Headlines

ಕೊಡಗಿನಲ್ಲಿ ಫುಟ್​ಬಾಲ್ ಕ್ರೇಝ್: ತಲೆ ಎತ್ತಿ ನಿಂತ ಕ್ರಿಸ್ಟಿಯಾನೊ ರೊನಾಲ್ಡೊ! – Kannada News | Cristiano Ronaldo Craze in Kodagu: 40ft Ronaldo Cutout Steals the Show

ಕೊಡಗು ಎಂದರೆ ಕೇವಲ ಕಾಫಿ ನಾಡಲ್ಲ, ಅದು ಕ್ರೀಡಾಪಟುಗಳ ತವರೂರು. ಇಲ್ಲಿನವರ ರಕ್ತದಲ್ಲೇ ಕ್ರೀಡಾ ಪ್ರೇಮ ಹರಿಯುತ್ತದೆ ಎಂಬುದಕ್ಕೆ ಈಗ ಮತ್ತೊಂದು ಉದಾಹರಣೆ ಸಿಕ್ಕಿದೆ. ಹೌದು, ಕೊಡಗು ಜಿಲ್ಲೆಯ ಸುಂಟಿಕೊಪ್ಪದ ಗದ್ದೆಹಳ್ಳದಲ್ಲಿ ವಿಶ್ವ ಫುಟ್​ಬಾಲ್​ನ ಕಾಲ್ಚೆಂಡು ಚತುರ, ಪೋರ್ಚುಗಲ್‌ನ ಕ್ರಿಸ್ಟಿಯಾನೊ ರೊನಾಲ್ಡೊ ಅವರ ಬೃಹತ್ ಕಟೌಟ್ ತಲೆ ಎತ್ತಿ ನಿಂಗಿದೆ. 40 ಅಡಿ ಎತ್ತರದ ಕಟೌಟ್: ಫಿಫಾ ವಿಶ್ವಕಪ್ ಕಾವೇರುತ್ತಿದ್ದಂತೆ ಸ್ಥಳೀಯ ಫುಟ್‌ಬಾಲ್ ಕ್ಲಬ್ ಆದ​ ‘ಅಮಿಟಿ ಯುನೈಟೆಡ್ ಎಫ್​ಸಿ’ ಮತ್ತು ರೊನಾಲ್ಡೊ ಅವರ ಕಟ್ಟಾ ಅಭಿಮಾನಿಗಳು…

Read More

ಲೋಕಾಯುಕ್ತ ದಾಳಿ ವೇಳೆ ಎಸಿಎಫ್​​ ಮನೆಯಲ್ಲಿ ಕಂತೆ ಕಂತೆ ಹಣ, ಚಿನ್ನಾಭರಣ ಪತ್ತೆ

ಚಿಕ್ಕಮಗಳೂರು, ಜೂನ್​​ 16: ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ (ಎಸಿಎಫ್) ಮೋಹನ್ ಅವರ ನಿವಾಸ, ಕಚೇರಿ ಹಾಗೂ ನಿರ್ಮಾಣ ಹಂತದ ಮನೆ ಸೇರಿದಂತೆ ಐದು ವಿವಿಧ ಸ್ಥಳಗಳ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಭ್ರಷ್ಟಾಚಾರದ ಆರೋಪ ಹಾಗೂ ಆಸ್ತಿ ದುರ್ಬಳಕೆ ಕುರಿತು ದೂರುಗಳು ಬಂದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ನಗರದ ಕಲ್ಯಾಣನಗರದಲ್ಲಿರುವ ಎಸಿಎಫ್ ಮೋಹನ್ ಅವರ ನಿವಾಸದಲ್ಲಿ ಲೋಕಾಯುಕ್ತ ಪೊಲೀಸರು ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ದಾಳಿ ವೇಳೆ ಲಕ್ಷಾಂತರ ರೂಪಾಯಿ ನಗದು…

Read More

Centipede: ಮನೆಯಲ್ಲಿ ಜರಿ ಕಾಣಿಸಿಕೊಂಡರೆ ಏನರ್ಥ? ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು? – Kannada News | Centipede Sign in Home: Rahu’s Message? Astrological Insights and Vastu Tips

ಮನೆಯಲ್ಲಿ ಜರಿ ಕಾಣಿಸಿಕೊಂಡರೆ ಶುಭವೋ?Image Credit source: Pinterest ಜ್ಯೋತಿಷ್ಯ ಮತ್ತು ವಾಸ್ತು ಶಾಸ್ತ್ರದ ಪ್ರಕಾರ, ಮನೆಯಲ್ಲಿ ಜರಿ (Centipede) ಕಾಣಿಸಿಕೊಳ್ಳುವುದು ಕೇವಲ ಒಂದು ಸಾಧಾರಣ ಕೀಟದ ಭೇಟಿಯಲ್ಲ. ಜನಪದದಲ್ಲಿ ಇದನ್ನು “ಲಕ್ಷ್ಮಿ ಚೇಳು” ಎಂದೂ ಕರೆಯಲಾಗುತ್ತದೆಯಾದರೂ, ಜ್ಯೋತಿಷ್ಯದಲ್ಲಿ ಇದನ್ನು ಮುಖ್ಯವಾಗಿ ರಾಹು ಗ್ರಹದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಮನೆಯಲ್ಲಿ ಜರಿ ಕಾಣಿಸಿಕೊಂಡರೆ ಅದು ಶುಭವೇ ಅಥವಾ ಅಶುಭವೇ ಎಂಬುದು ಅದು ಮನೆಯ ಯಾವ ಜಾಗದಲ್ಲಿ ಕಾಣಿಸಿಕೊಳ್ಳುತ್ತದೆ ಮತ್ತು ಯಾವ ಸ್ಥಿತಿಯಲ್ಲಿದೆ ಎಂಬುದರ ಮೇಲೆ ಸಂಪೂರ್ಣವಾಗಿ ನಿರ್ಧಾರವಾಗುತ್ತದೆ. ಸಾಮಾನ್ಯವಾಗಿ…

Read More

ಮಹಾರಾಷ್ಟ್ರ: ಆಟವಾಡುತ್ತಿದ್ದಾಗ ಸೆಪ್ಟಿಕ್ ಟ್ಯಾಂಕ್‌ಗೆ ಬಿದ್ದು 5 ವರ್ಷದ ಬಾಲಕ ಸಾವು – Kannada News | Maharashtra: 5 Year Old Dies in Open Septic Tank; Urgent Call for Child Safety

ಭೀವಂಡಿ, ಜೂನ್ 16: ಆಟವಾಡುವಾಗ ಐದು ವರ್ಷದ ಬಾಲಕ(Boy) ತೆರೆದಿದ್ದ ಸೆಪ್ಟಿಕ್ ಟ್ಯಾಂಕ್​ಗೆ ಬಿದ್ದು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಭೀವಂಡಿ ನಗರದ ಫರೀದ್ ಬಾಗ್ ಪ್ರದೇಶದಲ್ಲಿ ನಡೆದಿದೆ. ಮೊಹಮ್ಮದ್ ಅಹ್ಮದ್ ಮೃತ ಬಾಲಕ. ಸಿಸಿಟಿವಿಯಲ್ಲಿ ಈ ದೃಶ್ಯ ರೆಕಾರ್ಡ್​ ಆಗಿದೆ. ವೈರಲ್ ಆಗಿರುವ ಸಿಸಿಟಿವಿ ದೃಶ್ಯದಲ್ಲಿ ಕಟ್ಟಡದ ಆವರಣದಲ್ಲಿ ಕೆಲವು ಮಕ್ಕಳು ಆಟವಾಡುತ್ತಿರುವುದು ಕಂಡುಬಂದಿದೆ. ಈ ವೇಳೆ ಸೆಪ್ಟಿಕ್ ಟ್ಯಾಂಕ್ ಬಳಿ ಬಂದ ಬಾಲಕ ಮೊಹಮ್ಮದ್, ಟ್ಯಾಂಕ್‌ನ ಮುಚ್ಚಳವನ್ನು ಸರಿಯಾಗಿ ಮುಚ್ಚದ ಕಾರಣ ಆಕಸ್ಮಿಕವಾಗಿ ಸಮತೋಲನ ಕಳೆದುಕೊಂಡು…

