ಬಂಗಾಳ ಚುನಾವಣೆ ಎಫೆಕ್ಟ್: ಗುರುಗ್ರಾಮದಲ್ಲಿ ಕಾರ್ಮಿಕರ ಕೊರತೆ, ರೋಬೋಟ್ ವ್ಯಾಕ್ಯೂಮ್ ಕ್ಲೀನರ್‌ಗಳಿಗೆ ಭಾರಿ ಬೇಡಿಕೆ – Kannada News | Gurugram Poster Sparks Talk on Workforce Gaps During Bengal Polls
ಗುರುಗ್ರಾಮ, ಏಪ್ರಿಲ್ 27: ಪಶ್ಚಿಮ ಬಂಗಾಳ(West Bengal)ದ 2026ರ ವಿಧಾನಸಭಾ ಚುನಾವಣೆಯ ಮೊದಲ ಹಂತದ ಮತದಾನವು ಏಪ್ರಿಲ್ 23ರಂದು ನಡೆದಿದೆ. ಈ ಅಬ್ಬರದ ಮತದಾನದ ಹಿಂದೆ ಒಂದು ಕುತೂಹಲಕಾರಿ ಸಂಗತಿಯಿದೆ, ಗುರುಗ್ರಾಮದಂತಹ ನಗರಗಳಲ್ಲಿ ಕೆಲಸ ಮಾಡುತ್ತಿದ್ದ ಲಕ್ಷಾಂತರ ಕಾರ್ಮಿಕರು ಪಡಿತರ ಚೀಟಿ ಸೇರಿದಂತೆ ಸರ್ಕಾರದ ಸೌಲಭ್ಯಗಳನ್ನು ಕಳೆದುಕೊಳ್ಳುವ ಭೀತಿಯಿಂದ ಮತ ಚಲಾಯಿಸಲು ತಮ್ಮ ಗ್ರಾಮಗಳಿಗೆ ಮರಳಿದ್ದಾರೆ. ಸುಮಾರು 2.5 ರಿಂದ 3 ಲಕ್ಷ ಬಂಗಾಳಿ ಕಾರ್ಮಿಕರಿಗೆ ನೆಲೆಯಾಗಿರುವ ಗುರುಗ್ರಾಮ್‌ನಲ್ಲಿ ಈಗ ಕೆಲಸಗಾರರ ತೀವ್ರ ಅಭಾವ ಕಂಡುಬಂದಿದೆ. ಮನೆಗೆಲಸದವರು,…