ ಶರ್ಮಾ ಮತ್ತು ಸಾದಿಯಾ ಖತೀಬ್ ಕೂಡ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದ್ದು, ಕಪೂರ್ ಕುಟುಂಬದ ಮಗಳು ಕೂಡ ಇದರಲ್ಲಿ ಕಾಣಿಸಿಕೊಂಡಿದ್ದಾರೆ. ಅವರು 45 ನೇ ವಯಸ್ಸಿನಲ್ಲಿ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದ್ದಾರೆ. ಈ ಚಿತ್ರದಲ್ಲಿ ನೀತು ಕಪೂರ್ ‘ದಾದಿ’ ಪಾತ್ರವನ್ನು ನಿರ್ವಹಿಸಿದ್ದಾರೆ. ಚಿತ್ರ ನೀತು ಕಪೂರ್‌ಗೆ ತುಂಬಾ ವಿಶೇಷವಾಗಿದೆ. ಏಕೆಂದರೆ ಅವರ ಮಗಳು ರಿದ್ಧಿಮಾ ಕಪೂರ್ ಸಾಹ್ನಿ…

Read More

ಜಿಬಿಎ ಲ್ಯಾಬ್‌ಗೆ ಅಂಟಿದ ಗ್ರಹಣ: ಬೆಂಕಿ ಅವಘಡದ ಬಳಿಕವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು! – Kannada News | BBMP/GBA Quality Control Lab Negligence: Machinery Rots After Fire Mishap

ಕ್ವಾಲಿಟಿ ಕಂಟ್ರೋಲ್ ಲ್ಯಾಬ್Image Credit source: The Hindu ಬೆಂಗಳೂರು, ಏಪ್ರಿಲ್ 29: ಸಿಲಿಕಾನ್ ಸಿಟಿಯ ಅಭಿವೃದ್ಧಿ ಕಾಮಗಾರಿಗಳ ಬೆನ್ನೆಲುಬಾಗಬೇಕಿದ್ದ ಬಿಬಿಎಂಪಿ ಗುಣನಿಯಂತ್ರಣ ಪ್ರಯೋಗಾಲಯವು (Quality Control Lab) ಸದ್ಯ ಅನಾಥ ಸ್ಥಿತಿಯಲ್ಲಿದೆ. ಎರಡು ವರ್ಷಗಳ ಹಿಂದೆ ಬಿಬಿಎಂಪಿ ಕೇಂದ್ರ ಕಚೇರಿಯ ಆವರಣದಲ್ಲಿದ್ದ ಲ್ಯಾಬ್‌ನಲ್ಲಿ ಸಂಭವಿಸಿದ ಭೀಕರ ಬೆಂಕಿ ಅವಘಡ ಹಲವರನ್ನು ಬಲಿ ಪಡೆದಿತ್ತು. ಆ ಘಟನೆಯ ನಂತರವೂ ಎಚ್ಚೆತ್ತುಕೊಳ್ಳದ ಅಧಿಕಾರಿಗಳು ಮತ್ತು ಜಿಬಿಎ (GBA), ಪ್ರಯೋಗಾಲಯದ ಪುನಶ್ಚೇತನಕ್ಕೆ ಆಸಕ್ತಿ ತೋರದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಹೊಸ…

Read More

‘ಮಗನೇ ಈಗಲೂ ನನಗೆ ಸಿನಿಮಾ ಅರ್ಥ ಆಗಿಲ್ಲ ಅಂತಿದ್ರು’; ಪ್ರಭಾಕರ್ ಮಾತು ನೆನೆದ ವಿನೋದ್ – Kannada News | Tiger Prabhakar’s Emotional Advice to Son Vinod Prabhakar Revealed at Balaramana Dinagalu Teaser Launch.

