Category Archives: Blog

Your blog category

ಸಾಂಬಾರ್ ಮಾಡಿಲ್ಲವೆಂದು ಬೈದ ತಂದೆ: ಅಷ್ಟಕ್ಕೇ ಸಾವಿನ ಕದ ತಟ್ಟಿದ ಮಗಳು – Kannada News | Chikkamagaluru: daughter Ends Life After Scolding From Father About Sambar

ಚಿಕ್ಕಮಗಳೂರು, ಏಪ್ರಿಲ್​ 26: ಸಾಂಬಾರ್ ಮಾಡಿಲ್ಲವೆಂದು ತಂದೆ ಬೈದಿದ್ದಕ್ಕೆ ಪುತ್ರಿ ನೇಣಿಗೆ ಶರಣಾಗಿರುವಂತಹ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದಲ್ಲಿ ನಡೆದಿದೆ. ಸೌಜನ್ಯ ಪೂಜಾರಿ(22) ಆತ್ಮಹತ್ಯೆ ಮಾಡಿಕೊಂಡ ಯುವತಿ. ಸೌಜನ್ಯ ತಂದೆ ನಟೇಶ್, ತರಕಾರಿ ತಂದು ಸಾಂಬಾರ್ ಮಾಡಲು ಹೇಳಿದ್ದಾರೆ. ಮಧ್ಯಾಹ್ನ ಊಟಕ್ಕೆ ಬಂದಾಗ ಸಾಂಬಾರ್ ಮಾಡಿಲ್ಲವೆಂದು ಬೈದಿದ್ದಾರೆ. ಅತ್ತ ನಟೇಶ್ ಪಕ್ಕದ ಮನೆಗೆ ಸಾಂಬಾರ್ ತರಲು ತೆರಳಿದ್ದಾಗ ಇತ್ತ ಸೌಜನ್ಯ ನೇಣಿಗೆ ಶರಣಾಗಿದ್ದಾಳೆ. ಗೋಣಿಬೀಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ಬೆಳಕಿಗೆ ಬಂದಿದೆ.

ಮತ್ತಷ್ಟು ವಿಡಿಯೋ ಸುದ್ದಿಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ.

Source link

ಬೆಳಗಾವಿಯಲ್ಲಿ ಮಧ್ಯರಾತ್ರಿ ವಕೀಲೆಯ ಮನೆ ಮೇಲೆ ಗುಂಡಿನ ದಾಳಿ; ರೂಮ್​​​​ನಲ್ಲಿ ಓದುತ್ತಿದ್ದ ಪುತ್ರಿ ಕೂದಲೆಳೆ ಅಂತರದಲ್ಲಿ ಪಾರು! – Kannada News | Belagavi Advocate Pooja Kakatkar’s Home Shot At; Daughter Narrowly Escapes Firing

ಮಧ್ಯರಾತ್ರಿ ವಕೀಲೆಯ ಮನೆ ಮೇಲೆ ಗುಂಡಿನ ದಾಳಿ

ಬೆಳಗಾವಿ, ಏ.26: ಕುಂದಾನಗರಿ ಬೆಳಗಾವಿಯಲ್ಲಿ ಕಾನೂನು ಸುವ್ಯವಸ್ಥೆಗೆ ಸವಾಲು ಹಾಕುವಂತಹ ಘಟನೆಯೊಂದು ನಡೆದಿದೆ. ನಗರದ ಮಂಡೋಳಿ ರಸ್ತೆಯಲ್ಲಿರುವ ಖ್ಯಾತ ವಕೀಲೆ ಪೂಜಾ ಕಾಕತಕರ್ ಅವರ ನಿವಾಸದ ಮೇಲೆ ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ್ದು, ಇಡೀ ನಗರದಲ್ಲಿ ಆತಂಕ ಮನೆ ಮಾಡಿದೆ. ಶನಿವಾರ ಮಧ್ಯರಾತ್ರಿ ಸುಮಾರು 1 ರಿಂದ 2 ಗಂಟೆಯ ಸುಮಾರಿನಲ್ಲಿ ಈ ದಾಳಿ ನಡೆದಿದೆ. ದುಷ್ಕರ್ಮಿಗಳು ಪೂಜಾ ಅವರ ಮನೆಯ ಮೊದಲ ಮಹಡಿಯನ್ನು ಗುರಿಯಾಗಿಸಿಕೊಂಡು ಫೈರಿಂಗ್ ನಡೆಸಿದ್ದಾರೆ. ಆ ಸಮಯದಲ್ಲಿ ಮೊದಲ ಮಹಡಿಯ ಕೊಠಡಿಯಲ್ಲಿ ಪೂಜಾ ಅವರ ಪುತ್ರಿ ಸಂಸ್ಕೃತಿ ಪರೀಕ್ಷೆಗೆಂದು ಓದುತ್ತಿದ್ದರು. ಗುಂಡು ಕಿಟಕಿಯ ಗ್ಲಾಸ್‌ಗೆ ಬಡಿದಿದ್ದು, ಅದೃಷ್ಟವಶಾತ್ ಸಂಸ್ಕೃತಿ ಅವರು ಯಾವುದೇ ಪ್ರಾಣಾಪಾಯವಿಲ್ಲದೆ ಕೂದಲೆಳೆ ಅಂತರದಲ್ಲಿ ಪಾರಾಗಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬೆಳಗಾವಿ ಗ್ರಾಮೀಣ ಪೊಲೀಸರು ಮತ್ತು ಸುಕೋ (SUCO) ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಕಿಟಕಿಯ ಗಾಜಿನ ಮೇಲಿರುವ ಗುಂಡಿನ ಗುರುತುಗಳು ಮತ್ತು ಪತ್ತೆಯಾದ ಗುಂಡಿನ ಅಂಶಗಳನ್ನು ಹೆಚ್ಚಿನ ತನಿಖೆಗಾಗಿ ವಿಧಿವಿಜ್ಞಾನ ಪ್ರಯೋಗಾಲಯಕ್ಕೆ (FSL) ರವಾನಿಸಲಾಗಿದೆ.