Read More

ಜಿ7 ಶೃಂಗಸಭೆ: ಫ್ರಾನ್ಸ್‌ಗೆ ಪ್ರಧಾನಿ ಮೋದಿ ಭೇಟಿ, ಇಂದು ಅಮೆರಿಕ ಅಧ್ಯಕ್ಷ ಟ್ರಂಪ್ ಜೊತೆ ಮಹತ್ವದ ಮಾತುಕತೆ – Kannada News | Modi at G7: Crucial India US Trade & Iran Talks with Trump in France

ಫ್ರಾನ್ಸ್​, ಜೂನ್ 16: ಫ್ರಾನ್ಸ್‌ಗೆ ಆಗಮಿಸಿರುವ ಪ್ರಧಾನಿ ನರೇಂದ್ರ ಮೋದಿ(Narendra Modi) ಜಿ7 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ. ಜೂನ್ 17 ರಂದು ನಡೆಯಲಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರೊಂದಿಗಿನ ದ್ವಿಪಕ್ಷೀಯ ಸಭೆಯ ಮೇಲೆ ಜಗತ್ತಿನ ಕಣ್ಣು ನೆಟ್ಟಿದೆ. ಈ ಸಭೆಯಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ಒಪ್ಪಂದ, ಸುಂಕಗಳು ಮತ್ತು ಹಾರ್ಮುಜ್ ಜಲಸಂಧಿಯ ಇರಾನ್ ಬಿಕ್ಕಟ್ಟಿನ ಕುರಿತು ನಿರ್ಣಾಯಕ ಚರ್ಚೆಗಳು ನಡೆಯಲಿವೆ. ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್ ಮ್ಯಾಕ್ರನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಔಪಚಾರಿಕವಾಗಿ ಸ್ವಾಗತಿಸಲಿದ್ದಾರೆ….

Read More

ರಾಯಚೂರು: ಮೇಲ್ಛಾವಣಿ ಕುಸಿತದಿಂದ ಜೀವ ಭಯದಲ್ಲೇ ಸರ್ಕಾರಿ ಶಾಲೆಗೆ ಬರುತ್ತಿರುವ ಮಕ್ಕಳು

ರಾಯಚೂರು, ಜೂನ್ 16: ರಾಯಚೂರು ತಾಲ್ಲೂಕಿನ ವಿಜಯನಗರ ಕ್ಯಾಂಪ್‌ನಲ್ಲಿರುವ ಸರ್ಕಾರಿ ಪ್ರಾಥಮಿಕ ಶಾಲೆಯ ಕಟ್ಟಡ ಸಂಪೂರ್ಣ ಶಿಥಿಲಾವಸ್ಥೆಗೆ ತಲುಪಿದ್ದು, ಮಕ್ಕಳು ಜೀವಭಯದಲ್ಲೇ ಪಾಠ ಕಲಿಯುವಂತಾಗಿದೆ. 2002ರಲ್ಲಿ ನಿರ್ಮಾಣಗೊಂಡ ಈ ಕಟ್ಟಡ ಕೇವಲ 24 ವರ್ಷಗಳಲ್ಲೇ ಕುಸಿಯುವ ಹಂತಕ್ಕೆ ಬಂದಿದೆ. ಶಾಲೆಯ ಮೇಲ್ಛಾವಣಿ ಪದೇ ಪದೇ ಕುಸಿಯುತ್ತಿದ್ದು, ಸಣ್ಣ ಮಳೆ ಬಂದರೂ ನೀರು ಸೋರುತ್ತದೆ. ಇದರಿಂದ ಮಕ್ಕಳು ಹಾಗೂ ಶಿಕ್ಷಕರು ಆತಂಕದಲ್ಲಿ ದಿನ ಕಳೆಯುವಂತಾಗಿದೆ. ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಶಿಕ್ಷಕರು ಅವರನ್ನು ಶಾಲಾ ಕೊಠಡಿಗಳಿಂದ ಹೊರಗೆ, ಮರದ ಕೆಳಗೆ…

Read More

ಮೈಸೂರು ಅಗ್ನಿ ದುರಂತ ಕೇಸ್​​ಗೆ ಟ್ವಿಸ್ಟ್​​: ನಿಯಮ ಬಾಹಿರವಾಗಿ ಕಾರ್ಯಾಚರಣೆ ನಡೆಸುತ್ತಿತ್ತಾ ಪಬ್​​?

