ಇತಿಹಾಸ ನಿರ್ಮಿಸಿದ ಕರ್ನಲ್ ನೊರೀನ್; ಬೆಂಗಳೂರಿನ MEG ತರಬೇತಿ ಬೆಟಾಲಿಯನ್ ಮುನ್ನಡೆಸುತ್ತಿರುವ ಮೊದಲ ಮಹಿಳಾ ಅಧಿಕಾರಿ! – Kannada News | Colonel Noreen John: First Woman to Command Madras Sappers MEG Training Battalion
ಭಾರತೀಯ ಸಶಸ್ತ್ರ ಪಡೆಗಳಲ್ಲಿ ಮಹಿಳೆಯರು ಕೇವಲ ಭಾಗವಹಿಸುವುದು ಮಾತ್ರವಲ್ಲದೆ, ಪ್ರಮುಖ ವಿಭಾಗಗಳನ್ನು ಮುನ್ನಡೆಸುವ ಮೂಲಕ ಇತಿಹಾಸ ನಿರ್ಮಿಸುತ್ತಿದ್ದಾರೆ. ಈ ಹಾದಿಯಲ್ಲಿ ಬೆಂಗಳೂರಿನ ಪ್ರತಿಷ್ಠಿತ ಮದ್ರಾಸ್ ಎಂಜಿನಿಯರಿಂಗ್ ಗ್ರೂಪ್ (MEG) ಕೇಂದ್ರದ ತರಬೇತಿ ಬೆಟಾಲಿಯನ್ ಅನ್ನು ಕಮಾಂಡ್ ಮಾಡಲು ಕರ್ನಲ್ ನೊರೀನ್ ಶಾನೆಟ್ ಜಾನ್ ಅವರನ್ನು ನೇಮಿಸಲಾಗಿದೆ. ಈ ಮೂಲಕ, ಸೈನ್ಯದ ಅತ್ಯಂತ ಹಳೆಯ ಮತ್ತು ಪ್ರತಿಷ್ಠಿತ ಎಂಜಿನಿಯರಿಂಗ್ ಘಟಕವಾದ ‘ಮದ್ರಾಸ್ ಸಪ್ಪರ್ಸ್’ನ ತರಬೇತಿ ಬೆಟಾಲಿಯನ್ ಅನ್ನು ಮುನ್ನಡೆಸುತ್ತಿರುವ ಮೊದಲ ಮಹಿಳಾ ಅಧಿಕಾರಿ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದಾರೆ….