ಎಕ್ಸ್ನಲ್ಲಿ ಮೋದಿಗೆ ಇಲ್ಲ ಸರಿಸಾಟಿ; ಒಂದು ತಿಂಗಳ ಅತಿ ಮೆಚ್ಚಿನ 10 ಟ್ವೀಟ್ಗಳಲ್ಲಿ ಮೋದಿಯದ್ದೇ 8 – Kannada News | Narendra Modi’s 8 posts among the top 10 most liked tweets in last month
ನವದೆಹಲಿ, ಡಿಸೆಂಬರ್ 19: ಎಕ್ಸ್ ಸದ್ಯ ವಿಶ್ವದ ಅತಿ ಜನಪ್ರಿಯ ಮತ್ತು ಅತಿ ಹೆಚ್ಚು ಬಳಕೆಯ ಕಿರು ಸಾಮಾಜಿಕ ಮಾಧ್ಯಮ ಎನಿಸಿದೆ. ಬಹಳ ಸುದ್ದಿಗಳು ಈ ಪ್ಲಾಟ್ಫಾರ್ಮ್ನಲ್ಲೇ ಸ್ಫೋಟಗೊಳ್ಳುತ್ತವೆ. ವಿಶ್ವದ ಬಹುತೇಕ ಸೆಲಬ್ರಿಟಿಗಳು ಎಕ್ಸ್ನಲ್ಲಿ ಉಪಸ್ಥಿತಿ ಹೊಂದಿದ್ದಾರೆ. ಎಕ್ಸ್ನಲ್ಲಿ ಅತಿ ಹೆಚ್ಚು ಫಾಲೋಯರ್ಸ್ ಹೊಂದಿರುವ ರಾಜಕಾರಣಿಗಳಲ್ಲಿ ನರೇಂದ್ರ ಮೋದಿಯೂ (Narendra Modi) ಒಬ್ಬರು. ಇವರು ಹಾಕುವ ಪೋಸ್ಟ್ಗಳಿಗೆ ಸಿಗುವ ಲೈಕ್ಗಳೇ ಇವರ ಜನಪ್ರಿಯತೆಗೆ ಅಳತೆಗೋಲೆನಿಸುತ್ತವೆ. ಕಳೆದ ಒಂದು ತಿಂಗಳಲ್ಲಿ ಎಕ್ಸ್ನಲ್ಲಿ ಅತಿಹೆಚ್ಚು ಲೈಕ್ ಪಡೆದ ಪೋಸ್ಟ್ಗಳಲ್ಲಿ ಹೆಚ್ಚಿನವು…