Category Archives: Blog

Your blog category

ಬೆಂಗಳೂರಿನ 5 ನಗರ ಪಾಲಿಕೆಗಳ ಪೈಕಿ ಕೆಲವು ವಿಲೀನ? ಆರ್ಥಿಕ ಸಂಕಷ್ಟದಲ್ಲಿ ಗ್ರೇಟರ್ ಬೆಂಗಳೂರು! – Kannada News | Greater Bengaluru Authority Faces Financial Crisis: Govt Mulls Merging 5 City Corporations Due to Revenue Shortage

ಬೆಂಗಳೂರು, ಏಪ್ರಿಲ್ 29: ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಸರ್ವತೋಮುಖ ಅಭಿವೃದ್ಧಿಯ ದೃಷ್ಟಿಯಿಂದ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯನ್ನು (BBMP) ವಿಭಜಿಸಿ, ಸರ್ಕಾರವು ಐದು ನಗರ ಪಾಲಿಕೆಗಳುಳ್ಳ ಗ್ರೇಟರ್ ಬೆಂಗಳೂರು ಪ್ರಾಧಿಕಾರವನ್ನು (GBA) ಅಸ್ತಿತ್ವಕ್ಕೆ ತಂದಿತ್ತು. ಆದರೆ, ಈ ಹೊಸ ವ್ಯವಸ್ಥೆಯಲ್ಲಿ ಈಗ ಆರ್ಥಿಕ ಸಂಕಷ್ಟದ ಭೀತಿ ಎದುರಾಗಿದ್ದು, ಐದು ಪಾಲಿಕೆಗಳ ಸಂಖ್ಯೆಯನ್ನು ಕಡಿತಗೊಳಿಸಿ ಅಥವಾ ವಿಲೀನ ಮಾಡುವ ಬಗ್ಗೆ ಸರ್ಕಾರದ ಮಟ್ಟದಲ್ಲಿ ತೆರೆಮರೆಯ ಚರ್ಚೆಗಳು ಆರಂಭವಾಗಿವೆ.

ವೇತನಕ್ಕೂ ಇಲ್ಲದ ಹಣ

ಬಿಬಿಎಂಪಿ ಇತಿಹಾಸದ ಪುಟ ಸೇರಿದ ಬಳಿಕ ಜನ್ಮತಾಳಿದ ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಅಡಿಯಲ್ಲಿರುವ ಐದು ನಗರ ಪಾಲಿಕೆಗಳ ಪೈಕಿ ಕೆಲವು ಪಾಲಿಕೆಗಳಲ್ಲಿ ಆರ್ಥಿಕ ಸ್ಥಿತಿ ಹದಗೆಟ್ಟಿದೆ. ವಿಶೇಷವಾಗಿ ಪಶ್ಚಿಮ ನಗರ ಪಾಲಿಕೆ ಸೇರಿದಂತೆ ಒಂದಷ್ಟು ಪಾಲಿಕೆಗಳಲ್ಲಿ ಸಿಬ್ಬಂದಿಯ ವೇತನ ಪಾವತಿಸಲು ಕೂಡ ಆದಾಯದ ಕೊರತೆ ಎದುರಾಗಿದೆ. ಸ್ವಂತ ಆಧಾರದ ಮೇಲೆ ಆರ್ಥಿಕ ವೆಚ್ಚ ಸರಿದೂಗಿಸಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದ್ದು, ಅನುದಾನಕ್ಕಾಗಿ ಪಾಲಿಕೆಗಳು ಈಗಲೂ ಸರ್ಕಾರವನ್ನೇ ನಂಬಿ ಕುಳಿತುಕೊಳ್ಳುವಂತಾಗಿದೆ.

ಆಯುಕ್ತರು ಮತ್ತು ವಿರೋಧ ಪಕ್ಷದ ನಿಲುವು

ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತರಾದ ಎಂ. ಮಹೇಶ್ವರ್ ರಾವ್ ಅವರ ಪ್ರಕಾರ, ಪಶ್ಚಿಮ ನಗರ ಪಾಲಿಕೆಯ ಆರ್ಥಿಕ ಪರಿಸ್ಥಿತಿ ತೀರಾ ಹದಗೆಟ್ಟಿದ್ದು, ಅನುದಾನಕ್ಕಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಪಾಲಿಕೆಗಳ ಸಂಖ್ಯೆ ಇಳಿಕೆ ಅಥವಾ ವಿಲೀನದ ಬಗ್ಗೆ ಸರ್ಕಾರವೇ ಅಂತಿಮ ತೀರ್ಮಾನ ತೆಗೆದುಕೊಳ್ಳಲಿದೆ ಎಂದು ಅವರು ತಿಳಿಸಿದ್ದಾರೆ. ಮತ್ತೊಂದೆಡೆ, ಬಿಬಿಎಂಪಿ ಆಡಳಿತ ಪಕ್ಷದ ಮಾಜಿ ನಾಯಕ ಎನ್.ಆರ್. ರಮೇಶ್ ಅವರು, ಈ ಜಿಬಿಎ ರಚನೆಯೇ ಅವೈಜ್ಞಾನಿಕ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: ಬಿಎಂಟಿಸಿ, ಮೆಟ್ರೋದಲ್ಲಿ ಸಂಚಾರ ಮಾಡಲು ಒಂದೇ ಸ್ಮಾರ್ಟ್ ಕಾರ್ಡ್ ಸಾಕು! ಶೀಘ್ರದಲ್ಲೇ ಹೊಸ ವ್ಯವಸ್ಥೆ

ಅಭಿವೃದ್ಧಿಯ ಹತ್ತಾರು ಭರವಸೆಗಳೊಂದಿಗೆ ಜಾರಿಗೆ ಬಂದ ಈ ಹೊಸ ವ್ಯವಸ್ಥೆಯಲ್ಲಿ ಆದಾಯದ ಕೊರತೆ ಕಂಡುಬಂದಿರುವುದು ಸರ್ಕಾರಕ್ಕೆ ಮುಜುಗರ ಉಂಟುಮಾಡಿದೆ. ಆರ್ಥಿಕ ಸ್ಥಿತಿ ಸುಧಾರಿಸಲು ಸರ್ಕಾರ ಪಾಲಿಕೆಗಳ ವಿಲೀನಕ್ಕೆ ಮುಂದಾಗುತ್ತದೆಯೇ ಎಂದು ಕಾದು ನೋಡಬೇಕಿದೆ.

ವರದಿ: ಲಕ್ಷ್ಮೀ ನರಸಿಂಹ, ಟಿವಿ9 ಬೆಂಗಳೂರು

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

West Bengal Election 2026: 142 ಕ್ಷೇತ್ರಗಳು, 1448 ಅಭ್ಯರ್ಥಿಗಳು, 3.21 ಕೋಟಿ ಮತದಾರರು, ಪಶ್ಚಿಮ ಬಂಗಾಳದಲ್ಲಿ ಇಂದು ಎರಡನೇ ಹಂತದ ಮತದಾನ – Kannada News | West Bengal Election 2026: Phase 2 Voting Begins, 3.21 Crore Voters Decide Fate

ಕೋಲ್ಕತ್ತಾ, ಏಪ್ರಿಲ್ 29: ಪಶ್ಚಿಮ ಬಂಗಾಳ(West Bengal)ದ ಹದಿನಾರನೇ ವಿಧಾನಸಭೆ ಚುನಾವಣೆಯ ಅಬ್ಬರದ ಪ್ರಚಾರಕ್ಕೆ ತೆರೆ ಬಿದ್ದಿದ್ದು, ಈಗ ಎಲ್ಲರ ಕಣ್ಣು ಇಂದಿನ ಮತದಾನದ ಮೇಲೆ ನೆಟ್ಟಿದೆ. 142 ಕ್ಷೇತ್ರಗಳಲ್ಲಿ ನಡೆಯಲಿರುವ ಈ ಅಂತಿಮ ಹಂತದ ಚುನಾವಣೆಯು ರಾಜ್ಯದ ಮುಂದಿನ ಸರ್ಕಾರ ಯಾರದ್ದು ಎಂಬುದನ್ನು ನಿರ್ಧರಿಸುವಲ್ಲಿ ನಿರ್ಣಾಯಕ ಪಾತ್ರ ವಹಿಸಲಿದೆ.