ಇದನ್ನೂ ಓದಿ: 10 ವರ್ಷಗಳ ಪ್ರೀತಿ, ಹತ್ತಾರು ಬಾರಿ ದೈಹಿಕ ಸಂಬಂಧ: ಈಗ ಮದುವೆ ಮಾತು ಬಂದಾಗ ಯುವಕನಿಂದ ಕೊಲೆ ಬೆದರಿಕೆ

ಪೂಜಾ ಅವರು ಕಳೆದ 18 ವರ್ಷಗಳಿಂದ ವಕೀಲಿ ವೃತ್ತಿಯಲ್ಲಿದ್ದು, ವೃತ್ತಿ ವೈಷಮ್ಯ ಅಥವಾ ಬೇರೆ ಯಾವುದಾದರೂ ಕಾರಣಕ್ಕೆ ಈ ದಾಳಿ ನಡೆದಿದೆಯೇ ಎಂಬ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಸದ್ಯಕ್ಕೆ ಕುಟುಂಬಕ್ಕೆ ಸೂಕ್ತ ರಕ್ಷಣೆ ನೀಡುವುದಾಗಿ ಪೊಲೀಸರು ಭರವಸೆ ನೀಡಿದ್ದಾರೆ.ಬೆಳಗಾವಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಎಫ್‌ಎಸ್‌ಎಲ್ ವರದಿ ಬಂದ ಬಳಿಕ ದಾಳಿಗೆ ಬಳಸಿದ ಶಸ್ತ್ರಾಸ್ತ್ರಗಳ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

ಪತಿ ಪತ್ನಿಯರು ಈ ಸರಳ ಸೂತ್ರ ಪಾಲಿಸಿದರೆ ದಾಂಪತ್ಯ ಜೀವನ ಹಾಲು-ಜೇನಿನಂತೆ ಇರುವುದು ಖಂಡಿತ – Kannada News | Do you know what a husband and wife should be like for a happy married life

ಸಂಸಾರ ಹಾಲು ಜೇನಿನಂತೆ ಇರಲು, ದಾಂಪತ್ಯ ಜೀವನ (married life) ದೀರ್ಘಕಾಲ ಮುಂದುವರೆಯಲು ಸಂಗಾತಿಗಳಿಬ್ಬರಲ್ಲೂ ಹೊಂದಾಣಿಕೆ ಇರಬೇಕು. ಆದರೆ ಇಂದಿನ ಈ ಕಾರ್ಯನಿರತ ಜೀವನದಲ್ಲಿ ಬಹುತೇಕ ಹೆಚ್ಚಿನ ದಂಪತಿಗಳ ನಡುವೆ ಹೊಂದಾಣಿಕೆ ಎಂಬುದೇ ಇಲ್ಲ. ಈ ಹೊಂದಾಣಿಕೆಯ ಕೊರತೆಯ ಕಾರಣದಿಂದಾಗಿ ಗಂಡ ಹೆಂಡತಿಯ ಮಧ್ಯೆ ಜಗಳಗಳು ನಡೆಯುವುದು, ಡಿವೋರ್ಸ್‌ ಆಗುವಂತಹದ್ದು ಸಾಮಾನ್ಯವಾಗಿಬಿಟ್ಟಿದೆ. ಇಂತಹ ಪರಿಸ್ಥಿತಿಯಲ್ಲಿ ದಾಂಪತ್ಯ ಜೀವನ ಹಾಲು ಜೇನಿನಂತೆ ಇರಲು, ಗಂಡ ಹೆಂಡತಿ ಹೊಂದಾಣಿಕೆಯಿಂದ ಖುಷಿ ಖುಷಿಯಾಗಿ ಸಂಸಾರ ನಡೆಸಲು ಈ ಕೆಲವೊಂದು ಸೂತ್ರಗಳನ್ನು ಪಾಲಿಸಬೇಕು. ನೀವು ಕೂಡ ಈ ಸರಳ ಸಲಹೆಗಳನ್ನು ಪಾಲಿಸಿದರೆ ಸುಖ ದಾಂಪತ್ಯ ಜೀವನ ನಿಮ್ಮದಾಗುತ್ತದೆ.

ಸುಖಿ ದಾಂಪತ್ಯ ನಿಮ್ಮದಾಗಲು ಈ ಸಲಹೆ ಪಾಲಿಸಿ:

ಪರಸ್ಪರ ಸ್ವಾತಂತ್ರ್ಯ ನೀಡಿ: ಎಲ್ಲರೂ ಸ್ವಾತಂತ್ರ್ಯವನ್ನು ಪ್ರೀತಿಸುತ್ತಾರೆ. ಮದುವೆ ಎಂದರೆ ನಿಮ್ಮ ಸಂಗಾತಿಯನ್ನು ನಿಯಂತ್ರಿಸುವುದು ಎಂದಲ್ಲ. ಇಬ್ಬರೂ ಸಂಗಾತಿಗಳು ತಮ್ಮ ಆಸಕ್ತಿಗಳು ಮತ್ತು ಉತ್ಸಾಹಗಳನ್ನು ಮುಂದುವರಿಸಲು ಸ್ವಾತಂತ್ರ್ಯವನ್ನು ನೀಡಬೇಕು. ಹಾಗೆ ಮಾಡಬೇಡಿ ಹೀಗೆ ಮಾಡಬೇಡಿ ಎಂದು ಸಂಗಾತಿಯನ್ನು ಕಟ್ಟಿಹಾಕಬಾರದು, ಅವರಿಗೂ ಸ್ವಾತಂತ್ರ್ಯವನ್ನು ನೀಡಬೇಕು. ಇದು ಸಂಬಂಧವನ್ನು ತಾಜಾವಾಗಿರಿಸುತ್ತದೆ ಮತ್ತು ಪರಸ್ಪರ ಪ್ರೀತಿ, ಗೌರವವನ್ನೂ ಹೆಚ್ಚಿಸುತ್ತದೆ.

ಸಣ್ಣ ವಿಷಯಗಳಲ್ಲಿ ಸಂತೋಷವನ್ನು ಕಂಡುಕೊಳ್ಳಿ: ಜೀವನದಲ್ಲಿ ಸಂತೋಷದ ಕ್ಷಣಗಳು ದುಃಖದ ಕ್ಷಣಗಳು ಬರುತ್ತಲೇ ಇರುತ್ತವೆ. ಈ ದುಃಖಗಳನ್ನೆಲ್ಲಾ ಬದಿಗಿಟ್ಟು ಸಣ್ಣ ಸಣ್ಣ ಸಂತೋಷಗಳನ್ನು ಆರಿಸಿಕೊಳ್ಳಬೇಕು. ಇದು ದಾಂಪತ್ಯ ಜೀವನದಲ್ಲಿ ಸಂತೋಷವನ್ನು ತರುತ್ತದೆ. ಅದರಲ್ಲೂ ಒಟ್ಟಿಗೆ ಸಮಯ ಕಳೆಯುವಂತಹದ್ದು, ಡಿನ್ನರ್‌ ಡೇಟ್‌ಗೆ ಹೋಗುವಂತಹದ್ದು, ಟ್ರಿಪ್ಗೆ ಹೋಗುವುದು, ಸರ್‌ಪ್ರೈಸ್‌ ನೀಡುವುದು ಈ ರೀತಿಯ ಸಣ್ಣಪುಟ್ಟ ವಿಚಾರಗಳು ದಾಂಪತ್ಯ ಜೀವನವನ್ನು ಇನ್ನಷ್ಟು ಗಟ್ಟಿಗೊಳಿಸುತ್ತದೆ.