ಪ್ರಭಾಕರ್ ಅವರು ಸಾಕಷ್ಟು ಸಿನಿಮಾಗಳಲ್ಲಿ ನಟಿಸಿದ್ದರು. ಪೊಲೀಸ್​ ಆಗಿ, ಹೀರೋ ಆಗಿ, ವಿಲನ್ ಆಗಿ ಮಿಂಚಿದ್ದರು. ಅವರು ಹೇಳಿದ ಒಂದು ಮಾತನ್ನು ವಿನೋದ್ ಪ್ರಭಾಕರ್ ನೆನಪಿಸಿಕೊಂಡಿದ್ದಾರೆ.‘ಬಲರಾಮನ ದಿನಗಳು’ ಸಿನಿಮಾ ಟೀಸರ್ ಲಾಂಚ್ ವೇಳೆ ಮಾತನಾಡಿದ ಪ್ರಭಾಕರ್ ಅವರು, ‘ನಾನು ಇಷ್ಟೆಲ್ಲ ಸಿನಿಮಾ ಮಾಡಿದರೂ ನನಗೆ ಸಿನಿಮಾ ಏನು ಅನ್ನೋದು ಗೊತ್ತಾಗಿಲ್ಲ ಮಗನೆ ಎಂದು ಪ್ರಭಾಕರ್ ಹೇಳುತ್ತಿದ್ದರು’ ಎಂದು ವಿನೋದ್ ಹೇಳಿದ್ದಾರೆ. ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ. Source link

Read More

ಹಸೆಮಣೆ ಏರಬೇಕಿದ್ದ ವಧುವಿನ ದಾರುಣ ಅಂತ್ಯ, ಮದುವೆ ದಿನ ಬ್ಯೂಟಿ ಪಾರ್ಲರ್‌ಗೆ ಹೋಗುತ್ತಿದ್ದಾಗ ಅಪಘಾತ, ಯುವತಿ ಸಾವು – Kannada News | Wedding Day Tragedy: Bride Dies in Road Accident in UP

ಬರಿಯಾರ್‌ಪುರ, ಏಪ್ರಿಲ್ 29: ಮಂಗಲ ವಾದ್ಯಗಳು ಮೊಳಗಬೇಕಿದ್ದ ಮನೆಯಲ್ಲಿ ಈಗ ಸ್ಮಶಾನ ಮೌನ ಆವರಿಸಿದೆ. ಮದುವೆಗೆ ಸಿದ್ಧವಾಗಲು ಸಡಗರದಿಂದ ಬ್ಯೂಟಿ ಪಾರ್ಲರ್‌ಗೆ ಹೊರಟಿದ್ದ 22 ವರ್ಷದ ವಧು, ಮನೆಗೆ ಹೆಣವಾಗಿ ಹಿಂದಿರುಗಿದ ಘೋರ ದುರಂತ ಉತ್ತರ ಪ್ರದೇಶದಲ್ಲಿ ನಡೆದಿದೆ. ಬರಿಯಾರ್‌ಪುರದ ಗೌರ್ ಕೋಥಿ ಗ್ರಾಮದ  ರಚನಾ (22) ಅವರ ವಿವಾಹ(Marriage)ವು ಅದೇ ದಿನ ಸಂಜೆ ನಡೆಯಬೇಕಿತ್ತು. ವಧುವಿನ ಅಲಂಕಾರಕ್ಕಾಗಿ ರಚನಾ ತನ್ನ ಕಿರಿಯ ಸಹೋದರನೊಂದಿಗೆ ಬೈಕ್​​ನಲ್ಲಿ ಹತ್ತಿರದ ಬ್ಯೂಟಿ ಪಾರ್ಲರ್‌ಗೆ ಹೊರಟಿದ್ದರು. ಆದರೆ ಬೈಕ್ ನಿಯಂತ್ರಣ ತಪ್ಪಿ…

Read More

ಪಂಜಾಬ್ ಕಿಂಗ್ಸ್​ ಸೋಲಿಗೆ ಇದುವೇ ಕಾರಣ!