ಪ್ರಚಾರದ ಅಂತಿಮ ದಿನದಂದು ಉತ್ತರ 24 ಪರಗಣದ ಜಗತ್‌ದಲ್‌ನಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ, ಬಿಜೆಪಿಯ ಗೆಲುವಿನ ಬಗ್ಗೆ ಅಚಲ ವಿಶ್ವಾಸ ವ್ಯಕ್ತಪಡಿಸಿದ್ದರು. ಮುಂದಿನ ತಿಂಗಳು ಬಂಗಾಳದ ಮೊದಲ ಬಿಜೆಪಿ ಮುಖ್ಯಮಂತ್ರಿಯ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಲು ನಾನು ಖಂಡಿತ ಮತ್ತೆ ಬರುತ್ತೇನೆ ಎಂದು ಹೇಳುವ ಮೂಲಕ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸಿದರು.

142 ಕ್ಷೇತ್ರಗಳಿದ್ದು ಅದರಲ್ಲಿ ನಾಡಿಯಾ, ಪುರ್ಬಾ ಬರ್ಧಮಾನ್, ಹೌರಾ, ಹೂಗ್ಲಿ, ಕೋಲ್ಕತ್ತಾ ಸೇರಿ 7 ಜಿಲ್ಲೆಗಳಿವೆ. ಒಟ್ಟು 1,448 ಮಂದಿ ಕಣದಲ್ಲಿದ್ದಾರೆ. 3.21 ಕೋಟಿಗೂ ಹೆಚ್ಚು ಮತದಾರರು ಅರ್ಹರಾಗಿದ್ದಾರೆ ಅದರಲ್ಲಿ 1.64 ಕೋಟಿ ಪುರುಷರು, 1.57 ಕೋಟಿ ಮಹಿಳೆಯರು ಮತ್ತು 792 ತೃತೀಯ ಲಿಂಗಿಗಳಿದ್ದಾರೆ.

ಮತ್ತಷ್ಟು ಓದಿ:  Video: ಪಶ್ಚಿಮ ಬಂಗಾಳದ ಹೂಗ್ಲಿಯಲ್ಲಿ ದೋಣಿ ವಿಹಾರ ನಡೆಸಿದ ಪ್ರಧಾನಿ ಮೋದಿ

ಮೊದಲ ಹಂತದ ಚುನಾವಣೆಯಲ್ಲಿ (ಏಪ್ರಿಲ್ 23) ದಾಖಲೆಯ ಶೇ. 93.19 ರಷ್ಟು ಮತದಾನವಾಗಿದ್ದು, ಅದನ್ನು ಮೀರಿಸುವ ಉತ್ಸಾಹ ಎರಡನೇ ಹಂತದಲ್ಲಿ ಕಂಡುಬರುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ತಡೆಯಲು ಕೇಂದ್ರ ಪಡೆಗಳ 2,407 ಕಂಪನಿಗಳನ್ನು ನಿಯೋಜಿಸಲಾಗಿದೆ. ರಾಜ್ಯ ಮತ್ತು ಕೋಲ್ಕತ್ತಾ ಪೊಲೀಸರು ಕೂಡ ಬಿಗಿ ಭದ್ರತೆಯಲ್ಲಿ ಭಾಗಿಯಾಗಿದ್ದಾರೆ.

ಭ್ರಷ್ಟಾಚಾರ, ಮಹಿಳಾ ಸುರಕ್ಷತೆ ಮತ್ತು ಕೈಗಾರಿಕೆಗಳ ಕುಸಿತದ ಬಗ್ಗೆ ಮಮತಾ ಬ್ಯಾನರ್ಜಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಬಿಜೆಪಿಯ ಆಜ್ಞೆಯಂತೆ ಚುನಾವಣಾ ಆಯೋಗ ಕೆಲಸ ಮಾಡುತ್ತಿದೆ ಎಂದು ಆರೋಪಿಸಿತು. ಅಲ್ಲದೆ, ಸುಮಾರು ಒಂದು ಕೋಟಿ ಮತದಾರರ ಹೆಸರುಗಳನ್ನು ಮತದಾರರ ಪಟ್ಟಿಯಿಂದ ಅಳಿಸಲಾಗಿದೆ ಎಂಬ ಗಂಭೀರ ಆರೋಪವನ್ನೂ ಮಾಡಿದೆ. ತೃಣಮೂಲ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆಂತರಿಕ ಒಪ್ಪಂದವಿದೆ ಎಂದು ಆರೋಪಿಸಿ ಎರಡೂ ಪಕ್ಷಗಳ ವಿರುದ್ಧ ಕಿಡಿಕಾರಿವೆ.

ರಾಷ್ಟ್ರೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ಕಣ್ಣೀರು ಹಾಕುತ್ತಾ ಸುದ್ದಿಗೋಷ್ಠಿಯಿಂದಲೇ ಎದ್ದು ನಡೆದ ಡಾಲಿ ಧನಂಜಯ್ ಚಿತ್ರದ ನಟಿ – Kannada News | Payal Rajput Emotional Exit: Head Bush Actress Walks Out of Press Meet Over Personal Questions

ಸುದ್ದಿಗೋಷ್ಠಿಯಲ್ಲಿ ಎದುರಾಗುವ ಎಲ್ಲಾ ಪ್ರಶ್ನೆಗಳನ್ನು ಎದುರಿಸಲು ಸೆಲೆಬ್ರಿಟಿಗಳಿಂದ ಸಾಧ್ಯವಾಗುವುದಿಲ್ಲ. ಅದರಲ್ಲೂ ವೈಯಕ್ತಿಕ ಪ್ರಶ್ನೆ ಬಂದರೆ ಕಲಾವಿದರು ಹೆದರುತ್ತಾರೆ. ಈಗ ಡಾಲಿ ಧನಂಜಯ್ ಅವರ ‘ಹೆಡ್​ ಬುಶ್’ ಸಿನಿಮಾ ನಾಯಕಿ ಪಾಯಲ್ ರಜಪೂತ್ (Payal Rajput) ಅವರಿಗೂ ಹೀಗೆಯೇ ಆಗಿದೆ. ವೈಯಕ್ತಿಕ ಚಾಲೆಂಜ್​​ಗಳ ಬಗ್ಗೆ ಅವರಿಗೆ ಪ್ರಶ್ನೆ ಎದುರಾಯಿತು. ಈ ಬಗ್ಗೆ ಮಾತನಾಡುತ್ತಾ ಅವರು ಕಣ್ಣೀರು ಹಾಕಿದರು. ಆ ಬಳಿಕ ವೇದಿಕೆಯಿಂದಲೇ ಎದ್ದು ಹೋದರು.

2018ರ ‘ಆರ್​ಎಕ್ಸ್ 100’ ಸಿನಿಮಾ ಮೂಲಕ ಪಾಯಲ್ ರಜಪೂತ್ ಅವರು ಜನಪ್ರಿಯತೆ ಪಡೆದುಕೊಂಡರು. ಈ ಸಿನಿಮಾದಲ್ಲಿ ಅವರು ಸಾಕಷ್ಟು ಬೋಲ್ಡ್ ಆಗಿ ಕಾಣಿಸಿಕೊಂಡಿದ್ದರು. 2022ರಲ್ಲಿ ‘ಹೆಡ್ ಬುಷ್’ ಸಿನಿಮಾದಲ್ಲಿ ನಟಿಸಿದರು. ಡಾಲಿ ಧನಂಜಯ್ ಅವರು ಈ ಚಿತ್ರಕ್ಕೆ ಹೀರೋ ಆಗಿದ್ದರು. ಈ ಸಿನಿಮಾ ಅಂದುಕೊಂಡಷ್ಟು ದೊಡ್ಡ ಯಶಸ್ಸು ಕಾಣಲಿಲ್ಲ. ಈಗ ಅವರು ತೆಲುಗು, ತಮಿಳು ಸಿನಿಮಾ ರಂಗದಲ್ಲಿ ಬ್ಯುಸಿ ಇದ್ದಾರೆ.