ಮನಸ್ತಾಪವನ್ನು ಪರಿಹರಿಸಿ:  ಗಂಡ ಹೆಂಡತಿಯ ಮಧ್ಯೆ ಸಣ್ಣಪುಟ್ಟ ಜಗಳಗಳು ಮನಸ್ತಾಪಗಳು ನಡೆಯುತ್ತಲೇ ಇರುತ್ತವೆ. ಈ ಜಗಳಗಳನ್ನು ಮುಂದುವರೆಸಲು ಬಿಡಬೇಡಿ, ಮಲಗುವ ಮುನ್ನ ಮನಸ್ತಾಪಗಳನ್ನು ಪರಿಹಸರಿಸಿಯೇ ಮಲಗಿ. ತಪ್ಪುಗಳನ್ನು ಕ್ಷಮಿಸಿ ಮತ್ತು ಪ್ರೀತಿಯಿಂದ ಮಾತನಾಡಿ. ಈ ರೀತಿ ಮಾಡುವುದರಿಂದ ನಿಮ್ಮ ಬಂಧ ಇನ್ನಷ್ಟು ಬಲಗೊಳ್ಳುತ್ತದೆ. ದಾಂಪತ್ಯ ಜೀವನದಲ್ಲಿ ಸಂತೋಷವೂ ನೆಲೆಸುತ್ತದೆ.

ಪರಸ್ಪರ ಸಹಾಯ ಮಾಡುವುದು: ಗಂಡ ಹೆಂಡತಿ ಕೆಲಸದಲ್ಲಿ ಪರಸ್ಪರ ಸಹಾಯ ಮಾಡಬೇಕು. ಅದರಲ್ಲೂ ಪುರುಷರು ಮನೆಕೆಲಸಗಳಲ್ಲಿ ತಮ್ಮ ಹೆಂಡತಿಗೆ ಕೈಲಾದಷ್ಟು ಸಹಾಯವನ್ನು ಮಾಡಬೇಕು. ಹೀಗೆ ಹಂಚಿಕೊಂಡು ಕೆಲಸ ಮಾಡಿದಾಗ ಇದು ಸಂಬಂಧದಲ್ಲಿ ಸಮಾನತೆ ಮತ್ತು ಪ್ರೀತಿಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ: ಅಭ್ಯಾಸಗಳು ನಿಮ್ಮನ್ನು ಒಂಟಿಯಾನ್ನಾಗಿಸುತ್ತದೆ ಎಚ್ಚರ!

ಪರಸ್ಪರ ಗೌರವ : ಪ್ರೀತಿಯಂತೆ ಸಂಬಂಧದಲ್ಲಿ  ಗೌರವವೂ ಮುಖ್ಯ. ನಿಮ್ಮ ಸಂಗಾತಿಯ ಕೆಲಸ ಮತ್ತು ನಿರ್ಧಾರಗಳನ್ನು ನೀವು ಗೌರವಿಸದಿದ್ದರೆ, ಸಂಬಂಧವು ದೀರ್ಘಕಾಲ ಉಳಿಯುವುದಿಲ್ಲ. ಪರಸ್ಪರರ ಸಾಧನೆಗಳ ಬಗ್ಗೆ ಹೆಮ್ಮೆ ಪಡುವುದು ಮತ್ತು ಕಷ್ಟದ ಸಮಯದಲ್ಲಿ ಪರಸ್ಪರರ ಜೊತೆಯಾಗಿ ನಿಲ್ಲುವುದು ಈ ಎಲ್ಲಾ ಪುಟ್ಟ ಅಂಶಗಳು ಸಂಬಂಧವನ್ನು ಬಲಪಡಿಸುತ್ತದೆ.

ಸಂವಹನದ ಮಾರ್ಗಗಳನ್ನು ಮುಕ್ತವಾಗಿಡಿ: ಹೆಚ್ಚಿನ ಸಂಬಂಧಗಳು ಮುರಿದು ಬೀಳುವುದು ಸಂಗಾತಿಗಳು ಪರಸ್ಪರ ಮಾತನಾಡುವುದನ್ನು ನಿಲ್ಲಿಸುವುದರಿಂದಲೇ. ಕೋಪದಲ್ಲಿ ಮಾತು ಬಿಡುವ ಬದಲು, ಇಬ್ಬರೂ ಕುಳಿತು ಮಾತನಾಡಿ. ಸಂವಹನವೇ ಪ್ರತಿಯೊಂದು ಸಮಸ್ಯೆಗೂ ಪರಿಹಾರ.

ಕಡಿಮೆ ನಿರೀಕ್ಷೆ, ಹೆಚ್ಚಿನ ಹೊಂದಾಣಿಕೆ:  ಇಲ್ಲಿ ಯಾರೂ ಪರಿಪೂರ್ಣರಲ್ಲ. ನ್ಯೂನತೆಗಳು ಪ್ರತಿಯೊಬ್ಬರಲ್ಲೂ ಇದ್ದೇ ಇರುತ್ತದೆ. ಆದ್ದರಿಂದ ಸಂಗಾತಿಯ  ನ್ಯೂನತೆಗಳನ್ನು ಒಪ್ಪಿಕೊಳ್ಳಲು ಕಲಿಯಿರಿ. ಹೊಂದಾಣಿಕೆಯಿಂದ ಜೀವನ ನಡೆಸಿ. ಖಂಡಿತವಾಗಿಯೂ ಈ ವಿಚಾರ ದಾಂಪತ್ಯ ಜೀವನದಲ್ಲಿ ಸಂತೋಷ ನೆಲೆಸುವಂತೆ ಮಾಡುತ್ತದೆ.

ಜೀವನಶೈಲಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Mangaluru Job Fair: ನಿರುದ್ಯೋಗಿಗಳಿಗೆ ಸುವರ್ಣಾವಕಾಶ; ವೆಬ್ ಡೆವಲಪರ್ ಹಾಗೂ ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ – Kannada News | Mangaluru Job Fair April 28: VRN Infotech Hiring Web Devs, Support, Telecallers!