IPL 2026: ಐಪಿಎಲ್​ನ 40ನೇ ಪಂದ್ಯದ ಮೂಲಕ ರಾಜಸ್ತಾನ್ ರಾಯಲ್ಸ್ ತಂಡವು ಪಂಜಾಬ್ ಕಿಂಗ್ಸ್ ತಂಡದ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದೆ. ಈ ಪಂದ್ಯದಲ್ಲಿ 222 ರನ್‌ಗಳ ಬೃಹತ್ ಮೊತ್ತವನ್ನು ಪೇರಿಸಿದರೂ ಪಂಜಾಬ್ ಕಿಂಗ್ಸ್​ ತಂಡವು 6 ವಿಕೆಟ್‌ಗಳ ಸೋಲನ್ನು ಅನುಭವಿಸಿತು. ಸತತ ಏಳು ಪಂದ್ಯಗಳ ಗೆಲುವಿನ ನಂತರ ಪಂಜಾಬ್ ಎಡವಿದ್ದು ಎಲ್ಲಿ? ಇಲ್ಲಿದೆ ಕಂಪ್ಲೀಟ್ ರಿಪೋರ್ಟ್. ಡೆತ್ ಓವರ್‌ಗಳಲ್ಲಿ ಬೌಲಿಂಗ್ ವೈಫಲ್ಯ: ಪಂದ್ಯದ ನಂತರ ಮಾತನಾಡಿದ ಪಂಜಾಬ್ ಕಿಂಗ್ಸ್ ತಂಡದ ನಾಯಕ ಶ್ರೇಯಸ್ ಅಯ್ಯರ್, ಸೋಲಿಗೆ…

Read More

ಬಿಜೆಪಿ ಮುಖಂಡನ ಅನೈತಿಕ ಸಂಬಂಧಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ: ಸೊರಬ ಪುರಸಭೆ ಮಾಜಿ ಅಧ್ಯಕ್ಷ ಅರೆಸ್ಟ್! – Kannada News | Shivamogga: BJP Leader and Former Soraba TMC President Arrested After Wife ended Over Extra Marital Affair

ಶಿವಮೊಗ್ಗ, ಏಪ್ರಿಲ್ 29: ಪತಿಯ ಅನೈತಿಕ ಸಂಬಂಧ ಹಾಗೂ ದೈಹಿಕ-ಮಾನಸಿಕ ಹಿಂಸೆಯಿಂದ ಬೇಸತ್ತ ಬಿಜೆಪಿ (BJP) ಮುಖಂಡನ ಪತ್ನಿಯೊಬ್ಬರು ನೇಣಿಗೆ ಶರಣಾಗಿರುವ ಘಟನೆ ಸೊರಬ ಪಟ್ಟಣದ ಕಾನುಕೇರಿ ಬಡಾವಣೆಯಲ್ಲಿ ನಡೆದಿದೆ. ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಹೊಸವೀರಾಪುರ ಗ್ರಾಮದ ಮಂಜುಳಾ (38) ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ. ಈ ಬಗ್ಗೆ ಮೃತಳ ತಾಯಿ ಸೊರಬ ಪೋಲೀಸರಿಗೆ ದೂರು ನೀಡಿದ್ದು, ಇದರ ಆಧಾರದಲ್ಲಿ ಬಿಜೆಪಿ ಮುಖಂಡ ಪ್ರಭು ಮೇಸ್ತ್ರಿಯನ್ನು ಬಂಧಿಸಲಾಗಿದೆ. ಅಲ್ಲದೆ, ಪ್ರಭು ಮೇಸ್ತ್ರಿಯ ಹಲವು ವಿಚಾರಗಳು ಬೆಳಕಿಗೆ ಬಂದಿವೆ….