ಈಗ ಪಾಯಲ್ ಮುಂಬರುವ ‘ಫಸ್ಟ್ ಟೈಮ್’ ಸಿನಿಮಾ ಪ್ರಚಾರದಲ್ಲಿ ಬ್ಯುಸಿ ಇದ್ದಾರೆ. ಈ ಚಿತ್ರದ ಪ್ರಮೋಷನ್ ವೇಳೆ ಅವರಿಗೆ ವೃತ್ತಿ ಜೀವನದ ಏರಿಳಿತ ಹಾಗೂ ಅವರು ವೈಯಕ್ತಿಕವಾಗಿ ಅನುಭವಿಸಿದ ತೊಂದರೆ ಬಗ್ಗೆ ಕೇಳಲಾಯಿತು. ಅವರಿಗೆ ಉಂಟಾಗಿದೆ ಎನ್ನಲಾದ ಖಿನ್ನತೆ ಬಗ್ಗೆಯೂ ಪ್ರಶ್ನಿಸಲಾಯಿತು. ಇದಕ್ಕೆ ಅವರು ಭಾವನಾತ್ಮಕವಾಗಿ ಉತ್ತರಿಸಿದರು.

ಪಾಯಲ್ ರಜಪೂತ್​​ಗೆ ತಂದೆಯೇ ಎಲ್ಲವೂ ಆಗಿದ್ದರಂತೆ. ಆದರೆ, ಇತ್ತೀಚೆಗೆ ಅವರು ನಿಧನ ಹೊಂದಿದರು. ಈ ಸಮಸ್ಯೆಯಿಂದ ಹೊರ ಬರಲು ಅವರು ಯೋಗ ಮಾಡುವುದನ್ನು ಅಭ್ಯಾಸ ಮಾಡಿಕೊಂಡರು. ಆ ಬಳಿಕ ಪಾಯಲ್ ಮಾತನಾಡುತ್ತಾ ಒಮ್ಮೆ ಸಮಾಧಾನ ಮಾಡಿಕೊಂಡರು. ನಂತರ ಅವರು ಮತ್ತೆ ಅಳಲು ಆರಂಭಿಸಿದರು. ಕೊನೆಗೆ ತಡೆಯಲಾರದೆ ಸುದ್ದಿಗೋಷ್ಠಿಯಿಂದಲೇ ಹೊರ ನಡೆದರು. ಇದು ಸಾಕಷ್ಟು ಚರ್ಚೆಗೆ ಕಾರಣ ಆಯಿತು.

ಇದನ್ನೂ ಓದಿ: ‘ಹೆಡ್​ ಬುಷ್’ ನಾಯಕಿಗೆ ಸಿಗುತ್ತಾ ಯಶಸ್ಸು? ದೊಡ್ಡ ನಿರೀಕ್ಷೆಯಲ್ಲಿದ್ದಾರೆ ಪಾಯಲ್ ರಜಪೂತ್

ಈ ಬಗ್ಗೆ ಚರ್ಚೆ ನಡೆಯುತ್ತಿದೆ. ವೈಯಕ್ತಿವಾಗ ಹಾಗೂ ಕಟುವಾದ ಪ್ರಶ್ನೆಗಳನ್ನು ಕೇಳುವ ಮೊದಲು ಸ್ವಲ್ಪ ಯೋಚಿಸಬೇಕು ಎಂದು ಅನೇಕರು ತೆಲುಗು ಮಾಧ್ಯಮದವರಿಗೆ ಬುದ್ಧಿ ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

David Miller: ಕಿಲ್ಲರ್ ಮಿಲ್ಲರ್ ವಿಶ್ವ ದಾಖಲೆ

Source link

Horoscope Today: ಇಂದು ಈ ರಾಶಿಯವರಿಗೆ ಪ್ರೇಮ ವ್ಯವಹಾರಗಳಿಗೆ ಮನ್ನಣೆ

ಟಿವಿ9​​ ಡಿಜಿಟಲ್ ವಾಹಿನಿಯಲ್ಲಿ ಪ್ರಸಾರವಾದ ದಿನಭವಿಷ್ಯ ಕಾರ್ಯಕ್ರಮದಲ್ಲಿ ಖ್ಯಾತ ಜ್ಯೋತಿಷಿ ಡಾ. ಬಸವರಾಜ ಗುರೂಜಿ ಅವರು ಏಪ್ರಿಲ್ 29, ಬುಧವಾರದ ದ್ವಾದಶ ರಾಶಿಗಳ ಫಲಾಫಲಗಳನ್ನು ವಿವರಿಸಿದ್ದಾರೆ. ಇದು ಪರಾಭವನಾಮ ಸಂವತ್ಸರ, ಉತ್ತರಾಯಣ, ವೈಶಾಖ ಮಾಸ, ವಸಂತ ಋತು, ಶುಕ್ಲ ಪಕ್ಷ, ದ್ವಾದಶಿ ತಿಥಿ ಇರುವ ಈ ಶುಭ ದಿನದ ಕುರಿತು ಗುರೂಜಿ ವಿವರಣೆ ನೀಡಿದ್ದಾರೆ.

ರಾಹುಕಾಲವು ಮಧ್ಯಾಹ್ನ 12:16 ರಿಂದ 1:50 ರವರೆಗೆ ಇತ್ತು. ಸರ್ವಸಿದ್ಧಿ ಸಂಕಲ್ಪ ಕಾಲವು ಬೆಳಗ್ಗೆ 10:42 ರಿಂದ ಮಧ್ಯಾಹ್ನ 12:17 ರವರೆಗೆ ಇತ್ತು. ರವಿ ಗ್ರಹವು ಮೇಷ ರಾಶಿಯಲ್ಲಿದ್ದರೆ, ಚಂದ್ರ ಗ್ರಹವು ಕನ್ಯಾ ರಾಶಿಯ ಹಸ್ತ ನಕ್ಷತ್ರದಲ್ಲಿ ಸಂಚರಿಸುತ್ತಿದ್ದಾನೆ ಎಂದು ಗುರೂಜಿ ವಿವರಿಸಿದ್ದಾರೆ.

 

 

 

Source link

Daily Devotional: ದೇವಾಲಯದಲ್ಲಿ ಪ್ರಸಾದ ಬೇಡ ಅನ್ನೋದು ಘೋರ ಪಾಪ! ಯಾಕೆ ಗೊತ್ತಾ? – Kannada News | Why you should not Reject Prasad at Temple

ದೇವಾಲಯದಲ್ಲಿ ಪ್ರಸಾದ ಯಾಕೆ ತಿರಸ್ಕರಿಸಬಾರದು ಎಂದು ಟಿವಿ9​​ ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ದೇವಾಲಯಗಳು ನಮ್ಮ ಮನಸ್ಸಿನ ಭಾವನೆಗಳನ್ನು ವ್ಯಕ್ತಪಡಿಸಲು, ಕಷ್ಟಗಳನ್ನು ಹೇಳಿಕೊಳ್ಳಲು ಮತ್ತು ಕರ್ಮಗಳನ್ನು ತೊಳೆದುಕೊಳ್ಳಲು ಒಂದು ಶಕ್ತಿ ಕೇಂದ್ರಗಳಾಗಿವೆ. ಇಂತಹ ಪವಿತ್ರ ಸ್ಥಳದಲ್ಲಿ ಭಗವಂತನಿಗೆ ಅರ್ಪಿಸಿದ ಪ್ರಸಾದವನ್ನು ನಿರ್ಲಕ್ಷಿಸುವುದು ಅಥವಾ ನಿರಾಕರಿಸುವುದು ದೊಡ್ಡ ತಪ್ಪು ಎಂದು ಗುರೂಜಿ ಹೇಳಿದ್ದಾರೆ.

