Headlines

ವೈಭವ್ ಆರ್ಭಟಕ್ಕೆ ರಸೆಲ್ ರೆಕಾರ್ಡ್ ಉಡೀಸ್ – Kannada News | Vaibhav Sooryavanshi Breaks Andre Russell’s Record

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ವೈಭವ್ ಸೂರ್ಯವಂಶಿ (Vaibhav Sooryavanshi) ಹೊಸ ಇತಿಹಾಸ ನಿರ್ಮಿಸಿದ್ದಾರೆ. ಅದು ಸಹ 6 ವರ್ಷಗಳ ಹಿಂದೆ ಆ್ಯಂಡ್ರೆ ರಸೆಲ್ (Andre Russell) ಬರೆದಿಟ್ಟಿದ್ದ ಭರ್ಜರಿ ದಾಖಲೆಯನ್ನು ಮುರಿಯುವ ಮೂಲಕ. ಮುಲ್ಲನ್​ಪುರ್​ನಲ್ಲಿ ನಡೆದ ಪಂಜಾಬ್ ಕಿಂಗ್ಸ್​ ವಿರುದ್ಧದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಪರ ಆರಂಭಿಕನಾಗಿ ಕಣಕ್ಕಿಳಿದ ವೈಭವ್ ಸೂರ್ಯವಂಶಿ ಪ್ರಚಂಡ ಬ್ಯಾಟಿಂಗ್ ಪ್ರದರ್ಶಿಸಿದ್ದರು. ಈ ಸ್ಫೋಟಕ ಬ್ಯಾಟಿಂಗ್​​ನೊಂದಿಗೆ ಕೇವಲ 16 ಎಸೆತಗಳಲ್ಲಿ 5 ಭರ್ಜರಿ ಸಿಕ್ಸರ್​​ನೊಂದಿಗೆ 43 ರನ್​ ಚಚ್ಚಿದ್ದರು. ಈ…

Read More

ಮತ್ತೆ ಒಂದಾದ ‘ಧುರಂಧರ್’ ಜೋಡಿ; ಆದಿತ್ಯ ಧಾರ್ ಹೊಸ ಚಿತ್ರಕ್ಕೆ ರಣವೀರ್ ಹೀರೋ – Kannada News | Ranveer Singh and Aditya Dhar Reunite: New Blockbuster After Dhurandhar 2 Success

ಒಂದು ಹಿಟ್ ಕಾಂಬಿನೇಷನ್ ಸಿಕ್ಕರೆ ಸಾಕು ನಂತರದಲ್ಲಿ ಇದನ್ನೇ ಮುಂದುವರಿಸಿಕೊಂಡು ಹೋಗುವ ಪ್ರಯತ್ನವನ್ನು ಮಾಡಲಾಗುತ್ತದೆ. ಹೀಗೆ ಮಾಡೋದನ್ನು ಜನರು ಕೂಡ ಇಷ್ಟಪಡುತ್ತಾರೆ. ಈಗ ರಣವೀರ್ ಸಿಂಗ್ ಹಾಗೂ ನಿರ್ದೇಶಕ ಆದಿತ್ಯ ಧಾರ್ ಅವರು ಮತ್ತೊಮ್ಮೆ ಒಟ್ಟಿಗೆ ಬರಲು ರೆಡಿ ಆಗಿದ್ದಾರೆ. ಈ ಚಿತ್ರಕ್ಕೆ ಅಭಿಮಾನಿಗಳು ಕಾದಿದ್ದಾರೆ. ಹಾಗಂತ ಈ ಸಿನಿಮಾ ಈಗಲೇ ಸೆಟ್ಟೇರುವುದಿಲ್ಲ. ಇದಕ್ಕೆ ಸಾಕಷ್ಟು ಸಮಯದ ಅಗತ್ಯವಿದೆ. ರಣವೀರ್ ಸಿಂಗ್ ಹಾಗೂ ಆದಿತ್ಯ ಧಾರ್ ಅವರು ಮೊದಲ ಬಾರಿಗೆ ಒಂದಾಗಿದ್ದು ‘ಧುರಂಧರ್’ ಸಿನಿಮಾದಲ್ಲಿ. ರಣವೀರ್ ಹಮ್ಜಾ…

Read More

ಸುಡುವ ಬಿಸಿಲು, ಉಷ್ಣ ಅಲೆಯ ನಡುವೆಯೂ ಹಂಪಿ ಮೃಗಾಲಯದ ಪ್ರಾಣಿಗಳು ಕೂಲ್ ಕೂಲ್! ಹೇಗೆ ಗೊತ್ತಾ? – Kannada News | Hampi Zoo Animals Stay Cool Amid 40 degree celsius Heat: Sprinklers and Water Ponds Deployed to Prevent Dehydration