Read More

Bengaluru Air Quality: ಬಳ್ಳಾರಿ ಜನರ ಉಸಿರಿಗೆ ಕುತ್ತು: ಮಾರಕ ಹಂತಕ್ಕೆ ತಲುಪಿದ ಗಾಳಿಯ ಗುಣಮಟ್ಟ! – Kannada News | Bangalore Air Pollution Crisis: Ballari Air Quality crosses 300, Hazardous AQI noted

ಬೆಂಗಳೂರು, ಏಪ್ರಿಲ್ 29: ರಾಜ್ಯದಲ್ಲಿ ಬಳ್ಳಾರಿಯ ವಾಯು ಗುಣಮಟ್ಟ (Bengaluru Air Quality) ಏಕಾಏಕಿ 300ರ ಗಡಿ ದಾಟಿದ್ದು, ಇದೇ ಮೊದಲ ಬಾರಿಗೆ ಈ ಮಟ್ಟದಲ್ಲಿ ಹದಗೆಟ್ಟಿದೆ. ಇಷ್ಟು ದಿನ ಗರಿಷ್ಠ 200ಕ್ಕೆ ತಲುಪುತ್ತಿದ್ದ AQI ಇಂದು ಇಷ್ಟು ಹೆಚ್ಚಾಗಿರುವುದು ಆತಂಕ ಮೂಡಿಸಿದೆ. ಬೆಂಗಳೂರಿನ AQI ಸಧ್ಯಕ್ಕೆ ಒಳ್ಳೆಯ ಮಟ್ಟದಲ್ಲಿದ್ದು, ಆದರೂ ಬೆಂಗಳೂರಿನ ವಾಯು ಗುಣಮಟ್ಟ ಅನಾರೋಗ್ಯಕರ ಮಟ್ಟದಲ್ಲಿಯೆ ಇದೆ ಎಂದು ತಜ್ಞರು ತಿಳಿಸಿದ್ದಾರೆ. ಹಠಾತ್ತನೆ ಕುಸಿದ AQI ಬಳ್ಳಾರಿಯಲ್ಲಿ ವಾಯುಮಾಲಿನ್ಯದ ಮಟ್ಟವು ಅತ್ಯಂತ ಅಪಾಯಕಾರಿ (Hazardous) ಹಂತಕ್ಕೆ…

Read More

‘ಜಗದ್ಧಾತ್ರೀ’ ಎಂಟ್ರಿಗೆ ಸಿದ್ಧವಾಯ್ತು ವೇದಿಕೆ; ಮುಗಿಯುತ್ತಿರುವ ಧಾರಾವಾಹಿ ಯಾವುದು? – Kannada News | Jagaddhatri Serial: Mokshitha Pai’s Grand Return on Zee Kannada; Which Show Ends?

‘ಜಗದ್ಧಾತ್ರೀ’ ಧಾರಾವಾಹಿ ಬರಲಿದೆ ಎಂಬುದನ್ನು ಜೀ ಕನ್ನಡ ವಾಹಿನಿ ಈ ಮೊದಲೇ ಘೋಷಣೆ ಮಾಡಿದ್ದು ಎಲ್ಲರಿಗೂ ಗೊತ್ತೇ ಇದೆ. ಈಗ ಧಾರಾವಾಹಿಯ ಹೊಸ ಪ್ರೋಮೋ ಒಂದು ರಿಲೀಸ್ ಆಗಿದೆ. ಇದರಲ್ಲಿ ‘ಜಗದ್ಧಾತ್ರೀ’ ಪಾತ್ರ ಯಾವ ರೀತಿಯಲ್ಲಿ ಇರಲಿದೆ ಎಂಬುದನ್ನು ತೋರಿಸಲಾಗಿದೆ. ಜಗದ್ಧಾತ್ರೀ ಕೇವಲ ಮನೆ ಮಗಳಲ್ಲ, ಆಕೆ ಲೋಕವನ್ನು ಕಾಯುವವಳೂ ಹೌದು ಎಂಬುದನ್ನು ತೋರಿಸಿರಿವುದನ್ನು ನೀವು ಕಾಣಬಹುದು. ‘ಜಗದ್ಧಾತ್ರೀ’ ಧಾರಾವಾಹಿ ಬಗ್ಗೆ ಅಭಿಮಾನಿಗಳು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಈ ಮೊದಲು ಪ್ರೋಮೋ ಒಂದು ರಿಲೀಸ್ ಆಗಿತ್ತು. ಈಗ…

Read More