ಇರಾನ್ನಿಂದ ಶಾಂತಿ ಪ್ರಸ್ತಾವನೆ: ಹಾರ್ಮುಜ್ ಜಲಸಂಧಿ ತೆರೆಯಲು ಒಪ್ಪಂದ, ಅಮೆರಿಕದ ಅಂಗಳದಲ್ಲಿ ಈಗ ಚೆಂಡು – Kannada News | Iran’s Peace Proposal to US: Reopening Hormuz Strait for Global Oil Stability
ಟೆಹ್ರಾನ್, ಏಪ್ರಿಲ್ 27: ಜಾಗತಿಕ ಇಂಧನ ಪೂರೈಕೆಯ ಜೀವನಾಡಿಯಾಗಿರುವ ‘ಹಾರ್ಮುಜ್ ಜಲಸಂಧಿ’ಯನ್ನು ಪುನಃ ತೆರೆಯುವ ಮೂಲಕ ಸಮರಕ್ಕೆ ಪೂರ್ಣವಿರಾಮ ಹಾಕಲು ಇರಾನ್(Iran) ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಈ ಸಂಬಂಧ ಅಮೆರಿಕಕ್ಕೆ ಹೊಸ ಪ್ರಸ್ತಾವನೆಯನ್ನು ಕಳುಹಿಸಲಾಗಿದ್ದು, ಯುದ್ಧದ ಕಾರ್ಮೋಡಗಳ ನಡುವೆ ಶಾಂತಿಯ ಕಿರಣ ಮೂಡಿದೆ. ಇರಾನ್‌ನ ಈ ಪ್ರಸ್ತಾವನೆಯ ಅತ್ಯಂತ ಪ್ರಮುಖ ಅಂಶವೆಂದರೆ ಹಾರ್ಮುಜ್ ಜಲಸಂಧಿಯ ಮೇಲಿನ ದಿಗ್ಬಂಧನವನ್ನು ತೆಗೆದುಹಾಕುವುದು. ವಿಶ್ವದ ತೈಲ ಪೂರೈಕೆಯ ಬಹುಪಾಲು ಈ ಮಾರ್ಗದ ಮೂಲಕವೇ ನಡೆಯುವುದರಿಂದ, ಇರಾನ್‌ನ ಈ ನಿರ್ಧಾರವು ಜಾಗತಿಕ…