ಹಂಪಿ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನದಲ್ಲಿ ವಿರಮಿಸುತ್ತಿರುವ ಹುಲಿ ಬಳ್ಳಾರಿ, ಏಪ್ರಿಲ್ 29: ಕರ್ನಾಟಕದಾದ್ಯಂತ ಸೂರ್ಯನ ಪ್ರತಾಪ ದಿನದಿಂದ ದಿನಕ್ಕೆ ಹೆಚ್ಚುತ್ತಿದ್ದು, ಕೆಂಡದಂತಹ ಬಿಸಿಲು, ಉಷ್ಣ ಅಲೆಗೆ (Heat Wave) ಮನುಷ್ಯರೇ ತತ್ತರಿಸಿ ಹೋಗುತ್ತಿದ್ದಾರೆ. ಆದರೆ, ವಿಜಯನಗರ ಜಿಲ್ಲೆಯ ಹೊಸಪೇಟೆ ತಾಲೂಕಿನ ಹಂಪಿ ಅಟಲ್ ಬಿಹಾರಿ ವಾಜಪೇಯಿ ಜೈವಿಕ ಉದ್ಯಾನವನದಲ್ಲಿ (Atal Bihari Vajpayee Zoological Park) ಮಾತ್ರ ಪ್ರಾಣಿಗಳು ರಣರ ಬಿಸಿಲಿನಲ್ಲೂ ತಂಪಾಗಿವೆ. ಬಿಸಿಲಿನ ತಾಪ 40 ಡಿಗ್ರಿ ಸೆಲ್ಸಿಯಸ್ ದಾಟಿದ್ದರೂ, ಪ್ರಾಣಿಗಳಿಗೆ ಬಿಸಿಲಿನ…

Read More

ಕರ್ನಾಟಕ ಹವಾಮಾನ ವರದಿ: ರಾಜ್ಯದಲ್ಲಿಂದು ಬಿರುಗಾಳಿಯ ಜೊತೆಗೆ ಆಲಿಕಲ್ಲು ಮಳೆಯ ಅಬ್ಬರ! – Kannada News | Karnataka Weather Forecast: Hailstorm in North and south Karnataka, Rain in Bengaluru

ರಾಜ್ಯದಲ್ಲಿಂದು ಬಿರುಗಾಳಿಯ ಜೊತೆಗೆ ಆಲಿಕಲ್ಲು ಮಳೆಯ ಅಬ್ಬರ! ಬೆಂಗಳೂರು, ಏಪ್ರಿಲ್ 29: ಉಷ್ಣ ಅಲೆಯಿಂದ ಬೇಸತ್ತಿದ್ದ ಕರಾವಳಿಯಲ್ಲಿಂದು ಗುಡುಗು ಸಹಿತ ಮಳೆಯ (Karnataka Weather) ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಅದರೊಂದಿಗೆ ಉತ್ತರ ಕರ್ನಾಟಕದಲ್ಲಿ ಗುಡುಗು ಸಹಿತ ಆಲಿಕಲ್ಲು ಮಳೆಯ ಅಬ್ಬರ ಜೋರಾಗಿಯೇ ಇರಲಿದ್ದು, ಆರು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್​ ನೀಡಲಾಗಿದೆ. ಇನ್ನೂ 2-3 ದಿನಗಳ ಕಾಲ ರಾಜ್ಯದಲ್ಲಿ ಆಲಿಕಲ್ಲು ಮಳೆಯಾಗುವ ಸಂಭವವಿದೆ ಎಂದು ಮುನ್ಸೂಚನೆ ನೀಡಲಾಗಿದೆ. ಆಲಿಕಲ್ಲು ಮಳೆಯ ಅಲರ್ಟ್​! ಕರಾವಳಿಯ ಉತ್ತರ ಕನ್ನಡ,…

Read More

ಬೆಂಗಳೂರಿನ 5 ನಗರ ಪಾಲಿಕೆಗಳ ಪೈಕಿ ಕೆಲವು ವಿಲೀನ? ಆರ್ಥಿಕ ಸಂಕಷ್ಟದಲ್ಲಿ ಗ್ರೇಟರ್ ಬೆಂಗಳೂರು! – Kannada News | Greater Bengaluru Authority Faces Financial Crisis: Govt Mulls Merging 5 City Corporations Due to Revenue Shortage