ಮೈಸೂರು, ಜೂನ್​​ 16: ದಟ್ಟಗಳ್ಳಿಯಲ್ಲಿರುವ ಫಾಕ್ಸ್ ಡೆನ್ ರೆಸ್ಟೋ ಬಾರ್​​ನಲ್ಲಿ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ಇಬ್ಬರು ಮೃತಪಟ್ಟು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಗ್ನಿ ದುರಂತದ ಕುರಿತು ಹಲವು ಗಂಭೀರ ಆರೋಪಗಳು ಕೇಳಿಬಂದಿದ್ದು, ಈ ರೆಸ್ಟೋ ಬಾರ್ ಅನ್ನು ನಿಯಮಬಾಹಿರವಾಗಿ ನಡೆಸಲಾಗುತ್ತಿತ್ತು ಎಂದು ಹೇಳಲಾಗಿದೆ. ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಯ ಪಕ್ಕದಲ್ಲೇ ಈ ಪಬ್ ಕಾರ್ಯನಿರ್ವಹಿಸುತ್ತಿದ್ದು, 100 ಮೀಟರ್ ಅಂತರದಲ್ಲಿ ಆಸ್ಪತ್ರೆ, ಶಾಲೆ, ದೇವಸ್ಥಾನಗಳಿರಬಾರದು ಎಂಬ ನಿಯಮವನ್ನು ಉಲ್ಲಂಘಿಸಲಾಗಿದೆ ಎಂಬುದು ಮುಖ್ಯ ಆರೋಪವಾಗಿದೆ. ಪಬ್‌ಗೆ ಕೇವಲ ಒಂದೇ ಕಿರಿದಾದ…

Read More

Daily Devotional: ಯಜ್ಞ, ಯಾಗಾದಿ ಹೋಮ ಹವನಗಳಲ್ಲಿ ಯಾವ ಸಮಿತ್ತು ಅರ್ಪಿಸಿದರೆ ಏನು ಫಲ? – Kannada News | Unlocking the Full Benefits of Homa: Why Personal Effort in Collecting Samithu Matters

ಹೋಮ, ಹವನಗಳಲ್ಲಿ ಸಮಿತ್ತುಗಳ ಮಹತ್ವImage Credit source: Pinterest ಸನಾತನ ಹಿಂದೂ ಧರ್ಮದ ಆಚರಣೆಗಳಲ್ಲಿ ಯಜ್ಞ, ಯಾಗಾದಿ ಹೋಮ ಹವನಗಳಿಗೆ ಅತ್ಯಂತ ಪ್ರಾಮುಖ್ಯತೆ ಇದೆ. ನಮ್ಮ ಪಾಪ ಕರ್ಮಗಳನ್ನು ನಿವಾರಿಸಲು, ಕಷ್ಟ ಕಾರ್ಪಣ್ಯಗಳಿಂದ ಮುಕ್ತಿ ಪಡೆಯಲು, ದೇವತಾರಾಧನೆಯ ಮೂಲಕ ಭಗವಂತನ ಕೃಪೆಗೆ ಪಾತ್ರರಾಗಲು, ಹಾಗೂ ಇಷ್ಟಾರ್ಥ ಸಿದ್ಧಿಗಳಿಗಾಗಿ ಇಂತಹ ಪವಿತ್ರ ಕ್ರಿಯೆಗಳನ್ನು ಆಚರಿಸಲಾಗುತ್ತದೆ. ಈ ಯಜ್ಞಗಳಲ್ಲಿ ಸಮಿತ್ತುಗಳ ಬಳಕೆಯು ಅವಿಭಾಜ್ಯ ಅಂಗವಾಗಿದೆ. ಸಮಿತ್ತುಗಳು ಎಂದರೆ ಅಗ್ನಿಯಲ್ಲಿ ಅರ್ಪಿಸುವ ಪವಿತ್ರ ಮರದ ತುಂಡುಗಳು ಅಥವಾ ಉರವಲುಗಳು. ಈ ಸಮಿತ್ತುಗಳು…