ನಿರುದ್ಯೋಗಿಗಳಿಗೆ ಸುವರ್ಣಾವಕಾಶImage Credit source: Pinterest

ಮಂಗಳೂರಿನ ನಿರುದ್ಯೋಗಿ ಯುವಕ-ಯುವತಿಯರಿಗಾಗಿ ಕರ್ನಾಟಕ ಸರ್ಕಾರದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆಯು ಸುವರ್ಣಾವಕಾಶವೊಂದನ್ನು ತಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯಲ್ಲಿ ಏಪ್ರಿಲ್ 28ರಂದು ‘ನೇರ ಸಂದರ್ಶನ’ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಪ್ರಖ್ಯಾತ ವಿಆರ್‌ಎನ್ ಇನ್ಫೋಟೆಕ್ ಕಂಪನಿಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಈ ನೇಮಕಾತಿ ಪ್ರಕ್ರಿಯೆ ನಡೆಯುತ್ತಿದೆ.

ಮೂರು ವಿಭಾಗಗಳಲ್ಲಿ ನೇಮಕಾತಿ:

ಈ ನೇರ ಸಂದರ್ಶನದ ಮೂಲಕ ಪ್ರಮುಖವಾಗಿ ಮೂರು ವಿಭಾಗಗಳಲ್ಲಿ ನೇಮಕಾತಿ ಮಾಡಿಕೊಳ್ಳಲಾಗುತ್ತಿದೆ. ವೆಬ್ ಡೆವಲಪರ್, ಕಸ್ಟಮರ್ ಸಪೋರ್ಟ್ ಎಕ್ಸಿಕ್ಯೂಟಿವ್ ಮತ್ತು ಟೆಲಿಕಾಲರ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ತಾಂತ್ರಿಕ ಕ್ಷೇತ್ರ ಹಾಗೂ ಗ್ರಾಹಕ ಸೇವಾ ಕ್ಷೇತ್ರದಲ್ಲಿ ಆಸಕ್ತಿ ಹೊಂದಿರುವ ಅಭ್ಯರ್ಥಿಗಳಿಗೆ ಇದು ಉತ್ತಮ ವೇದಿಕೆಯಾಗಿದೆ. ಆಯ್ಕೆಯಾದ ಅಭ್ಯರ್ಥಿಗಳು ಮಂಗಳೂರಿನಲ್ಲಿಯೇ ಕೆಲಸ ನಿರ್ವಹಿಸಬೇಕಿರುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು?

ಅರ್ಹತೆಗೆ ಸಂಬಂಧಿಸಿದಂತೆ, ಯಾವುದೇ ವಿಷಯದಲ್ಲಿ ಪದವಿ ಪೂರ್ಣಗೊಳಿಸಿದ ಅಭ್ಯರ್ಥಿಗಳು ಸಂದರ್ಶನದಲ್ಲಿ ಭಾಗವಹಿಸಬಹುದು. ವಿಶೇಷವಾಗಿ ವೆಬ್ ಡೆವಲಪರ್ ಹುದ್ದೆಗೆ ಬಿ.ಇ ಇಂಜಿನಿಯರಿಂಗ್ (ಕಂಪ್ಯೂಟರ್ ಸೈನ್ಸ್) ವಿದ್ಯಾರ್ಹತೆ ಹೊಂದಿರುವವರಿಗೆ ಆದ್ಯತೆ ನೀಡಲಾಗುವುದು. ಈ ಸಂದರ್ಶನದಲ್ಲಿ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಬ್ಬರಿಗೂ ಮುಕ್ತ ಅವಕಾಶವಿದ್ದು, ಪ್ರತಿಭಾವಂತ ಯುವಜನತೆಯನ್ನು ಗುರುತಿಸುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

ಇದನ್ನೂ ಓದಿ: ಕೆಲಸಕ್ಕೆ ಸೇರಿದ ಮೊದಲ ದಿನವೇ ವೈದ್ಯೆ ರಾಜೀನಾಮೆ; ವೈದ್ಯಕೀಯ ಲೋಕದ ಕರಾಳ ಮುಖ ಅನಾವರಣ!

ಸಂದರ್ಶನದ ವಿವರ:

ಸಂದರ್ಶನವು ಏಪ್ರಿಲ್ 28 ರಂದು ಬೆಳಗ್ಗೆ 10:00 ಗಂಟೆಯಿಂದ ಮಧ್ಯಾಹ್ನ 1:30 ರವರೆಗೆ ನಡೆಯಲಿದೆ. ಆಸಕ್ತರು ಮಂಗಳೂರಿನ ಪಡೀಲ್‌ನಲ್ಲಿರುವ ಜಿಲ್ಲಾಡಳಿತ ಭವನ ಕಟ್ಟಡದ ‘ಪ್ರಜಾ ಸೌಧ’ದ ನೆಲಮಹಡಿಯಲ್ಲಿರುವ ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಗೆ (ಕೊಠಡಿ ಸಂಖ್ಯೆ 04) ಹಾಜರಾಗಬೇಕೆಂದು ಕೋರಲಾಗಿದೆ. ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳು ಮತ್ತು ಇತ್ತೀಚಿನ ರೆಸ್ಯೂಮ್‌ನೊಂದಿಗೆ ನೇರವಾಗಿ ಸಂದರ್ಶನ ಎದುರಿಸಬಹುದು.

ಸಂಪೂರ್ಣ ಉಚಿತ:

ಗಮನಿಸಬೇಕಾದ ಪ್ರಮುಖ ಅಂಶವೆಂದರೆ, ಈ ಉದ್ಯೋಗ ಮೇಳ ಅಥವಾ ಸಂದರ್ಶನ ಪ್ರಕ್ರಿಯೆಯು ಸಂಪೂರ್ಣವಾಗಿ ಉಚಿತವಾಗಿದ್ದು, ಅಭ್ಯರ್ಥಿಗಳು ಯಾವುದೇ ಶುಲ್ಕವನ್ನು ಪಾವತಿಸುವ ಅಗತ್ಯವಿಲ್ಲ. ಹೆಚ್ಚಿನ ಮಾಹಿತಿ ಅಥವಾ ಗೊಂದಲಗಳಿದ್ದಲ್ಲಿ ಸಾರ್ವಜನಿಕರು ಕಚೇರಿಯ ಅಧಿಕೃತ ದೂರವಾಣಿ ಸಂಖ್ಯೆ 0824-2457139 ಗೆ ಕರೆ ಮಾಡಿ ವಿವರಗಳನ್ನು ಪಡೆಯಬಹುದು. ನಿರುದ್ಯೋಗಿ ಅಭ್ಯರ್ಥಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಲು ಇಲಾಖೆಯು ಪ್ರಕಟಣೆಯಲ್ಲಿ ತಿಳಿಸಿದೆ.