ಈ ಪ್ರಸಾದ ಕೇವಲ ಆಹಾರ ಪದಾರ್ಥ ಮಾತ್ರವಲ್ಲದೆ, ಹೂವು, ಕುಂಕುಮ, ವಿಭೂತಿ ಹೀಗೆ ಯಾವುದೇ ರೂಪದಲ್ಲಿರಬಹುದು. ಪ್ರಸಾದವನ್ನು ತಿರಸ್ಕರಿಸಿದರೆ, ದೈವಿಕ ಕೃಪೆ ಮತ್ತು ದೈವಬಲವು ಹೊರಟುಹೋಗುತ್ತದೆ ಎಂದು ಹೇಳಲಾಗುತ್ತದೆ. ಪ್ರತಿಯೊಬ್ಬ ವ್ಯಕ್ತಿಗೂ ಇರುವ ಪ್ರಭಾವಳಿ ಅಥವಾ ಆಧ್ಯಾತ್ಮಿಕ ಶಕ್ತಿ ಕ್ಷೀಣಿಸುತ್ತದೆ. ದೇವಾಲಯಕ್ಕೆ ಭೇಟಿ ನೀಡಿದಾಗ ಎಲ್ಲರೂ ಸಮಾನರು. ಆದ್ದರಿಂದ, ಪ್ರಸಾದವನ್ನು ಭಕ್ತಿ ಮತ್ತು ಶ್ರದ್ಧೆಯಿಂದ ಸ್ವೀಕರಿಸಬೇಕು. ಇದನ್ನು ಸ್ವೀಕರಿಸುವುದರಿಂದ ಕೀರ್ತಿ, ಪ್ರತಿಷ್ಠೆಗಳು ಹೆಚ್ಚುತ್ತವೆ, ಮಾಟ ಮಂತ್ರ ದೋಷಗಳು ಮತ್ತು ಗ್ರಹಕಾಟಗಳು ನಿವಾರಣೆಯಾಗಿ ಶುಭ ಫಲಗಳು ದೊರೆಯುತ್ತವೆ. ಪ್ರಸಾದಕ್ಕೆ ಭಗವಂತನ ಲಹರಿಗಳು ಸೇರಿಕೊಂಡು ವಿಶೇಷ ಶಕ್ತಿಯನ್ನು ನೀಡುತ್ತವೆ ಎಂದು ಗುರೂಜಿ ವಿವರಿಸಿದ್ದಾರೆ.

 

 

 

 

Source link

ಬಿಎಂಟಿಸಿ, ಮೆಟ್ರೋದಲ್ಲಿ ಸಂಚಾರ ಮಾಡಲು ಒಂದೇ ಸ್ಮಾರ್ಟ್ ಕಾರ್ಡ್ ಸಾಕು! ಶೀಘ್ರದಲ್ಲೇ ಹೊಸ ವ್ಯವಸ್ಥೆ – Kannada News | BMTC to Introduce 11000 High Tech ETM Machines: Digital Payments and NCMC Card Integration to Stop Ticket Fraud

ಬೆಂಗಳೂರು, ಏಪ್ರಿಲ್ 29: ಬಿಎಂಟಿಸಿ ಬಸ್‌ಗಳಲ್ಲಿ (BMTC Bus) ಪ್ರಯಾಣಿಸುವಾಗ ಚಿಲ್ಲರೆ ಸಮಸ್ಯೆ ಅಥವಾ ಟಿಕೆಟ್ ಪಡೆಯುವ ವಿಚಾರದಲ್ಲಿ ಕಂಡಕ್ಟರ್ ಮತ್ತು ಪ್ರಯಾಣಿಕರ ನಡುವೆ ನಡೆಯುತ್ತಿದ್ದ ಜಗಳಕ್ಕೆ ಶೀಘ್ರವೇ ಮುಕ್ತಿ ಸಿಗಲಿದೆ. ಈ ಹಿಂದೆ ಕೆಲವು ಕಂಡಕ್ಟರ್‌ಗಳು ಆನ್‌ಲೈನ್ ಪಾವತಿಯ (Online Payment) ಹಣವನ್ನು ಸಂಸ್ಥೆಯ ಬದಲಿಗೆ ತಮ್ಮ ವೈಯಕ್ತಿಕ ಖಾತೆಗಳಿಗೆ ಹಾಕಿಸಿಕೊಳ್ಳುತ್ತಿದ್ದ ಅಕ್ರಮಕ್ಕೆ ಬ್ರೇಕ್ ಹಾಕಲು ಬಿಎಂಟಿಸಿ ಈಗ ಹೈಟೆಕ್ ಇಟಿಎಂ ಮಷಿನ್‌ಗಳ ಮೊರೆ ಹೋಗಿದೆ.

ಏನಿದು ಹೊಸ ವ್ಯವಸ್ಥೆ?

ಬಿಎಂಟಿಸಿ ಸುಮಾರು 40 ಕೋಟಿ ರೂಪಾಯಿ ವೆಚ್ಚದಲ್ಲಿ ಮುಂಬೈ ಮೂಲದ ಚಲೋ (Chalo) ಕಂಪನಿಗೆ 11 ಸಾವಿರ ಇಟಿಎಂ ಯಂತ್ರಗಳ ಪೂರೈಕೆಗಾಗಿ ಟೆಂಡರ್ ನೀಡಿದೆ. ಐದು ವರ್ಷಗಳ ಗುತ್ತಿಗೆ ಆಧಾರದ ಮೇಲೆ ಈ ಯಂತ್ರಗಳನ್ನು ಪಡೆಯಲಾಗುತ್ತಿದ್ದು, ಈಗಾಗಲೇ ಮೊದಲ ಹಂತದಲ್ಲಿ 8 ಡಿಪೋಗಳಿಗೆ ಇವುಗಳನ್ನು ವಿತರಿಸಲಾಗಿದೆ. ಮುಂದಿನ ತಿಂಗಳಿನಿಂದ ಎಲ್ಲಾ ಬಿಎಂಟಿಸಿ ಬಸ್‌ಗಳಲ್ಲೂ ಈ ಸುಧಾರಿತ ಯಂತ್ರಗಳು ಲಭ್ಯವಿರಲಿವೆ.

ಒಂದೇ ಕಾರ್ಡ್, ಎರಡು ಲಾಭ!

ಈ ಹೊಸ ಮಷಿನ್‌ಗಳಲ್ಲಿ ನ್ಯಾಷನಲ್ ಕಾಮನ್ ಮೊಬಿಲಿಟಿ ಕಾರ್ಡ್ (NCMC) ಬಳಸಲು ಅವಕಾಶವಿದೆ. ಇದರಿಂದ ಪ್ರಯಾಣಿಕರು ಬಿಎಂಟಿಸಿ ಬಸ್ ಮಾತ್ರವಲ್ಲದೆ, ನಮ್ಮ ಮೆಟ್ರೋ ರೈಲುಗಳಲ್ಲೂ ಇದೇ ಸ್ಮಾರ್ಟ್ ಕಾರ್ಡ್ ಬಳಸಿ ಸಂಚಾರ ಮಾಡಬಹುದು.

ಡಿಜಿಟಲ್ ಪಾವತಿಗೆ ಆದ್ಯತೆ

ಈ ಯಂತ್ರಗಳಲ್ಲಿ ‘ಡೈನಾಮಿಕ್ ಕ್ಯೂ ಆರ್ ಕೋಡ್’ (Dynamic QR Code) ವ್ಯವಸ್ಥೆ ಇರಲಿದ್ದು, ಪ್ರಯಾಣಿಕರು ಫೋನ್ ಪೇ, ಗೂಗಲ್ ಪೇ, ಪೇಟಿಯಂ ಮಾತ್ರವಲ್ಲದೆ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೂಲಕವೂ ಹಣ ಪಾವತಿಸಬಹುದು. ಇದರಿಂದಾಗಿ ಕಂಡಕ್ಟರ್ ಆಗಲಿ ಅಥವಾ ಪ್ರಯಾಣಿಕರಾಗಲಿ ನಿಗಮಕ್ಕೆ ವಂಚನೆ ಮಾಡಲು ಸಾಧ್ಯವಿಲ್ಲ. ನಿಖರವಾದ ಟಿಕೆಟ್ ದರದ ಮಾಹಿತಿ ಈ ಯಂತ್ರಗಳಲ್ಲಿ ಅಪ್‌ಲೋಡ್ ಆಗಿರುವುದರಿಂದ ಪಾರದರ್ಶಕತೆ ಹೆಚ್ಚಲಿದೆ.

