ಸೆಪ್ಟಿಕ್ ಟ್ಯಾಂಕ್ ಒಳಗೆ ಕಬ್ಬಿಣದ ಟ್ರಂಕ್ನಲ್ಲಿ ಮಹಿಳೆಯ ಶವ ಪತ್ತೆ – Kannada News | Woman’s Body Discovered in Iron Trunk Hidden Inside Septic Tank in Bhopal
ಭೋಪಾಲ್, ಫೆಬ್ರವರಿ 13: ಸೆಪ್ಟಿಕ್ ಟ್ಯಾಂಕ್ ಒಳಗೆ ಕಬ್ಬಿಣದ ಟ್ರಂಕ್ನಲ್ಲಿ ಮಹಿಳೆಯ ಶವ ಪತ್ತೆಯಾಗಿರುವ ಘಟನೆ ಮಧ್ಯಪ್ರದೇಶದ ಭೋಪಾಲ್ನಲ್ಲಿ ನಡೆದಿದೆ. ಭೋಪಾಲ್ನ ಕಮಲ್ ನಗರದಲ್ಲಿ ಈ ಘಟನೆ ನಡೆದಿದೆ. ಖಾಲಿ ಜಾಗದಲ್ಲಿರುವ ಸೆಪ್ಟಿಕ್ ಟ್ಯಾಂಕ್‌ನಲ್ಲಿ ಎಸೆಯಲಾಗಿದ್ದ ಕಬ್ಬಿಣದ ಟ್ರಂಕ್‌ನೊಳಗೆ ಶವವನ್ನು ಮರೆಮಾಡಲಾಗಿತ್ತು. ಈ ಪ್ರದೇಶವು ನಿರ್ಜನವಾಗಿದ್ದು, ಅಪರಾಧ(Crime)ವನ್ನು ಮರೆಮಾಡಲು ಈ ಸ್ಥಳವನ್ನು ಉದ್ದೇಶಪೂರ್ವಕವಾಗಿ ಆಯ್ಕೆ ಮಾಡಲಾಗಿದೆ ಎಂದು ತನಿಖಾಧಿಕಾರಿಗಳು ಶಂಕಿಸಿದ್ದಾರೆ. ಪ್ರಾಥಮಿಕ ಅಂದಾಜಿನ ಪ್ರಕಾರ ಶವವು ಸುಮಾರು ಮೂರರಿಂದ ನಾಲ್ಕು ದಿನಗಳಷ್ಟು ಹಳೆಯದಾಗಿರಬಹುದು. ಮಹಿಳೆಯ ಗುರುತು ಇನ್ನೂ…