ಉದ್ಯೋಗಕ್ಕೆ ಸಂಬಂಧಿಸಿದ ಮತ್ತಷ್ಟು  ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On – 4:13 pm, Sun, 26 April 26

Source link

ಬಿಸಿಲ ಬೇಗೆಗೆ ಛತ್ರಿ, ಟೋಪಿ ಮೊರೆ ಹೋದ ಪ್ರವಾಸಿಗರು: ರಜೆಯಲ್ಲೂ ಟೂರಿಸ್ಟ್ ಸಂಖ್ಯೆ ಇಳಿಮುಖ – Kannada News | Hassan Summer Heat: Belur Halebidu Tourists Struggle; resort to umbrellas and hats

ಬಿಸಿಲಿನಿಂದಾಗಿ ರಾಜ್ಯದ ಜನ ಥರಗುಟ್ಟುತ್ತಿದ್ದಾರೆ. ರಾಜ್ಯದ ಹಲವು ಜಿಲ್ಲೆಗಳಲ್ಲಿ ತಾಪಮಾನ ಹೆಚ್ಚಳವಾಗುತ್ತಿದೆ. ರಜೆ ಅಂತ ಪ್ರವಾಸಿ ತಾಣಗಳಿಗೆ ಭೇಟಿ ನೀಡುವ ಪ್ರವಾಸಿಗರು ಕೂಡ ಬಿಸಿಲ ಬೇಗೆಗೆ ಬಸವಳಿದಿದ್ದಾರೆ. ಹೀಗಾಗಿ ಬಿಸಿಲ ಝಳಕ್ಕೆ ಛತ್ರಿ, ಟೋಪಿ ಮೊರೆ ಹೋಗುತ್ತಿದ್ದಾರೆ.

Source link

ಬನ್ನೇರುಘಟ್ಟ ಜೈವಿಕ ಉದ್ಯಾನವನಕ್ಕೆ ಒಂದೇ ವರ್ಷದಲ್ಲಿ ಹರಿದು ಬಂತು 64 ಕೋಟಿ ರೂ.: ಪ್ರಾಣಿ ದತ್ತು ಪಡೆಯುವಲ್ಲಿ ಬೆಂಗಳೂರಿಗರು ನಂಬರ್ 1 – Kannada News | BBP Bengaluru Soars: Record Revenue, Tourism, and Animal Adoption for Bannerghatta

ಬೆಂಗಳೂರು, ಏ.26: ಬೆಂಗಳೂರು ಹೊರವಲಯದ ಪ್ರಸಿದ್ಧ ಪ್ರವಾಸಿ ತಾಣವಾದ ಬನ್ನೇರುಘಟ್ಟ ಜೈವಿಕ ಉದ್ಯಾನವನವು (BBP) ಆದಾಯ ಮತ್ತು ಪ್ರವಾಸಿಗರ ಭೇಟಿಯಲ್ಲಿ ಹೊಸ ದಾಖಲೆ ಬರೆದಿದೆ. 2024-26ನೇ ಸಾಲಿನಲ್ಲಿ ಉದ್ಯಾನವನಕ್ಕೆ ಬರೋಬ್ಬರಿ 64 ಕೋಟಿ 23 ಲಕ್ಷ ರೂಪಾಯಿ ಆದಾಯ ಹರಿದು ಬಂದಿದ್ದು, ಪ್ರವಾಸಿಗರ ಸಂಖ್ಯೆಯಲ್ಲೂ ಗಣನೀಯ ಏರಿಕೆ ಕಂಡಿದೆ. ಇದು ಬೆಂಗಳೂರಿನಲ್ಲಿ ತುಂಬಾ ದೊಡ್ಡ ಜೈವಿಕ ಉದ್ಯಾನವನ ಇಲ್ಲಿ ಸಾವಿರಾರೂ ಪ್ರವಾಸಿಗರು ಭೇಟಿ ನೀಡುತ್ತಾರೆ. ವಿಕೆಂಡ್​​​ ನಲ್ಲಿ ಇಲ್ಲಿ ಜನ ತುಂಬಿರುತ್ತಾರೆ. ಇಲ್ಲಿರುವ ಪ್ರಾಣಿಗಳು ಹಾಗೂ ಸಫಾರಿಯನ್ನು ನೋಡುವುದೇ ಒಂದು ಖುಷಿಯಾಗಿರುತ್ತದೆ. ಇಲ್ಲಿನ ಆಕರ್ಷಕ ಪ್ರಾಣಿ – ಪಕ್ಷಿಗಳು ಜನರ ಕಣ್ಣಿಗೆ ಹಾಗೂ ಮನಸ್ಸಿಗೆ ಆನಂದವನ್ನು ನೀಡುತ್ತದೆ. ಇದೀಗ ಈ ಕಾರಣಕ್ಕೆ ಇಲ್ಲಿ ಆದಾಯ ಕೂಡ ಹೆಚ್ಚಾಗಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಸಂಖ್ಯೆಯ ಪ್ರಕೃತಿ ಪ್ರೇಮಿಗಳು ಉದ್ಯಾನವನಕ್ಕೆ ಭೇಟಿ ನೀಡಿದ್ದಾರೆ:

2024-25ನೇ ಸಾಲು: 21 ಲಕ್ಷ 24 ಸಾವಿರ ಪ್ರವಾಸಿಗರು.

2025-26ನೇ ಸಾಲು: 22 ಲಕ್ಷ 40 ಸಾವಿರ ಪ್ರವಾಸಿಗರು (ಸುಮಾರು 1 ಲಕ್ಷಕ್ಕೂ ಅಧಿಕ ಏರಿಕೆ).

ಇದನ್ನೂ ಓದಿ: ಕನಕಪುರದಲ್ಲಿ ಕಾಡಾನೆ ದಾಳಿಗೆ ರಸ್ತೆಯಲ್ಲಿ ತೆರಳುತ್ತಿದ್ದ ವ್ಯಕ್ತಿ ದಾರುಣ ಸಾವು: ಅತ್ತ ಚಾಮರಾಜನಗರದಲ್ಲಿಯೂ ಮುಂದುವರಿದ ಒಂಟಿ ಸಲಗದ ಕಾಟ

ಪ್ರಾಣಿ ದತ್ತು ಮತ್ತು ದೇಣಿಗೆಯಲ್ಲಿ ಭಾರಿ ಪ್ರಗತಿ:

ಪ್ರಾಣಿಗಳ ಮೇಲಿನ ಪ್ರೀತಿ ಮತ್ತು ಸಂರಕ್ಷಣಾ ಮನೋಭಾವ ಜನರಲ್ಲಿ ಹೆಚ್ಚುತ್ತಿರುವುದಕ್ಕೆ ಇಲ್ಲಿನ ದೇಣಿಗೆ ಅಂಕಿಅಂಶಗಳೇ ಸಾಕ್ಷಿ:

2024-25ರಲ್ಲಿ ಕೇವಲ 53 ಲಕ್ಷ ರೂಪಾಯಿ ಪ್ರಾಣಿ ದತ್ತು ಮತ್ತು ದೇಣಿಗೆ ಸಂಗ್ರಹವಾಗಿತ್ತು.

ಆದರೆ, 2025-26ನೇ ಸಾಲಿನಲ್ಲಿ ಈ ಮೊತ್ತ 80 ಲಕ್ಷ 83 ಸಾವಿರ ರೂಪಾಯಿಗೆ ಏರಿಕೆಯಾಗಿದೆ.

ಅಂದರೆ, ಕಳೆದ ವರ್ಷಕ್ಕಿಂತ ಈ ಬಾರಿ 30 ಲಕ್ಷ ರೂಪಾಯಿ ಹೆಚ್ಚುವರಿ ಹಣ ದೇಣಿಗೆ ರೂಪದಲ್ಲಿ ಬಂದಿದೆ.

ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತ:

ಕೇವಲ ಆದಾಯ ಮಾತ್ರವಲ್ಲದೆ ಸಾಮಾಜಿಕ ಕಳಕಳಿಯನ್ನೂ ಉದ್ಯಾನವನ ಪ್ರದರ್ಶಿಸಿದೆ. ‘ಚಿಣ್ಣರ ಮೃಗಾಲಯ ದರ್ಶನ’ ಕಾರ್ಯಕ್ರಮದ ಅಡಿಯಲ್ಲಿ ಸುಮಾರು ನಾಲ್ಕು ಸಾವಿರ ಸರ್ಕಾರಿ ಶಾಲಾ ಮಕ್ಕಳಿಗೆ ಉಚಿತವಾಗಿ ಮೃಗಾಲಯ ವೀಕ್ಷಣೆ ಮಾಡಲು ಅವಕಾಶ ಕಲ್ಪಿಸಿಕೊಡಲಾಗಿದೆ ಎಂದು ಉದ್ಯಾನವನದ ಕಾರ್ಯನಿರ್ವಾಹಕ ನಿರ್ದೇಶಕ (ED) ಸೂರ್ಯಸೇನ್ ತಿಳಿಸಿದ್ದಾರೆ.

ರಾಜ್ಯದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Source link

Vedio: ಕಾರು ಸ್ವಲ್ಪ ತಾಗಿದ್ದಕ್ಕೆ, ದೊಣ್ಣೆ ಹಿಡಿದು ಕಾರಿನ ಗಾಜು ಒಡೆಯಲು ಯತ್ನಿಸಿದ ವ್ಯಕ್ತಿ – Kannada News | Road Rage Scare in Indore: Family Pleads as Man Threatens Damage

ಇಂದೋರ್, ಏಪ್ರಿಲ್ 26: ಮಧ್ಯಪ್ರದೇಶದ ಇಂದೋರ್‌ನಲ್ಲಿ ಕಾರೊಂದು ಸ್ವಲ್ಪ ತಾಗಿದ್ದಕ್ಕೆ ವ್ಯಕ್ತಿಯೊಬ್ಬ ತೋರಿದ ಅತಿರೇಕದ ವರ್ತನೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಆಕ್ರೋಶಕ್ಕೆ ಕಾರಣವಾಗಿದೆ. ಕಾರೊಳಗೆ ಪುಟ್ಟ ಮಕ್ಕಳಿದ್ದಾರೆ ಎಂದು ಪೋಷಕರು ಕೈಮುಗಿದು ಬೇಡಿಕೊಂಡರೂ, ಆ ವ್ಯಕ್ತಿ ಕೋಲು ಹಿಡಿದು ಹಲ್ಲೆಗೆ ಮುಂದಾದ ಆಘಾತಕಾರಿ ವಿಡಿಯೋ ವೈರಲ್ ಆಗಿದೆ.

ಇಂದೋರ್‌ನ ರಸ್ತೆಯಲ್ಲಿ ಎರಡು ವಾಹನಗಳ ನಡುವೆ ಸಣ್ಣ ಮಟ್ಟದ ಡಿಕ್ಕಿ ಸಂಭವಿಸಿತ್ತು. ಯಾವುದೇ ಪ್ರಾಣಾಪಾಯ ಅಥವಾ ದೊಡ್ಡ ಹಾನಿ ಸಂಭವಿಸದಿದ್ದರೂ, ಮತ್ತೊಂದು ವಾಹನದಲ್ಲಿದ್ದ ವ್ಯಕ್ತಿ ವಿಪರೀತ ಕೋಪಗೊಂಡಿದ್ದಾನೆ. ಕೂಡಲೇ ಕೈಯಲ್ಲಿ ಕೋಲು ಹಿಡಿದು ಕುಟುಂಬವಿದ್ದ ಕಾರಿನ ಮುಂದೆ ಬಂದು ಬೆದರಿಕೆ ಹಾಕಿದ್ದಾನೆ.

 

ವಿಡಿಯೋ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ 

Source link

ರಾಜ್​ಕುಮಾರ್ ಅಭಿಮಾನಿ ಸಂಘದ ಹೆಸರಲ್ಲಿ ಜೀವ ಬೆದರಿಕೆ ಹಾಕಲು ಯಾರಿಗೂ ಹಕ್ಕಿಲ್ಲ: ಚೇತನ್ – Kannada News | Kannada actor Chetan Kumar Ahimsa says we have to follow law like Dr Rajkumar