Read More

ಗದಗ‌ದ ನರೇಗಲ್ ಪಟ್ಟಣದಲ್ಲಿ ಇದ್ದೂ ಇಲ್ಲದಂತಾದ ಸರ್ಕಾರಿ ಆಸ್ಪತ್ರೆ: ರೋಗಿಗಳಿಗೆ ತಪ್ಪದ ಪರದಾಟ – Kannada News | Upgraded But Empty: Patients Suffer As Naregal Govt Hospital Runs With Only One Dentist

ಗದಗ, ಜೂನ್​​ 16: ಸರ್ಕಾರ ಕೋಟ್ಯಾಂತರ ರೂಪಾಯಿ ವೆಚ್ಚ ಮಾಡಿ ಆಸ್ಪತ್ರೆ ನಿರ್ಮಿಸಲಾಗಿದ್ದರೂ ವೈದ್ಯರು ಮತ್ತು ಸಿಬ್ಬಂದಿ ಕೊರತೆಯ ಕಾರಣ ರೋಗಿಗಳು ಪರದಾಟ ನಡೆಸುತ್ತಿರುವ ಸ್ಥಿತಿ ಗದಗ‌ ಜಿಲ್ಲೆಯ ನರೇಗಲ್ ಪಟ್ಟಣದಲ್ಲಿ ಕಂಡುಬಂದಿದೆ. ಕೇಂದ್ರ ಸರ್ಕಾರ ಎನ್ಎಚ್ಎಂ ಯೋಜನೆಯಲ್ಲಿ 2 ಕೋಟಿಗೂ ಅಧಿಕ ಮೊತ್ತದಲ್ಲಿ ಹೈಟೆಕ್ ಆಸ್ಪತ್ರೆ ಕಟ್ಟಡ ನಿರ್ಮಾಣ ಮಾಡಲಾಗಿದೆ. ಆ ಮೂಲಕ ಪ್ರಾಥಮಿಕ ಆರೋಗ್ಯ ಕೇಂದ್ರ ಸಮುದಾಯ ಆರೋಗ್ಯ ಕೇಂದ್ರವಾಗಿ ಭಡ್ತಿ ಪಡೆದಿದೆಯಾದರೂ, ವೈದ್ಯರ ಕೊರತೆಯಿಂದ ರೋಗಿಗಳಿಗೆ ಸಮರ್ಪಕ ಚಿಕಿತ್ಸೆ ಮಾತ್ರ ಮರಿಚೀಕೆಯಾಗಿಯೇ ಉಳಿದಿದೆ….

Read More

Jayamma Death: ನಟ ವಿಜಯ್ ರಾಘವೇಂದ್ರ, ಶ್ರೀಮುರಳಿ ತಾಯಿ ಜಯಮ್ಮ ನಿಧನ – Kannada News | Jayamma Passed Away: Vijay Raghavendra, Sriimurali’s Mother Passes Away, Sandalwood Mourns

ಕನ್ನಡ ಚಿತ್ರರಂಗದ ಖ್ಯಾತ ನಟರಾದ ವಿಜಯ್ ರಾಘವೇಂದ್ರ (Vijay Raghavendra) ಮತ್ತು ಶ್ರೀಮುರಳಿ ಅವರ ತಾಯಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಮಾಜಿ ಅಧ್ಯಕ್ಷ ಹಾಗೂ ಹಿರಿಯ ನಿರ್ಮಾಪಕ ಎಸ್.ಎ. ಚಿನ್ನೇಗೌಡ ಅವರ ಪತ್ನಿ ಜಯಮ್ಮ ಅವರು ಇಂದು (ಜೂನ್ 16) ಬೆಳಗ್ಗೆ ಕೊನೆಯುಸಿರೆಳೆದಿದ್ದಾರೆ. ಕಳೆದ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಜಯಮ್ಮ ಅವರು ಚಿಕಿತ್ಸೆ ಫಲಕಾರಿಯಾಗದೆ ಇಂದು ಮುಂಜಾನೆ ನಿಧನರಾಗಿದ್ದಾರೆ. ಇವರ ನಿಧನಕ್ಕೆ ಸ್ಯಾಂಡಲ್‌ವುಡ್ ಗಣ್ಯರು ಹಾಗೂ ಅಭಿಮಾನಿಗಳು ತೀವ್ರ ಕಂಬನಿ ಮಿಡಿದಿದ್ದಾರೆ. ಜಯಮ್ಮ ಅವರು…

Read More