ಬೆಂಗಳೂರು, ಏಪ್ರಿಲ್ 29: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (BBMP) ವಿಭಜಿಸಿ, ಸರ್ಕಾರವು ಐದು ನಗರ ಪಾಲಿಕೆಗಳುಳ್ಳ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು (GBA) ಅಸ್ತಿತ್ವಕ್ಕೆ ತಂದಿತ್ತು. ಆದರೆ, ಈ ಹೊಸ ವ್ಯವಸ್ಥೆಯಲ್ಲಿ ಈಗ ಆರ್ಥಿಕ ಸಂಕಷ್ಟದ ಭೀತಿ ಎದುರಾಗಿದ್ದು, ಐದು ಪಾಲಿಕೆಗಳ ಸಂಖ್ಯೆಯನ್ನು ಕಡಿತಗೊಳಿಸಿ ಅಥವಾ ವಿಲೀನ ಮಾಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೆರೆಮರೆಯ ಚರ್ಚೆಗಳು ಆರಂಭವಾಗಿವೆ. ವೇತನಕ್ಕೂ ಇಲ್ಲದ ಹಣ ಬಿಬಿಎಂಪಿ ಇತಿಹಾಸದ ಪುಟ ಸೇರಿದ…

Read More

West Bengal Election 2026: 142 ಕ್ಷೇತ್ರಗಳು, 1448 ಅಭ್ಯರ್ಥಿಗಳು, 3.21 ಕೋಟಿ ಮತದಾರರು, ಪಶ್ಚಿಮ ಬಂಗಾಳದಲ್ಲಿ ಇಂದು ಎರಡನೇ ಹಂತದ ಮತದಾನ – Kannada News | West Bengal Election 2026: Phase 2 Voting Begins, 3.21 Crore Voters Decide Fate

ಕೋಲ್ಕತ್ತಾ, ಏಪ್ರಿಲ್ 29: ಪಶ್ಚಿಮ ಬಂಗಾಳ(West Bengal)ದ ಹದಿನಾರನೇ ವಿಧಾನಸಭೆ ಚುನಾವಣೆಯ ಅಬ್ಬರದ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಈಗ ಎಲ್ಲರ ಕಣ್ಣು ಇಂದಿನ ಮತದಾನದ ಮೇಲೆ ನೆಟ್ಟಿದೆ. 142 ಕ್ಷೇತ್ರಗಳಲ್ಲಿ ನಡೆಯಲಿರುವ ಈ ಅಂತಿಮ ಹಂತದ ಚುನಾವಣೆಯು ರಾಜ್ಯದ ಮುಂದಿನ ಸರ್ಕಾರ ಯಾರದ್ದು ಎಂಬುದನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ. ಪ್ರಚಾರದ ಅಂತಿಮ ದಿನದಂದು ಉತ್ತರ 24 ಪರಗಣದ ಜಗತ್‌ದಲ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಗೆಲುವಿನ ಬಗ್ಗೆ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದರು. ಮುಂದಿನ ತಿಂಗಳು…

Read More

ಕಣ್ಣೀರು ಹಾಕುತ್ತಾ ಸುದ್ದಿಗೋಷ್ಠಿಯಿಂದಲೇ ಎದ್ದು ನಡೆದ ಡಾಲಿ ಧನಂಜಯ್ ಚಿತ್ರದ ನಟಿ – Kannada News | Payal Rajput Emotional Exit: Head Bush Actress Walks Out of Press Meet Over Personal Questions

ಸುದ್ದಿಗೋಷ್ಠಿಯಲ್ಲಿ ಎದುರಾಗುವ ಎಲ್ಲಾ ಪ್ರಶ್ನೆಗಳನ್ನು ಎದುರಿಸಲು ಸೆಲೆಬ್ರಿಟಿಗಳಿಂದ ಸಾಧ್ಯವಾಗುವುದಿಲ್ಲ. ಅದರಲ್ಲೂ ವೈಯಕ್ತಿಕ ಪ್ರಶ್ನೆ ಬಂದರೆ ಕಲಾವಿದರು ಹೆದರುತ್ತಾರೆ. ಈಗ ಡಾಲಿ ಧನಂಜಯ್ ಅವರ ‘ಹೆಡ್​ ಬುಶ್’ ಸಿನಿಮಾ ನಾಯಕಿ ಪಾಯಲ್ ರಜಪೂತ್ (Payal Rajput) ಅವರಿಗೂ ಹೀಗೆಯೇ ಆಗಿದೆ. ವೈಯಕ್ತಿಕ ಚಾಲೆಂಜ್​​ಗಳ ಬಗ್ಗೆ ಅವರಿಗೆ ಪ್ರಶ್ನೆ ಎದುರಾಯಿತು. ಈ ಬಗ್ಗೆ ಮಾತನಾಡುತ್ತಾ ಅವರು ಕಣ್ಣೀರು ಹಾಕಿದರು. ಆ ಬಳಿಕ ವೇದಿಕೆಯಿಂದಲೇ ಎದ್ದು ಹೋದರು. 2018ರ ‘ಆರ್​ಎಕ್ಸ್ 100’ ಸಿನಿಮಾ ಮೂಲಕ ಪಾಯಲ್ ರಜಪೂತ್ ಅವರು ಜನಪ್ರಿಯತೆ ಪಡೆದುಕೊಂಡರು….