ಕರ್ನಾಟಕದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ದಿನ ಭವಿಷ್ಯ: ಇಂದು ಈ ರಾಶಿಯವರಿಂದ ಸ್ವಾರ್ಥಕ್ಕಾಗಿ ಕಾರ್ಯ, ಎಲ್ಲರ ಸಹಕಾರ – Kannada News | Horoscope April 29 Wednesday 2026; Dina Rashi Bhavishya Today, Checkout the details here

ಮೇಷ ರಾಶಿ:

ಕುಟುಂಬಕ್ಕೆ ಇದರಿಂದ ಅನೇಕ ಲಾಭಗಳು ನಿಮಗಾಗಲಿವೆ. ಇನ್ನೊಬ್ಬರಿಂದ ಪಡೆದ ಪ್ರಚೋದನೆಯ ಶಕ್ತಿ ಕೆಲ ಕಾಲ ಮಾತ್ರ ಉಳಿಯುವುದು. ಅತಿಯಾದ ಮನೆಯ ಕೆಲಸದಿಂದ ಆಯಾಸವಾಗಬಹುದು. ಅನಿರೀಕ್ಷಿತ ವಾರ್ತೆಯನ್ನು ನೀವು ನಂಬಲಾರಿರಿ. ಬೇಡವೆಂದು ಬಿಟ್ಟ ಕಾರ್ಯಗಳಿಂದಲೇ ಪ್ರಯೋಜನವಾದೀತು. ವಿದ್ಯಾರ್ಥಿಗಳಲ್ಲಿ ಉತ್ಸಾಹಿಗಳು ಎದ್ದು ಕಾಣಲಿವೆ. ಕೃಷಿಯ ಕುರಿತು ಕುತೂಹಲ ಹಾಗೂ ಆಸೆಯು ಬರಬಹುದು.

ವೃಷಭ ರಾಶಿ:

ಶತ್ರುಗಳು ನಿಮ್ಮ ಪತನವನ್ನು ನಿರೀಕ್ಷಿಸುತ್ತಿರುತ್ತಾರೆ. ಹೊಸ ಉದ್ಯೋಗ ಸಿಗುವುದೋ ಇಲ್ಲವೋ ಎಂಬ ಅನುಮಾನ ಕಾಡುವುದು. ಜಾಗರೂಕರಾಗಿ ಹೆಜ್ಜೆಯನ್ನು ಹಾಕಿ. ಉದ್ಯೋಗದಲ್ಲಿ ನಿಮ್ಮ ಸ್ಥಾನಕ್ಕೆ ಬರಲು ಯಾರಾದರೂ ಕಾಯುತ್ತಿರಬಹುದು. ಹಿತಶತ್ರುಗಳ ಕಿರುಕುಳವನ್ನು ನೀವು ಸಹಿಸಲಾರಿರಿ. ಇಷ್ಟವಾಗದವರ ಜೊತೆ ವೃಥಾ ಕಾಲಹರಣ ಮಾಡುವುದು ಬೇಡ. ಸ್ಥಾನಮಾನವನ್ನು ಪಡೆಯಲು ಏನಾದರೂ ಮಾಡುವಿರಿ. ಹಣಕಾಸಿನ ತೊಂದರೆಯನ್ನು ಸರಿ ಮಾಡಿಕೊಳ್ಳುವ ಮಾರ್ಗದ ಅನ್ವೇಷಣೆ ಮಾಡುವಿರಿ.

ಮಿಥುನ ರಾಶಿ:

ಇಂದು ಆಪ್ತಬಂಧುಗಳ ಅಗಲಿಕೆಯಿಂದ ನೋವಾಗಬಹುದು. ಸರಕಿನ‌ ಉದ್ಯಮದಿಂದ ಆತಂಕ. ಸಣ್ಣ ಕಲಾವಿದರಿಗೆ ಪ್ರೋತ್ಸಾಹವು ಸಿಗಲಿದೆ. ಮಕ್ಕಳನ್ನು ವಿದ್ಯಾಭ್ಯಾಸಕ್ಕಾಗಿ ಮನೆಯಿಂದ ದೂರ ಕಳಿಸುವಿರಿ. ಒತ್ತಡದಿಂದ ನೀವು ಉದ್ವೇಗಕ್ಕೆ ಒಳಗಾಗಬಹುದು. ಶ್ರೇಷ್ಠ ವ್ಯಕ್ತಿಗಳ ಭೇಟಿಯಿಂದ ಹೊಸ ಕಾರ್ಯಗಳನ್ನು ಮಾಡಲು ಉತ್ಸುಕರಾಗಿರುವಿರಿ. ನಿಮ್ಮ‌ಮಾತಿಗೆ ಸಮಜಾಯಿಷಿ ಕೊಡಬೇಕಾದೀತು. ಕುಟುಂಬಕ್ಕೆ ಸಾಕಷ್ಟು ಸಮಯವನ್ನು ನೀಡುವುದಿಲ್ಲ.

ಕರ್ಕಾಟಕ ರಾಶಿ:

ಸರಿಯಾದ ಸ್ಥಳದಲ್ಲಿ ಹೂಡಿಕೆಯಿಂದ ಲಾಭ. ನಿಮ್ಮ ಕೈ ಮೀರಿದ ಕೆಲಸದಲ್ಲಿ ನಿಮಗೆ ಆತಂಕ ಬೇಡ. ಪ್ರೇಮವು ನಿಮಗೆ ಬಂಧನದಂತೆ ಕಾಣಿಸುವುದು. ನಿಮ್ಮ ಸೋಲನ್ನು ನೀವು ಒಪ್ಪಿಕೊಳ್ಳಲಾರಿರಿ. ಅನಿರೀಕ್ಷಿತ ವಾರ್ತೆಯು ನಿಮ್ಮನ್ನು ಚಿಂತೆಗೆ ದೂಡಲಿದೆ. ಪ್ರಶಾಂತವಾದ ವಾತಾವರಣದಲ್ಲಿ ಕೆಲವು ಸಮಯವನ್ನು ಕಳೆದು ಬನ್ನಿ. ಕುಟುಂಬದಲ್ಲಿ ಜವಾಬ್ದಾರಿಯ ಸ್ಥಾನವನ್ನು ಪಡೆಯಬೇಕಾಗುವುದು. ನಿಮ್ಮ ಮಾತು ಸುಳ್ಳಾಗಬಹುದು. ವಸ್ತುಗಳ ಖರೀದಿಯು ಖರ್ಚನ್ನು ಹೆಚ್ಚು ಮಾಡುವುದು.

ಸಿಂಹ ರಾಶಿ:

ಫಲಾಪೇಕ್ಷೆ ಇಲ್ಲದೇ ಮಾಡುವ ಸಹಾಯದ ಮೌಲ್ಯ ಅರಿವಾಗುವುದು. ಸ್ನೇಹಿತರ ಜೊತೆ ಮೋಜಿನಲ್ಲಿ ಇರುವ ಮನಸ್ಸು ಮಾಡುವಿರಿ. ಸಾಮಾಜಿಕ‌ ಕೆಲಸಗಳು ನಿಮಗೆ ಇನ್ನಷ್ಟೂ ಉತ್ಸಾಹವನ್ನು ಕೊಡುವುದು. ವೈದ್ಯರ ಬಳಿ ಸಾವಧಾನತೆಯಿಂದ ಮಾತನಾಡಿ. ನೀವು ಕಷ್ಟವನ್ನು ಆನಂದದಿಂದ ಕಳೆಯುವಿರಿ. ಅನಕ್ಷರಸ್ಥರ ಜೊತೆ ವಾಗ್ವಾದ ಸಲ್ಲ. ಶಕ್ತಿ ಮೀರಿದ ಕೆಲಸವನ್ನು ಮಾಡಿ ಆಯಾಸ ಮಾಡಿಕೊಳ್ಳುವುದು ಬೇಡ. ಕುಟುಂಬಕ್ಕೆ ನಿಮ್ಮಿಂದ ಧನಸಹಾಯದ ಅಪೇಕ್ಷೆ ಇರುವುದು.