ಡಾ. ರಾಜ್​ಕುಮಾರ್ (Dr Rajkumar) ಸಮಾಧಿ ವಿಚಾರಕ್ಕೆ ಸಂಬಂಧಿಸಿದಂತೆ ನಟ ಚೇತನ್ ಕುಮಾರ್ ಅಹಿಂಸಾ ಅವರು ನೀಡಿದ ಹೇಳಿಕೆಯಿಂದ ವಿವಾದ ಭುಗಿಲೆದ್ದಿದೆ. ಚೇತನ್ ವಿರುದ್ಧ ರಾಜ್​ಕುಮಾರ್ ಅಭಿಮಾನಿಗಳು ಗರಂ ಆಗಿದ್ದಾರೆ. ಆದರೆ ಜೀವ ಬೆದರಿಕೆ ಹಾಕುವ ಅಧಿಕಾರ ಯಾರಿಗೂ ಇಲ್ಲ ಎಂದು ಚೇತನ್ (Chetan Kumar Ahimsa) ಅವರು ಹೇಳಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಅವರು ಈ ಬಗ್ಗೆ ಮಾತನಾಡಿದ್ದಾರೆ. ‘ನಾನು ಕೂಡ ಚಿಕ್ಕ ವಯಸ್ಸಿನಿಂದ ಡಾ. ರಾಜ್​ಕುಮಾರ್ ಅವರ ಅಭಿಮಾನಿ. ಆದರೆ ಇಂದು ಅಭಿಮಾನಿ ಸಂಘದ ಪಟ್ಟಿ ಕಟ್ಟಿಕೊಂಡು ದಬ್ಬಾಳಿಕೆ ಮಾಡುತ್ತಿರುವವರನ್ನು ನಾವು ಸಹಿಸೋಕೆ ಆಗಲ್ಲ. ಜೀವ ಬೆದರಿಕೆ ಹಾಕಲು ಯಾರಿಗೂ ಹಕ್ಕಿಲ್ಲ. ನಾವೆಲ್ಲರೂ ಕಾನೂನಿನ ಅಡಿಯಲ್ಲಿ ಇದ್ದೇವೆ. ರಾಜ್​ಕುಮಾರ್ ಕೂಡ 20ನೇ ಶತಮಾನದ ದೊಡ್ಡ ಸೂಪರ್ ಸ್ಟಾರ್ ಆಗಿದ್ದರೂ ಕೂಡ ಅವರು ಕಾನೂನಿನ ಅಡಿಯಲ್ಲಿ ಬಹಳ ಸರಳವಾಗಿ ಬದುಕಿದ್ದಾರೆ. ಅವರ ರೀತಿಯೇ ನಾವು ಬದುಕಬೇಕು’ ಎಂದು ಚೇತನ್ ಅವರು ಹೇಳಿದ್ದಾರೆ.

ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್​ ಮಾಡಿ.

Source link

ನಟಿ ಆಶು ರೆಡ್ಡಿ ವಿರುದ್ಧ ದೂರು ದಾಖಲು: ಪ್ರೀತಿಸುವುದಾಗಿ ನಂಬಿಸಿ 9 ಕೋಟಿ ವಂಚನೆ ಆರೋಪ – Kannada News | Case registered against actress Ashu Reddy for cheating a NRI

ನಟಿ ಆಶು ರೆಡ್ಡಿ (Ashu Reddy) ವಿರುದ್ಧ 9.35 ಕೋಟಿ ರೂಪಾಯಿ ವಂಚನೆಯ ಆರೋಪ ಕೇಳಿ ಬಂದಿದೆ. ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿರುವ, ಬಿಗ್​​ಬಾಸ್ ತೆಲುಗು ಮಾಜಿ ಸ್ಪರ್ಧಿಯೂ ಆಗಿರುವ ಆಶು ರೆಡ್ಡಿ, ತೆಲುಗು ಚಿತ್ರರಂಗದ ಜನಪ್ರಿಯ ನಟಿಯರಲ್ಲಿ ಒಬ್ಬರು. ಒಂದು ಸಮಯದಲ್ಲಿ ಆಶು ರೆಡ್ಡಿ ಅವರನ್ನು ಸಮಂತಾ ಋತ್ ಪ್ರಭು ಅವರಿಗೆ ಹೋಲಿಕೆ ಮಾಡಲಾಗಿತ್ತು. ಇನ್​​ಸ್ಟಾಗ್ರಾಂ, ಯೂಟ್ಯೂಬ್​​ನಲ್ಲಿಯೂ ಸಖತ್ ಸದ್ದು ಮಾಡುವ ಆಶು ರೆಡ್ಡಿ ಮೇಲೆ ಇದೀಗ ಅನಿವಾಸಿ ಭಾರತೀಯ ಯುವಕನೋರ್ವ ಬರೋಬ್ಬರಿ 9.35 ಕೋಟಿ ರೂಪಾಯಿ ವಂಚನೆ ಪ್ರಕರಣ ದಾಖಲಿಸಿದ್ದಾರೆ. ಆಶು ರೆಡ್ಡಿ ಮಾತ್ರವೇ ಅಲ್ಲದೆ ಅವರ ಕುಟುಂಬದ ಮೇಲೂ ಆರೋಪ ಮಾಡಿದ್ದಾನೆ ಯುವಕ.

ಹೈದರಾಬಾದ್‌ನ ಶೇಕ್‌ಪೇಟ್ ನಿವಾಸಿ ಸತ್ಯನಾರಾಯಣ ಎಂಬುವವರು ಹೈದರಾಬಾದ್‌ನ ಸೆಂಟ್ರಲ್ ಕ್ರೈಮ್ ಸ್ಟೇಷನ್ (CCS) ಪೊಲೀಸರಿಗೆ ನಟಿ ಆಶು ರೆಡ್ಡಿ ವಿರುದ್ಧ ದೂರು ನೀಡಿದ್ದಾರೆ. ಅವರ ಮಗ ಧರ್ಮೇಂದ್ರ ಲಂಡನ್‌ನಲ್ಲಿ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದು, 2018ರಲ್ಲಿ ಹೈದರಾಬಾದ್‌ನಲ್ಲಿ ಧರ್ಮೇಂದ್ರ ಹಾಗೂ ಆಶು ರೆಡ್ಡಿ ನಡುವೆ ಪರಿಚಯವಾಗಿತ್ತು. ಈ ಸ್ನೇಹ ಮುಂದೆ ಪ್ರೇಮಕ್ಕೆ ತಿರುಗಿ, ಆಶು ರೆಡ್ಡಿ ಮದುವೆಯಾಗುವುದಾಗಿ ಭರವಸೆ ನೀಡಿದ್ದರು ಎಂದು ದೂರಿನಲ್ಲಿ ತಿಳಿಸಲಾಗಿದೆ.