Read More

David Miller: ಕಿಲ್ಲರ್ ಮಿಲ್ಲರ್ ವಿಶ್ವ ದಾಖಲೆ

ಟಿ20 ಕ್ರಿಕೆಟ್​ನಲ್ಲಿ ಡೇವಿಡ್ ಮಿಲ್ಲರ್ (David Miller) ಹೊಸ ಮೈಲುಗಲ್ಲು ದಾಟಿದ್ದಾರೆ. ಅದು ಸಹ ಸೋಲಿನ ನಡುವೆ. ಅಂದರೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ ಮಿಲ್ಲರ್ 19 ರನ್ ಬಾರಿಸಿದ್ದರು. ಈ 19 ರನ್​ಗಳೊಂದಿಗೆ ಡೇವಿಡ್ ಮಿಲ್ಲರ್ ಟಿ20 ಕ್ರಿಕೆಟ್​ನಲ್ಲಿ 12 ಸಾವಿರ ರನ್​ಗಳನ್ನು ಪೂರೈಸಿದ್ದಾರೆ. ಈ ಮೂಲಕ ಈ ಸಾಧನೆ ಮಾಡಿದ ಸೌತ್ ಆಫ್ರಿಕಾದ ಮೂರನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಹಾಗೆಯೇ ಈ ಮೈಲುಗಲ್ಲು ದಾಟಿದ ವಿಶ್ವದ 13ನೇ…

Read More

Horoscope Today: ಇಂದು ಈ ರಾಶಿಯವರಿಗೆ ಪ್ರೇಮ ವ್ಯವಹಾರಗಳಿಗೆ ಮನ್ನಣೆ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 29, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಇದು ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ದ್ವಾದಶಿ ತಿಥಿ ಇರುವ ಈ ಶುಭ ದಿನದ ಕುರಿತು ಗುರೂಜಿ ವಿವರಣೆ ನೀಡಿದ್ದಾರೆ. ರಾಹುಕಾಲವು ಮಧ್ಯಾಹ್ನ 12:16 ರಿಂದ 1:50 ರವರೆಗೆ ಇತ್ತು. ಸರ್ವಸಿದ್ಧಿ ಸಂಕಲ್ಪ ಕಾಲವು ಬೆಳಗ್ಗೆ 10:42 ರಿಂದ ಮಧ್ಯಾಹ್ನ 12:17 ರವರೆಗೆ…

Read More

Daily Devotional: ದೇವಾಲಯದಲ್ಲಿ ಪ್ರಸಾದ ಬೇಡ ಅನ್ನೋದು ಘೋರ ಪಾಪ! ಯಾಕೆ ಗೊತ್ತಾ? – Kannada News | Why you should not Reject Prasad at Temple

ದೇವಾಲಯದಲ್ಲಿ ಪ್ರಸಾದ ಯಾಕೆ ತಿರಸ್ಕರಿಸಬಾರದು ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ದೇವಾಲಯಗಳು ನಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು, ಕಷ್ಟಗಳನ್ನು ಹೇಳಿಕೊಳ್ಳಲು ಮತ್ತು ಕರ್ಮಗಳನ್ನು ತೊಳೆದುಕೊಳ್ಳಲು ಒಂದು ಶಕ್ತಿ ಕೇಂದ್ರಗಳಾಗಿವೆ. ಇಂತಹ ಪವಿತ್ರ ಸ್ಥಳದಲ್ಲಿ ಭಗವಂತನಿಗೆ ಅರ್ಪಿಸಿದ ಪ್ರಸಾದವನ್ನು ನಿರ್ಲಕ್ಷಿಸುವುದು ಅಥವಾ ನಿರಾಕರಿಸುವುದು ದೊಡ್ಡ ತಪ್ಪು ಎಂದು ಗುರೂಜಿ ಹೇಳಿದ್ದಾರೆ. ಈ ಪ್ರಸಾದ ಕೇವಲ ಆಹಾರ ಪದಾರ್ಥ ಮಾತ್ರವಲ್ಲದೆ, ಹೂವು, ಕುಂಕುಮ, ವಿಭೂತಿ ಹೀಗೆ ಯಾವುದೇ ರೂಪದಲ್ಲಿರಬಹುದು. ಪ್ರಸಾದವನ್ನು ತಿರಸ್ಕರಿಸಿದರೆ, ದೈವಿಕ…

Read More