ಕನ್ಯಾ ರಾಶಿ:

ಹಣಕಾಸಿನ ವಿಚಾರಕ್ಕೆ ಸಂಗಾತಿಯ ಜೊತೆ ಮಾತಾಗಬಹುದು. ನೇರ ನುಡಿಯಿಂದ ಆಪ್ತರು ದೂರ ಸರಿಯಬಹುದು. ಮನೋರಂಜನೆಯಿಂದ ನಿಮಗೆ ಸಮಾಧಾನ ಸಿಗಲಿದೆ. ಮನೆಯ ಹಿರಿಯರನ್ನು ಸಂತೋಷಪಡಿಸಿದರೆ ಅದೇ ಆಶೀಋವಾದ. ಕೆಲವು ವಿಚಾರಗಳಿಗೆ ಸುಮ್ಮನೇ ಪ್ರತಿಕ್ರಿಯೆ ನೀಡಬೇಕಿಲ್ಲ. ಹೊರದೇಶದಲ್ಲಿ ಹೊಸದಾಗಿ ಕೆಲಸವನ್ನು ಹುಡುಕುತ್ತಿದ್ದರೆ ಅದನ್ನು ನಿಲ್ಲಿಸಿ.‌ ಇಂದು ಆರಂಭಿಸಿದ ಕೆಲಸಗಳನ್ನು ಇಂದೇ ಮುಗಿಸುವಂತೆ ನೋಡಿಕೊಳ್ಳಿ.

ತುಲಾ ರಾಶಿ:

ಯಾವ ಮರುಕ್ಷಣವೇ ಫಲವನ್ನು ಕೊಡುವುದಿಲ್ಲ ಎಂಬ ವಿಚಾರವು ನಿಮ್ಮೊಳಗೆ ಸರಿಯಾಗಿ ಬೇರೂರಿರಲಿ. ನಮ್ಮ ಪೂರ್ಣವಾಗಿ ನಂಬಲಾರಿರಿ. ನಿಮಗೆ ಬೇಡ ಎನಿಸಿದ ವಿಚಾರವೇ ಮತ್ತೆ ಮತ್ತೆ ಕೇಳಿ ಬಂದು‌ ಮಾನಸಿಕ ಹಿಂಸೆಯಾದೀತು. ಆಧ್ಯಾತ್ಮಿಕ ಚಿಂತನೆಯನ್ನು ಹೆಚ್ಚು ಮಾಡುವಿರಿ. ನಿಮ್ಮ ತುಮುಲವನ್ನು ಅರಿತುಕೊಳ್ಳಲಾರರು. ಹತ್ತಿರದ ಬಂಧುಗಳ ಒಡನಾಟವು ಹೆಚ್ಚಿರಲಿದೆ.

ವೃಶ್ಚಿಕ ರಾಶಿ:

ಪ್ರೇಮವು ಕೊನೆಗೂ ಅಂದುಕೊಂಡಂತೆ ಆಗಲಿದೆ. ನಕಾರಾತ್ಮ ಯೋಚನೆಗಳು ನಿಮ್ಮ ಮನಸ್ಸಿನಲ್ಲಿ ಸುಳಿಯಬಹುದು. ಸರ್ಕಾರಿ ಕೆಲಸಕ್ಕೆ ಅರ್ಜಿ ಹಾಕಿದ್ದರೆ ಸಂತೋಷಕರವಾದ ಸುದ್ದಿಯೊಂದು ನಿಮ್ಮ ಪಾಲಿಗಿರುತ್ತದೆ. ನಿರುತ್ಸಾಹಿಗಳಾಗಿ ಕುಳಿತುಕೊಳ್ಳದೇ ಏನನ್ನಾದರೂ ಸಾಧಿಸಬೇಕು ಎಂಬ ಮನಸ್ಸು ನಿಮಗೆ ಬರುತ್ತದೆ. ಉದ್ಯಮದಲ್ಲಿ ಜನರ ವಿಶ್ವಾಸವನ್ನು ಗಳಿಸುವುದು ಮುಖ್ಯವಾಗಿರುವುದು. ಅಧಿಕಾರಿಗಳು ನಿಮ್ಮ ಉದ್ಯಮವನ್ನು ಪರಿಶೀಲಿಸಬಹುದು.

ಧನು ರಾಶಿ:

ಇಂದು ಕಲಾವಿದರಾಗುವ ಆಸೆ ಪೂರ್ಣವಾಗುವುದು. ದಾಂಪತ್ಯದಲ್ಲಿ ಸಾಮರಸ್ಯದ ಕೊರತೆ ಬಗೆ ಹರಿಯಬಹುದು. ಕುಟುಂಬದ ನೆಮ್ಮದಿಯು ನಿಮ್ಮ ಮಾತಿನಿಂದ ವಿಚಲಿತವಾಗುವುದು. ಕೇಳಿದ್ದಕ್ಕಿಂತ ಹೆಚ್ಚಿನ ಹಣ ಸಿಗುವ ಸಾಧ್ಯತೆ ಇದೆ. ಆಕಸ್ಮಿಕ ಧನಲಾಭವು ನಿಮ್ಮ ಬದುಕನ್ನು ಖುಷಿಯಾಗಿ ಇಡಲಿದೆ. ಮತ್ತೊಬ್ಬರಿಗೆ ಸಹಾಯ ಮಾಡುವ ಅವಕಾಶ ಬಂದಾಗ ಅದನ್ನು ಅಲ್ಲಗಳೆಯಬೇಡಿ. ಅಸೂಯೆಯಿಂದಾಗಿ ನಿಮ್ಮ ವ್ಯಕ್ತಿತ್ವವನ್ನು ಹಾಳು ಮಾಡಿಕೊಳ್ಳುವ ಸಾಧ್ಯತೆ ಇದೆ.

ಮಕರ ರಾಶಿ:

ಮನೆಯಲ್ಲಿ ಎಲ್ಲರ ಆಗಮನದಿಂದ ಸುಂದರ ವಾತಾವರಣವಿರುತ್ತದೆ. ಸಂಗಾತಿಯಿಂದ ದೂರ ಉಳಿಯಬೇಕಾದ ಸ್ಥಿತಿ ಬರಬಹುದು. ಸ್ಥಾನವನ್ನು ಪಡೆಯಲು ಹಣವನ್ನು ಖರ್ಚುಮಾಡುವಿರಿ. ಮಾತಿನಿಂದ ಯಾರನ್ನೂ ಟೀಕಿಸಲು ಹೋಗಬೇಡಿ. ನಿಮ್ಮನ್ನು ಟೀಕಿಸಲು ಜನರು ಕಾದುಕುಳಿತಿರುತ್ತಾರೆ. ತಂದೆಯ ಮಾತನ್ನು ಉಳಿಸಿಕೊಳ್ಳಲು ನಿಮ್ಮ ಶ್ರಮವು ಬಳಕೆಯಾಗುವುದು.

ಕುಂಭ ರಾಶಿ:

ಕೃಷಿಯನ್ನು ಆಯ್ಕೆ ಮಾಡಿಕೊಂಡಿದ್ದಕ್ಕೆ ಜೀವನ ನಿಮಗೆ ಬಹಳ ಸುಖವನ್ನು ನೀಡುತ್ತದೆ ಎಂದನ್ನಿಸುತ್ತಿರುತ್ತದೆ‌. ಧಾರ್ಮಿಕ‌ ಕಾರ್ಯದಲ್ಲಿ ಆಸಕ್ತಿಯು ಹೆಚ್ಚಾಗಲಿದೆ.‌ ನೀವು ಇಂದು ಜನರೊಡನೆ ಬೆರೆಯಲು ಬಿಡುವಿನ ವೇಳೆಯನ್ನು ಹೊಂದಿದ್ದೀರಿ. ಏನಾದರೂ ಅವಘಡಗಳು ಸಂಭವಿಸಬಹುದು. ಉತ್ತಮ ಸ್ಥಳವು ಸಿಕ್ಕಿದ್ದು ನಿಮಗೆ ಖುಷಿಯೂ ಆಗುವುದು. ಅಪರಿಚಿತರ ಜೊತೆ ಜಗಳವಾಡಿ ಸಮಯವನ್ನು ವ್ಯರ್ಥ ಮಾಡುವಿರಿ.‌ ಪ್ರೀತಿಗೆ ಯೋಗ್ಯರನ್ನು ಹುಡುಕುವಿರಿ.