ದೂರುದಾರರ ಪ್ರಕಾರ, 2018 ರಿಂದ 2025 ರ ಅವಧಿಯಲ್ಲಿ ಆಶು ರೆಡ್ಡಿ ವಿವಿಧ ಕಾರಣಗಳನ್ನು ನೀಡಿ ಧರ್ಮೇಂದ್ರ ಅವರಿಂದ ಸುಮಾರು 9.35 ಕೋಟಿ ರೂಪಾಯಿಗಳನ್ನು ಪಡೆದಿದ್ದಾರೆ. ಈ ಹಣದಲ್ಲಿ ಐಷಾರಾಮಿ ಕಾರುಗಳು, ಸುಮಾರು 5 ಕೆಜಿ ಚಿನ್ನ ಮತ್ತು ಹೈದರಾಬಾದ್‌ನ ಲಾಂಕೋ ಹಿಲ್ಸ್‌ನಂತಹ ಪ್ರದೇಶಗಳಲ್ಲಿ ಫ್ಲ್ಯಾಟ್‌ಗಳನ್ನು ಖರೀದಿಸಲಾಗಿದ್ದು, ಇವೆಲ್ಲವನ್ನೂ ಆಶು ರೆಡ್ಡಿ ಅವರ ಹೆಸರಿನಲ್ಲೇ ನೋಂದಣಿ ಮಾಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಅಲ್ಲದೆ, ಅಶು ರೆಡ್ಡಿ ಅವರ ಸಹೋದರಿ ಕೂಡ 50 ಲಕ್ಷ ರೂಪಾಯಿ ಹಣ ಪಡೆದುಕೊಂಡಿದ್ದು ಅದನ್ನೂ ಸಹ ವಾಪಸ್ ನೀಡಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದನ್ನೂ ಓದಿ:ತಮ್ಮ ತಂಡದ ಜೊತೆಗೆ ಸಖತ್ ಡ್ಯಾನ್ಸ್ ಮಾಡಿದ ನಟಿ ನೇಹಾ

ಈ ಹಿಂದೆ ನಟಿ ಆಶು ರೆಡ್ಡಿ ಮದುವೆಗೆ ನಿರಾಕರಿಸಿದಾಗ, ನಟಿ ಹೇಮಾ ಅವರ ಸಮ್ಮುಖದಲ್ಲಿ ಸಂಧಾನ ನಡೆದಿತ್ತು. ಆಗ 70 ಲಕ್ಷ ರೂಪಾಯಿ ಮರಳಿಸುವುದಾಗಿ ಒಪ್ಪಿ ಚೆಕ್ ನೀಡಿದ್ದರೂ, ನಂತರ ಆ ಚೆಕ್‌ಗಳನ್ನು ನಾಶಪಡಿಸಿ ವಂಚಿಸಿದ್ದಾರೆ ಎಂದು ಧರ್ಮೇಂದ್ರ ಕುಟುಂಬಸ್ಥರು ಆರೋಪಿಸಿದ್ದಾರೆ.

ಆಶು ರೆಡ್ಡಿ ಬಗ್ಗೆ ಆರೋಪಗಳು ಕೇಳಿ ಬಂದ ಬೆನ್ನಲ್ಲೆ ನಟಿ ತಮ್ಮ ಇನ್‌ಸ್ಟಾಗ್ರಾಮ್ ಸ್ಟೋರಿ ಮೂಲಕ ಇದಕ್ಕೆ ಪ್ರತಿಕ್ರಿಯೆ ನೀಡಿದ್ದು. ‘ನನ್ನ ಅನುಮತಿಯಿಲ್ಲದೆ ನನ್ನ ಬಗ್ಗೆ ಸುಳ್ಳು ಸುದ್ದಿ ಅಥವಾ ಆಧಾರರಹಿತ ಮಾಹಿತಿ ಹರಡುವವರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು’ ಎಂದು ಅವರು ಬರೆದುಕೊಂಡಿದ್ದಾರೆ. ಪ್ರಸ್ತುತ ಅವರು ಈ ಎಲ್ಲಾ ಆರೋಪಗಳನ್ನು ನಿರಾಕರಿಸಿದ್ದು, ಕಾನೂನುಬದ್ಧವಾಗಿ ಹೋರಾಡುವುದಾಗಿ ತಿಳಿಸಿದ್ದಾರೆ. ಆಶು ರೆಡ್ಡಿ ಈ ಹಿಂದೆ ಕೂಡ ವಿವಾದಗಳಲ್ಲಿ ಸಿಲುಕಿದ್ದರು. ಈ ಹಿಂದೆ ತೆಲಂಗಾಣದಲ್ಲಿ ಸದ್ದು ಮಾಡಿದ್ದ ಡ್ರಗ್ಸ್ ಪ್ರಕರಣವೊಂದರಲ್ಲಿ ಇವರ ಹೆಸರು ಕೇಳಿಬಂದಿತ್ತು. ಆದರೆ ಆಗಲೂ ಅವರು ತಮಗೂ ಆ ಪ್ರಕರಣಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಪ್ರಸ್ತುತ ಹೈದರಾಬಾದ್ ಪೊಲೀಸರು ಈ ವಂಚನೆ ಪ್ರಕರಣವನ್ನು ಆರ್ಥಿಕ ಅಪರಾಧಗಳ ವಿಭಾಗಕ್ಕೆ (EOW) ವರ್ಗಾಯಿಸಿದ್ದು, ತನಿಖೆ ತೀವ್ರಗೊಂಡಿದೆ. ನಟಿ ಆಶು ರೆಡ್ಡಿ ಮತ್ತು ಅವರ ಕುಟುಂಬದ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಒಂದು ವೇಳೆ ಈ ಆರೋಪಗಳು ಸಾಬೀತಾದಲ್ಲಿ, ನಟಿ ಕಾನೂನು ಸಂಕಷ್ಟಕ್ಕೆ ಸಿಲುಕುವುದು ಖಚಿತ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Published On – 3:17 pm, Sun, 26 April 26

Source link

CSK vs GT IPL 2026 Live Score: ಟಾಸ್ ಗೆದ್ದ ಗುಜರಾತ್ ಬೌಲಿಂಗ್ ಆಯ್ಕೆ – Kannada News | Chennai Super Kings vs Gujarat Titans IPL 2026 Live Cricket Score CSK vs GT Match on 26th April latest news in Kannada

ಐಪಿಎಲ್‌ನ 19 ನೇ ಸೀಸನ್‌ನಲ್ಲಿ ಏಪ್ರಿಲ್ 26 ರ ಭಾನುವಾರ ಡಬಲ್ ಹೆಡರ್, ಅಂದರೆ 2 ಪಂದ್ಯಗಳು ನಡೆಯಲಿವೆ. ಈ ಡಬಲ್ ಹೆಡರ್‌ನ ಮೊದಲ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಿದೆ. ಈ 19 ನೇ ಸೀಸನ್‌ನಲ್ಲಿ ಎರಡೂ ತಂಡಗಳ ಎಂಟನೇ ಪಂದ್ಯ ಇದಾಗಿದೆ. ಎರಡೂ ತಂಡಗಳು ಇಲ್ಲಿಯವರೆಗೆ 7 ಪಂದ್ಯಗಳಲ್ಲಿ 3 ರಲ್ಲಿ ಗೆದ್ದಿವೆ. ಆದ್ದರಿಂದ, ನಾಲ್ಕನೇ ಪಂದ್ಯವನ್ನು ಗೆಲ್ಲಲು ಎರಡೂ ತಂಡಗಳು ಸಜ್ಜಾಗಿವೆ.

Source link