ಮೀನ ರಾಶಿ:

ನೀವು ಪ್ರಯತ್ನಿಸಿದ ಕಾರ್ಯಗಳು ಫಲವನ್ನು ಕೊಡಲಿವೆ. ವಾಹನವನ್ನು ಓಡಿಸುವ ಎಚ್ಚರಿಕೆಯಿಂದ ಇರಿ. ದೂರದ ಊರಿಗೆ ಅನಿವಾರ್ಯವಾಗಿ ಹೋಗಿ ಆರೋಗ್ಯವನ್ನು ಕೆಡಿಸಿಕೊಳ್ಳುವಿರಿ. ಕಳ್ಳತನದ ಅಪವಾದಿಂದ ವಾಗ್ವಾದ. ಯಾರದೋ ಸಿಟ್ಟನ್ನು ಯಾರ ಮೇಲೋ ತೀರಿಸಿಕೊಳ್ಳುವ ನಿಮ್ಮ ಸ್ವಭಾವವು ಒಳ್ಳೆಯದಲ್ಲ. ಮನೆಯ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಜೀವನ ಸಂಗಾತಿಯು ಸಂಪೂರ್ಣ ಬೆಂಬಲವನ್ನು ನೀಡುತ್ತಾನೆ.

ಇಂದಿನ ಪಂಚಾಂಗ:

ಶಾಲಿವಾಹನ ಶಕೆ ೧೯೪೯ರ ಪರಾಭವ ಸಂವತ್ಸರದ ಉತ್ತರಾಯಣ, ಋತು : ವಸಂತ, ಚಾಂದ್ರಮಾಸ : ವೈಶಾಖ, ಸೌರ ಮಾಸ : ಮೇಷ, ಮಹಾನಕ್ಷತ್ರ : ಭರಣೀ, ವಾರ : ಬುಧ, ಪಕ್ಷ : ಶುಕ್ಲ, ತಿಥಿ : ದ್ವಾದಶೀ, ನಿತ್ಯನಕ್ಷತ್ರ : ಹಸ್ತಾ, ಯೋಗ : ಹರ್ಷಣ, ಕರಣ : ತೈತಿಲ, ಸೂರ್ಯೋದಯ – 06 – 04 am, ಸೂರ್ಯಾಸ್ತ – 06 – 39 pm, ಇಂದಿನ ಶುಭಾಶುಭ ಕಾಲ : ರಾಹು ಕಾಲ 12:22 – 13:56, ಯಮಗಂಡ ಕಾಲ 07:39 – 09:13, ಗುಳಿಕ ಕಾಲ 10:47 – 12:22

-ಲೋಹಿತ ಹೆಬ್ಬಾರ್ – 8762924271 (what’s app only)

Source link

‘ಯಾವುದೇ ಗಿಮಿಕ್ ಇಲ್ಲದೇ ಗೆದ್ದ ಸಿನಿಮಾ ನಮ್ಮದು’: ನಟ ವಿನೋದ್ ಪ್ರಭಾಕರ್ – Kannada News | Vinod Prabhakar talks about his new movie Balaramana Dinagalu during teaser launch

‘ಬಲರಾಮನ ದಿನಗಳು’ (Balaramana Dinagalu) ಸಿನಿಮಾದಲ್ಲಿ ನಟ ವಿನೋದ್ ಪ್ರಭಾಕರ್ ಅವರು ಮುಖ್ಯ ಪಾತ್ರ ಮಾಡಿದ್ದಾರೆ. ಈ ಸಿನಿಮಾದ ಟೀಸರ್ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ವೇದಿಕೆ ಏರಿ ಮಾತನಾಡಿದರು. ಆದಷ್ಟು ಬೇಗ ಈ ಸಿನಿಮಾವನ್ನು ಬಿಡುಗಡೆ ಮಾಡಲು ತಯಾರಿ ನಡೆದಿದೆ. ‘ಸಿನಿಮಾ ಚೆನ್ನಾಗಿ ಇದ್ದರೆ ಜನರು ಖಂಡಿತಾ ನೋಡುತ್ತಾರೆ. ಅದಕ್ಕೆ ನನ್ನ ಮಾದೇವ ಸಿನಿಮಾ ಸಾಕ್ಷಿ. ಯಾವುದೇ ಗಿಮಿಕ್ ಇಲ್ಲದೇ ಗೆದ್ದ ಸಿನಿಮಾ ನಮ್ಮದು. ಅದೇ ರೀತಿ ಬಲರಾಮನ ದಿನಗಳು ಸಿನಿಮಾ ಕೂಡ ಹಿಟ್ ಆಗುತ್ತದೆ. ದೊಡ್ಡ ಬಜೆಟ್​ನಲ್ಲಿ ಸಿನಿಮಾ ಸಿದ್ಧವಾಗಿದೆ. ಇಂಥ ಸಿನಿಮಾ ಮಾಡಿದ ನಿರ್ಮಾಪಕರಿಗೆ ನಾನು ಧನ್ಯವಾದ ಹೇಳುತ್ತೇನೆ. ಅವರಿಗೆ ಈ ಸಿನಿಮಾದಿಂದ ದುಪ್ಪಟ್ಟು ಹಣ ಬರುತ್ತದೆ’ ಎಂದು ವಿನೋದ್ ಪ್ರಭಾಕರ್ (Vinod Prabhakar) ಅವರು ಹೇಳಿದರು. ಸುದ್ದಿಗೋಷ್ಠಿಯಲ್ಲಿ ‘ಬಲರಾಮನ ದಿನಗಳು’ ಸಿನಿಮಾ ಬಗ್ಗೆ ವಿನೋದ್ ಪ್ರಭಾಕರ್ ಮಾತನಾಡಿದ ವಿಡಿಯೋ ಇಲ್ಲಿದೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

IPL 2026: ಪಂಜಾಬ್ ಕಿಂಗ್ಸ್​ಗೆ ಸೋಲುಣಿಸಿದ ರಾಜಸ್ಥಾನ್ ರಾಯಲ್ಸ್​ – Kannada News | IPL 2026: PBKS vs RR Match Highlights

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 40ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ತಂಡದ ಜಯ ಸಾಧಿಸಿದೆ. ಮುಲ್ಲನ್​ಪುರ್​ನ ಮಹಾರಾಜ ಯಾದವೀಂದ್ರ ಸಿಂಗ್ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಪಂಜಾಬ್ ಕಿಂಗ್ಸ್ ವಿರುದ್ಧದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಆರ್ ತಂಡದ ನಾಯಕ ರಿಯಾನ್ ಪರಾಗ್ ಬೌಲಿಂಗ್ ಆಯ್ದುಕೊಂಡಿದ್ದರು.

ಅದರಂತೆ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ಪ್ರಿಯಾಂಶ್ ಆರ್ಯ ಹಾಗೂ ಪ್ರಭ್​ಸಿಮ್ರಾನ್ ಸಿಂಗ್ ಉತ್ತಮ ಆರಂಭ ಒದಗಿಸಿದ್ದರು. ಮೊದಲ ವಿಕೆಟ್​ಗೆ 37 ರನ್​ ಕಲೆಹಾಕಿದ ಬಳಿಕ ಪ್ರಿಯಾಂಶ್ ಆರ್ಯ (29) ವಿಕೆಟ್ ಒಪ್ಪಿಸಿದರು. ಆ ಬಳಿಕ ಬಂದ ಕೂಪರ್ ಕೊನೊಲಿ 30 ರನ್​ಗಳ ಕೊಡುಗೆ ನೀಡಿದರು.

ಮತ್ತೊಂದೆಡೆ ಪ್ರಭ್​ಸಿಮ್ರಾನ್ ಸಿಂಗ್ 59 ರನ್ ಬಾರಿಸಿದರು. ಇನ್ನು ನಾಯಕ ಶ್ರೇಯಸ್ ಅಯ್ಯರ್ 30 ರನ್​ ಗಳಿಸಿ ವಿಕೆಟ್ ಒಪ್ಪಿಸಿದರು. ಇದಾದ ಬಳಿಕ ಬಂದ ಮಾರ್ಕಸ್ ಸ್ಟೊಯಿನಿಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು.

ಅಂತಿಮ ಓವರ್​ಗಳಲ್ಲಿ ಅಬ್ಬರಿಸಿದ ಸ್ಟೊಯಿನಿಸ್ ಕೇವಲ 22 ಎಸೆತಗಳಲ್ಲಿ 6 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ ಅಜೇಯ 62 ರನ್ ಬಾರಿಸಿದರು. ಈ ಸಿಡಿಲಬ್ಬರದ ಅರ್ಧಶತಕದ ನೆರವಿನೊಂದಿಗೆ ಪಂಜಾಬ್ ಕಿಂಗ್ಸ್ ತಂಡ 20 ಓವರ್​ಗಳಲ್ಲಿ 222 ರನ್​ ಕಲೆಹಾಕಿತು.

223 ರನ್​ಗಳ ಗುರಿ:

223 ರನ್​ಗಳ ಕಠಿಣ ಗುರಿ ಬೆನ್ನತ್ತಿದ ಪಂಜಾಬ್ ಕಿಂಗ್ಸ್ ತಂಡಕ್ಕೆ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಮೊದಲ ಓವರ್​ನಿಂದಲೇ ಅಬ್ಬರ ಶುರು ಮಾಡಿದ ವೈಭವ್ 16 ಎಸೆತಗಳಲ್ಲಿ 5 ಭರ್ಜರಿ ಸಿಕ್ಸ್ ಹಾಗೂ 3 ಫೋರ್​ಗಳೊಂದಿಗೆ 43 ರನ್​ ಚಚ್ಚಿದರು. ಈ ಹಂತದಲ್ಲಿ ಭರ್ಜರಿ ಹೊಡೆತಕ್ಕೆ ಮುಂದಾಗಿ ಕ್ಯಾಚಿತ್ತು ಹೊರ ನಡೆದರು.

ವೈಭವ್ ಔಟಾಗುತ್ತಿದ್ದಂತೆ ಬಿರುಸಿನ ಬ್ಯಾಟಿಂಗ್ ಶುರು ಮಾಡಿದ ಯಶಸ್ವಿ ಜೈಸ್ವಾಲ್ 27 ಎಸೆತಗಳಲ್ಲಿ 1 ಸಿಕ್ಸ್ ಹಾಗೂ 7 ಫೋರ್​ಗಳೊಂದಿಗೆ 51 ರನ್ ಬಾರಿಸಿದರು. ಇದರ ನಡುವೆ ಧ್ರುವ್ ಜುರೆಲ್ 16 ರನ್​ಗಳ ಕೊಡುಗೆ ನೀಡಿದ್ದರು.

ಆ ಬಳಿಕ ಬಂದ ರಿಯಾನ್ ಪರಾಗ್ 29 ರನ್​ಗಳನ್ನು ಬಾರಿಸಿ 14ನೇ ಓವರ್​ನ ಕೊನೆಯ ಎಸೆತದಲ್ಲಿ ಕ್ಯಾಚ್ ನೀಡಿದರು. ಅದರಂತೆ ಅಂತಿಮ 6 ಓವರ್​ಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ 72 ರನ್​ಗಳ ಅವಶ್ಯಕತೆಯಿತ್ತು.

ಈ ಹಂತದಲ್ಲಿ ಜೊತೆಗೂಡಿದ ಡೊನೊವನ್ ಫೆರೇರಾ ಹಾಗೂ ಶುಭಂ ದುಬೆ 18 ಎಸೆತಗಳಲ್ಲಿ 37 ರನ್ ಬಾರಿಸಿದರು. ಪರಿಣಾಮ ಕೊನೆಯ 3 ಓವರ್​ಗಳಲ್ಲಿ 35 ರನ್​ಗಳು ಬೇಕಿದ್ದವು. ಈ ವೇಳೆ 18ನೇ ಓವರ್ ಎಸೆದ ಅರ್ಷದೀಪ್ ಸಿಂಗ್ ಬರೋಬ್ಬರಿ 15 ರನ್​ಗಳು ನೀಡಿದರು. ಅದರಂತೆ ಅಂತಿಮ 12 ಎಸೆತಗಳಲ್ಲಿ 18 ರನ್​ಗಳು ಬೇಕಿದ್ದವು.

ಲಾಕಿ ಫರ್ಗುಸನ್ ಎಸೆದ 19ನೇ ಓವರ್​ನಲ್ಲಿ ಆರ್​ಆರ್​ ಬ್ಯಾಟರ್​ಗಳಾದ ಫೆರೇರಾ ಹಾಗೂ ಶುಭಂ ದುಬೆ 16 ರನ್ ಕಲೆಹಾಕಿದರು. ಅಲ್ಲದೆ ಅಂತಿಮ ಓವರ್​ನಲ್ಲಿ 2 ರನ್​ ಬೇಕಿತ್ತು. ಮಾರ್ಕೊ ಯಾನ್ಸೆನ್ ಎಸೆದ 20ನೇ ಓವರ್​ನ 2ನೇ ಎಸೆತದಲ್ಲಿ ಡೊನೊವನ್ ಫೆರೇರಾ ಸಿಕ್ಸ್ ಸಿಡಿಸುವ ಮೂಲಕ 19.2 ಓವರ್​ಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವು 228 ರನ್​ ಕಲೆಹಾಕಿತು. ಈ ಮೂಲಕ ಆರ್​ಆರ್ ಪಡೆ 6 ವಿಕೆಟ್​ಗಳ ಜಯ ಸಾಧಿಸಿದೆ.

ಇದರೊಂದಿಗೆ ಈ ಸೀಸನ್​ನಲ್ಲಿ ಪಂಜಾಬ್ ಕಿಂಗ್ಸ್ ತಂಡಕ್ಕೆ ಸೋಲುಣಿಸಿದ ಮೊದಲ ತಂಡವೆಂಬ ಹೆಗ್ಗಳಿಕೆಯನ್ನು ರಾಜಸ್ಥಾನ್ ರಾಯಲ್ಸ್ ತನ್ನದಾಗಿಸಿಕೊಂಡಿದೆ. ಅಂದರೆ ಮೊದಲಾರ್ಧದ 7 ಪಂದ್ಯಗಳಲ್ಲಿ ಪಂಜಾಬ್ ಕಿಂಗ್ಸ್ ಒಂದೇ ಒಂದು ಪಂದ್ಯ ಸೋತಿರಲಿಲ್ಲ. ಇದೀಗ ದ್ವಿತೀಯಾರ್ಧದ ಮೊದಲ ಮ್ಯಾಚ್​ನಲ್ಲೇ ಪಂಜಾಬ್ ಪಡೆ ಸೋತಿದೆ. ಈ ಸೋಲಿನ ಹೊರತಾಗಿಯೂ ಪಂಜಾಬ್ ಕಿಂಗ್ಸ್ ಅಂಕ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ರಾಜಸ್ಥಾನ್ ರಾಯಲ್ಸ್ (ಪ್ಲೇಯಿಂಗ್ XI): ವೈಭವ್ ಸೂರ್ಯವಂಶಿ, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್ (ನಾಯಕ), ಡೊನೊವನ್ ಫೆರೇರಾ, ರವೀಂದ್ರ ಜಡೇಜಾ, ದಸುನ್ ಶಾನಕ, ಜೋಫ್ರಾ ಆರ್ಚರ್, ನಾಂಡ್ರೆ ಬರ್ಗರ್, ಬ್ರಿಜೇಶ್ ಶರ್ಮಾ, ಯಶ್ ರಾಜ್ ಪೂಂಜಾ.

ಇದನ್ನೂ ಓದಿ: ಸೋಲಿನ ನಡುವೆಯೂ RCBಯ ಕಾಲೆಳೆದ ಡೆಲ್ಲಿ ಕ್ಯಾಪಿಟಲ್ಸ್ ಫ್ಯಾನ್ಸ್​!

ಪಂಜಾಬ್ ಕಿಂಗ್ಸ್ (ಪ್ಲೇಯಿಂಗ್ XI): ಪ್ರಭ್​ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್), ಪ್ರಿಯಾಂಶ್ ಆರ್ಯ, ಶ್ರೇಯಸ್ ಅಯ್ಯರ್ (ನಾಯಕ), ಕೂಪರ್ ಕೊನೊಲಿ, ಸೂರ್ಯಾಂಶ್ ಶೆಡ್ಗೆ, ನೆಹಾಲ್ ವಧೇರಾ, ಮಾರ್ಕಸ್ ಸ್ಟೊಯಿನಿಸ್, ಮಾರ್ಕೊ ಯಾನ್ಸೆನ್, ಲಾಕಿ ಫರ್ಗುಸನ್, ಅರ್ಷದೀಪ್ ಸಿಂಗ್, ಯುಜ್ವೇಂದ್ರ ಚಹಲ್.

Published On – 10:57 pm, Tue, 28 April 26

Source link